ಮಡಿಕೇರಿ, NEWS DESK ಫೆ.19:-ವಿದ್ಯುತ್ ಇಲಾಖೆಗೆ ಸಂಬಂಧಿಸಿದಂತೆ ಕಾರ್ಯ ಮತ್ತು ಪಾಲನೆ ಕ್ಷೇತ್ರ ಮಟ್ಟದಲ್ಲಿ ಗ್ರಾಹಕರಿಗೆ/ ಸಾರ್ವಜನಿಕರಿಗೆ/ ಸಿಬ್ಬಂದಿಗಳಿಗೆ ವಿದ್ಯುತ್ ಸೇವೆಗಳ ಹಾಗೂ ವಿದ್ಯುತ್ ಸುರಕ್ಷಿತಾ ಅರಿವನ್ನು ಮೂಡಿಸಲು ಅರಿವು ಸಪ್ತಾಹ ಕಾರ್ಯಕ್ರಮವನ್ನು ಉಪ ವಿಭಾಗ ಮಟ್ಟದಲ್ಲಿ ಆಯೋಜಿಸಲು ನಿರ್ಧರಿಸಿದ್ದು, ಕುಶಾಲನಗರ ಉಪ ವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡ ಹಾಗೂ ಸುರಕ್ಷಿತಾ ಕ್ರಮಗಳ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸುವ ಸಲುವಾಗಿ ಫೆಬ್ರವರಿ, 21 ರಂದು ಬೆಳಗ್ಗೆ 11 ಗಂಟೆಗೆ ಕುಶಾಲನಗರ ಉಪ ವಿಭಾಗ ಕಚೇರಿ ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಅವರು ತಿಳಿಸಿದ್ದಾರೆ.
ಲೇಖಕ: admin
ಮಡಿಕೇರಿ, NEWS DESK ಫೆ.19 : ಹೊದ್ದೂರು ಗ್ರಾಮದ ಕಬಡಗೇರಿಯ ನಿವೇಶನ ರಹಿತ 47 ಕುಟುಂಬಗಳಿಗೆ ಶಾಸಕರಾದ ಡಾ.ಮಂತರ್ ಗೌಡ ಅವರು ಹಕ್ಕುಪತ್ರ ವಿತರಿಸಿದರು. ಹಾಗೆಯೇ ಹೊದ್ದೂರು ಗ್ರಾಮದ ಪಾಲೆಮಾಡಿನ 14 ಕುಟುಂಬಗಳಿಗೆ 94ಸಿ ರಡಿ ಹಕ್ಕುಪತ್ರವನ್ನು ಶಾಸಕರು ವಿತರಿಸಿದರು. ಹೊದ್ದೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ನಿವೇಶನ ಹಕ್ಕುಪತ್ರವನ್ನು ವಿತರಿಸಿದರು. ಹೊದವಾಡ ಗ್ರಾಮದ ಅಂಬಲ ಅಂಗನವಾಡಿ ಕೇಂದ್ರವನ್ನು ಇದೇ ಸಂದರ್ಭದಲ್ಲಿ ಶಾಸಕರು ಉದ್ಘಾಟಿಸಿದರು. ಹಾಗೆಯೇ ಹೊದ್ದೂರು ಗ್ರಾ.ಪಂ.ವ್ಯಾಪ್ತಿಯಲ್ಲಿ ವಿವಿಧ ಸಂಪರ್ಕ ರಸ್ತೆಗೆ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರಾದ ಡಾ.ಮಂತರ್ ಗೌಡ ಅವರು ನಿವೇಶನ ನೀಡಲಾಗಿರುವ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲು ಪ್ರಯತ್ನಿಸಲಾಗುವುದು ಎಂದರು. ಹೊದ್ದೂರಿನ ಕಬಡಗೇರಿಗೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರನ್ನು ಇಡುವಂತಾಗಬೇಕು ಎಂದು ಸಲಹೆ ಮಾಡಿದ ಶಾಸಕರು ಬಡವರ ಶ್ರೇಯೋಭಿವೃದ್ಧಿಗೆ ಇನ್ನಷ್ಟು ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಬಡಾವಣೆ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಆ…
ಮಡಿಕೇರಿ, NEWS DESK ಫೆ.19 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ ಅವರ ಉಪಸ್ಥಿತಿಯಲ್ಲಿ, ಕೊಡಗು ಅರೆಭಾಷೆ ಗೌಡ ಸಮುದಾಯ ವತಿಯಿಂದ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರನ್ನು ಬೆಂಗಳೂರಿನಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಇತ್ತೀಚೆಗೆ ಬೆಂಗಳೂರಿನಲ್ಲಿ ಜರುಗಿದ ಅರೆಭಾಷೆ ಗೌಡ ಸಮುದಾಯದ ಸಮಾರಂಭದಲ್ಲಿ ನೀಡಿದ ಆಶ್ವಾಸನೆಯಂತೆ, ಮುಖ್ಯಮಂತ್ರಿಗಳು, ಅರೆಭಾಷೆ ಗೌಡ ಸಮುದಾಯದ ಸಂಸ್ಕೃತಿ, ಶೈಕ್ಷಣಿಕ ಮತ್ತು ಕ್ರೀಡಾ ಕೇಂದ್ರ ಸ್ಥಾಪನೆ ಉದ್ದೇಶಕ್ಕಾಗಿ, ಮಡಿಕೇರಿ ತಾಲೂಕು ಮದೆ ಗ್ರಾಮದ ಕಾಟಕೇರಿ ಬಳಿ, 6 ಎಕರೆ ಜಾಗ ಮಂಜೂರು ಮಾಡಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು. ಅದಲ್ಲದೇ, ದಶಕಗಳಿಂದ ಕೊಡಗಿನ ಜನತೆಯನ್ನು ಕಾಡುತ್ತಿದ್ದ, ಅತ್ಯಂತ ಜಟಿಲವಾದ ಜಮ್ಮ ಬಾಣೆ ಸಮಸ್ಯೆಯ ಪರಿಹಾರಕ್ಕಾಗಿ, ಕರ್ನಾಟಕ ರಾಜ್ಯ ಕಂದಾಯ ಮಸೂದೆ 2025 ರ ತಿದ್ದುಪಡಿ ವಿದೇಯಕಕ್ಕೆ ಅನುಮೋದನೆ…
ಮಡಿಕೇರಿ, NEWS DESK ಫೆ.19 ಆನ್ ಲೈನ್ ನಲ್ಲಿ ಔಷಧ ವ್ಯಾಪಾರಕ್ಕೆ ಕಡಿವಾಣ ಹಾಕದೇ ಹೋದಲ್ಲಿ ಮಾದಕ ದ್ರವ್ಯಗಳಿಗೂ ಸಂಪೂಣ೯ ತಡೆ ಸಾಧ್ಯವಾಗದು ಎಂದು ಅಭಿಪ್ರಾಯಪಟ್ಟಿರುವ ಕನಾ೯ಟಕ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಆರ್ ರಘುನಾಥ ರೆಡ್ಡಿ, ಆನ್ ಲೈನ ಮೂಲಕ ಮಾದಕ ದ್ರವ್ಯ ಸಾಗಾಣಿಕೆ ಊಹೆಗೂ ಮೀರಿ ಬೆಳೆಯುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ. ನಗರದಲ್ಲಿ ಕೊಡಗು ಔಷಧ ವ್ಯಾಪಾರಸ್ಥರ ಸಂಘದ ವತಿಯಿಂದ ನೂತನವಾಗಿ ನಿಮಿ೯ಸಲಾದ ಸಂಘದ ಕಛೇರಿ, ಸಭಾಂಗಣವನ್ನು ಹೊಂದಿರುವ ಎರಡಂತಸ್ತಿನ ಫಾಮಾ೯ ಭವನ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಾದಕ ದ್ರವ್ಯ ಸಾಗಾಣಿಕೆ ದೇಶವ್ಯಾಪಿ ವಿಸ್ತಾರಗೊಳ್ಳುತ್ತಿದೆ. ಆನ್ ಲೈನ್ ನಲ್ಲಿ ಔಷಧಿ ವಹಿವಾಟು ನೆಪದಲ್ಲಿ ಮಾದಕ ದ್ರವ್ಯ ಸಾಗಾಣಿಕೆಯೂ ಹೆಚ್ಚಾಗುತ್ತಿದೆ. ಇಂಥ ಸಂದಭ೯ ಅನಗತ್ಯವಾಗಿ ಔಷಧಿ ವ್ಯಾಪಾರಿಗಳನ್ನು ತನಿಖಾ ಸಂಸ್ಥೆಗಳು ವಿಚಾರಣೆಗೊಳಪಡಿಸುತ್ತಿವೆ. ಆನ್ ಲೈನ್ ಮೂಲಕ ಮಾದಕ ವಸ್ತುಗಳನ್ನು ಸಲೀಸಾಗಿ ಸಾಗಾಣಿಕೆ ಮಾಡುವ ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆನ್ ಲೈನ್ ಔಷಧಿ ವಹಿವಾಟಿಗೇ…
ಮನುಷ್ಯ ನಿರ್ಮಿಸಲಾಗದ ಭಗವಂತನ ಸೃಷ್ಟಿಯ ನದಿ,ಸರೋವರಗಳು, ನೀರು,ಮಣ್ಣು, ಗಾಳಿ ಮೊದಲಾದ ಸುಂದರ ಪರಿಸರವನ್ನು ನಾವು ಹದಗೆಡಿಸದೇ ಸುಮ್ಮನಿದ್ದರೆ ಸಾಕು ಅದೇ ನಾವು ಭಗವಂತನಿಗೆ ಸಲ್ಲಿಸುವ ಕಾಣಿಕೆ ಎಂದು ಸುತ್ತೂರು ವೀರಸಿಂಹಾಸನ ಪೀಠದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅಭಿಪ್ರಾಯಿಸಿದರು. ಕುಶಾಲನಗರ ತಾಲ್ಲೂಕು ತೊರೆನೂರು ವಿರಕ್ತ ಮಠದಲ್ಲಿ ಹಿರಿಯ ಶ್ರೀ ಮಹಾಂತ ಸ್ವಾಮೀಜಿ ಸಂಸ್ಮರಣೋತ್ಸವ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಹನ್ನೆರಡನೇ ಶತಮಾನದ ಶರಣರ ಚಿಂತನೆಗಳು ಎಲ್ಲಾ ಕಾಲಘಟ್ಟಕ್ಕೂ ಪ್ರಸ್ತುತ ವಾಗಿದ್ದು, ಎಲ್ಲಾ ವಚನಗಳಲ್ಲಿ ವೈಜ್ಞಾನಿಕ ನೆಲೆಗಟ್ಟು ಇದೆ. ಅನುಭವ ಮಂಟಪದಲ್ಲಿ ಅಲ್ಲಮಪ್ರಭುವಿನಷ್ಟೇ ಸಮಾನ ಅವಕಾಶಗಳು ಎಲ್ಲಾ ಶರಣರಿಗಿತ್ತು. ಸಮಾನತೆಗಾಗಿ ಹೋರಾಟ ಇನ್ನೂ ಜೀವಂತವಾಗಿರುವುದು ವಿಷಾದನೀಯ. ಭಗವಂತ ಭಕ್ತನ ನಡುವಿನ ನೇರ ಒಡನಾಟವೇ ಇಷ್ಟಲಿಂಗ ಪರಿಕಲ್ಪನೆ. ಸಾಮಾಜಿಕವಾಗಿ ಮೌಲ್ಯಯುತವಾದ ಜೀವನ ನಡೆಸಲು ಪೂರಕ. ಅಂತರಂಗ ಬಹಿರಂಗದ ಮದಗಳು ದೂರವಾದರೆ ಭಗವಂತನ ಬಳಿ ಹೋಗುತ್ತೇವೆ. ಭಗವಂತನ ಸೃಷ್ಟಿ ಹೊರತಾಗಿ ಮನುಷ್ಯನ ಸೃಷ್ಟಿ ಏನೇನೂ ಈ ಭೂಮಿಯಲ್ಲಿ ಇಲ್ಲ. ನಾನತ್ವ, ಅಹಂಕಾರ ಎರಡೂ…
ಮಡಿಕೇರಿ ಫೆ.18 NEWS DESK : ಎಲ್ಲ ಊರಿನ ದೇವರ ಕಾಡುಗಳು ಊರಿನ ಎಲ್ಲ ಸಮುದಾಯಗಳ ಸಾಮರಸ್ಯ ಕಾಪಾಡುವ ವ್ಯವಸ್ಥೆಯಾಗಿದೆ. ದೇವರ ಕಾಡುಗಳನ್ನು ಕಾಪಾಡುವುದು, ದೇವರ ಉತ್ಸವಗಳನ್ನು ನಡೆಸುವುದು ಊರಿನವರ ಜವಾಬ್ದಾರಿಯಾಗಿ ನಡೆದುಕೊಂಡು ಬಂದಿರುವ ಕಾರಣ ದೇವರ ಕಾಡು ಉಳಿದಿದೆ ಎಂದು ಕೊಡಗು ಮಾಡಲು ಫಾರೆಸ್ಟ್ ಅಧ್ಯಕ್ಷ ಪ್ರೊ. ಸಿ.ಜಿ.ಕುಶಾಲಪ್ಪ ನುಡಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ಸುಲೋಚನಾ ಡಾ. ಎಂ.ಜಿ ನಾಗರಾಜ್ ದತ್ತಿ ಆಶಯದಂತೆ ಕೊಡಗಿನ ದೇವರ ಕಾಡುಗಳ ಸಂರಕ್ಷಣೆ ಕುರಿತ ಉಪನ್ಯಾಸದಲ್ಲಿ ಮಾತನಾಡಿದರು. ಕೊಡಗಿನಲ್ಲಿ 1,215 ದೇವರ ಕಾಡುಗಳಿವೆ ಅವುಗಳಲ್ಲಿ 165ಕ್ಕೂ ಹೆಚ್ಚು ಬೇರೆ ಬೇರೆ ದೇವರುಗಳಿವೆ. ಇವು ಒಂದು ಜನಾಂಗಕ್ಕೆ ಸೀಮಿತವಾಗಿಲ್ಲ ಕೊಡಗಿನ ಎಲ್ಲ ಸಮುದಾಯಗಳ ದೇವರು ಕಾಡುಗಳಿದ್ದು ವಿಶೇಷವಾಗಿ ಕೊಡವ ಮಾಪಿಳ್ಳೆ ದೇವರ ಕಾಡುಗಳು ಇದ್ದು ಪಳ್ಳಿಕಾಡು ಎನ್ನುವ ಹೆಸರಿಂದ ಗುರುತಿಸಲ್ಪಡುತ್ತಿದೆ. ದೇವರ ಕಾಡುಗಳಲ್ಲಿರುವ ಅಯ್ಯಪ್ಪ ಭದ್ರಕಾಳಿ ಮುಂತಾದ ದೇವರುಗಳಿಗೆ…
ಮಡಿಕೇರಿ ಫೆ.18 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರೌಢಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮುಕ್ತ ನಾಟಕ ಸ್ಪರ್ಧೆ ಏರ್ಪಡಿಸಲಾಗಿದೆ. ಮಡಿಕೇರಿಯಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಸಾಹಿತಿ ನಾ.ಡಿಸೋಜ ಅವರ ದತ್ತಿ ಆಶಯದಂತೆ ಈ ನಾಟಕ ಸ್ಪರ್ಧೆ ನಡೆಯಲಿದೆ. ನಾಟಕ ತಂಡದಲ್ಲಿ ಆರು ಮಂದಿ ಕಲಾವಿದರು ಇರಬೇಕು. 20 ನಿಮಿಷಗಳ ನಾಟಕ ಪ್ರದರ್ಶಿಸಬೇಕು. ಸಾಮಾಜಿಕ ಐತಿಹಾಸಿಕ ಪೌರಾಣಿಕ ಜಾನಪದ ಯಾವುದೇ ಪ್ರಕಾರದ ನಾಟಕಗಳನ್ನು ಪ್ರದರ್ಶಿಸಬಹುದು. ಈ ಸ್ಪರ್ಧೆಯು ಮಡಿಕೇರಿಯಲ್ಲಿ ಮಾರ್ಚ್ ಮೊದಲ ವಾರದಲ್ಲಿ ನಡೆಯಲಿದೆ. ನಾಟಕ ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರು ದಿನಾಂಕ 25.02.2026 ರ ಒಳಗಾಗಿ ಈ ಕೆಳಗೆ ಸೂಚಿಸಿದ ಮೊಬೈಲ್ ಸಂಖ್ಯೆ 9113892396 ಗೆ ವಾಟ್ಸಪ್ ಮೂಲಕ ಕಳುಹಿಸ ತಕ್ಕದ್ದು ಅಥವಾ ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುದರ್ಶನ ವೃತ್ತದ ಬಳಿ, ಮಡಿಕೇರಿ. ಈ ವಿಳಾಸಕ್ಕೆ ಪತ್ರ ಮುಖೇನ ತಿಳಿಸಬೇಕಾಗಿ ಕೊಡಗು ಜಿಲ್ಲಾ…
ಮಡಿಕೇರಿ ಫೆ.18 NEWS DESK : ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಿಯ ಅಷ್ಟಬಂಧ ಬ್ರಹ್ಮ ಕಲಶ ಮುಹೂರ್ತ ಫೆ.21 ಮತ್ತು 22ರಂದು ನಡೆಯಲಿದೆ. ಫೆ.21 ರಂದು ಬೆಳಿಗ್ಗೆ 8.30ರಿಂದ ಸಾಮೂಹಿಕ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಆದ್ಯ ಗಣಪತಿ ಹೋಮ, ನವಗ್ರಹ ಹೋಮ, ಶಿಖರ ಪೂಜೆ ಮತ್ತು ಪ್ರತಿಷ್ಠೆ ಬಳಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಲಿದೆ. ಸಂಜೆ 4 ಗಂಟೆಯಿಂದ ಸಪ್ತ ಶುದ್ಧಿ, ಶಾಂತಿ ಪ್ರಾಯಶ್ಚಿತ ಹೋಮ, ತತ್ವ ಹೋಮ, ಅಧಿವಾಸ ಹೋನಗಳು, ಸುದರ್ಶನ ಹೋಮ, ರಾಕ್ಷೋಘ್ನ ಹೋಮ, ಚಾಮುಂಡೇಶ್ವರಿ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಪ್ರಾಕಾರ ಬಲಿ, ಬ್ರಹ್ಮಕಲಶಾಧಿವಾಸ, ಕುಂಭೇಶಕಲಶಾಧಿವಾಸ, ಚಾಮುಂಡೇಶ್ವರಿ ದೇವಿಯ ಬಿಂಬ ಪ್ರತಿಷ್ಠೆ, ಅಷ್ಟ ಬಂಧ ಲೇಪನ, ನಿದ್ರಾ ಕುಂಬಾಭಿಷೇಕ, ಪ್ರಸನ್ನ ಪೂಜೆ ನೆರವೇರಲಿದೆ. ಫೆ.22 ರಂದು ಬೆಳಿಗ್ಗೆ 6 ಗಂಟೆಯಿಂದ ಸ್ವಸ್ತಿ ವಾಚನ, ಗಣಯಾಗ, ದುರ್ಗಾ ಹೋಮ, ನಾಗಹೋಮ, ತತ್ವ ಹೋಮ, ಕಲಶಾದಿ…
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಅಬ್ಬಕ್ಕ 500 ಪ್ರೇರಣಾದಾಯಿ 100 ಉಪನ್ಯಾಸ ಸರಣಿಯ 100ರ ಸಂಭ್ರಮ ರಾಷ್ಟ್ರೀಯ ವಿಚಾರ ಸಂಕಿರಣವು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಇತ್ತೀಚಿಗೆ ನಡೆಯಿತು. ಆ ಪ್ರಯುಕ್ತ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಮಹಿಳೆಯರಿಗೆ ವೀರರಾಣಿ ಅಬ್ಬಕ್ಕ ಪುರಸ್ಕಾರ ನೀಡಲಾಗಿದ್ದು ಅದರಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ತೋರ ಗ್ರಾಮದ ನಿವಾಸಿ ಕೆ.ಬಿ.ಅಮ್ಮಣ್ಣಿ ವೀರರಾಣಿ ಅಬ್ಬಕ್ಕ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ . ಸೂಲಗಿತ್ತಿ ನಾಟಿವೈದ್ಯ , ಬಾಣಂತಿ ಆರೈಕೆ , ಜಾನಪದ ಕ್ಷೇತ್ರದಲ್ಲಿನ ಸೇವೆಯನ್ನು ಗಮನಿಸಿ ಈ ಪುರಸ್ಕಾರ ನೀಡಲಾಗಿದ್ದು. ಸೂಕ್ಷ್ಮ , ಸಣ್ಣ , ಮಧ್ಯಮ ಉದ್ಯಮಗಳ ರಾಜ್ಯ ಸಚಿವಾಲಯ ಸಚಿವರಾದ ಶೋಭಾ ಕರಂದ್ಲಾಜೆ ಅವರಿಂದ ಈ ಪುರಸ್ಕಾರ ಪಡೆದಿರುತ್ತಾರೆ. ಅಮ್ಮಣಿ ಯವರು ಕೆದಮುಳ್ಳೂರು ಪಂಚಾಯತಿಯ ತೋರ ಗ್ರಾಮದ ನಿವಾಸಿ ಭೀಮಯ್ಯನವರ ಪತ್ನಿಯಾಗಿದ್ದಾರೆ.
ಮಡಿಕೇರಿ ಫೆ.18 NEWS DESK : ನಾಪೋಕ್ಲುವಿನ ತೊತ್ತಿಯಂಡ ಬಾರಿಕೆ ಅಂಗನವಾಡಿ ಕೇಂದ್ರಕ್ಕೆ ಗ್ರಾಮಸ್ಥರು ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದರು. ಗ್ರಾಮಸ್ಥರಾದ ಮಹಮ್ಮದ್ ಹಾಗೂ ಐಮದ್ ಅಂಗನವಾಡಿ ಕಾರ್ಯಕರ್ತೆ ಹೆಚ್.ಬಿ.ಪಾರ್ವತಿ ಅವರಿಗೆ 10 ಕುರ್ಚಿಗಳನ್ನು ಹಸ್ತಾಂತರಿಸಿದರು. ಆಶಾ ಕಾರ್ಯಕರ್ತೆ ಧಮಯಂತಿ, ಅಂಗನವಾಡಿ ಸಹಾಯಕಿ ಉಮೈಬ ಹಾಜರಿದ್ದರು.






