ಲೇಖಕ: admin

ಮಡಿಕೇರಿ ಜೂ.29 : ವಿರಾಜಪೇಟೆ ನಗರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಖಾಸಗಿ ಬಸ್ ನಿಲ್ದಾಣದ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಪೊಲೀಸರು ವಿರಾಜಪೇಟೆ ಸುಂಕದಕಟ್ಟೆ ನಿವಾಸಿಗಳಾದ ಎಸ್.ಹರೀಶ್ (48), ಎಸ್.ಸಂತೋಷ್ (39) ಹಾಗೂ ಎಸ್.ಪಿ.ದಿಕ್ಷೀತ್ (23) ಎಂಬುವವರನ್ನು 127 ಗ್ರಾಂ ಗಾಂಜಾ ಸಹಿತ ವಶಕ್ಕೆ ಪಡೆದರು. ವಿರಾಜಪೇಟೆ ಉಪವಿಭಾಗದ ಡಿವೈಎಸ್‌ಪಿ ಆರ್.ಮೋಹನ್ ಕುಮಾರ್, ಸಿಪಿಐ ಬಿ.ಎಸ್.ಶಿವರುದ್ರ, ಪಿಎಸ್‌ಐ ಶ್ರೀಧರ್.ಸಿ.ಎ ಹಾಗೂ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯದಕ್ಷತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ. ::: ಮಾಹಿತಿ ನೀಡಿ ::: ಯುವಕ-ಯುವತಿಯರು ಮಾದಕ ವ್ಯಸನಿಗಳಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದನ್ನು ತಡೆಗಟ್ಟುವ ಸಲುವಾಗಿ ಮಾದಕ ವಸ್ತುಗಳನ್ನು ಬಳಸುವ ಹಾಗೂ ಮಾರಾಟ ಮಾಡುವ ವ್ಯಕ್ತಿಗಳು ಕಂಡು ಬಂದಲ್ಲಿ…

Read More

ಮಡಿಕೇರಿ ಜೂ.29 : ಕಳೆದ ವಿಧಾನಸಭಾ ಚುಣಾವಣೆಯಲ್ಲಿನ ಬಿಜೆಪಿ ಸೋಲಿನ ವಿಮರ್ಶೆ ಮಾಡುತ್ತಲೆ ಇದ್ದಲ್ಲಿ ನಾವು ಅಲ್ಲೆ ಉಳಿದು ಬಿಡುತ್ತೇವೆ. ಸೋಲನ್ನು ಮರೆತು ಮುಂದಿನ ಲೋಕಸಭಾ ಚುನಾವಣೆಯನ್ನು ಗೆಲ್ಲಲು ಶ್ರಮಿಸೋಣ ಎಂದು ಬಿಜೆಪಿ ಪ್ರಮುಖ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಕರೆ ನೀಡಿದ್ದಾರೆ. ನಗರದ ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ‘ಬಿಜೆಪಿ ಕಾರ್ಯಕರ್ತರ ಸಮಾವೇಶ’ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಕಾರ್ಯಕರ್ತರು ಬಿಜೆಪಿ ಸೋಲಿನ ವಿಮರ್ಶೆಯಲ್ಲಿ ತೊಡಗಿದ್ದಾರೆ. ಮೊದಲು ಇದಕ್ಕೆ ಪೂರ್ಣವಿರಾಮ ಹಾಕಿ, ಮುಂದೆ ಏನು ಎನ್ನುವುದರತ್ತ ಚಿಂತನೆ ಹರಿಸೋಣವೆಂದು ತಿಳಿಸಿದರು. ಬಿಜೆಪಿ ಸರ್ಕಾರ ಮಾಡಿರುವ ಜನಪರ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವಲ್ಲಿ ನಾವು ವಿಫಲರಾಗಿದ್ದೇವೆ. ಕೇವಲ ‘ಮೋದಿ’ ಹೆಸರನ್ನು ಹೇಳುತ್ತಾ ಹೋದರೆ ಮತ ಬರಲಾರದು. ಮೋದಿ ಅವರು ಈ ರಾಷ್ಟ್ರಕ್ಕೆ ನೀಡಿದ ಕೊಡುಗೆ, ಮಾಡಿರುವ ಮಹತ್ತರ ಕಾರ್ಯಗಳ ಮೇಲೆ ಮತಗಳು ಬರುತ್ತದೆ ಎಂದರು. ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿದೆ. ಈ ಗೆಲುವಿನೊಂದಿಗೆ ಕಾಂಗ್ರೆಸ್ ಒಂದು ಗೆರೆ ಎಳೆದಿದೆ. ಮುಂಬರುವ…

Read More

ಮಡಿಕೇರಿ ಜೂ.29 : ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳು ಮುಂದಿನ ಸಾಲಿನ ಲೋಕಸಭಾ ಚುನಾವಣೆಯವರೆಗೆ ಮಾತ್ರ ಚಾಲ್ತಿಯಲ್ಲಿರಲಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಆರ್.ಅಶೋಕ್ ಲೇವಡಿ ಮಾಡಿದ್ದಾರೆ. ನಗರದ ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸುವ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದರು. ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಮಾತ್ರ ಜಾರಿಯಾಗಿದ್ದು, ಅದೂ ಸಮರ್ಪಕವಾಗಿಲ್ಲ. ಇನ್ನು ಪ್ರತಿ ಮನೆಯ ಮಹಿಳೆಯರಿಗೆ 2 ಸಾವಿರ ರೂ., ನಿರುದ್ಯೋಗಿಗಳಿಗೆ 3 ಸಾವಿರ, ಪ್ರತಿ ಮನೆಗೆ 200 ಯೂನಿಟ್ ಗ್ಯಾರಂಟಿಗಳು ಇನ್ನೂ ಜಾರಿಯಾಗಿಲ್ಲ, ಇವೆಲ್ಲ ಗೊಂದಲದ ಗೂಡಾಗಿದೆ ಎಂದು ಟೀಕಿಸಿದರು. ಪ್ರತಿ ಪಡಿತರ ಚೀಟಿ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿಯನ್ನು ನೀಡಲು ಇನ್ನೂ ಸಾಧ್ಯವಾಗಿಲ್ಲ. ಆದರೆ ಸಿದ್ದರಾಮಯ್ಯ ಅವರ ಈ ಅಕ್ಕಿ ಯೋಜನೆಯಿಂದ ಇಲ್ಲಿಯವರೆಗೆ ಪಡಿತರದಾರರಿಗೆ ದೊರಕುತ್ತಿದ್ದ 5 ಕೆ.ಜಿ. ಅಕ್ಕಿ ಕೇಂದ್ರದ ಮೋದಿ ನೇತೃತ್ವದ ಸರ್ಕಾರ ನೀಡುತ್ತಿದ್ದುದು…

Read More

ಕುಶಾಲನಗರ ಜೂ.29 :   ಕುಶಾಲನಗರ ರೋಟರಿ ಕ್ಲಬ್‌ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ನೂತನ ಅಧ್ಯಕ್ಷ ರಾಗಿ ಸುನೀತಾ ಮಹೇಶ್, ಕಾರ್ಯದರ್ಶಿಯಾಗಿ ಕೆ.ಎಸ್ ಶರ್ಲಿ , ಖಜಾಂಜಿಯಾಗಿ ರಿಚರ್ಡ್ ಡಿಸೋಜ ಅಧಿಕಾರ ಸ್ವೀಕರಿಸಿದರು. ರೋಟರಿ ಮಾಜಿ ಜಿಲ್ಲಾ ರಾಜ್ಯಪಾಲ ಎಂ.ಎಂ.ಸುರೇಶ್ ಚಂಗಪ್ಪ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಮಹಿಳೆಯರಿಗೆ ಅಧ್ಯಕ್ಷ ಸ್ಥಾನ ಲಭಿಸಿದ ಕಾರಣ ಈ ಬಾರಿ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದಂತೆ ಆಗಿದೆ. ಮಹಿಳೆಯರು ತಮ್ಮ ಬುದ್ಧಿ ಶಕ್ತಿ ಪ್ರದರ್ಶಿಸುವ ಮೂಲಕ ಕುಶಾಲನಗರ ರೋಟರಿ ಕ್ಲಬ್ ಅನ್ನು ಇತರೆ ಕ್ಲಬ್ ಗಳಿಗೆ ಮಾದರಿಯಾಗಿ ರೂಪಿಸಬೇಕು ಎಂದು ಹೇಳಿದರು. ರೋಟರಿ ಕ್ಲಬ್‌ ಸಮಾಜ ಸೇವೆಗೆ ಮಾದರಿಯಾಗಿದೆ. ದುರ್ಬಲ ಹಾಗೂ ಬಡ ವಿದಾರ್ಥಿಗಳ ಏಳಿಗೆಗಾಗಿ ರೋಟರಿ ಸಂಸ್ಥೆ ಶ್ರಮಿಸುತ್ತಿದೆ. ಎಸ್ಎಸ್ಎಲ್ಸಿ, ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಿರುವುದು ಶ್ಲಾಘನೀಯ ಎಂದರು. ಸಹಾಯಕ ರಾಜ್ಯಪಾಲ ಎಂ.ಡಿ…

Read More

ಮಡಿಕೇರಿ ಜೂ.29 : ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ತೀರ್ಮಾನಿಸಿದ್ದು, ಅದರಂತೆ ವೃತ್ತಕ್ಕೂ ಅಂಬೇಡ್ಕರ್ ಹೆಸರಿಡುವಂತೆ ದಲಿತ ಸಂಘಟನೆಗಳು ಮನವಿ ಮಾಡಿದೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಕೆ.ಬಿ.ರಾಜು ನೇತೃತ್ವದಲ್ಲಿ ನಗರಸಭೆ ಪೌರಯುಕ್ತ ವಿಜಯ ಅವರಿಗೆ ಮನವಿ ಸಲ್ಲಿಸಿದ ರೈತಪರ ಸಂಘ, ಸಿಪಿಐಎಂಎಲ್, ದಲಿತ ಒಕ್ಕೂಟ ಹಾಗೂ ದಲಿತ ಮುಖಂಡರು, ಸಂಘದ ಪದಾಧಿಕಾರಿಗಳು ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ತೀರ್ಮಾನಿಸಿರುವುದು ಕೊಡಗು ಜಿಲ್ಲೆಯ ಎಲ್ಲಾ ಜನಾಂಗಕ್ಕೂ ಎಲ್ಲಾ ದಲಿತಪರ ಸಂಘಟನೆಯ ಹೋರಾಟಗಾರರಿಗೂ ಸಂತಸದ ವಿಚಾರ. ಆದರಂತೆ ವೃತ್ತಕ್ಕೂ ಅವರ ಹೆಸರು ಇಡಬೇಕೆಂದು ಮನವಿ ಮಾಡಿದರು. ಈಗಾಗಲೇ ಸ್ವಾಮಿ ವಿವೇಕಾನಂದ ಅವರ ಹೆಸರನ್ನು ಈಡಲು ನಿರ್ಧರಿಸಲಾಗಿದ್ದು, ಅದರ ಬಗ್ಗೆ ಯಾವುದೇ ಆಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸ್ವಾಮಿ ವಿವೇಕಾನಂದ ಅವರ ಹೆಸರನ್ನು ಬೇರೆ ವೃತ್ತಕ್ಕೂ, ಉದ್ಯಾನವಕ್ಕೂ ಇಡುವಂತೆ ಒತ್ತಾಯಿಸಿದರು. ಸಿಪಿಐಎಂಎಲ್ ರಾಜ್ಯ…

Read More

ಮಡಿಕೇರಿ ಜೂ.29 : ಮಂಗಳೂರಿನಲ್ಲಿ ನಡೆದ ಜಿಲ್ಲಾ ಪ್ರಶಸ್ತಿ ಮತ್ತು ತರಬೇತಿ ಸಮ್ಮೇಳನ “ಸಂಪ್ರಾಪ್ತಿ -2023” ರಲ್ಲಿ ರೋಟರಿ ಮಡಿಕೇರಿಯು “ಪ್ಲಾಟಿನಂ ಪ್ಲಸ್” ಪ್ರಶಸ್ತಿಯನ್ನು ಪಡೆದುಕೊಂಡಿದೆ. ಜಲಸಿರಿ, ಆರೋಗ್ಯ ಸಿರಿ, ವನಸಿರಿ, ವಿದ್ಯಾಸಿರಿ ಈ ಎಲ್ಲಾ ವಿಭಾಗಗಳಲ್ಲಿ ರೋಟರಿ ಮಡಿಕೇರಿ ಪ್ರಶಸ್ತಿ ಗಳಿಸಿದೆ. ಸಂಸ್ಥೆಯ ಮಾದರಿ ಕಾರ್ಯಗಳನ್ನು ಶ್ಲಾಘಿಸಿ ಈ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಅಧ್ಯಕ್ಷ ಕೆ.ಸಿ.ಕಾರ್ಯಪ್ಪ ಅವರನ್ನು ಜಿಲ್ಲಾ ಗವರ್ನರ್ ರೋಟರಿಯನ್ ಪ್ರಕಾಶ್ ಕಾರಂತ್ ಸನ್ಮಾನಿಸಿದರು. ರೋಟರಿ ಮಡಿಕೇರಿಯ ಕಾರ್ಯದರ್ಶಿ ಸುದಯ್ ನಾಣಯ್ಯ, ಸಹಾಯಕ ಗವರ್ನರ್ ರತನ್ ತಮ್ಮಯ್ಯ, ರೋಟರಿಯನ್‍ಗಳಾದ ಡಾ.ರವಿ ಅಪ್ಪಾಜಿ, ಅನಿಲ್ ಕೃಷ್ಣಾನಿ, ಗೀತಾ ಗಿರೀಶ್, ಲಲಿತ ರಾಘವನ್, ಪಾರ್ವತಿ ಚೀಯಣ್ಣ ಉಪಸ್ಥಿತರಿದ್ದರು.

Read More

ಮಡಿಕೇರಿ ಜೂ.29 : ಬೆಂಗಳೂರಿನ ಹೊಸಕೋಟೆ ತಿರುಮಲ ಹಳ್ಳಿಯ ಶ್ರೀ ಸಾಯಿ ಪಾಲೇಸ್‍ನಲ್ಲಿ ನಡೆದ ರಾಜ್ಯ ಮಟ್ಟದ ಸಬ್ ಜೂನಿಯರ್, ಜೂನಿಯರ್ ಹಾಗೂ ಸೀನಿಯರ್ ವಿಭಾಗದ ಟೆಕ್ವಾಂಡೊ ಚಾಂಪಿಯನ್ ಶಿಪ್‍ನಲ್ಲಿ ಕೊಡಗಿನ ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಚಿನ್ನ ಮತ್ತು ಬೆಳ್ಳಿಯ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಾದ ಎಂ.ವಿ.ಕಿಶನ್ 2 ಚಿನ್ನ, ಬಾರನ ಎಸ್.ಬಿಂಬಿತ್ 2 ಚಿನ್ನ, ಬಾರನ ಎಸ್. ಪ್ರೇಕ್ಷಿತ್ 2 ಚಿನ್ನ, ಬಾರನ ಡಿ.ಚಿನ್ಮಯಿ 2 ಚಿನ್ನ, ಜಿ.ಎಂ.ಮಿನ್‍ಶಾ 1 ಚಿನ್ನ, ಅಮೃತ ಜಗದೀಶ್ 1 ಚಿನ್ನ, ಪಿ.ಬಿ.ಶಿವ 1 ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಸ್ಟೆರ್ಲಿಟ ಶಿಹ ಸೆಕ್ಯೂರ 1 ಬೆಳ್ಳಿ, ಅನನ್ಯ ಜಗದೀಶ್ 1 ಬೆಳ್ಳಿ, ಜಿ.ಎಂ.ಮನೀಶ್‍ನಾಥ್ 1 ಬೆಳ್ಳಿ, ಶರತ್ ಕುಮಾರ್ 1 ಬೆಳ್ಳಿ, ಎ.ಅಚಲ್ 1 ಬೆಳ್ಳಿ, ಟಿ.ಪಿ.ಪೃತ್ವಿನ್ 1 ಬೆಳ್ಳಿಯ ಪದಕವನ್ನು ಗೆದ್ದುಕೊಂಡಿದ್ದಾರೆ. ಕೂರ್ಗ್ ಟೆಕ್ವಾಂಡೊ ತರಬೇತಿ ಕೇಂದ್ರದ ತರಬೇತುದಾರ ಬಿ.ಜಿ.ಲೋಕೇಶ್ ರೈ ಅವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.

Read More

ಮಡಿಕೇರಿ ಜೂ.29 : ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್.ಡಿ.ಎಂ.ಸಿ., ಶಾಲೆಯ ಕನ್ನಡ ಭಾಷಾ ಸಂಘ ಹಾಗೂ ವಿದ್ಯಾರ್ಥಿ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಬೆಂಗಳೂರು ನಗರದ ನಿರ್ಮಾತೃ ಕೆಂಪೇಗೌಡರ ದೂರದೃಷ್ಠಿಯಿಂದ ಬೆಂಗಳೂರು ಇಂದು ಬೃಹತ್ತಾಗಿ ಬೆಳೆದಿದೆ. ಬೆಂಗಳೂರು ನಗರ ನಿರ್ಮಾಣಕ್ಕೆ ನೀಡಿದ ಆದ್ಯತೆಯನ್ನು ಕೆರೆಗಳ ನಿರ್ಮಾಣಕ್ಕೂ ನೀಡಿದ್ದಾರೆ ಎಂದರು. ಕೆಂಪೇಗೌಡರ ವ್ಯಕ್ತಿತ್ವ, ಆಡಳಿತ ವ್ಯವಸ್ಥೆ ಹಾಗೂ ಅವರು ಕೈಗೊಂಡ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದ ಕನ್ನಡ ಭಾಷಾ ಶಿಕ್ಷಕ ಕೆ.ಗೋಪಾಲಕೃಷ್ಣ, ವಿಜಯನಗರದ ಸಾಮಂತನಾಗಿದ್ದ ಕೆಂಪೇಗೌಡರು ವ್ಯವಸಾಯ, ವ್ಯಾಪಾರ – ಮಾರುಕಟ್ಟೆ, ಕೆರೆ-ಕಟ್ಟೆ, ಕೃಷಿ, ಸಣ್ಣ ಕೈಗಾರಿಕೆ, ಶಿಕ್ಷಣ, ಧಾರ್ಮಿಕ ಸ್ಥಳ ಹೀಗೆ ಎಲ್ಲ ಕ್ಷೇತ್ರಕ್ಕೂ ವಿಶೇಷ ಗಮನ ಹರಿಸಿ ಅಂದಿಗೇ ಭವ್ಯ ಬುನಾದಿಯೊಂದನ್ನು ಹಾಕಿ, ಅದು ಸರಿ ದಾರಿಯಲ್ಲಿ ಅಂದುಕೊಂಡ ಪ್ರಮಾಣದಲ್ಲಿ ಯಶಸ್ಸು ಸಿಗುವ ದಾರಿಯಲ್ಲಿ ಶ್ರಮವಹಿಸಿ ತಮ್ಮ ಅಧಿಕಾರವಧಿಯುದ್ದಕ್ಕೂ ನಡೆದುಕೊಂಡರು. ಶಿಕ್ಷಕರಾದ ಎಂ.ಟಿ.ದಯಾನಂದ ಪ್ರಕಾಶ್,…

Read More

ಮಡಿಕೇರಿ ಜೂ.29 : ಸೋಮವಾರಪೇಟೆಯ ಶ್ರೀ ಗಣಪತಿ ಬಟ್ಟೆ ಅಂಗಡಿ ಮಾಲೀಕ ಕುಮಾರ್ ಅವರು ಬೇಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಟೀ ಶರ್ಟ್ ವಿತರಿಸಿದರು. ಸುಮಾರು 75 ವಿದ್ಯಾರ್ಥಿಗಳಿಗೆ ಶಾಲೆ ಮುಖ್ಯ ಉಪಾಧ್ಯಾಯ ಸಿ.ಕೆ.ಶಿವಕುಮಾರ್ ಅವರಿಗೆ ಟೀ ಶರ್ಟ್ ಹಸ್ತಾಂತರಿಸಿದರು. ಈ ಸಂದರ್ಭ ಜಿಲ್ಲಾಧ್ಯಕ್ಷರಾದ ಮಂಜುನಾಥ ಮತ್ತು ತಾಲೂಕ ಅಧ್ಯಕ್ಷ ಬಸವರಾಜ ಹಾಜರಿದ್ದು, ಕುಮಾರ್ ಅವರ ಕೊಡುಗೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿಯೂ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು. ಕುಮಾರ್ ಅವರ ತಂದೆ ಸಾಕ್ಷಿಭೂತರಾದರು.

Read More

ಕುಶಾಲನಗರ,ಜು29: ತ್ಯಾಗ ಮತ್ತು ಬಲಿದಾನದ ಸಂಕೇತವೆಂದೇ ಪ್ರಸಿದ್ಧವಾದ ಬಕ್ರೀದ್ ಹಬ್ಬವನ್ನು ಕುಶಾಲನಗರದ ಶಾಫಿ ಹಾಗೂ ಹನಫಿ ಪಂಗಡದ ಮುಸಲ್ಮಾನ ಸಹೋದರರು ಆಚರಿಸಿದರು. ಬಕ್ರೀದ್ ಮುಸಲ್ಮಾನರ ಪ್ರಮುಖ ಹಬ್ಬವಾಗಿದ್ದು, ಈ ಬಾರಿ ಬಕ್ರೀದ್ ಹಬ್ಬವನ್ನು ಶಾಫಿ ಹಾಗೂ ಹನಫಿ ಪಂಗಡದವರು ಒಂದೇ ದಿನ ಆಚರಿಸಿದರು.  ಶುಭದಿನದಂದು ಬೆಳಿಗ್ಗೆ ಮಸೀದಿಗೆ ತೆರಳಿ ಬಕ್ರೀದ್ ಹಬ್ಬದ ನಮಾಜ಼ನ್ನು ನೆರವೇರಿಸಿದರು. ನಂತರ ಬಕ್ರೀದ್ ಹಬ್ಬದ ಪ್ರಾಮುಖ್ಯತೆ ಕುರಿತು ಮಸೀದಿಯ ಧರ್ಮಗುರುಗಳಿಂದ ಬೋಧನೆ ನೀಡಲಾಯಿತು. ಕುಶಾಲನಗರದ ಹಿಲಾಲ್ ಮಸೀದಿ, ತಕ್ವಾ ಮಸೀದಿ, ಜಾಮಿಯಾ ಮಸೀದಿ ಸೇರಿದಂತೆ ದಂಡಿನಪೇಟೆ,‌ ಜನತಾ ಕಾಲೋನಿ, ಕೂಡಿಗೆ, ನಂಜರಾಯಪಟ್ಟಣದ ಮಸೀದಿಯಲ್ಲಿ ಬಕ್ರೀದ್ ಹಬ್ಬದ ವಿಶೇಷವಾದ ನಮಾಜ಼್ ಹಾಗೂ ಪ್ರಾರ್ಥನೆಯನ್ನು ನೆರವೇರಿಸಲಾಯಿತು. ಈ ಸಂದರ್ಭ ಮುಸಲ್ಮಾನ ಸಹೋದರರು ಪರಸ್ಪರ ಬಕ್ರೀದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಬಕ್ರೀದ್ ವಿಶೇಶವಾದ ದಿನವಾದ ಹಿನ್ನಲೆ ತಮ್ಮ ಕುಟುಂಬದಲ್ಲಿ ಮರಣ ಹೊಂದಿದವರ ಒಳಿತಿಗಾಗಿ ಪ್ರಾರ್ಥಿನೆ ಸಲ್ಲಿಸಲಾಯಿತು. ಹಿಲಾಲ್ ಮಸೀದಿಯ ಧರ್ಮಗುರುಗಳು ಹಾಗೂ ಮುದರ್ರಿಸ್ ಆದ ಅಬ್ದುಲ್ ನಾಸಿರ್ ಫೈಜ಼ಿರವರ‌ ನೇತೃತ್ವದಲ್ಲಿ…

Read More