ಮಡಿಕೇರಿ ಜು.20 : 2022-23 ನೇ ಸಾಲಿನಲ್ಲಿ ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿ ಸಾರ್ವತ್ರಿಕ ಪರೀಕ್ಷೆಗಳಲ್ಲಿ ಗರಿಷ್ಠ ಅಂಕಗಳನ್ನು ಪಡೆದ ಕರ್ನಾಟಕ ಮೂಲ ನಿವಾಸಿ ಮಾಜಿ ಸೈನಿಕರ ಮಕ್ಕಳಿಗೆ ‘ಜನರಲ್ ಕೆ.ಎಸ್.ತಿಮ್ಮಯ್ಯ’ ನಗದು ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್, 31 ಕೊನೆಯ ದಿನವಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಲೇಖಕ: admin
ಮಡಿಕೇರಿ ಜು.20 : ಕನ್ನಡ ಸಾಹಿತ್ಯ ಪರಿಷತ್ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಕನ್ನಡ ಪರವಾದ ಕೆಲಸಗಳು ನಡೆಯಲಿದೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕ ಡಾ.ಶ್ರೀಧರ್ ಹೆಗಡೆ ಹೇಳಿದರು. ನಗರದ ಪತ್ರಿಕಾಭವನದಲ್ಲಿ ನಡೆದ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೊಡಗಿನಲ್ಲಿರುವ ಪ್ರಾಕೃತಿಕ ಸಂಪತ್ತನ್ನು ದಾಖಲೀಕರಣ ಮಾಡುವ ಕೆಲಸವಾಗಬೇಕು ಎಂದು ಸಲಹೆ ನೀಡಿದ ಅವರು, ಮಾತೃಭಾಷೆಯಾದ ಕನ್ನಡಕ್ಕೆ ಮೊದಲ ಆದ್ಯತೆ ಸಿಗುವಂತಾಗಬೇಕು ಎಂದು ನುಡಿದರು. ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಜಿಲ್ಲಾ ಕಸಾಪದಲ್ಲಿ ಸದಸ್ಯತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪರಿಷತ್‍ನ ಪದಾಧಿಕಾರಿಗಳು ಸದಸ್ಯರು ಸಹಕಾರ ನೀಡಬೇಕು ಎಂದು ಹೇಳಿದರು. ನೂತನ ಅಧ್ಯಕ್ಷರಿಗೆ ನಿಕಟಪೂರ್ವ ಅಧ್ಯಕ್ಷ ಅಂಬೆಕಲ್ ನವೀನ್ ಅಧಿಕಾರ ಹಸ್ತಾಂತರಿಸಿದರು. ಮಡಿಕೇರಿ ತಾಲೂಕು ಕಸಾಪ ಅಧ್ಯಕ್ಷರಾಗಿ ಕಡ್ಲೇರ ತುಳಸಿ ಮೋಹನ್, ಗೌರವ ಕಾರ್ಯದರ್ಶಿಗಳಾದ ಪುದಿಯನೆರವನ ರಿಷಿತ್ ಮಾದಯ್ಯ, ಬಾಳೆಯಡ ದಿವ್ಯ ಮಂದಪ್ಪ, ಗೌರವ ಕೋಶಾಧಿಕಾರಿ ಸಿದ್ದರಾಜು ಬೆಳ್ಳಯ್ಯ,…
ಮಡಿಕೇರಿ ಜು.20 : ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಮತ್ತು ಪದವಿ ಮಟ್ಟದ ಕೊಡವ ಸಂಯುಕ್ತ ಅಧ್ಯಯನ ಮಂಡಳಿಯನ್ನು ರಚಿಸಲಾಗಿದೆ. ಇದರ ಅಧ್ಯಕ್ಷರಾಗಿ ಮಂಗಳೂರಿನ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಡಾ. ಎಂ.ಎಂ.ಮೀನಾಕ್ಷಿ, ಸದಸ್ಯರುಗಳಾಗಿ ಮೈಸೂರು ಯುವರಾಜ ಕಾಲೇಜಿನಲ್ಲಿ ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾಗಿರುವ ಡಾ.ರೇಖಾವಸಂತ್, ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಕಾವೇರಿಯಪ್ಪ, ನಾಪೋಕ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಕಾವೇರಿ ಪ್ರಕಾಶ್ ಹಾಗೂ ಕಾವೇರಿ ಕಾಲೇಜಿನ ಸಹಾಯಕ ಪ್ರಾದ್ಯಾಪಕರಾದ ಎಆ.ರೇವತಿ ಪೂವಯ್ಯ ಅವರುಗಳನ್ನು ನೇಮಕ ಮಾಡಲಾಗಿದೆ. ಇವರುಗಳನ್ನು ಮುಂದಿನ ಮೂರು ವರ್ಷಗಳ ಅವಧಿಗೆ ನೇಮಿಸಿ ಕುಲಸಚಿವರು ಆದೇಶ ಹೊರಡಿಸಿದ್ದಾರೆ.
ಕುಶಾಲನಗರ ಜು.20 : ಕೂಡುಮಂಗಳೂರು ಗ್ರಾ.ಪಂ ನ ಕೂಡ್ಲೂರು ವಾರ್ಡ್ ನಲ್ಲಿ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಆರ್.ಸುರೇಶ್ ಪರವಾಗಿ ಮತ ಪ್ರಚಾರ ನಡೆಸಲಾಯಿತು. ಕೂಡುಮಂಗಳೂರು ಗ್ರಾ.ಪಂ ನ ಕೂಡ್ಲೂರು ವಾರ್ಡ್ ನ ಕುಮಾರ್ ಎಂಬುವವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಆರ್.ಸುರೇಶ್ ಸ್ಪರ್ಧಿಸಿದ್ದಾರೆ. ಕೆ.ಆರ್.ಸುರೇಶ್ ಅವರ ಪರವಾಗಿ ಕೂಡುಮಂಗಳೂರು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್ ಹಾಗೂ ಪ್ರಮುಖರಿಂದ ಬಿರುಸಿನ ಪ್ರಚಾರ ನಡೆಯಿತು. ಈ ಸಂದರ್ಭ ಮಾತನಾಡಿದ ಸದಸ್ಯ ಕೆ.ಬಿ.ಶಂಶುದ್ಧೀನ್, ಕೂಡ್ಲೂರು ಎಸ್.ಟಿ ಮೀಸಲಾತಿಯ ಸ್ಥಾನಕ್ಕೆ ಕೆ.ಆರ್.ಸುರೇಶ್ ಅವರು ಕಣದಲ್ಲಿದ್ದಾರೆ. ಇವರ ಪರವಾಗಿ ಮತಪ್ರಚಾರ ನಡೆಸಲಾಯಿತು. ಯುವ ಉತ್ಸಾಹಿ, ಸ್ಥಳೀಯರು ಕೂಡಾ ಆಗಿರುವ ಕೆ.ಆರ್.ಸುರೇಶ್ ಅವರು ಸಾಮಾಜಿಕ ಸೇವಾ ಮನೋಭಾವನೆಯುಳ್ಳ ವ್ಯಕ್ತಿಯಾಗಿದ್ದಾರೆ. ಸಾರ್ವಜನಿಕರು ತಮ್ಮ ಮತವನ್ನು ನೀಡಿ ಜಯಶಾಲಿಯನ್ನಾಗಿಸಲಿದ್ದು, ಕೆ.ಆರ್.ಸುರೇಶ್ ಅವರ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಆರ್.ಸುರೇಶ್ ಮಾತನಾಡಿ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ತಮ್ಮ…
ಶ್ರೀ ರಾಮೇಶ್ವರ ದೇವಾಲಯವು ತೀರ್ಥಹಳ್ಳಿಯ ಪ್ರಮುಖ ಹಿಂದೂ ದೇವಾಲಯವಾಗಿದೆ. ಇದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನಲ್ಲಿದೆ. ಈ ದೇವಾಲಯವು ಕಲ್ಲಿನಿಂದ ಮಾಡಲ್ಪಟ್ಟಿದೆ ಮತ್ತು ತುಂಗಾ ನದಿಯ ದಡದಲ್ಲಿದೆ. ಇದು ಪರಶುರಾಮ ತೀರ್ಥದ ಬಳಿ ಇದೆ. ದೇವಾಲಯದ ಗರ್ಭಗುಡಿಯು ಋಷಿ ಪರಶುರಾಮರಿಂದ ಸ್ಥಾಪಿಸಲ್ಪಟ್ಟ ಲಿಂಗವನ್ನು ಹೊಂದಿದೆ ಮತ್ತು ಆದ್ದರಿಂದ ದೇವಾಲಯವನ್ನು ಪರಶುರಾಮ ತೀರ್ಥವೆಂದು ಪರಿಗಣಿಸಲಾಗಿದೆ. ಪುರಾಣ :: ಪುರಾಣ ದಲ್ಲಿ ಉಲ್ಲೇಖಗೊಂಡಂತೆ ರೇಣುಕಾದೇವಿಯ ಮೋಹದ ಕಾರಣದಿಂದಾಗಿ ಮಡಕೆ ಮಾಡುವುದು ಅಸಾಧ್ಯವಾಗುತ್ತದೆ. ಇದನ್ನು ತನ್ನ ದಿವ್ಯದೃಷ್ಠಿಯಿಂದ ಅರಿತ ಜಮದಗ್ನಿ ಮಹರ್ಷಿಯು ತನ್ನ ಮಕ್ಕಳನ‍್ನು ಕರೆದು ಆಕೆಯನ್ನು ಸಂಹರಿಸುವಂತೆ ತಿಳಿಸುತ್ತಾನೆ. ಆಗ ಮಾತೃಹತ್ಯೆ ಪಾಪ ಎಂದು ಅರಿತ ಸುತರು ತಂದೆ ನುಡಿದದ್ದನ್ನು ಅನುಸರಿಸಲು ನಿರಾಕರಿಸಿದಾಗ ಕೋಪಗೊಂಡ ಜಮದಗ್ನಿಯು ತನ್ನ ಕೊಪದ ಜ್ವಾಲೆಯಿಂದ ಮಕ್ಕಳನ್ನು ಸುಡುತ್ತಾನೆ. ನಂತರ ತನ್ನ ಕೊನೆಯ ಮಗನಾದ ಪರಶುರಾಮನನ್ನು ಕರೆದು ಆಕೆಯನ್ನು ಸಂಹರಿಸಲು ತಿಳಿಸುತ್ತಾನೆ. ತಂದೆಯ ಆಜ್ಞೆಯನ್ನು ಪರಶುರಾಮ ಪಾಲಿಸಲು ಸಮ್ಮತಿಸುತ್ತಾನೆ. ತಾಯಿ ರೇಣುಕಾದೇವಿಯ ಶಿರಸ್ಸನ್ನು ತನ್ನ ಪರಶುವಿನಿಂದ ಛೇದಿಸುತ್ತಾನೆ. ತಂದೆಯ ಕೋಪವನ್ನು…
ಸಿರಿಮನೆ ಜಲಪಾತ: ಸಿರಿಮನೆ ಜಲಪಾತವು ಪಶ್ಚಿಮ ಘಟ್ಟದ ಜನಪ್ರಿಯ ಜಲಪಾತವಾಗಿದೆ, ಇದು ಚಿಕ್ಕಮಗಳೂರು ಜಿಲ್ಲೆಯ ಶ್ರಿಂಗೇರಿ ಶಾರದಾಂಬ ದೇವಾಲಯದಿಂದ ಸುಮಾರು 18 ಕಿ.ಮೀ ದೂರದಲ್ಲಿದೆ. ಸಿರಿಮನೆ ಜಲಪಾತದ ಸಮೀಪ ತಲುಪಲು ರಸ್ತೆ ಇದೆ. ಜಲಪಾತಕ್ಕೆ ಹತ್ತಿರ ಇರುವ ಹಳ್ಳಿಯ ಹೆಸರು ಕಿಗ್ಗಾ (ಸಿರಿಮನೆ ಜಲಪಾತದಿಂದ 5 ಕಿ.ಮೀ). ಸಿರಿಮನೆ ಜಲಪಾತ ಸುಮಾರು 40 ಅಡಿ ಎತ್ತರವಿದೆ. ಜಲಪಾತದ ಬುಡದಲ್ಲಿ ಇರುವ ಕೊಳದ ಆಳವು ಕಡಿಮೆ, ಆದ್ದರಿಂದ ಸಿರಿಮನೆ ಜಲಪಾತ ಸ್ನಾನ ಮಾಡಲು ಸುರಕ್ಷಿತವಾಗಿದೆ (ಮಳೆಗಾಲದಲ್ಲಿ ನೀರಿನ ಪ್ರಮಾಣ ತುಂಬಾ ಹೆಚ್ಚಿರುವುದರಿಂದ ತೀರಾ ಹತ್ತಿರ ಹೋಗದಿರುವುದು ಒಳ್ಳೆಯದು) ಸಿರಿಮನೆ ಜಲಪಾತವು ದೊಡ್ಡ ಗುಂಪುಗಳಿಗೆ ಏಕಕಾಲದಲ್ಲಿ ಸ್ಥಳಾವಕಾಶ ಕಲ್ಪಿಸುವಷ್ಟು ಅಗಲವಿದೆ. ಶೃಂಗೇರಿ, ಹೊರನಾಡು ದೇವಾಲಯಗಳಿಗೆ ಭೇಟಿ ನೀಡುವ ಹೆಚ್ಚಿನ ಭಕ್ತರು ಸಿರಿಮನೆ ಜಲಪಾತಕ್ಕೂ ಭೇಟಿ ನೀಡುತ್ತಾರೆ. ಸಮಯ: ಸಿರಿಮನೆ ಜಲಪಾತ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ. ಹತ್ತಿರ: ಅಗುಂಬೆ (41 ಕಿ.ಮೀ), ಶೃಂಗೇರಿ ದೇವಾಲಯಗಳು (17 ಕಿ.ಮೀ), ಕುಂದಾದ್ರಿ (40…
ಮಡಿಕೇರಿ ಜು.20 : ಸಿದ್ದಾಪುರ-ಪಾಲಿಬೆಟ್ಟ ರಸ್ತೆಯಲ್ಲಿ ರಾತ್ರಿವೇಳೆ ಕಾಡಾನೆಯೊಂದು ಸಂಚರಿಸುವ ಮೂಲಕ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ರಾತ್ರಿ ವೇಳೆ ಒಂಟಿ ಸಲಗ ಸಿದ್ದಾಪುರ ಪಾಲಿಬೆಟ್ಟ ರಸ್ತೆಯಲ್ಲಿ ತೆರಳುತ್ತಿರುವ ದೃಶ್ಯ ಗ್ಯಾರೇಜ್ ಒಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೇ ಮಾರ್ಗವಾಗಿ ವಾಹನ ತೆರಳುವುದರಿಂದ ಅರಣ್ಯ ಇಲಾಖೆ ತಕ್ಷಣವೇ ಆನೆಗಳನ್ನು ಕಾಡಿಗಟ್ಟುವಂತೆ ಗ್ರಾಮಸ್ಥರಾದ ಅನಿಲ್ ಒತ್ತಾಯಿಸಿದ್ದಾರೆ. ವರದಿ : ಸುರೇಶ ಗುಹ್ಯ
ಮಡಿಕೇರಿ ಜು.20 : ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 42.61 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 3.69 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 986.44 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1826.92 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 32.18 ಮಿ.ಮೀ. ಕಳೆದ ವರ್ಷ ಇದೇ ದಿನ 6.25 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1518.21 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2543.43 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 35.12 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 4.53 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 700.46 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1451.06 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 60.53 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 0.30 ಮಿ.ಮೀ.…
ಮಡಿಕೇರಿ ಜು.20 : ನೆಲ್ಲಿಹುದಿಕೇರಿಯ ಬೆಟ್ಟದಕಾಡು ಗ್ರಾಮದಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಜೂಜಾಟ ನಡೆಸುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಹಿನ್ನೆಲೆ ದಾಳಿ ನಡೆಸಿದ ಪೊಲೀಸರು ನಗದು ಸಹಿತ ಆರೋಪಿಗಳನ್ನು ವಶಕ್ಕೆ ಪಡೆದರು.
ಮಡಿಕೇರಿ ಜು.20 : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣೆ ಮತ್ತು ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ರೀಲ್ಸ್ ಸ್ಪರ್ಧೆ ಆಯೋಜಿಸಲಾಗಿದೆ. ಇದಕ್ಕೆ ‘ ಮುಂಗಾರಿನ ಸಂಭ್ರಮ ‘ ಎಂಬ ವಿಷಯ ವಸ್ತು ನೀಡಲಾಗಿದೆ. ರೀಲ್ಸ್ ಅವಧಿ ಒಂದು ನಿಮಿಷ ಮೀರುವಂತಿಲ್ಲ. ಒಬ್ಬರು ಎಷ್ಟು ರೀಲ್ಸ್ ಬೇಕಾದರು ಕಳುಹಿಸಬಹುದಾಗಿದೆ. ಪ್ರಥಮ ಬಹುಮಾನ 3000 ರೂ, ದ್ವಿತೀಯ 2000 ರೂ ತೃತೀಯ 1000 ರೂ ನೀಡಲಾಗುತ್ತದೆ. ರೀಲ್ಸ್ ವೀಡಿಯೋ ಲಂಬ(vertical) ಆಕಾರದಲ್ಲಿರಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವವರು ಹೆಸರು ವಯಸ್ಸು ಊರಿನ ವಿವರಗಳ ಸಮೇತ 8310826979 ನಂಬರ್ ಗೆ ವಾಟ್ಸ್ಆ್ಯಪ್ ಮಾಡಬೇಕು. ರೀಲ್ಸ್ ಕಳುಹಿಸಲು ಆ.10 ಕೊನೆಯ ದಿನವಾಗಿರುತ್ತದೆ. ರೀಲ್ಸ್ ಅನ್ನು 8310826979 ಗೆ ವಾಟ್ಸ್ ಮಾಡಬಹುದು. ಅಥವಾ kodagupressclub.drushyam@gmail.com ಗೆ ಇ-ಮೇಲ್ ಮಾಡಬಹುದು ರೀಲ್ಸ್ ಗಳ ಪ್ರದರ್ಶನ ಮತ್ತು ಬಹುಮಾನ ವಿತರಣಾ ಸಮಾರಂಭ ವಿಶ್ವ ಛಾಯಾಗ್ರಹಣ ದಿನವಾದ ಆಗಸ್ಟ್ 19 ರಂದು ಮಡಿಕೇರಿಯ ನೂತನ ಗಾಂಧಿಭವನ ಸಭಾಂಗಣದಲ್ಲಿ ನಡೆಯಲಿದೆ.…






