ಮಡಿಕೇರಿ ಮೇ 15 NEWS DESK : ಕೊಡಗು ಜಿಲ್ಲಾ ಕುಲಾಲ(ಕುಂಬಾರ)ರ ಸಂಘದ ನೇತೃತ್ವದಲ್ಲಿ ಕ್ರೀಡೋತ್ಸವ ಪ್ರಯುಕ್ತ ಸಮ್ಮಿಲನ-2026 ಕಾರ್ಯಕ್ರಮ ಮೇ 16 ಮತ್ತು 17 ರಂದು ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ಕೆ.ದಾಮೋದರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕ್ರೀಡೋತ್ಸವದಲ್ಲಿ ಜಿಲ್ಲಾ ವ್ಯಾಪ್ತಿಯ 5ಸಾವಿರಕ್ಕೂ ಹೆಚ್ಚಿನ ಕುಲಬಾಂಧವರು ಭಾಗವಹಿಸುವ ನಿರೀಕ್ಷೆ ಇದೆ. ಇದು ಕೇವಲ ಒಂದು ಕ್ರೋಡೋತ್ಸವದ ಸಮ್ಮಿಲನ ಮಾತ್ರವಲ್ಲ. ಬದಲಿಗೆ ನಮ್ಮ ಸಮಾಜದ ಸ್ವಾಭಿಮಾನದ ಸಂಕೇತ. ನಮ್ಮ ಸಂಘಟನೆಯ ಈ ಹೆಜ್ಜೆಯು ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಲಿದೆ ಎಂದು ಹೇಳಿದರು. ಕ್ರೀಡಾಧ್ಯಕ್ಷ ಶಾಂತಕುಮಾರ್ ಮಾತನಾಡಿ, ಮೇ 16 ರಂದು ಬೆಳಿಗ್ಗೆ 7ಗಂಟೆಗೆ ಓಂಕಾರೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿ ಕ್ರೀಡಾ ಜ್ಯೋತಿ ತಂದು ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಗುವುದು. ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತ ತಂಡಕ್ಕೆ 20ಸಾವಿರ ರೂ., ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 10 ಸಾವಿರ ರೂ. ನಗದು ಹಾಗೂ…
ಲೇಖಕ: admin
ಮಡಿಕೇರಿ ಮೇ 3 NEWS DESK : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಕುಟುಂಬಗಳಿಗೆ ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತವಾಗಿರುವ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿಗೆ ಇಂದು ವಿಧ್ಯುಕ್ತ ಚಾಲನೆ ನೀಡಲಾಯಿತು. ಹಾಸನದ ಅಬಕಾರಿ ಇಲಾಖೆ ಉಪ ಆಯುಕ್ತರಾದ ನಂಗಾರು ಸುಮಿತ್ರ ನಿಂಗರಾಜು ಅವರು ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಪಂದ್ಯಾವಳಿಗೆ ಉತ್ತಮ ಸ್ಪಂದನೆ ದೊರಕಿರುವುದು ಸಂತೋಷದ ವಿಚಾರ. ಎಲ್ಲ ಕುಟುಂಬಗಳನ್ನು ಬೆಸೆಯಲು ಈ ಕ್ರೀಡಾಕೂಟ ಸಹಕಾರಿಯಾಗಲಿದೆ. ಯಾವುದೇ ವಯಸ್ಸಿನ ಮಿತಿ ಇಲ್ಲದೆ ಹಿರಿಯರು ಕಿರಿಯರು ಎನ್ನುವ ಭೇದ ಭಾವವಿಲ್ಲದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು, ಪಂದ್ಯಾವಳಿ ಯಶಸ್ಸನ್ನು ಕಾಣಲೆಂದು ಹಾರೈಸಿದರು. ಇದೇ ಸಂದರ್ಭ ಕೊಡಗು ಗೌಡ ಯುವ ವೇದಿಕೆ ಆಡಳಿತ ಮಂಡಳಿ ಹಾಗೂ ಕೊಡಗು ಕಾರ್ಯನಿರತ ಪತ್ರಕರ್ತರ ಸಂಘದ ನಡುವೆ ಉದ್ಘಾಟನಾ ಪಂದ್ಯ ನಡೆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕಾರ್ಯನಿರತ ಪತ್ರಕರ್ತರ ಸಂಘ ಐದು ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕೆ…
ಮಡಿಕೇರಿ ಮೇ 3 NEWS DESK : ಸುಸಂಸ್ಕೃತ ಸಮಾಜ ನಿರ್ಮಾಣದಕ್ಕೆ ಬಂಟ ಸಮಾಜದ ಕೊಡುಗೆ ದೊಡ್ಡದಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಗುರುದೇವಾನಂದ ಸ್ವಾಮೀಜಿ ಬಣ್ಣಿಸಿದರು. ಕೊಡಗು ಜಿಲ್ಲಾ ಬಂಟರ ಭವನ ಟ್ರಸ್ಟ್ ಹಾಗೂ ಜಿಲ್ಲಾ ಬಂಟರ ಸಂಘದ ವತಿಯಿಂದ ಮಡಿಕೇರಿಯಲ್ಲಿ ಜರುಗಿದ ಬಂಟರ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಇಂದಿನ ಸಮಾಜಕ್ಕೆ ಸುಸಂಸ್ಕೃತ ಪ್ರಜೆಗಳ ಅಗತ್ಯವಿದೆ. ಮಕ್ಕಳಿಗೆ ಸಂಸ್ಕಾರ ಕಲಿಸುವ ಕಾರ್ಯವನ್ನು ಮನೆಯಿಂದಲೇ ಆರಂಭಿಸಬೇಕು. ಈ ವಿಚಾರದಲ್ಲಿ ಮಾತೆಯರಿಗೆ ಮಹತ್ತರ ಜವಾಬ್ದಾರಿ ಇದೆ ಎಂದರು. ನಾಡಿನ ವಿವಿಧೆಡೆ ಬಂಟರ ಭವನ ಇದೆ. ಆದರೆ ಕೊಡಗು ಜಿಲ್ಲೆಯಲ್ಲಿ ಸುಸಜ್ಜಿತವಾದ ಭವನ ಈವರೆಗೆ ಇರಲಿಲ್ಲ. ಉದ್ದೇಶಿತ ಯೋಜನೆ ಶೀಘ್ರವಾಗಿ ಈಡೇರಲು ಸಮುದಾಯ ಬಾಂಧವರೆಲ್ಲರು ಸಹೃದಯದಿಂದ ಸಂಘಟನೆ ಜೊತೆ ನಿಲ್ಲಬೇಕೆಂದು ಕರೆ ನೀಡಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ನಾಡಿನಲ್ಲಿರುವ ಪ್ರಬಲ ಮತ್ತು ಪ್ರಭಾವಿ ಸಮುದಾಯಗಳಲ್ಲಿ ಬಂಟ ಸಮುದಾಯ…
ಮಡಿಕೇರಿ NEWS DESK ಮೇ 2 : ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರ್ಥಿಕ ಸಹಕಾರ ನೀಡುವುದಾಗಿ ಭರವಸೆ ನೀಡಿದ ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರಾದ ಮನ್ ಸುಖ್ ಮಾಂಡವಿಯಾ ಅವರು ಇದು ಕೊಡುಗೆಯಲ್ಲ, ಸರ್ಕಾರದ ಜವಾಬ್ದಾರಿ ಎಂದು ಹೇಳಿದರು. ನಾಪೋಕ್ಲುವಿನ ಚೆರಿಯಪರಂಬು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ 26 ದಿನಗಳ ಕಾಲ ನಡೆದ ಹಾಕಿ ಉತ್ಸವ ಫೈನಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಹಿಂದೆ ಕೊಡವ ಕುಟುಂಬ ಹಾಕಿ ಕ್ರೀಡೆ ಬಗ್ಗೆ ಕೇಳಿದ್ದೆ. ಈಗ ನೋಡಿ ಸಂತೋಷವಾಯಿತು. ಅಂತರರಾಷ್ಟ್ರೀಯ ಒಲಂಪಿಕ್ ಕೌನ್ಸಿಲ್ ಕ್ರೀಡೆ ಒಂದು ಸಮುದಾಯದ ಒಗ್ಗೂಡುವಿಕೆಗೆ ಸಹಕಾರಿಯಾಗಬೇಕು ಎಂದಿದೆ. ಆದರೆ ಕೊಡವ ಸಮುದಾಯದ ಪೂರ್ವಜರು ಇದನ್ನು ಈ ಹಿಂದೆ ಮಾಡಿ ತೋರಿಸಿದ್ದಾರೆ ಇದು ಶ್ಲಾಘನೀಯ ಎಂದರು. 18 ಜನ ಒಲಂಪಿಯನ್ ನೀಡಿದ ಈ ಕೊಡವ ಭೂಮಿಗೆ ವಂದನೀಯ ಎಂದರು. ಕ್ರೀಡಾ ಪ್ರತಿಭೆಗಳಿರುವ ಕೊಡಗಿಗೆ ಪ್ರೋತ್ಸಾಹ ನೀಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಸಚಿವರು ಹೇಳಿದರು. ಕ್ರೀಡೆ…
ಮಡಿಕೇರಿ NEWS DESK ಮೇ 2 : ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಹಸ್ತ ಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ ಕಾರ್ಯ ಯೋಜನೆ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಶನಿವಾರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ದೇಶದಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ವಿಜ್ಞಾನ, ಗಣಿತ, ಆರ್ಯುವೇದ, ತತ್ವಶಾಸ್ತ್ರ ಮತ್ತು ಸಾಹಿತ್ಯ ಸೇರಿದಂತೆ ಅಪಾರ ಸಂಪತ್ತು ಹಸ್ತಪ್ರತಿಗಳ ರೂಪದಲ್ಲಿ ಅಡಗಿದೆ. ಸಮಯ ಬದಲಾದಂತೆ, ಕಾಲ ಓಡಿದಂತೆ ಈ ಅಮೂಲ್ಯ ನಿಧಿ ಧೂಳು ಹಿಡಿದು, ಗೆದ್ದಲು ಪಾಲಾಗುತ್ತಿದೆ. ಇದರ ಹೊರತಾಗಿ ಕೆಲವು ವಿದೇಶಿ ವಸ್ತು ಸಂಗ್ರಹಾಲಯಗಳ ಪಾಲಾಗಿವೆ. ನಮ್ಮ ಪೂರ್ವಿಕರ ಆಸ್ತಿಯನ್ನು ಉಳಿಸಿಕೊಳ್ಳುವುದರ ಜೊತೆಗೆ ಭಾರತದ ಅಸ್ತಿತ್ವದ ಮರುಸ್ಥಾಪನೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಹಸ್ತ ಪ್ರತಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಸಂಸ್ಕೃತಿ ಸಚಿವಾಲಯ ʻಜ್ಞಾನ ಭಾರತಂʼ ಮಿಷನ್ ಯೋಜನೆಯನ್ನು ಜಾರಿಗೆ ತಂದಿದೆ. ಹಸ್ತಪ್ರತಿಗಳು ಕೇವಲ ಹಳೆಯ ಕಾಗದಗಳಾಗದೇ ಭಾರತೀಯ ಪರಂಪರೆಯ ಹುಟ್ಟು ಹಾಗೂ ಅದರ…
ಮಡಿಕೇರಿ NEWS DESK ಮೇ 2 : ಕ್ರೀಡೆಯಲ್ಲಿ ಕೊಡಗು ಜಿಲ್ಲೆ ಗಳಿಸಿದ ಯಶಸ್ಸು, ಕೀರ್ತಿ, ಸಾಧನೆ ಭಾರತ ದೇಶದ ಬೇರೆ ಯಾವ ಜಿಲ್ಲೆಗಳಿಗೆ ಲಭಿಸಲಿಲ್ಲ ಎಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ನವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊಡವ ಕೌಟುಂಬಿಕ ಹಾಕಿ ನಮ್ಮೆ 2026 ಚೇನಂಡ ಕಪ್ ಫೈನಲ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಕೊಡಗು ದೇಶದಲ್ಲಿ ಪುಟ್ಟ ಜಿಲ್ಲೆಯಾಗಿದ್ದರೂ 18 ಒಲಂಪಿಯನ್ ಗಳನ್ನು ದೇಶಕ್ಕೆ ಕೊಡಗೆಯಾಗಿ ನೀಡಿದೆ.ಪುಟ್ಟ ಜಿಲ್ಲೆ ಕ್ರೀಡೆಯಲ್ಲಿ ದೊಡ್ಡ ಸಾಧನೆ ಮಾಡಿದೆ ಎಂದರೆ ಅದು ನಮಗೆ ಹೆಮ್ಮೆಯ ವಿಚಾರ ಎಂದು ಹೇಳಿದರು.ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು 30 ಕೋಟಿ ರೂಗಳ ಅನುದಾನವನ್ನು ಬಜೆಟ್ ನಲ್ಲಿ ಒದಗಿಸಿದ್ದು ರಾಜ್ಯ ಸಭಾ ಸದಸ್ಯರಾದ ಅಜಯ್ ಮಾಕನ್ ರವರು ಈ ಯೋಜನೆಗೆ ವರ್ಷಕ್ಕೆ 5 ಕೋಟಿ ರೂಗಳಂತೆ ಒಟ್ಟು 15 ಕೋಟಿ ರೂಗಳನ್ನು ಒದಗಿಸುತ್ತಿದ್ದಾರೆ…
ಮಡಿಕೇರಿ ಮೇ 1 NEWS DESK : ಬರಹ : ಗೀತಾಂಜಲಿ ಎನ್.ಎಮ್ ಸೋಮವಾರಪೇಟೆ* ಬುದ್ಧ ಎಂದರೆ ಹಾಗೇ ಶಾಂತಿ, ಸಮಾಧಾನ, ಮಂದಹಾಸ, ಆತ್ಮ ಜ್ಞಾನ ಹಾಗೂ ಅಂತರಾಳದೊಳಗಿನ ಒಂದು ನೆಮ್ಮದಿಯ ಅನುಭವ. ಜೀವನ ಕೆಲವೊಮ್ಮೆ ಗೊಂದಲಗಳ ಗೂಡಾಗಿರುತ್ತದೆ ಅಂತಹ ಸಮಯದಲ್ಲಿ ಮನ ಸಾಂತ್ವನ,ಸಮಾಧಾನ ಬೇಡುತ್ತದೆ.ಹಾಗಾದಾಗ ಆ ಎಲ್ಲಾ ಗೊಂದಲಗಳ ಮಧ್ಯೆ ಮನಸಿಗೆ ತಂಪು ನೀಡಿ ಸಾಂತ್ವನವನ್ನು ಪಸರಿಸುವ ಒಂದು ನಿಶ್ಶಬ್ದದ ಶಕ್ತಿ ಎಂದರೆ ಅದು ಬುದ್ಧನ ತತ್ವಗಳು ಮತ್ತು ಚಿಂತನೆಗಳು ಎಂದರೆ ತಪ್ಪಿಲ್ಲ…! ಬುದ್ಧನ ಚಿಂತನೆಗಳು ಕೇವಲ ಧಾರ್ಮಿಕ ಮಿತಿಗಳಲ್ಲಿ ಸೀಮಿತವಾಗಿಲ್ಲ, ಅವು ಸಾಮಾಜಿಕ ಸಮಾನತೆ, ನೈತಿಕತೆ ಮತ್ತು ಮಾನವೀಯತೆಯ ಪರಿಕಲ್ಪನೆಗಳನ್ನು ಕೂಡ ಬಲಪಡಿಸುತ್ತವೆ. ಜಾತಿ-ಭೇದ ಮತ್ತು ಅಂಧ ಶ್ರದ್ಧೆಗಳ ವಿರುದ್ಧ ಧ್ವನಿಯಾಗಿದ್ದ ಅವರು ಸ್ಥಾಪಿಸಿದ ಬೌದ್ಧ ಧರ್ಮವು ಸಮಾಜದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿ ನವ ನವೀನ ಚಿಂತನೆಗಳಿಗೆ ದಾರಿಮಾಡಿಕೊಟ್ಟಿತು. ಮಾನವ ಜೀವನದ ಆಳವಾದ ಸತ್ಯಗಳನ್ನು ಅನ್ವೇಷಿಸಿ, ‘ಆಸೆಯೇ ದುಃಖಕ್ಕೆ ಮೂಲ’ವೆಂಬ ಸತ್ಯ ಸಂದೇಶ ಸಾರಿದ ಬುದ್ಧ, ದುಃಖದ ಮೂಲ…
ವಿರಾಜಪೇಟೆ ಮೇ 1 NEWS DESK : ದಕ್ಷಿಣ ಕನ್ನಡದಲ್ಲಿ ಪ್ರಚಲಿತದಲ್ಲಿರುವ ಪರಿವಾರ ದೈವಗಳ ವಾರ್ಷಿಕ ನೇಮೋತ್ಸವ ಮೇ 5 ರಂದು ಕಡಂಗಮೂರೂರು ಗ್ರಾಮದ ನಾಲ್ಕನೇ ಮೈಲಿನಲ್ಲಿ ನಡೆಯಲಿದೆ. ವಿರಾಜಪೇಟೆ ತಾಲ್ಲೂಕಿನ ಕಡಂಗಮೂರೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಲ್ಕನೇ ಮೈಲಿಯ ಪಿ.ಪಿ. ಲೋಕೇಶ್ ಅವರ ಮನೆಯಲ್ಲಿ 3ನೇ ವರ್ಷದ ದೈವಗಳ ನೇಮೋತ್ಸವ ನಡೆಯಲಿದೆ. ಮೇ 5 ರಂದು ಸಂಜೆ ದೈವಗಳಿಗೆ ಅಲಂಕಾರ ಸೇವೆ, ಮಹಾಪೂಜೆ, ಚಂಡೆವಾದ್ಯ ನಂತರ ಪಾಷಾಣಮೂರ್ತಿ ದೈವ ಮತ್ತು ಇತರ ದೈವಗಳ ದರ್ಶನ ಬಳಿಕ ಅನ್ನಸಂತರ್ಪಣೆ ಜರುಗಲಿದೆ. ಅಣ್ಣಪ್ಪ ಪಂಜರ್ಲಿ ದೈವ ನೇಮ, ವರ್ಣ ಪಂಜುರ್ಲಿ ದೈವ ಮತ್ತು ಪಾಷಾಣಮೂರ್ತಿ ದೈವಗಳ ನೇಮ ನಡೆಯಲಿದೆ. ಮೇ 6 ರಂದು ಬೆಳಿಗ್ಗೆ ಗುಳಿಗ ಮತ್ತು ಕೊರಗಜ್ಹ ದೈವಗಳ ನೇಮ ನಡೆಯಲಿದೆ. ದೈವಗಳಿಗೆ ಪ್ರಸಾದ ಅರ್ಪಣೆ, ಅಗಮಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಪಿ.ಪಿ.ಲೋಕೇಶ್ 8105403505, ಪ್ರಮೀಳಾ 8867147501, ವಾಣಿ : 8147704308 ಮತ್ತು ಜಗದೀಶ್ : 9482332337 ಸಂಖ್ಯೆ…
ಮಡಿಕೇರಿ ಮೇ 1 NEWS DESK : ಮಡಿಕೇರಿಯ ವಾಂಡರರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ದಿ. ಸಿ.ವಿ.ಶಂಕರ್ ಸ್ವಾಮಿ ಸ್ಮರಣಾರ್ಥ ಏರ್ಪಡಿಸಿಕೊಂಡು ಬರಲಾಗುತ್ತಿರುವ 32ನೇ ವರ್ಷದ ಉಚಿತ ಮಕ್ಕಳ ಬೇಸಿಗೆ ಕ್ರೀಡಾ ಶಿಬಿರದ ಸಮರೋಪ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಮೇ 3 ರಂದು ಬೆಳಿಗ್ಗೆ 8.30 ಗಂಟೆಗೆ ನಡೆಯಲಿದೆ. ವಾಂಡರರ್ಸ್ ಅಧ್ಯಕ್ಷ ಕೋಟೇರ ಮುದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತ ತಂಡದ ಹಾಕಿ ಆಟಗಾರ ವಿ.ಎಸ್.ವಿನಯ್, ಹಿರಿಯ ಹಾಕಿ ಆಟಗಾರ ಕೆ.ಎ.ಗಣೇಶ್ ಉಪಸ್ಥಿತರಿರುವರು ಎಂದು ಶಿಬಿರದ ಸಂಚಾಲಕ ಬಾಬು ಸೋಮಯ್ಯ ತಿಳಿಸಿದ್ದಾರೆ.
ಮಡಿಕೇರಿ ಮೇ 1 NEWS DESK : ಶಾಂತಿಯುತ ಮತ್ತು ಸಮಾನತೆಯ ಸಮಾಜ ನಿರ್ಮಾಣಕ್ಕೆ ಭಗವಾನ್ ಬುದ್ಧನ ಸಂದೇಶಗಳು ಮಾರ್ಗದರ್ಶಿಯಾಗಿದೆ ಎಂದು ಉಪವಿಭಾಗಾಧಿಕಾರಿ ನಿತಿನ್ ಚಿಕ್ಕಿ ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶುಕ್ರವಾರ ನಗರದ ಗಾಂಧಿ ಭವನದಲ್ಲಿ ನಡೆದ ಭಗವಾನ್ ಬುದ್ಧ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಘರ್ಷ, ಪರಿಸರ ಸಮಸ್ಯೆ, ಸಾಮಾಜಿಕ ಸಮಸ್ಯೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಬುದ್ಧನ ಸಂದೇಶಗಳು ಪ್ರಸ್ತುತವಾಗಿದೆ. ಅಹಿಂಸೆ, ದಯೆ, ಆತ್ಮನಿಗ್ರಹ ಹಾಗೂ ಸಕಲ ಜೀವಿಗಳ ಗೌರವಯುತ ತತ್ವಗಳು ಶಾಂತಿಯುತ ಮತ್ತು ಸಮಾನತೆಯ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಿಯಾಗಿದೆ ಎಂದು ಉಪ ವಿಭಾಗಾಧಿಕಾರಿ ಅವರು ಹೇಳಿದರು. ಭಗವಾನ್ ಬುದ್ಧನ ಜೀವನ ಮತ್ತು ಉಪದೇಶಗಳಿಗೆ ಸಂಬಂಧಿಸಿದ ಪವಿತ್ರ ಭೂಮಿಯಾಗಿರುವ ಭಾರತ ದೇಶವು ಧನ್ಯವಾಗಿದೆ. ಗೌತಮ ಬುದ್ಧನ ಜೀವನ ಮತ್ತು ಬೋಧನೆಗಳಲ್ಲಿ ಸಾರನಾಥ ಮತ್ತು ಕುಶಿನಗರ ಅತ್ಯಂತ ಪ್ರಮುಖವಾದ, ಪವಿತ್ರವಾದ ಎರಡು ಸ್ಥಳಗಳಾಗಿದ್ದು, ವಿಶ್ವದಾದ್ಯಂತ ಭಕ್ತರನ್ನು ಆಕರ್ಷಿಸುತ್ತಿದೆ. ಈ ಸಂದರ್ಭ ಬುದ್ಧನ ಆದರ್ಶನಗಳನ್ನು…






