ಮಡಿಕೇರಿ ಜೂ.24 : ಲಯನ್ಸ್ ಜಿಲ್ಲೆ 317- ಡಿ ಇದರ 14 ಕ್ಲಬ್ ಗಳು ಕಾರ್ಯ ನಿರ್ವಹಿಸುವ ಪ್ರಾಂತೀಯ 8ರ ಅಧ್ಯಕ್ಷರಾಗಿ ನವೀನ್ ಅಂಬೆಕಲ್ಲು ನೇಮಕಗೊಂಡಿದ್ದಾರೆ. ಮಡಿಕೇರಿ ಲಯನ್ಸ್ ಸಂಸ್ಥೆಯ ಟ್ರಸ್ಟ್ ನ ಅಧ್ಯಕ್ಷರಾಗಿದ್ದ ಇವರು 2006-07 ರಲ್ಲಿ ಲಯನ್ಸ್ ಅಧ್ಯಕ್ಷರಾಗಿದ್ದರಲ್ಲದೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದೀಗ 2023-24 ರ ಅವಧಿಗೆ ಪ್ರಾಂತೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಇದೇ ಜು.1 ರಿಂದ 2024 ಜೂನ್ ಅಂತ್ಯದವರೆಗೆ ಕಾರ್ಯ ನಿರ್ವಹಿಸಲಿದ್ದಾರೆ. ಪ್ರಾಂತೀಯ ರಾಯಭಾರಿಯಾಗಿ ಧನು ಉತ್ತಯ್ಯ, ವಲಯಾಧ್ಯಕ್ಷರುಗಳಾಗಿ ರೋಹಿತ್ ಸಿ.ಕೆ, ಕಾನೆಹಿತ್ಲು ಸತೀಶ್ ಕುಮಾರ್, ಬಾಲಕೃಷ್ಣ ಎಂ.ಎ ಹಾಗೂ ವಿಶಾಲ್ ದೇವಯ್ಯ ನೇಮಕಗೊಂಡಿದ್ದಾರೆ.
ಲೇಖಕ: admin
ಮಡಿಕೇರಿ ಜೂ.24 : ಶನಿವಾರಸಂತೆಯ ಕೈಸರವಳ್ಳಿ ಅರಣ್ಯದಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿದೆ. ಹುಲುಬೆ ಮರದ ಕೊಂಬೆಗೆ ಪಂಚೆಯಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿದೆ. ಅಂದಾಜು 1 ತಿಂಗಳ ಹಿಂದೆ ನೇಣು ಬಿಗಿದುಕೊಂಡು ಮೃತರಾಗಿರಬಹುದು ಎಂದು ಶನಿವಾರಸಂತೆ ಪೊಲೀಸ್ ನಿರೀಕ್ಷಕ ಪರಶಿವಮೂರ್ತಿ ತಿಳಿಸಿದ್ದಾರೆ. ಶ್ರೀನಿವಾಸ ಎಂಬವರಿಗೆ ಮಲ್ಲಿಪಟ್ಟಣ ಹೋಬಳಿಯ ಮಾಗಲು-ಕೊಪ್ಪಲು ಗ್ರಾಮದ ನಾಗಯ್ಯ ಎಂಬವರು ದೂರವಾಣಿ ಕರೆ ಮಾಡಿ ಕೈಸರವಳ್ಳಿ ಅರಣ್ಯದಲ್ಲಿ ಮೃತದೇಹ ಇರುವ ಬಗ್ಗೆ ತಿಳಿಸಿದ ಮೇರೆಗೆ ಪೊಲೀಸರು ಶ್ರೀನಿವಾಸ ಹಾಗೂ ಅರಣ್ಯ ರಕ್ಷಕ ಲೋಹಿತ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತದೇಹವನ್ನು ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಮೃತ ವ್ಯಕ್ತಿ ಆಕಾಶ ನೀಲಿ ಬಣ್ಣದ ಸಣ್ಣ ಚೌಕಳಿಯ ಉದ್ದ ತೋಳಿನ ಶರ್ಟ್ ಧರಿಸಿದ್ದು, ಶರ್ಟ್ ಕಾಲರಿನಲ್ಲಿ ಎಕ್ಸಪೊ ಟೈಲರ್ಸ್ ಪೇಟೆ ಅರಕಲಗೂಡು 9448996645 ಎಂಬುದಾಗಿ ಬರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಡಿಕೇರಿ ಜೂ.24 : ಅನಂತರಾಜ ಗೌಡ ರಚಿತ ವೀರಲೋಕ ಪ್ರಕಾಶನದ ’10 ಕುಟುಂಬ 18 ಗೋತ್ರದ ಗೌಡ ಪರಂಪರೆ’ಯು ಪುಸ್ತಕ ಬೆಂಗಳೂರಿನ ರಮಣಶ್ರೀ ಹೊಟೇಲ್ ಸಭಾಂಗಣದಲ್ಲಿ ಲೋಕಾರ್ಪಣೆಯಾಯಿತು. ’10 ಕುಟುಂಬ 18 ಗೋತ್ರದ ಗೌಡ ಪರಂಪರೆ’ಯು ಒಂದು ಸಮುದಾಯದ ಸಂಶೋಧನಾತ್ಮಕ, ಚಾರಿತ್ರಿಕ, ಸಾಂಸ್ಕøತಿಕ ಮತ್ತು ಪರಂಪರೆಯ ಅಧ್ಯಯನವಾಗಿದೆ. ಲೇಖಕರ ದೀರ್ಘವಾದ ಕ್ಷೇತ್ರ ಶೋಧನೆಯಿಂದ, ಹಲವು ಹಿರಿಯರು, ಗಣ್ಯರೊಂದಿಗೆ ದಾಖಲಿತ ಸಂಭಾಷಣೆ ಮತ್ತು ಅನೇಕ ಗ್ರಂಥಗಳ ಆಧಾರದಿಂದ ಹಾಗೂ ಡಾ.ಹಾ.ತಿ.ಕೃಷ್ಣೇಗೌಡರ ಮಾರ್ಗದರ್ಶನದಿಂದ ಈ ಕೃತಿಯು ಒಂದು ಶೈಕ್ಷಣಿಕ ರೂಪದವನ್ನು ಪಡೆದಿದೆ ಎಂದು ಲೇಖಕ ಅನಂತರಾಜ ಗೌಡ ತಿಳಿಸಿದ್ದಾರೆ. ಕೃತಿ ಬಿಡುಗಡೆಯ ಸಮಾರಂಭದಲ್ಲಿ ಡಾ.ಹಾ.ತಿ.ಕೃಷ್ಣೇಗೌಡರು ಕೃತಿ ಪರಿಚಯ ಮಾಡಿದರು. ಅನಂತರಾಜ ಗೌಡರವರ ಕಿರು ಪರಿಚಯ ಮತ್ತು ಅವರ ಕೃತಿ ಪರಿಚಯಿಸುವ ಸಾಕ್ಷ್ಯಚಿತ್ರವನ್ನು ವೇದಿಕೆಯ ಎಲ್‍ಇಡಿ ಪರದಿಯಲ್ಲಿ ಪ್ರದರ್ಶಿಸಲಾಯಿತು. ರಾಜ್ಯಸಭಾ ಸದಸ್ಯ ಡಾ.ಜಿ.ಸಿ.ಚಂದ್ರಶೇಖರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಖ್ಯಾತ ವೈದ್ಯರು ಡಾ.ಸಿ.ಎನ್.ಮಂಜುನಾಥ, ಕಿರುತರೆ ನಿರ್ದೇಶಕ ಟಿ.ಎನ್.ಸೀತಾರಾಮ್, ಪ್ರಜಾವಾಣಿಯ ಪ್ರಧಾನ ಸಂಪಾದಕರಾದ ರವೀಂದ್ರ ಭಟ್, ಪತ್ರಕರ್ತ…
ವಿರಾಜಪೇಟೆ ಜೂ.24 : ನಗರದ ಪ್ರಗತಿ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳಿಗೆ ಯೋಗದ ವಿವಿಧ ಪ್ರಕಾರ ಹಾಗೂ ಮಹತ್ವ ಹೇಳಿಕೊಡಲಾಯಿತು. ಶಾಲೆಯ ವ್ಯವಸ್ಥಾಪಕ ಮಾದಂಡ ತಿಮ್ಮಯ್ಯ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿರಾಜಪೇಟೆ ಜೂ.24 : ಬಿಳುಗುಂದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಚುನಾವಣೆಯನ್ನು ವಿಶೇಷವಾಗಿ ನಡೆಸಿದರು. ವಿದ್ಯಾರ್ಥಿಗಳಿಗೆ ಚುನಾವಣೆಯ ಪೂರ್ವಭಾವಿ ಸಿದ್ಧತೆಯ ಬಗ್ಗೆ ಶಿಕ್ಷಕಿ ಲೀಲಾವತಿ ಮಾಹಿತಿ ನೀಡಿದರು. ಮತಪತ್ರದಲ್ಲಿ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ನೀಡಲಾಗಿತ್ತು. ಆಧಾರ್ ಕಾರ್ಡ್ ಇದ್ದವರಿಗೆ ಮತ ಚಲಾಯಿಸಲು ಅಧಿಕಾರ, ಮತ ಪತ್ರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಗುರುತಿಸುವುದು, ಮತದಾನ ಮಾಡಿದ ಮೇಲೆ ಬೆರಳಿಗೆ ಶಾಯಿ ಹಾಕುವುದು ಹೀಗೆ ಮತದಾನ ಪ್ರಕ್ರಿಯೆಯನ್ನು ಶಿಕ್ಷಕರು ನೆರವೇರಿಸಿದರು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಮತದಾನ ನಮ್ಮ ಹಕ್ಕು ಎಂಬ ವಿಷಯದ ಬಗ್ಗೆ ಅರಿವು ಮೂಡಿಸಲಾಯಿತು. ಅಧ್ಯಕ್ಷಾಧಿಕಾರಿಯಾಗಿ ಮುಖ್ಯ ಶಿಕ್ಷಕಿ ಅರುಣ ಆನ್ಸಿ ಡಿಸೋಜ ಕಾರ್ಯ ನಿರ್ವಹಿಸಿದರು. ಈ ಸಂದರ್ಭ ಶಾಲಾ ಶಿಕ್ಷಕರಾದ ಲೀಲಾವತಿ, ಲಿನ್ನಿ, ಪವಿತ್ರ ಚುನಾವಣಾ ಕಾರ್ಯವನ್ನು ನಡೆಸಿಕೊಟ್ಟರು. ಹಾಗೂ ಕಿರಣ್ ಕುಮಾರ್, ಅಲ್ಲಾಬಕ್ಸ್ ಬಡೇಘರ್, ಜಿ. ಸಾವಿತ್ರಿ ಹಾಜರಿದ್ದು, ಮತ ಎಣಿಕೆ ನಡೆಸಿದರು.
ಮಡಿಕೇರಿ ಜು.24 : ಮಾದಾಪುರದ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂವ೯ ಕಾಲೇಜಿನಲ್ಲಿ ಒಂಭತ್ತನೇ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ದೈಹಿಕ ಶಿಕ್ಷಕ ಎಲ್.ಪಿ.ಪಾಲಾಕ್ಷ ಹಾಗೂ ವಿಜ್ಞಾನ ಸಹಶಿಕ್ಷಕಿ ಅಶ್ವಿನಿ ಪ್ರಾಣಾಯಾಮ ಮತ್ತು ಯೋಗದ ಹಲವು ಆಸನ ಗಳನ್ನು ಪ್ರದಶಿ೯ಸಿ ಯೋಗದ ಪ್ರಾಮುಖ್ಯತೆಗಳನ್ನು ತಿಳಿಸಿದರು. ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು , ಸಿಬ್ಬಂದಿ ವರ್ಗ ದವರು ಯೋಗ ಮಾಡುವುದರ ಮೂಲಕ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಮಡಿಕೇರಿ ಜೂ.24 : ಮಾಹಿತಿ ಸಂವಹನ ತಂತ್ರಜ್ಞಾನ ದಿನದಿಂದ ದಿನಕ್ಕೆ ಪ್ರಗತಿ ಹೊಂದುತ್ತಿದ್ದು, ವಿದ್ಯಾರ್ಥಿಗಳು ಚಾಟ್ ಜಿಪಿಟಿ, ಆರ್ಟಿಫಿಷಲ್ ಇಂಟಲಿಜೆನ್ಸ್ ನಂತಹಾ ತಂತ್ರಜ್ಞಾನದಲ್ಲಿ ಪರಿಣಿತರಾದರೆ ಉತ್ತಮ ಭವಿಷ್ಯವಿದೆ ಎಂದು ಎವರ್ ಗ್ರೀನ್ ಕೌಂಟಿ ಕೂರ್ಗ್ ರೆಸಾರ್ಟ್ ಮಾಲೀಕ ಹಾಗೂ ನವ ಉದ್ಯಮಿ ಬಜನ್ ಬೋಪಣ್ಣ ಅಭಿಪ್ರಾಯಪಟ್ಟರು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸ್ನಾತಕೋತ್ತರ ವಿಭಾಗಗಳ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಉತ್ಸವ ‘ಸಮನ್ವಯ’ ಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಆಸಕ್ತಿ ದಾಯಕ ವಿಷಯಗಳನ್ನು ಕಲಿಯಲು ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ವಿಫುಲ ಅವಕಾಶಗಳಿದ್ದು, ಎಲ್ಲವನ್ನೂ ಬಳಸಿಕೊಂಡು ಪರಿಣಿತಿ ಹೊಂದಿದರೆ ಮಾತ್ರ ಉತ್ತಮ ಭವಿಷ್ಯ ಇದೆ ಎಂದು ತಿಳಿಸಿದ ಅವರು, ಸೋಲನ್ನು ಸವಾಲಾಗಿ ಸ್ವೀಕರಿಸಲು ಮನಸ್ಸಿಲ್ಲದವರು ಉದ್ಯಮ ಆರಂಭಿಸುವ ಸಾಹಸಕ್ಕೆ ಕೈ ಹಾಕಬೇಡಿ ಎಂದು ಕಿವಿ ಮಾತು ಹೇಳಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮತ್ತೋರ್ವ ಅತಿಥಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಕೇಶವ ಕಾಮತ್ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ…
ಮಡಿಕೇರಿ ಜೂ.24 : ಕೊಡಗು ಜಿಲ್ಲಾಧಿಕಾರಿಯಾಗಿ ಕಾಯ೯ನಿವ೯ಹಿಸಿ ಇದೀಗ ವಗಾ೯ವಣೆಯಾಗಿರುವ ಡಾ.ಬಿ.ಸಿ.ಸತೀಶ್ ಅವರಿಗೆ ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯ ಕೊಡಗು ಘಟಕದ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು. ಈ ಸಂದಭ೯ ಮಾತನಾಡಿದ ರೆಡ್ ಕ್ರಾಸ್ ಸಭಾಪತಿ ಬಿ.ಕೆ.ರವೀಂದ್ರ ರೈ, ಮಡಿಕೇರಿಯಲ್ಲಿ ಸುಸಜ್ಜಿತವಾದ ರೆಡ್ ಕ್ರಾಸ್ ಭವನ ನಿಮಾ೯ಣವಾಗುವಲ್ಲಿ ಜಿಲ್ಲಾಧಿಕಾರಿಯಾಗಿದ್ದ ಬಿ.ಸಿ.ಸತೀಶ್ ಅವರ ಕೊಡುಗೆ ಮಹತ್ವದ್ದಾಗಿತ್ತು. ಕಳೆದ ವಷ೯ ಮಳೆಗಾಲದಲ್ಲಿ ಕಾಳಜಿ ಕೇಂದ್ರವನ್ನು ರೆಡ್ ಕ್ರಾಸ್ ಸಭಾಭವನದಲ್ಲಿ ಪ್ರಾರಂಭಿಸಿ, ಅನೇಕ ಸಂಸ್ತಸ್ಥರಿಗೆ ನೆರವು ನೀಡುವಲ್ಲಿಯೂ ಸತೀಶ್ ಅವರು ಕಾಳಜಿ ತೋರಿದ್ದರು ಎಂದು ಹೆಮ್ಮೆಯಿಂದ ಸ್ನರಿಸಿದರು. ಕೊಡಗು ಜಿಲ್ಲೆಯಲ್ಲಿ ಜನಾನುರಾಗಿ ಜಿಲ್ಲಾಧಿಕಾರಿಯಾಗಿ ಕಾಯ೯ನಿವ೯ಹಿಸಿದ ಡಾ.ಬಿ.ಸಿ.ಸತೀಶ್ ಅವರ ಕೊಡುಗೆ ಜಿಲ್ಲೆಯ ಜನತೆಯ ಮನದಲ್ಲಿ ಸದಾ ಉಳಿಯುವಂಥದ್ದು ಎಂದೂ ರವೀಂದ್ರ ರೈ ಹೇಳಿದರು. ಈ ಸಂದಭ೯ ರೆಡ್ ಕ್ರಾಸ್ ಕೊಡಗು ಘಟಕದ ಉಪಾಧ್ಯಕ್ಷ ಅನಿಲ್ ಎಚ್.ಟಿ. ಪ್ರಧಾನ ಕಾಯ೯ದಶಿ೯ ಮುರಳೀಧರ್ ಹಾಜರಿದ್ದರು.
ಕೈರೋ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಐತಿಹಾಸಿಕ ಅಮೆರಿಕ ಭೇಟಿಯನ್ನು ಮುಗಿಸಿದ ನಂತರ ಇಂದು ಈಜಿಪ್ಟ್‌ಗೆ ತೆರಳಿದರು. ಈಜಿಪ್ಟ್‌ಗೆ ಪ್ರಧಾನಿಯವರ ಮೊದಲ ಭೇಟಿ ಇದಾಗಿದೆ. ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರ ಆಹ್ವಾನದ ಮೇರೆಗೆ ಈಜಿಪ್ಟ್‌ಗೆ ಎರಡು ದಿನಗಳ ರಾಜ್ಯ ಭೇಟಿ ನೀಡಿದ್ದಾರೆ. ಅಲ್ಲದೇ ಇದು 1997 ರ ನಂತರ ಭಾರತೀಯ ಪ್ರಧಾನಿಯ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ.
ಮಡಿಕೇರಿ ಜೂ.24 : ಕಾಲೇಜು ಶಿಕ್ಷಣ ಇಲಾಖೆ, ಇತಿಹಾಸ ವಿಭಾಗ, ಆಂತರಿಕ ಗುಣಮಟ್ಟ ಭರವಸೆ ಕೋಶ ಹಾಗೂ ಮಡಿಕೇರಿ ಸರ್ಕಾರಿ ಪ್ರಾಚ್ಯ ವಸ್ತು ಸಂಗ್ರಹಾಲಯದ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚೀನ ನಾಣ್ಯಗಳ ಪ್ರದರ್ಶನ ಮತ್ತು ಇತಿಹಾಸದ ಕುರಿತಂತೆ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪ್ರಾಚೀನ ನಾಣ್ಯಗಳ ಸಂಗ್ರಹಕಾರ ಪಿ.ಕೆ.ಕೇಶವಮೂರ್ತಿ, ವಿದ್ಯಾರ್ಥಿ ಜೀವನದಲ್ಲೇ ಉತ್ತಮ ಹಾವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಯಾವುದೇ ದುಶ್ಚಟಗಳಿಗೆ ಬಲಿಯಾಗದೇ ಮೌಲ್ಯಧರಿತ ಶಿಕ್ಷಣವನ್ನು ಪಡೆದುಕೊಂಡಲ್ಲಿ ಮುಂದಿನ ದಿನಗಳಲ್ಲಿ ಯಶಸ್ವಿ ಜೀವನ ನಡೆಸಬಹುದು ಎಂದು ಸಲಹೆ ನೀಡಿದರು. ಪ್ರಾಸ್ತಾವಿಕ ಭಾಷಣ ಮಾಡಿದ ಕಾಲೇಜಿನ ಇತಿಹಾಸ ಉಪನ್ಯಾಸಕಿ ಡಾ. ರಾಧಿಕಾ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಇತಿಹಾಸವು ಎಡಪಂತೀಯ ಹಾಗೂ ಬಲಪಂತೀಯರ ನಡುವೆ ಸಿಕ್ಕಿ ಸ್ಥಿತ್ಯಂತರಕ್ಕೆ ಒಳಗಾಗುತ್ತಿದೆ. ಹಾಗಾಗಿ ವಿದ್ಯಾರ್ಥಿಗಳು ನೈಜ ಇತಿಹಾಸದ ಕುರಿತು ಗಮನ ಹರಿಸಬೇಕು ಮತ್ತು ಭೋದಕ ವರ್ಗ ನೈಜ ಇತಿಹಾಸವನ್ನು ಬೋಧಿಸಬೇಕು ಎಂಬುದಾಗಿ ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ…






