ಲೇಖಕ: admin

ಸೋಮವಾರಪೇಟೆ ಆ.31 : ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಲಯ ಮಟ್ಟದ ಕ್ರೀಡಾಕೂಟದ ಹಲವು ಕ್ರೀಡೆಯಲ್ಲಿ ಜಯಗಳಿಸಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಟೇಬಲ್ ಟೆನ್ನಿಸ್‍ನ ಬಾಲಕ ಮತ್ತು ಬಾಲಕೀಯರ ವಿಭಾಗದಲ್ಲಿ ಪ್ರಥಮ ಸ್ಥಾನ, ಖೋ ಖೋ ಬಾಲಕರು ಮತ್ತು ಬಾಲಕಿಯರು, ಕಬಡ್ಡಿ ಬಾಲಕರು ಮತ್ತು ಬಾಲಕಿಯರು, ಷಟಲ್ ಬ್ಯಾಡ್ಮಿಂಟನ್ ಬಾಲಕರು, ಬ್ಯಾಸ್ಕೆಟ್ ಬಾಲ್ ಬಾಲಕರು ದ್ವಿತೀಯ ಸ್ಥಾನ, 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಜ್ವಲ್ ದ್ವಿತೀಯ ಹಾಗೂ 3000 ಮೀಟರ್ ಓಟದ ಸ್ಪರ್ಧೆಯಲ್ಲಿ ಸುಪ್ರಿತ್ ತೃತೀಯ ಸ್ಥಾನಗಳಿಸಿದರು. 

Read More

ಸೋಮವಾರಪೇಟೆ ಆ.31 : ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಮಡಿಕೇರಿಯ ಜಿಲ್ಲಾ ಕ್ರೀಡಾಂಗದಲ್ಲಿ ನಡೆದ ಜಿಲ್ಲಾ ಮಟ್ಟದ ವಾಲಿಬಾಲ್ ಕ್ರೀಡಾಕೂಟದ ಬಾಲಕಿಯರ ವಿಭಾಗದಲ್ಲಿ ಸೋಮವಾರಪೇಟೆ ತಾಲ್ಲೂಕಿನ ವಿಶ್ವಮಾನವ ಕುವೆಂಪು ಆಂಗ್ಲ ಮಾಧ್ಯಮ ಶಾಲೆಯ ವಾಲಿಬಾಲ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಕ್ವಾಟರ್‍ಫೈನಲ್‍ನಲ್ಲಿ ವಿರಾಜಪೇಟೆ ಹಾಗೂ ಫೈನಲ್‍ನಲ್ಲಿ ಮಡಿಕೇರಿ ತಂಡವನ್ನು ಮಣಿಸಿ, ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ತಂಡದಲ್ಲಿ ನಾಯಕಿ ಎಚ್.ಆರ್.ಬಿಂದು, ಎಚ್.ಆರ್.ಜೀವಿತ, ವರ್ಣಿಕಾ ಗೌಡ, ಕೆ.ಎಲ್.ಕೃತಿ, ವಿದ್ಯಾಗೌರಿ, ಡಿ.ಆರ್.ರಿಶಿಕಾ, ಗನಿಕಾ, ಹನಿ ಅವರುಗಳು ವಿಭಾಗೀಯ ಮಟ್ಟದಲ್ಲಿ ಕೊಡಗು ತಂಡವನ್ನು ಪ್ರತಿನಿಧಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕಿ ಇಂದಿರಾ, ಶಾಲೆಯ ಮುಖ್ಯಶಿಕ್ಷಕಿ ಮಿಲ್‍ಡ್ರೆಡ್ ಗೋನ್ಸಾಲ್ವೆಸ್, ಉಪನ್ಯಾಸಕ ಲಾಂಛನ್ ತರಬೇತಿ ನೀಡಿದ್ದಾರೆ.

Read More

ಸಿದ್ದಾಪುರ ಆ.31  : ಆಚಾರ ವಿಚಾರ ಸಂಸ್ಕೃತಿ ಪರಂಪರೆಯೊಂದಿಗೆ ಎಲ್ಲಾ ಹಬ್ಬಗಳ ಆಚರಣೆಯು ನಡೆಯುತ್ತಿದ್ದು, ಎಲ್ಲರನ್ನೂ ಒಗ್ಗೂಡಿಸಿ ಆಚರಿಸುವ ಹಬ್ಬಗಳ ಮೂಲಕ ಬಾಂಧವ್ಯ ಬೆಸಿಗೆಯೊಂದಿಗೆ ಸೌಹಾರ್ದ ಸಮಾಜ ನಿರ್ಮಾಣವಾಗಲಿದೆ ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ಹೇಳಿದರು. ನೆಲ್ಯಹುದಿಕೇರಿಯ ಕೊಫಿಯ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಆರನೇ ವರ್ಷದ ಸೌಹಾರ್ದ ಓಣಂ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ಕೇರಳದಲ್ಲಿ ಹೆಸರುವಾಸಿಯಾಗಿರುವ ಓಣಂ ಸಂಭ್ರಮ ಕೊಡಗು ಜಿಲ್ಲೆಯಲ್ಲಿಯೂ ಬಾಂಧವರು ಆಚರಣೆ ಮಾಡುತ್ತಿರುವುದು ಸಂತಸ ತಂದಿದೆ. ಜಾತಿ ಮತ ಭೇದವಿಲ್ಲದೆ ಕೊಫಿಯ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಕಳೆದ ಆರು ವರ್ಷಗಳಿಂದ ಎಲ್ಲಾ ಬಂದವರನ್ನು ಒಗ್ಗೂಡಿ ಓಣಂ ಹಬ್ಬ ಆಚರಣೆಯ ಮೂಲಕ ಸೌಹಾರ್ದತೆ ಮೂಡಿಸುತ್ತಿರುವ ಕೊಫಿಯ ಹೋಟೆಲ್ ಮಾಲೀಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಓಣಂ ಹಬ್ಬ ಆಚರಣೆಯ ಅಂಗವಾಗಿ ಮ್ಯೂಸಿಕ್ ಗ್ಯಾಲರಿಯ ತಂಡದವರ ಗಾನ ಮೇಳದೊಂದಿಗೆ ಮಹಿಳೆಯರು, ಪುಟಾಣಿಗಳು ನೃತ್ಯದ ಮೂಲಕ ಸಂಭ್ರಮಿಸಿದರು. ಬಗೆ ಬಗೆಯ ಆಹಾರ ಪದಾರ್ಥಗಳ ಓಣಂ ಸದ್ಯ ಹಬ್ಬದೂಟದಲ್ಲಿ ಪಾಲ್ಗೊಂಡು…

Read More

ನಾಪೋಕ್ಲು ಆ.31 : ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ಮಾಜಿ ಸಂಸದ ಡಿ.ಕುಪೇಂದ್ರ ರೆಡ್ಡಿ ಅನುದಾನದ ಹಾಗೂ ಸ್ವಂತ ದುಡ್ಡಿನಲ್ಲಿ ವಿಶಾಲವಾದ ಪೌಳಿ, ಬೋಧನಾ ಇತರ ಕಟ್ಟಡ ನಿರ್ಮಿಸಲಾಗಿದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಪೌಳಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರಾಧ್ಯ ದೈವ ಇಗ್ಗುತ್ತಪ್ಪ ದೇವಾಲಯದ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದರು. ಪ್ರವಾಸೋದ್ಯಮ ಇಲಾಖೆಯು ಈ ಹಿಂದೆ ನಿರ್ಮಿಸಿದ ಕಟ್ಟಡವನ್ನು ಸರ್ಕಾರದ ವತಿಯಿಂದ ದುರಸ್ತಿ ಮಾಡಲಾಗುವುದು ಈ ಬಗ್ಗೆ ಸಂಬಂಧಿಸಿದವರಿಗೆ ಸೂಚಿಸಲಾಗಿದೆ. ದೇವಾಲಯಕ್ಕೆ ಅತ್ಯಗತ್ಯವಾದ ಊಟದ ಸಭಾಂಗಣವನ್ನು ಲೋಕಾರ್ಪಣೆ ಮಾಡಲಾಗಿದ್ದು, ಇದೊಂದು ಐತಿಹಾಸಿಕ ಕ್ಷಣ ಎಂದರು. ಈ ಸಂದರ್ಭ ದೇವಾಲಯದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿ ಮಳೆ ಕೊರತನಿಗಿ ರೈತರು ಬೆಳೆಸಿದ ಬೆಳೆ ಸಮೃದ್ಧಿಯಾಗಿ ನಾಡು ಸುಭಿಕ್ಷೆಯಾಗಲಿ ಎಂದು ಪ್ರಾರ್ಥಿಸಿಕೊಂಡರು. ಮಾಜಿ ಸಂಸದ ಡಿ.ಕುಪೇಂದ್ರ ರೆಡ್ಡಿ ಮಾತನಾಡಿ, ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ, ಭಕ್ತರ…

Read More

ಮಡಿಕೇರಿ ಆ.30 : ರಾಷ್ಟ್ರ ಮಟ್ಟದ ದೇಹದಾಡ್ಯ ಸ್ಪರ್ಧೆಯಲ್ಲಿ ಕೊಡಗಿನ ಗಣೇಶ್ ಗಮನಾರ್ಹ ಸಾಧನೆ ಮಾಡಿದ್ದು, ಚಿನ್ನ ಮತ್ತು ಕಂಚು ಗೆದ್ದಿದ್ದಾರೆ. ಬೆಂಗಳೂರಿನಲ್ಲಿ ಹೊಸಕೋಟೆ ಹೋಬಳಿಪುರದಲ್ಲಿ ನಡೆದ “ವಲ್ಡ್ ಫಿಟ್ನೆಸ್ ಫೆಡರೇಷನ್ ರಾಯಲ್ ಕ್ಲಾಸಿಕ್ -2023” ದೇಹದಾಡ್ಯ ಸ್ಪರ್ಧೆಯಲ್ಲಿ 55 ಕೆ.ಜಿ ವಿಭಾಗದಲ್ಲಿ ಗಣೇಶ್ ದ್ವಿತೀಯ ಸ್ಥಾನ ಪಡೆದು, ಮಿಸ್ಟರ್ ಕರ್ನಾಟಕ ಬಿರುದಿಗೆ ಪಾತ್ರರಾಗಿದ್ದಾರೆ. ಚೆನ್ನೈನಲ್ಲಿ ನಡೆದ ರಾಷ್ಟ್ರ ಮಟ್ಟದ ದೇಹದಾಡ್ಯ ಐಕಾನ್ ಇಂಡಿಯಾ ಸ್ಪರ್ಧೆಯಲ್ಲಿ “ನ್ಯಾಚುರಲ್ ದೇಹದಾಡ್ಯ ಮುಕ್ತ ವಿಭಾಗದಲ್ಲಿ ಒಂದು ಚಿನ್ನ ಮತ್ತು ಒಂದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ತನ್ನ ಕ್ರೀಡಾ ಸಾಧನೆಗೆ ಪ್ರೋತ್ಸಾಹ ನೀಡುತ್ತಿರುವ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಹಾಗೂ ಮಡಿಕೇರಿಯ ಸುರಭಿ ಹೊಟೇಲ್ ಮಾಲೀಕರಿಗೆ ಗಣೇಶ್ ಧನ್ಯವಾದ ಸಲ್ಲಿಸಿದ್ದಾರೆ.

Read More

ಮಡಿಕೇರಿ ಆ.30 : ಕುಂದಚೇರಿ ವ್ಯಾಪ್ತಿಯ ಗ್ರಾಮಗಳ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸುವುದಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭರವಸೆ ನೀಡಿದ್ದಾರೆ. ಕುಂದಚೇರಿ ವಲಯ ಕಾಂಗ್ರೆಸ್ ಮತ್ತು ಸಾರ್ವಜನಿಕರ ವತಿಯಿಂದ ಕುಂದಚೇರಿ ಶಾದಿ ಮಹಲ್‌ನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಪ್ರಮುಖರು ನೀಡಿದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಪರಿಶೀಲಿಸಿದ ಪೊನ್ನಣ್ಣ ಅವರು ಶೀಘ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಂದಚೇರಿ ಕಾಂಗ್ರೆಸ್ ವಲಯಾಧ್ಯಕ್ಷ ಕೆ.ಎಂ.ಹರೀಶ್, ಶಾಸಕ ಪೊನ್ನಣ್ಣ ಅವರು ಜನಪರ ಕಾಳಜಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಕೆಪಿಸಿಸಿ ಸದಸ್ಯ ಬೇಕಲ್ ರಮಾನಾಥ್ ಹಾಗೂ ಪ್ರಮುಖ ಎಂ.ಆರ್.ಗಣೇಶ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಸ್ಯೆ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಕೆ.ಎಸ್.ಅಣ್ಣಯ್ಯ ಹಾಗೂ ಮೂವನ ಶಿವರಾಮ್ ಶಾಸಕರ ಗಮನ ಸೆಳೆದರು. ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಕೂಡ ಶಾಸಕರಿಗೆ ಮನವಿ ಸಲ್ಲಿಸಿದರು. ಕುಂದಚೇರಿ ವಲಯ ಕಾಂಗ್ರೆಸ್…

Read More

ಮಡಿಕೇರಿ ಆ.30 : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ನಲ್ಲಿ ಕಳೆದು ಹೋಗಿದ್ದ ಚಿನ್ನದ ಬ್ರೇಸ್ ಲೆಟ್ ಅನ್ನು ನಗರ ಠಾಣೆಯ ಸಿಬ್ಬಂದಿ ವಾರಸುದಾರರಿಗೆ ನೀಡಿದ್ದಾರೆ. ಪತ್ರಕರ್ತ, ಸೋಮವಾರಪೇಟೆ ನಿವಾಸಿ ತೇಲಪಂಡ ಕವನ್ ಕಾರ್ಯಪ್ಪ ಅವರು ಆ.29ರಂದು ಕುಶಾಲನಗರದಿಂದ ಮಡಿಕೇರಿಗೆ ಬರುತ್ತಿದ್ದ ಸಂದರ್ಭ ಬ್ರೇಸ್ ಲೆಟ್ ಕಳೆದುಕೊಂಡಿದ್ದರು. ಬಸ್‍ನಲ್ಲಿದ್ದ ಪ್ರಯಾಣಿಕರೋರ್ವರು ಬ್ರೇಸ್ ಲೆಟ್ ಅನ್ನು ಚಾಲಕರಿಗೆ ನೀಡಿ, ಮಡಿಕೇರಿ ಬಸ್ ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಪ್ರೀತಿ ಘಾಟಗೆ ಅವರಿಗೆ ಮಾಹಿತಿ ನೀಡಿದ್ದರು. ಬುಧವಾರ ವಾರಸುದಾರ ಕವನ್ ಕಾರ್ಯಪ್ಪ ಅವರು ನಗರ ಠಾಣೆಯಲ್ಲಿ ಪ್ರೀತಿ ಘಾಟ ಅವರಿಂದ ಬ್ರೇಸ್ ಲೆಟ್ ಅನ್ನು ಪಡೆದುಕೊಂಡರು. ಬ್ರೇಸ್ ಲೆಟ್ ವಾರಸುದಾರರಿಗೆ ತಲುಪುವಂತೆ ಮಾಡಿದ ಪ್ರಯಾಣಿಕನ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.

Read More

ಮಡಿಕೇರಿ ಆ.30 : ಕೆಎಸ್‌ಆರ್‌ಟಿಸಿ ಮಡಿಕೇರಿ ಡಿಪೋ ಘಟಕದ ವ್ಯವಸ್ಥಾಪಕಿಯ ಕಿರುಕುಳದಿಂದ ಸಿಬ್ಬಂದಿ ಅಭಿಷೇಕ್ ಎಂಬುವವರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಮತ್ತು ಇವರನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ನೌಕರರು ಪ್ರತಿಭಟನೆ ನಡೆಸಿದರು. ನಗರದ ಡಿಪೋದಲ್ಲಿ ಪ್ರತಿಭಟನೆ ನಡೆಸಿದ ನೌಕರರು, ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಮಡಿಕೇರಿ ಡಿಪೋದಲ್ಲಿ ಬಸ್‍ಗಳನ್ನು ಸ್ವಚ್ಛ ಮಾಡಲು ಯಂತ್ರಗಳಿವೆ. ಇದಕ್ಕಾಗಿಯೇ ಲಕ್ಷಾಂತರ ರೂ.ಗಳನ್ನು ಇಲಾಖೆಯಿಂದ ವ್ಯಯಿಸಲಾಗುತ್ತಿದೆ. ಹೀಗಿದ್ದರೂ ಸಿಬ್ಬಂದಿಗಳ ಕೈಯಿಂದಲೇ ಬಸ್ ನ್ನು ಸ್ವಚ್ಚಗೊಳಿಸಲಾಗುತ್ತಿದೆ. ಹೆಚ್ಚುವರಿಯಾಗಿ ಮಾಡಿದ ಕೆಲಸಕ್ಕೆ ಹೆಚ್ಚುವರಿ ಸಂಬಳ ನೀಡುತ್ತಿಲ್ಲ. ಈ ಅವ್ಯವಸ್ಥೆ ಕೇವಲ ಪುತ್ತೂರು ಡಿಪೋ ವಿಭಾಗಗಳಲ್ಲಿ ಹೆಚ್ಚು ಕಂಡು ಬರುತ್ತಿದೆ ಎಂದು ಆರೋಪಿಸಿದರು. ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಪುತ್ತೂರು ಡಿಪೋ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಅವರಿಗೆ ನೀಡಿದರು. ಕೆಎಸ್‍ಆರ್‍ಟಿಸಿ ನೌಕರರ ಸಂಘದ ರಾಜ್ಯಾಧ್ಯಕ್ಷ ಜಗದೀಶ್ ಮಾತನಾಡಿ ಬೆಂಗಳೂರು ಕೇಂದ್ರ ಕಚೇರಿಯ ಅಧಿಕಾರಿಗಳು ಮಡಿಕೇರಿ ಡಿಪೋ ವ್ಯವಸ್ಥಾಪಕಿಯನ್ನು ವರ್ಗಾವಣೆ ಮಾಡಿದ್ದಾರೆ. ಪ್ರಕರಣದ ತನಿಖಾ ವರದಿ ಬಂದ ಬಳಿಕ…

Read More

ಮಡಿಕೇರಿ ಆ.30 : ಸ್ನೇಹಾಚರದ ಸಂಕೇತವಾದ ರಕ್ಷಾ ಬಂಧನ ಕಾರ್ಯಕ್ರಮದ ಅಂಗವಾಗಿ ಓಬಿಸಿ ಘಟಕದಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ವಿರಾಜಪೇಟೆ ನಗರ ಬಿಜೆಪಿಯ ಅಂಗವಾದ ಓಬಿಸಿ ಘಟಕದ ಕಾರ್ಯಕರ್ತರು ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹೆಣ್ಣು ಹಂಪಲು ವಿತರಿಸಿದರು. ನಂತರ ಮಾತನಾಡಿದ ನಗರ ಓಬಿಸಿ ಘಟಕದ ಅದ್ಯಕ್ಷ ಸುರೇಶ್ ಚಾಮಿ, ಭಾತೃತ್ವದ ಸಂಕೇತವಾದ ರಕ್ಷಾ ಬಂಧನವು ಸಂಬಂಧದ ಪ್ರತಿಕವಾಗಿದೆ. ನಾಡಿನ ಸರ್ವ ಜನರು ಸುಖ ಶಾಂತಿಯಿಂದ ಜೀವನ ಮಾಡಬೇಕು. ಸಂಬಂಧಗಳು ಅನನ್ಯವಾಗಿರಲು ಮತ್ತು ಗಟ್ಟಿಯಾಗಿರಲು ರಕ್ಷ ಬಂಧನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ನಿಟ್ಟಿನಲ್ಲಿ ಹಬ್ಬದ ಆಚರಣೆಯು ಅರ್ಥಪೂರ್ಣವಾಗಿರಬೇಕು ಎಂದರು. ತಾಲೂಕು ಓಬಿಸಿ ಘಟಕದ ಅಧ್ಯಕ್ಷ ಸಾಯಿನಾಥ್ ನಾಯಕ್ ಮಾತನಾಡಿ, ಸೌಹಾರ್ದಯುತ ಜೀವನ ಸಮಾಜದ ಭಾಗವಾಗಬೇಕು. ಒಳಿತನ್ನು ಬಯಸುವ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು. ನಗರ ಓಬಿಸಿ ಘಟಕದ ಕಾರ್ಯದರ್ಶಿ ದರ್ಶನ್, ಸಹ ಕಾರ್ಯದರ್ಶಿ ಸುಭಾಷ್, ಅನೀಲ್ ಕುಮಾರ್, ಲೋಕೇಶ್ ಆಚಾರ್ಯ, ಮಂಜು, ಈಶ್ವರ್, ಆಶೋಕ್, ಸೂರಪ್ಪ,…

Read More

ವಿರಾಜಪೇಟೆ  ಆ.30 : ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಡಿಕೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ವಿರಾಜಪೇಟೆಯ ಸಂತ ಅನ್ನಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಬಾಲಕಿಯರ ತಂಡವು ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ತಂಡ ಮಂಗಳೂರಿನಲ್ಲಿ ನಡೆಯಲಿರುವ ಮುಂದಿನ ಪಂದ್ಯಾಟಕ್ಕೆ ಆಯ್ಕೆಯಾಗಿದೆ. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಾದ ಅಂತೋಣಿ, ಶಿನಿ ತರಬೇತಿ ನೀಡಿದ್ದಾರೆ.

Read More