ನಾಪೋಕ್ಲು ಆ.30 : ಪಾಡಿ ಇಗ್ಗುತ್ತಪ್ಪ ದೇವರ ಕೃಪೆಯಿಂದ ಉತ್ತಮ ಮಳೆಯಾಗಿ ಜನರಿಗೆ ನೆಮ್ಮದಿ ದೊರಕುವಂತಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಆಶಯ ವ್ಯಕ್ತಪಡಿಸಿದರು. ಕಕ್ಕಬೆಯ ಪಾಡಿ ಇಗ್ಗುತ್ತಪ್ಪ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ.ಈ ಭಾಗದ ಜನರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭ ಬಾಚಮಂಡ ಲವ ಚಿಣ್ಣಪ್ಪ, ಕಲ್ಯಾ ತಂಡ ಮುತ್ತಪ್ಪ, ಬಾಚಮಂಡ ಪೂವಣ್ಣ, ಪಾಂಡoಡ ನರೇಶ್, ನಿಡುಮಂಡ ಸುಬ್ರಮಣಿ, ಕಲಿಯಂಡ ಸಂಪನ್ ಅಯ್ಯಪ್ಪ, ಕಣಿಯರ ನಾಣಯ್ಯ, ಪೊoಗೇರೆ ಉಲ್ಲಾಸ್, ಕಂದಾಯ ಪರಿವೀಕ್ಷಕ ರವಿಕುಮಾರ್, ಪಾರುತ್ತೆಗಾರ ಪರದಂಡ ಪ್ರಿನ್ಸ್ ತಮ್ಮಯ್ಯ ಇನ್ನಿತರರು ಹಾಜರಿದ್ದರು. ವರದಿ : ದುಗ್ಗಳ ಸದಾನಂದ
ಲೇಖಕ: admin
ಸುಂಟಿಕೊಪ್ಪ ಆ.30 : ಸುಂಟಿಕೊಪ್ಪದ ವಿವಿಧೆಡೆ ಹಿಂದೂ ಮಲಯಾಳಿ ಭಾಂದವರು ಓಣಂ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಸುಂಟಿಕೊಪ್ಪ ವ್ಯಾಪ್ತಿಯ ಗದ್ದೆಹಳ್ಳ, ಕೆದಕಲ್, 7ನೇ ಹೊಸಕೋಟೆ, ಕಂಬಿಬಾಣೆ, ಕೊಡಗರಹಳ್ಳಿ ಮಾದಾಪುರ, ಗರಗಂದೂರು ಇನ್ನಿತರ ಕಡೆಗಳಲ್ಲಿ ಓಣಂ ಅಂಗವಾಗಿ ಹೂವಿನಿಂದ ರಂಗೋಲಿ “ಪೂಕಳಂ” ರಚಿಸಿ ಸಂಭ್ರಮಿಸಿದರು. ಸುಂಟಿಕೊಪ್ಪ ಸುರೇಶ್ ಗೋಪಿ ಮನೆಯಲ್ಲಿ ರಚಿಸಲಾಗಿದ್ದ ಪೂಕಳಂ ಗಮನ ಸೆಳೆಯಿತು.
ಮಡಿಕೇರಿ ಆ.30 : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವದ ಅಂಗವಾಗಿ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ, ಕೊಡವ ಮಕ್ಕಡ ಕೂಟದ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ ತಿಳಿಸಿದ್ದಾರೆ. ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ. ದೇವಯ್ಯ (ಮಹಾವೀರ ಚಕ್ರ ಪುರಸ್ಕೃತರು) ಅವರ 58ನೇ ಪುಣ್ಯ ಸ್ಮರಣೆ ದಿನಾಚರಣೆ ಸೆ.7 ರಂದು ಜರುಗಲಿದ್ದು, ಆ ಪ್ರಯುಕ್ತ ಕೊಡಗು ಜಿಲ್ಲಾ ಸಂಸ್ಥೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ‘ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ’ ಅವರ ಬಗ್ಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಸೆ.7 ರಂದು ಮಧ್ಯಾಹ್ನ 2.30 ಗಂಟೆಗೆ ಮಡಿಕೇರಿಯ ಪತ್ರಿಕಾ ಭವನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಆಸಕ್ತ ವಿದ್ಯಾರ್ಥಿಗಳು ಸೆ.4 ಒಳಗಾಗಿ ಪ್ರಬಂಧವನ್ನು ಪ್ರೆಸ್ ಕ್ಲಬ್ ಕಚೇರಿಗೆ ತಲುಪಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಪ್ರೆಸ್ ಕ್ಲಬ್ ಖಜಾಂಚಿ ಬೊಳ್ಳಜಿರ ಬಿ. ಅಯ್ಯಪ್ಪ 9880778047 ಅವರನ್ನು ಸಂಪರ್ಕಿಸಲು ಕೋರಲಾಗಿದೆ.
ಮಡಿಕೇರಿ ಆ.30 : ಅರಣ್ಯ ಇಲಾಖೆಯ ಮಹಿಳಾ ಕಿರಿಯ ಅಧಿಕಾರಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಮೂಲತಃ ಮಂಡ್ಯ ಮೂಲದ ರಶ್ಮಿ(27) ಎಂಬುವವರೇ ಮೃತ ಅಧಿಕಾರಿಯಾಗಿದ್ದಾರೆ. ಮಡಿಕೇರಿ ಅರಣ್ಯ ಇಲಾಖೆಯ ಸಂಶೋಧನೆ ವಿಭಾಗದಲ್ಲಿ ಡಿಆರ್‍ಎಫ್‍ಓ ಆಗಿ ಕಳೆದ 2 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ರಶ್ಮಿ ಅವರು ಅರಣ್ಯ ಇಲಾಖೆಯ ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ರಾತ್ರಿಯೇ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದ್ದು, ಬುಧವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಜರು ನಡೆಸಿ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು. ಮೃತದೇಹದ ಮರಣೋತ್ತರ ಪರೀಕ್ಷೆ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಆತ್ಮಹತ್ಯೆ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಡಿಕೇರಿಯ ಅರಣ್ಯ ಇಲಾಖೆಯ ಡಿ.ಎಫ್.ಓ ಎ.ಟಿ.ಪೂವಯ್ಯ, ಅರಣ್ಯ ಅಧಿಕಾರಿಗಳು ಹಾಗೂ…
ಸುಂಟಿಕೊಪ್ಪ ಆ.30 : ವಿಶ್ವ ಹಿಂದೂ ಪರಿಷತ್ 59ನೇ ವರ್ಷದ ಶ್ರೀ ಗೌರಿಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಎಸ್.ವಿಘ್ನೇಶ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಬಿ.ಕೆ.ಪ್ರಶಾಂತ್, ಎಸ್.ರವಿ, ಕೆ.ಕೆ.ವಾಸುದೇವ, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಲೋಕೇಶ್,(ಲೋಕಿ), ಖಜಾಂಚಿಯಾಗಿ ಎಸ್.ಪೃತ್ವಿರಾಜ್, ಕಾರ್ಯದರ್ಶಿಗಳಾಗಿ ಸಿ.ಸಿ.ಸುನೀಲ್ ಕುಮಾರ್, ಪಿ.ಕೆ.ಸೂರ್ಯ, ಎಂ.ಪಾಂಡ್ಯನ್, ಸಹ ಕಾರ್ಯದರ್ಶಿಯಾಗಿ ಹೆಚ್.ನವೀನ್, ಜಿ.ಹೃತಿಕ್, ಎಂ.ಹೆಚ್.ನಿಖಿಲ್, ಸಂಘಟಣಾ ಕಾರ್ಯದರ್ಶಿಯಾಗಿ ಎಂ.ಗಣೇಶ್, ಎಸ್.ರಾಜೇಶ್, ಆರ್.ಮಣಿ, ಬಿ.ಪಿ.ಸತೀಶ್, ಕೆ.ಕನೀಶ್, ಕೆ.ಮಧು, ಬಿ.ಡಿ.ಶಶಿಕಾಂತ್, ಬಿ.ಡಿ.ಅಶ್ವತ್, ಹೆಚ್.ಸಿ.ಯೋಗೇಶ್, ಬಿ.ಡಿ.ಪದ್ಮನಾಭ ನೇಮಕಗೊಂಡಿದ್ದಾರೆ. ಸಮಿತಿ ಸದಸ್ಯರಾಗಿ ಯು.ಎ.ಆದರ್ಶ, ಎಂ.ಮಹೇಂದ್ರ, ಎಸ್.ಶ್ರೀನಿವಾಸ್, ಹೆಚ್.ಎ.ಶಶಿ, ಆರ್.ವಿಶ್ವ, ಆರ್.ಪ್ರಜ್ವಲ್, ಹೆಚ್.ಎನ್.ಚೇತನ್, ಹೆಚ್.ಎನ್.ಗಣೇಶ್, ವಿ.ದರಣೇಶ್, ಜೀವ, ಆರ್.ಪ್ರಶಾಂತ್, ಸಿ.ರಾಜೇಶ್, ಹೆಚ್.ಎ.ಚಂದ್ರ, ಹೆಚ್.ಎ.ದಿವಾಕರ, ಕೆ.ಸೂರ್ಯ, ಹೆಚ್.ಸಿ.ದಿನೇಶ್, ಎಸ್.ಗಣೇಶ್, ಆರ್.ಧರ್ಮೇಂದ್ರ, ಆರ್.ಪುನೀತ್, ಕೆ.ಶಿವಕುಮಾರ್, ಕೆ.ಕಾರ್ತಿಕ್, ಉದಯ, ಪವನ್, ಜೀವನ್, ವಿನೀತ್, ಆರ್.ಡಾನ್, ಹೆಚ್.ಎನ್.ದರ್ಶನ್, ಎಂ.ಪ್ರಶಾಂತ್, ಹೆಚ್.ಎನ್.ರವಿ, ಆಯ್ಕೆಯಾಗಿದ್ದಾರೆ.
ಸುಂಟಿಕೊಪ್ಪ ಆ.30 : ಸುಂಟಿಕೊಪ್ಪ ವಾಹನ ಚಾಲಕರ ಸಂಘದ 2023-24ನೇ ಸಾಲಿನ ಅಧ್ಯಕ್ಷರಾಗಿ ಎಸ್.ಸುರೇಶ್, ಪ್ರಧಾನ ಕಾರ್ಯದರ್ಶಿಯಾಗಿ ಕುಂಞ ಕೃಷ್ಣಪ್ಪ ನೇಮಕಗೊಂಡಿದ್ದಾರೆ. ಸಂಘದ ಸಂಭಾಗಣದಲ್ಲಿ ಅಧ್ಯಕ್ಷರಾದ ಬಿ.ಎಂ.ಪೂವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಮುನೀರ್ ಕಂಬಿಬಾಣೆ, ಬಿ.ಎ.ಕೃಷ್ಣಪ್ಪ, ಗೌರವ ಅಧ್ಯಕ್ಷರಾಗಿ ಬಿ.ಎಂ.ಪೂವಪ್ಪ, ಹೆಚ್.ಹಂಸ,(ಅಚ್ಚುಪ್ಪ), ಸಹಕಾರ್ಯದರ್ಶಿ ಅಂಬೆಕಲ್ ಚಂದ್ರಶೇಖರ್, ಖಜಾಂಚಿಯಾಗಿ ಆಸೀಸ್, ಸಂಘಟನಾ ಕಾರ್ಯದರ್ಶಿಯಾಗಿ ಮೊಹಮ್ಮದ್ ಶರೀಫ್, ಆತಿಕ್, ಕಾರ್ಯಕಾರಿ ಸಮಿತಿಗೆ ಅಣ್ಣಪ್ಪ ಜಿ.ಎಂ. ತರ್ನಶೀರ್, ಪ್ರಕಾಶ್, ಸಲೀಂ, ಮಣಿರಾಜ್(ತಂಬಿ), ಅಸ್ಕರ್, ಸಿ.ಎ.ಬಸಪ್ಪ, ಪವನ್ ಸಂತೋಷ್, ರಾವುಫ್,ಆರ್. ಎಂ.ಕುಮಾರ್, ರಾಜು, ರಫೀಕ್(ಮೋನು), ವಿ.ರಾಜ, ಇಸಾಕ್, ಡಿಸೋಜ, ಅವರನ್ನು ಆಯ್ಕೆಗೊಳಿಸಲಾಯಿತು.
ಮಡಿಕೇರಿ ಆ.29 : ಸಹಕಾರ ಕ್ಷೇತ್ರದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ಕಳೆದ ಬಾರಿ 69 ನೇ ಸಹಕಾರ ಸಪ್ತಾಹದಲ್ಲಿ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾಗಿದ್ದ ಮಂಡುವoಡ ಮುತ್ತಪ್ಪ ಅವರನ್ನು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸನ್ಮಾನಿಸಿ ಗೌರವಿಸಿತು. ಬೆಂಗಳೂರಿನ ಪ್ರಿನ್ಸೆಸ್ ಗಾಲ್ಫ್ ಅರಮನೆ ಮೈದಾನದಲ್ಲಿ ನಡೆದ 22 ನೇ ಸಂಯುಕ್ತ ಸಹಕಾರಿ ಸಾಮಾನ್ಯ ಸಭೆಯ ವಿಶೇಷ ಕಾರ್ಯಕ್ರಮದಲ್ಲಿ ಪ್ರಸ್ತುತ ಕೊಡಗು ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿರುವ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮುತ್ತಪ್ಪ ಅವರನ್ನು ಸನ್ಮಾನಿಸಲಾಯಿತು.
ಮಡಿಕೇರಿ ಆ.29 : ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ನೂಲು ಹುಣ್ಣಿಮೆಯ ಪ್ರಯುಕ್ತ ಪ್ರತಿವರ್ಷದಂತೆ ಈ ಬಾರಿ ಕೂಡ ಋಗುಪಾಕರ್ಮ ಹೋಮ ಮತ್ತಿತರ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿತು. ನಗರದ ಮಹದೇವಪೇಟೆಯ ಶೇಖರ್ ಕಾಂಪ್ಲೆಕ್ಸ್ ನಲ್ಲಿ ಸಮಾಜದ ಪುರೋಹಿತ ಬಿ.ಹೆಚ್.ಉಲ್ಲಾಸ್ ಅವರ ನೇತೃತ್ವದಲ್ಲಿ ಋಗುಪಾಕರ್ಮ ಹೋಮ ನಡೆಯಿತು. ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಬಿ.ವಿ.ರೋಷನ್ ಹಾಗೂ ಹೆಚ್ಚಿನ ಸಂಖ್ಯೆಯ ಸದಸ್ಯರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮಡಿಕೇರಿ ಆ.29 : ಮಡಿಕೇರಿಯ ಕೆಎಸ್‌ಆರ್‌ಟಿಸಿ ಡಿಪೋದ ಸಿಬ್ಬಂದಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಡಿಪೋದಲ್ಲಿ ಕಿರಿಯ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಹೆಬ್ಬಾಲೆ ಗ್ರಾಮದ ನಿವಾಸಿ ಅಭಿಷೇಕ್ ವಿಷ ಸೇವಿಸಿದ್ದು, ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಧಿಕಾರಿಯ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಆರೋಪಿಸಲಾಗಿದೆ. ಆದರೆ ಅಭಿಷೇಕ್ ಚಿಕಿತ್ಸೆಯಲ್ಲಿದ್ದು, ಇವರ ಹೇಳಿಕೆಯ ನಂತರವಷ್ಟೇ ನಿಖರ ಮಾಹಿತಿ ಲಭಿಸಲಿದೆ ಎಂದು ಪೊಲೀಸರು ಸ್ಪಷ್ಟ ಪಡಿಸಿದ್ದಾರೆ.
ಮಡಿಕೇರಿ ಆ.29 : ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಹಾಗೂ ಕಾರ್ಯಕರ್ತರಿಗೆ ಬೃಹತ್ ಅಭಿನಂದನಾ ಸಮಾವೇಶವು ಸೆ.5 ರಂದು ನಡೆಯಲಿದೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ನೂತನ ಜಿಲ್ಲಾಧ್ಯಕ್ಷ ಪಿ.ಎ.ಹನೀಫ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ನಗರದ ಕಾವೇರಿ ಹಾಲ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕರ್ನಾಟಕ ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್, ರಾಜ್ಯ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ರಾಜ್ಯ ವಕ್ಫ್ ಮತ್ತು ಅಲ್ಪಸಂಖ್ಯಾತರ ಇಲಾಖೆ ಸಚಿವ ಜಮೀರ್ ಅಹ್ಮದ್, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ, ಸಣ್ಣ ನೀರಾವರಿ ಸಚಿವ ಬೋಸ್ ರಾಜ್, ಇಂಧನ ಸಚಿವ ಕೆ.ಜೆ.ಜಾರ್ಜ್ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಬೆಂಗಳೂರು…






