ಕುಶಾಲನಗರ ಸೆ.27 : ಕುಶಾಲನಗರದ “ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ” ನೃತ್ಯ ತರಬೇತಿ ಕೇಂದ್ರದ ಸಂಯೋಜಕ ಅಕ್ತರ್ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ದೆಹಲಿಯ ವೋಲ್ಡ್ ವೈಡ್ ಇವೆಂಟ್ ವತಿಯಿಂದ ದೆಹಲಿಯಲ್ಲಿ ನಡೆದ “ಇಂಟರ್ ನ್ಯಾಶನಲ್ ಬುಕ್ ಆಫ್ ರೆಕಾರ್ಡ್” ಕಾರ್ಯಕ್ರಮದಲ್ಲಿ ಕುಶಾಲನಗರದ ನೃತ್ಯ ಸಂಯೋಜಕ ಅಕ್ತರ್ ಗೆ ಪ್ರಶಸ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಅಧಿಕ ನೃತ್ಯ ಪಟುಗಳು ಭಾಗವಹಿಸಿದ್ದು, ಅತ್ಯತ್ತಮ ಸಾಧನೆಗೈದ ನೃತ್ಯ ಪಟುಗಳು ಪ್ರಶಸ್ತಿ ಸ್ವೀಕರಿಸಿದ್ದಾರೆ. ನೃತ್ಯ ಸಂಯೋಜಕ ಅಕ್ತರ್ ಕಳೆದ ಮೂರು ವರ್ಷಗಳಿಂದ 1000 ಕ್ಕೂ ಅಧಿಕ ಮಕ್ಕಳಿಗೆ ನೃತ್ಯ ತರಬೇತಿಯನ್ನು ನೀಡಿದ್ದು, ಹಲವು ಮಕ್ಕಳು ಜಿಲ್ಲೆ ಹಾಗೂ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಗುರುತಿಸಿಕೊಂಡಿದ್ದಾರೆ. ಇವರ ಈ ಸಾಧನೆಗೆ ಅಕ್ತರ್ ಅವರ ಕುಟುಂಬಸ್ಥರು, ಸ್ವೇಹಿತರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲೇಖಕ: admin
ಮಡಿಕೇರಿ ಸೆ.27 : ವಿರಾಜಪೇಟೆಯಲ್ಲಿ ನಡೆದ ಕಾರ್ಯಕ್ರಮವೊಂದರ ವೇದಿಕೆಯಲ್ಲೇ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಸಂಸದ ಪ್ರತಾಪ್ ಸಿಂಹ ಅವರು ತಿರುಗೇಟು ನೀಡಿರುವ ಕಾರಣಕ್ಕೆ ರಾಜಕೀಯ ಜಿದ್ದು ಸಾಧಿಸುತ್ತಿರುವ ವಲಸೆ ರಾಜಕಾರಿಣಿ, ಕಾಂಗ್ರೆಸ್ ವಕ್ತಾರ ಸಂಕೇತ್ ಪೂವಯ್ಯ ಅವರು ಹತಾಶರಾಗಿ ಸಂಸದರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ಭಾರತೀಯ ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ಕ್ಷೇತ್ರದ ಪ್ರಜ್ಞಾವಂತ ಮತದಾರರು ಎರಡು ಬಾರಿ ಪ್ರಚಂಡ ಬಹುಮತದೊಂದಿಗೆ ಪ್ರತಾಪ್ ಸಿಂಹ ಅವರನ್ನು ಸಂಸದರನ್ನಾಗಿ ಚುನಾಯಿಸಿ ಕಳುಹಿಸಿರುವುದೇ ಸಂಸದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ತಮ್ಮ ಕ್ಷೇತ್ರದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿರುವ ಸಂಸದರು, ಕ್ಷೇತ್ರದ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ. ಸಂಸದರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ಸಂಕೇತ್ ಪೂವಯ್ಯ ಅವರು ಪರಿಶೀಲಿಸಿ ಎಷ್ಟು ಕೋಟಿ ಅನುದಾನ ತಂದಿದ್ದಾರೆ ಎಂಬ ಬಗ್ಗೆ ವಾಸ್ತವ ಅರಿತು ನಂತರ ಆರೋಪ ಮಾಡಲಿ. ಕಾಂಗ್ರೆಸಿಗರು ತಮ್ಮ ರಾಜಕೀಯ ಕಾರಣಕ್ಕಾಗಿ ಸಂಸದರ ಮೇಲೆ…
ಸಿದ್ದಾಪುರ ಸೆ.27 : ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರದೊಂದಿಗೆ ಪ್ರತಿಷ್ಠಾಪನೆ ಗೊಂಡಿರುವ ಶ್ರೀ ಗೌರಿ ಗಣೇಶ ಮೂರ್ತಿ ವಿಶೇಷ ಆಕರ್ಷಣೆಯಾಗಿದೆ. ಅಂಬೇಡ್ಕರ್ ನಗರದ ಶ್ರೀ ಸಿದ್ಧಿವಿನಾಯಕ ಮಿತ್ರಮಂಡಳಿಯ 14ನೇ ವರ್ಷದ ಗೌರಿ ಗಣೇಶ ಮೂರ್ತಿ ಯ ಪಕ್ಕದಲ್ಲೆ ಅಂಬೇಡ್ಕರ್ ಭಾವ ಚಿತ್ರವನ್ನಿಟ್ಟು ಗಣಪನೊಂದಿ ಸಂವಿಧಾನ ಶಿಲ್ಪಿಗು ನಿತ್ಯ ಪೂಜೆ ಸಲ್ಲಿಸಲಾಗುತ್ತಿದೆ. ಕಳೆದ ಬಾರಿ ಅಂಬೇಡ್ಕರ್ ಭಾವ ಚಿತ್ರದ ಬೆಂಗಾವಲು ವಾಹನ ಹಾಗೂ ಜೈ ..ಭೀಮ್ , ಜೈ..ಜೈ ಭೀಮ್ ಘೋಷಣೆಯೊಂದಿಗೆ ಶೋಭಾಯಾತ್ರೆ ನಡೆಸಿ ರಾಜ್ಯದ ಗಮನ ಸೆಳೆಯುವಲ್ಲಿ ಇಲ್ಲಿನ ಯುವಕರು ಯಶಸ್ವಿಯಾಗಿದ್ದು, ಈ ಬಾರಿ ಅಂಬೇಡ್ಕರ್ ಗೆ ನಿತ್ಯ ಪೂಜೆ ಯೊಂದಿಗೆ ವಿಭಿನ್ನ ರೀತಿಯಲ್ಲಿ ಶೋಭಾಯಾತ್ರೆಗೆ ತಯಾರಿ ನಡೆಸಲಾಗುತಿದೆ ಎಂದು ಸಂಘದ ಪ್ರಮುಖ ಹೆಚ್.ಆರ್ ರವಿ ಮಾಹಿತಿ ನೀಡಿದರು. ಇಲ್ಲಿನ ಗೌರಿ ಗಣೇಶ ಹಬ್ಬಕ್ಕೆ ಸರ್ವ ಧರ್ಮಿಯರು ಪಾಲ್ಗೊಂಡು ಸೌಹಾರ್ದತೆಯಲ್ಲಿ ನಡೆಯುತ್ತಿದ್ದು, ಪ್ರತಿಯೊಬ್ಬರು ಸಹಕರಿಸುವಂತೆ ವಿನಂತಿಸಿದರು.
ಮಡಿಕೇರಿ ಸೆ.27 : ಹಳೇ ಖಾಸಗಿ ಬಸ್ ನಿಲ್ದಾಣದ ಬಳಿ ನಿರ್ಮಿಸಿದ್ದ ಧ್ವಜಸ್ತಂಭವನ್ನು ನಗರಸಭೆ ತೆರವುಗೊಳಿಸಲು ಮುಂದಾಗಿರುವುದು ಖಂಡನೀಯ ಎಂದು ಕೊಡಗು ಜಿಲ್ಲಾ ಬಸ್ ಕಾರ್ಮಿಕ ಸಂಘ ಅಸಮಾಧಾನ ವ್ಯಕ್ತಪಡಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪಿ.ಬಿ.ಭರತ್ ಕುಮಾರ್, ರಾಷ್ಟ್ರೀಯ ಹಬ್ಬದ ಸಂದರ್ಭ ಬಾವುಟ ಹಾರಿಸುವ ಸಲುವಾಗಿ ಹಳೇ ಖಾಸಗಿ ಬಸ್ ನಿಲ್ದಾಣದ ಬಳಿ ಸಂಘದ ವತಿಯಿಂದ ಧ್ವಜಸ್ತಂಭವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಸ್ಥಾಯಿ ಸಮಿತಿ ಸಭೆಯ ನಿರ್ಧಾರದಂತೆ ನಗರಸಭೆ ವತಿಯಿಂದ ಏಕಾಏಕಿ ಧ್ವಜಸ್ತಂಭವನ್ನು ತೆರವುಗೊಳಿಸಲು ಮುಂದಾಗಿರುವುದು ಬಸ್ ಕಾರ್ಮಿಕರಿಗೆ ನೋವು ಉಂಟುಮಾಡಿದೆ ಎಂದರು. ಧ್ವಜಸ್ತಂಭವನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿರ್ಮಾಣ ಮಾಡಲಾಗಿದ್ದು, ಯಾವುದೋ ಹುನ್ನಾರದಿಂದ ತೆರವುಗೊಳಿಸಲು ನಗರಸಭೆ ಮುಂದಾಗಿದೆ ಎಂದು ಆರೋಪಿಸಿದ ಅವರು, ಮುಂದೇ ಈ ರೀತಿಯ ಘಟನೆ ಮರುಕಳಿಸಿದ್ದಲ್ಲಿ ನಗರಸಭೆಗೆ ಮುತ್ತಿಗೆ ಹಾಕಲಾಗುವುದೆಂದು ಎಚ್ಚರಿಕೆ ನೀಡಿದರು. ಹಳೇಯ ಖಾಸಗಿ ಬಸ್ ನಿಲ್ದಾಣದ ಸಮೀಪ ಸಾರ್ವಜನಿಕರು ಹಾಗೂ ಬಸ್ ಕಾರ್ಮಿಕರ ಉಪಯೋಗಕ್ಕಾಗಿ ಮುಳಿಯ ಜುವೆಲ್ಸ್ ನಿಂದ ಬಸ್ ನಿಲ್ದಾಣ ಹಾಗೂ…
ಮಡಿಕೇರಿ ಸೆ.27 : ವಿಶ್ವಕರ್ಮ ಕುಲಶಾಸ್ತ್ರ ಅಧ್ಯಯನ ನಡೆಸಲು ಸೆ.30 ರಂದು ವಿಶ್ವಕರ್ಮ ಕುಲಶಾಸ್ತ್ರ ಅಧ್ಯಯನ ತಂಡ ಮಡಿಕೇರಿಗೆ ಭೇಟಿ ನೀಡಲಿದ್ದು, ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಗ್ರ ಮಾಹಿತಿಯನ್ನು ನೀಡುವಂತೆ ಕೊಡಗು ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಕಾರ್ಯದರ್ಶಿ ಬಿ.ಬಿ.ನಾಗರಾಜು ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಕರ್ಮ ಕುಲಶಾಸ್ತ್ರ ಅಧ್ಯಯನ ನಡೆಸಲು ಸರ್ಕಾರ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೂಚಿಸಿದ್ದು, ಡಾ.ನಂಜುಂಡ, ಡಾ.ಮಹದೇವ ಹಾಗೂ ಡಾ.ಕೃಷ್ಣಮೂರ್ತಿ ನೇತೃತ್ವದ ತಂಡ ಈ ಕಾರ್ಯ ನಡೆಸಲಿದೆ ಎಂದರು. ಸೆ.30 ರಂದು ತಂಡ ಮಡಿಕೇರಿಗೆ ಭೇಟಿ ನೀಡಲಿದ್ದು, ನಗರದ ಚೈನ್‍ಗೇಟ್ ಬಳಿ ಇರುವ ವಿಶ್ವಕರ್ಮ ಭವನದಲ್ಲಿ ಬೆಳಗ್ಗೆ 10.30 ಗಂಟೆಗೆ ಕೊಡಗಿನ ಎಲ್ಲಾ ವಿಶ್ವಕರ್ಮರ ಸಭೆ ಕರೆಯಲಾಗಿದೆ. ಆದ್ದರಿಂದ 2ಎ ಅಡಿಯಲ್ಲಿ ಕೊಡಗಿನಲ್ಲಿ ವಾಸವಾಗಿರುವ ಎಲ್ಲಾ ಊರಿನ ಮುಖಂಡರು, ಶ್ರೀ ಕಾಳಿಕಾಂಬ ದೇವಾಲಯದ ಅಧ್ಯಕ್ಷರು, ಎಲ್ಲಾ ಸಂಘ ಸಂಸ್ಥೆಗಳ ಮುಖಂಡರು ಹಾಜರಿರಬೇಕು. ಕಸುಬು, ಆಚಾರ, ವಿಚಾರ, ನಡೆನುಡಿ ಭಾಷೆ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಸರಕಾರಿ…
ಮಡಿಕೇರಿ ಸೆ.27 : ಹಿಂದಿನ ಬಿಜೆಪಿ ಸರ್ಕಾರ ಘೋಷಿಸಿದ್ದ ‘ಕೊಡವ ಅಭಿವೃದ್ಧಿ ನಿಗಮ’ ಕೇವಲ ಒಂದು ಚುನಾವಣಾ ಗಿಮಿಕ್ ಆಗಿತ್ತಷ್ಟೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸಂಸದ ಪ್ರತಾಪ ಸಿಂಹ, ಅವರು ಹಿಂದಿನ ಬಿಜೆಪಿ ಸರ್ಕಾರ ವಿಧಾನಸಭಾ ಚುನಾವಣಾ ಹಂತದಲ್ಲಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪಿಸಿ, 10 ಕೋಟಿ ರೂ. ಅದಕ್ಕಾಗಿ ಮೀಸಲಿಟ್ಟಿದೆಯೆಂದು ತಿಳಿಸಿತ್ತು. ಆದರೆ, ಆದೇಶ ಪತ್ರದಲ್ಲಿ ಅಂತಹ ಯಾವುದೇ ಪ್ರಸ್ತಾಪವಿಲ್ಲವೆಂದು ತಿಳಿಸಿದರು. ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆಯ ಸರ್ಕಾರದ ಆದೇಶ ಪತ್ರದಲ್ಲಿ ಅದಕ್ಕಾಗಿ ಯಾವ ಲೆಕ್ಕ ಶೀರ್ಷಿಕೆಯಲ್ಲಿ ಹಣ ಮೀಸಲಿಡಲಾಗಿದೆ, ನಿಗಮದಿಂದ ನಡೆಯಬೇಕಾದ ಕಾರ್ಯಗಳು, ಕಛೇರಿ ಸಿಬ್ಬಂದಿಗಳು ಇತ್ಯಾದಿ ಅಂಶಗಳ ಬಗ್ಗೆ ಸ್ಪಷ್ಟ ಮಾಹಿತಿಗಳು ನಮೂದಾಗಿರಬೇಕು. ಆದರೆ, ಹಿಂದಿನ ಸರ್ಕಾರ ಹೊರಡಿಸಿದ ಆದೇಶ ಪತ್ರದಲ್ಲಿ ಅಂತಹ ಯಾವುದೇ ಮಾಹಿತಿಗಳಿಲ್ಲವೆಂದು ಆದೇಶ ಪತ್ರವನ್ನು ಪ್ರದರ್ಶಿಸಿದರು. 2020ನೇ ಸಾಲಿನಲ್ಲಿ ಸರ್ಕಾರ ರಚಿಸಿದ ಮರಾಠ ಅಭಿವೃದ್ಧಿ ನಿಗಮದ…
ಮಡಿಕೇರಿ ಸೆ.23 : ಕೊಡಗು ಜಿಲ್ಲಾ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟದ ವತಿಯಿಂದ ಸೆ.30 ಕುಶಾಲನಗರದಲ್ಲಿ ಜಿಲ್ಲಾ ಸಮಾವೇಶ ನಡೆಯಲಿದೆ ಎಂದು ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಟ್ರಂಗಡ ತಿಮ್ಮಯ್ಯ ತಿಳಿಸಿದರು. ನಗರದಲ್ಲಿ ಸದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10.30 ಗಂಟೆಗೆ ರೈತ ಸಹಕಾರ ಭವನದಲ್ಲಿ ಅನುದಾನ ರಹಿತ ಶಾಲೆಗಳ ಶಿಕ್ಷಕರ ಕೊಡುಗೆ ಮತ್ತು ಶಾಲೆಗಳ ಸಮಸ್ಯೆಗಳ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಸಮಾವೇಶಕ್ಕೆ ಜಿಲ್ಲೆಯ ಅನುದಾನ ರಹಿತ ಶಾಲೆಯ ಎಲ್ಲಾ ಶಿಕ್ಷಕರು ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಒಕ್ಕೂಟದ ಅಧ್ಯಕ್ಷ ಕೋಳೇರ ಝರುಗಣಪತಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾವೇಶದಲ್ಲಿ ಸಂಸದ ಪ್ರತಾಪ್‍ಸಿಂಹ, ಶಾಸಕರಾದ ಎ.ಎಸ್. ಪೊನ್ನಣ್ಣ, ಮಂತರ್‍ಗೌಡ, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾಕುಶಾಲಪ್ಪ, ಎಸ್.ಎಲ್.ಬೋಜೆಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕರಾದ ಎ.ಸೌಮ್ಯ ಪೊನ್ನಪ್ಪ, ಹಾಗೂ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರಮುಖರಾದ ಡಾ.ಸಿ.ಜಿ.ಕುಶಾಲಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ 120 ಅನುದಾನ…
ಮಡಿಕೇರಿ ಸೆ.27 : ಸಿವಿಲ್ ಡೆಫೆನ್ಸ್‍ನಲ್ಲಿ ಡಿವಿಶನ್ ವಾರ್ಡನ್ ಆಗಿ ಸೇವೆಯಲ್ಲಿರುವ ಜಿಲ್ಲೆಯ ಡಾ.ಕುಟ್ಟಂಡ ಸುನಿತಾ ಸಜನ್ ಅವರು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. 2022ನೇ ಸಾಲಿನಲ್ಲಿನ ಉತ್ತಮ ಸೇವೆಗಾಗಿ ಪದಕ ಲಭಿಸಿದ್ದು, ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯದ ಗೃಹ ಸಚಿವ ಪರಮೇಶ್ವರ್ ಪದಕ ಪ್ರದಾನ ಮಾಡಿದರು. ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಜಿಲ್ಲೆಯ ಅಮ್ಮತ್ತಿ ಕಾರ್ಮಾಡುವಿನ ಕುಟ್ಟಂಡ ಸಜನ್ (ತಮನೆ ಐತಿಚಂಡ, ಕರಡ) ಅವರ ಪತ್ನಿ.
ಮಡಿಕೇರಿ ಸೆ.27 : ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ವತಿಯಿಂದ 19 ವರ್ಷದೊಳಗಿನವರ ಮಹಿಳಾ ಏಕದಿನ ಕ್ರಿಕೆಟ್ ಪಂದ್ಯಾವಳಿಯ ಕರ್ನಾಟಕ ರಾಜ್ಯ ತಂಡಕ್ಕೆ ಜಿಲ್ಲೆಯ ಬಾಲಕಿ ಶ್ರೀನಿತಿ ಪಿ.ರೈ ಆಯ್ಕೆಯಾಗಿದ್ದಾಳೆ. ಬೆಂಗಳೂರಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಎಡಗೈ ಸ್ಪಿನ್ನರ್ ಆಗಿರುವ ಶ್ರೀನಿತಿ ಆಯ್ಕೆಯಾಗಿದ್ದಾಳೆ. ಮುಂಬರುವ ಅಕ್ಟೋಬರ್ 8 ರಿಂದ 16ರ ವರೆಗೆ ಗುಹವಾಟಿಯಲ್ಲಿ ಪಂದ್ಯಾವಳಿ ನಡೆಯಲಿದ್ದು, ನಿಕಿ ಪ್ರಸಾದ್ ನಾಯಕಿಯಾಗಿರುವ ಕರ್ನಾಟಕ ತಂಡದಲ್ಲಿ ಶ್ರೀನಿತಿ ಸ್ಥಾನ ಪಡೆದಿದ್ದಾಳೆ. ಬೆಂಗಳೂರಿನ ಅಕ್ಷಯನಗರದಲ್ಲಿರುವ ಸೆಂಟ್ ಆ್ಯನ್ಸ್ ಐಸಿಎಸ್‍ಸಿ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿರುವ ಶ್ರೀನಿತಿ ಜಿಲ್ಲೆಯ ಮಡಿಕೇರಿ ತಾಲೂಕಿನ ಮಕ್ಕಂದೂರುವಿನ ಹೆಮ್ಮೆತ್ತಾಳು ಗ್ರಾಮ ನಿವಾಸಿ ಬಿ.ಜಿ.ಪ್ರಕಾಶ್ ರೈ ಹಾಗೂ ವಿನುತಾ ರೈ ದಂಪತಿ ಪುತ್ರಿ.
ಮಡಿಕೇರಿ ಸೆ.27 : ಅಪಘಾತದಿಂದ ಹಾನಿಗೊಳಗಾದ ವೀರಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯ ದುರಸ್ತಿ ಕಾರ್ಯವನ್ನು ಮಡಿಕೇರಿ ಕೊಡವ ಸಮಾಜದ ಪದಾಧಿಕಾರಿಗಳು ಪರಿಶೀಲಿಸಿದರು. ಸಮಾಜದ ಅಧ್ಯಕ್ಷ ಮಂಡುವಂಡ ಮುತ್ತಪ್ಪ, ನಿರ್ದೇಶಕರಾದ ಕೇಕಡ ವಿಜುದೇವಯ್ಯ, ನಂದಿನೆರವಂಡ ರವಿಬಸಪ್ಪ, ಮಂಡಿರ ಸದಾ ಮುದ್ದಪ್ಪ, ಕಾಳಚಂಡ ಅಪ್ಪಣ್ಣ, ಮೂವೆರ ಜಯರಾಂ ಹಾಗೂ ಚೊಟ್ಟೆಯಂಡ ಸಂಜು ಕಾವೇರಪ್ಪ ಮೈಸೂರಿಗೆ ತೆರಳಿ ಪ್ರತಿಮೆ ಪರಿಶೀಲಿಸಿದರು. ಪ್ರತಿಮೆಯ ದುರಸ್ತಿ ಕಾರ್ಯ ಅಂತಿಮ ಹಂತದಲ್ಲಿದ್ದು, ಪ್ರತಿಮೆಯನ್ನು ಪುನರ್ ಪ್ರತಿಷ್ಠಾಪಿಸುವ ಸಂದರ್ಭ ಗೌರವಯುತವಾಗಿ ಮೆರವಣಿಗೆ ನಡೆಸುವ ಕುರಿತು ಮಡಿಕೇರಿ ಕೊಡವ ಸಮಾಜ, ಜಿಲ್ಲಾಡಳಿತ, ನಗರಸಭೆ, ಶಾಸಕರು ಹಾಗೂ ವಿವಿಧ ಸಂಘ ಸಂಸ್ಥೆಗಳೊಂದಿಗೆ ಚರ್ಚಿಸಲಾಗುವುದು ಎಂದು ಮುತ್ತಪ್ಪ ಹೇಳಿದರು.






