ಲೇಖಕ: admin

ಮಡಿಕೇರಿ, ಆ. 23: ವೀರ ಲೋಕ ಪುಸ್ತಕ ಪ್ರಕಾಶನ ಸಂಸ್ಥೆಯು ರಾಜ್ಯಾಂದ್ಯಂತ ಆಯೋಜಿಸಿರುವ ಕಥಾ ಕಮ್ಮಟ ಯೋಜನೆಯಂತೆ ಕೊಡಗಿನಲ್ಲೂ ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾ ಘಟಕವು ಕೈ ಜೋಡಿಸಿ ಅಕ್ಟೋಬರ್ 7-8 ರಂದು ಮಡಿಕೇರಿಯಲ್ಲಿ ಕಥಾ ಕಮ್ಮಟವನ್ನು ಉಚಿತ ಕಥಾ ಶಿಬಿರವನ್ನು ಉಚಿತವಾಗಿ ಆಯೋಜಿಸಲಾಗಿದೆ. ಹಿರಿಯ ಸಾಹಿತಿ, ಬರಹಗಾರ ಪ್ರಭಾಕರ ಶಿಶಿಲ ಅವರು ಶಿಬಿರವನ್ನು ನಡೆಸಿಕೊಡಲಿದ್ದಾರೆಂದು ವೀರಲೋಕ ಜಿಲ್ಲಾ ಸಂಚಾಲಕ, ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ತಿಳಿಸಿದ್ದಾರೆ. ಶಿಬಿರದ ಸಂಚಾಲಕರಾಗಿ ಸಂಪತ್‍ಕುಮಾರ್ ಹಾಗೂ ಸಹ ಸಂಚಾಲಕರಾಗಿ ಕನ್ನಡ ಸಾಹಿತ್ಯ ಪರಿಷತ್‍ನ ಪ್ರಧಾನ ಕಾರ್ಯದರ್ಶಿ ರೇವತಿ ರಮೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ಶಿಬಿರವು ವೀರಲೋಕ ಪ್ರಕಾಶನದ ಮುಖ್ಯಸ್ಥ ಶ್ರೀನಿವಾಸ್, ಸಾಹಿತಿಗಳಾದ ಕಾ.ತ.ಚಿಕ್ಕಣ್ಣ ಮತ್ತು ಲಕ್ಷಣ ಕೊಡಸೆ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ. 35 ವರ್ಷ ವಿೂರದ ಶಿಭಿರಾರ್ಥಿಗಳು, ನಿಗಧಿತ ಅರ್ಜಿಯಲ್ಲಿ ವಿವರಗಳನ್ನು ಸೆಪ್ಟೆಂಬರ್ 30ರ ಒಳಗೆ ಬಿ.ಜಿ. ಅನಂತಶಯನ, ದೇಸಿ ಜಗಲಿ ಕಥಾ ಕಮ್ಮಟ, ‘ಚಿರಂತನ’ ಕಾನ್ವೆಂಟ್ ಜಂಕ್ಷನ್, ಮಡಿಕೇರಿ,…

Read More

ಮಡಿಕೇರಿ, ಆ. 23: ವಿಶ್ವ ಜಾನಪದ ದಿನದ ಅಂಗವಾಗಿ ಆನ್‍ಲೈನ್ ಜಾನಪದ ಕಥಾ ಸ್ಪರ್ಧೆಗೆ ಆಹ್ವಾನಿಸುತ್ತಿದ್ದೇವೆ. ಭಾಗವಹಿಸುವವರು ಸೆ.5ರ ಒಳಗೆ ಕೊಡಗಿನ ಐತಿಹಾಸಿಕ ಜಾನಪದ ಕಥೆಗಳನ್ನು, 5 ನಿಮಿಷ ವಿೂರದಂತೆ ವಿಡಿಯೋ ಮಾಡಿ ಈ ಕೆಳಗಿನ ಮೊಬೈಲ್ ಸಂಖ್ಯೆಗೆ ಕಳುಹಿಸಿಕೊಡುವಂತೆ, ಕೊಡಗು ಜಿಲ್ಲಾ ಜಾನಪದ ಪರಿಷತ್ ಘಟಕದ ಅಧ್ಯಕ್ಷ ಬಿ.ಜಿ. ಅನಂತಶಯನ ಹೇಳಿದ್ದಾರೆ. 9448048875, 9448614999 ಪ್ರಥಮ ಬಹುಮಾನಕ್ಕೆ- ರೂ. 750/- ದ್ವಿತೀಯ ಬಹುಮಾನಕ್ಕೆ- ರೂ. 500/- ಹಾಗೂ ತೃತೀಯ ಬಹುಮಾನಕ್ಕೆ- ರೂ. 250/- ನೀಡಲಾಗುವುದು ಅಂಕ ನೀಡುವಾಗ ನಿಗದಿತ ಸಮಯ, ಕಥೆ, ಪ್ರಸ್ತುತಿ ಮತ್ತು ಭಾಷಾ ಸ್ಪಷ್ಟತೆಯನ್ನು ಪರಿಗಣಿಸಲಾಗುತ್ತದೆ.

Read More

ಮಡಿಕೇರಿ, ಆ – 23 : ಆಧುನಿಕ ಜೀವನ ಪದ್ದತಿಯಿಂದಾಗಿ ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಈ ಹೊತ್ತಿನಲ್ಲಿ ಹನ್ನೆರಡನೇ ಶತಮಾನದ ವಚನ ಸಾಹಿತ್ಯ ಮೌಲ್ಯಗಳು ಮನುಷ್ಯನ ಉತ್ತಮ ಜೀವನಕ್ಕೆ ಕಿರೀಟಪ್ರಾಯ ಎಂದು ಕೊಡಗು ಜಿಲ್ಲಾ ಕಾರ್ಮಿಕ ಅಧಿಕಾರಿ ಎಸ್.ಎಲ್.ಹರ್ಷವರ್ಧನ್  ಕರೆ ನೀಡಿದರು. ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಮಡಿಕೇರಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ  ಹಮ್ಮಿಕೊಂಡಿದ್ದ ” ವಚನಗಳ ನಡಿಗೆ ಶಾಲಾ ಕಾಲೇಜುಗಳೆಡೆಗೆ ” ಚಿಂತನಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯದ ಅಮೂಲ್ಯ ಸಂಪತ್ತಾಗಿರುವ ವಚನಗಳನ್ನು ವಿದ್ಯಾರ್ಥಿಗಳು ಶಾಲಾ ಕಾಲೇಜುಗಳ ಹಂತದಲ್ಲಿಯೇ ಅರಿಯಬೇಕು. ಹಾಗೂ ವಚನಗಳ ಸಾರದಂತೆ ನಡವಳಿಕೆ ರೂಪಿಸಿಕೊಂಡಲ್ಲಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಅದು ಇಡೀ ಬದುಕಿಗೆ ವರವಾಗುತ್ತದೆ. ಹಾಗಾಗಿ 900 ವರ್ಷಗಳು ಕಳೆದರೂ ಕೂಡ ಸರ್ವ ಶ್ರೇಷ್ಠ ಹಾಗೂ ಸರ್ವವ್ಯಾಪಿಯಾದ ವಚನ ಸಾಹಿತ್ಯ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ ಎಂದು ಹರ್ಷವರ್ಧನ್ ಹೇಳಿದರು. ಅಕ್ಕಮಹಾದೇವಿ ವಚನಗಳೊಂದಿಗೆ ಅವುಗಳ ಸಾರವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ವಚನ…

Read More

ಮಡಿಕೇರಿ ಆ.23 :  ಕೋಟ್ಯಂತರ ಭಾರತೀಯರು ಕಾತುರದಿಂದ ಕಾಯುತ್ತಿರುವ ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿಯಲಿ, ಆ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ದಶಕಗಳ ಪರಿಶ್ರಮ ಕೈಗೂಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು,  ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ನಾನು ಕೂಡ ಉತ್ಸುಕನಾಗಿದ್ದೇನೆ ಎಂದರು.

Read More

ಮಡಿಕೇರಿ ಆ.23 :   ಚಂದ್ರಯಾನ -3 ಯಶಸ್ಸಿಗಾಗಿ ಮಡಿಕೇರಿಯಲ್ಲಿ ಹಿಂದು ಜಾಗರಣ ವೇದಿಕೆ ವತಿಯಿಂದ ವಿಶೇಷ ಪೂಜೆ ನಡೆಯಿತು. ಮಡಿಕೇರಿಯ ಮಂಗಳಾದೇವಿ ನಗರದ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ  ಚಂದ್ರಯಾನ-3 ರ ವಿಕ್ರಮ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಲೆಂದು  ಪ್ರಾರ್ಥಿಸಿ  ವಿಶೇಷ ಪೂಜೆ ಸಲ್ಲಿಸಲಾಯಿತು.

Read More

ಮಡಿಕೇರಿ ಆ.23 :  ಇಸ್ರೋ ಚಂದ್ರಯಾನ -3 ಯಶಸ್ಸಿಗಾಗಿ ಹಿಂದು ಜಾಗರಣ ವೇದಿಕೆ  ಸೋಮವಾರಪೇಟೆ ಘಟಕದ  ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಚಂದ್ರಯಾನ-3 ರ ವಿಕ್ರಮ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಲೆಂದು ದೇವರಲ್ಲಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

Read More

ಮಡಿಕೇರಿ ಆ.23 :  ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರಿಂದ ಚಂದ್ರಯಾನದ ಯಶಸ್ಸಿಗೆ ಮಾದಾಪುರ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

Read More

ಮಡಿಕೇರಿ ಆ.23 :  ಪ್ರೌಢಶಾಲಾ ವಿಭಾಗದ ಬಾಳೆಲೆ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಬಾಳೆಲೆ ಗ್ರಾ.ಪಂ ಅಧ್ಯಕ್ಷರಾದ  ಮುಕ್ಕಾಟಿರ ಜಾನಕಿ ಕಾವೇರಪ್ಪ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು,  ಕ್ರೀಡೆ ಜಿದ್ದಾ ಜಿದ್ದಿನ ಹೋರಾಟ ಆಗದೆ, ಆರೋಗ್ಯ ಮತ್ತು ಸ್ಪರ್ಧಾ ಭಾವನೆಯನ್ನು ವೃದ್ಧಿಸುವ ಸಾಧನವಾಗಿದೆ ಎಂದು ಅಭಿಪ್ರಾಯಪಟ್ಟರು. ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಅಧ್ಯಕ್ಷರಾದ ಅಳಮೇಂಗಡ ಬೋಸ್ ಮಂದಣ್ಣ, ಕಾರ್ಯದರ್ಶಿಗಳಾದ, ಚಿಮ್ಮಣಮಾಡ ಕೃಷ್ಣ ಗಣಪತಿ, ಸಹಕಾರ್ಯದರ್ಶಿ  ಪೋಡಮಾಡ ಮೋಹನ್, ಮುಖ್ಯ ಶಿಕ್ಷಕರಾದ ಚಂದ್ರ ಶೇಖರ್, ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಭು ಕುಮಾರ್ , ಕವಿತಾ ಕಾವೇರಮ್ಮ, ಚೌವ್ಹಾಣ್, ಅಯ್ಯಪ್ಪ ಹಾಜರಿದ್ದರು.

Read More

ಮಡಿಕೇರಿ ಆ.23 :   ಹಾರಂಗಿ ನಾಲೆಯಲ್ಲಿ ಏಡಿ ಹಿಡಿಯಲು ಹೋದ ವಿದ್ಯಾರ್ಥಿ ನಾಪತ್ತೆಯಾಗಿರುವ ಘಟನೆ ಬ್ಯಾಡಗೊಟ್ಟದಲ್ಲಿರುವ ದಿಡ್ಡಳ್ಳಿ ನಿರಾಶ್ರಿತರ ಶಿಬಿರದ ಬಳಿ ನಡೆದಿದೆ. ಸದ್ಗುರು ಅಪ್ಪಯ್ಯಸ್ವಾಮಿ ಶಾಲಾ ಬಾಲಕ ಅನಿತ್ ನೀರಿನಲ್ಲಿ ನಾಪತ್ತೆಯಾಗಿದ್ದು,   ನಾಲೆಯಲ್ಲಿ ನೀರು ಸ್ಥಗಿತಗೊಳಿಸಿ ಬಾಲಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

Read More

ನಾಪೋಕ್ಲು ಆ.23 : ನಾಪೋಕ್ಲು ಪ್ರಾಥಮಿಕ ಕೃಪಿ ಪತ್ತಿನ ಸಹಕಾರ ಸಂಘವು 2022-23ನೇ ಸಾಲಿನಲ್ಲಿ 43.55 ಲಕ್ಷ ರೂ. ನಿವ್ವಳ ಲಾಭಗಳಿಸಿ ಎ ಶ್ರೇಣಿಯಲ್ಲಿದೆ ಎಂದು ಸಂಘದ ಅಧ್ಯಕ್ಷ ಕಾಂಡoಡ ಸಿ.ಕರುಂಬಯ್ಯ ತಿಳಿಸಿದರು. ಸಂಘದ ಸಂಭಾoಗಣದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದಲ್ಲಿ ಒಟ್ಟು 2441 ಸದಸ್ಯರಿದ್ದಾರೆ. ಸಂಘದಲ್ಲಿ ಪಾಲು ಬಂಡವಾಳ 1.19 ಕೋಟಿ ರೂ.ಇದೆ. ಸದಸ್ಯರು 35 ಕೋಟಿ ರೂ.ಳನ್ನು ಠೇವಣಿ ಇರಿಸಿದ್ದು ಸದಸ್ಯರಿಗೆ 30.55 ಕೋಟಿ ರೂ.ಗಳನ್ನು ಸಾಲ ರೂಪದಲ್ಲಿ ನೀಡಲಾಗಿದೆ. ದುಡಿಯುವ ಬಂಡವಾಳ 45.84 ಕೋಟಿ ಇದ್ದು, ಸಂಘವು ಪ್ರಸಕ್ತ 2022-23 ಸಾಲಿನಲ್ಲಿ ಒಟ್ಟು 171 ಕೋಟಿ ರೂ.ಗಳ ವಹಿವಾಟು ನಡೆಸುವುದರ ಮೂಲಕ 43.55.130 ನಿವ್ವಳ ಲಾಭ ಗಳಿಸಿ ಎ. ಶ್ರೇಣಿಯಲ್ಲಿದೆ ಎಂದು ಮಾಹಿತಿ ನೀಡಿದರು. ಸದಸ್ಯರಿಗೆ ಈ ವರ್ಷ ಶೇ.14 ಡಿವಿಡೆಂಟ್ ನೀಡಲಾಗುವುದು. ಸಂಘದಲ್ಲಿ ನಿರಖು ಠೇವಣಿದಾರರಿಗೆ ಶೇ.7.50 ಹಿರಿಯ ನಾಗರಿಕರಿಗೆ ಶೇ 8.00 ಹಾಗೂ ಹಿರಿಯ ನಾಗರಿಕರಲ್ಲಿ ಮಾಜಿ ಸೈನಿಕರಿಗೆ ಶೇ.8.01 ಹೆಚ್ಚುವರಿ…

Read More