ಲೇಖಕ: admin

ಮಡಿಕೇರಿ ಜು.31 : ಭಾನುವಾರ ತಡರಾತ್ರಿ ಗಾಳಿಮಳೆಯಿಂದ ಮನೆ ಮೇಲೆ ಮರಬಿದ್ದು ಸಂಕಷ್ಟ ಅನುಭಿವುಸತ್ತಿದ್ದ ಕುಟುಂಬಕ್ಕೆ ವಿರಾಜಪೇಟೆ ಕ್ಷೇತ್ರದ ಶಾಸಕ ಪೊನ್ನಣ್ಣ ಅವರು ಸಕಾಲಿಕವಾಗಿ ಸ್ಪಂದಿಸಿದ್ದು, ಶಾಸಕರ ಬದ್ಧತೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ ಘಟನೆ ಅರುವತ್ತೋಕ್ಲು ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ತಾಲೂಕಿನ ಅರ್ವತ್ತೋಕ್ಲು ಗ್ರಾಮದ ಜ್ಯೋತಿ ಪರಿಶಿಷ್ಟ ಜಾತಿ ಕಾಲೋನಿಯ ನಿವಾಸಿಯಾದ ಶಿವಯ್ಯ ಎಂಬುವವರ ಮನೆಯ ಮೇಲೆ ಗಾಳಿಮಳೆಗೆ ಮರವೊಂದು ಉರುಳಿ ಬಿದ್ದು ಶಿವಯ್ಯ ಅವರು ಕೂದಲೆಳೆಯ ಅಂತರದಿಂದ ಪ್ರಾಣಾಪಾಯದಿಂದ ಪಾರಾಗಿದ್ದರು. ಕಾಲೋನಿ ನಿವಾಸಿಗಳು ಶಾಸಕರ ಆಪ್ತರಾದ ತೆನ್ನಿರ ಮೈನಾ ಅವರಿಗೆ ದೂರವಾಣಿ ಕರೆ ಮಾಡಿ ನೆರವು ಕೋರಿದ್ದಾರೆ. ತೆನ್ನಿರ ಮೈನಾ ಅವರು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಮಾಹಿತಿ ರವಾನಿಸಿದ್ದರು. ಕೂಡಲೇ ಪೊನ್ನಣ್ಣ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಕ್ರಮ ವಹಿಸಲು ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಶಾಸಕರ ನಿರ್ದೇಶನದ ಮೇರೆಗೆ ಕಂದಾಯ ನಿರೀಕ್ಷಕರಾದ ವೆಂಕಟೇಶ್, ಬೆಟ್ಟಗೇರಿ ಗ್ರಾಮ ಪಂಚಾಯತ್ ಪಿಡಿಒ ಉದಯ್ ಮತ್ತು ಸಿಬ್ಬಂದಿಗಳೊಂದಿಗೆ ಹಾಗೂ…

Read More

ಚೆಯ್ಯಂಡಾಣೆ ಜು.31 : ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ಪೋಕ್ಸೋ ಪ್ರಕರಣ ಎದುರಿಸಿ ಸೇವೆಯಿಂದ ಅಮಾನತುಗೊಂಡಿದ್ದ ಮುಖ್ಯ ಶಿಕ್ಷಕರೊಬ್ಬರನ್ನು ಮತ್ತೆ ಚೆಯ್ಯಂಡಾಣೆಯ ನರಿಯಂದಡ ಕೇಂದ್ರ ಪ್ರೌಢಶಾಲೆಗೆ ನಿಯೋಜಿಸಲಾಗುತ್ತಿದೆ ಎಂದು ಸಂಶಯಗೊಂಡ ವಿದ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ತಕ್ಷಣ ಶಿಕ್ಷಣಾಧಿಕಾರಿಗಳು ಸ್ಥಳಕ್ಕಾಗಮಿಸಿ ಪೋಷಕರೊಂದಿಗೆ ಸಮಾಲೋಚನೆ ನಡೆಸಬೇಕು. ಯಾವುದೇ ಕಾರಣಕ್ಕು ಆರೋಪ ಎದುರಿಸುತ್ತಿರುವ ಶಿಕ್ಷಕನನ್ನು ಈ ಶಾಲೆಗೆ ನಿಯೋಜಿಸಬಾರದು ಎಂದು ಒತ್ತಾಯಿಸಿದರು. ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ರಾಜೇಶ್ ಅಚ್ಚಯ್ಯ ಈ ಶಿಕ್ಷಕನನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡಿ ನಮ್ಮ ವಿರೋಧವಿಲ್ಲ, ಆದರೆ ನಮ್ಮ ಶಾಲೆಗೆ ಮಾತ್ರ ಇವರನ್ನು ನೇಮಿಸಲು ನಾವು ಬಿಡುವುದಿಲ್ಲ. ನೇಮಕ ಮಾಡಿದರೆ ಆಡಳಿತ ಮಂಡಳಿ ಸಾಮೂಹಿಕವಾಗಿ ರಾಜೀನಾಮೆ ನೀಡಲಿದೆ ಎಂದು ಎಚ್ಚರಿಕೆ ನೀಡಿದರು. ಗ್ರಾಮಸ್ಥ ಜೆಪ್ಪು ದೇವಯ್ಯ ಅವರು ಕೂಡ ಆರೋಪಿ ಶಿಕ್ಷಕನ ನಿಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ಶಿಕ್ಷಣಾಧಿಕಾರಿ ರಂಗಧಾಮಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ ಶಿಕ್ಷಕನನ್ನು ಈ ಶಾಲೆಗೆ ನಿಯೋಜಿಸಲು…

Read More

ಮಡಿಕೇರಿ ಜು.31 : ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಯುವ ನಿರಂತರ ಶೋಷಣೆ, ದೌರ್ಜನ್ಯ, ಹಿಂಸೆ ನಿಲ್ಲಬೇಕು. ಜೊತೆಗೆ ಮಕ್ಕಳನ್ನು ಬಿಕ್ಷಾಟನೆ, ದುಡಿಮೆಗೆ ದೂಡುವುದು ತಪ್ಪಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್ ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕಂದಾಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಾರ್ಮಿಕ, (ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ), ಪೊಲೀಸ್, ಸಮಾಜ ಕಲ್ಯಾಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ವತಿಯಿಂದ ‘ಮಾನವ ಕಳ್ಳ ಸಾಗಾಣಿಕೆ ತಡೆ’ ಕುರಿತು ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಂವಿಧಾನದಲ್ಲಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ವಿಶೇಷ ಸ್ಥಾನ ನೀಡಲಾಗಿದೆ. ಆ ನಿಟ್ಟಿನಲ್ಲಿ ಸರ್ಕಾರದ ಸೌಲಭ್ಯಗಳು ಮಹಿಳೆಯರು ಮತ್ತು ಮಕ್ಕಳಿಗೆ ತಲುಪಬೇಕು. ಮಹಿಳೆಯರು…

Read More

ಮಡಿಕೇರಿ ಜು.31 : 2023-24ನೇ ಸಾಲಿಗೆ ಕೊಡಗು ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಮೆಟ್ರಿಕ್ ನಂತರದ ಬಾಲಕ/ ಬಾಲಕಿಯರ ವಿದ್ಯಾರ್ಥಿ ನಿಲಯ ಮಡಿಕೇರಿ ಹಾಗೂ ಕುಶಾಲನಗರದ ವಿದ್ಯಾರ್ಥಿ ನಿಲಯಗಳಿಗೆ ಪಿಯುಸಿ ನಂತರ (ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್, ಬಿಎಸ್‍ಸಿ ನರ್ಸಿಂಗ್) ಕೋರ್ಸ್‍ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಪ್ರವೇಶಾತಿಗೆ ರಾಜ್ಯ ವಿದ್ಯಾರ್ಥಿ ನಿಲಯ https://shp.karnataka.gov.in ತಂತ್ರಾಂಶದ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್, 16 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ದೂ.ಸಂ.08272-225528/ 220214, ನಿಲಯ ಪಾಲಕರು 9742116601, 9972171266 ಹಾಗೂ ಇಲಾಖಾ ವೆಬ್‍ಸೈಟ್ https://dom.karnataka.gov.in ನಿಂದ ಅಲ್ಪಸಂಖ್ಯಾತರ ಎಲ್ಲಾ ಅರ್ಹ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಮತ್ತು ಇತರೆ ಸೌಲಭ್ಯಗಳ ಮಾಹಿತಿ ಪಡೆಯಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಎಂ.ದಿವಾಕರ ತಿಳಿಸಿದ್ದಾರೆ.

Read More

ಮಡಿಕೇರಿ ಜು.31  :  2021-22 ನೇ ಸಾಲಿನ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದಿಂದ ಸಫಾಯಿ ಕರ್ಮಚಾರಿ, ಮಾನ್ಯುಯಲ್ ಸ್ಕ್ಯಾವೆಂಜರ್ಸ್, ಪೌರಕಾರ್ಮಿಕರ ಮಕ್ಕಳಿಗೆ ಆನ್‍ಲೈನ್ ಪಾಠ ಕೇಳಲು ಹಾಗೂ ವಿದ್ಯಾಭ್ಯಾಸದ ಅನುಕೂಲಕ್ಕೆ ಟ್ಯಾಬ್ ನ್ನು ನಿಗಮದ ವತಿಯಿಂದ ಉಚಿತವಾಗಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಆದ್ದರಿಂದ ಸಫಾಯಿ ಕರ್ಮಚಾರಿ, ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್, ಪೌರ ಕಾರ್ಮಿಕರ 8, 9, ಮತ್ತು 10 ನೇ ತರಗತಿ, ಪ್ರಥಮ ಪಿಯುಸಿ ಮತ್ತು ಎರಡನೇ ಪಿಯುಸಿ ಓದುತ್ತಿರುವ ಮಕ್ಕಳಿಗೆ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸಲು ಇಚ್ಛಿಸುವ ಅರ್ಹ ಫಲಾಪೇಕ್ಷಿಗಳು ಒಂದು ವಾರದೊಳಗೆ ಜಾತಿ ಪತ್ರ, ಆದಾಯ ಪತ್ರ, ಪಡಿತರ ಚೀಟಿ, ಆಧಾರ್ ಕಾರ್ಡ್ ಪಡಿತರ ಚೀಟಿ, ಅಂಕಪಟ್ಟಿ, ಫೋಟೋ, ಸಫಾಯಿ ಕರ್ಮಚಾರಿ ಮ್ಯಾನುವಲ್ ಸ್ಕ್ಯಾವೆಂಜರ್ಸ್ ಪೌರ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ದೃಢೀಕರಣ ಪತ್ರ, ನಮೂನೆ-5 ನ್ನು ಸರ್ವೇಕ್ಷಣ ಅಧಿಕಾರಿಗಳಿಂದ ಭರ್ತಿ ಮಾಡಿ ದೃಢೀಕರಿಸಿ ನೀಡುವುದು. ಈ ದಾಖಲಾತಿಗಳ ಎರಡು ಪ್ರತಿಯನ್ನು ನಿಗಮದ ಜಿಲ್ಲಾ ಕಚೇರಿಗೆ ಸಲ್ಲಿಸುವಂತೆ…

Read More

ಮಡಿಕೇರಿ ಜು.31 : ಪ್ರಸಕ್ತ(2023-24) ಸಾಲಿನ ಪ್ರಧಾನಮಂತ್ರಿ ರಾಷ್ಟೀಯ ಬಾಲ ಪುರಸ್ಕಾರ ಪ್ರಶಸ್ತಿಗಾಗಿ ರಾಷ್ಟ್ರೀಯ ಪ್ರಶಸ್ತಿಗಳ ಪೋರ್ಟಲ್ https://awards.gov.in ನಲ್ಲಿ ಆನ್‍ಲೈನ್ ಅರ್ಜಿ ಸಲ್ಲಿಸಬಹುದಾಗಿದ್ದು, ಮಕ್ಕಳು ಶೌರ್ಯ, ಕ್ರೀಡೆ, ಸಮಾಜ ಸೇವೆ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಕಲೆ ಮತ್ತು ಸಾಂಸ್ಕೃತಿಕ ಮತ್ತು ನಾವಿನ್ಯತೆ ಕ್ಷೇತ್ರಗಳಲ್ಲಿ ಪ್ರತಿಭೆಯನ್ನು ತೋರಿರುವವರು ರಾಷ್ಟ್ರಮಟ್ಟದ ಪ್ರಶಸ್ತಿಗೆ ಮನ್ನಣೆ ಪಡೆದಿರುತ್ತಾರೆ. ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಮಕ್ಕಳು ಭಾರತದ ಪ್ರಜೆಯಾಗಿದ್ದು, ಭಾರತದಲ್ಲಿ ವಾಸವಾಗಿರಬೇಕು ಮತ್ತು ಅರ್ಜಿ/ ನಾಮನಿರ್ದೇಶನ ಸಲ್ಲಿಸುವ ಕೊನೆಯ ದಿನಾಂಕಕ್ಕೆ 18 ವರ್ಷ ಮೀರಿರಬಾರದು. ಯಾವುದೇ ಇತರ ವ್ಯಕ್ತಿಯು ಅರ್ಹ ಮಗುವನ್ನು ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಬಹುದು. ಪಿಎಂಆರ್‍ಬಿಪಿ ಅರ್ಜಿಗಳನ್ನು ಆನ್‍ಲೈನ್ ಪೋರ್ಟಲ್ (https://awards.gov.in) ನಲ್ಲಿ ಮಾತ್ರ ಸಲ್ಲಿಸಲು ಅವಕಾಶವಿದ್ದು, ಅರ್ಜಿ ಸಲ್ಲಿಸಲು ಆಗಸ್ಟ್, 31 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ನ್ಯಾಷನಲ್ ಅವಾರ್ಡ್ ಪೋರ್ಟಲ್‍ನ ವೆಬ್‍ಸೈಟ್ https://awards.gov.in ನ್ನು ವೀಕ್ಷಿಸಬಹುದು. ಹಾಗೂ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಡಿಕೇರಿ ಇವರ…

Read More

ಮಡಿಕೇರಿ ಜು.31 : ಜಿಲ್ಲಾಡಳಿತ, ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ವತಿಯಿಂದ ಆ.1 ರಂದು ಬೆಳಗ್ಗೆ 11 ಗಂಟೆಗೆ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಪ್ರಯುಕ್ತ ‘ವ್ಯಸನ ಮುಕ್ತ ದಿನಾಚರಣೆ’ಯು ನಗರದ ಜೂನಿಯರ್ ಕಾಲೇಜಿನಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶೇಖರ್, ಹಿರಿಯ ನಾಗರಿಕರ ಮತ್ತು ವಿಕಲಚೇತನರ ಕಲ್ಯಾಣಾಧಿಕಾರಿ ವಿಮಲ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ, ವೈದ್ಯಕೀಯ ಕಾಲೇಜಿನ ಮನೋವೈದ್ಯರಾದ ಡೆವಿನ್ ಕರ್ಕಡ ಇತರರು ಪಾಲ್ಗೊಳ್ಳಲಿದ್ದಾರೆ.

Read More

ಮಡಿಕೇರಿ ಜು.31 :  ಅಬ್ಬರದ ಮಳೆ… ನಡು ನಡುವೆ ಅಲ್ಪ ಬಿಸಿಲು… ಮೈ ತಾಕುತ್ತಿದ್ದ ತಂಗಾಳಿ… ಕುಗ್ಗದ ಉತ್ಸಾಹದಲ್ಲಿ ಆಡಿ ನಲಿದು ಸಂಭ್ರಮಿಸುತ್ತಾ, ಹಿಂದಿನ ಪರಂಪರೆಯ ಬಗ್ಗೆ ಇಂದಿನ ಪೀಳಿಗೆಗೆ ತಿಳುವಳಿಕೆ ಮೂಡಿಸುವಲ್ಲಿ ಗಾಳಿಬೀಡುವಿನಲ್ಲಿ ನಡೆದ ಬಂಟ ಸಮುದಾಯದವರ ‘ಆಟಿಡೊಂಜಿ ದಿನ ಕೆಸರ್ದ ಗೊಬ್ಬು’ ಕಾರ್ಯಕ್ರಮ ಯಶಸ್ವಿಯಾಯಿತು. ಗಾಳಿಬೀಡುವಿನ ಕೃಷಿಕ ಹೊರಮಲೆ ಶಿವಪ್ರಸಾದ್ ರೈ ಅವರ ಭತ್ತದ ಗದ್ದೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಯುವಕರು, ಮಹಿಳೆಯರು, ಮಕ್ಕಳು, ಹಿರಿಯರು ಎಲ್ಲರೂ ವಯಸ್ಸಿನ ಅಂತರದ ಅಂಜಿಕೆಯಿಲ್ಲದೆ ಆಡಿ ನಲಿದು ಸಂಭ್ರಮಿಸಿದರು. ಕೆಸರು ಗದ್ದೆಯಲ್ಲಿ ಮನರಂಜನೆಗಾಗಿ ಹ್ಯಾಂಡ್ ಬಾಲ್, ಹಗ್ಗ ಜಗ್ಗಾಟ, ಓಟ, ಮುಂತಾದ ಸ್ಪರ್ಧೆಗಳು ನಡೆದವು. ಆಕರ್ಷಕವಾಗಿ ವಿನ್ಯಾಸಗೊಂಡಿದ್ದ ಮುಖ್ಯ ವೇದಿಕೆ ‘ಹೊರಮಲೆ ಚಾವಡಿ’ಯಲ್ಲಿ ಸಾಂಪ್ರದಾಯಿಕ ಬದುಕಿನ ಚಿತ್ರಣವನ್ನು ತಿಳಿಸುವ ಪ್ರಯತ್ನವಾಯಿತು. ಇಂಥದ್ದೊಂದು ಅಪರೂಪದ ಕಾರ್ಯಕ್ರಮಕ್ಕೆ ವೇದಿಕೆ ಒದಗಿಸಿದ್ದು ಕೊಡಗು ಜಿಲ್ಲಾ ಯುವ ಬಂಟ್ಸ್ ಅಸೋಸಿಯೇಷನ್. ಕೊಡಗು ಜಿಲ್ಲಾ ಬಂಟರ ಸಂಘ, ಮಡಿಕೇರಿ ನಗರ ಬಂಟರ ಮಹಿಳಾ ಘಟಕ, ಗಾಳಿಬೀಡು…

Read More

ಮಡಿಕೇರಿ ಜು.31 : ಕಳೆದ 30 ವರ್ಷಗಳಿಂದ ಮಡಿಕೇರಿ ಆಕಾಶವಾಣಿಯ ಉದ್ಘೋಷಕಿಯಾಗಿ ಕಾರ್ಯನಿರ್ವಹಿಸಿ ಕೇಳುಗರ ಮೆಚ್ಚುಗೆಗೆ ಪಾತ್ರರಾಗಿದ್ದ ಮತ್ತು ತಮ್ಮದೇ ಆದ ಅಭಿಮಾನಿ ವೃಂದವನ್ನು ಹೊಂದಿದ್ದ ಕೂಪದಿರ ಶಾರದ ನಂಜಪ್ಪ ಅವರನ್ನು ಮುಕ್ಕೋಡ್ಲುವಿನ ವ್ಯಾಲಿ ಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಸಂಘಟನೆ ವಿಭಿನ್ನ ಹಾಗೂ ಸಂಭ್ರಮದಿಂದ ಬೀಳ್ಕೊಟ್ಟಿತು. ಅಸೋಸಿಯೇಷನ್ ಅಧ್ಯಕ್ಷ ಹಂಚೆಟ್ಟಿರ ಮನುಮುದ್ದಪ್ಪ ಹಾಗೂ ಸಂಗಡಿಗರು ಕೊಡವ ಸಾಂಪ್ರದಾಯಿಕ ಉಡುಗೆ ತೊಟ್ಟು, ದುಡಿಕೊಟ್ಟು ಹಾಡಿನೊಂದಿಗೆ ಆಕಾಶವಾಣಿ ನಿಲಯದ ದ್ವಾರದವರೆಗೆ ಮೆರವಣಿಗೆ ಮೂಲಕ ಶಾರದ ನಂಜಪ್ಪ ಅವರನ್ನು ಕರೆತಂದು ಬೀಳ್ಕೊಟ್ಟರು. ಈ ಸಂದರ್ಭ ಮಾತನಾಡಿದ ಶಾರದ ನಂಜಪ್ಪ, ಕಳೆದ 30 ವರ್ಷಗಳಿಂದ ಸಂಸ್ಕೃತಿ, ಆಚಾರ, ವಿಚಾರ, ಪದ್ಧತಿ, ಪರಂಪರೆ ಸೇರಿದಂತೆ ವಿವಿಧ ವಿಭಿನ್ನ ಕಾರ್ಯಕ್ರಮಗಳನ್ನು ನಿರೂಪಿಸಿರುವುದು ತೃಪ್ತಿ ತಂದಿದೆ. ಎಲ್ಲಾ ವರ್ಗದ ಜನ ಹಾಗೂ ಆಕಾಶವಾಣಿಯ ಸಿಬ್ಬಂದಿಗಳು ನನ್ನನ್ನು ಅಭಿಮಾನದಿಂದ ಕಾಣುತ್ತಿರುವುದನ್ನು ಕಂಡು ಹೃದಯ ತುಂಬಿ ಬಂದಿದೆ. ಈ ರೀತಿಯ ಬೀಳ್ಕೊಡುಗೆಯ ಕ್ಷಣ ಸಂತಸ ತಂದಿದ್ದು, ಅಭಿಮಾನ ತೋರಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುವುದಾಗಿ…

Read More

ಮಡಿಕೇರಿ ಜು.31 :  ಕೊಡಗು ಜಿಲ್ಲಾ ಕುಲಾಲ ಕುಂಬಾರ ಯುವ ಘಟಕದ ನೂತನ  ಸಮಿತಿಯನ್ನು  ರಚಿಸಲಾಯಿತು. ನಗರದ ವ್ಯಾಂಡಮ್ ಎಂಟರ್‌ಪ್ರೈಸಸ್ ಸಂಸ್ಥೆಯ ಸಭಾಂಗಣದಲ್ಲಿ  ಸರ್ವಾನುಮತದಿಂದ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.   ಅಧ್ಯಕ್ಷರಾಗಿ  ಚಂದ್ರಶೇಖರ್ ಕುಲಾಲ್ , ಗೌರವ ಸಲಹೆಗಾರರಾಗಿ  ಶ್ರೀ ಕುಶಾಲಪ್ಪ, ಲಯನ್  ದಾಮೋದರ,  ನಾರಾಯಣ ಮೂಲ್ಯ,  ಉಪಾಧ್ಯಕ್ಷರಾಗಿ ಅಶ್ವಥ್,  ಜಯಪ್ರಕಾಶ್,  ಪ್ರಧಾನಕಾರ್ಯದರ್ಶಿಯಾಗಿ  ಪವನ್ ಕುಲಾಲ್, ಸಹ ಕಾರ್ಯದರ್ಶಿಯಾಗಿ  ಅರುಣ್ ಕುಲಾಲ್ ,  ಉದಯ್ ಕುಲಾಲ್ ಆಯ್ಕೆಯಾದರು. ಖಜಾಂಚಿಯಾಗಿ  ಸುರೇಶ್, ಕ್ರೀಡಾ ಕಾರ್ಯದರ್ಶಿಯಾಗಿ  ಹರೀಶ್, ಲೋಕೇಶ್,  ಕ್ರೀಡಾ ಸಹ ಕಾರ್ಯದರ್ಶಿ ಗಳಾಗಿ  ಮಂಜುನಾಥ, ದಯಾನಂದ್,  ಶೃತಿಕಾ,  ಕೌಶಿಕ್ ,  ಶರಣು,  ರಂಜನ್ ಕುಲಾಲ್ ಪುರುಷೋತ್ತಮ್, ಸಂಘಟನಾ ಕಾರ್ಯದರ್ಶಿ ಗಳಾಗಿ ಗಿರೀಶ್ ಕುಲಾಲ್ , ದಿನೇಶ್ ಕುಲಾಲ್,  ಅಪ್ಪಾಜಿ, ಅರುಣ್ ಕುಲಾಲ್ ,  ರಾಮಚಂದ್ರ,  ಭರತ್ ,  ಸಂಘಟನಾ ಸಹ ಕಾರ್ಯದರ್ಶಿಗಳಾಗಿ ಪ್ರಮೋದ್ ಕುಲಾಲ್, ನಾಗೇಶ್ ಕುಲಾಲ್ ಮಕಂದೂರು, ಯತೀಶ್, ಸತೀಶ್ ಕುಲಾಲ್,  ಶರಣ್ ನೇಮಕಗೊಂಡರು. ನಿರ್ದೇಶಕರುಗಳಾಗಿ ವಿನು, ಮಂಜುನಾಥ್, ಅಶೋಕ್ , ಕೆ.ವೈ. ಲಕ್ಷ್ಮಣ್, ರಾಜಮಣಿ,…

Read More