ಲೇಖಕ: admin

ಮಡಿಕೇರಿ ಮೇ 1 NEWS DESK :  ಖ್ಯಾತ ಅಂತರಾಷ್ಟ್ರೀಯ ಹಾಕಿ ಪಟು, ಮಾಜಿ ಒಲಂಪಿಯನ್, ಭಾರತ ಹಾಕಿ ತಂಡದ ಮಾಜಿ ಗೋಲ್ ಕೀಪರ್ ಎ.ಬಿ.ಸುಬ್ಬಯ್ಯನವರ ನಿವಾಸಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿದರು. ಎ.ಬಿ.ಸುಬ್ಬಯ್ಯ ಅವರು ತಂದೆ ಅಂಜಪರವಂಡ ಬೋಪಯ್ಯ ತಮ್ಮ 92 ವರ್ಷ ಪ್ರಾಯದಲ್ಲಿ ನಿಧನರಾಗಿದ್ದ ಹಿನ್ನಲೆಯಲ್ಲಿ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂಧರ್ಭದಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ, ನಿವೃತ್ತ ಡಿ.ಸಿ.ಎಫ್ ವಾಟೇರಿರ ಕಾರ್ಯಪ್ಪ, ಪ್ರಮುಖರಾದ ಸೂರಜ್ ಹೊಸೂರು ಹಾಜರಿದ್ದರು.

Read More

ಮಡಿಕೇರಿ ಮೇ 1 NEWS DESK : ವಿರಾಜಪೇಟೆ ತಾಲ್ಲೂಕಿನ ಕಡಂಗಮರೂರು ಗ್ರಾಮಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿದರು. ಗ್ರಾಮದ ಪ್ರಸಿದ್ಧ ಶ್ರೀ ಭದ್ರಕಾಳಿ ಹಾಗೂ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ಇದೇ ಸಂದರ್ಭ ದೇವಸ್ಥಾನಕ್ಕೆ ತೆರಳುವ ನೂತನ ರಸ್ತೆ ಲೋಕಾರ್ಪಣೆ ಮಾಡಿದ  ಶಾಸಕರು,  ಭಕ್ತಾದಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ತಮ್ಮ ಅನುದಾನದ 3 ಲಕ್ಷದಲ್ಲಿ ರಸ್ತೆಯನ್ನು ನಿರ್ಮಿಸಿ ಕೊಟ್ಟಿದ್ದು, ಲೋಕಾರ್ಪಣೆಯನ್ನು ಗೊಳಿಸಿ ಶುಭ ಹಾರೈಸಿದರು.  ತಕ್ಕ ಮುಖ್ಯಸ್ಥರು, ಪಕ್ಷದ ಮುಖಂಡರು ಮಂಡೆಟೀರ ಅನಿಲ್, ಮಂಡೆಪಂಡ ರೋಷನ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Read More

ಗೋಣಿಕೊಪ್ಪ ಮೇ 1 NEWS DESK : ಗೊಂದಲಗೊಂಡ ಮನಸ್ಸನ್ನು ನಿರಾಳತೆ, ನಿರ್ಮಲತೆಗೆ ಕೊಂಡೊಯ್ಯಲು ದೇವಲಾಯದ ವಾತಾವರಣದಿಂದ ಸಾಧ್ಯ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊಸೂರು ಸತೀಶ್‍ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಜೀರ್ಣೋದ್ಧಾರಗೊಂಡ ಭಾಗಮಂಡಲ ತಾವೂರು ಗ್ರಾಮದ ಶ್ರೀ ಮಹಿಷಾಸುರ ಮರ್ಧಿನಿ ದೇವಸ್ಥಾನದ ನವೀಕೃತ ಪೌಳಿಯನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯ ತನ್ನ ನೋವುಗಳನ್ನು ಸಂಕೋಚವಿಲ್ಲದೆ ವ್ಯಕ್ತಪಡಿಸಿಕೊಳ್ಳಲು ದೇವಾಲಯಗಳ ಅವಶ್ಯಕತೆಇದೆ. ಗರ್ಭಗುಡಿಯಲ್ಲಿ ಸ್ಥಾಪಿಸಿರುವ ದೇವರ ಮೂರ್ತಿಗಳು ಮನುಷ್ಯನ ಬದುಕಿಗೆ ಆಶಾಭಾವನೆಯ ಶಕ್ತಿಯನ್ನು ತುಂಬಬಲ್ಲದು. ಹೀಗಾಗಿ ಪ್ರಾರ್ಥನೆ ಮತ್ತು ಧಾರ್ಮಿಕ ಕಾರ್ಯಗಳು ಪ್ರತಿಯೊಬ್ಬನಿಗೂ ಅಗತ್ಯ ಎಂದು ತಿಳಿಸಿದರು. ಮನುಷ್ಯನ ಮನದೊಳಗೆ ಅಡಗಿರುವ ರಹಸ್ಯ ವಿಚಾರಗಳನ್ನು ಮತ್ತೊಬ್ಬ ವ್ಯಕ್ತಿಯೊಂದಿಗೆ ಹಂಚಿಕೊಂಡಾಗ ಅದು ಅಪಾಯದ ಸನ್ನಿವೇಶಗಳನ್ನು ತರಬಹುದು, ಆದರೆ ದೇವಾಲಯದಲ್ಲಿರುವ ದೇವರ ಮೂರ್ತಿಯೊಂದಿಗೆ ಮನಸ್ಸು ಮತ್ತು ಗರ್ಭಗುಡಿಯಲ್ಲಿನ ಸ್ಥಾಪಿತ ಮೂರ್ತಿಯೊಂದಿಗೆ ಮನದ ಮಾತುಕತೆ ನಡೆಸಿದಾಗ ಮನಸು ಶಾಂತಿಯುತವಾಗಿರಲು ಸಾಧ್ಯವಾಗಬಲ್ಲದು ಎಂದು ತಿಳಿಸಿದರು. ಧಾರ್ಮಿಕ ಆಚರಣೆಗಳಿಗೆ,ಸಮಾನತೆಯ ವ್ಯವಸ್ಥೆಗಳಿಗೆ ದೇವಸ್ಥಾನಗಳು ಸ್ಥಳೀಯ ಗ್ರಾಮಗಳ ಶಕ್ತಿಯಾಗುತ್ತದೆ ಎಂದು ಹೇಳಿದರು. ದೇವಸ್ಥಾನದಲ್ಲಿ ಬಾರಿಸುವ ಗಂಟೆಯ…

Read More

ಮಡಿಕೇರಿ ಮೇ 1 NEWS DESK : ಮಡಿಕೇರಿ ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯದಲ್ಲಿ ಮೇ 3 ರಿಂದ ಮೇ 6ರ ವರಗೆ ಶ್ರೀ ಮಾರಿಯಮ್ಮ ಕರಗೋತ್ಸವ ನಡೆಯಲಿದೆ. ಮೇ 3 ರಂದು ಪಂಪಿನ ಕೆರೆಯಿಂದ ಶ್ರೀ ಕಂಚಿ ಕಾಮಾಕ್ಷಿಯಮ್ಮ, ಶ್ರೀ ಮುತ್ತು ಮಾರಿಯಮ್ಮ ಬೇವಿನ ಸೊಪ್ಪಿನ ಕರಗಗಳು ಶೃಂಗಾರಗೊಂಡು ಸಂಜೆ ಅಲ್ಲಿಂದ ವಿಶೇಷ ಪೂಜೆಯ ನಂತರ ಮೆರವಣಿಗೆ ಮೂಲಕ ಹೊರಟು ಮುಖ್ಯಬೀದಿಗಾಗಿ ದೇವಾಲಯ ಸೇರಲಿದೆ. ಮೇ 4 ಮತ್ತು 5 ರಂದು ದೇವಾಲಯದಲ್ಲಿ ಶ್ರೀ ಮಾರಿಯಮ್ಮ ಕರಗಗಳಿಗೆ ವಿಶೇಷ ಪೂಜೆ ನಡೆಯಲಿದ್ದು, ಮೇ 6 ರಂದು ಬುಧವಾರ ಕರಗಗಳ ವಿಸರ್ಜನೋತ್ಸವ ನಡೆಯಲಿದೆ.  ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯ ಸಮಿತಿ ಮನವಿ ಮಾಡಿದೆ. ಮಡಿಕೇರಿಯ ಶ್ರೀ ಕಂಚಿ ಕಾಮಾಕ್ಷಿಯಮ್ಮ ದೇವಾಲಯದಲ್ಲಿ ಹಿಂದಿನ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿದ್ದ ಶ್ರೀ ಮಾರಿಯಮ್ಮ ಬೇವಿನ ಸೊಪ್ಪಿನ ಕರಗೋತ್ಸವ ನಾಡಿನಲ್ಲಿ ಭೀಕರ ಸಾಂಕ್ರಾಮಿಕ ರೋಗಗಳನ್ನು ತಡೆಕಟ್ಟಲು ಈ…

Read More

ಮಡಿಕೇರಿ ಮೇ 1 NEWS DESK : ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ಕೊಡವ ಕುಟುಂಬಗಳ ನಡುವೆ ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಆಯೋಜಿತ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ಯ ಫೈನಲ್ಸ್ ಪಂದ್ಯದಲ್ಲಿ ಚೆಕ್ಕೇರ ತಂಡ 9ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಮಹಿಳಾ ಕ್ರಿಕೆಟ್‍ನಲ್ಲಿ ಹರಿಹರ ಮುಕ್ಕಾಟಿರ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಇದೇ ಮೊದಲ ಬಾರಿಗೆ ಫೈನಲ್ ಹಂತ ಪ್ರವೇಶಿಸಿದ ಕೆದಮಳ್ಳೂರು ಮಾಳೇಟಿರ ಕುಟುಂಬದ ಪುರುಷರ ತಂಡ ಹಾಗೂ ಮಣವಟ್ಟಿರ ಕುಟುಂಬದ ಮಹಿಳಾ ತಂಡ ರನ್ನರ್ಸ್ ಸ್ಥಾನವನ್ನು ತಮ್ಮದಾಗಿಸಿಕೊಂಡವು. *ರೋಚಕ ಪಂದ್ಯಾಟ* ಬೆಳಗೆ ನಡೆದ ಮಹಿಳಾ ತಂಡದ ಫೈನಲ್ ಪಂದ್ಯದಲ್ಲಿ ಮೊದಲಿಗೆ ಟಾಸ್ ಗೆದ್ದ ಮಣವಟ್ಟಿರ ತಂಡ ಬ್ಯಾಟಿಂಗ್ ಅಯ್ದುಕೊಂಡಿತು. ಆರಂಭದಲ್ಲೇ ಅತ್ಯುತ್ತಮ ಹೋರಾಟಕ್ಕೆ ಇಳಿದ ಮಣವಟ್ಟಿರ ಮಹಿಳಾ ಆಟಗಾರರು ನಿಗಧಿತ 6 ಓವರ್ ಮುಕ್ತಾಯಕ್ಕೆ ರನ್ ಔಟ್‍ನಲ್ಲಿ 1 ವಿಕೆಟ್ ಕಳೆದುಕೊಂಡು 41 ರನ್ ಗಳಿಸಿ, ಎದುರಾಳಿ ಹರಿಹರ ಮುಕ್ಕಾಟಿರ…

Read More

ಗೋಣಿಕೊಪ್ಪ ಮೇ 1 NEWS DESK : ಕೃಷಿ ವಿಜ್ಞಾನ ಕೇಂದ್ರದಲ್ಲಿ ವೈಜ್ಞಾನಿಕ ಆಧಾರಿತ ಪೋಷಕಾಂಶ ಕುರಿತು ಕಾಫಿ ಬೆಳೆಗಾರರಿಗೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಭಾಗವಹಿಸಿದ 62 ಕಾಫಿ ಬೆಳೆಗಾರರಿಗೆ ಮತ್ತು ರೈತರಿಗೆ ವೈಜ್ಞಾನಿಕ ಆಧಾರಿತ ರಸಗೊಬ್ಬರ ಬಳಕೆಯ ಮಹತ್ವವನ್ನು, ಮಣ್ಣಿನ ಆರೋಗ್ಯ ಸುಧಾರಣೆ, ಸಸ್ಯಗಳ ರೋಗನಿರೋಧಕ ಶಕ್ತಿ ಹೆಚ್ಚಳ, ಉತ್ಪಾದಕತೆ ವೃದ್ಧಿ ಹಾಗೂ ಆಮದು ಅವಲಂಬನೆ ಕಡಿತ ಸಾಧ್ಯವಾಗುವುದನ್ನು ತಜ್ಞರು ವಿವರಣೆ ನೀಡಿದರು. ವಿಶೇಷವಾಗಿ ಜೈವಿಕ ಗೊಬ್ಬರಗಳ ಬಳಕೆ ಮತ್ತು ವರ್ಮಿಕಂಪೋಸ್ಟ್, ಜೀವಾಮೃತ, ಪಂಚಗವ್ಯ, ನೀಂ ಕೇಕ್, ಹೊಂಗೆ ಕೇಕ್, ಟ್ರೈಕೋಡರ್ಮಾ ಇವುಗಳನ್ನು ಬಳಸಿ ಮಣ್ಣಿನ ಆರ್ಗಾನಿಕ್ ಕಾರ್ಬನ್, ಜೀವ ವೈವಿಧ್ಯತೆಯನ್ನು ಹೆಚ್ಚಿಸಬಹುದು ಎಂದು ತಿಳಿಸಲಾಯಿತು. ಸೂಕ್ಷ್ಮ ಪೋಷಕಾಂಶಗಳ ಮಹತ್ವವನ್ನು ವಿವರಿಸಿ, “ಹಿಡನ್ ಹಂಗರ್” ಸಮಸ್ಯೆಯನ್ನುತಪ್ಪಿಸಲು ಮತ್ತು ಸಮತೋಲನ ಪೋಷಣೆಯನ್ನುಒದಗಿಸಲು ಮಾಹಿತಿ ನೀಡಲಾಯಿತು. ಪೊನ್ನಂಪೇಟೆತಾಲೂಕು ಸಹಾಯಕ ಕೃಷಿ ನಿರ್ದೇಶಕದೊರೈರಾಜ್, ಕೊಡಗು ಕೃಷಿ ಇನ್‍ಪುಟ್‍ಡೀಲರ್ಸ್ ಸಂಘದಅಧ್ಯಕ್ಷ ನಂದಕುಮಾರ್, ಸೇರಿದಂತೆಕೇಂದ್ರದ ವಿಜ್ಞಾನಿಗಳು ಮತ್ತು ಸಿಬ್ಬಂದಿಗಳು ಇದ್ದರು.

Read More

ಮಡಿಕೇರಿ ಮೇ 1 NEWS DESK : ಪ್ರಾಚೀನ ಕೊಡವ ಸಾಂಪ್ರದಾಯಿಕ ಆವಾಸಸ್ಥಾನದ ಪ್ರಾದೇಶಿಕ ಮಿತಿಯೊಳಗೆ ಪ್ರತ್ಯೇಕ ಕೊಡವ ಪಾರ್ಲಿಮೆಂಟ್ ಮತ್ತು ಅಸೆಂಬ್ಲಿ ಕ್ಷೇತ್ರಗಳ ಸ್ಥಾಪನೆ, ಅಥವಾ ಪರ್ಯಾಯವಾಗಿ ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯದ “ಸಂಘ” ಚುನಾವಣಾ ಕ್ಷೇತ್ರದ ಮಾದರಿಯಲ್ಲಿ ಆದಿಮಸಂಜಾತ ಏಕ-ಜನಾಂಗೀಯ ಪ್ರಕೃತಿ ಆರಾಧಕ ಕೊಡವರಿಗಾಗಿ ಪ್ರತ್ಯೇಕ ಅಮೂರ್ತ ಕೊಡವ ಪಾರ್ಲಿಮೆಂಟ್ ಮತ್ತು ಅಸೆಂಬ್ಲಿ ಕ್ಷೇತ್ರಗಳನ್ನು ರಚಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆಯಲು ಕಾವೇರಿ ನದಿಯ ಉಗಮಸ್ಥಾನ ತಲಕಾವೇರಿಯಿಂದ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಭಿಯಾನವನ್ನು ಆರಂಭಿಸಿತು. ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ತಲಕಾವೇರಿಯಲ್ಲಿ ಧಾರ್ಮಿಕ ಪ್ರಾರ್ಥನೆ ಸಲ್ಲಿಸಿ ಕೊಡವರ ಸಾಂವಿಧಾನಿಕ ಉದ್ದೇಶಕ್ಕಾಗಿ ದೈವಿಕ ಆಶೀರ್ವಾದವನ್ನು ಕೋರಿದ ಸದಸ್ಯರು ಮಾನವ ಸರಪಳಿ ಮೂಲಕ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಸಿಎನ್‍ಸಿ ಬೇಡಿಕೆಗಳ ಕುರಿತು ಆಡಳಿತ ವ್ಯವಸ್ಥೆಯ ಗಮನ ಸೆಳೆಯಲು ಮೇ 12 ರಿಂದ 48 ಗಂಟೆಗಳ ಹಗಲು-ರಾತ್ರಿ ಶಾಂತಿಯುತ ಸತ್ಯಾಗ್ರಹವನ್ನು ನಡೆಸಲಾಗುವುದು ಎಂದು ಎನ್.ಯು.ನಾಚಪ್ಪ ತಿಳಿಸಿದರು.…

Read More

ಮಡಿಕೇರಿ NEWS DESK ಮೇ 1 : ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಜಂಬೂರು ಗ್ರಾಮದ ಶ್ರೀ ಮುತ್ತಪ್ಪನ್ ಸೇವಾ ಸಮಿತಿ ವತಿಯಿಂದ ಮೇ 2 ರಂದು ಶ್ರೀ ಮುತ್ತಪ್ಪನ್ ದೇವರ ವೆಳ್ಳಾಟಂ (ಕೋಲ) ಜರುಗಲಿದೆ. ಸಂಜೆ 4 ಗಂಟೆಗೆ ಮುತ್ತಪ್ಪ ದೇವರ ಮಲೆ ಇಳಿಸುವುದು, 6 ಗಂಟೆಗೆ ಮುತ್ತಪ್ಪ ದೇವರ ವೆಳ್ಳಾಟಂ (ಕೋಲ) ಹಾಗೂ 8 ಗಂಟೆಗೆ ಅನ್ನದಾನ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಎನ್.ಸಿ.ಸುದರ್ಶನ್ ತಿಳಿಸಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳುವಂತೆ ಮನವಿ ಮಾಡಿದ್ದಾರೆ.

Read More

ಕುಶಾಲನಗರ ಏ.30 NEWS DESK : ಆರ್ಯವೈಶ್ಯ ಕುಲದೇವತೆ ಶ್ರೀಮದ್ ವಾಸವಿ ಕನ್ನಿಕಾಪರಮೇಶ್ವರಿ ದೇವಿಯ ಜಯಂತಿಯ ಅಂಗವಾಗಿ ವಾಸವಿ ಮಾತೆಗೆ 13 ದಂಪತಿಗಳು ಪುಷ್ಪಾರ್ಚನೆ ನೆರವೇರಿಸಿದರು. ಕುಶಾಲನಗರದ ರಥಬೀದಿಯಲ್ಲಿ ಇರುವ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ಯಕ್ರಮ ವಾಸವಿ ದೀಕ್ಷಾ ಸಮಿತಿ ನೇತೃತ್ವದಲ್ಲಿ ಜರುಗಿತು. ಇದೇ ವೇಳೆ ದೀಕ್ಷಾ ಸಮಿತಿ ಅಧ್ಯಕ್ಷ ಕೆ.ಜೆ.ಚಿನ್ನಸ್ವಾಮಿ ಮಾತನಾಡಿ, ಪ್ರತಿ ವರ್ಷವೂ ಕುಶಾಲನಗರದ ಎಲ್ಲ ಆರ್ಯವೈಶ್ಯ ಕುಲಭಾಂದವರು ತಮ್ಮ ವ್ಯಾಪಾರ ವಹಿವಾಟು ಬಂದ್ ಮಾಡಿ ಶ್ರದ್ಧಾಭಕ್ತಿಯಿಂದ ಆಚರಣೆ ಮಾಡುತ್ತೇವೆ. 7 ದಿನಗಳು ದೇವಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಅದೇ ರೀತಿ ನಮ್ಮ ಸಮಿತಿಯಿಂದ ದೇವಿಗೆ ದಂಪತಿಗಳಿಂದ ವಿಶೇಷ ಪೂಜೆ ಸಲ್ಲಿಸಲಾಗಿದೆ. ಇದಕ್ಕೆ ಆರ್ಯವೈಶ್ಯ ಮಂಡಳಿ ಮತ್ತು ಇತರೇ ಸಂಘಗಳ ಪದಾಧಿಕಾರಿಗಳು ಸಹಕಾರ ನೀಡಿದ್ದಾರೆ. ವಾಸವಿ ದೀಕ್ಷಾ ಸಮಿತಿಯ ಕಾರ್ಯದರ್ಶಿ ಬಿ.ಎಲ್.ಸತೀಶ್, ಖಾಜಾಂಚಿ ವಾಣಿಶ್ರೀ, ನಿರ್ದೇಶಕರಾದ ಡಿ.ಎಸ್.ರಮೇಶ್, ವಿ.ಆರ್. ಮಂಜುನಾಥ್, ಎಸ್.ಎಂ.ಸತೀಶ್, ಬಿ.ಪಿ.ಕೃಷ್ಣಮೂರ್ತಿ, ಕೆ.ಎಸ್.ನಾಗೇಶ್, ನಾಗಮಣಿ ಮತ್ತು ಕುಲಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Read More

ಬೆಂಗಳೂರು, ಏ.30 NEWS DESK : ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ಭಾರತದ ಸರ್ವೋಚ್ಛ ನ್ಯಾಯಾಲಯ ‘ಸಮಾಧಾನ ಸಮಾರೋಹ-2026’ ಎಂಬ ವಿಶೇಷ ಲೋಕ ಅದಾಲತ್‍ನ್ನು ಆಗಸ್ಟ್ 21, 22 ಮತ್ತು 23 ರಂದು ಮೂರು ದಿನಗಳ ಕಾಲ ಹಮ್ಮಿಕೊಂಡಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಅನು ಸಿವರಾಮನ್ ತಿಳಿಸಿದರು. ಇಂದು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸುಪ್ರೀಂ ಕೋರ್ಟ್ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಒಟ್ಟು 4,328 ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ಸಂಧಾನಕ್ಕಾಗಿ ಗುರುತಿಸಿ ಈ ವಿಶೇಷ ಲೋಕ ಅದಾಲತ್ ಆಯೋಜಿಸಿದ್ದು, ಆಸಕ್ತಿವುಳ್ಳವರು ಸುಪ್ರೀಂ ಕೋರ್ಟ್‍ನಲ್ಲಿ ಬಾಕಿ ಇರುವ ತಮ್ಮ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ನೋಂದಣಿಗೆ ಸಹ ಅವಕಾಶ ಕಲ್ಪಿಸಲಾಗಿದೆ. ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಸಂಪರ್ಕಿಸುವ ಮೂಲಕ ಸಾರ್ವಜನಿಕರು ತಮ್ಮ…

Read More