ಮಡಿಕೇರಿ ಆ.28 : ಕರ್ನಾಟಕ ಸರ್ಕಾರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬಾಳೆಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ಪಂದ್ಯಾವಳಿ ನಡೆಯಿತು. ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯಾವಳಿಯನ್ನು ವಿಜಯಲಕ್ಷ್ಮಿ ವಿದ್ಯಾಸಂಸ್ಥೆಯ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಉದ್ಘಾಟಸಿ ಮಾತನಾಡಿದರು. ಹಿಂದೆ ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರಿಗೆ ಮಾತ್ರ ಹೆಚ್ಚು ಮನ್ನಣೆ ಮತ್ತು ಜನಪ್ರಿಯತೆ ಸಿಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಫ್ರೋ ಕಬ್ಬಡಿ, ಖೋ.ಖೋ, ವಾಲಿಬಾಲ್, ಹಾಕಿ ಪಂದ್ಯಾವಳಿಗಳು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುತಿದ್ದು, ವಿದ್ಯಾರ್ಥಿಗಳು ಈ ಕ್ರೀಡೆಗಳತ್ತ ಗಮನ ಹರಿಸಿ ಭವಿಷ್ಯ ರೂಪಿಸಿಕೊಳ್ಳಲು ಕರೆ ನೀಡಿದರಲ್ಲದೆ. ಜಿಲ್ಲಾ ಮತ್ತು ರಾಜ್ಯ ಹಂತದ ಪಂದ್ಯದಲ್ಲಿಯೂ ನಮ್ಮ ತಾಲೂಕು ತಂಡಗಳೇ ವಿಜಯಿಯಾಗಿ ಬರಲಿಯೆಂದು ಶುಭಹಾರೈಸಿದರು . ನಂತರ ಆರು ವಲಯಗಳ ಬಾಲಕ…
ಲೇಖಕ: admin
ಮಡಿಕೇರಿ ಆ.28 : ಕಾಡು ಪ್ರಾಣಿಯನ್ನು ಬೇಟೆಯಾಡಿದ ಪ್ರಕರಣವನ್ನು ಬೇಧಿಸಿರುವ ಸೋಮವಾರಪೇಟೆ ಅರಣ್ಯ ಅಧಿಕಾರಿಗಳು ಕೋವಿ ಸಹಿತ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿಯ ಹಿನ್ನೆಲೆ ಸೋಮವಾರಪೇಟೆ ವಲಯದ ಬಾಣವಾರ ಚಿಕ್ಕಅಳುವಾರ ಗ್ರಾಮದ ನಿವಾಸಿ ಎ.ಕೆ.ಸುಂದರ ಎಂಬಾತನ ಮನೆ ಮೇಲೆ ದಾಳಿ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಮೂರವರೆ ಕೆ.ಜಿ ಮಾಂಸ ಮತ್ತು ಕೋವಿಯನ್ನು ವಶಕ್ಕೆ ಪಡೆದರು. ಆರೋಪಿ ಸುಂದರ ತಲೆ ಮರೆಸಿಕೊಂಡಿದ್ದು, ಪತ್ತೆ ಕಾರ್ಯ ಚುರುಕುಗೊಂಡಿದೆ. ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯಧಿಕಾರಿಗಳ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿಗಳಾದ ಹೆಚ್.ಪಿ.ಚೇತನ್, ಬಾಣಾವರ ಶಾಖೆಯ ಉಪ ವಲಯ ಅರಣ್ಯಾಧಕಾರಿ ಹೆಚ್.ಎಂ.ರಾಕೇಶ್, ಗಸ್ತು ಅರಣ್ಯ ಪಾಲಕರಾದ ಎ.ಎಸ್.ಪ್ರಸಾದ್ ಕುಮಾರ್, ಸದಾನಂದ ಹಿಪ್ಪರಗಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಮಡಿಕೇರಿ ಆ.28 : ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತವನ್ನು ಒಪ್ಪಿ ಅನೇಕರು ಪಕ್ಷಕ್ಕೆ ಸೇರ್ಪಡೆಯಾಗಲು ಮುಂದೆ ಬರುತ್ತಿದ್ದಾರೆ. ಇದನ್ನು ಆಪರೇಷನ್ ಹಸ್ತ ಎಂದು ಕರೆಯುವುದು ಸರಿಯಲ್ಲ, ಆಪರೇಷನ್ ಎಂಬ ಕೆಟ್ಟ ಶಬ್ಧ ಬಂದಿದ್ದು ಬಿಜೆಪಿಯಿಂದ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರಮೋದಿ ಅವರ ತಂತ್ರಗಾರಿಕೆ ಕರ್ನಾಟಕದಲ್ಲಿ ನಡೆಯುವುದಿಲ್ಲ. ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ತಯಾರಿ ನಡೆಸುತ್ತಿದೆ. ರಾಷ್ಟ್ರೀಯ ನಾಯಕರು ಈಗಾಗಲೇ ಸಭೆ ನಡೆಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನುಡಿದ್ದಂತೆ ನಡೆದಿದ್ದಾರೆ ಎಂದರು. ಆಪರೇಷನ್ ಹಸ್ತ ಪದ ಬಳಕೆ ನಾವು ಮಾಡಲ್ಲ, ಆಪರೇಷನ್ ಎಂಬ ಕೆಟ್ಟ ಶಬ್ಧ ಬಂದಿದ್ದು ಬಿಜೆಪಿಯಿಂದ. ಹಲವು ರಾಜ್ಯಗಳಲ್ಲಿ ಬಿಜೆಪಿ ಆಪರೇಷನ್ ಕಮಲ ಮಾಡಿದೆ. ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಹಲವರು ಮುಂದೆ ಬರುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ನಾಯಕರು ಕೂಡ ನನ್ನ ಸಂಪರ್ಕದಲ್ಲಿದ್ದಾರೆ. ಎಲ್ಲರೂ ಕಾಂಗ್ರೆಸ್ ತತ್ವ…
ಪೊನ್ನಂಪೇಟೆ, ಆ.28: ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಮಟ್ಟದ ಅಂತರ್ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟವು ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ (ಕಾಪ್ಸ್) ಜರುಗಿತು. ಕೂರ್ಗ್ ಪಬ್ಲಿಕ್ ಶಾಲೆ ಮತ್ತು ಕೂರ್ಗ್ ಪಬ್ಲಿಕ್ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟವನ್ನು ಕಾಪ್ಸ್ ಪ್ರಾಂಶುಪಾಲ ಡಾ.ಎಂ.ರಾಮಚಂದ್ರನ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕ್ರೀಡೆ ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ, ತಾಳ್ಮೆ ಮತ್ತು ಜೀವನ ಕೌಶಲ್ಯಗಳನ್ನು ಸಹಜವಾಗಿಯೇ ಕಲಿಸುತ್ತದೆ. ಶೈಕ್ಷಣಿಕ ಅಗತ್ಯಗಳನ್ನು ಸಮತೋಲನಗೊಳಿಸುವುದರೊಂದಿಗೆ ದೈನಂದಿನ ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಕ್ರೀಡಾ ಸ್ಪೂರ್ತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ಶೈಕ್ಷಣಿಕ ಸಾಧನೆಗಳು ಹೆಚ್ಚುತ್ತವೆ. ಕ್ರೀಡೆಗಳು ವಿದ್ಯಾರ್ಥಿಗಳ ಜೀವನದಲ್ಲಿ ಉತ್ತಮ ಸಾಧನೆಗಳನ್ನು ಮಾಡಲು ಒಂದು ಮಾರ್ಗವಾಗಿದೆ. ಅಲ್ಲದೆ ಕ್ರೀಡೆ ವಿದ್ಯಾರ್ಥಿಗಳ ಚಲನಶೀಲತೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೇಗೆ ಬದುಕಬೇಕೆಂಬ ಜೀವನ ಪಾಠ ಕಲಿಸುತ್ತದೆ ಎಂದು ರಾಮಚಂದ್ರನ್ ಅಭಿಪ್ರಾಯಪಟ್ಟರು. ಕಾಪ್ಸ್ ನ…
ಮಡಿಕೇರಿ ಆ.28 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ನಾ.ಡಿಸೋಜಾ ಹೆಸರಿನಲ್ಲಿ ಸ್ಥಾಪಿತವಾಗಿರುವ ನಾ. ಡಿಸೋಜ ಮಕ್ಕಳ ಸಾಹಿತ್ಯ ಪುರಸ್ಕಾರ ದತ್ತಿನಿಧಿಯಂತೆ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಕಥೆ ಬರೆಯುವ ಸ್ಪರ್ಧೆ ಮತ್ತು ಕತೆ ರಚನಾ ವಿಧಾನದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಮಡಿಕೇರಿಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜು ಉಪ ನಿರ್ದೇಶಕ ಪುಟ್ಟರಾಜು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ವಿದ್ಯಾರ್ಥಿಗಳಿಗೆ ಕಥೆ ಬರೆಯಲು ವೇದಿಕೆ ಹಾಗೂ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡು ಮುಂದೆ ಉತ್ತಮ ಕಥೆಗಾರರು, ಸಾಹಿತಿಗಳು ಆಗಬೇಕೆಂದು ಕಿವಿಮಾತು ಹೇಳಿದರು. ಸಾಹಿತಿ, ಬರಹಗಾರ್ತಿ ಸುನೀತಾ ಕತೆ ರಚನೆ ಕುರಿತು ಉಪನ್ಯಾಸ ನೀಡಿ, ಕಥೆ ಬರೆಯಬೇಕೆಂದರೆ ಮೊದಲು ಮೂಲ ಹಾಗೂ ಅನುವಾದಿತ ಕಥೆ ಗಳನ್ನು ಓದಿಕೊಳ್ಳಬೇಕು. ಕಥೆ ಅನುಕರಣೆಯಾಗಬೇಕೆಂದಿಲ್ಲ ಮನಸ್ಸಿಗೆ ಮೂಡಿದ ವಿಷಯಗಳ…
ಶನಿವಾರಸಂತೆ ಆ.28 : ಆತ್ಮೀಯತೆ ಮತ್ತು ಅಭಿಮಾನದಿಂದ ಕನ್ನಡ ಉಳಿಸಿ, ನಾವು ಕನ್ನಡ ನಾಡಿನವರು ಎಂದು ನಮಗೆ ಹೆಮ್ಮೆ ಇರಬೇಕು. ವೈಜ್ಞಾನಿಕವಾಗಿ ಇಂದಿನ ಕಾಲ ಪ್ರಗತಿ ಹೊಂದುತ್ತಿದೆ. ಪ್ರಪಂಚ ನಮ್ಮ ಕರ್ನಾಟಕದ ಕಡೆ ನೋಡುವಂತೆ ನಮ್ಮ ವಿಜ್ಞಾನಿಗಳು ಚಂದ್ರಯಾನ-3 ಯೋಜನೆ ಸಾಧನೆ ಮಾಡಿದ್ದಾರೆ. ನಮ್ಮ ಕನ್ನಡ ನೆಲದಿಂದ ಇದು ಸಾಧ್ಯವಾಯಿತು ಎಂದು ಕಿರಿಕೊಡ್ಲಿ ಮಠದ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೊಡ್ಲಿಪೇಟೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕೊಡ್ಲಿಪೇಟೆ ಹಲಸಿನ ಮರ ಶ್ರೀಮತಿ ಗೌರಮ್ಮ ಶಾಂತ ಮಲ್ಲಪ್ಪ ಪ್ರಥಮ ದರ್ಜೆ ಕಾಲೇಜು ಸಂಯುಕ್ತಶ್ರಯದಲ್ಲಿ ಆರೋಢ ದಾಸೋಹಿ ಧರ್ಮ ಚಿಂತಾಮಣಿ ಮಹಾಶರಣ ಲಿಂ.ಮಾಗನೂರು ಬಸಪ್ಪ ದತ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಭಾಷೆ, ಸಂಸ್ಕೃತಿ, ನೆಲಜಲ ಉಳಿಸಿಕೊಂಡು ಹೋಗಬೇಕು. ಕನ್ನಡ ಭಾಷೆ ಉಳಿಸಲು ಇಂದು ಸಂಘಟನೆ ಮೂಲಕ ಹೋರಾಟ ಮಾಡುವ ಪರಿಸ್ಥಿತಿ ಇದೆ.…
ವಿರಾಜಪೇಟೆ ಆ.28 : ಬೆಂಗಳೂರಿನ ವಿಶ್ವ ಕಲಾ ಸಂಸ್ಥೆ ವತಿಯಿಂದ ಬೆಂಗಳೂರು ಹೆಬ್ಬಾಳದ ಅಲುಮ್ನಿ ಅಸೋಷಿಯೇಷನ್ ಸಭಾಂಗಣದಲ್ಲಿ ನಡೆದ ಪ್ರಥಮ ವಿಶ್ವ ಕನ್ನಡ ಕಲಾ ಸಮ್ಮೇಳನ, ರಾಜ್ಯಮಟ್ಟದ ಪ್ರಶಸ್ತಿ ಪ್ರಧಾನ, ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವಿದ್ಯಾರ್ಥಿನಿ ಹೆಚ್.ವಿ.ವರ್ಷಿತ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ವರ್ಷಿತ ವಿರಾಜಪೇಟೆಯ ಹೆಚ್.ವಿ.ವನಿತಾ ಹಾಗೂ ವೆಂಕಟೇಶ್ ಅವರ ಪುತ್ರಿ.
ಸುಂಟಿಕೊಪ್ಪ,ಆ.28 : ಮಕ್ಕಳಿಗೆ ವಿದ್ಯೆ, ಸಂಸ್ಕಾರ ಕಲಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳುವ ಪ್ರತಿಯೊಬ್ಬರು ಶಿಕ್ಷಕರನ್ನು ನೆನಪಿಸುತ್ತಾರೆ ಎಂದು ಸಂತ ಅಂತೋಣಿ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ವಸಂತಿ ಹೇಳಿದರು. ಸಂತ ಅಂತೋಣಿ ಪ್ರಾಥಮಿಕ ಶಾಲೆಯ 1980 ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಶಾಲೆಯಲ್ಲಿ ಬಾಲಂಗೋಚಿ ‘ಹಬ್ಬ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಹಿರಿಯ ಶಿಕ್ಷಕಿ ವಸಂತಿ, ನನ್ನ ಜೀವನದ ಅತ್ಯಂತ ಸಂತೋಷದ ಅವಿಸ್ಮರಣೀಯ ಕ್ಷಣವಾಗಿದೆ. ನಿವೃತ್ತರಾಗಿ 20 ವರ್ಷ ಕಳೆದ ನಂತರ ದೂರದ ತುಮಕೂರಿನಿಂದ ತನ್ನನು ಕರೆಯಿಸಿ ಸನ್ಮಾನಿಸಿದ ಹಳೆಯ ಎಲ್ಲಾ ವಿದ್ಯಾರ್ಥಿಗಳಿಗೆ ತುಂಬು ಹೃದಯದ ಧನ್ಯವಾದಗಳು. ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಕರ್ತವ್ಯವಾದರೂ ಅವರನ್ನು ತಿದ್ದಿ ತೀಡಿ ಬೆಳೆಸುವುದು ಸಾಮಾನ್ಯದ ಕೆಲಸವಲ್ಲ ಎಂದು ಹೇಳಿದರು. ಸಂತ ಅಂತೋಣಿ ಪ್ರಾಥಮಿಕ ಶಾಳೆಯ ಮುಖ್ಯೋಪಾದ್ಯಾಯನಿ ವೀರಾ ಡಿಸೋಜ ಮಾತನಾಡಿ ಹಳೆ ವಿದ್ಯಾರ್ಥಿಗಳು ಈ ಶಾಲೆಯ ಮೇಲಿನ ಅಭಿಮಾನದಿಂದ ಹಾಗೂ ಸಿಸ್ಟರ್ಸ್‍ಗಳ, ಶಿಕ್ಷಕರ ಮೇಲಿನ ಪ್ರೀತಿಯಿಂದ ಕಾರ್ಯಕ್ರಮ…
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸೋಮವಾರ 51,000ಕ್ಕೂ ಹೆಚ್ಚು ಜನರಿಗೆ ರೋಜ್‌ಗಾರ್ ಮೇಳದಡಿಯಲ್ಲಿ (Rozgar Mela) ಸರ್ಕಾರಿ ಉದ್ಯೋಗ ನೇಮಕಾತಿ ಪತ್ರವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿತರಿಸಿದ್ದಾರೆ. ದೆಹಲಿಯಿಂದ ವರ್ಚುವಲ್ ಕಾನ್ಫರೆನ್ಸ್ ಮೂಲಕ ರೋಜ್ ಗಾರ್ ಮೇಳದ 8ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅರೆಸೇನಾ ಪಡೆಗಳಲ್ಲಿನ ನೇಮಕಾತಿ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದ್ದು, ನೇಮಕಾತಿಯ ಸಮಯವನ್ನು ಕಡಿಮೆಗೊಳಿಸಲಾಗಿದೆ ಎಂದು ಅವರು ಹೇಳಿದರು.
ಮಡಿಕೇರಿ ಆ.28 : ಬಸ್ ಡಿಕ್ಕಿಯಾಗಿ ಹಾನಿಗೊಳಗಾದ ವೀರಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಪರಿಶೀಲಿಸಿದರು. ಅಪಘಾತ ನಡೆದ ತಿಮ್ಮಯ್ಯ ವೃತ್ತಕ್ಕೆ ಭೇಟಿ ನೀಡಿದ ಅವರು ಘಟನೆಯ ಕುರಿತು ಮಾಹಿತಿ ಪಡೆದರು. ಈ ಸಂದರ್ಭ ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಹಾಗೂ ಮತ್ತಿತರ ಕಾರ್ಯಕರ್ತರು ಹಾಜರಿದ್ದರು.






