ನಾಪೋಕ್ಲು ಅ.19 : ನಾಪೋಕ್ಲುವಿನ ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ 27ನೇ ವರ್ಷದ ಪವಿತ್ರ ಕಾವೇರಿ ತೀರ್ಥ ವಿತರಿಸಲಾಯಿತು. ದಕ್ಷಿಣ ಕಾಶಿ ಎಂದು ಪ್ರಖ್ಯಾತಿ ಪಡೆದಿರುವ ಕೊಡಗಿನ ಕುಲದೇವತೆ ಕಾವೇರಿ ಮಾತೆಯ ಪ್ರತಿಮೆಯ ಭವ್ಯವಾದ ಪುಷ್ಪಾಲಂಕೃತ ರಥದೊಂದಿಗೆ ಪಾಲೂರಿನ ಪಾಲೂರಪ್ಪ ದೇವಾಲಯದಿಂದ ತಲಕಾವೇರಿಗೆ ತೆರಳಿ ಮೆರವಣಿಗೆ ಮೂಲಕ ಸಾಗಿದ ಸಮಿತಿ ಪದಾಧಿಕಾರಿಗಳು ತೀರ್ಥೋದ್ಭವದ ಬಳಿಕ ವಿವಿಧ ಸ್ಥಳಗಳಲ್ಲಿ ತೀರ್ಥ ವಿತರಿಸಿದರು. ನಂತರ ಪಾಲೂರಿನ ಸತ್ಯ ಹರಿಶ್ಚಂದ್ರ ದೇವಾಲಯದ ಕಾವೇರಿ ನದಿಯಲ್ಲಿ ತಾಯಿ ಕಾವೇರಿ ಮಾತೆಯ ಕಳಶ ವಿಸರ್ಜನೆಯೊಂದಿಗೆ ಸಂಪನ್ನಗೊಂಡಿತ್ತು. ಈ ಸಂದರ್ಭ ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಸಂಚಾಲಕ ಬಿದ್ದಾಟಂಡ ರೋಜಿ ಚಿಣಪ್ಪ, ಪ್ರಧಾನ ಕಾರ್ಯದರ್ಶಿ ಕಲಿಯಾಟಂಡ ಮಯ್ಯು ದೇವಯ್ಯ, ಪದಾಧಿಕಾರಿಗಳಾದ ಬಿದ್ದಾಟಂಡ ಮಮತಾ ಚಿಣ್ಣಪ್ಪ, ಕಲಿಯಾಟ೦ಡ ಸುಮಿದೇವಯ್ಯ ಮಚ್ಚಂಡ ಶಂಭು ಇನ್ನಿತರರು ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ
ಲೇಖಕ: admin
ನಾಪೋಕ್ಲು ಅ.19 : ಇತಿಹಾಸ ಪ್ರಸಿದ್ಧ ಬಲಮುರಿಯ ಶ್ರೀ ಅಗಸ್ತೇಶ್ವರ ದೇವಾಲಯದಲ್ಲಿ ಕಾವೇರಿ ನದಿಗೆ ಮಹಾ ಮಂಗಳಾರತಿಯೊಂದಿಗೆ ತೀರ್ಥ ಸ್ಥಾನ ಜಾತ್ರಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಭಕ್ತಾದಿಗಳು (ತುಲಾ) ಕಾವೇರಿ ಸಂಕ್ರಮಣದ ಪುಣ್ಯ ತೀರ್ಥ ಸ್ಥಾನ ಮಾಡಿ ಎರಡನೆಯ ಪುಣ್ಯಾತೀರ್ಥ ಸ್ಥಾನವನ್ನು ಮಾಡುವುದು ತಲತಲಾಂತರ ಗಳಿಂದ ನಡೆದು ಬಂದ ಪದ್ಧತಿ ಪರಂಪರೆಯಾಗಿದ್ದು, ಭಕ್ತರು ಜಾತ್ರೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜಾ ವಿಧಿ ವಿಧಾನಗಳನ್ನು ಸಲ್ಲಿಸಿ ತಮ್ಮಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿದರು. ಕ್ಷೇತ್ರದಲ್ಲಿ ಬೆಳಿಗ್ಗೆಯಿಂದಲೇ ಕೇಶ ಮುಂಡನ, ಪಿಂಡಪ್ರಧಾನ, ಕಾವೇರಿ ತೀರ್ಥಸ್ನಾನ, ಕಾವೇರಿಯ ಬಾಲೋಪಾಟ್ ಮತ್ತಿತರ ಕಾರ್ಯಗಳು ಜರುಗಿದವು. ಕಾವೇರಿ ನದಿಗೆ ಮಹಾ ಮಂಗಳಾರತಿಯನ್ನು ಅರ್ಚಕ ಮಹಾಬಲೇಶ್ವರ ಭಟ್ ಸಹವರ್ತಿಗಳು ನೆರವೇರಿಸಿಕೊಟ್ಟರು. ಬಳಿಕ ನದಿಯಿಂದ ಪವಿತ್ರ ನೀರನ್ನು ಅರ್ಚಕರು ಬಿಂದಿಗೆಯಲ್ಲಿ ತುಂಬಿ ಶ್ರದ್ಧಾ ಭಕ್ತಿಯಿಂದ ದೇವಾಲಯಕ್ಕೆ ಕೊಂಡೊಯ್ದು ದೇವರ ಪ್ರತಿಬಿಂಬಕ್ಕೆ ಅಭಿಷೇಕ ಮಾಡಲಾಯಿತು. ಆನಂತರ ವಿಶೇಷ ಮಹಾಪೂಜೆ ಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನಡೆಯಿತು. ಉತ್ಸವಕ್ಕೆ ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು.…
ಪಯ್ಯನ್ನೂರ್ ಅ.19 : ಶೈಖುನಾ ತಾಜುಲ್ ಉಲಮಾ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್-ಬುಖಾರಿ ಉಳ್ಳಾಲ ತಂಙ್ಙಳ್ ಅವರ 10ನೇ ಉರೂಸ್ ಸಮಾರಂಭದ ಅಂಗವಾಗಿ ಎಟ್ಟಿಕುಳಂನಲ್ಲಿ ಸಂಭ್ರಮದ ಮದನಿ ಸಂಗಮ ನಡೆಯಿತು. ಕಾರ್ಯಕ್ರಮವನ್ನು ಶೈಖುನಾ ತಾಜುಲ್ ಉಲಮಾರ ಸುಪುತ್ರ ಸಯ್ಯಿದ್ ಹಾಮಿದ್ ಇಂಬಿಚ್ಚಿ ಕೋಯ ತಂಙ್ಙಳ್ ಸಭೆಯನ್ನು ಉದ್ಘಾಟಿಸಿದರು. ಮದನಿಸ್ ಅಸೋಸಿಯೇಷನ್ ಕೇಂದ್ರ ಸಮಿತಿಯ ಅಧ್ಯಕ್ಷ ತೀರ್ಥಹಳ್ಳಿ ಸಯ್ಯಿದ್ ಅಬೂಬಕರ್ ಸಿದ್ದೀಕ್ ಅಲ್-ಹಾದಿ ತಂಙ್ಙಳ್ ವಹಿಸಿದ್ದರು. ಸಯ್ಯಿದ್ ಅಬ್ದುಸ್ಸಲಾಂ ತಂಙ್ಙಳ್ ದುಆಕ್ಕೆ ನಾಯಕತ್ವ ನೀಡಿದರು. ಮದನೀಸ್ ಅಸೋಸಿಯೇಷನ್ ಕೇರಳ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ನೀಲಗಿರಿ ಬಶೀರ್ ಮದನಿ ಕೀ ನೋಟ್ ಮಂಡಿಸಿದರು. ನಂತರ ಕೂಳೂರು ಬಶೀರ್ ಮದನಿ “ಸಂಘಟನೆಯ ಅನಿವಾರ್ಯತೆ” ಎಂಬ ವಿಷಯದ ಕುರಿತು ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ “ಆಧ್ಯಾತ್ಮಿಕ” ಎಂಬ ವಿಷಯದ ಕುರಿತು ವಿಚಾರ ಮಂಡಿಸಿದರು. ಮದನೀಸ್ ಅಸೋಸಿಯೇಷನ್ ಕೇರಳ ರಾಜ್ಯಾಧ್ಯಕ್ಷ ಸಯ್ಯಿದುಸ್ಸಾದಾತ್ ಆದೂರು ಸಯ್ಯಿದ್ ಅಶ್ರಫ್ ತಂಙ್ಙಳ್, ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙ್ಙಳ್ ಆಶಂಸಾ ಭಾಷಣ ಮಾಡಿದರು. ಸಅದಿಯ್ಯ…
ಸಿದ್ದಾಪುರ ಅ.19 : ಗೋಜೊರಿಯೊ ಕರಾಟೆ ಶಾಲೆಯ ಆಶ್ರಯದಲ್ಲಿ ಎರಡು ದಿನಗಳ ರಿಕ್ಯೂ ಕೋಬೋ ಜುಟ್ಸಸು ತರಬೇತಿ ಶಿಬಿರ ನಡೆಯಿತು. ಸಿದ್ದಾಪುರದ ಎಸ್.ಎನ್ .ಡಿ.ಪಿ. ಸಭಾಂಗಣದಲ್ಲಿ 30ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಭಾರತೀಯ ಕೊಬೊಡೋ ಸಂಸ್ಥೆಯ ಮುಖ್ಯ ಶಿಕ್ಷಕ ಶಿಬೂಜೋ ಟಿ.ಡಿ. ಜಾನ್ಸನ್ ಹಾಗೂ ಸಹ ಶಿಕ್ಷಕ ಮೋಹನ್ ದಾಸ್ ಆಗಮಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಎರಡು ದಿನಗಳ ಕಾಲ ನಡೆಯುವ ಶಿಬಿರದಲ್ಲಿ ಕೋಬುಡೂ ತರಬೇತಿಯನ್ನು ನೀಡಲಾಗುತ್ತಿದೆ. ಗೋಜೊರಿಯೊ ಕರಾಟೆ ಶಾಲೆಯ ಮುಖ್ಯ ಶಿಕ್ಷಕ ಎಂ.ಬಿ ಚಂದ್ರನ್ ಶಿಬಿರವನ್ನು ಆಯೋಜಿಸಿದ್ದು, ಶಿಬಿರದಲ್ಲಿ ಪಾಲ್ಗೊಂಡ ಕರಾಟೆ ಪಟುಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಹ ಶಿಕ್ಷಕ ಸೆಂಪಾಯಿ ಸಿ.ಹೆಚ್.ಬಶೀರ್, ಅಮೋಗ್ ಗೌಡ , ಹರಿಕೃಷ್ಣ, ಆಕಾಶ್, ಸೋನಿಖಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಮಡಿಕೇರಿ ಅ.19 : ಮಡಿಕೇರಿ ದಸರಾ ಜನೋತ್ಸವ ಪ್ರಯುಕ್ತ ಯುವ ದಸರಾ ಸಮಿತಿ ವತಿಯಿಂದ ಗ್ರೀನ್ ಸಿಟಿ ಫೋರಂ ಸಹಯೋಗದಲ್ಲಿ ‘ದಸರಾ ಸೈಕ್ಲಥಾನ್-2023’ ಹಮ್ಮಿಕೊಳ್ಳಲಾಗಿದೆ. ಅ.21 ರಂದು ಬೆಳಗ್ಗೆ 8 ಗಂಟೆಗೆ ಸೈಕ್ಲಥಾನ್ ಆರಂಭವಾಗಲಿದೆ. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವೃತ್ತದ ಬಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಬಳಿಕ ಜನರಲ್ ತಿಮ್ಮಯ್ಯ ಸರ್ಕಲ್, ಹಳೆ ಖಾಸಗಿ ಬಸ್ ನಿಲ್ದಾಣ, ಇಂದಿರಾಗಾಂಧಿ ವೃತ್ತ, ಎಲ್‍ಐಸಿ ಮಾರ್ಗವಾಗಿ ಸಾಗಿ ಗಾಂಧಿ ಮೈದಾನದಲ್ಲಿ ಕೊನೆಗೊಳ್ಳಲಿದೆ ಎಂದು ಯುವ ದಸರಾ ಸಮಿತಿ ಅಧ್ಯಕ್ಷ ಕವನ್ ಕೊತ್ತೋಳಿ ಹಾಗೂ ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಚೈಯ್ಯಂಡ ಸತ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ಲಾಸ್ಟಿಕ್ ಮುಕ್ತ ಕೊಡಗು, ಡ್ರಗ್ಸ್ ಮುಕ್ತ ಕೊಡಗು ಎಂಬ ಧ್ಯೇಯದೊಂದಿಗೆ ಸೈಕ್ಲಥಾನ್ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಪ್ರಮಾಣ ಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಕವನ್ ಕೊತ್ತೋಳಿ-9741292825 ಸಂಖ್ಯೆಯನ್ನು ಸಂಪರ್ಕಿಸಬಹುದು.
ಮಡಿಕೇರಿ ಅ.19 : ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳ ಐದನೇ ದಿನವಾದ ಶುಕ್ರವಾರ ಮಕ್ಕಳ ದಸರಾ ಸಂಭ್ರಮ ಕಂಡುಬರಲಿದೆ. ಮಕ್ಕಳಿಂದಲೇ ವೈವಿಧ್ಯಮಯ ಕಾಯ೯ಕ್ರಮಗಳು ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿಸಲ್ಪಟ್ಟಿದೆ. ಅ. 20 ರಂದು ಶುಕ್ರವಾರ ಮಕ್ಕಳ ದಸರಾ ಅಂಗವಾಗಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಗಾಂಧಿ ಮೈದಾನದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಮಕ್ಕಳಿಂದಲೇ ಸಂತೆ, ಅಂಗಡಿ, ಮಂಟಪ ಸ್ಪಧೆ೯ಗಳು ಜರುಗಲಿದ್ದು, ಇವುಗಳೊಂದಿಗೆ ಕ್ಲೇಮಾಡೆಲಿಂಗ್, ಛದ್ಮವೇಶ ಸ್ಪಧೆ೯ಗಳು ಆಯೋಜಿತವಾಗಿದೆ. ಮಕ್ಕಳ ದಸರಾವನ್ನು ಶಾಸಕ ಡಾ.ಮಂಥರ್ ಗೌಡ ಉದ್ಘಾಟಸಲಿದ್ದು, ಮಿಸ್ಟಿ ಹಿಲ್ಸ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಾಯ೯ದಶಿ೯ ರತ್ನಾಕರ್ ರೈ, ರೋಟರಿ ಸಹಾಯಕ ಗವನ೯ರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್ ಎಸ್ ಸಂಪತ್ ಕುಮಾರ್, ಮಡಿಕೇರಿ ದಸರಾ ಸಮಿತಿ ಅಧ್ಯಕ್ಷೆ ಅನಿತಾಪೂವಯ್ಯ, ಉಪಾಧ್ಯಕ್ಷೆ ಸವಿತಾರಾಕೇಶ್, ಕಾಯಾ೯ಧ್ಯಕ್ಷ ಪ್ರಕಾಶ್ ಆಚಾಯ೯, ಪ್ರಧಾನ ಕಾಯ೯ದಶಿ೯ ರಾಜೇಶ್ ಬಿ.ವೈ., ಖಜಾಂಜಿ ಅರುಣ್ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ…
ಮಡಿಕೇರಿ ಅ.18 : ನಿಷೇಧಿತ ಮಾದಕ ವಸ್ತು MDMA ಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಕೇರಳ ಮೂಲದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದಾರೆ. ಕೇರಳ ರಾಜ್ಯದ ಕಾಸರಗೋಡು ಮೂಲದ ಅಮೀರ್.ಟಿ.ಎಂ(28) ಹಾಗೂ ಮಹಮ್ಮದ್ ಶಬೀರ್.ಕೆ (30) ಬಂಧಿತ ಆರೋಪಿಗಳಾಗಿದ್ದಾರೆ. ಇವರ ಬಳಿಯಿಂದ 20 ಗ್ರಾಂ MDMA ಮಾದಕ ವಸ್ತು ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಮಡಿಕೇರಿ ಉಪ ವಿಭಾಗದ ಡಿವೈಎಸ್‌ಪಿ ಜಗದೀಶ್.ಎಂ, ಡಿಸಿಆರ್‌ಬಿ ಪಿಐ ಐ.ಪಿ.ಮೇದಪ್ಪ, ಮಡಿಕೇರಿ ಸಿಪಿಐ ಅನೂಪ್ ಮಾದಪ್ಪ, ನಗರಠಾಣೆ ಪಿಎಸ್‌ಐ ಲೋಕೇಶ್, ಸಿಬ್ಬಂದಿಗಳು ಹಾಗೂ ಡಿಸಿಆರ್‌ಬಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.
ಮಡಿಕೇರಿ ಅ.18 : ಚಾಲಕನ ನಿಯಂತ್ರಣ ತಪ್ಪಿದ ಜೀಪೊಂದು ಪಲ್ಟಿಯಾದ ಪರಿಣಾಮ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಮರಗೋಡು ಚೆಲ್ಲಂಗೋಡು ಸೇತುವೆ ಬಳಿ ನಡೆದಿದೆ. ಅಸ್ಸಾಂ ಮೂಲದ ಕಾರ್ಮಿಕ ರಜಾಕ್ (55) ಎಂಬುವವರೇ ಮೃತ ದುರ್ದೈವಿಯಾಗಿದ್ದಾರೆ. ಗಾಯಗೊಂಡಿರುವ ನಾಲ್ವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಜೀಪು ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮಡಿಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಡಿಕೇರಿ ಅ.18 : ಕಾವೇರಿ ತುಲಾಸಂಕ್ರಮಣದ ಹಿನ್ನೆಲೆ ಕಾವೇರಿ ತೀರ್ಥೋದ್ಭವದ ಮರುದಿನ ದೇವಟ್ ಪರಂಬುವಿಗೆ ಭೇಟಿ ನೀಡಿದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಹಾಗೂ ಸದಸ್ಯರು ಅಗಲಿದ ಹಿರಿಯರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಕೊಡವ ಸಂಪ್ರದಾಯದಂತೆ ದೋಸೆ, ಪುಟ್ ಮತ್ತು ಬೊತ್ತ್ ಬಳ್ಳಿಯನ್ನು ಇರಿಸಿ, ಲೋಕ ಕಲ್ಯಾಣಕ್ಕಾಗಿ ಕಾವೇರಿ ಮಾತೆಯನ್ನು ಸ್ಮರಿಸಿದರು. ದೇವಟ್ ಪರಂಬು ನರಮೇಧದಲ್ಲಿ ಮೃತಪಟ್ಟ ಹಿರಿಯರಿಗೆ ಗೌರವ ಸಲ್ಲಿಸಿದ ನಾಚಪ್ಪ ಅವರು, ಕೊಡವರ ಹಿತ ಕಾಯಲು ಸಂವಿಧಾನಾತ್ಮಕ ಹೋರಾಟಕ್ಕೆ ಸಿಎನ್‌ಸಿ ಬದ್ಧವಾಗಿದೆ ಎಂದರು. ಕೊಡವರ ಸಮಗ್ರ ಸಬಲೀಕರಣಕ್ಕಾಗಿ ಸಂವಿಧಾನದ ಆರ್ಟಿಕಲ್ 244 R/w 6ನೇ ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಕೌನ್ಸಿಲ್ ಅನ್ನು ರಚಿಸಬೇಕು. ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಆಂತರಿಕ ರಾಜಕೀಯ ಸ್ವ-ನಿರ್ಣಯದ ಹಕ್ಕು ನೀಡಬೇಕು ಎಂದು ಒತ್ತಾಯಿಸಿದ ಅವರು, ಈ ಕುರಿತು ಈಗಾಗಲೇ ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ನ್ಯಾಯಾಂಗದ ಮೂಲಕ ಹೋರಾಟ ನಡೆಸುತ್ತಿದ್ದು, ನಮಗೆ ಜಯ…
ಮಡಿಕೇರಿ ಅ.18 : ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಬೀದರ್ ನಲ್ಲಿ ನಡೆದ ವಿಶ್ವವಿದ್ಯಾನಿಲಯದ 13 ನೇ ಘಟಿಕೋತ್ಸವದಲ್ಲಿ ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದ ಮಂದ್ರೀರ ನಮೃತಾ (ನೀಷ್ಮ) ಅವರು ಚಿನ್ನದ ಪದಕ ಪಡೆದರು. 2020-22 ಶೈಕ್ಷಣಿಕ ವರ್ಷದಲ್ಲಿ ಮೀನುಗಾರಿಕೆ ವಿಜ್ಞಾನದಲ್ಲಿ ಸ್ನಾತಕೋತ್ತರ ಅವಧಿಯಲ್ಲಿ ಜಲವಾಸಿ ಪ್ರಾಣಿಗಳ ಆರೋಗ್ಯ ನಿರ್ವಹಣೆ ವಿಷಯದಲ್ಲಿ ಅವರು ಪಡೆದ ಅತ್ಯುನ್ನತ ದರ್ಜೆಯ ಅಂಕಗಳಿಗೆ ವಿಶ್ವವಿದ್ಯಾಲಯದ ಚಿನ್ನದ ಪದಕ, ಪ್ರೊ.ಎಚ್.ಪಿ.ಸಿ.ಶೆಟ್ಟಿ ಚಿನ್ನದ ಪದಕ ಮತ್ತು ಪ್ರೊ.ಪಿ.ಟೌರೊ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗಿದೆ. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ನಮೃತಾ ಅವರನ್ನು ಸನ್ಮಾನಿಸಿದರು. ಇವರು ಕಗ್ಗೋಡ್ಲು ಗ್ರಾಮದ ನಿವಾಸಿ ಮಂದ್ರೀರ ರಾಮಕೃಷ್ಣ (ರಾಜ) ಹಾಗೂ ದಿ.ಧನ್ಯವೇಣಿ ಎಂ.ಆರ್ (ವಿನುತ) ಅವರ ಪುತ್ರಿ.






