ಮಡಿಕೇರಿ ಸೆ.6 : ಶ್ರೀ ಕಂಚಿ ಕಾಮಾಕ್ಷಿ ದೇವಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೆ. 10 ರಂದು “ಮೊಸರು ಕುಡಿಕೆ ಒಡೆಯುವ ಸ್ಪರ್ಧೆ” ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ದೇವಾಲಯದ ಆವರಣದಲ್ಲಿ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ಹಾಗೂ 5 ವರ್ಷ ದೊಳಗಿನ ಮಕ್ಕಳಿಗೆ ಛದ್ಮ ವೇಷ ಸ್ಪರ್ಧೆ ಏರ್ಪಡಿಸಲಾಗಿದೆ. ಛದ್ಮ ವೇಷ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಮಕ್ಕಳು ದೂರವಾಣಿ ಸಂಖ್ಯೆ 9482037525, 9449696355 ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಸಾರ್ವಜನಿಕರು ದೇವಾಲಯದಲ್ಲಿ ನಡೆಯುವ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ಆಡಳಿತ ಮಂಡಳಿ ಕೋರಿದೆ.
ಲೇಖಕ: admin
ಮಡಿಕೇರಿ ಸೆ.6 : ಅರಂತೋಡು ಗ್ರಾಮದ ಬಿಳಿಯಾರು ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣ ಸಮಿತಿ ವತಿಯಿಂದ ಶ್ರದ್ಧಾಭಕ್ತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಬಿಳಿಯಾರು ಶಾಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಉದ್ಘಾಟಿಸಿದರು. ಸಮಿತಿಯ ಅಧ್ಯಕ್ಷ ಮಂಜುನಾಥ ಬಿಳಿಯಾರು ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ ಪ್ರಾಂಶುಪಾಲ ಕೆ.ಆರ್.ಗಂಗಾಧರ್, ನಿವೃತ ಪೋಲಿಸ್ ಪದ್ಮಯ್ಯ ಪೂಜಾರಿಮನೆ, ಜನಪ್ರಕಾಶ್, ಸುಳ್ಯ ತಾಲ್ಲೂಕು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸೋಮಶೇಖರ್ ಪೈಕ, ಮಹೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು. ಕೆ.ಪಿ.ಕುಸುಮಾದರ ಸ್ವಾಗತಿಸಿ, ಆನಂದ ಬಿಳಿಯಾರು ಕಾರ್ಯಕ್ರಮ ನಿರೂಪಿಸಿದರು.
ತುಮಕೂರು ಸೆ 6: ನಾಡಿನ ಮಕ್ಕಳ ಮಾನಸಿಕ ಮತ್ತು ದೈಹಿಕ ಸದೃಢತೆಗಾಗಿ ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೆ ತಂದು 54 ಲಕ್ಷಕ್ಕೂ ಅಧಿಕ ಮಕ್ಕಳು ಪೌಷ್ಠಿಕ ಆಹಾರವನ್ನು ಪ್ರತಿ ದಿನ ಸೇವಿಸುವಂತಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಾರ ಮೆಚ್ಚುಗೆ ಗಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ಮತ್ತು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಮಧುಗಿರಿಯಲ್ಲಿ ಆಯೋಜಿಸಿದ್ದ ಕ್ಷೀರ ಭಾಗ್ಯ ಯೋಜನೆಯ ದಶಮಾನೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿದ್ದರೆ ಮಾತ್ರ ಆರೋಗ್ಯವಂತರಾಗಿ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ. ಎಲ್ಲಾ ಜಾತಿಯ ಎಲ್ಲಾ ಧರ್ಮದ ಬಡವರು ಮತ್ತು ಮಧ್ಯಮ ವರ್ಗದವರ ಮಕ್ಕಳ ಹಿತವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆವು. ಹತ್ತು ವರ್ಷಗಳಿಂದ ಪ್ರತೀ ದಿನ ಲಕ್ಷಾಂತರ ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗುವಂತೆ ಮಾಡಿದ್ದೇವೆ. ಹೀಗಾಗಿ ನಮ್ಮ ಹೆಮ್ಮೆಯ ಈ ಯೋಜನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದೆ…
ಸೋಮವಾರಪೇಟೆ ಸೆ.6 : ಯಡೂರು ಬಿಟಿಸಿಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಕಾಲೇಜಿನ ಆಂತರಿಕ ಗುಣಮಟ್ಟ ಖಾತ್ರಿ ಕೋಶ ಮತ್ತು ಉದ್ಯೋಗ ಮಾಹಿತಿ ಘಟಕದ ವತಿಯಿಂದ, ಉನ್ನತ ಶಿಕ್ಷಣ ಮತ್ತು ಉದ್ಯೋಗ ಮಾಹಿತಿ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ಮೇಜರ್ ಸತೀಶ್ ಮಾತನಾಡಿ, ಜೀವನದಲ್ಲಿ ಯಶಸ್ಸುಗಳಿಸಬೇಕಾದರೆ, ವಿದ್ಯಾರ್ಥಿ ದೆಸೆಯಲ್ಲಿ ಸ್ಪಷ್ಟವಾದ ಗುರಿ ಹೊಂದಿರುವುದು ಮತ್ತು ಗುರಿಯನ್ನು ತಲುಪುವ ನಿಟ್ಟಿನಲ್ಲಿ ಅವಿರತವಾದ ಶ್ರಮಪಡುವುದು ಅತ್ಯಾವಶ್ಯಕ. ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಯಶಸು ಗಳಿಸುವುದು ಅಸಾಧ್ಯವೇನಲ್ಲ. ಗ್ರಾಮೀಣ ಹಿನ್ನೆಲೆಯವರು, ಕನ್ನಡ ಮಾಧ್ಯಮ ವಿದ್ಯಾರ್ಥಿಗಳು, ಆರ್ಥಿಕವಾಗಿ ದುರ್ಬಲರು ಇತ್ಯಾದಿ ಋಣಾತ್ಮಕ ವಿಚಾರಗಳನ್ನು ಬದಿಗಿಟ್ಟು ನಿರಂತರ ಪರಿಶ್ರಮ ಪಡಬೇಕಿದೆ. ಕಲಿಕೆಗೆ ಬಡವ ಬಲ್ಲಿದ ಎಂಬ ತಾರಾತಮ್ಯ ಇಲ್ಲ ಎಂದರು. ಯಶಸ್ಸುಗಳಿಸುವ ನಿಟ್ಟಿನಲ್ಲಿ ಅಡ್ಡದಾರಿಗಳನ್ನು ಹುಡುಕುವ ವ್ಯರ್ಥ ಪ್ರಯತ್ನ ಬಿಟ್ಟು ಮುನ್ನೆಡೆಯಬೇಕಿದೆ. ನಿರಂತರ ಪರಿಶ್ರಮಪಟ್ಟಲ್ಲಿ ಯಾವುದೇ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿ ದೆಸೆಯಲ್ಲಿ ಎದುರಾಗುವ ಅನವಶ್ಯಕ ಪ್ರಲೋಚನೆಗಳತ್ತ ಆಕರ್ಷಿತರಾಗದೇ ಗುರಿಯ ಕಡೆ ಗಮನ ಹರಿಸಿ,…
ಸೋಮವಾರಪೇಟೆ ಸೆ.6 : ಕಿರಗಂದೂರು ಗ್ರಾ.ಪಂ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ತಾರಾ ಸುಧೀರ್, ಉಪಾಧ್ಯಕ್ಷರಾಗಿ ಎಂ.ಎಂ.ಬೆಳ್ಳಿಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಡಾ.ಮಂಜುನಾಥ್ ಜೆ.ಶೆಟ್ಟಿ ಕಾರ್ಯನಿರ್ವಹಿಸಿದರು. ಪಿಡಿಒ ರಜನಿ, ಮಾಜಿ ಅಧ್ಯಕ್ಷ ರಘು, ಮಾಜಿ ಉಪಾಧ್ಯಕ್ಷೆ ಸುಧಾರಾಣಿ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸುಧೀರ್, ಪ್ರಮುಖರಾದ ಬಿ.ಕೆ.ರಮೇಶ್, ಎಸ್.ಎಂ.ಪೂವಯ್ಯ, ಎಚ್.ಬಿ.ಶಿವಕುಮಾರ್, ರಾಜ್‍ಕುಮಾರ್, ಕೌಶಿಕ್, ರೋಷನ್, ಎಸ್.ಪಿ.ಪೊನ್ನಪ್ಪ, ಎಸ್.ಕೆ.ಪೂವಯ್ಯ, ಚಿದಾನಂದ ಸೇರಿದಂತೆ ಇತರರು ಇದ್ದರು.
ಶ್ರೀ ಕೃಷ್ಣ ಜನ್ಮಾಷ್ಟಮಿಯ ಅನಂತ ಶುಭಾಶಯಗಳು….. ::: ಭಗವಾನ್ ಶ್ರೀ ಕೃಷ್ಣನ ಕುರಿತ ವಿಶಿಷ್ಟವಾದ ಮಾಹಿತಿ ::: 1) ಕೃಷ್ಣ ಹುಟ್ಟಿದ್ದು 5253 ವರ್ಷಗಳ ಹಿಂದೆ. 2)ಜನ್ಮ ದಿನಾಂಕ ಜುಲೈ 19 ಕ್ರಿ.ಪೂ 3228 3) ತಿಂಗಳು : ಶ್ರಾವಣ 4) ದಿನ : ಅಷ್ಟಮಿ 5) ನಕ್ಷತ್ರ : ರೋಹಿಣಿ 6) ದಿನ : ಬುಧವಾರ 7) ಸಮಯ : 00:00 A.M. 8) ಶ್ರೀ ಕೃಷ್ಣ 126 ವರ್ಷ 8 ತಿಂಗಳು 7 ದಿನಗಳ ಕಾಲ ಬದುಕಿದ್ದ. 9) ಮರಣ ದಿನ 18 ಫೆಬ್ರವರಿ ಕ್ರಿಪೂ 3102 10) ಕೃಷ್ಣ 89 ವರ್ಷದವನಿದ್ದಾಗ ಕುರುಕ್ಷೇತ್ರ ಯುದ್ಧ ನಡೆಯಿತು. 11) ಕುರುಕ್ಷೇತ್ರ ಯುದ್ಧ ನಡೆದು 36 ವರ್ಷಗಳ ಬಳಿಕ ಕೃಷ್ಣನ ಮರಣವಾಯಿತು. 12) ಕುರುಕ್ಷೇತ್ರ ಯುದ್ಧವು ಮೃಗಾಶಿರ ಶುಕ್ಲ ಏಕಾದಶಿ ಕ್ರಿಪೂ 3139ರಲ್ಲಿ ಆರಂಭವಾಯಿತು( 8 ಡಿಸೆಂಬರ್). ಡಿಸೆಂಬರ್ 25 ಕ್ರಿಪೂ 3139ರಂದು ಯುದ್ಧ ಕೊನೆಗೊಡಿತು. 13) ಜಯದ್ರಥನ ಸಾವಿನ…
ಮಡಿಕೇರಿ ಸೆ.6 : ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಸತತ ಪರಿಶ್ರಮ ಪಡುತ್ತಿರುವ ಶಿಕ್ಷಕ ವೃಂದದ ನೆರವಿಗೆ ಸಕಾ೯ರದೊಂದಿಗೆ ಸಮಾಜ ಬಾಂಧವರು ಕೂಡ ಮುಂದಾಗುವ ಮೂಲಕ ಶಿಕ್ಷಕರಿಗೆ ಸಲ್ಲಬೇಕಾದ ಗೌರವವನ್ನು ಸಮಪಿ೯ಸಬೇಕಾಗಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಹೇಳಿದ್ದಾರೆ. ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ಕಾಯ೯ಕ್ರಮದಲ್ಲಿ ರೋಟರಿಯ ಪ್ರತಿಷ್ಟಿತ ನೇಷನ್ ಬಿಲ್ಡರ್ಸ್ ಪ್ರಶಸ್ತಿಯನ್ನು ಸಾಧಕರಾದ ಐವರು ಶಿಕ್ಷಕರಿಗೆ ಪ್ರದಾನ ಮಾಡಿ ಮಂಥರ್ ಗೌಡ ಮಾತನಾಡಿದರು. ಜೀವನವಿಡೀ ಮಕ್ಕಳ ಶ್ರೆಯೋಭಿವೃದ್ಧಿಗಾಗಿ ತಮ್ಮ ಎಲ್ಲಾ ಸುಖಸಂತೋಷಗಳನ್ನೂ ಶಿಕ್ಷಕರು ಬದಿಗಿಡುತ್ತಾರೆ. ವಿದ್ಯೆ ಕಲಿಸುವುದೇ ಶಿಕ್ಷಕರಿಗೆ ಮುಖ್ಯ ಉದ್ದೇಶದಂತಿರುತ್ತದೆ. ಇಂಥ ಪರಿಶ್ರಮದ ಕಾಯಕಜೀವಿಗಳ ಸೇವೆಯನ್ನು ಸಮಾಜ ಯಾವುದೇ ಕಾರಣಕ್ಕೂ ಮರೆಯಬಾರದು ಎಂದೂ ಶಾಸಕರು ಹೇಳಿದರು. ವಿದ್ಯಾಥಿ೯ಗಳಲ್ಲಿನ ಸುಪ್ತ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಮೂಲಕ ಅನೇಕ ಸಾಧಕರನ್ನು ಸಮಾಜಕ್ಕೆ ಶಿಕ್ಷಕರು ಕೊಡುಗೆಯಾಗಿ ನೀಡುತ್ತಾರೆ. ಇಂಥ ಶಿಕ್ಷಕರನ್ನು ಗುರುತಿಸಿ ಅವರಿಗೆ ನೇಷನ್ ಬಿಲ್ಡಸ್೯ ಪ್ರಶಸ್ತಿಯನ್ನು ರೋಟರಿ ಸಂಸ್ಥೆ ನೀಡುವ ಮೂಲಕ ಮಹತ್ವದ ಯೋಜನೆಗೆ…
ಸುಂಟಿಕೊಪ್ಪ ಸೆ.6 : ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳ ತಾಲ್ಲೂಕು ಮಟ್ಟದ ಬಾಸ್ಕೆಟ್‍ಬಾಲ್ ಪಂದ್ಯಾವಳಿಯಲ್ಲಿ ಸುಂಟಿಕೊಪ್ಪದ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ಜಯಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಕುಶಾಲನರ ತಾಲೂಕಿನ ಕೂಡಿಗೆ ಮೋರಾರ್ಜಿ ದೇಸಾಯಿ ಶಾಲಾ ಮೈದಾನದಲ್ಲಿ ನಡೆದ ತಾಲ್ಲೂಕು ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಪ್ರಾಥಮಿಕ ವಿಭಾಗದ ಬಾಲಕರ ಬಾಸ್ಕೆಟ್ ಬಾಲ್ ಫೈನಲ್ ಪಂದ್ಯದಲ್ಲಿ ಕೂಡಿಗೆ ಮೊರಾರ್ಜಿ ದೇಸಾಯಿ ಪ್ರಾಥಮಿಕ ಶಾಲೆಯನ್ನು ಸುಂಟಿಕೊಪ್ಪ ಸಂತ ಮೇರಿ ತಂಡವು 10-2 ಪಾಯಿಂಟ್ ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದೆ. ಪ್ರೌಢಶಾಲಾ ಬಾಲಕರ ಬಾಸ್ಕೆಟ್‍ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿರುದ್ಧ 14-06 ಅಂಕಗಳಿಗೆ ಸೋಲಿಸಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಪಂದ್ಯಾವಳಿಯಲ್ಲಿ ಈ ತಂಡಗಳು ಪಾಲ್ಗೊಳ್ಳಲಿದೆ. ಸಂಸ್ಥೆಯ ಮುಖ್ಯಸ್ಥರಾದ ರೆ.ಫಾ.ಅರುಳ್ ಸೆಲ್ವಕುಮಾರ್, ಮುಖ್ಯೋಪಾದ್ಯಾಯರಾದ ಸೇಲ್ವರಾಜ್, ದೈಹಿಕ ಶಿಕ್ಷಣ ಶಿಕ್ಷಕ…
ಬೆಂಗಳೂರು: ಭಾರತದಲ್ಲಿ ಮೊದಲ ಬಾರಿಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹಯೋಗದೊಂದಿಗೆ ಬೆಂಗಳೂರಿನ ಮಲ್ಲೇಶ್ವರಂ ವಾರ್ಡ್‌ನಲ್ಲಿ ಫುಟ್‌ಪಾತ್ ಅಡಿಯಲ್ಲಿ ಟ್ರಾನ್ಸ್‌ಫಾರ್ಮರ್ ಸೆಂಟರ್ ಕೇಂದ್ರ ಸ್ಥಾಪಿಸಿದೆ. ಬೆಂಗಳೂರು ಜನ-ಜಾನುವಾರುಗಳಿಗೆ ವಿದ್ಯುತ್ ಅವಘಡಗಳಿಂದ ತಪ್ಪಿಸುವುದು ಸೇರಿ ಪಾದಚಾರಿ ಮಾರ್ಗಗಳಲ್ಲಿ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸುವ ಕಾರ್ಯಕ್ಕೆ ಗುಡ್ ಬೈ ಹೇಳಿದ್ದು, ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನ ಮಲ್ಲೇಶ್ವರದ 15ನೇ ಕ್ರಾಸ್ ನಲ್ಲಿ 500 ಕೆವಿಎ ಸಾಮರ್ಥ್ಯದ ‘ಭೂಗತ ವಿದ್ಯುತ್ ಪರಿವರ್ತಕ’ವನ್ನು ಅಳವಡಿಸಲಾಗಿದೆ. ಬೆಸ್ಕಾಂ ಮತ್ತು ಬಿಬಿಎಂಪಿ ಸಹಯೋಗದಲ್ಲಿ 1.97 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ‘ಭೂಗತ ವಿದ್ಯುತ್ ಪರಿವರ್ತಕ’ಕ್ಕೆ ಇಂಧನ ಸಚಿವ ಕೆ.ಜೆ. ಜಾರ್ಜ್ ಮಂಗಳವಾರ ಚಾಲನೆ ನೀಡಿದರು. ಬೆಸ್ಕಾಂನಲ್ಲಿನ ತಾಂತ್ರಿಕ ನಾವಿನ್ಯತಾ ಕೇಂದ್ರದ (ಟಿಐಟಿ) ಉಪ ಪ್ರಧಾನ ವ್ಯವಸ್ಥಾಪಕ ಕೆ. ಬಾಲಾಜಿ ನೇತೃತ್ವದ ತಂಡವು ತಾಂತ್ರಿಕ ಕೆಲಸಗಳನ್ನು ಮಾಡಿದೆ. ಈ ಯೋಜನೆಯ ಸಿವಿಲ್ ಕಾಮಗಾರಿಗೆ ಬಿಬಿಎಂಪಿ 64 ಲಕ್ಷ ರೂ. ಹಾಗೂ ಬೆಸ್ಕಾಂ 1.33 ಕೋಟಿ…
ನಾಪೋಕ್ಲು ಸೆ.6 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವತಿಯಿಂದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಕುರಿತು ಅರಿವು ಮೂಡಿಸುವ ಸಲುವಾಗಿ “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮ ನಡೆಯಿತು. ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಕಾರ್ಯಕ್ರವನ್ನು ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಉದ್ಘಾಟಿಸಿ, ದುಶ್ಚಟಗಳಿಂದ ಸಮಾಜದಲ್ಲಿ ಆಗುವ ಸಾಧಕ ಬಾಧಕ ಹಾಗೂ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಕೊಡಗು ಜಿಲ್ಲಾ ಜನ ಜಾಗೃತಿ ವೇದಿಕೆಯ ಉಪಾಧ್ಯಕ್ಷ ಧನಂಜಯ ಅಗೋಳಿಕಜೆ, ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ಈ ಸಂದರ್ಭ ಗ್ರಾಮಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪುರುಷೋತ್ತಮ, ನಾಪೋಕ್ಲು ಗ್ರಾ.ಪಂ ಉಪಾಧ್ಯಕ್ಷ ಕುಲ್ಲೇಟಿರ ಹೇಮಾವತಿ ಅರುಣ್, ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ಎ.ಹಾರಿಸ್, ಕಾಲೇಜು ಪ್ರಭಾರ ಪ್ರಾಂಶುಪಾಲ ವಿಜಿತಾ, ಮೇಲ್ವಿಚಾರಕರಾದ ಸುನಿಲ್, ಸೇವಾ ಪ್ರತಿನಿಧಿ ಉಮಾಲಕ್ಷ್ಮಿ, ಗೀತಾ, ಪವಿತಾ ಸದಸ್ಯೆ ಪೊನ್ನಮ್ಮ, ಕಾಲೇಜು ಬೋಧಕರು, ವಿದ್ಯಾರ್ಥಿ ವೃಂದ ಹಾಜರಿದ್ದರು. ವರದಿ : ದುಗ್ಗಳ ಸದಾನಂದ






