ಲೇಖಕ: admin

ಮಡಿಕೇರಿ ಸೆ.4 : ಸಮಾಜದ ಒಳಿತಿಗಾಗಿ ಪತ್ರಿಕಾ ಕ್ಷೇತ್ರದಲ್ಲಿ ಜೋಡೆತ್ತಿನಂತೆ ಕಾರ್ಯನಿರ್ವಹಿಸುವ ಪತ್ರಕರ್ತರು ಮತ್ತು ಪತ್ರಿಕಾ ವಿತರಕರ ಸಂಕಷ್ಟಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸ್ಪಂದಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ ಒತ್ತಾಯಿಸಿದರು. ಕೊಡಗು ಪತ್ರಕರ್ತರ ಸಂಘ, ಅಖಿಲ ಕರ್ನಾಟಕ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಕೊಡಗು ಘಟಕ ಮತ್ತು ಕೊಡಗು ಪತ್ರಿಕಾ ಭವನ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಗರದ ಪತ್ರಿಕಾ ಭವನದಲ್ಲಿ ನಡೆದ `ಪತ್ರಿಕಾ ವಿತರಕರ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಕರ್ತರು ಮತ್ತು ಪತ್ರಿಕಾ ವಿತರಕ ಸಮುದಾಯಕ್ಕೆ ಸ್ವಾತಂತ್ರ್ಯ ನಂತರದ ಅವಧಿಯಲ್ಲಿ ದೊರಕಬೇಕಾದ ಅಗತ್ಯ ಸೌಲಭ್ಯಗಳು ದೊರಕಿಲ್ಲ. ರಾಜ್ಯ ವ್ಯಾಪಿ ಪತ್ರಿಕಾ ಕ್ಷೇತ್ರದಲ್ಲಿ ದುಡಿಯುತ್ತಿರುವ 10 ಸಾವಿರಕ್ಕೂ ಹೆಚ್ಚಿನ ಪತ್ರಕರ್ತರು ಮತ್ತು ಪತ್ರಿಕಾ ವಿತರಕರಿದ್ದಾರೆ. ವಿಪರ್ಯಾಸವೆಂದರೆ ಸರ್ಕಾರದ ಮಾನ್ಯತೆ ಪಡೆದ ಪತ್ರಕರ್ತರ ಸಂಖ್ಯೆ ಕೇವಲ 1500 ಎಂದು ವಿಷಾದಿಸಿದರು.ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ದುಡಿಯುವವರು ಪತ್ರಕರ್ತರಲ್ಲವೇ ಎಂದು ಅವರು ಪ್ರಶ್ನಿಸಿದರು.ಕಳೆದ 2018 ರಲ್ಲಿ ಸಿದ್ದರಾಮಯ್ಯ ಅವರು…

Read More

ಮಡಿಕೇರಿ ಸೆ.4 : ಇಬ್ಬರ ಮೇಲೆ ದಾಳಿ ಮಾಡಿದ ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಯೇ ಬಲಿಯಾದ ಘಟನೆ ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮದಲ್ಲಿ ನಡೆದಿದೆ. ಅರಣ್ಯ ಇಲಾಖೆಯ ಆನೆ ಕಾರ್ಯಪಡೆಯ ಸಿಬ್ಬಂದಿ ಗಿರೀಶ್ (35) ಮೃತ ದುರ್ದೈವಿ. ಸುಂಟಿಕೊಪ್ಪ ಕೆದಕಲ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಉಪಟಳ ನೀಡುತ್ತಿರುವ ಒಂಟಿ ಸಲಗವನ್ನು ಮೀನುಕೊಲ್ಲಿ ಮೀಸಲು ಅರಣ್ಯಕ್ಕೆ ಓಡಿಸಲು 20 ಮಂದಿಯ ಆರ್.ಆರ್.ಟಿ ತಂಡ ಕಾರ್ಯಾಚರಣೆಗೆ ಇಳಿದಿತ್ತು. ಈ ಸಂದರ್ಭ ಸಿಬ್ಬಂದಿಗಳನ್ನೇ ಅಟ್ಟಾಡಿಸಿಕೊಂಡು ಬಂದ ಕಾಡಾನೆ ಏಕಾಏಕಿ ಗಿರೀಶ್ ಅವರ ಮೇಲೆ ದಾಳಿ ಮಾಡಿ ತುಳಿದು ಹಾಕಿದೆ. ಘಟನೆಯಿಂದ ತೀವ್ರವಾಗಿ ಗಾಯಗೊಂಡ ಗಿರೀಶ್ ಅವರನ್ನು ಮಡಿಕೇರಿಯ ಜಿಲ್ಲಾಸ್ಪ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ::: ಇಬ್ಬರ ಮೇಲೆ ದಾಳಿ ::: ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಡಿ ಬ್ಲಾಕ್ ಬಳಿ ಬೈಕ್ ನಲ್ಲಿ ಮರದ ಕೆಲಸಕ್ಕೆಂದು ತೆರಳುತ್ತಿದ್ದ ಸುಂಟಿಕೊಪ್ಪದ ನಿವಾಸಿ ಮುರುಗೇಶ್ ಎಂಬುವವರ ಮೇಲೆ ಒಂಟಿಸಲಗ ಮೊದಲು…

Read More

ಮಡಿಕೇರಿ ಸೆ.4 :  ಸೋಮವಾರಪೇಟೆ ಬೇಳೂರು ಗ್ರಾ.ಪಂ  ವ್ಯಾಪ್ತಿಯಲ್ಲಿ ಸ್ಥಗಿತಗೊಂಡಿರುವ ಕುಸುಬೂರು – ಹಳ್ಳ ದಿಣ್ಣೆ ಸಂಪರ್ಕ ಸೇತುವೆ ಕಾಮಗಾರಿಯನ್ನುಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ   ಡಾ.ಮಂತರ್ ಗೌಡ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನಂತರ ಕಾಮಗಾರಿ ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.   

Read More

ಮಡಿಕೇರಿ ಸೆ.4 :  ಶಾಸಕ ಡಾ.ಮಂತರ್ ಗೌಡ ಕಾರ್ಮಿಕರರೊಂದಿಗೆ ಸಂವಾಹ ನಡೆಸಿ, ಯೋಗಕ್ಷೇಮ ವಿಚಾರಿಸಿದರು. ಕುಶಾಲನಗರದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಸಂದರ್ಭ ಅದೇ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಾಡುತ್ತಿದ್ದ  ಕಾರ್ಮಿಕರ ಯೋಗಕ್ಷೇಮವನ್ನು ವಿಚಾರಿಸಿದರು. ಈ ಸಂದರ್ಭ ರಾಜ್ಯ ಸರ್ಕಾರದ ಜನಪರ ಯೋಜನೆಗಳಾದ ಅನ್ನ ಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ ಹಾಗೂ ಮೊದಲಾದ ಸವಲತ್ತುಗಳು ಸರಿಯಾಗಿ ಕಾರ್ಮಿಕರಿಗೆ ತಲುಪುತ್ತಿದೆಯೇ ಎಂದು  ಮಾಹಿತಿ ಪಡೆದುಕೊಂಡರು.

Read More

ಮಡಿಕೇರಿ ಸೆ.4 : ಉಡುಪಿಯ ಮಹಾತ್ಮಾ ಗಾಂಧಿ ಕ್ರೀಡಾಂಗದಲ್ಲಿ ನಡೆದ 13ನೇ ಆವೃತ್ತಿಯ ಕರ್ನಾಟಕ ರಾಜ್ಯ ಕಿವುಡರ ಕ್ರೀಡಾಕೂಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ತಂಡ 3ನೇ ಸ್ಥಾನ ಪಡೆದಿದೆ. ತಂಡದ ನಾಯಕರಾಗಿ ಎಂ.ಎ.ರಮ್‍ಶದ್ ಕಾರ್ಯನಿರ್ವಹಿಸಿದ್ದು, ಎಮ್.ಎನ್.ನದೀರ್, ಹೆಚ್.ಡಿ.ಗಣೇಶ್, ಎಸ್.ಟಿ.ಸುನಿಲ್, ನಾಗೇಶ, ಪಿ.ಎಲ್.ದೀರಜ್, ಎ.ಆರ್.ರಮನ್ ಕುಮಾರ್ ಹಾಗೂ ಪಿ.ಜೆ.ಅಭಿಷೇಕ್ ತಂಡದಲ್ಲಿ ಪಾಲ್ಗೊಂಡಿದ್ದರು ಎಂದು ಕೊಡಗು ಜಿಲ್ಲಾ ಕಿವುಡರ ಸಂಘದ ಉಪಾಧ್ಯಕ್ಷರಾದ ಶ್ರೀ ಶಂಕರ ನಾರಾಯಣ ಹೆಬ್ಬಾರ್ ಅವರು ತಿಳಿಸಿದ್ದಾರೆ. ಕ್ರೀಡಾಕೂಟದಲ್ಲಿ ರಾಜ್ಯಾದ್ಯಂತದಿಂದ ಒಟ್ಟು 18 ತಂಡಗಳು ಭಾಗವಹಿಸಿದ್ದರು.

Read More

ಮಡಿಕೇರಿ ಸೆ.4 : ಕೊಡಗಿನ ಆಯುಧ ಪೂಜೆ ಎಂದೇ ಹೆಸರಾಗಿರುವ ಕೈಲ್ ಪೊಲ್ದ್ (ಕೈಲು ಮುಹೂರ್ತ) ಹಬ್ಬವನ್ನು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಮಳೆಗಾಲದಲ್ಲಿ ಕೃಷಿ ಕಾರ್ಯ ಪೂರ್ಣಗೊಂಡ ನಂತರ ಕೃಷಿ ಪರಿಕರಗಳಿಗೆ ಪೂಜೆ ಸಲ್ಲಿಸುವ ಮತ್ತು ಊರಿನವರು ಸೇರಿ ಮಾಂಸದ ಖ್ಯಾದ್ಯವನ್ನು ಸವಿದು ವಿವಿಧ ಜನಪದೀಯ ಸ್ಪರ್ಧೆಗಳಲ್ಲಿ ಸಂಭ್ರಮಿಸುವ ಹಬ್ಬ ಕೈಲ್ ಪೊಲ್ದ್ ನ್ನು ಕೊಡವ ಮತ್ತು ಗೌಡ ಸಮುದಾಯದ ಮಂದಿ ಆಚರಿಸಿದರು. ಬಲ್ಲಿಮಾಡ ಮೋಹನ್ ದೇವಯ್ಯ ಕುಟುಂಬಸ್ಥರು  ಕೋವಿ, ಒಡಿಕತ್ತಿ,  ವಾಹನ ಮತ್ತು ಕೃಷಿ ಪರಿಕರಗಳನ್ನು ಪೂಜ್ಯ ಸ್ಥಾನದಲ್ಲಿಟ್ಟು ತೋಕ್ ಪೂ (ಹೂವು) ನಿಂದ ಸಿಂಗರಿಸಿ ವಿವಿಧ ಖಾದ್ಯಗಳನ್ನಿರಿಸಿ ಪೂಜೆ ನೆರವೇರಿಸುವ ಮೂಲಕ ಕುಟುಂಬದ ಹಿರಿಯರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.    

Read More

ಕುಶಾಲನಗರ ಆ.4 :  ಕೂಡುಮಂಗಳೂರು ಗ್ರಾ.ಪಂ ನ ಸುಂದರನಗರದಲ್ಲಿ ನಡೆಯುತ್ತಿರುವ ಕಾಂಕ್ರೀಟ್ ಚರಂಡಿ ನಿರ್ಮಾಣ ಕಾಮಗಾರಿಯನ್ನು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್  ಪರಿಶೀಲನೆ ನಡೆಸಿದರು. ಸುಂದರನಗರದ ಅಂಗನವಾಡಿ ಬಳಿ ಹದಿನೈದನೇ ಹಣಕಾಸಿನ ಅನುದಾನದಲ್ಲಿ ಕಾಂಕ್ರೀಟ್ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಸ್ಥಳ ಪರಿಶೀಲನೆ ನಡೆಸಿದ ಕೆ.ಬಿ.ಶಂಶುದ್ಧೀನ್  ಗುಣಮಟ್ಟ ಕಾಪಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಈ ಸಂದರ್ಭ ಮಾತನಾಡಿದ ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್, ಸುಂದರನಗರ ಅಂಗನವಾಡಿ ಬಳಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ತ್ಯಾಜ್ಯ ನೀರು ನಿಂತು ರೋಗ ಹರಡುವ ಭೀತಿ ಹೆಚ್ಚಾಗಿತ್ತು. ಡೆಂಗ್ಯೂ ರೋಗ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಅಂಗನವಾಡಿ ಮಕ್ಕಳ ಮತ್ತು ಸ್ಥಳೀಯರ ಆರೋಗ್ಯ ದೃಷ್ಟಿಯಿಂದ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಸಾರ್ವಜನಿಕರು ಸ್ವಚ್ಚತೆಗೆ ಆದ್ಯತೆ ನೀಡಿ, ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದರು. ಈ ಸಂದರ್ಭ ಸುಂದರನಗರ ಗ್ರಾಮಾಸ್ಥರು ಇದ್ದರು.

Read More

ಕುಶಾಲನಗರ ಸೆ.4 : ಕುಶಾಲನಗರದ ಫಾತಿಮಾ ಪ್ರೌಢ ಶಾಲೆಯಲ್ಲಿ “ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡಮಿ” ವತಿಯಿಂದ  ವಿದ್ಯಾರ್ಥಿಗಳಿಗೆ  ಚಿತ್ರಕಲೆ ಹಾಗೂ ಕೈಬರಹ ಸ್ಪರ್ಧೆ ನಡೆಯಿತು. ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಕೆ.ಪಿ.ದಿಗಂತ್, ದ್ವಿತೀಯ ಸ್ಥಾನವನ್ನು ಎಂ.ಡಿ .ಚೈತನ್ಯ ಹಾಗೂ ತೃತೀಯ ಸ್ಥಾನವನ್ನು ಕೆ.ಜೆ.ನಿಷಾಂತ್  ಪಡೆದುಕೊಂಡರು. ಕೈ ಬರಹ ಸ್ಪರ್ಧೆಯಲ್ಲಿ ಎ.ಕೆ.ಫರ್ಹಾನ ಪ್ರಥಮ,  ಸ್ಥಾನ ಎಂ.ದನುಷ್ ದ್ವಿತೀಯ  ಹಾಗೂ ತೃತೀಯ ಸ್ಥಾನವನ್ನು ಯು.ಕೆ.ಮಾನಸ ಪಡೆದರು. ಚಿತ್ರಕಲೆ ಹಾಗೂ ಕೈಬರಹ ಸ್ಪರ್ಧೆಯಲ್ಲಿ ಸುಮಾರು  50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಬಹುಮಾನ ವಿತರಿಸಲಾಯಿತು. ಈ ಸಂದರ್ಭ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ನೃತ್ಯ ಸಂಯೋಜಕ ಅಕ್ತರ್ ಹಾಗೂ ಫಾತಿಮಾ ಪ್ರೌಢ ಶಾಲಾ ಶಿಕ್ಷಕ ವೃಂದದವರು ಇದ್ದರು.   

Read More

ಮಡಿಕೇರಿ ಸೆ.3 : ವಿದ್ಯುತ್ ಕಂಬ ಮತ್ತು ತಡೆಗೋಡೆಗೆ ಕಾರು ಡಿಕ್ಕಿಯಾದ ಪರಿಣಾಮ ಮೆಕಾನಿಕ್ ಒಬ್ಬರು ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ನಿವಾಸಿ ಭಾಸ್ಕರ್(67) ಎಂಬುವವರೇ ಮೃತ ದುರ್ದೈವಿಯಾಗಿದ್ದಾರೆ. ಈದ್ಗಾ ಮೈದಾನದ ಬಳಿಯ ರಸ್ತೆಯಲ್ಲಿ ಪಾದಾಚಾರಿಗಳಿಗೆ ಕಾರು ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಸ್ವತ: ಕಾರು ಚಲಾಯಿಸುತ್ತಿದ್ದ ಭಾಸ್ಕರ್ ಅವರು ತೀವ್ರವಾಗಿ ಗಾಯಗೊಂಡು ಸಾವನ್ನಪಿದರು. ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ಸುಂಟಿಕೊಪ್ಪದ ರವಿ ಪೂಜಾರಿ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಗೊಂಡಿದ್ದಾರೆ.

Read More

ಮಡಿಕೇರಿ  ಸೆ.3 : ವಿಜ್ಞಾನದಲ್ಲಿ ಆಸಕ್ತಿ ಮೂಡಿಸಿಕೊಳ್ಳುವುದರ ಜೊತೆಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಂತೆ ನಗರದ ಸಂತ ಜೋಸೆಫರ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ   ಸಿಸ್ಟರ್ ರೋಜಾ   ಕರೆ ನೀಡಿದರು. ನಗರದ ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನಲ್ಲಿ   ಆಯೋಜನೆಗೊಂಡ ಫಿಸಿಕ್ಸ್ ಫೆಸ್ಟ್ ಅನ್ನು ಸಿಸ್ಟರ್ ರೋಜಾ ದೀಪ  ಬೆಳಗುವುದರ ಮೂಲಕ ಉದ್ಘಾಟಿಸಿ ದರು.  ಈ ಸಂದಭ೯ ಮಾತನಾಡಿದ ಅವರು, ಭೌತಶಾಸ್ತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಫಿಸಿಕ್ಸ್ ಫೆಸ್ಟ್ ಸಹಕಾರಿ ಎಂದು ಅಭಿಪ್ರಾಯಪಟ್ಟರು, ವಿದ್ಯಾ ಸಂಸ್ಥೆಯ ಸಂಚಾಲಕಿ  ಸಿಸ್ಟರ್ ಲೂರ್ದ್ ಮೇರಿ, ಸಿಸ್ಟರ್ ರೆಜಿನಾ ಮಿರಾಂಡ, ಸಿಸ್ಟರ್ ಫಿಲೋಮಿನಾ, ಮೂರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ   ಉಪನ್ಯಾಸಕಿ   ಮಾಲತಿ ವೇದಿಕೆಯಲ್ಲಿದ್ದರು. ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿನ  ಭೌತಶಾಸ್ತ್ರ ಉಪನ್ಯಾಸಕಿ  ಚೈತ್ರ ಎಂ ಸಿ   ಮಾರ್ಗದರ್ಶನದಲ್ಲಿ ನ್ಯೂಕ್ಲಿಯರ್ ಎಕ್ಸ್ಪೋಜನ್, ಡಿಮ್ -ಡಿಪ್ ಲೈಟ್ ಸೆನ್ಸರ್, ಸ್ಪೇಸ್ ಶೆಟಲ್, ಇಲೆಕ್ಟ್ರೋ ಮ್ಯಾಗ್ನೆಟಿಕ್ ಕ್ರೇನ್.. ಮೊದಲಾದ ಆಕರ್ಷಕ ವರ್ಕಿಂಗ್ ಮಾಡೆಲ್ ಗಳನ್ನು ತಯಾರಿಸಿದ…

Read More