ಲೇಖಕ: admin

ಮಡಿಕೇರಿ ಸೆ.2 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಇವರ ಸಂಯುಕ್ತಾಶ್ರಯದಲ್ಲಿ ಸೆ.5 ರಂದು ಬೆಳಗ್ಗೆ 10 ಗಂಟೆಗೆ ನಗರದ ಕೊಡಗು ಗೌಡ ಸಮಾಜದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು, ಶಾಸಕರಾದ ಡಾ.ಮಂತರ್ ಗೌಡ, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ, ಸಂಸದರಾದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ಎಸ್.ಎಲ್.ಭೋಜೇಗೌಡ, ನಗರಸಭೆ ಅಧ್ಯಕ್ಷರಾದ ಎನ್.ಪಿ.ಅನಿತಾ, ಕೊಡಗು ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿ.ಪಂ.ಸಿಇಒ ವರ್ಣಿತ್ ನೇಗಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಪಿ.ಕೆ.ಶ್ರೀನಿವಾಸ್, ಕರ್ನಾಟಕ ರಾಜ್ಯ…

Read More

ಮಡಿಕೇರಿ ಸೆ.2 : ಕೊಡಗು ಜಿಲ್ಲಾ ಮಡಿಕೇರಿ ನಗರ ವ್ಯಾಪ್ತಿಯ ಎಲ್ಲಾ ಆಹಾರ ವಸ್ತುಗಳ/ ಪದಾರ್ಥಗಳ ಉತ್ಪಾದಕರು, ಪ್ಯಾಕರ್‍ಗಳು, ಸಾಗಣಿದಾರರು, ಸಗಟು/ ಚಿಲ್ಲರೆ ಮಾರಾಟಗಾರರು, ವಿತರಕರು, ಹೋಟೆಲ್ ರೆಸಾರ್ಟ್, ಕ್ಯಾಂಟೀನ್, ಸಂಚಾರಿ ಸಿದ್ಧಪಡಿಸಿದ ಆಹಾರ ಮಾರಾಟಗಾರರು, ವೈನ್‍ಸ್ಟೋರ್, ಕ್ಲಬ್‍ಗಳು, ಬಾರ್ ಅಂಡ್ ರೆಸ್ಟೋರೆಂಟ್‍ಗಳು, ಹೋಮ್‍ಸ್ಟೇ ಗಳು, ಬೇಕರಿ, ಸಿಹಿತಿಂಡಿ, ಹಾಲು, ಹಾಲಿನ ಉತ್ಪನ್ನ, ಪ್ಯಾಕೇಜ್ಡ್ ಕುಡಿಯುವ ನೀರು ಘಟಕ/ ಮಾರಾಟಗಾರರು, ಹಣ್ಣು, ತರಕಾರಿಗಳು, ಕೋಳಿ, ಮೀನು, ಮಾಂಸ ಮಾರಾಟ, ರಸ್ತೆ ಬದಿ ಆಹಾರ ಪದಾರ್ಥ ಮಾರಾಟ, ಉಗ್ರಾಣಗಳು, ಸಂಸ್ಕರಣ ಘಟಕಗಳು, ಹಾಗೂ ಎಲ್ಲಾ ರೀತಿಯ ಆಹಾರ ಪದಾರ್ಥ ವಹಿವಾಟುದಾರರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ತರಬೇತಿ ಕಾರ್ಯಾಗಾರವು ನಗರದ ಗಾಂಧಿ ಭವನದಲ್ಲಿ ನಡೆಯಿತು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತಾಧಿಕಾರಿ ಡಾ.ಅನಿಲ್ ಧಾವನ್ ಅವರು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ಚೇಂಬರ್ ಆಫ್ ಕಾಮರ್ಸ್ ಸಹಕಾರದಲ್ಲಿ ನಡೆದ ಕಾರ್ಯಾಗಾರದಲ್ಲಿ ಆಹಾರ ಸುರಕ್ಷತೆ…

Read More

ಮಡಿಕೇರಿ ಸೆ.2 : ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಸೇರಿದಂತೆ ಸಂವಿಧಾನದತ್ತವಾದ 9 ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯಲು ಕೊಡಗು ಜಿಲ್ಲೆಯ ವಿವಿಧೆಡೆ ಪಾದಯಾತ್ರೆ ನಡೆಸಲು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಿರ್ಧರಿಸಿದೆ. ಕಾನೂನುಬದ್ಧ ಹಕ್ಕೊತ್ತಾಯಗಳ ಪ್ರತಿಪಾದಕ, ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರ ಜನ್ಮದಿನವಾದ ಸೆ.15 ರಂದು ಕೊಡವರ ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ (ತಾವುನಾಡ್) ಪಾದಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ತಲಕಾವೇರಿಯಿಂದ ಆರಂಭಗೊಳ್ಳುವ ಪಾದಯಾತ್ರೆ 5 ಹಂತಗಳಲ್ಲಿ ನಡೆಯಲಿದ್ದು, ಮಾರ್ಗದುದ್ದಕ್ಕೂ ಕೊಡವರನ್ನು ಭೇಟಿ ಮಾಡಲಾಗುವುದು. ಭೂತ, ವರ್ತಮಾನ ಮತ್ತು ಭವಿಷ್ಯದ ಭಂಡಾರವಾಗಿರುವ ಪ್ರತಿ ನಾಡ ಮಂದ್‍ಗಳಲ್ಲಿ ಸಭೆ ನಡೆಸಿ ಕೊಡವ ಜನಜಾಗೃತಿ ಮೂಡಿಸಲಾಗುವುದು. ಪಾದಯಾತ್ರೆಯು ನವೆಂಬರ್ ಎರಡನೇ ವಾರ ಶ್ರೀಪಾಡಿ ಇಗ್ಗುತ್ತಪ್ಪ ಕ್ಷೇತ್ರದಲ್ಲಿ ಸಮಾರೋಪಗೊಳ್ಳಲಿದೆ. ಮೊದಲ ಹಂತ ಸೆ.15 ರಂದು ತಾವುನಾಡ್, ದೇಶ ಮಂದ್, ಬಲ್ಲತ್‍ನಾಡ್, ಬೆಂಗ್‍ನಾಡ್ (ಮಡಿಕೇರಿ ತಾಲೂಕು) ಮೂಲಕ ಹಾದು ಹೋಗುತ್ತದೆ. ಸೆ.16 ರಂದು ಕುಯಂಗೇರಿನಾಡ್, ಕಗ್ಗೋಡ್ ನಾಡ್, ಮಡಿಕೇರಿ ನಾಡ್…

Read More

ಕುಶಾಲನಗರ, ಸೆ.2 : ಉತ್ತರ ಕೊಡಗಿನ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು(ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ, ಶಾಲಾ ಶಿಕ್ಷಣ ಇಲಾಖೆಯ ನೆರವಿನೊಂದಿಗೆ ಶಾಲೆಯ ಇಕೋ ಕ್ಲಬ್, ರಾಷ್ಟ್ರೀಯ ಸೇವಾ ಯೋಜನೆ ( ಎನ್.ಎಸ್.ಎಸ್.), ವಿದ್ಯಾರ್ಥಿ ಸಂಘ, ಎಸ್.ಡಿ.ಎಂ.ಸಿ.ವತಿಯಿಂದ ‘ಸ್ವಚ್ಛ ಭಾರತ ಅಭಿಯಾನ’ದಡಿ “ಸ್ವಚ್ಛತಾ ಪಖ್ವಾಡ್ ಆಂದೋಲನ”ಕ್ಕೆ ಚಾಲನೆ ನೀಡಲಾಯಿತು. ಆಂದೋಲನದ ಅಂಗವಾಗಿ ಸ್ವಚ್ಛತಾ ಶಪಥ ದಿನ ಹಾಗೂ ಸ್ವಚ್ಛತಾ ಜಾಗೃತಿ ದಿನಾಚರಣೆ ಆಚರಿಸುವ ಮೂಲಕ ಶಾಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಚತೆ ಕಾಪಾಡುವ ಮೂಲಕ “ಸ್ವಚ್ಛ ಶಾಲೆ- ಸ್ವಚ್ಛ ಪರಿಸರ” – ‘ನಮ್ಮ ಗುರಿ’ ಎಂದು ವಿದ್ಯಾರ್ಥಿಗಳು ಸಂಕಲ್ಪ ಮಾಡಿದರು. ಮಕ್ಕಳಿಗೆ ಸ್ವಚ್ಚತಾ ಪಖ್ವಾಡದ ಮಹತ್ವ ಹಾಗೂ ಸ್ವಚ್ಛತೆಯ ಅರಿವು ಕುರಿತ ಸಂದೇಶ ನೀಡಿದ ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್ ನ ಕೊಡಗು ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮ್ ಕುಮಾರ್, ಸೆ.1 ರಿಂದ ಸೆ.15ರವರೆಗೆ ಎರಡು ವಾರಗಳ ಕಾಲ ಶಾಲಾ…

Read More

ಮಡಿಕೇರಿ ಸೆ.2 :  ಆಲೂರು ರೇಂಜ್ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ವೇಳೆ  ಆನೆ ದಾಳಿಯಿಂದ ಮೃತಪಟ್ಟ  ಅರಣ್ಯ ಇಲಾಖೆ ಸಿಬ್ಬಂದಿ, ಶಾರ್ಪ್ ಶೂಟರ್ ವೆಂಕಟೇಶ್  ಮನೆಗೆ  ಶಾಸಕ ಡಾ.ಮಂತರ್ ಗೌಡ  ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

Read More

ಮಡಿಕೇರಿ ಸೆ.2 : ಮಡಿಕೇರಿಯ ಇಂದಿರಾನಗರದ ಮನೆಯೊಂದರಲ್ಲಿ ಸೇರಿಕೊಂಡಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ತಜ್ಞ ಯದುಕುಮಾರ್ ರಕ್ಷಿಸಿದ್ದಾರೆ. ಇಂದಿರಾ ನಗರದ ಹೆಚ್.ಟಿ.ಶಿವಪ್ಪ ಎಂಬವರ ಮನೆಯ ದೇವರ ಕೋಣೆಯಲ್ಲಿ ಸೇರಿಕೊಂಡಿದ್ದ 13 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ತಜ್ಞ ಯದುಕುಮಾರ್ ಸುರಕ್ಷಿತವಾಗಿ ಸೆರೆ ಹಿಡಿದು, ಮದೆನಾಡು ದೇವರ ಕಾಡಿಗೆ ಬಿಟ್ಟರು. ಯದುಕುಮಾರ್ ವಿವಿಧ ಜಾತಿಯ ಹಾವುಗಳನ್ನು ರಕ್ಷಿಸಿದ್ದು, ಸುರಕ್ಷಿತವಾಗಿ ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ.

Read More

ಮೂರ್ನಾಡು ಸೆ.2 : ಮೂರ್ನಾಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಾಲಿಬಾಲ್ ತಂಡದ ವಿದ್ಯಾರ್ಥಿನಿಯರು ವಿಭಾಗೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಮಡಿಕೇರಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆಯ ವತಿಯಿಂದ ಆಯೋಜಸಲಾದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರಾಥಮಿಕ ಶಾಲೆಯ 14 ವರ್ಷದ ಕೆಳಗಿನ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ಮೈಸೂರಿನಲ್ಲಿ ನಡೆಯುವ ವಿಭಾಗೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕಿ ವಿ.ಕೆ.ಲಲಿತ, ದೈಹಿಕ ಶಿಕ್ಷಕಿ ಪ್ರೇಮಲತ ಶೆಡ್ತಿ ಮತ್ತು ಶಾಲಾ ಹಿರಿಯ ಶಿಕ್ಷಕಿ ಬಿ.ಎನ್. ಪುಷ್ಪಾವತಿ ಮತ್ತು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ವಿಜೇತ  ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ವಲಯ ಮಟ್ಟದ ಕ್ರೀಡಾಕೂಟದಲ್ಲಿ ಪ್ರಾಥಮಿಕ ಶಾಲಾ ಬಾಲಕಿಯರ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಪ್ರಥಮ, ಬಾಲಕರು ಮತ್ತು ಬಾಲಕಿಯರ ಖೊಖೊ ಪಂದ್ಯಾವಳಿಯಲ್ಲಿ ಪ್ರಥಮ, ಮೇಲಾಟದಲ್ಲಿ ಬಾಲಕಿಯರ ರಿಲೆ ಪ್ರಥಮ, ಬಾಲಕಿಯರ 100 ಮೀಟರ್ ಮತ್ತು 200 ಮೀಟರ್ ಓಟದಲ್ಲಿ ಪ್ರಥಮ, 400 ಮೀಟರ್ ಓಟದಲ್ಲಿ ದ್ವಿತೀಯ, ಬಾಲಕರ 200…

Read More

ಮಡಿಕೇರಿ ಸೆ.2 :   ಮೇಕೇರಿಯ ಸ್ವಾಗತ ಯುವಕ ಸಂಘ, ಸುಭಾಷ್ ನಗರದ ವಿನಾಯಕ ಗೆಳೆಯರ ಬಳಗ ಹಾಗೂ ಮೇಕೇರಿಯ ಮಹಿಳಾ ಸಂಘಗಳ ಒಕ್ಕೂಟ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಮೇಕೇರಿ ಗ್ರಾಮದಲ್ಲಿ  ಸ್ವಚ್ಚತಾ ಶ್ರಮದಾನ ನಡೆಯಿತು. ಸ್ವಚ್ಚತಾ ಕಾರ್ಯದಲ್ಲಿ ಪುರುಷರು ಮಹಿಳೆಯರಾದಿಯಾಗಿ ಸುಮಾರು 50ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಪಾಲ್ಗೊಂಡು ಸ್ವಚ್ಚ ಗ್ರಾಮ ಸಂಕಲ್ಪ ಕೈಗೊಂಡರು. ಸುಭಾಶ್ ನಗರ ಜಂಕ್ಷನ್‌, ಶಕ್ತಿನಗರ ಜಂಕ್ಷನ್‌, ಬಿಳಿಗೇರಿ ಜಂಕ್ಷನ್‌ ಹಾಗೂ ಕಾವೇರಿ ಬಡಾವಣೆಯಿಂದ ಮೇಕೇರಿ ಶಾಲೆವರೆಗೆ ಸ್ವಚ್ಚತಾ ಕಾರ್ಯ ನಡೆಯಿತು. ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ವಿವಿಧ ತ್ಯಾಜ್ಯ ವಸ್ತುಗಳನ್ನು  ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು.  ಇದೇ ಸಂದರ್ಭ ರಸ್ತೆಯ 2 ಬದಿಯ ಕುರುಚಲು ಕಾಡು ಗಿಡಗಳನ್ನು ಕಡಿದು ತೆರವುಗೊಳಿಸಲಾಯಿತು. ಗ್ರಾಮದ ನಾಲ್ಕೂ ದಿಕ್ಕಿನಿಂದ ಸ್ವಚ್ಫತಾ ಕಾರ್ಯದೊಂದಿಗೆ ಶಾಲಾ ಮೈದಾನಕ್ಕೆ ಆಗಮಿಸಿದ ಗ್ರಾಮಸ್ಥರು ಶಾಲಾ ಮೈದಾನ ಹಾಗೂ ಅಂಗನವಾಡಿ ಸುತ್ತಲೂ ಬೆಳೆದು ನಿಂತಿದ್ದ ಕಾಡು ಕಸವನ್ನು ತೆರವುಗೊಳಿಸಿ ಮೈದಾನವನ್ನು ಶುಚಿಗೊಳಿಸಿದರು.…

Read More

ಮಡಿಕೇರಿ ಸೆ.3 :  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್, ಕುಶಾಲನಗರ ವಲಯ ಹಾಗೂ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ  ವಲಯ ಮಟ್ಟದ ಕೌಟುಂಬಿಕ ಸೌಹಾರ್ದತೆ ಮತ್ತು ಗ್ರಾಮ ಸುಭಿಕ್ಷೆ ಕಾರ್ಯಕ್ರಮ  ಕುಶಾಲನಗರದ ಎ.ಪಿ.ಸಿ.ಎಮ್.ಎಸ್ ಹಾಲ್ ಸಭಾಂಗಣದಲ್ಲಿ ನಡೆಯಿತು.     ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿ, ಸಹಕಾರ ಕ್ಷೇತ್ರಗಳಲ್ಲಿ ಸ್ವ-ಸಹಾಯ ಸಂಘಗಳು ಸಾರ್ವಜನಿಕರಿಗೆ ಯಾವ ರೀತಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಹಕರಿಸುತ್ತಿದೆ ಎಂಬ ವಿಚಾರವಾಗಿ ಪ್ರಸ್ತಾಪಿಸಿದರು. ಸಂಘಗಳು ಸದಸ್ಯರ ಹಾಗೂ ಗ್ರಾಮಭಿವೃದ್ಧಿಯಲ್ಲಿ ಉತ್ತಮವಾಗಿ ಕಾರ್ಯಾಚರಿಸಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ  ಟ್ರಸ್ಟ್ ನಲ್ಲಿ ಕಾಯ್ದಿರಿಸಲಾಗಿದ್ದ ಆರೋಗ್ಯ ವಿಮೆ, ಸಂಘದಿಂದ ವ್ಯವಹಾರಗಳ ಮೇಲಿನ ಸಾಲ, ಸಂಘದ ಸದಸ್ಯರ ಮಕ್ಕಳ ವಿದ್ಯಾರ್ಥಿ ವೇತನ ಮತ್ತು ಸಂಘದ ಸದಸ್ಯರ ಜಾಮೀನುದಾರರ ಅಥವಾ ಸದಸ್ಯರ ಅಕಾಲಿಕ ಮರಣ ಉಂಟಾದ ಸಂದರ್ಭ ನೀಡುವ ಸಾಲ ಮನ್ನ ಮೊದಲಾದ ಅನುದಾನಗಳ ಪ್ರಮಾಣಪತ್ರಗಳನ್ನು ಶಾಸಕರು ಟ್ರಸ್ಟ್ ನ ಅಧೀನದಲ್ಲಿ…

Read More

ಮಡಿಕೇರಿ ಸೆ.2 : ಕೈಲ್ ಮುಹೂರ್ತ (ಕೈಲ್‍ಪೊಳ್ದ್) ಪ್ರಯುಕ್ತ ಸೆ.3 ರಂದು ತಾಳತ್ತಮನೆಯಲ್ಲಿ 39ನೇ ವರ್ಷದ ಗ್ರಾಮೀಣ ಕ್ರೀಡಾಕೂಟ ನಡೆಯಲಿದೆ. ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ನೆಹರು ಯುವ ಕೇಂದ್ರ, ಮಡಿಕೇರಿ ತಾಲೂಕು ಯುವ ಒಕ್ಕೂಟ, ತಾಳತ್ತಮನೆ ನೇತಾಜಿ ಯುವತಿ ಮಂಡಳಿಯ ಸಂಯುಕ್ತಾಶ್ರಯದಲ್ಲಿ ತಾಳತ್ತಮನೆಯ ಸ.ಹಿ.ಪ್ರಾ.ಶಾಲೆ ಆವರಣದಲ್ಲಿ ಬೆಳಿಗ್ಗೆ 9 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಕಾಫಿ ಬೆಳೆಗಾರ ಲೋಕೇಶ್ ದೇವಾಯಿತ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮದೆ ಗ್ರಾ.ಪಂ ಸದಸ್ಯ, ನೇತಾಜಿ ಯುವಕ ಮಂಡಲದ ಅಧ್ಯಕ್ಷ ಜೀವನ್ ಪರ್ಲಕೋಟಿ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಪೊಲೀಸ್ ಇಲಾಖೆ ನಿವೃತ್ತರಾದ ಮುಕ್ಕಾಟಿ ಪ್ರಭಾಕರ, ಬೆಳೆಗಾರ ಬೊಟ್ಟೋಳಂಡ ಕಾವೇರಮ್ಮ ಈರಪ್ಪ ಪಾಲ್ಗೊಳ್ಳಲಿದ್ದಾರೆ. ಅಪರಾಹ್ನ 1 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

Read More