ನಾಪೋಕ್ಲು ಆ.28 : ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ಹಾಗೂ ನೆಲಜಿ ಗ್ರಾಮದ ಇಗ್ಗುತ್ತಪ್ಪ ದೇವಾಲಯದಲ್ಲಿ ಚೀನ್ಯಾರು 10ರ ಆರಾಧನೆಯು ಶ್ರದ್ಧಾಭಕ್ತಿಯಿಂದ ಜರುಗಿತು. ಉತ್ಸವದಲ್ಲಿ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಕೊಡಗಿನಲ್ಲಿ ವಿವಿಧ ಉತ್ಸವಗಳ ಆರಂಭಕ್ಕೂ ಮುನ್ನ ಇಗ್ಗುತ್ತಪ್ಪ ದೇವಾಲಯಗಳಲ್ಲಿ ಚೀನ್ಯಾರು 10 ರ ಉತ್ಸವವನ್ನು ಆಚರಿಸಲಾಗುತ್ತದೆ. ದೇವಾಲಯಗಳಲ್ಲಿ ದೇವರ ನೃತ್ಯಬಲಿಯೊಂದಿಗೆ ಉತ್ಸವ ನೆರವೇರಿತು. ಆ ಮೂಲಕ ಕೈಲ್ ಪೋಳ್ದ್ ಸೇರಿದಂತೆ ವಿವಿಧ ಉತ್ಸವಗಳನ್ನು ಸಾರ್ವಜನಿಕರು ಆಚರಿಸಲು ಅನುವು ಮಾಡಿಕೊಡಲಾಯಿತು. ವರದಿ : ದುಗ್ಗಳ ಸದಾನಂದ
ಲೇಖಕ: admin
ನಾಪೋಕ್ಲು ಆ.28 : ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಿಧಾನ ಪರಿಷತ್ ಸದಸ್ಯರು, ಕೊಡಗು ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಮತ್ತು ಕುಟುಂಬಸ್ಥರು 12 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ಹೆಬ್ಬಾಗಿಲನ್ನು ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭ ಎಂ.ಆರ್ ಸೀತಾರಾಮ್ ಮಾತನಾಡಿ, ಇಗ್ಗುತಪ್ಪನ ಆಶೀರ್ವಾದದಿಂದ ದೇವಾಲಯಕ್ಕೆ ಮೆಟ್ಟಿಲುಗಳನ್ನು ಹಾಗೂ ಹೆಬ್ಬಾಗಿಲನ್ನು ಸಮರ್ಪಿಸಿ ಉದ್ಘಾಟನೆ ನೆರವೇರಿಸಲಾಗಿದೆ ಎಂದರು. ಭಕ್ತರ ಅನುಕೂಲಕ್ಕಾಗಿ ದೇವಾಲಯಕ್ಕೆ ತೆರಳಲು ಈ ಹಿಂದೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿಲಾಗಿದ್ದು, ಮಧ್ಯಭಾಗದಲ್ಲಿ ರಸ್ತೆ ಕೆಲಸ ಬಾಕಿ ಇದ್ದು ಅದನ್ನು ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು. ಇಗ್ಗುತ್ತಪ್ಪ ದೇವಾಲಯದಲ್ಲಿ ಆಚರಿಸಲಾಗುತ್ತಿರುವ ಚೀನ್ಯಾರು ಹತ್ತರ ಹಬ್ಬದಂದು ದೇವಾಲಯದ ಹೆಬ್ಬಾಗಿಲನ್ನು ಸೀತಾರಾಮ್ ಅವರು ನಿರ್ಮಿಸಿ ಕೊಟ್ಟು ಇಂದು ಲೋಕಾರ್ಪಣೆ ಗೊಳಿಸಿದ್ದಾರೆ. ಮಾತ್ರವಲ್ಲದೆ ಸನ್ನಿಧಿಗೆ ಬರುವ ರಸ್ತೆ ಈ ಹಿಂದೆ ತೀವ್ರ ಹದಗೆಟ್ಟಿದ್ದು, ಅದನ್ನು ಕಾಂಕ್ರೀಟಿಕರಣಗೊಳಿಸಿ ಕೊಡುಗೆ ನೀಡಿದ್ದಾರೆ. ಸಮಸ್ತ ಭಕ್ತರ ಪರವಾಗಿ ಅವರಿಗೆ ಅಭಿನಂದನೆಗಳು ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ, ದೇವತಕ್ಕರಾದ ಪರದಂಡ ಸುಮನ್…
ನಾಪೋಕ್ಲು ಆ.28 : ಮೂಢನಂಬಿಕೆಗಳು ಅವೈಜ್ಞಾನಿಕವಾಗಿದ್ದು ಇಂತಹ ವಿಚಾರಗಳನ್ನು ವೈಜ್ಞಾನಿಕ ತಳಹದಿಯಲ್ಲಿ ಚರ್ಚಿಸದೆ ಒಪ್ಪಿಕೊಳ್ಳಬಾರದು ಎಂದು ಭಾರತ ವಿಚಾರವಾದಿ ಒಕ್ಕೂಟದ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ ಹೇಳಿದರು. ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ಕೊಡಗು ನ್ಯಾಷನಲಿಸ್ಟ್ ಅಸೋಸಿಯೇಷನ್ ಮತ್ತು ಮೂರ್ನಾಡು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ವಿಜ್ಞಾನ ಮತ್ತು ಮೂಢನಂಬಿಕೆಗಳು ಎಂಬ ವಿಚಾರದ ಕುರಿತು ಮಾತನಾಡಿದರು. ಸಮಾಜದಲ್ಲಿ ಮೌಡ್ಯತೆ ಹತ್ತಿಕ್ಕಬೇಕಾದರೆ ಯುವ ಜನರು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು, ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ರೂಢಿಸುವಲ್ಲಿ ಶಿಕ್ಷಣ ನೆರವಾಗಬೇಕು ಎಂದರು. ವಿಜ್ಞಾನ ಮನುಷ್ಯನಲ್ಲಿ ಆಲೋಚನಾ ಪ್ರವೃತ್ತಿಯನ್ನು ಬೆಳೆಸುತ್ತದೆ ದೇವರೇ ಹೆಸರಿನಲ್ಲಿ ಬಲಿಕೊಡುವುದು, ವಾಮಾಚಾರ, ಮಾಟ ಮಂತ್ರ ನಡೆಸುವುದು ಇದೆಲ್ಲ ಮುಗ್ಧರನ್ನು ವಂಚಿಸುವ ಕೆಲಸವಾಗಿದೆ. ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದರು. ವೇದಿಕೆಯಲ್ಲಿ ಕಾವೇರಿ ವಿದ್ಯಾಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಕೊಡಗು ನ್ಯಾಷನಲಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಡಾ.ಎ.ಸಿ.ಗಣಪತಿ, ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪಿ.ಸಿ.ಸುಬ್ರಮಣಿ, ಕಾರ್ಯದರ್ಶಿ ವೇಣು ಅಪ್ಪಣ್ಣ, ಖಜಾಂಚಿ ಬಿ.ಪಿ.ಸುಬ್ರಮಣಿ ,ಪ್ರಾಂಶುಪಾಲರಾದ ದೇವಕಿ…
ನಾಪೋಕ್ಲು ಆ.28 : ಎಸ್ ಎಸ್ ಕಲಾ ಸಂಗಮದ ವತಿಯಿಂದ ಮೈಸೂರಿನಲ್ಲಿ ನಡೆದ ಮಿಸ್, ಮಿಸೆಸ್ ಅಂಡ್ ಕಿಡ್ಸ್ ಸೀಸನ್ ಫೋರ್ ಕಾರ್ಯಕ್ರಮದಲ್ಲಿ ಕೊಡಗಿನ ಕೋಕೇರಿ ಗ್ರಾಮದ ಬಿದ್ದಂಡ ಸುರಕ್ಷಿತ ಮಿಸ್ ಮೈಸೂರ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಸುರಕ್ಷಿತ ಕೋಕೇರಿ ಗ್ರಾಮದ ನಿವೃತ ದೈಹಿಕ ಶಿಕ್ಷಕ ಬಿದ್ದಂಡ ರಾಜ ಉತ್ತಪ್ಪ ಹಾಗೂ ಸಿಂತಿಯ ಉತ್ತಪ್ಪ ಪುತ್ರಿ. ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 60ಕ್ಕೂ ಅಧಿಕ ಸ್ವರ್ದಿಗಳು ಭಾಗವಹಿಸಿದ್ದರು. ಮಿಸ್ ಮೈಸೂರ್ ಫ್ಯಾಶನ್ ಕಾರ್ಯಕ್ರಮದಲ್ಲಿ 20 ಸ್ವರ್ದಿಗಳ ಪೈಕಿ ಸುರಕ್ಷಿತ ಟ್ರೇಡಿಷನಲ್ ಮತ್ತು ವೆಸ್ಟೆರ್ನ್ ನಲ್ಲಿ ಕೊಡವ ಸೀರೆ ಧರಿಸಿ ಕೂರ್ಗ್ ಕೊಡವತಿ ಆಗಿ ಭಾಗವಹಿಸಿದ್ದರು. ಇವರು ಮೈಸೂರ್ ಮಹಾರಾಜ ಕಾಲೇಜಿನಲ್ಲಿ ಅಂತಿಮ ವರ್ಷದ ಎಂಸಿಎ ವ್ಯಾಸಂಗ ಮಾಡುತ್ತಿದ್ದಾರೆ. ಕಾರ್ಯಕ್ರಮದ ತೀರ್ಪುಗಾರರಾಗಿ ಸತ್ಯವತಿ ಬಸವರಾಜ್,ಭುವನ ಸುಂದರಿ, 2022 ವಿನ್ನರ್ ಜ್ಯೋತಿ ಬಿಹಲ್, ಖ್ಯಾತ ಡಿಸೈನರ್ ವರ್ಷ, ಮಿಸಸ್ ಇಂಡಿಯಾ ವಿನ್ನರ್ ಸುಪ್ರಜಾ, ಪೂರ್ಣಿಮಾ, ಗಂಡಸಿ ಸದಾನಂದ ಸ್ವಾಮಿ ಸಂಪಾದಕರು ಹಾಗೂ ಚಲನ ಚಿತ್ರ…
ಮಡಿಕೇರಿ ಆ. 27 : ಪಶ್ಚಿಮ ಘಟ್ಟ ಕುರಿತ ಕಸ್ತೂರಿ ರಂಗನ್ ವರದಿ ವೈಜ್ಞಾನಿಕವಾಗಿಲ್ಲ, ಇದನ್ನು ತಿರಸ್ಕರಿಸಬೇಕು ಎಂದು ರಾಜ್ಯ ಸರ್ಕಾರ ಈಗಾಗಲೇ ತೀರ್ಮಾನಿಸಿದೆ. ಆದಾಗ್ಯೂ ಕೇಂದ್ರ ಸರ್ಕಾರ ನಿವೃತ್ತಿ ಐ.ಎಫ್.ಎಸ್. ಅಧಿಕಾರಿ ಸಂಜಯ್ ಕುಮಾರ್ ಸಮಿತಿ ರಚಿಸಿದ್ದು, ಈ ಸಮಿತಿಗೆ ರಾಜ್ಯದ ಪಶ್ಚಿಮ ಘಟ್ಟದ ಎಲ್ಲ ಬಾಧ್ಯಸ್ಥರನ್ನು ಭೇಟಿ ಮಾಡಿ ವರದಿ ಸಲ್ಲಿಸುವಂತೆ ಕೋರಲಾಗಿದೆ ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ನಗರದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಇತ್ತೀಚೆಗೆ ಸಂಜಯ್ ಕುಮಾರ್ ಸಮಿತಿ ಸದಸ್ಯರು ತಮ್ಮನ್ನು ಭೇಟಿ ಮಾಡಿದಾಗ, ನೀವು ಕೊಡುಗು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ ಮೊದಲಾದ ಪಶ್ಚಿಮ ಘಟ್ಟ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಜನವಸತಿಯಲ್ಲಿರುವ ನಿವಾಸಿಗಳೊಂದಿಗೆ ಸಮಾಲೋಚಿಸಿ ನಂತರ ವರದಿ ಸಿದ್ಧಪಡಿಸಬೇಕು ಎಂದು ಕೋರಿದ್ದೇನೆ ಎಂದು ಸ್ಪಷ್ಟಪಡಿಸಿದರು. ಪರಿಸರ ಉಳಿಯಬೇಕು. ಈ ಕಾರ್ಯವನ್ನು ಪಶ್ಚಿಮ ಘಟ್ಟದ ಜನರು ಮಾಡುತ್ತಿದ್ದಾರೆ. ಆದಗ್ಯೂ ಕೇಂದ್ರ…
ಮಡಿಕೇರಿ ಆ.27: ಅರಣ್ಯ, ಪ್ರಕೃತಿ, ಪರಿಸರ ಉಳಿಯಬೇಕು. ಜೊತೆಗೆ ಜೀವನ, ಜೀವನೋಪಾಯವೂ ಇರಬೇಕು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಜನಸ್ನೇಹಿಯಾಗಿ ಮತ್ತು ಜನ ಪರವಾಗಿ ಕಾರ್ಯ ನಿರ್ವಹಿಸಬೇಕು ಎಂದು ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಮಡಿಕೇರಿಯ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿಂದು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಕಳೆದ 15 ದಿನಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಆನೆಗಳ ದಾಳಿಯಿಂದ ಮೂರು ಅಮೂಲ್ಯ ಜೀವಗಳು ಹೋಗಿವೆ. ಇದು ಅತ್ಯಂತ ನೋವಿನ ಸಂಗತಿ. ಈ ಹಿನ್ನೆಲೆಯಲ್ಲಿ ಇಲ್ಲಿನ ವಾಸ್ತವ ಪರಿಸ್ಥಿತಿಯನ್ನು ಖುದ್ದು ತಿಳಿಯಲು ಜಿಲ್ಲೆಗೆ ಬಂದಿರುವುದಾಗಿ ತಿಳಿಸಿದರು. ಇಂದು ತಾವು ಹಿರಿಯ ಅಧಿಕಾರಿಗಳೊಂದಿಗೆ ಆನೆ ದಾಳಿಯಿಂದ ಸಾವುಗಳು ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿ, ಆನೆ ದಾಳಿಯಿಂದ ಮೃತಪಟ್ಟ ಇಬ್ಬರ ಮನೆಗೆ ತೆರಳಿ ಸಾಂತ್ವನ ಹೇಳಿ, ಪರಿಹಾರದ ಚೆಕ್ ವಿತರಿಸಿರುವುದಾಗಿ ತಿಳಿಸಿದ ಅವರು, ನಾವು ಮೃತರ ಕುಟುಂಬಕ್ಕೆ ಪರಿಹಾರದ ಹಣ ಕೊಡಬಹುದು, ಆದರೆ ಅಮೂಲ್ಯ ಜೀವ ಮರಳಿ ತಂದುಕೊಡಲು…
ಮಡಿಕೇರಿ ಆ.27 : ಹುಲಿ ದಾಳಿಗೆ ಸಿಲುಕಿ ಕರುವೊಂದು ಸಾವನ್ನಪ್ಪಿರುವ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಹೋಬಳಿಯ ಕೋತೂರು ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಗಣೇಶ್ ಎಂಬುವವರಿಗೆ ಸೇರಿದ ಕರು ಇದಾಗಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಮೂಡಿದೆ. ಸ್ಥಳಕ್ಕೆ ನಾಗರಹೊಳೆ ವಲಯ ಅರಣ್ಯ ಅಧಿಕಾರಿಗಳು ಹಾಗೂ ಪೊನ್ನಂಪೇಟೆ ವಲಯ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಲಿ ಚಲನವಲನದ ಮೇಲೆ ನಿಗಾ ವಹಿಸಲು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಮಡಿಕೇರಿ ಆ.27 : ದೈವಾರಾಧನೆಯಲ್ಲಿ ಲೋಪವಾಗದಂತೆ ಎಲ್ಲರೂ ಎಚ್ಚರ ವಹಿಸಬೇಕು ಮತ್ತು ದೈವಗಳ ಭಾವಚಿತ್ರಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಅಭಿಪ್ರಾಯಗಳನ್ನು ಹರಿಯ ಬಿಡಬಾರದು ಎಂದು ಪ್ರಸಿದ್ಧ ದೈವ ನರ್ತಕ ಸುಳ್ಯದ ಬೊಳಿಮಜಲಿನ ಜಯರಾಮ್ ತಿಳಿಸಿದ್ದಾರೆ. ಮಡಿಕೇರಿಯ ಬಾಲಭವನ ಸಭಾಂಗಣದಲ್ಲಿ ಕೊಡಗು ಜಿಲ್ಲಾ ದೈವ ಆರಾಧಕರು ಹಾಗೂ ದೈವ ನರ್ತಕರ ಸಂಘದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಮೊಬೈಲ್ ನಲ್ಲಿ ದೈವದ ಫೋಟೋ ತೆಗೆದು ಕಮೆಂಟ್ ಮಾಡುವುದರಿಂದ ದೈವಕ್ಕೆ ಅಪಚಾರ ಮಾಡಿದಂತಾಗುತ್ತದೆ. ಇದರಿಂದ ತಲೆಮಾರಿನವರೆಗೂ ದೋಷ ಕಾಡಬಹುದು ಎಂದು ಎಚ್ಚರಿಕೆ ನೀಡಿದರು. ದೈವಾರಾಧನೆಯು ಆಯಾ ಪ್ರದೇಶಕ್ಕೆ ತಕ್ಕಂತೆ ವಿಭಿನ್ನ ರೀತಿಯಲ್ಲಿ ನಡೆಯುತ್ತದೆ. ತುಳುನಾಡಿನಲ್ಲಿ ದೈವ ನರ್ತನ ಎರಡೂವರೆ ಗಂಟೆ ನಡೆದರೆ ಕೊಡಗಿನಲ್ಲಿ ಪ್ರಶ್ನೆ ಚಿಂತನೆಯ ಕ್ರಮ ಸೇರಿ ರಾತ್ರಿ ಪೂರ್ತಿ ನಡೆಯುತ್ತದೆ. ಸಂಪ್ರದಾಯಕ್ಕೆ ಲೋಪವಾಗದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು. ದೈವದ ಆರಾಧನೆ ನಿರ್ಧರಿಸುವ ಬಡ ವರ್ಗದವರಿಗೆ ಆರ್ಥಿಕ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು. ಸಂಘಟನೆ ಮೂಲಕ ದರ ನಿಗದಿ ಮಾಡುವ…
ಕೂಡಿಗೆ/ಕುಶಾಲನಗರ ಆ. 27 : ಕುಶಾಲನಗರ ತಾಲ್ಲೂಕಿನ ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಕೂಡಿಗೆ ಕ್ಲಸ್ಟರ್ ಸಂಪನ್ಮೂಲ ಕೇಂದ್ರದ ವತಿಯಿಂದ ಶನಿವಾರ ( ಆ.26 ರಂದು ) ಏರ್ಪಡಿಸಿದ್ದ ಶಿಕ್ಷಕರ ಸಮ್ಮಿಲನ ಕಾರ್ಯಕ್ರಮದಲ್ಲಿ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಲ್ಲಿ ನಿವೃತ್ತಗೊಂಡ ಶಿಕ್ಷಕರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು. ಇದೇ ವೇಳೆ ವರ್ಗಾವಣೆಯಿಂದ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಿಂದ ಬೇರೆ ಶಾಲೆಗಳಿಗೆ ತೆರಳಿದ ಶಿಕ್ಷಕರಿಗೆ ಬೀಳ್ಕೊಟ್ಟು, ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳಿಗೆ ಆಗಮಿಸಿದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಇಂತಹ ಕಾರ್ಯಕ್ರಮವು ಶಿಕ್ಷಕರಲ್ಲಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದರೊಂದಿಗೆ ಶೈಕ್ಷಣಿಕ ಚಿಂತನೆಗೆ ಕ್ರಿಯಾಶೀಲ ಮತ್ತು ಪ್ರೇರೇಪಣೆ ನೀಡುತ್ತದೆ. ಮುಂದಿನ ದಿನಗಳಲ್ಲಿ ಕೂಡ ಇನ್ನಷ್ಟು ಶೈಕ್ಷಣಿಕ ಚಟುವಟಿಕೆಗಳನ್ನು ಸಂಘಟಿಸುವ ಮೂಲಕ ಮಕ್ಕಳ ಕಲಿಕೆಗೆ ಪ್ರೇರೇಪಣೆ ನೀಡಲು ಶ್ರಮಿಸೋಣ ಎಂದರು. ಶಿಕ್ಷಕರಾದ ನಾವು ಮಕ್ಕಳಲ್ಲಿ ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಅವರಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಪ್ರಶ್ನಿಸುವ ಮನೋಭಾವ ಬೆಳೆಸಬೇಕು…
ಮಡಿಕೇರಿ ಆ.27 : ಸಂಘದ ಸದಸ್ಯರಲ್ಲದ ವ್ಯಕ್ತಿಗಳಿಗೆ ಆಟೋ ಚಲಾಯಿಸಲು ಅವಕಾಶ ನೀಡುವುದಿಲ್ಲ ಎಂದು ಆಟೋ ಮಾಲೀಕ, ಚಾಲಕರ ಸಂಘ ಮತ್ತು ಕೊಡಗು ರಕ್ಷಣಾ ವೇದಿಕೆಯ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ನೀಡಿರುವ ಹೇಳಿಕೆ ಚಾಲಕರ ಜೀವನದ ಹಕ್ಕಿಗೆ ವಿರುದ್ಧವಾಗಿದೆ ಎಂದು ಮಡಿಕೇರಿ ನಗರದ ಜಾಗೃತ ಆಟೋ ಚಾಲಕರ ಬಳಗದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಳಗದ ಸದಸ್ಯರಾದ ಎಂ.ಬಿ.ದುರ್ಗೆಶ್, ವೇಣು, ಹರ್ಷಿತ್, ಪ್ರಸಾದ್ ಸೇರಿದಂತೆ 30ಕ್ಕೂ ಹೆಚ್ಚು ಆಟೋ ಚಾಲಕರು ಆಟೋ ಮಾಲೀಕ, ಚಾಲಕರ ಸಂಘ ಹಾಗೂ ಸಂಚಾರಿ ಠಾಣಾಧಿಕಾರಿ ಶ್ರೀಧರ್ ಅವರಿಗೆ ಮನವಿ ಸಲ್ಲಿಸಿ ಈ ಕುರಿತು ಚರ್ಚಿಸಿದರು. ಸಂಘದ ಸದಸ್ಯತ್ವ ಖಡ್ಡಾಯವಾಗಿ ಪಡೆದಿರಬೇಕು ಎಂದು ಪೊಲೀಸ್ ಇಲಾಖೆ ಅಥವಾ ಸಾರಿಗೆ ಇಲಾಖೆ ನಿರ್ಣಯ ಮಾಡಿದರೆ ನಾವು ಒಪ್ಪುತ್ತೇವೆ. ಆದರೆ ಸಂಘದ ಪದಾಧಿಕಾರಿಗಳು ಕಾನೂನಿಗೆ ವಿರುದ್ಧವಾಗಿ ನಿಯಮ ರೂಪಿಸಿದರೆ ಕಾನೂನು ಸಮರ ನಡೆಸುತ್ತೇವೆ ಎಂದು ಸದಸ್ಯರು ಹೇಳಿದರು. ಈಗಾಗಲೇ ಚಾಲಕರು ಅಧಿಕೃತ ಚಾಲನಾ ಪರವಾನಗಿ, ವಾಹನಗಳ ದಾಖಲಾತಿ ಹೊಂದಿಕೊಂಡು ಪೊಲೀಸ್…






