ಲೇಖಕ: admin

ಮಡಿಕೇರಿ ಏ.30 NEWS DESK : ಹಲೋ ಆಕಾಶವಾಣಿ ‘ಬೆಳಕ ಹುಡುಕುತ್ತಾ’ ನೇರ ಪೋನ್‍ಇನ್ ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಗುರುವಾರ ಪಾಲ್ಗೊಂಡು ಸಾರ್ವಜನಿಕರ ಕುಂದುಕೊರತೆ ಆಲಿಸಿದರು. ಒಂದು ಗಂಟೆಗಳ ಕಾಲ ನಡೆದ ನೇರ ಪೋನ್‍ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯಾದ್ಯಂತ 16 ಕ್ಕೂ ಹೆಚ್ಚು ಜನ ದೂರವಾಣಿ ಮೂಲಕ ಕರೆ ಮಾಡಿ ಭೂಮಿ ದುರಸ್ತಿ, ರಸ್ತೆ ಸರಿಪಡಿಸುವುದು, ಕುಡಿಯುವ ನೀರು ಪೂರೈಕೆ, ಬೀದಿ ದೀಪ ಅಳವಡಿಕೆ, ಮತ್ತಿತರ ಮೂಲ ಸೌಲಭ್ಯ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಒಳಗೊಂಡ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಆರಂಭದಲ್ಲಿ ಕರೆ ಮಾಡಿದ ವಿರಾಜಪೇಟೆ ತಾಲ್ಲೂಕಿನ ಕೋತೂರು ಗ್ರಾಮದ ಗಣೇಶ್ ಕುಮಾರ್ ಅವರು ಎಫ್‍ಐಡಿ ಗುರುತಿನ ಚೀಟಿ ಇಲ್ಲದೆ ರಸಗೊಬ್ಬರ ಖರೀದಿಸಲು ತೊಂದರೆಯಾಗಿದೆ. ಆದ್ದರಿಂದ ಆರ್‍ಟಿಸಿ ಒದಗಿಸುವಂತಾಗಬೇಕು ಎಂದು ಕೋರಿದರು. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಅವರು ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಿಲ್ಲ. ಆತಂಕ ಪಡುವ ಅಗತ್ಯವೂ ಇಲ್ಲ ಎಂದರು. ಸುಂಟಿಕೊಪ್ಪ ಬಳಿಯ ಏಳನೇ ಹೊಸ ಕೋಟೆಯ…

Read More

ನಾಪೋಕ್ಲು ಏ.30 NEWS DESK : ಜಿಲ್ಲಾ ಕುಲಾಲ ಕುಂಬಾರ ಕ್ರೀಡೋತ್ಸವದ ಸಮ್ಮಿಲನ 2026 ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಲೋಕಾರ್ಪಣೆ  ಮಡಿಕೇರಿಯ ಶ್ರೀ ಕೋಟೆ ಗಣಪತಿ  ದೇವಾಲಯದಲ್ಲಿ ನಡೆಯಿತು. ಕೊಡಗು ಜಿಲ್ಲಾ ಕುಲಾಲ ಕುಂಬಾರ ಬಾಂಧವರಿಗೆ ಕ್ರೀಡೋತ್ಸವ ಕೊಡಗು ಜಿಲ್ಲಾ (ಕುಂಬಾರ)ರ ಸಂಘ (ರಿ)ಮಡಿಕೇರಿ ಇದರ ನೇತೃತ್ವದಲ್ಲಿ ಜಿಲ್ಲಾ ಯುವ ಘಟಕ ಮತ್ತು ಜಿಲ್ಲಾ ಮಹಿಳಾ ಘಟಕದ ಸಹಯೋಗದೊಂದಿಗೆ ಮೇ 16 , 17 ದಂದು ಮಡಿಕೇರಿಯ ಮ್ಯಾನ್ಸ್ ಕಾಂಪೌಂಡಿನ ಕೆಳಗಿನ ಮೈದಾನದಲ್ಲಿ ಆಯೋಜಿಸಲಾಗಿದೆ. ಆಮಂತ್ರಣ ಪತ್ರಿಕೆಗೆ ಬಿಡುಗಡೆ ಮಾತನಾಡಿದ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘದ ಅಧ್ಯಕ್ಷರಾದ ಲಯನ್ ಕೆ.ಕೆ.ದಾಮೋದರ್ ಅವರು ಮಾತನಾಡಿ, ಕೊಡಗು ಜಿಲ್ಲೆಯ ಕುಲಾಲ ಕುಂಬಾರ ಬಾಂಧವರ ಇದು ಎರಡನೇ ವರ್ಷದ ಕಾರ್ಯಕ್ರಮವಾಗಿದೆ. ಈ ವರ್ಷವೂ ಬಹಳ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಲಾಗುವುದು. ತಾರೀಕು 16ರಂದು ಬೆಳಿಗ್ಗೆ 7 ಗಂಟೆಗೆ ಶ್ರೀ ಓಂಕಾರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಕ್ರೀಡಾ ಜ್ಯೋತಿಯೊಂದಿಗೆ ಮೈದಾನಕ್ಕೆ ಕಾಲ್ನಡಿಗೆಯ ಮೂಲಕ ಸಾಗಿ ಗಣ್ಯರ ಸಮ್ಮುಖದಲ್ಲಿ…

Read More

ಭಾಗಮಂಡಲ ಏ.20 NEWS DESK : ನವೀಕರಣಗೊಂಡ ಭಾಗಮಂಡಲ, ತಾವುರೂ ಗ್ರಾಮದ ಶ್ರೀ ಮಹಿಷಾಸುರ ಮರ್ದಿನಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಿತು. ನೀಲೇಶ್ವರ ಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು. ಏ.25ರಿಂದ ಪ್ರಾರಂಭವಾದ ದೇವಸ್ಥಾನದ ಜೀರ್ಣೋದ್ಧಾರದ ಕಲಶೋೀತ್ಸವದಲ್ಲಿ, ಬೆಟ್ಟದಿಂದ ದೇವರು ತರುವುದು, ಗ್ರಾಮ ಸಂಸ್ಕøತಿ ಕುರಿತು ಮಕ್ಕಳಿಂದ ಹೀಲಿಯಾಟ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ಪ್ರಸಾದ, ಶುದ್ದಿ ವಾಸ್ತು ರಣೋಜ್ಞ ಹೋಮ, ವಾಸ್ತು ಬಲಿ, ಗಣಪತಿ ಹೋಮ,ಬಿಂಬಶುದ್ದಿ, ಕಲಶಾಭಿಷೇಕ, ದ್ವಾರಪ್ರಾಯಶ್ಚಿತ ಹೋಮ, ಹೋಮ ಕಲಶಾಭಿಷೇಕ, ದುರ್ಗಾ ನಮಸ್ಕಾರ ಪೂಜೆ, ಲಲಿತ ಸಹಸ್ರನಾಮ ಪಾರಾಯಣ, ಶಾಂತಿ ಹೋಮಗಳು, ಬ್ರಹ್ಮಕಲಶ, ಮಂಟಪ ಸಂಸ್ಕಾರ, ಕುಂಬೇಶ ಕರ್ಕರಿ ಕಲಶಪೂಜೆ, ಅಧಿವಾಸ ಹೋಮ, ಪರಿಕಲಶ ಪೂಜೆ, ತತ್ವ ಕಲಶ ಪೂಜೆ, ತತ್ವ ಹೋಮ, ತತ್ವ ಕಲಸಾಭಿಷೇಕ,, ಅನುಜ್ಞಾ ಕಲಶಾಭಿಷೇಕ, ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ,, ಬ್ರಹ್ಮಕಲಶಾಭಿಷೇಕ,, ಮಂತ್ರಾಕ್ಷತೆ, ಶ್ರೀ ಬಲಿ ಸೇವಾ ಸುತ್ತುಗಳು, ನೃತ್ಯಬಲಿ, ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ಐದು ದಿನಗಳ…

Read More

ಮಡಿಕೇರಿ ಏ.30 NEWS DESK : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ 2025 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಾಗಿ ವರದಿಗಳನ್ನು ಆಹ್ವಾನಿಸಲಾಗಿದೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾದವರು ಮಾತ್ರ ವರದಿ ಸಲ್ಲಿಸಬಹುದಾಗಿದ್ದು ಮೇ 10 ರೊಳಗೆ ತಮ್ಮ ವರದಿಯನ್ನು ಪತ್ರಿಕಾಭವನಕ್ಕೆ ತಲುಪಿಸಬೇಕಾಗಿದೆ. ನಂತರ ಬಂದ ವರದಿಗಳನ್ನು ಸ್ವೀಕರಿಸಲಾಗುವುದಿಲ್ಲ. ವರದಿಗಳು 2025 ರ ಜನವರಿಯಿಂದ 2025 ಡಿಸೆಂಬರ್ 31 ರೊಳಗೆ ಪ್ರಕಟವಾಗಿರಬೇಕು. ಪ್ರಶಸ್ತಿಗೆ ವರದಿ ಸಲ್ಲಿಸುವವರು ಮೂರು ಪ್ರತಿಗಳನ್ನು ತಪ್ಪದೇ ನೀಡಬೇಕು. ದೃಶ್ಯಮಾಧ್ಯಮದವರು ತಮ್ಮ ಚಾನಲ್ ಗಳಲ್ಲಿ ಪ್ರಸಾರವಾದ ವರದಿಯ ಸಿಡಿ ಯನ್ನು ಸಲ್ಲಿಸಬೇಕು. ಪಂದ್ಯಂಡ ಬೆಳ್ಯಪ್ಪ ಸ್ಮರಣಾರ್ಥ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿ,  ಸಂಘದ ಮಾಜಿ ಅಧ್ಯಕ್ಷರಾದ ಕೆ.ಕೆ.ಶಶಿಧರ್ ಸ್ಮರಣಾರ್ಥ ಕ್ರೀಡಾ ವರದಿ ಪ್ರಶಸ್ತಿ, ಸಂಘದ ಉಪಾಧ್ಯಕ್ಷರಾಗಿದ್ದ ಸಿ.ಎನ್.ಸುನಿಲ್ ಕುಮಾರ್ ಸ್ಮರಣಾರ್ಥ ಅತ್ಯುತ್ತಮ ವೀಡಿಯೋಗ್ರಫಿ ಪ್ರಶಸ್ತಿ, ನಿವೃತ್ತ ವಾರ್ತಾಧಿಕಾರಿ ಪಳೆಯಂಡ ಪೊನ್ನಪ್ಪ ಸ್ಥಾಪಿಸಿದ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿ, ಕೋವರ್ ಕೊಲ್ಲಿ ಇಂದ್ರೇಶ್ ತಮ್ಮ ತಂದೆ ಚಂದ್ರಶೇಖರ್ ಅವರ…

Read More

ಸೋಮವಾರಪೇಟೆ ಏ.30 NEWS DESK : ಮಣ್ಣು ಪರೀಕ್ಷೆ ಮಾಡದೇ ಕಾಫಿ ತೋಟಗಳಿಗೆ ರಸಾಯನಿಕ ಅಥವಾ ಸಾವಯವ ಗೊಬ್ಬರಗಳನ್ನು ಅಜಾಗರೂಕವಾಗಿ ಬಳಸುವುದರಿಂದ ಬೆಳೆಗಾರರು ಅನಾವಶ್ಯಕ ಖರ್ಚು ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಫಿ ಮಂಡಳಿಯ ಉಪ ನಿರ್ದೇಶಕರಾದ ಡಾ.ಚಂದ್ರಶೇಖರ್ ಎಚ್ಚರಿಸಿದರು. ಸೋಮವಾರಪೇಟೆ ತಾಲ್ಲೂಕು ಒಕ್ಕಲಿಗರ ಸಂಘ, ಕಾಫಿ ಬೆಳೆಗಾರರ ಸಂಘ ಹಾಗೂ ಭಾರತೀಯ ಕಾಫಿ ಮಂಡಳಿ ಮತ್ತು ಸಂಶೋಧನಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಒಕ್ಕಲಿಗರ ಸಮುದಾಯಭವನದಲ್ಲಿ ಏರ್ಪಡಿಸಿದ್ದ ಮಣ್ಣು ಪರೀಕ್ಷೆ ಮತ್ತು ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಪ್ರತಿ ತೋಟದ ಮಣ್ಣಿನ ಗುಣಲಕ್ಷಣಗಳು ವಿಭಿನ್ನವಾಗಿರುತ್ತವೆ. ಅದರ ಪ್ರಕಾರವೇ ಗೊಬ್ಬರದ ಪ್ರಮಾಣ ಮತ್ತು ಪ್ರಕಾರವನ್ನು ಆಯ್ಕೆ ಮಾಡಬೇಕು. ಇಲ್ಲವಾದರೆ ಉತ್ಪಾದನೆ ಕುಸಿಯುವುದರ ಜೊತೆಗೆ ಹಣವೂ ವ್ಯರ್ಥವಾಗುತ್ತದೆ ಎಂದರು. ಮಣ್ಣಿನ ಪೋಷಕಾಂಶಗಳ ಸಮತೋಲನ ಕಾಪಾಡಿಕೊಳ್ಳುವುದು ಉತ್ತಮ ಇಳುವರಿಗೆ ಪ್ರಮುಖ ಅಂಶ ಎಂದು ಅವರು ತಿಳಿಸಿದರು. ಕಾರ್ಯಾಗಾರದಲ್ಲಿ ವಿಜ್ಞಾನಿ ನಾಡಾಫ್ ಮಣ್ಣಿನ ರಚನೆ, ಅದರ ಆರೋಗ್ಯ ಮತ್ತು ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಿದರು. ಡಾ. ನಾಗರಾಜ್ ಗಿಡ ಸಂರಕ್ಷಣಾ…

Read More

ಸೋಮವಾರಪೇಟೆ ಏ.30 NEWS DESK : ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಸೋಮವಾರಪೇಟೆಯ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಮೇ 7 ರಿಂದ 10ರವರೆಗೆ ಆಯೋಜಿಸಿರುವ ಯಿಫಾ ಹಾಕಿ ಚಾಂಪಿಯನ್ ಟ್ರೋಫಿ ಕ್ರೀಡಾಕೂಟದ, ಆತಿಥೇಯ ಯಿಫಾ ತಂಡದ ಜರ್ಸಿಗಳನ್ನು ಶಾಸಕ ಡಾ. ಮಂತರ್ ಗೌಡ ಅವರು ಶಾಸಕರ ಕಚೇರಿ ಆವರಣದಲ್ಲಿ ಅನಾವರಣ ಮಾಡಿದರು.  ನಂತರ ಮಾತನಾಡಿದ ಶಾಸಕರು, ಯುವ ಜನಾಂಗಕ್ಕೆ ಹಾಕಿ ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಯಿಫಾ ಸಂಘಟನೆ ಇದೇ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನು ಒಳಗೊಂಡಂತೆ ಹಾಕಿ ಪಂದ್ಯಾವಳಿ ಆಯೋಜಿಸಿದ್ದು, ಪಂದ್ಯಾವಳಿಯ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು. ಹಾಕಿ ಕ್ರೀಡೆಗಳು ನಿರಂತರವಾಗಿ ನಡೆಯಬೇಕು. ಎಲ್ಲಾ ಜಾತಿ, ಜನಾಂಗ, ಪಕ್ಷದವರನ್ನು ಒಂದುಗೂಡಿಸಲು ಕ್ರೀಡೆಯಿಂದ  ಮಾತ್ರ ಸಾಧ್ಯ ಎಂದು ಅಭಿಪ್ರಾಯಿಸಿದ ಅವರು, ಪ್ರಸ್ತುತ ಸಮಾಜದಲ್ಲಿ ಹಲವಷ್ಟು ಯುವಕರು ದಾರಿ ತಪ್ಪುತ್ತಿದ್ದಾರೆ. ದುಶ್ವಟಗಳಿಗೆ ಒಳಗಾಗಿ ಜೀವನವನ್ನು ನರಕಸದೃಶ ಮಾಡಿಕೊಳ್ಳುತ್ತಿದ್ದಾರೆ.…

Read More

ಮಡಿಕೇರಿ ಏ.29 NEWS DESK : ಫಲಾನುಭವಿಗಳ ಹಿತರಕ್ಷಣೆ ಅಧಿಕಾರಿಗಳ ಆದ್ಯ ಕರ್ತವ್ಯ ಆಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕರ್ತವ್ಯ ನಿರ್ವಹಿಸುವ ಮೂಲಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯನ್ನು ಸಮರ್ಪಕವಾಗಿ ತಲುಪಿಸುವಂತೆ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷರಾದ ಎಂ.ಜಿ.ಮೋಹನ್ ದಾಸ್ ಅವರು ಹೇಳಿದ್ದಾರೆ. ನಗರದ ತಾಲ್ಲೂಕು ಪಂಚಾಯಿತಿ ಸಾಮಥ್ರ್ಯ ಸೌಧದಲ್ಲಿ ಬುಧವಾರ ನಡೆದ ಮಡಿಕೇರಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು 38,270 ಪಡಿತರ ಚೀಟಿ ಇದ್ದು, 1,20,974 ಒಟ್ಟು ಫಲಾನುಭವಿಗಳಿದ್ದಾರೆ. ಅದರಲ್ಲಿ 1902 ಎಎವೈ ಪಡಿತರ ಚೀಟಿ ಇದ್ದು, 7569 ಎಎವೈ ಫಲಾನುಭವಿಗಳು ಇದ್ದಾರೆ. 21,697 ಪಿಹೆಚ್‍ಹೆಚ್ ಪಡಿತರ ಚೀಟಿ ಇದ್ದು, 70,196 ಫಲಾನುಭವಿಗಳು, 14,671 ಎನ್‍ಪಿಹೆಚ್‍ಹೆಚ್ ಪಡಿತರ ಚೀಟಿ ಇದ್ದು, 43,206 ಫಲಾನುಭವಿಗಳಿದ್ದಾರೆ ಎಂದು ಆಹಾರ ನಿರೀಕ್ಷಕರಾದ ವಿ.ಪಿ.ವೀಣಾ ಅವರು ಸಭೆಗೆ ಮಾಹಿತಿ ನೀಡಿದರು. ಅಲ್ಲದೇ ಮಡಿಕೇರಿ ತಾಲ್ಲೂಕಿನಲ್ಲಿರುವ…

Read More

ಮಡಿಕೇರಿ ಏ.29 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಇದರ ವತಿಯಿಂದ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಬುಧವಾರ ಸಂಜೆ ಗೋಧೂಳಿ ಲಗ್ನದಲ್ಲಿ ನೆರವೇರಿತು. ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ 106 ಜೋಡಿಗಳು ಸತಿಪತಿಗಳಾಗಿ ಹೊಸ ಜೀವನಕ್ಕೆ ಕಾಲಿರಿಸಿದರು. ಈ ವೇಳೆ ಹೇಮಾವತಿ ವಿ ಹೆಗ್ಗಡೆ, ಹರ್ಷೇಂದ್ರ ಕುಮಾರ್, ಶ್ರದ್ದಾ ಅಮಿತ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು.

Read More

ಮೈಸೂರು ಏ.29 NEWS DESK : ತಂಬಾಕು ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು, ಹರಾಜು ಕಾರ್ಯ ವಿಧಾನದಲ್ಲಿ ಸುಧಾರಣೆ ತರಲು ಎಲ್ಲ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವರಿಗೆ ಮನವಿ ಮಾಡಲಾಗಿದೆ ಎಂದು *ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ. ಕೇಂದ್ರ ವಾಣಿಜ್ಯ ಸಚಿವರಾದ ನವದೆಹಲಿಯಲ್ಲಿ ಪಿಯೂಷ್‌ ಗೋಯಲ್‌ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ನಂತರ ಯದುವೀರ್‌ ಒಡೆಯರ್‌ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಪ್ರಸಕ್ತ ಋತುವಿನಲ ಸಮಗ್ರ ಅವಲೋಕನ, ರೈತರು ಎದುರಿಸುತ್ತಿರುವ ಸವಾಲುಗಳಿಗೆ ದೀರ್ಘಾವಧಿಯ ರಚನಾತ್ಮಕ ಪರಿಹಾರ ಒದಗಿಸಲು ತುರ್ತು ಕ್ರಮ, ಏಕಸ್ವಾಮ್ಯ ನಿಯಂತ್ರಣ ತಪ್ಪಿಸುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಯಿತು ಎಂದು ತಿಳಿಸಿದ್ದಾರೆ. *ಹೊಸ ಯೋಜನೆಗಳಿಗೆ ಚಿಂತನೆ ಅಗತ್ಯ* ಹರಾಜು ಪ್ರಕ್ರಿಯೆಯಲ್ಲಿ ವಿದೇಶಿ ಖರೀದಿದಾರರ ವ್ಯಾಪಕ ಭಾಗವಹಿಸುವಿಕೆಯನ್ನು ಅನುಮತಿಸುವ ಪ್ರಾಮುಖ್ಯತೆ ಬಗ್ಗೆ ಗಮನ ಸೆಳೆಯಲಾಯಿತು. ಹೊಸ ಯೋಜನೆಗಳಿಗೆ ಚಿಂತನೆ ಅಗತ್ಯವಿದೆ. ರೈತರಿಗೆ ಪಾರದರ್ಶಕತೆ, ನ್ಯಾಯಯುತ…

Read More