ಲೇಖಕ: admin

ಮಡಿಕೇರಿ ಸೆ.10 : ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ನಗರದ ಮೈಸೂರು ರಸ್ತೆಯ ಚೈನ್ ಗೇಟ್ ಬಳಿ ನಡೆದಿದೆ. ಮಡಿಕೇರಿಯಿಂದ ಹಾಸನಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿಯಾಗಿ ಕಾರು ಚಾಲಕ ಹಾಗೂ ಜೊತೆಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಸ್ಥಳಕ್ಕೆ ನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಮಡಿಕೇರಿ ಸೆ.10 : ಮೈಸೂರಿನ ಜಗನ್ ಮೋಹನ ಪ್ಯಾಲೇಸ್‌ನಲ್ಲಿ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ತಂಡ ದ್ವಿತೀಯ ಸ್ಥಾನ ಗಳಿಸಿದೆ. ಡಿವೈನ್ ಡ್ಯಾನ್ಸ್ ಅಕಾಡೆಮಿ ಪುನೀತ್ ರಾಜಕುಮಾರ್ ಸ್ಮರಣಾರ್ಥ ನಡೆಸಿದ ಸ್ಪರ್ಧೆ ಹಾಗೂ ಮಂಜುಶ್ರೀ ಸ್ಟೆಪ್ಸ್ ನಡೆಸಿದ ಎರಡೂ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಕಿಂಗ್ಸ್ ಆಫ್ ಕೂರ್ಗ್ ತಂಡ ಸಬ್ ಜೂನಿಯರ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ನೃತ್ಯ ಸಂಸ್ಥೆಯ ತರಬೇತುದಾರರಾದ ಮಹೇಶ್ ಹಾಗೂ ಕಿರಣ್ ಅವರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಕನ್ನಿಕೆ, ಮೊಶಿಕಾ, ಯಶಿಕಾ, ಶ್ರೇಯ, ರಿಯಾಂಕ, ಒಸಿನ್, ಪ್ರಜ್ವಲ್, ಮುತ್ತಮ್ಮ, ಸೋನಾಕ್ಷಿ, ಶ್ರೀರಕ್ಷಾ, ಯಾದ್ವಿತಾ, ಕಿಶನ್, ದೀಪಿಕ್ಷಾ, ವಿಸ್ಮಯ, ಪ್ರೇಕ್ಷಿತಾ, ನಿರನ್ ಹಾಗೂ ಇಶಾಂತ್ ನೃತ್ಯ ಪ್ರದರ್ಶನ ಮಾಡಿದರು.

Read More

ಮಡಿಕೇರಿ ಸೆ.10 : ಹೈದರಾಬಾದ್ ನ ಜ್ವಾಲಾಗುಟ್ಟ ಕ್ರೀಡಾಂಗಣದಲ್ಲಿ ಸೆ.14 ರಿಂದ 19 ರವರೆಗೆ ನಡೆಯುವ 35 ನೇ ಜೂನಿಯರ್ ರಾಷ್ಟ್ರೀಯ ಬಾಡ್ಮಿಂಟನ್ ಪಂದ್ಯಾವಳಿಗೆ ಕೊಡಗಿನ ಬೊಪ್ಪಂಡ ದಿಯಾ ಭೀಮಯ್ಯ ಆಯ್ಕೆಯಾಗಿದ್ದಾರೆ. 17 ವರ್ಷದೊಳಗಿನ ಸಿಂಗಲ್ಸ್ ಮತ್ತು ಡಬಲ್ಸ್ ನಲ್ಲಿ ದಿಯಾ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ. ಮಡಿಕೇರಿ ನಗರದ ದೇಚೂರಿನ ಬೊಪ್ಪಂಡ ಕುಸುಮ ಹಾಗೂ ಭೀಮಯ್ಯ ಅವರ ಪುತ್ರಿಯಾಗಿರುವ ಈಕೆ ಮೈಸೂರಿನ ಪ್ರಗತಿ ಎಲೈಟ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ. ಮೈಸೂರಿನ ಸ್ಪೋರ್ಟ್ಸ್ ಪಾರ್ಕ್ ನಲ್ಲಿ ಮೇದುರ ಅರುಣ್ ಪೆಮ್ಮಯ್ಯ ಹಾಗೂ ಬಿ.ಪಿ.ಭೀಮಯ್ಯ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

Read More

ಮಡಿಕೇರಿ ಸೆ.10 : ಅರಪಟ್ಟುವಿನ ಪಾಂಡಂಡ ಐನ್ ಮನೆಯಲ್ಲಿ ಕೈಲ್ ಪೊಳ್ದ್ ಸಂಭ್ರಮದಿಂದ ನಡೆಯಿತು. ಕೊಡವ ಸಾಂಪ್ರದಾಯಿಕ ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಮಕ್ಕಳಿಗೆ ಬಲೂನ್ ಹೊಡೆಯುವ ಸ್ಪರ್ಧೆ ಸೇರಿದಂತೆ ವೈವಿಧ್ಯಮಯ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪಾಂಡಂಡ ಕುಟುಂಬದ ಪಟ್ಟೆದಾರ ಪಾಂಡಂಡ ಮೊಣ್ಣಪ್ಪ, ಅಧ್ಯಕ್ಷ ಪಾಂಡಂಡ ಉಮೇಶ್ ಚಂಗಪ್ಪ, ಕುಟುಂಬದ ಹಿರಿಯರಾದ ಪಾಂಡಂಡ ಕಿಟ್ಟು ಅಯ್ಯಣ್ಣ ಮಾತನಾಡಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪಾಂಡಂಡ ವಿನಿತಾ ಚಂಗಪ್ಪ ರವರು ನಿರೂಪಿಸಿದರು. ಪಾಂಡಂಡ ಕುಟುಂಬದ ಸದಸ್ಯರೆಲ್ಲರು ಉಪಸ್ಥಿತರಿದ್ದರು.

Read More

ಸುಂಟಿಕೊಪ್ಪ ಸೆ.10 : ಗೌರಿ ಗಣೇಶ ಹಬ್ಬದ ಹಿನ್ನೆಲೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಉತ್ಸವ ಸಮಿತಿಗಳು ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಪಾಲಿಸಬೇಕು. ನಿಯಮ ಮೀರಿದರೆ ಮತ್ತು ಅನಾಹುತ ಸಂಭವಿಸಿದರೆ ಸಂಬಂಧಿಸಿದ ಆಯೋಜಕರೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಕುಶಾಲನಗರ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್ ಎಚ್ಚರಿಕೆ ನೀಡಿದ್ದಾರೆ. ಸುಂಟಿಕೊಪ್ಪದ ಗುಂಡುಗುಟ್ಟಿ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಶ್ರೀಗೌರಿ ಗಣೇಶ ಆಚರಣಾ ಸಮಿತಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಧಾರ್ಮಿಕ ಸಂಪ್ರದಾಯ ಆಚರಣೆಯೊಂದಿಗೆ ಮಾರ್ಗಸೂಚಿಗಳನ್ನು ಪಾಲಿಸುವುದು ಕೂಡ ಮುಖ್ಯ ಎಂದರು. ಉತ್ಸವ ಸಮಿತಿಗಳು ಪೊಲೀಸ್ ಠಾಣೆ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಂಡಿರಬೇಕು. ಮುಂಜಾಗೃತಾ ಕ್ರಮವಾಗಿ ಮತ್ತು ಕಿಡಿಗೇಡಿಗಳ ಬಗ್ಗೆ ಎಚ್ಚರದಿಂದಿರಲು ಶ್ರೀಗೌರಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸಿಸಿ ಕ್ಯಾಮರ ಅಳವಡಿಸಬೇಕು. ವಿದ್ಯುತ್ ಅಳವಡಿಸುವಾಗ ಸೂಕ್ಷ್ಮತೆ ಗಮನಿಸಿ ಎಚ್ಚರ ವಹಿಸಬೇಕು. ಸಮಿತಿಯ ಇಬ್ಬರು ಪದಾಧಿಕಾರಿಗಳನ್ನು ಕಾವಲಿಗೆ ಇರಿಸಬೇಕು. ಸ್ಥಳದ ಪೂರ್ವಾಪರ ಮಾಹಿತಿ ಪಡೆದಿರಬೇಕು, ಮೂರ್ತಿ ವಿಸರ್ಜನೆಯ ವೇಳೆ…

Read More

ಮಡಿಕೇರಿ ಸೆ.10 : ಮಡಿಕೇರಿ ನಗರದ ಬ್ರಾಹ್ಮಣರ ಬೀದಿಯ ನಿವಾಸಿ, ವರ್ತಕ ಪಿ.ಕೆ.ಭಟ್ಟ(71) ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಕಳೆದ ಅನೇಕ ದಶಕಗಳಿಂದ ನಗರದಲ್ಲಿ ವರ್ತಕರಾಗಿದ್ದ ಪಿ.ಕೆ.ಭಟ್ ಅವರು ಇತ್ತೀಚೆಗೆ ಅನಾರೋಗ್ಯದ ಹಿನ್ನೆಲೆ ಬೆಂಗಳೂರಿನಲ್ಲಿ ಇದ್ದರು. ನಗರದ ವರ್ತಕ ವೃಂದ ಭಟ್ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ.

Read More

ಮಡಿಕೇರಿ ಸೆ.10 : ಸರಕಾರಿ ಉದ್ಯೋಗಿಗಳ ನೂತನ ಪಿಂಚಣಿ ನೀತಿಯನ್ನು ತೆಗೆದು ಅದರಲ್ಲೂ ವಿಶೇಷವಾಗಿ ಶಿಕ್ಷಣ ಕ್ಷೇತ್ರದ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ನೀತಿಯನ್ನೇ ಮುಂದುವರೆಸುವಂತೆ ಮಾಡಲು ಸಕ್ರಿಯವಾಗಿ ಪ್ರಯತ್ನಿಸುತ್ತಿರುವುದಾಗಿ ಕೊಡಗು ಮಂಗಳೂರು ಶಿಕ್ಷಕ ಕ್ಷೇತ್ರದ ಶಾಸಕ ಭೋಜೇಗೌಡ ತಿಳಿಸಿದ್ದಾರೆ. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿಗೆ ಭೇಟಿ ನೀಡಿ ಶೈಕ್ಷಣಿಕ ಪ್ರಗತಿ ಪರಿಶೀಲನೆ ನಡೆಸಿದ ಅವರು ಖಾಯಂ ಹಾಗೂ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಆಲಿಸಿದರು. ಕೊಡಗು ವಿಶ್ವವಿದ್ಯಾನಿಲಯಕ್ಕೆ ಸೇರಲು ಇಚ್ಛಿಸುವ ಅಧ್ಯಾಪಕರಿಗೆ ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರೆಸುವಂತೆ ಸರಕಾರಕ್ಕೆ ಆಗ್ರಹಿಸಲಾಗುವುದು ಎಂದು ತಿಳಿಸಿದರು. ಕಾಲೇಜ್ ಗೆ ಶಾಸಕರ ನಿಧಿಯಿಂದ 5ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಪ್ಯೂರಿಫೈಯರ್ ಗಳನ್ನು ಒದಗಿಸುವುದಾಗಿ ಹೇಳಿದರು. ರಾಜಕೀಯ ಪೂರ್ವಗ್ರಹವಿಲ್ಲದೆ ಶಿಕ್ಷಣ ಕ್ಷೇತ್ರಕ್ಕೆ ತನ್ನ ಕೈಲಾದ ಸೇವೆ ಸಲ್ಲಿಸುವ ಪ್ರಯತ್ನವನ್ನು ತಾನು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅತಿಥಿ ಉಪನ್ಯಾಸಕರ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಉದ್ಯೋಗಿಗಳಿಗೆ ಔದ್ಯೋಗಿಕ ಭದ್ರತೆ ಒದಗಿಸುವ ಕುರಿತು ಸಮಾಲೋಚನೆ ನಡೆಸಲಾಗುವುದು…

Read More

ಮಡಿಕೇರಿ ಸೆ.10 : ವಿದ್ಯುತ್ ಸ್ಪರ್ಷಗೊಂಡು ಚೆಸ್ಕಾಂ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ವಿರಾಜಪೇಟೆಯ ಕುಟ್ಟಂದಿ ಗ್ರಾಮದಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಮಾರ್ನಾಲು ಮೂಲದ ಬಸವರಾಜ್ ತೆಗ್ಗಿ (27) ಎಂಬುವವರೇ ಮೃತ ದುರ್ದೈವಿ. ಇಂದು ಬೆಳಗ್ಗೆ ಕುಟ್ಟಂದಿ ಗ್ರಾಮದಲ್ಲಿ ಮನೆಯೊಂದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಷಗೊಂಡಿದೆ. ಘಟನೆಯಿಂದ ಬಸವರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಬಸವರಾಜ್ ಅವರು ಕಳೆದ 5 ವರ್ಷಗಳಿಂದ ವಿರಾಜಪೇಟೆ ಚೆಸ್ಕಾಂ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

Read More

ವಿರಾಜಪೇಟೆ ಸೆ.9 : ರಾಷ್ಟ್ರೀಯ ಅಂಚೆ ಸಪ್ತಾಹದ ಅಂಗವಾಗಿ ಸೆ.11 ರಿಂದ 23ರ ವರೆಗೆ ವಿರಾಜಪೇಟೆ ಅಂಜೆ ಕಚೇರಿಯಲ್ಲಿ ವಿಶೇಷ ಆಧಾರ್ ಮೇಳ ನಡೆಯಲಿದೆ. ಕೊಡಗು ಅಂಚೆ ಅಧೀಕ್ಷಕರು ನೂತನ ಕಂಪ್ಯೂಟರ್, ಬ್ರಾಡ್‍ಬ್ಯಾಂಡ್ ಒದಗಿಸಿಕೊಟ್ಟಿದ್ದು, ದಿನಂಪ್ರತಿ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಗೆಯ ವರೆಗೆ ಮೇಳ ನಡೆಯಲಿದೆ. ಸಾರ್ವಜನಿಕರು ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕಾರ್ಯವನ್ನು ಮಾಡಿಸಿಕೊಳ್ಳಲು ಕೋರಿದೆ.

Read More

ಮಡಿಕೇರಿ ಸೆ.9 : ಫೆಡರೇಶನ್ ಆಫ್ ಕೊಡವ ಸಮಾಜದ ವತಿಯಿಂದ ಕೈಲ್‍ಪೊಳ್ದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಬಾಳುಗೋಡು ಕೊಡವ ಸಮಾಜದಲ್ಲಿ ಕೊಡವ ಸಾಂಪ್ರಾದಯಿಕ ಆಯುಧ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಮಾಡಲಾಯಿತು. ನಂತರ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಬಾರದ ಗುಂಡು ಎಸೆಯುವುದು ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ಪೊಮ್ಮಕ್ಕಡ ವಿಭಾಗದ ಪದಾಧಿಕಾರಿಗಳು ಹಾಗೂ ಸದಸ್ಯರು ಹಬ್ಬಕ್ಕೆ ವಿಶೇಷ ಮೆರಗನ್ನು ತಂದುಕೊಟ್ಟರು. ಫೆಡರೇಶನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಖಜಾಂಚಿ ಚಿರಿಯಪಂಡ ಕಾಶಿಯಪ್ಪ, ಪೊಮ್ಮಕ್ಕಡ ವಿಭಾಗದ ಬಲ್ಲಣಮಾಡ ರೀಟಾ ದೇಚಮ್ಮ, ಪ್ರಮುಖರಾದ ಕಂಬೀರಂಡ ಕಿಟ್ಟು ಕಾಳಪ್ಪ, ಕೋಟೇರ ರಘು, ಬೊಳಿಯಂಗಡ ದಾದೂ ಪೂವಯ್ಯ ಮತ್ತಿತರರು ಉಪಸ್ಥಿತರಿದ್ದರು. ::: ಬಹುಮಾನ ವಿತರಣೆ ::: .22 ಕೋವಿ ಸ್ಪರ್ಧೆಯಲ್ಲಿ ಕಬ್ಬಟ್ಟೀರ ಶರತ್ ಪ್ರಥಮ, ಕೇಲೇಟಿರ ಪವಿತ್ ದ್ವಿತೀಯ ಹಾಗೂ ಅಚ್ಚಪಂಡ ಪಟ್ಟು ತೃತೀಯ ಬಹುಮಾನ ಪಡೆದುಕೊಂಡರು. ಬಕೆಟ್‍ಗೆ ಬಾಲು ಎಸೆಯುವ ಸ್ಪರ್ಧೆಯಲ್ಲಿ ಅಪ್ಪುಮಣಿಯಂಡ…

Read More