ಮಡಿಕೇರಿ ಆ.31 : ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕುಶಾಲನಗರ ಸಮೀಪದ ದುಬಾರೆ ಮತ್ತು ಹಾರಂಗಿ ಸಾಕಾನೆ ಶಿಬಿರದಿಂದ ಒಟ್ಟು ನಾಲ್ಕು ಆನೆಗಳನ್ನು ಗುರುವಾರ ಕಳುಹಿಸಿಕೊಡಲಾಯಿತು. ದುಬಾರೆ ಶಿಬಿರದ ಧನಂಜಯ (45), ಗೋಪಿ (41) ಕಂಚನ್ (24) ಹಾಗೂ ಹಾರಂಗಿ ಶಿಬಿರದಲ್ಲಿದ್ದ ವಿಜಯ (63) ಆನೆಗಳನ್ನು ಲಾರಿಯಲ್ಲಿ ಕರೆದೊಯ್ಯಲಾಯಿತು. ಆನೆಗಳ ಮಾವುತರಾದ ಭಾಸ್ಕರ, ನವೀನ್ ಕುಮಾರ್, ಬೋಜಪ್ಪ, ವಿಜಯ ಕಾವಾಡಿಗಳಾದ ಮಣಿ, ಶಿವು, ಭರತ್, ಮಣಿಕಂಠ ಹಾಗೂ ಸಿಬ್ಬಂದಿಗಳು ಜೊತೆಯಲ್ಲಿ ತೆರಳಿದರು. ಕಂಚನ್ ಆನೆಯನ್ನು ಹೊರತುಪಡಿಸಿ ಉಳಿದ ಎಲ್ಲಾ ಆನೆಗಳು ಹಿಂದಿನ ವರ್ಷಗಳಲ್ಲಿ ದಸರಾದಲ್ಲಿ ಪಾಲ್ಗೊಂಡಿದ್ದವು ಎಂದು ಕುಶಾಲನಗರ ವಲಯ ಅರಣ್ಯ ಅಧಿಕಾರಿ ಕೆ.ವಿ.ಶಿವರಾಂ ಮಾಹಿತಿ ನೀಡಿದ್ದಾರೆ.
ಲೇಖಕ: admin
ಮಡಿಕೇರಿ ಆ.31 : ದಿನದಿಂದ ದಿನಕ್ಕೆ ಮಡಿಕೇರಿ ನಗರ ಬೆಳೆಯುತ್ತಿದೆ, ಆದರೆ ನಗರಸಭೆಯಲ್ಲಿ 165 ಕ್ಕೂ ಅಧಿಕ ಹುದ್ದೆಗಳು ಖಾಲಿ ಇರುವುದರಿಂದ ನಗರದ ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹುದ್ದೆಗಳ ಭರ್ತಿಗೆ ಸರ್ಕಾರದ ಮೊರೆ ಹೋಗಲು ನಗರಸಭೆಯ ಸಾಮಾನ್ಯ ಸಭೆ ನಿರ್ಧರಿಸಿದೆ. ಮಡಿಕೇರಿ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಗರಸಭೆಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಖಾಲಿ ಹುದ್ದೆಗಳು ಅಭಿವೃದ್ಧಿ ಕಾರ್ಯಗಳಿಗೆ ಅಡಚಣೆಯಾಗುತ್ತಿರುವ ಕುರಿತು ವಿಷಯ ಪ್ರಸ್ತಾಪವಾಯಿತು. ತ್ವರಿತವಾಗಿ ಹುದ್ದೆಗಳು ಭರ್ತಿಯಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆಗಳು ಎದುರಾಗಬಹುದು ಎಂದು ಸದಸ್ಯರು ಗಮನ ಸೆಳೆದಾಗ ಸರ್ವ ಸದಸ್ಯರ ಒಪ್ಪಿಗೆಯಂತೆ ಸರ್ಕಾರದ ಬಳಿಗೆ ನಿಯೋಗ ತೆರಳಿ ಮನವಿ ಸಲ್ಲಿಸಲು ನಿರ್ಧರಿಸಲಾಯಿತು. ಕಳೆದ ಸಭೆಯ ನಡಾವಳಿಗಳನ್ನು ಓದಿ ಅನುಮೋದಿಸುವ ಹಂತದಲ್ಲಿ, ನಗರ ವ್ಯಾಪ್ತಿಯ ಪ್ರತಿ ಮನೆಯ ಆಸ್ತಿಯ ವಿವರಗಳನ್ನು ದಾಖಲು ಮಾಡುವ ಸರ್ವೆ ಕಾರ್ಯಕ್ಕೆ ತಲಾ 50 ರೂ. ನಿಗಧಿಪಡಿಸಿರುವ ವಿಚಾರವನ್ನು ಸದಸ್ಯ ಮನ್ಸೂರ್ ಪ್ರಸ್ತಾಪಿಸಿದರು. ಅಧ್ಯಕ್ಷೆ ಅನಿತಾ ಪೂವಯ್ಯ…
ವಿರಾಜಪೇಟೆ ಆ.31 : ವಿರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ “ರಕ್ಷಾ ಬಂಧನ ನಡೆಸಲಾಯಿತು. ಮಂಗಳೂರಿನ ರಾಷ್ಟ್ರೀಯ ಸ್ವಯಂ ಸಂಘದ ವಿಭಾಗ ಪ್ರಚಾರ ಪ್ರಮುಖರಾದ ಸೂರಜ್ ಕುಮಾರ್ ವಿದ್ಯಾರ್ಥಿಗಳಿಗೆ ರಕ್ಷಾ ಬಂಧನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ರಾಷ್ಟ್ರದ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ, ಪ್ರತಿಯೊಬ್ಬ ಯುವಜನತೆ ತನ್ನನ್ನು ರಾಷ್ಟ್ರ ರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳ ಪಾತ್ರವನ್ನು ಸವಿವರವಾಗಿ ತಿಳಿಸಿದರು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಆನಂದ್ ಕಾರ್ಲಾ ಅವರು ವಿದ್ಯಾರ್ಥಿಗಳಿಗೆ ರಕ್ಷಾ ಬಂಧನ ಆಚರಣೆ ಬಗ್ಗೆ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ.ನಾಣಯ್ಯ ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ವೃಂದದವರು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಪರಸ್ಪರ ರಕ್ಷೆಯನ್ನು ವಿತರಿಸಿ ಕಟ್ಟಿಸಲಾಯಿತು.
ಮಡಿಕೇರಿ ಆ.31 : ನ್ಯಾಯಾಧೀಶರಾಗಿ ನೇಮಕಗೊಂಡ ಮಡಿಕೇರಿ ವಕೀಲರ ಸಂಘದ ಸದಸ್ಯ ಅಬು ತಾಹೀರ್ ಅವರನ್ನು ಮಡಿಕೇರಿ ವಕೀಲರ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ಸಂದಭ೯ ಮಾತನಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ಯಾಂ ಪ್ರಸಾದ್, ನ್ಯಾಯಾಧೀಶರ ಸ್ಥಾನ ಅತ್ಯಂತ ಗೌರವ ಮತ್ತು ಪ್ರತಿಷ್ಟೆಯದ್ದಾಗಿದೆ. ನ್ಯಾಯದಾನ ನೀಡುವಲ್ಲಿ ಸಮಪ೯ಕವಾಗಿ ಕಾಯ೯ನಿವ೯ಹಿಸಿ ಎಂದು ಹಾರೈಸಿದರು. ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ.ನಿರಂಜನ್ ಮಾತನಾಡಿ, ಅಬು ತಾಹೀರ್ ಅವರ ಸಾಧನೆ ಯುವ ವಕೀಲರಿಗೂ ಪ್ರೇರಣೆಯಾಗಲಿ. ಮತ್ತಷ್ಟು ಯುವ ವಕೀಲರು ಸ್ಪಧಾ೯ತ್ಮಕ ಪರೀಕ್ಷೆ ಬರೆಯುವ ಮೂಲಕ ನ್ಯಾಯಾಧೀಶರಾಗಿ ಆಯ್ಕೆಯಾಗುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ವಕೀಲ ಟಿ.ಎಚ್. ಅಬೂಬಕರ್ ಈ ಸಂದಭ೯ ನೂತನವಾಗಿ ನ್ಯಾಯಾಧೀಶರಾಗಿ ಆಯ್ಕೆಯಾದ ತನ್ನ ಕಛೇರಿ ಸಹೋದ್ಯೋಗಿ ಅಬು ತಾಹಿರ್ ಅವರ ಕುರಿತಂತೆ ಮಾತನಾಡಿದರು. ಕಾಯ೯ಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಪ್ರಶಾಂತಿ, ಸಿವಿಲ್ ನ್ಯಾಯಾಧೀಶರಾದ ಮುನಿರತ್ನ, ಸಿವಿಲ್ ನ್ಯಾಯಾಧೀಶರಾದ ನಾಗೇಶ್, ವಕೀಲರ ಸಂಘಧ ಕಾಯ೯ದಶಿ೯ ಡಿ.ಎಂ.ಕೇಶವ, ಉಪಾಧ್ಯಕ್ಷ ಎಂ.ಪಿ.ನಾಗರಾಜು, ಸಕಾ೯ರಿ ಅಭಿಯೋಜಕರು,…
ಮಡಿಕೇರಿ ಆ.31 : ಗೃಹ ಲಕ್ಷ್ಮಿ ಯೋಜನೆಯಡಿ ನೋಂದಾಯಿಸಿಕೊಂಡ ಜಿಲ್ಲೆಯ 79,659 ಮಂದಿಗೆ 15,23,18,000 ರೂ.ಗಳನ್ನು ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆಯೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಪ್ರಕಟಣೆ ತಿಳಿಸಿದೆ. ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2ಸಾವಿರ ರೂ.ಗಳನ್ನು ನೇರ ನಗದು ವರ್ಗಾವಣೆ (ಡಿ.ಟಿ.ಟಿ.) ಮಾಡುವ ಗೃಹಲಕ್ಷ್ಮಿ ಯೋಜನೆಯನ್ನು ಆ.30 ರಾಜ್ಯಮಟ್ಟದಲ್ಲಿ ವಿದ್ಯುಕ್ತವಾಗಿ ಚಾಲನೆಗೊಂಡಿದ್ದು, ಇಂದು ಮೊದಲ ಹಂತದಲ್ಲಿ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ 1,31,863 ಫಲಾನುಭವಿಗಳಿದ್ದು, ಈ ಪೈಕಿ 106198 ಫಲಾನುಭವಿಗಳು ಈಗಾಗಲೇ ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿಸಿದ್ದು, ಮೊದಲ ಹಂತದ ಹಣ ವರ್ಗಾವಣೆಯಾಗಿದ್ದು, ಮುಂದಿನ ಹಂತದಲ್ಲಿ ಉಳಿದವರಿಗೆ ಹಣ ವರ್ಗಾವಣೆಯಾಗಲಿದೆ.
ಮಡಿಕೇರಿ ಆ.31 : ಮರ್ಕರ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಸೆ.3 ರಂದು “ಕೈಲ್‌ಪೊಳ್ದ್ ಕಳಿಕೂಟ” ನಡೆಯಲಿದೆ. ಅಂದು ಮಧ್ಯಾಹ್ನ 2 ಗಂಟೆಗೆ ನಗರದ ಗಾಂಧಿ ಮೈದಾನದಲ್ಲಿ ಸ್ಪರ್ಧೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ವೆಂಕಟ್‍ರಾಜ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಸುನಿಲ್ ಸುಬ್ರಮಣಿ ಪಾಲ್ಗೊಳ್ಳಲಿದ್ದಾರೆ. ಸಂಜೆ 5 ಗಂಟೆಗೆ ಬಹುಮಾನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಭಾಗವಹಿಸಲಿದ್ದಾರೆ. ಚೆಕ್ಕೇರ ಪಂಚಮ್ ಬೋಪಣ್ಣ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. :::ಸ್ಪರ್ಧೆಗಳು ::: ಮಹಿಳೆಯರು ಮತ್ತು ಪುರುಷರಿಗೆ ಕೇರ್ ಬಲಿ (ಹಗ್ಗ ಜಗ್ಗಾಟ) ಸ್ಪರ್ಧೆ, .22 ಮತ್ತು 12 ಬೋರ್ ತೆಂಗಿನ ಕಾಯಿಗೆ ಗುಂಡುಹೊಡೆಯುವ ಸ್ಪರ್ಧೆ, 60 ವರ್ಷದೊಳಗಿನ ಮಹಿಳೆಯರು ಮತ್ತು ಪುರುಷರಿಗೆ 100 ಮೀ. ಹಾಗೂ 50 ಮೀ. ಓಟದ ಸ್ಪರ್ಧೆ, 15 ವರ್ಷ ಮೇಲ್ಪಟ್ಟ ಯುವಕ, ಯುವತಿಯರಿಗೆ…
ಮಡಿಕೇರಿ ಆ.31 : ಕರ್ನಾಟಕ ಸ್ಪೋರ್ಟ್ಸ್ ಮತ್ತು ಆರ್ಟ್ಸ್ ಅಕಾಡೆಮಿ ವತಿಯಿಂದ ಬೆಂಗಳೂರಿನ ಬಿನ್ನಿಪೇಟೆಯ ಡೆಕತ್‍ಲಾನ್ ಇಟಿಎ ಮಹಲ್ ನಲ್ಲಿ ನಡೆದ ಅಂತರಾಜ್ಯ ಮಟ್ಟದ ಮುಕ್ತ ಟೆಕ್ವಾಂಡೊ ಚಾಂಪಿಯನ್ ಶಿಪ್‍ನಲ್ಲಿ ಕೊಡಗಿನ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಚಿನ್ನ, ಬೆಳ್ಳಿ ಹಾಗೂ ಕಂಚಿನ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಾದ ಬಾರನ ಬಿಂಬಿತ್ ಗೌಡ 2 ಚಿನ್ನ, ಬೊಮ್ಮುಡಿ ದೇವಿಶ್ರೀ ಪ್ರಭಾಕರ್ 2 ಚಿನ್ನ, ಬಾರನ ಪ್ರೇಕ್ಷಿತ್ ಗೌಡ 1 ಚಿನ್ನ, 1 ಕಂಚು, ಆರ್.ಲೋಹಿತ್ 1 ಚಿನ್ನ, 1 ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮುಡ್ಯನ ಗೌರವ್ ಯೋಗೀಶ್ 2 ಬೆಳ್ಳಿ, ತೇಜಸ್ ರಾಜು 2 ಬೆಳ್ಳಿ, ಜಿ.ಎಂ.ಮನೀಶ್ ನಾಥ್ 2 ಬೆಳ್ಳಿ, ಪಿ.ದೃಪದ್ ಮಣಿಕೋತ್ 1 ಬೆಳ್ಳಿ, 1 ಕಂಚು, ಎಂ.ವಿ.ಕಿಶನ್ 1 ಬೆಳ್ಳಿ, 1 ಕಂಚು, ಕಿರಣ್ ಕಾಂತ್ 2 ಕಂಚು, ಜಿ.ಎಂ.ಮಿನ್ ಶಾ 2 ಕಂಚಿನ ಪದವನ್ನು ಗೆದ್ದುಕೊಂಡಿದ್ದಾರೆ. ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ತರಬೇತುದಾರ ಬಿ.ಜಿ.ಲೋಕೇಶ್ ರೈ…
ಮಡಿಕೇರಿ ಆ.31 : ವಿರಾಜಪೇಟೆಯ ಕಾವೇರಿ ಪದವಿ ಕಾಲೇಜಿನಲ್ಲಿ 2023-2024 ನೇ ಸಾಲಿನ ಶೈಕ್ಷಣಿಕ ವರ್ಷದ ಪೋಷಕರ ಮತ್ತು ಶಿಕ್ಷಕರ ಸಭೆ ನಡೆಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ.ಆನಂದ್ ಕಾರ್ಲಾ ಅವರು ಮಾತನಾಡಿ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೋಷಕರ ಬೆಂಬಲ ಅಗತ್ಯ, ಅಂಕ ಗಳಿಕೆಯೇ ಮುಖ್ಯವಲ್ಲ. ಹಾಗೂ ರಾಷ್ಟ್ರದ ಅಭಿವೃದ್ಧಿಗೆ ವಿದ್ಯಾರ್ಥಿಗಳು ಆದರ್ಶಗಳನ್ನು ಮೈ ಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ವಿದ್ಯಾರ್ಥಿ ಸಲಹಾ ಸಮಿತಿಯ ಸಂಚಾಲಾಕಿ ಅಂಬಿಕಾ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲು ಕಾಲೇಜು ಹಂತದಿಂದಲೇ ಪ್ರಾರಂಭವಾಗಬೇಕು. ನಾಯಕರಲ್ಲಿ ಉತ್ತಮ ಶಿಸ್ತು ನಡತೆಯನ್ನು ಕಲಿಸುತ್ತದೆ ಎಂಬುವುದನ್ನು ತಿಳಿಸಿಕೊಟ್ಟರು. ಆಂತರಿಕ ಗುಣಮಟ್ಟ ಭರವಸೆ ಕೋಶ ಸಂಚಾಲಕಿ ಡಾ. ಕೆ.ಜಿ.ವೀಣಾ ಕಾಲೇಜಿನಲ್ಲಿರುವ ಕಾರ್ಯಕ್ರಮಗಳನ್ನು ಬಗ್ಗೆ ವಿವರಿಸಿದರು. ಎನ್.ಸಿ.ಸಿ ಹಾಗೂ ಎನ್.ಎಸ್.ಎಸ್ (ಪದಾಧಿಕಾರಿಗಳು) ಸಂಚಾಲಕರು ಕಾಲೇಜಿನಲ್ಲಿರುವ ಸಾಂಸ್ಕೃತಿಕ ಚಟುವಟಿಕೆಯ ಮಹತ್ವವನ್ನು ತಿಳಿಕೊಟ್ಟರು. ಇತಿಹಾಸ ಉಪನ್ಯಾಸಕಿ ಸಿ.ಪಿ.ಅನುಪಮ ಪ್ರಾರ್ಥಿಸಿದರು. ಪೋಷಕರ ಮತ್ತು ಶಿಕ್ಷಕರ ಸಂಘದ ಸಂಚಾಲಕ ನಾಗರಾಜು ಸ್ವಾಗತಿಸಿದರು. ಪೋಷಕರ ಮತ್ತು ಶಿಕ್ಷಕರ ಸಂಘದ ಸದಸ್ಯೆ ಅಕ್ಷತಾ ನಾಯ್ಕ್…
ಮಡಿಕೇರಿ ಆ.31 : ಕೊಡಗು ಜಿಲ್ಲೆಯ ಹಿಂದುಳಿದ ವರ್ಗಗಳ ಅರ್ಹ ಕಾನೂನು ಪದವೀಧರರಿಗೆ 2023-24 ನೇ ಸಾಲಿಗೆ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಕಾನೂನು ತರಬೇತಿ ಪಡೆಯಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರ.ವರ್ಗ-1 ಮತ್ತು ಪ್ರ.ವರ್ಗ-2ಎ, 3ಎ, 3ಬಿ ಗೆ ಸೇರಿದವರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯದ ಮಿತಿ ಪ್ರ.ವರ್ಗ-1 ರ ಅಭ್ಯರ್ಥಿಗಳಿಗೆ ರೂ.3.50 ಲಕ್ಷ ಹಾಗೂ ಪ್ರ.ವರ್ಗ-2ಎ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ರೂ.2.50 ಲಕ್ಷ ಒಳಪಟ್ಟಿರಬೇಕು. ಪ್ರ.ವರ್ಗ-1 ರ ಅಭ್ಯರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಪ್ರ.ವರ್ಗ-1 ರ ಅಭ್ಯರ್ಥಿಗಳ ಕೊರತೆ ಇದ್ದಲ್ಲಿ ಸರ್ಕಾರದ ಆದೇಶದನ್ವಯ ನಿಯಮಾನುಸಾರ ಇತರೆ ವರ್ಗದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಜಿಯನ್ನು ಸ್ವೀಕರಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕಾನೂನು ಪದವಿ ಪಡೆದ 02 ವರ್ಷದ ಒಳಗಿರಬೇಕು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅರ್ಜಿದಾರರ ವಯಸ್ಸು ಪ್ರ.ವರ್ಗ-1ರ ಅಭ್ಯರ್ಥಿಗಳಿಗೆ 31 ಮತ್ತು ಪ್ರ.ವರ್ಗ-2ಎ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ 30 ವರ್ಷದ ಒಳಗಿರಬೇಕು.…
ಮಡಿಕೇರಿ ಆ.31 : ನಾಪೋಕ್ಲುವಿನ ಬೇತು ಗ್ರಾಮದ ನಿವಾಸಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಚೀಣಕುಟ್ಟಡ ಎ.ಗಣಪತಿ ನಿಧನರಾದರು. ಕೆಲವು ದಿನಗಳ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಆ.23 ರಂದು ಕೊನೆಯುಸಿರೆಳೆದರು. ಕೆಂಬಟ್ಟಿ ಜನಾಂಗಕ್ಕೆ ಸೇರಿದ ಇವರು ಜಾನಪದ ಕ್ಷೇತ್ರದಲ್ಲಿ ಕಾಪಾಳ ನೃತ್ಯದಲ್ಲಿ ಹೆಚ್ಚು ಪರಿಣಿತರಾಗಿದ್ದರು. ಚೀಣಕುಟ್ಟಡ .ಎ ಗಣಪತಿ ಇವರ ನಿಧನಕ್ಕೆ “ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ” ಸಂತಾಪ ವ್ಯಕ್ತಪಡಿಸಿದೆ.






