ಲೇಖಕ: admin

ನಾಪೋಕ್ಲು ಜೂ.27 : ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ರಚನೆಗೆ ಚುನಾವಣೆ ನಡೆದಿದ್ದು, ಎಲ್ಲಾ ಸ್ಥಾನಗಳನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದುಕೊಂಡಿದ್ದಾರೆ. 13 ಸ್ಥಾನಗಳಿಗೆ 33 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಅಂತಿಮವಾಗಿ 26 ಮಂದಿ ಸ್ಪರ್ಧಾ ಕಣದಲ್ಲಿದ್ದರು. ಸಾಲಗಾರರ ಕ್ಷೇತ್ರದಲ್ಲಿ ಒಟ್ಟು 791 ಮತಗಳಿದ್ದು, ಅದರಲ್ಲಿ 751 ಮತಗಳು ಚಲಾವಣೆಯಾಗಿವೆ. ಸಾಲಗಾರರಲ್ಲದ ಕ್ಷೇತ್ರದಲ್ಲಿ ಒಟ್ಟು 376 ಮತಗಳಿದ್ದು, 313 ಮತಗಳು ಚಲಾವಣೆಯಾಗಿದೆ. ಸಾಮಾನ್ಯ ಸಾಲಗಾರರ ಕ್ಷೇತ್ರದಿಂದ ಒಟ್ಟು ಆರು ಮಂದಿ ನಿರ್ದೇಶಕರ ಆಯ್ಕೆ ಆಗಬೇಕಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ಹಾಲಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ 534 ಮತಗಳನ್ನು, ಜಯರಾಮ ನಿಡ್ಯಮಲೆ 402 ಮತಗಳನ್ನು, ಧನಂಜಯ ಕೋಡಿ 346 ಮತಗಳನ್ನು, ಹೊನ್ನಪ್ಪ ಅಮೆಚೂರು 453 ಮತಗಳನ್ನು ,ಸೀತಾರಾಮ ಕದಿ ಕಡ್ಕ 388 ಮತಗಳನ್ನು ಅಶೋಕ ಪೆರುಮುಂಡ 478 ಮತಗಳನ್ನು ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಸುರೇಶ್ ಪೆರುಮುಂಡ, ದಯಾನಂದ ಪೆರುಮುಂಡ, ಗೌತಮ್ ಎಂ.ಎಸ್, ಚಿದಾನಂದ ಪೀಚೆ, ಜನಾರ್ದನ…

Read More

ಮಡಿಕೇರಿ ಜೂ.27 : ಮಡಿಕೇರಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಿಯಮಬಾಹಿರವಾಗಿದೆ ಎಂದು ನಗರಸಭಾ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅರುಣ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಗೆ 11 ಸದಸ್ಯರನ್ನು ಮೊದಲು ಆಯ್ಕೆ ಮಾಡಬೇಕು. ನಂತರ ಸದಸ್ಯರುಗಳು ಅಧ್ಯಕ್ಷರನ್ನು ಆಯ್ಕೆ ಮಾಡುವ ನಿಯಮವಿದೆ. ಆದರೆ ಈ ನಿಯಮವನ್ನು ಗಾಳಿಗೆ ತೂರಿ ಪಕ್ಷ ನಿಷ್ಠನಾದ ನನಗೆ ಅನ್ಯಾಯ ಮಾಡಿ ಅಧ್ಯಕ್ಷರ ಆಯ್ಕೆಯನ್ನು ಬಹಿರಂಗ ಪಡಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಪಕ್ಷದ ನಗರಾಧ್ಯಕ್ಷ ಮನು ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಕುರಿತು ಚರ್ಚಿಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆ ಹೆಚ್ಚು ಇದ್ದ ಕಾರಣ ಕೆಲವು ಆಕಾಂಕ್ಷಿಗಳು ಗುಪ್ತ ಮತದಾನದ ಮೂಲಕ ಆಯ್ಕೆ ಮಾಡುವಂತೆ ಸಲಹೆ ನೀಡಿದರು. ಆದರೆ ಇದಕ್ಕೆ ಪಕ್ಷದ ಜಿಲ್ಲಾ ವಕ್ತಾರ ಹಾಗೂ…

Read More

ಮಡಿಕೇರಿ ಜೂ.27 : ಕೂರ್ಗ್ ಬ್ಲಡ್ ಫೌಂಡೇಶನ್ ಕರ್ನಾಟಕ (ರಿ) ಸಂಸ್ಥೆಯ ಎರಡನೇ  ವಾರ್ಷಿಕೋತ್ಸವದ ಪ್ರಯುಕ್ತ ಕೊಡಗು ವೈದ್ಯಕೀಯ ವಿಜ್ಞಾನಗಳ  ಸಂಸ್ಥೆ , ಕೊಡಗು ರಕ್ತ ನಿಧಿ ಘಟಕ ಹಾಗೂ ನೇತ್ರ ಆಪ್ಟಿಕಲ್ಸ್ ಮಡಿಕೇರಿ ಇವರ ಸಹಯೋಗದೊಂದಿಗೆ *ಬೃಹತ್ ರಕ್ತದಾನ ಶಿಬಿರ* ಮತ್ತು *ಉಚಿತ ನೇತ್ರ ತಪಾಸಣಾ ಶಿಬಿರ*ಜೂ.28 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ರವರೆಗೆ ಮಡಿಕೇರಿಯ ಹೋಟೆಲ್ ರಾಜ್ ದರ್ಶನ್ ನಲ್ಲಿ ನಡೆಯಲಿದೆ. ಹೆಸರನ್ನು ನೋದಾಯಿಸಿಕೊಳ್ಳಲು ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : +91 7760830077 +91 97318 98768 +91 82777 79722 +91 95359 04296 +91 99002 01001

Read More

ಮಡಿಕೇರಿ ಜೂ.27 : ಪೊನ್ನಂಪೇಟೆ ತಾಲ್ಲೂಕು ಬೆಸಗೂರು ಗ್ರಾಮದಲ್ಲಿ ಹುಲಿ ದಾಳಿಯಿಂದ ಹಸುವೊಂದು ಬಲಿಯಾದ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಬಲ್ಲಿಮಾಡ ಸಂಪತ್ ಅವರಿಗೆ ಸೇರಿದ ಹಸು ಇದಾಗಿದ್ದು, ಕಳೇಬರ ಕಾಫಿ ತೋಟದಲ್ಲಿ ಪತ್ತೆಯಾಗಿದೆ. ನಾಪತ್ತೆಯಾಗಿದ್ದ ಹಸುವನ್ನು ಹುಡುಕುತ್ತಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಪೊನ್ನಂಪೇಟೆ ವಿಭಾಗದ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮದಲ್ಲಿ ಆತಂಕ ಮೂಡಿಸಿರುವ ಹುಲಿಯನ್ನು ತಕ್ಷಣ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Read More

ಮಡಿಕೇರಿ ಜೂ.27 :   ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿಯಲ್ಲಿ ಉಸ್ತುವಾರಿ ಸಚಿವ  ಬೋಸರಾಜ್  ಶ್ರೀ ಕಾವೇರಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ  ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ , ಜಿಲ್ಲಾಧಿಕಾರಿ ವೆಂಕಟ ರಾಜ, ಪೊಲೀಸ್ ವರಿಷ್ಠಾಧಿಕಾರಿ ರಾಮರಾಜ್, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆಕಾಶ್, ಕಾಂಗ್ರೆಸ್ ಪ್ರಮುಖರಾದ ಹೆಚ್.ಎಸ್. ಚಂದ್ರಮೌಳಿ, ಜಿ.ರಾಜೇಂದ್ರ ,ಬಿ.ಎಸ್ ತಮ್ಮಯ್ಯ, ತೆನ್ನಿರಾ ಮೈನಾ, ಸೇರಿದಂತೆ ಅನೇಕ ಪ್ರಮುಖರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.

Read More

ಮಡಿಕೇರಿ ಜೂ.26 : ಶ್ರೀ ಶಕ್ತಿ ಅಶೋಸಿಯೆಷನ್, ಶಕ್ತಿ ಧಾಮ ಹಾಸ್ಪಿಟಲ್ ಹಾಗೂ ಸಮಾಜ ಸೇವಾ ವಿಭಾಗ ಜ್ಞಾನ ಕಾವೇರಿ ಚಿಕ್ಕ ಅಳುವಾರ ಕೊಡಗು ವಿಶ್ವವಿದ್ಯಾಲಯ ಇವರ ಸಹಯೋಗದೊಂದಿಗೆ “ಅಂತರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ದಿನಾಚರಣೆ’’ ಕಾರ್ಯಕ್ರಮವು ಜೂನ್ 27 ರಂದು ಬೆಳಗ್ಗೆ 10.30 ಗಂಟೆಗೆ ಶಕ್ತಿ ಧಾಮ ಹಾಸ್ಪಿಟಲ್ ಕುಶಾಲನಗರದಲ್ಲಿ ನಡೆಯಲಿದೆ. ಶಕ್ತಿಧಾಮ ಐಆರ್‍ಸಿಎ ಆರೋಗ್ಯ ಆಧಿಕಾರಿ ಡಾ.ಭರತ್, ಸೋಮವಾರಪೇಟೆ ಪೊಲೀಸ್ ಉಪ ಅಧೀಕ್ಷಕರಾದ ಆರ್.ವಿ ಗಂಗಾಧರಪ್ಪ, ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲ ಕೊಡಗು ವಿಶ್ವವಿದ್ಯಾಲಯ ಜ್ಞಾನ ಕಾವೇರಿ ಚಿಕ್ಕಳುವಾರ ಸಮಾಜ ಸೇವಾ ವಿಭಾಗದ ಅಧ್ಯಾಪಕರಾದ ಕೆ.ಹರಿಣಾಕ್ಷಿ, ಕುಶಾಲನಗರದ ಪ್ರಜಾಪೀಠ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಬ್ರಹ್ಮಕುಮಾರಿ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Read More

ಮಡಿಕೇರಿ ಜೂ.26 : ಯುವ ಜನಾಂಗ ಮಾದಕ ವಸ್ತು ಸೇವನೆಯಂತಹ ದುಶ್ಚಟಗಳಿಗೆ ಬಲಿಯಾಗಿ, ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳದೆ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬದುಕಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಆಶಯ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಘಟಕ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ `ಅಂತರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಕಾನೂನು ಬಾಹಿರ ಸಾಗಾಟ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸ್ನೇಹಿತರ ಒತ್ತಾಯ, ಗೆಳೆಯರ ಗುಂಪಿನಲ್ಲಿ ಒಂದಾಗಬೇಕು ಎಂಬ ಭಾವನೆ, ಮನೆಯ ವಾತಾವರಣ, ಹೀಗೆ ಅನೇಕ ಕಾರಣಗಳಿಗಾಗಿ ಯುವ ಜನತೆ ಮಾದಕ ವಸ್ತುಗಳ ದಾಸರಾಗುತ್ತಾರೆ ಎಂದು ಹೇಳಿದರು. ವಿದ್ಯಾರ್ಥಿಗಳ ಮಾದಕ ವಸ್ತುಗಳಿಂದ ದೂರವಿರಬೇಕು. ನಾಳೆಯ ಬಗ್ಗೆ ಚಿಂತಿಸುವಂತಾಗಬೇಕು.…

Read More

ವಿರಾಜಪೇಟೆ ಜೂ.26 : ಕಾರ್ಮಿಕರು ಸಂಘಟಿತರಾಗಿ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಬೇಕು ಎಂದು ಜಿಲ್ಲಾ ಸಿಐಟಿಯು ಸಂಘಟನೆಯ ಮಾಜಿ ಅಧ್ಯಕ್ಷ ಡಾ.ದುರ್ಗಾಪ್ರಸಾದ್ ಹೇಳಿದರು. ಸೆಂಟರ್ ಆಫ್ ಇಂಡಿಯನ್ ಟ್ರೆಡ್ ಯೂನಿಯನ್ ‘ಸಿಐಟಿಯು ಸಂಘಟನೆಯ 53ನೇ ಸಂಸ್ಥಾಪನಾ ದಿನಾಚರಣೆ’ ಅಂಗವಾಗಿ ಜಿಲ್ಲಾ ಸಂಘಟನೆ ವತಿಯಿಂದ ವಿರಾಜಪೇಟೆ ಪುರಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. 1970ರಲ್ಲಿ ಸಿಐಟಿಯು ಸಂಘಟನೆ ಸ್ಥಾಪನೆಗೊಂಡು ನಂತರ ಬ್ರಿಟಿಷರ ಅವಧಿಯಲ್ಲಿ ಕಾರ್ಮಿಕ ಸಂಘಟನೆ ಭಾರೀ ಚಳುವಳಿ ನಡೆದಿತ್ತು ಎಂದು ಸಂಘಟನೆ ನಡೆದುಬಂದ ದಾರಿ ಬಗ್ಗೆ ವಿವರಿಸಿದ ದುರ್ಗಾಪ್ರಸಾದ್, ಕಾರ್ಮಿಕರು ಒಂದು ದಿನದ ಬದುಕಿಗಾಗಿ ಹೋರಾಟ ನಡೆಸದೆ ಜೀವನದಲ್ಲಿ ನೆಮ್ಮದಿಯ ಬದುಕಿಗಾಗಿ ಹೊರಾಟ ನಡೆಸುವಂತಾಗಬೇಕು. ಬಂಡವಾಳ ಶಾಹಿಗಳ ಒಡೆತನ ಆಳ್ವಿಕೆ ಇಲ್ಲದೆ ಕಾರ್ಮಿಕರಿಗೆ ಕೈಗೆಟುಕುವಂತ ಆಡಳಿತದ ಅಗತ್ಯವಿದೆ ಎಂದರು. ಸಿಐಟಿಯು ಸಂಘಟನೆಯ ಜಿಲ್ಲಾ ಅಧ್ಯಕ್ಷ ಪಿ.ಆರ್.ಭರತ್ ಮಾತನಾಡಿ, ಕಟ್ಟಡ ಕಾರ್ಮಿಕರು, ಬಿಸಿಯೂಟ ನೌಕರರ ಸಂಘ, ಗ್ರಾ.ಪಂ ನೌಕರರ ಸಂಘ, ಅಂಗನವಾಡಿ ನೌಕರರು ಸೇರಿದಂತೆ ರಾಜ್ಯದಲ್ಲಿ…

Read More

ವಿರಾಜಪೇಟೆ ಜೂ.26 : ಬಿಳುಗುಂದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕಿ ಎಸ್.ಜಿ.ಲಿನ್ನಿ ಪ್ರಾಣಾಯಾಮ ಯೋಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪೂರ್ವಭಾವಿ ತರಬೇತಿ ನೀಡಿದರು. ಮುಖ್ಯ ಶಿಕ್ಷಕಿ ಅರುಣ ಆನ್ಸಿ ಡಿಸೋಜ ಯೋಗದ ಮಹತ್ವದ ಬಗ್ಗೆ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರತಿದಿನ ಯೋಗಾಭ್ಯಾಸ ಮಾಡಬೇಕು. ಮನೆಯ ಸದಸ್ಯರಿಗೂ ಕಲಿಸಬೇಕು. ಆರೋಗ್ಯಕ್ಕೆ ಯೋಗ ಉತ್ತಮ ಸಾಧನ. ಇಡೀ ವಿಶ್ವವೇ ಇಂದು ಯೋಗದ ಬಗ್ಗೆ ತಿಳಿದುಕೊಂಡು ಯೋಗದ ಅಭ್ಯಾಸ ಮಾಡುತ್ತಿದೆ. ಇತ್ಯಾದಿ ಅಂಶಗಳ ಬಗ್ಗೆ ತಿಳಿಸಿದರು. ವಸುದೈವ ಕುಟುಂಬಕಂ ಎಂಬ ಧ್ಯೇಯ ವಾಕ್ಯದೊಂದಿಗೆ ಯೋಗವನ್ನು ಮಾಡಲಾಯಿತು. ಶಿಕ್ಷಕರಾದ ಲೀಲಾವತಿ, ಪವಿತ್ರ, ಕಿರಣ್ ಕುಮಾರ್, ಅಲ್ಲಾಬಕ್ಷ ಬಡೇಘರ್, ಹಾಗೂ ಸಾವಿತ್ರಿ ಸೇರಿದಂತೆ ಎಲ್ಲಾ ಶಿಕ್ಷಕರೂ ಯೋಗ ಮಾಡಿದರು.

Read More

ಮಡಿಕೇರಿ ಜೂ.26 : ಮಣಿಪುರ ರಾಜ್ಯದಲ್ಲಿ ಕ್ರೈಸ್ತ ಸಮುದಾಯದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕ್ರಿಶ್ಚಿಯನ್ ಘಟಕ ಜೂ.28 ರಂದು ಮಡಿಕೇರಿಯಲ್ಲಿ ನಡೆಸಲುದ್ದೇಶಿಸಿರುವ ಪ್ರತಿಭಟನೆಗೆ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಬೆಂಬಲ ಸೂಚಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್, ಕಾಂಗ್ರೆಸ್ ನ ಅಲ್ಪಸಂಖ್ಯಾತರ ವಿಭಾಗದ ಎಲ್ಲಾ ಘಟಕಗಳು ಪ್ರತಿಭಟನೆಗೆ ಬೆಂಬಲ ನೀಡಲಿವೆ ಎಂದು ತಿಳಿಸಿದ್ದಾರೆ. ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಮಣಿಪುರದಲ್ಲಿ ಚರ್ಚ್‍ಗಳ ಮೇಲೆ ದಾಳಿಯಾಗುತ್ತಿದೆ ಮತ್ತು ಕ್ರೈಸ್ತರನ್ನು ಹಿಂಸಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕ್ರೈಸ್ತರು ಸೇರಿದಂತೆ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಸೂಕ್ತ ರಕ್ಷಣೆ ನೀಡಬೇಕೆಂದು ಉಸ್ಮಾನ್ ಒತ್ತಾಯಿಸಿದ್ದಾರೆ.

Read More