ಮಡಿಕೇರಿ ಜೂ.24 : ಕಳೆದ ಒಂದು ವರ್ಷ ಎಂಟು ತಿಂಗಳ ಕಾಲ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ನಿರ್ಗಮಿತ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರಿಗೆ ಜಿಲ್ಲಾಡಳಿತ ವತಿಯಿಂದ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ, ಬೀಳ್ಕೊಡಲಾಯಿತು. ನಗರದಲ್ಲಿ ನಡೆದ ಸರಳ ಬೀಳ್ಕೊಡುಗೆ ಸಮಾರಂಭದಲ್ಲಿ ಡಾ.ಬಿ.ಸಿ.ಸತೀಶ ಅವರಿಗೆ ಫಲಪುಷ್ಪ, ತಾಂಬೂಲ, ಶಾಲೂ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ಗಮಿತ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕೊಡಗು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವುದು ಒಂದು ಅವಕಾಶ, ಆ ನಿಟ್ಟಿನಲ್ಲಿ ಎಲ್ಲರ ಸಹಕಾರದಿಂದ ಹೆಚ್ಚಿನ ಕೆಲಸ ನಿರ್ವಹಿಸಲು ಸಾಧ್ಯವಾಯಿತು ಎಂದು ತಿಳಿಸಿದರು. ಕೊಡಗು ವಿಶೇಷ ಜಿಲ್ಲೆಯಾಗಿದ್ದು, ಇಲ್ಲಿ ಕೆಲಸ ನಿರ್ವಹಿಸುವುದು ವಿಶೇಷ ಅನುಭವ ಪಡೆದಂತೆ ಎಂದರು. ವಿಧಾನಸಭಾ ಮತ್ತು ವಿಧಾನ ಪರಿಷತ್ ಚುನಾವಣೆ ಜೊತೆಗೆ ಹಲವು ಅಭಿವೃದ್ಧಿ ಕಾರ್ಯದಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಂಡವಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಲು ಪ್ರಯತ್ನಿಸಿದ್ದೇನೆ. ಎಲ್ಲರ ಸಹಕಾರದಿಂದ ಸಾರ್ವಜನಿಕ ಕರ್ತವ್ಯವನ್ನು ನಿರ್ವಹಿಸಲು ಸಾಧ್ಯ ಎಂದು…
ಲೇಖಕ: admin
ಮಡಿಕೇರಿ ಜೂ.26 : ಕುಂಜಿಲದ ಕೆ ಪಿ ಬಾಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿ ಆಂಗ್ಲ ಮಾಧ್ಯಮ ಶಾಲೆಯನ್ನು ಉದ್ಘಾಟಿಸಲಾಯಿತು. ಸಮಾರಂಭದಲ್ಲಿ ಕುಂಜಿಲ-ಕಕ್ಕಬೆ ಗ್ರಾ.ಪಂ ಅಧ್ಯಕ್ಷ ಸಂಪನ್ ಅಯ್ಯಪ್ಪ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಶೋಕ್ , ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮ್ಮದ್ ಹಾಜಿ ಹಾಗೂ ಶಾಲೆಯ ಎಸ್. ಡಿ ಎಂ. ಸಿ ಅಧ್ಯಕ್ಷರು ಹಾಗೂ ಗ್ರಾ.ಪಂ ಸದಸ್ಯರಾದ ಸಫಿ, ಗ್ರಾ.ಪಂ ಉಪಾಧ್ಯಕ್ಷ ರಸೀನಾ, ಗ್ರಾ.ಪಂ ಸದಸ್ಯ ಬಷೀರ್ , ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅಫೀಲ್ , ಶಾಲಾ ಮುಖ್ಯೋಪಾಧ್ಯಾಯರಾದ ಪಿ. ಕೆ ಗಂಗಮ್ಮ, ಶಿಕ್ಷಕರು, ಪೋಷಕರು, ಶಾಲಾ ಎಸ್. ಡಿ ಎಂ ಸಿ ಸದಸ್ಯರು ಹಾಜರಿದ್ದರು.
ಸುಂಟಿಕೊಪ್ಪ,ಜೂ.26 : 7ನೇ ಹೊಸಕೋಟೆ ಶ್ರೀ ಮಹಾಗಣಪತಿ ದೇವಾಲಯದ ವಾರ್ಷಿಕೋತ್ಸವವು ಜೂ.27 ರಂದು ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಜೂ.27 ರಂದು ಬೆಳಿಗ್ಗೆ 8 ಗಂಟೆಗೆ ಸ್ವಸ್ತಿ ಶ್ರೀ ಪುಣ್ಯಾಹವಾಚನ, 48 ತೆಂಗಿನಕಾಯಿ ಗಣಹೋಮ, 28 ಕಲಶ ಪೂಜೆ, ಶ್ರೀ ಗಣಪತಿಗೆ ಕಲಷಾಭಿಷೇಕ ದುರ್ಗಾಹೋಮ, ಶ್ರೀ ಕೃಷ್ಣ ಮಂತ್ರ ಹೋಮ, ಮಹಾಪೂಜೆ ಹಾಗೂ ತೀರ್ಥ ಪ್ರಸಾದ ವಿನಿಯೋಗ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 6.3 ರಿಂದ ದುರ್ಗಾಪೂಜೆ, ರಂಗಪೂಜೆ, ಮಹಾಪೂಜೆಯೊಂದಿಗೆ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ವಿನಿಯೋಗೊಳಿಸಲಾಗುವುದು ಎಂದು ದೇವಾಲಯದ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
*ವ್ಯಾಂಡಮ್ ಎಂಟರ್ ಪ್ರೈಸಸ್ ಲಕ್ಕಿ ಡ್ರಾ ಫಲಿತಾಂಶ*
ಮಡಿಕೇರಿ ಜೂ.25 : ಮುಂಗಾರು ಕ್ಷೀಣವಾಗಿ ಜೀವನದಿ ಕಾವೇರಿಯ ಒಡಲು ಬತ್ತಿದ್ದು, ಜಿಲ್ಲೆಯ ಏಕೈಕ ಪ್ರಮುಖ ಜಲಾಶಯ ಬರಡಾಗಿದೆ. ಡೆಡ್ ಸ್ಟೋರೆಜ್ ನ ಆತಂಕಕಾರಿ ಸ್ಥಿತಿ ಹಾರಂಗಿಯಲ್ಲಿದ್ದು, ಈ ಭಾಗದ ಕೃಷಿಕ ವರ್ಗ ಕಂಗಾಲಾಗಿದೆ. ಲಕ್ಷಾಂತರ ಕೃಷಿಕರಿಗೆ ನೀರುಣಿಸುವ ಕೃಷ್ಣರಾಜ ಸಾಗರ ಜಲಾಶಯ ಭರ್ತಿಯಾಗಿ, ನಾಡಿನಲ್ಲಿ ಸುಭಿಕ್ಷೆ ಮೂಡಬೇಕಾದರೆ ಕಾವೇರಿಯ ಒಡಲು ತುಂಬಿ, ಹಾರಂಗಿ ಭರ್ತಿಯಾಗುವುದು ಅನಿವಾರ್ಯ. ಮುಂಗಾರು ಮಳೆೆಯ ನಿರೀಕ್ಷೆಯಲ್ಲಿಯೇ ಜೂನ್ ತಿಂಗಳ ನಾಲ್ಕನೇ ವಾರ ಸರಿದು ಹೋಗುತ್ತಿದ್ದು, ಕಳೆದ ಒಂದೆರಡು ದಿನಗಳಿಂದ ಜಿಲ್ಲೆಯಲ್ಲಿ ಹನಿ ಮಳೆಯಷ್ಟೇ ಆಗುತ್ತಿದೆ. ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಹಾಗೂ ಮಡಿಕೇರಿ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ಸುರಿಯುವ ಮಳೆ ಕಾವೇರಿಯ ಒಡಲು ತುಂಬುತ್ತದೆ. ವಿರಾಜಪೇಟೆ ವಿಭಾಗದ ಮಳೆ ಲಕ್ಷ್ಮಣ ತೀರ್ಥವನ್ನು ಸೇರಿ ಕಾವೇರಿಯನ್ನು ಸಂಧಿಸುತ್ತದೆ. ಇತ್ತ ಸೋಮವಾರಪೇಟೆಯ ಮಾದಾಪುರ ವಿಭಾಗದಲ್ಲಿ ಸುರಿಯುವ ಮಳೆ ಹಾರಂಗಿ ಹೊಳೆಯನ್ನು ಉಕ್ಕಿಸಿ, ಹಾರಂಗಿ ಜಲಾಶಯವನ್ನು ಭರ್ತಿ ಮಾಡುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ ಹರಡಿದಂತೆ ಅಲ್ಲಲ್ಲಿ ಕೊಂಚ ಮಳೆಯಾಗುತ್ತಿದೆ. ಕೆಆರ್‌ಎಸ್ ಭರ್ತಿಯಾಗಬೇಕಾದರೆ ಕೊಡಗಿನಲ್ಲಿ…
ಮಡಿಕೇರಿ ಜೂ.25 : ಚಾಲಕನ ನಿಯಂತ್ರಣ ಕಳೆದುಕೊಂಡ ಇನ್ನೋವಾ ಕಾರೊಂದು ಮನೆಯ ಅಂಗಳಕ್ಕೆ ಉರುಳಿ ಬಿದ್ದ ಘಟನೆ ಮಡಿಕೇರಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಸಿಂಕೋನ ಬಳಿ ನಡೆದಿದೆ. ಮಂಗಳೂರು ಮೂಲದ 8 ಮಂದಿ ಯುವಕರು ಮಡಿಕೇರಿ ಮಾರ್ಗವಾಗಿ ಕುಶಾಲನಗರ ಕಡೆಗೆ ತೆರಳುತ್ತಿದ್ದ ಸಂದರ್ಭ ಸಿಂಕೋನ ಬಳಿ ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿ ಮನೆಯ ಮುಂದಿನ ಅಂಗಳಕ್ಕೆ ಉರುಳಿ ಬಿದ್ದಿದೆ. ತುಂತುರು ಮಳೆ ಮತ್ತು ದಟ್ಟ ಮಂಜು ಮುಸುಕಿದ ವಾತಾವರಣ ಇದ್ದ ಕಾರಣ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿಗೆ ಹಾನಿಯಾಗಿದ್ದು, ಮನೆ ಮಂದಿಗೆ ಅದೃಷ್ಟವಶಾತ್ ಏನೂ ಆಗಿಲ್ಲ.
ಮಡಿಕೇರಿ ಜೂ.25 : ವಿರಾಜಪೇಟೆ ತಾಲ್ಲೂಕಿನ ಅಮ್ಮತಿ ಸಮೀಪ ಒಂಟಿಯಂಗಡಿ ಗ್ರಾಮದ ಸುತ್ತಮುತ್ತ ಕೃಷಿ ಫಸಲು ನಾಶ ಮಾಡಿ ಕಾರ್ಮಿಕರು ಹಾಗೂ ಮಾಲೀಕರಲ್ಲಿ ಆತಂಕ ಸೃಷ್ಟಿಸಿದ್ದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಒಂಟಿಯಂಗಡಿಯ ಕಾಫಿ ತೋಟವೊಂದರಲ್ಲಿ ಏಳು ಕಾಡಾನೆಗಳೊಂದಿಗೆ ಕಾಣಿಸಿಕೊಂಡ 32 ವರ್ಷದ ಪುಂಡಾನೆಯನ್ನು ಸಾಕಾನೆಗಳ ಸಹಕಾರದಿಂದ ಅರೆವಳಿಕೆ ನೀಡಿ ಸೆರೆ ಹಿಡಿಯಲಾಯಿತು. ರಸ್ತೆಗೆ ಕರೆತಂದ ನಂತರ ಲಾರಿಯನ್ನೇರಲು ನಿರಾಕರಿಸಿದ ಕಾಡಾನೆಯನ್ನು ಜೆಸಿಬಿ ಕ್ರೇನ್ ಬಳಸಿ ಲಾರಿಗೆ ಹಾಕಲಾಯಿತು. ನಂತರ ರೇಡಿಯೋ ಕಾಲರ್ ಅಳವಡಿಸಿ ಬಂಡೀಪುರಕ್ಕೆ ಸ್ಥಳಾಂತರಿಸಲಾಯಿತು. ಅಮ್ಮತ್ತಿ, ಪುಲಿಯೇರಿ, ಇಂಜಲಗೆರೆ, ಒಂಟಿಯಂಗಡಿ, ಕಣ್ಣಂಗಾಲ ಮತ್ತಿತರ ಗ್ರಾಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಕಾಡಾನೆ ಮೂವರ ಮೇಲೆ ದಾಳಿ ಮಾಡಿತ್ತು. ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ತಕ್ಷಣ ಉಪಟಳ ನೀಡುತ್ತಿರುವ ಕಾಡಾನೆಯನ್ನು ಸೆರೆ ಹಿಡಿಯುವಂತೆ ಸೂಚಿಸಿದ ಹಿನ್ನೆಲೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತು. ಮತ್ತಿಗೋಡು ಸಾಕಾನೆ ಶಿಬಿರದ ನಾಲ್ಕು ಸಾಕಾನೆಗಳು, ಮಾವುತರು, ಕಾವಾಡಿಗರ ಸಹಕಾರ ಪಡೆದು ನಡೆಸಿದ ಕಾರ್ಯಾಚರಣೆಯಲ್ಲಿ ಡಿಎಫ್‌ಓ ಶರಣಬಸಪ್ಪ,…
ಮಡಿಕೇರಿ ಜೂ.25 : ಕೊಡಗು ಜಿಲ್ಲೆಯ ಶ್ರೀಮಂತ ಸಂಸ್ಕೃತಿಯ ಮೇಲೆ ಅತ್ಯಾಚಾರ ನಡೆಯುತ್ತಿದ್ದು, ಜಿಲ್ಲೆಯಲ್ಲಿ ಸಾಮಾಜಿಕ ಅಭದ್ರತೆ ಕಾಡುತ್ತಿದೆ. ಯಾವುದೇ ಕಾರಣಕ್ಕೂ ಕೊಡವರು ತಮ್ಮ ಜಾಗವನ್ನು ಹೊರಗಿನವರಿಗೆ ಮಾರಾಟ ಮಾಡಬಾರದು ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಕರೆ ನೀಡಿದರು. ಕೊಡವ ರೈಡರ್ಸ್ ಕ್ಲಬ್ ಮುಂದಾಳತ್ವದಲ್ಲಿ ಬಾಂಡಿಂಗ್ ಬ್ಲೂಮ್ಸ್ ಕೊಡಗು ಸಂಸ್ಥೆ ಹಾಗೂ ಗೋಣಿಕೊಪ್ಪ ಕಾವೇರಿ ಕಾಲೇಜು ಸಹಯೋಗದಲ್ಲಿ ಕೋಣಂಗೇರಿ ತುಪ್ಪನಾಣಿ ಭಗವತಿ ದೇವಸ್ಥಾನದ ಅವರಣದಲ್ಲಿ ನಡೆದ ಗಿಡ ನೆಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಜಿಲ್ಲೆಯ ಪರಿಸ್ಥಿತಿ ಹಿಂದಿನಂತಿಲ್ಲ ಎಂದರು. ಜಿಲ್ಲೆಯಲ್ಲಿ ಸಾಮಾಜಿಕ ಅಭದ್ರತೆ ಕಾಡುವುದರ ಜೊತೆಗೆ ಪ್ರಾಕೃತಿಕ ಅಸಮತೋಲನ ಎದುರಾಗಿದೆ, ಒಂದೆಡೆ ಗಿಡ ನೆಡುವ ಕೆಲಸವಾಗುತ್ತಿದ್ದರೆ ಮತ್ತೊಂದೆಡೆ ಕಾಡಿನಲ್ಲಿ ಮಾತ್ರವಲ್ಲ ನಾಡಿನಲ್ಲಿ ಕೂಡ ಮರಗಳ ಹನನವಾಗುತ್ತಿದೆ. ಸ್ಥಳೀಯರಿಂದ ಅರಣ್ಯವನ್ನು ಕಾಪಾಡುವ ಕೆಲಸವಾದರೆ, ಹೊರಗಿನ ಮರಗಳ್ಳರಿಂದ ಅರಣ್ಯ ನಾಶವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮತ್ತೋರ್ವ…
ಮಡಿಕೇರಿ ಜೂ.25 : ಇತ್ತೀಚೆಗೆ ಶಾರ್ಜಾದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೊಡಗು ಜಿಲ್ಲೆಯ ಗುಂಡಿಕೆರೆ ಗ್ರಾಮದ ಪ್ರವೀಣ್ ಕೆ.ಪಿ ಅವರ ಮೃತದೇಹವನ್ನು ರಫೀಕಲಿ ಕುಂಡಂಡ ಕುಂಜಿಲ ಅವರ ಸಹಕಾರದಿಂದ ಸ್ವಗ್ರಾಮಕ್ಕೆ ತರಲಾಗಿದೆ. ಶಾರ್ಜಾದಲ್ಲಿ ಉದ್ಯೋಗದಲ್ಲಿದ್ದ ಪ್ರವೀಣ್ ತನ್ನ ಸ್ನೇಹಿತನೊಂದಿಗೆ ರಸ್ತೆ ದಾಟುವಾಗ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು. ಕೊಡಗಿನ ಗುಂಡಿಕೆರೆ ಗ್ರಾಮದ ಕನ್ನಡಿಗ ಪ್ರವೀಣ್ ಅವರ ಮೃತ ದೇಹವನ್ನು ಅವರು ಕೆಲಸ ನಿರ್ವಹಿಸುವ ಕಚೇರಿಯ ಮುಖ್ಯಸ್ಥ ಅಸ್ಸಾಂ ಮೂಲದ ಬಾಬರ್, ದುಬೈ ಕನ್ನಡ ಸಂಘ ಮತ್ತು ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದ ಸಹಕಾರದೊಂದಿಗೆ ಹಲವು ದಿನಗಳ ನಂತರ ತಾಯಿನಾಡಿಗೆ ತರಲಾಯಿತು, ಗುಂಡಿಕೆರೆ ಗ್ರಾಮದ ಸಾಮಾಜಿಕ ಕಾರ್ಯಕರ್ತ ರಫೀಕ್ ಅವರು ದುಬೈಯಲ್ಲಿರುವ ಬಾಬರ್ ಹಾಗೂ ರಫೀಕಲಿ ಅವರಿಗೆ ಪ್ರವೀಣ್ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿ ಸಹಾಯ ಕೋರಿದ್ದರು. ಮೃತ ದೇಹವನ್ನು ಪಡೆಯಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡ ರಫೀಕ್ ಗುಂಡಿಕೆರೆ, ವಿಮಾನ ನಿಲ್ದಾಣಕ್ಕೆ ಹೋಗಿ ಮೃತ ದೇಹವನ್ನು…
ಮಡಿಕೇರಿ ಜೂ.25 : ಇನ್ನೊಬ್ಬರ ಒತ್ತಡಕ್ಕೆ ಮಣಿಯದೆ ತಮ್ಮ ಮನಸ್ಸಿಗೆ ಹಿಡಿಸುವ ವೃತ್ತಿಯ ಕಡೆಗೆ ಆಸಕ್ತಿ ಬೆಳೆಸಿಕೊಂಡು ಮಕ್ಕಳು ಈ ನಿಟ್ಟಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಬೇಕು ಎಂದು ಸಮಾಜ ಸೇವಕ ಸಂಕೇತ್ ಪೂವಯ್ಯ ಕಿವಿಮಾತು ಹೇಳಿದರು. ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಭಾನುವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಪೋಷಕರು, ಗುರುಗಳ ಮಾರ್ಗದರ್ಶನದಲ್ಲಿ ಮಕ್ಕಳು ಇನ್ನೂ ಚೆನ್ನಾಗಿ ಓದಬೇಕು. ಮಕ್ಕಳು ಒಳ್ಳೆಯ ಸ್ನೇಹ ಬಳಗ ಬೆಳೆಸಿಕೊಳ್ಳಬೇಕು. ಗೆಳೆಯರ ಮಧ್ಯೆ ಸಾತ್ವಿಕ ಚರ್ಚೆ ನಡೆಯಬೇಕು. ಪ್ರಕೃತಿ ಮೇಲೆ ಮಕ್ಕಳು ಪ್ರೀತಿ ಬೆಳೆಸಿಕೊಳ್ಳಬೇಕು. ತಂತ್ರಜ್ಞಾನದ ಪ್ರಯೋಜನ ಪಡೆದುಕೊಳ್ಳಬೇಕು. ಹೆಚ್ಚು ಹೆಚ್ಚು ಆಟವಾಡಬೇಕು. ಗ್ರಂಥಾಲಯದ ಬಳಕೆ ಆಗಬೇಕು. ಪ್ರಕೃತಿ ಉಳಿಸುವ ಸಂಬಂಧ ವಾರಕ್ಕೆ ಕನಿಷ್ಠ 2 ಗಂಟೆ ಕಲಿಯುವಂತಾಗಬೇಕು ಎಂದರು. ಮಕ್ಕಳನ್ನು ಪ್ರಕೃತಿ ಮಡಿಲಿಗೆ ಕರೆದುಕೊಂಡು ಹೋಗಿ ಕಲಿಸುವ ವ್ಯವಸ್ಥೆ ಆಗಬೇಕು. ಮಕ್ಕಳಿಗೆ ಕಾಡು ತೋರಿಸುವ ಜವಾಬ್ದಾರಿ ಸರ್ಕಾರದ್ದು ಎಂದ ಅವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಂದ ದೇಶ…






