ಲೇಖಕ: admin

ವಿರಾಜಪೇಟೆ ಆ.28 : ಬಿಳುಗುಂದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅಮ್ಮತ್ತಿ ವಲಯ ಮಟ್ಟದ ಕ್ರೀಡಾ ಕೂಟ ಎರಡು ದಿನಗಳ ಕಾಲ ನಡೆಯಿತು. ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ವನಜಾಕ್ಷಿ ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿ ಬಾಲ್ ಎಸೆತದೊಂದಿಗೆ ಕ್ರೀಡಾಕೂಟ ಉದ್ಘಾಟಿಸಿದರು. ಬಿಳುಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ಹತ್ತನೇ ತರಗತಿ ವಿದ್ಯಾರ್ಥಿನಿ ಆಯಿಷಾ ಹನ ಕ್ರೀಡಾ ಕೂಟದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕರಾದ ಬಿ.ಆರ್ ಗಾಯತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕ್ರೀಡೆ ದೇಹಕ್ಕೆ ಚೈತನ್ಯವನ್ನು ತುಂಬುತ್ತದೆ. ಎಲ್ಲರ ಆರೋಗ್ಯವನ್ನು ಕಾಪಾಡಿ, ಮಾನಸಿಕ ನೆಮ್ಮದಿ ನೀಡಲು ಕ್ರೀಡಾಕೂಟಗಳು ಅಗತ್ಯ. ನಮ್ಮ ಮಕ್ಕಳು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಬೇಕೆಂದು ಶುಭ ಹಾರೈಸಿದರು. ಗ್ರಾ.ಪಂ  ಮಾಜಿ ಸದಸ್ಯರಾದ ಐನಂಡ ಪ್ರತಾಪ್, ಚಿಲ್ಲವಂಡ ಕಾವೇರಪ್ಪ, ಹಾಗೂ ಅಮ್ಮತ್ತಿ ಕ್ಲಸ್ಟರ್ ಸಿಆರ್.ಪಿ. ಪ್ರವೀಣ್  ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ  ಕೆ.ಹೆಚ್. ಅಲಿ ವಹಿಸಿದ್ದರು. ವೇದಿಕೆಯಲ್ಲಿ ಸುಗುಣ, ಪ್ರೌಢಶಾಲಾ ಶಿಕ್ಷಕರ ಸಂಘದ…

Read More

ಸೋಮವಾರಪೇಟೆ ಆ.28 : ಗೌಡಳ್ಳಿ ಬಿಜಿಎಸ್ ಶಾಲಾ ಮೈದಾನದಲ್ಲಿ ನಡೆದ ಪ್ರೌಢಶಾಲಾ ವಿಭಾಗ ಎ.ವಲಯ ಮಟ್ಟದ ಅಥ್ಲೆಟಿಕ್ಸ್ ರಿಲೇ ಬಾಲಕಿಯರ ವಿಭಾಗದಲ್ಲಿ ಗೌಡಳ್ಳಿ ಬಿಜಿಎಸ್ ಶಾಲೆ ಪ್ರಥಮ, ಚೌಡ್ಲು ವಿಶ್ವಮಾನವ ಕುವೆಂಪು ದ್ವಿತೀಯ ಹಾಗೂ ನೇರುಗಳಲೆ ಸರ್ಕಾರಿ ಪ್ರೌಢಶಾಲೆ ತೃತೀಯ ಸ್ಥಾನ ಪಡೆದುಕೊಂಡಿದೆ. ಬಾಲಕರ ವಿಭಾಗದಲ್ಲಿ ಸೋಮವಾರಪೇಟೆ ಸರ್ಕಾರಿ ಪ್ರೌಢಶಾಲೆ(ಪ್ರ), ನೇರುಗಳಲೆ(ದ್ವಿ), ಎಸ್‍ಜೆಎಂ ಸೋಮವಾರಪೇಟೆ(ತೃ) ಸ್ಥಾನ ಪಡೆಯಿತು. 200ಮೀ ಬಾಲಕರ ಓಟದಲ್ಲಿ ಎಸ್‍ಜೆಎಂ ಶಾಲೆಯ ಹೇಮಂತ್(ಪ್ರ), ಪಾಲಾಕ್ಷ(ದ್ವಿ), ಕುವೆಂಪು ಶಾಲೆಯ ಗೌತಮ್(ತೃ), ಬಾಲಕಿಯರ ವಿಭಾಗದಲ್ಲಿ ಕುವೆಂಪು ಶಾಲೆಯ ರಹಸ್ಯ(ಪ್ರ), ಬಿಜಿಎಸ್ ಮೋಕ್ಷ(ದ್ವಿ), ಕುವೆಂಪು ಜೀವಿತ(ತೃ), 3000 ಮೀ ಓಟದಲ್ಲಿ ಬಿಜಿಎಸ್ ಹನಿ(ಪ್ರ), ಎಸ್‍ಜೆಎಂ ಅಂಕಿತಾ(ದ್ವಿ), ಸ್ಥಾನ ಪಡೆದರು. ತಟ್ಟೆ ಎಸೆತದಲ್ಲಿ ಬಿಜಿಎಸ್ ಡಿ.ಪಿ.ಮೊನಿಷಾ(ಪ್ರ), ನೇರುಗಳಲೆ ಇಂಪು(ದ್ವಿ), ಎಸ್‍ಜೆಎಂ ಕುಮಾರಿ(ತೃ). ಬಾಲಕರ ವಿಭಾಗದಲ್ಲಿ ಗೋಣಿಮರೂರು ಶಾಲೆಯ ಉಲ್ಲಾಸ್(ಪ್ರ), ಸೋಮವಾರಪೇಟೆ ಪ್ರೌಢಶಾಲೆಯ ದುಶ್ಯಂತ್(ದ್ವಿ), ಅರ್ಜುನ್ ತೃತೀಯ. ಭರ್ಜಿ ಎಸೆತದಲ್ಲಿ ನೇರುಗಳಲೆ ಶಾಲೆಯ ಸೀಮಾ (ಪ್ರ), ಸೋಮವಾರಪೇಟೆ ಶಾಲೆಯ ಸಂಜನಾ(ದ್ವಿ), ಕುವೆಂಪು ಶಾಲೆಯ ಜೀವಿತ(ತೃ), ಬಾಲಕರ…

Read More

ಮಡಿಕೇರಿ ಆ.28 :  ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಭಾಗಮಂಡಲ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ಆ.29 ರಂದು ದಿ. ಶಾಂತಮಲ್ಲಸ್ವಾಮಿ ದತ್ತಿ ಮತ್ತು ದಿ.ಕೆ.ಟಿ ಸುಬ್ಬರಾವ್ ದತ್ತಿ ಉಪನ್ಯಾಸ ಹಾಗೂ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಚೇರಂಬಾಣೆಯ ಕೊಟ್ಟೂರು ಗ್ರಾಮದ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ  ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು  ಶ್ರೀ ರಾಜರಾಜೇಶ್ವರಿ ಎಜುಕೇಶನ್ ಟ್ರಸ್ಟಿನ ಕಾರ್ಯದರ್ಶಿ ಹಾಗೂ ವ್ಯವಸ್ಥಾಪಕರಾದ ನಾಟೋಳoಡ. ಡಿ. ವಿಜು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ  ಎಂ.ಪಿ.ಕೇಶವ ಕಾಮತ್  ವಹಿಸಲಿದ್ದು,  ಕೊಡಗಿನ ವೀರಶೈವ ಅರಸರ ಕುರಿತು ಉಪನ್ಯಾಸವನ್ನು ಶಿಕ್ಷಕರಾದ  ಕೆ.ಬಿ ಉಷಾರಾಣಿ ಮತ್ತು ಕನ್ನಡ ಸಾಹಿತ್ಯದಲ್ಲಿ ಕೊಡಗು ಕುರಿತು ಉಪನ್ಯಾಸವನ್ನು ಭಾಗಮಂಡಲದ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ  ವಿ.ವಿ ಶಿವಪ್ಪ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೆಂಗೂರು…

Read More

ಮಡಿಕೇರಿ ಆ.28 :  ಟಿ.ಶೆಟ್ಟಿಗೇರಿಯ ನಂ.33ನೇ ಮಾಜಿ ಸೈನಿಕರ ಸಂಘದಿಂದ ಆಯೋಜಿಸಿದ್ದ ಯುದ್ಧಸ್ಮಾರಕ ಅನಾವರಣ ಕಾರ್ಯಕ್ರಮದಲ್ಲಿ  ವಿರಾಜಪೇಟೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ  ಎ.ಎಸ್. ಪೊನ್ನಣ್ಣ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಇದೇ ಸಂದರ್ಭ ಶಾಸಕರನ್ನು ಮಾಜಿ ಸೈನಿಕರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮಾಜಿ ಯೋಧರ ಸಂಘದ ಅಧ್ಯಕ್ಷ ಕಟ್ಟೇರ ಎ. ವಿಶ್ವನಾಥ್,ಮಾಜಿ ಯೋಧರು, ಸ್ಥಳೀಯರು ಹಾಜರಿದ್ದರು.

Read More

ವಿರಾಜಪೇಟೆ ಆ.28 : ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಗೋಣಿಕೊಪ್ಪದ ಲಯನ್ಸ್ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಭಾಷಣ ಸ್ಪರ್ಧೆ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ವಿರಾಜಪೇಟೆ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಎ.ಕೆ.ಮೋಕ್ಷ ಕನ್ನಡ ಭಾಷಣದಲ್ಲಿ ಪ್ರಥಮ, 9ನೇ ತರಗತಿ ವಿದ್ಯಾರ್ಥಿ ನಿಶಾನ್ ಇಂಗ್ಲಿಷ್ ಭಾಷಣದಲ್ಲಿ ಪ್ರಥಮ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ 6ನೇ ತರಗತಿ ವಿದ್ಯಾರ್ಥಿ ದಕ್ಷ ಬೋಜಣ್ಣ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಎಸ್.ಸುದೇಶ್, ಕಾರ್ಯದರ್ಶಿ ಪಿ.ಎನ್.ವಿನೋದ್, ಶಾಲಾ ಸಂಯೋಜಕರಾದ ಚೈತ್ರ, ಭಾಗ್ಯ, ಅಮೃತ ಮತ್ತು ಸಹ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಅಭಿನಂದನೆ ಸಲ್ಲಿಸಿದರು.

Read More

ವಿರಾಜಪೇಟೆ ಆ.28 : ವಿರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಂಘದ ವತಿಯಿಂದ ಆ.31 ರಂದು ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಆಚರಿಸಲಾಗುವುದು ಎಂದು ಬಿಲ್ಲವ ಸೇವಾ ಸಂಘದ ತಾಲೂಕು ಅಧ್ಯಕ್ಷ ಬಿ.ಎಂ.ಗಣೇಶ್ ತಿಳಿಸಿದರು. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಿಟ್ಟಂಗಾಲ ಗ್ರಾಮದ ಅಂಬಟ್ಟಿಯಲ್ಲಿರುವ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದಲ್ಲಿ ಬೆಳಿಗ್ಗೆ 8 ಗಂಟೆಗೆ ಬ್ರಹ್ಮಶ್ರಿ ನಾರಾಯಣ ಗುರು ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿರಾಜಪೇಟೆಯ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹಾಗೂ ವಿಧಾನ ಪರಿಷತ್ತ್ ಸದಸ್ಯರಾದ ಮಂಡೇಪಂಡ ಸುಜಾ ಕುಶಾಲಪ್ಪ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಶಾಸಕದ್ವಯರನ್ನು ಸಂಘದ ವತಿಯಿಂದ ಸನ್ಮಾನಿಸಲಾಗುತ್ತದೆ. ಮತ್ತು ಜನಾಂಗ ಭಾಂಧವರಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತಲೂ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಸಂಘದಲ್ಲಿ ಈಗಾಗಲೇ ಸಂಘದ ಸದಸ್ಯರಿಗೆ ಮರಣ ನಿಧಿಯನ್ನು ಸ್ಥಾಪಿಸಲಾಗಿದ್ದು, ಮರಣನಿಧಿಗೆ ಸಂಭಂಧಿಸಿದಂತೆ ಸದಸ್ಯರುಗಳು ಆದಷ್ಟು…

Read More

ಮಡಿಕೇರಿ ಆ.28 :  ಇತಿಹಾಸ ಪ್ರಸಿದ್ಧ   ಕುಂಜಿಲ ಪೈನರಿ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಮಹಾತ್ಮರ ಹೆಸರಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುವ ಉರೂಸ್ 2024ನೇ ಸಾಲಿನ ಫೆ.23 ರಿಂದ 27ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಅಧ್ಯಕ್ಷರಾದ ಶೌಕತ್ ಮಕ್ಕಿ ಮತ್ತು ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ ವರದಿ : ನೌಫಲ್ ಕಡಂಗ 

Read More

ನಾಪೋಕ್ಲು ಆ.28 : ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ಹಾಗೂ ನೆಲಜಿ ಗ್ರಾಮದ ಇಗ್ಗುತ್ತಪ್ಪ ದೇವಾಲಯದಲ್ಲಿ ಚೀನ್ಯಾರು 10ರ ಆರಾಧನೆಯು ಶ್ರದ್ಧಾಭಕ್ತಿಯಿಂದ ಜರುಗಿತು. ಉತ್ಸವದಲ್ಲಿ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಕೊಡಗಿನಲ್ಲಿ ವಿವಿಧ ಉತ್ಸವಗಳ ಆರಂಭಕ್ಕೂ ಮುನ್ನ ಇಗ್ಗುತ್ತಪ್ಪ ದೇವಾಲಯಗಳಲ್ಲಿ ಚೀನ್ಯಾರು 10 ರ ಉತ್ಸವವನ್ನು ಆಚರಿಸಲಾಗುತ್ತದೆ. ದೇವಾಲಯಗಳಲ್ಲಿ ದೇವರ ನೃತ್ಯಬಲಿಯೊಂದಿಗೆ ಉತ್ಸವ ನೆರವೇರಿತು. ಆ ಮೂಲಕ ಕೈಲ್ ಪೋಳ್ದ್ ಸೇರಿದಂತೆ ವಿವಿಧ ಉತ್ಸವಗಳನ್ನು ಸಾರ್ವಜನಿಕರು ಆಚರಿಸಲು ಅನುವು ಮಾಡಿಕೊಡಲಾಯಿತು. ವರದಿ : ದುಗ್ಗಳ ಸದಾನಂದ 

Read More

ನಾಪೋಕ್ಲು ಆ.28 : ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಿಧಾನ ಪರಿಷತ್ ಸದಸ್ಯರು, ಕೊಡಗು ಜಿಲ್ಲೆಯ ಮಾಜಿ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಮತ್ತು ಕುಟುಂಬಸ್ಥರು 12 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ಹೆಬ್ಬಾಗಿಲನ್ನು ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭ ಎಂ.ಆರ್ ಸೀತಾರಾಮ್ ಮಾತನಾಡಿ, ಇಗ್ಗುತಪ್ಪನ ಆಶೀರ್ವಾದದಿಂದ ದೇವಾಲಯಕ್ಕೆ ಮೆಟ್ಟಿಲುಗಳನ್ನು ಹಾಗೂ ಹೆಬ್ಬಾಗಿಲನ್ನು ಸಮರ್ಪಿಸಿ ಉದ್ಘಾಟನೆ ನೆರವೇರಿಸಲಾಗಿದೆ ಎಂದರು. ಭಕ್ತರ ಅನುಕೂಲಕ್ಕಾಗಿ ದೇವಾಲಯಕ್ಕೆ ತೆರಳಲು ಈ ಹಿಂದೆ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿಲಾಗಿದ್ದು, ಮಧ್ಯಭಾಗದಲ್ಲಿ ರಸ್ತೆ ಕೆಲಸ ಬಾಕಿ ಇದ್ದು ಅದನ್ನು ಮುಂದಿನ ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದರು. ಇಗ್ಗುತ್ತಪ್ಪ ದೇವಾಲಯದಲ್ಲಿ ಆಚರಿಸಲಾಗುತ್ತಿರುವ ಚೀನ್ಯಾರು ಹತ್ತರ ಹಬ್ಬದಂದು ದೇವಾಲಯದ ಹೆಬ್ಬಾಗಿಲನ್ನು ಸೀತಾರಾಮ್ ಅವರು ನಿರ್ಮಿಸಿ ಕೊಟ್ಟು ಇಂದು ಲೋಕಾರ್ಪಣೆ ಗೊಳಿಸಿದ್ದಾರೆ. ಮಾತ್ರವಲ್ಲದೆ ಸನ್ನಿಧಿಗೆ ಬರುವ ರಸ್ತೆ ಈ ಹಿಂದೆ ತೀವ್ರ ಹದಗೆಟ್ಟಿದ್ದು, ಅದನ್ನು ಕಾಂಕ್ರೀಟಿಕರಣಗೊಳಿಸಿ ಕೊಡುಗೆ ನೀಡಿದ್ದಾರೆ. ಸಮಸ್ತ ಭಕ್ತರ ಪರವಾಗಿ ಅವರಿಗೆ ಅಭಿನಂದನೆಗಳು ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ, ದೇವತಕ್ಕರಾದ ಪರದಂಡ ಸುಮನ್…

Read More

ನಾಪೋಕ್ಲು ಆ.28 : ಮೂಢನಂಬಿಕೆಗಳು ಅವೈಜ್ಞಾನಿಕವಾಗಿದ್ದು ಇಂತಹ ವಿಚಾರಗಳನ್ನು ವೈಜ್ಞಾನಿಕ ತಳಹದಿಯಲ್ಲಿ ಚರ್ಚಿಸದೆ ಒಪ್ಪಿಕೊಳ್ಳಬಾರದು ಎಂದು ಭಾರತ ವಿಚಾರವಾದಿ ಒಕ್ಕೂಟದ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ ಹೇಳಿದರು. ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ಕೊಡಗು ನ್ಯಾಷನಲಿಸ್ಟ್ ಅಸೋಸಿಯೇಷನ್ ಮತ್ತು ಮೂರ್ನಾಡು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ವಿಜ್ಞಾನ ಮತ್ತು ಮೂಢನಂಬಿಕೆಗಳು ಎಂಬ ವಿಚಾರದ ಕುರಿತು ಮಾತನಾಡಿದರು. ಸಮಾಜದಲ್ಲಿ ಮೌಡ್ಯತೆ ಹತ್ತಿಕ್ಕಬೇಕಾದರೆ ಯುವ ಜನರು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು, ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ರೂಢಿಸುವಲ್ಲಿ ಶಿಕ್ಷಣ ನೆರವಾಗಬೇಕು ಎಂದರು. ವಿಜ್ಞಾನ ಮನುಷ್ಯನಲ್ಲಿ ಆಲೋಚನಾ ಪ್ರವೃತ್ತಿಯನ್ನು ಬೆಳೆಸುತ್ತದೆ ದೇವರೇ ಹೆಸರಿನಲ್ಲಿ ಬಲಿಕೊಡುವುದು, ವಾಮಾಚಾರ, ಮಾಟ ಮಂತ್ರ ನಡೆಸುವುದು ಇದೆಲ್ಲ ಮುಗ್ಧರನ್ನು ವಂಚಿಸುವ ಕೆಲಸವಾಗಿದೆ. ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದರು. ವೇದಿಕೆಯಲ್ಲಿ ಕಾವೇರಿ ವಿದ್ಯಾಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಕೊಡಗು ನ್ಯಾಷನಲಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಡಾ.ಎ.ಸಿ.ಗಣಪತಿ, ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪಿ.ಸಿ.ಸುಬ್ರಮಣಿ, ಕಾರ್ಯದರ್ಶಿ ವೇಣು ಅಪ್ಪಣ್ಣ, ಖಜಾಂಚಿ ಬಿ.ಪಿ.ಸುಬ್ರಮಣಿ ,ಪ್ರಾಂಶುಪಾಲರಾದ ದೇವಕಿ…

Read More