ಲೇಖಕ: admin

ಮಡಿಕೇರಿ ಜು.31 : ಬಿಟ್ಟಂಗಾಲ ಗ್ರಾ.ಪಂ ಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯ ಮೂಕಚಂಡ ಪ್ರಸನ್ನ ಸುಬ್ಬಯ್ಯ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸದಸ್ಯೆ ಎಚ್.ಜಿ.ಸರಸು ಆಯ್ಕೆಯಾಗಿದ್ದಾರೆ. ಸೋಮವಾರದಂದು ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ನಡೆದ ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಕಂಡಂಗಾಲ ವಾರ್ಡ್‍ನ ಪ್ರಸನ್ನ ಸುಬ್ಬಯ್ಯ ಧ್ಯಕ್ಷರಾಗಿ ಹಾಗೂ ನಾಂಗಾಲ ವಾರ್ಡ್‍ನ ಸರಸು ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಮುಂದಿನ ಎರಡೂವರೆ ವರ್ಷಗಳ ಕಾಲ ಅಧಿಕಾರ ನಿರ್ವಹಿಸಲಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ನೂತನ ಅಧ್ಯಕ್ಷರು ಬಿಟ್ಟಂಗಾಲ ಗ್ರಾ.ಪಂ ಯನ್ನು ಮಾದರಿ ಪಂಚಾಯಿತಿಯನ್ನಾಗಿ ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು. ಚುನಾವಣಾಧಿಕಾರಿಯಾಗಿ ಕೃಷಿ ಇಲಾಖೆ ಅಧಿಕಾರಿ ಲವೀನಾ ಮಾದಪ್ಪ ಕಾರ್ಯನಿರ್ವಹಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ವಿರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ನೆಲ್ಲಿರ ಚಲನ್, ವಿರಾಜಪೇಟೆ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ವಾಟೇರಿರ ಬೋಪಣ್ಣ, ಅಜ್ಜಿಕುಟ್ಟಿರ ಪ್ರವೀಣ್, ಕಾರ್ಯದರ್ಶಿ ಅಮ್ಮುಣಿಚಂಡ ರಂಜಿ ಪೂಣಚ್ಚ, ಬಿಟ್ಟಂಗಾಲ ಗ್ರಾ.ಪಂ ಬಿಜೆಪಿ ಉಸ್ತುವಾರಿ ಪುಲಿಯಂಡ ಪೊನ್ನಣ್ಣ,…

Read More

ಮಡಿಕೇರಿ ಜು.31 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಕೊಡವ ಪಂಚಾಂಗದ ಸಾರ್ವತ್ರಿಕ ಕಕ್ಕಡ ಪದ್‍ನೆಟ್ ಆಚರಣೆ ಆ.2 ರಂದು ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್ ನಲ್ಲಿ ನಡೆಯಲಿದೆ. ಈ ಕುರಿತು ಮಾಹಿತಿ ನೀಡಿರುವ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, 28ನೇ ವರ್ಷದ ಸಾರ್ವತ್ರಿಕ ಕಕ್ಕಡ ಪದ್‍ನೆಟ್ ಆಚರಣೆ ಇದಾಗಿದ್ದು, ಕೊಡವ ಸಂಸ್ಕೃತಿ , ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಉದ್ದೇಶದಿಂದ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕಕ್ಕಡ ಪದ್‍ನೆಟ್ ಆಚರಣೆ ಕೊಡವ ಕರೋಣರ (ಅಂದರೆ ಕೊಡವ ಪೂರ್ವಜರು) ಆವಿಷ್ಕಾರವಾಗಿದೆ ಮತ್ತು ಇದನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಸಾರ್ವತ್ರಿಕಗೊಳಿಸಿ ವಿಶ್ವ ಮಟ್ಟದಲ್ಲಿ ಕೊಡವ ಸಂಪ್ರದಾಯವನ್ನು ಪರಿಚಯಿಸಿದೆ. ತಾಯಿ ಜಲದೇವತೆ ಕಾವೇರಿ ಹಾಗೂ ಭೂದೇವಿಯೊಂದಿಗೆ ಮುರಿಯಲಾಗದ ಕೊಡವ ಬಂಧನವನ್ನು ಕಕ್ಕಡ ಪದ್‍ನೆಟ್ ಸೂಚಿಸುತ್ತದೆ. ಇದು ಕೊಡವ ಬುಡಕಟ್ಟು ಪ್ರಪಂಚದ ಜಾನಪದ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ಕಕ್ಕಡದ 18 ರಂದು ಮದ್ದ್‍ತ್ತೊಪ್ (ಒಂದು ನಿರ್ದಿಷ್ಟ ಎಲೆ/ಮದ್ದ್‍ತ್ತೊಪ್ ಎಂದು…

Read More

ಮಡಿಕೇರಿ ಜು.31 : ನಗರದ ಶ್ರೀ ಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿಯ 48ನೇ ದಸರಾ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಪ್ರಭು ರೈ (ಪ್ರಭಾಕರ್) ಹಾಗೂ ಎಂ.ಬಿ.ರಾಜ ಸುಬ್ಬಯ್ಯ ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಮುದ್ದುರಾಜು, ಖಜಾಂಚಿಯಾಗಿ ವಿಘ್ನೇಶ್, ಸಹ ಕಾರ್ಯದರ್ಶಿಯಾಗಿ ಕವನ್ ಕೊತ್ತೋಳಿ, ಉಪಾಧ್ಯಕ್ಷರುಗಳಾಗಿ ಅಯ್ಯಪ್ಪ, ಕರಣ್ ಕುಮಾರ್, ದಿನೇಶ್ ಹಾಗೂ ಎಂ.ಜಿ.ಪ್ರಮೋದ್ ನೇಮಕಗೊಂಡಿದ್ದಾರೆ. ಕೋಟೆ ಮಾರಿಯಮ್ಮ ದೇವಾಲಯದ ಆವರಣದಲ್ಲಿ ಬ್ರಿಜೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಾಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 

Read More

ಸಿದ್ದಾಪುರ ಜು.31 :  ಮಣಿಪುರ ಜನಾಂಗಿಕ ಸಂಘರ್ಷದ ಕುರಿತು ಜಿಲ್ಲೆಯ ಜನತೆಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಆ.6 ರಂದು ಸಿದ್ದಾಪುರದ ಗುಹ್ಯ ಅಗಸ್ತ್ಯೇಶ್ವರ ಸಹಕಾರ ಸಂಘದ ಸಭಾಂಗಣದಲ್ಲಿ ವಿಚಾರ ಸಂಕಿರಣ  ನಡೆಯಲಿದೆ ಎಂದು ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷ ತಿಳಿಸಿದೆ. ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ  ಜಿಲ್ಲಾ ಕಾರ್ಯದರ್ಶಿ ಹೆಚ್.ಬಿ.ರಮೇಶ್,  ಮಣಿಪುರದಲ್ಲಿ ಎರಡು ಜನಾಂಗದ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ನಾಶವಾಗಿ ಪ್ರಾಣಹಾನಿ ಸಂಭವಿಸಿದರು ಕೇಂದ್ರ ಹಾಗೂ ಅಲ್ಲಿನ ಸರ್ಕಾರ ಘರ್ಷಣೆ ತಡೆಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು. ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ ಅತ್ಯಾಚಾರ ಮಾಡಿರುವುದು ವಿಶ್ವದ ಮುಂದೆ ದೇಶ ತಲೆತಗ್ಗಿಸುವಂತಹ ಹೇಯ ಕೃತ್ಯವನ್ನು ಖಂಡಿಸಿದ ಅವರು, ಭೇಟಿ ಬಚಾವೋ-ಭೇಟಿ ಪಡಾವೋ ಅನ್ನುವ ಪ್ರಧಾನಿ ಘಟನೆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಜಾತ್ಯತೀತ ಶಕ್ತಿಗಳಿಂದ ಹೋರಾಟ ರೂಪಿಸುವ ಘಟನೆ ಬಗೆಗಿನ ವಿವರಣೆಯನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಸಂಕೀರ್ಣ ನಡೆಯಲಿದೆ.  ಜಾತ್ಯತೀತ ನಿಲುವನ್ನು ಒಪ್ಪುವ ಪ್ರತಿಯೊಬ್ಬರು ಈ…

Read More

ಮಡಿಕೇರಿ ಜು.31 : 2006 ರಲ್ಲಿ ಜಾರಿಗೆ ಬಂದಿರುವ ಆದಿವಾಸಿ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದ ಕುರಿತು ಪರಾಮರ್ಶೆ ಮಾಡಲು ಸುಪ್ರೀಂಕೋರ್ಟ್ ರಚಿಸಿರುವ ಸತ್ಯ ಶೋಧನಾ ಸಮಿತಿಯು ಮೈಸೂರು ಜಿಲ್ಲೆಯ ಹುಣುಸೂರು ತಾಲ್ಲೂಕಿನ ವಿವಿಧ ಹಾಡಿಗಳಿಗೆ ಭೇಟಿ ನೀಡಿತು. ಕೊಳವಿಗೆ ಹಾಗೂ ಚಿಕ್ಕಹೆಜ್ಜೂರು ಹಾಡಿಗಳಿಗೆ ಭೇಟಿ ನೀಡಿದ ಸಮಿತಿಯ ಸದಸ್ಯರಾದ ಪರಿಸರ ತಜ್ಞ ವಿ.ಕೆ.ಬಹುಗುಣ, ಸುಪ್ರೀಂಕೋರ್ಟ್ ವಕೀಲ ರಿತ್ವಿಕ್‌ದತ್ತ ಹಾಗೂ ಸಂಜಯ್ ಕುಲಕರ್ಣಿ ಅವರುಗಳು ಸ್ಥಳೀಯ ನಿವಾಸಿಗಳಿಂದ ಮಾಹಿತಿ ಸಂಗ್ರಹಿಸಿದರು. ಪಿರಿಯಾಪಟ್ಟಣ ತಾಲ್ಲೂಕಿನ ರಾಣಿಗೇಟ್ ಹಾಡಿ, ಎಚ್.ಡಿ.ಕೋಟೆ ತಾಲೂಕಿನ ಅನೆಮಾಳ ಮತ್ತು ಮಾಳದ ಹಾಡಿ ಸೇರಿದಂತೆ ವಿವಿಧ ಹಾಡಿಗಳ ನಿವಾಸಿಗಳು ನಮಗೆ ಅನ್ಯಾಯವಾಗಿದೆ, ಕಾಯ್ದೆಯಲ್ಲಿ ಸೂಚಿಸಿರುವಷ್ಟು ಭೂಮಿ ನೀಡಿಲ್ಲ, ಅರ್ಜಿಗಳು ವಿಲೇವಾರಿಯಾಗುತ್ತಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು. ಹಾಡಿ ಜನರ ಅಹವಾಲು ಸ್ವೀಕರಿಸಿದ ಸತ್ಯ ಶೋಧನಾ ಸಮಿತಿಯ ಸದಸ್ಯರು ವರದಿ ಆಧರಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಮಡಿಕೇರಿ ಜು.31 : 5ನೇ ವಿಶ್ವ ಕಾಫಿ ಸಮಾವೇಶದ ಲೋಗೋವನ್ನು ಸಮಾವೇಶದ ಬ್ರಾಂಡ್ ಅಂಬಾಸಿಡರ್ ಖ್ಯಾತ ಬ್ಯಾಡ್ ಮಿಂಟನ್ ಕ್ರೀಡಾ ಪಟು ರೋಹನ್ ಬೋಪಣ್ಣ ಅನಾವರಣಗೊಳಿಸಿದರು. ಕಾಫಿ ಮಂಡಳಿ ಸಿಇಓ ಹಾಗೂ ಕಾರ್ಯದರ್ಶಿ ಡಾ.ಕೆ.ಜಿ.ಜಗದೀಶ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಕಾಫಿ ಆರ್ಟ್ ನ ಹಿಮ ಬಿಂದು ಅವರ ಕುಂಚದಲ್ಲಿ ಲೋಗೋ ರಚನೆಗೊಂಡಿದೆ. 5ನೇ ವಿಶ್ವ ಕಾಫಿ ಸಮಾವೇಶ ಸೆ.25 ರಿಂದ 28 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು, ವಿಶ್ವದ ವಿವಿಧ ಕಾಫಿ ಉದ್ಯಮಿಗಳು ಹಾಗೂ ಬೆಳೆಗಾರರು ಪಾಲ್ಗೊಳ್ಳಲಿದ್ದಾರೆ.

Read More

ಮಡಿಕೇರಿ ಜು.31 :  ಮೆಂಡಾ ಫೌಂಡೇಶನ್ ಮತ್ತು ಎಸ್ & ಪಿ ಗ್ಲೋಬಲ್ ಫೌಂಡೇಶನ್  ಪ್ರಾಯೋಜಕತ್ವದೊಂದಿಗೆ ಹಾಗೂ ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್, ಚೆಂಬು ಗ್ರಾಮ ಪಂಚಾಯಿತಿ ಯ ಸಹಕಾರದೊಂದಿಗೆ ಚೆಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  “ಸೋಲಾರ್ ಆಧಾರಿತ ಸ್ಮಾರ್ಟ್ ಕ್ಲಾಸ್” ಅನ್ನು  ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ  ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.  ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂ ಸಿ ವತಿಯಿಂದ ಶಾಸಕ ಎ.ಎಸ್.ಪೊನ್ನಣ್ಣ, ಯೋಜನೆಯನ್ನು ಅನುಷ್ಠಾನ ಮಾಡಿರುವ ಸಂಸ್ಥೆಯ ಪ್ರಮುಖರು, ಗ್ರಾ.ಪಂ ಅಧ್ಯಕ್ಷೆ ಹಾಗೂ  ಶಾಲಾ ವಿದ್ಯಾರ್ಥಿಗಳಿಗೆ 2 ವರ್ಷದಿಂದ ಕಲಿಕಾ ಸಾಮಾಗ್ರಿಗಳನ್ನು ಉಚಿತವಾಗಿ ನೀಡುತ್ತಿದ್ದ  ಯತೀಶ ಕುಂದಲ್ಪಾಡಿ ಅವರನ್ನು ಸನ್ಮಾನಿಸಿ  ಗೌರವಿಸಲಾಯಿತು. ಚೆಂಬು ಗ್ರಾ.ಪಂ ಅಧ್ಯಕ್ಷೆ ಎ. ಕುಸುಮ,  ಸದಸ್ಯರುಗಳಾದ ರಮೇಶ ಹುಲ್ಲುಬೆಂಕಿ,  ಎನ್.ಟಿ.ವಸಂತ,   ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ್ರು , ಎಸ್.ಡಿ.ಎಂ. ಸಿ ಅಧ್ಯಕ್ಷ  ಜಿ.ಆರ್. ಲಕ್ಷ್ಮಣ, ಸೆಲ್ಕೋ ಸೋಲಾರ್ ಸಂಸ್ಥೆಯ ಮ್ಯಾನೇಜರ್ ಬಿ.ಎ. ಆಶಿಕ್,  ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು, ಶಿಕ್ಷಣ ಇಲಾಖೆಯ ಅಧಿಕಾರಿ…

Read More

ಮಡಿಕೇರಿ ಜು.31 :  ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳು, ಇಂದಿನ ನೀರಿನ ಮಟ್ಟ 2857.16 ಅಡಿಗಳು. ಕಳೆದ ವರ್ಷ ಇದೇ ದಿನ 2857.75 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 1.20 ಮಿ.ಮೀ., ಕಳೆದ ವರ್ಷ ಇದೇ ದಿನ 1 ಮಿ.ಮೀ., ಇಂದಿನ ನೀರಿನ ಒಳಹರಿವು 4051 ಕ್ಯುಸೆಕ್, ಕಳೆದ ವರ್ಷ ಇದೇ ದಿನ 1755 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 3708 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 1000 ಕ್ಯುಸೆಕ್. ನಾಲೆಗೆ 20 ಕ್ಯುಸೆಕ್.

Read More

ಮಡಿಕೇರಿ ಜು.31 : ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 5.54 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 16.84 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1547.62 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1938.19 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 9.20 ಮಿ.ಮೀ. ಕಳೆದ ವರ್ಷ ಇದೇ ದಿನ 41.33 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2280.02 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2769.95 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 2.03 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 6.50 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1130.90 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1499.62 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 5.40 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 2.70 ಮಿ.ಮೀ.…

Read More

ಮಡಿಕೇರಿ, ಜು. 31: ಕರ್ನಾಟಕ ಜಾನಪದ ಪರಿಷತ್, ಕೊಡಗು ಜಿಲ್ಲಾ ಘಟಕದಿಂದ ನೂತನ ಜಿಲ್ಲಾಧಿಕಾರಿ ವೆಂಕಟ್‍ರಾಜಾ ಅವರನ್ನು ಭೇಟಿ ಮಾಡಲಾಯಿತು. ಈ ಸಂದರ್ಭ ಜಿಲ್ಲಾ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ,  ಜಿಲ್ಲೆಯಲ್ಲಿ ಜಾನಪದ ವಸ್ತು ಸಂಗ್ರಹಾಲಯ ಸ್ಥಾಪಿಸಲು ಜಾಗ ನೀಡುವಂತೆ ಮನವಿ ಮಾಡಿದರು. ಜಾನಪದ ದಸರಾ ಹಾಗೂ ಇತರ ಜಾನಪದ ಚಟುವಟಿಕೆಗಳಿಗೆ ಸ್ಪಂದಿಸುವುದಾಗಿ ಜಿಲ್ಲಾಧಿಕಾರಿ ವೆಂಕಟ್‍ರಾಜಾ ಭರವಸೆ ನೀಡಿದರು. ಈ ಸಂದರ್ಭ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಜಿಲ್ಲಾ ಖಜಾಂಚಿ ಸಂಪತ್‍ಕುಮಾರ್, ಉಪಾಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಸಮಿತಿ ಸದಸ್ಯರಾದ ನವೀನ್, ಎ.ಕೆ. ವೀಣಾಕ್ಷಿ ಹಾಗೂ ರೇವತಿ ಹಾಜರಿದ್ದರು. ಇದೇ ವೇಳೆ ಪರಷತ್ ನಿಯೋಗವು ಜಿಲ್ಲಾಧಿಕಾರಿಗಳಿಗೆ ಕೊಡಗಿನ ಖಾದ್ಯಗಳನ್ನು ನೀಡಿತು.

Read More