ಲೇಖಕ: admin

ಮಡಿಕೇರಿ ಆ.24 :  ಮನೆಯೊಳಗೆ ಸೇರಿಕೊಂಡಿದ್ದ ನಾಗರ ಹಾವನ್ನು ಉರಗ ಪ್ರೇಮಿ  ಬೊಪ್ಪoಡ ರೋಶನ್  ರಕ್ಷಿಸಿದ್ದಾರೆ. ಅಮ್ಮತ್ತಿ ಕಾರ್ಮಡು ಗ್ರಾಮದ ನೆಲ್ಲ ಮಕ್ಕಡ ಟಿ.ಅಪ್ಪಯ್ಯ ಅವರ ಮನೆಯ ಅಡುಗೆ ಕೋಣೆಯ ಬಾಕ್ಸ್ ಒಳಗೆ ನಾಗರಹಾವು ಸೇರಿಕೊಂಡಿದ್ದು,  ಉರಗ ಪ್ರೇಮಿ  ಬೊಪ್ಪoಡ ರೋಶನ್  ಅವರಿಗೆ ಮಾಹಿತಿ ನೀಡಿದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ರೋಶನ್  ನಾಗರಹಾವನ್ನು ಹಿಡಿದು ರಕ್ಷಿಸಿ ಅದನ್ನು ಮಾಲ್ದಾರೆ ಅರಣ್ಯಕ್ಕೆ ಬಿಟ್ಟರು. ಹಾವುಗಳನ್ನು ಕಂಡರೆ ಕೊಲ್ಲದೆ ಈ ಸಂಖ್ಯೆಗೆ 7022373921 ಕರೆ ಮಾಡುವಂತೆ ರೋಶನ್ ಮನವಿ ಮಾಡಿದ್ದಾರೆ.

Read More

ಮಡಿಕೇರಿ ಆ.24 : ದುಬಾರೆ ಮತ್ತು ಹಾರಂಗಿಯ ಸಾಕಾನೆ ಶಿಬಿರಕ್ಕೆ ಆನೆ ಯೋಜನೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಾಶ್ವತಿ ಮಿಶ್ರ ಭೇಟಿ ನೀಡಿದರು. ಆನೆ ಮಾವುತರು ಕಾವಡಿಗಳ ಸಮಸ್ಯೆಗಳ ಬಗ್ಗೆ ಚರ್ಚಿಸಿದರು.  ಸಾಕಾನೆ ಶಿಬಿರಗಳ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ರೂಪಿಸುವುದರೊಂದಿಗೆ ಕಾಡಾನೆಗಳ ದಾಳಿ ತಪ್ಪಿಸಲು ಶಾಶ್ವತ ಕ್ರಿಯಾಯೋಜನೆ ರೂಪಿಸುವುದಾಗಿ ಅವರು ಹೇಳಿದರು. ಇಲಾಖೆ ಮೂಲಕ ಹೆಚ್ಚಿನ ಅನುದಾನ ಕಲ್ಪಿಸುವುದಾಗಿ ಅವರು ಭರವಸೆ ನೀಡಿದರು. ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಎ.ಟಿ.ಪೂವಯ್ಯ, ಸೋಮವಾರಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಎ.ಗೋಪಾಲ, ಕುಶಾಲನಗರ ವಲಯದಲ್ಲಿ ಅರಣ್ಯ ಅಧಿಕಾರಿ ಕೆ.ವಿ.ಶಿವರಾಮ್, ಉಪ ವಲಯ ಅರಣ್ಯ ಅಧಿಕಾರಿ ಅನಿಲ್ ಡಿಸೋಜ, ಕನ್ನಂಡ ರಂಜನ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.

Read More

ಬೆಂಗಳೂರು ಆ.23 : ವಿಕ್ರಮ್ ಲ್ಯಾಂಡರ್ ಇಂದು ಸಂಜೆ ಸುಮಾರು 6.04 ಕ್ಕೆ ಚಂದ್ರನಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಮೂರನೇ ಚಂದ್ರಯಾನ-3 ಯಶಸ್ವಿಯಾಗಿದೆ.  ಜುಲೈ 14ರಂದು ಉಡಾವಣೆಗೊಂಡಿದ್ದ ಚಂದ್ರಯಾನ 3 ಇಂದು ಸಂಜೆ 6.04ಕ್ಕೆ ಸರಿಯಾಗಿ ಚಂದ್ರನ ಮೇಲ್ಮೈ ಮೇಲೆ ಸಾಫ್ಟ್ ಲ್ಯಾಂಡ್ ಆಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಸುಸೂತ್ರವಾಗಿ ಇಳಿಸಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ. ಚಂದ್ರಯಾನ-3ರ ಲ್ಯಾಂಡರ್‌ನ ಸಾಫ್ಟ್ ಲ್ಯಾಂಡಿಂಗ್‌ಗೆ 15 ರಿಂದ 17 ನಿಮಿಷಗಳನ್ನು ತೆಗೆದುಕೊಂಡಿತು. ಚಂದ್ರಯಾನ 3 ಅನ್ನು 14 ಜುಲೈ 2023ರಂದು ಮಧ್ಯಾಹ್ನ 2.30 ಕ್ಕೆ ಉಡಾವಣೆ ಮಾಡಲಾಗಿತ್ತು.

Read More

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಮೂರನೇ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದೆ. ಜುಲೈ 14ರಂದು ಉಡಾವಣೆಗೊಂಡಿದ್ದ ಚಂದ್ರಯಾನ 3 ಇಂದು ಸಂಜೆ 6.04ಕ್ಕೆ ಸರಿಯಾಗಿ ಚಂದ್ರನ ಮೇಲ್ಮೈ ಮೇಲೆ ಸಾಫ್ಟ್ ಲ್ಯಾಂಡ್ ಆಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಸುಸೂತ್ರವಾಗಿ ಇಳಿಸಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದೆ. ಚಂದ್ರಯಾನ-3ರ ಲ್ಯಾಂಡರ್‌ನ ಸಾಫ್ಟ್ ಲ್ಯಾಂಡಿಂಗ್‌ಗೆ 15 ರಿಂದ 17 ನಿಮಿಷಗಳನ್ನು ತೆಗೆದುಕೊಂಡಿತು. ಚಂದ್ರಯಾನ 3 ಅನ್ನು 14 ಜುಲೈ 2023ರಂದು ಮಧ್ಯಾಹ್ನ 2.30 ಕ್ಕೆ ಉಡಾವಣೆ ಮಾಡಲಾಗಿತ್ತು.

Read More

ಮಡಿಕೇರಿ ಆ.23 : ಕಾರ್ಯ ನಿರ್ವಾಹಕ ಎಂಜಿನಿಯರ್ (ವಿದ್ಯುತ್) ಕೊಡಗು ಬೃಹತ್ ಕಾಮಗಾರಿ ವಿಭಾಗ ಕೆಪಿಟಿಸಿಎಲ್ ಮೈಸೂರು ನಿಗಮದ ವತಿಯಿಂದ ನಡೆಸಲಾಗುವ 66 ಕೆ.ವಿ. ಮಡಿಕೇರಿ-ವಿರಾಜಪೇಟೆ ಸಂಪರ್ಕ ಮಾರ್ಗದಲ್ಲಿ ಬರುವ ಹಾಕತ್ತೂರು ಗ್ರಾಮದ ಟವರ್ ಸಂಖ್ಯೆ 115 ರಿಂದ 118 ರವರೆಗೆ ಸ.ನಂ. 112/2, 112/7, ಮತ್ತು 112/6, 112/4 ರ ರೈತರ ಜಮೀನುಗಳಲ್ಲಿ ಬರುವ 92 ವಿವಿಧ ಜಾತಿಯ ಮರಗಳನ್ನು ಇಲಾಖಾ ವತಿಯಿಂದ ಕಡಿದು ತೆರವುಗೊಳಿಸಲು ಕೋರಿರುತ್ತಾರೆ. ಆದ್ದರಿಂದ ಸಾರ್ವಜನಿಕರು ಈ ಬಗ್ಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ಆಗಸ್ಟ್ 28 ರೊಳಗೆ ಕಚೇರಿಗೆ ಸಲ್ಲಿಸಬೇಕಿದೆ. ಜೊತೆಗೆ ನಿಗಧಿತ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಬಾರದಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.

Read More

ಮಡಿಕೇರಿ ಆ.23 : ಸ್ಯಾಂಡಲ್ ವುಡ್ ನಟ ಮಡಿಕೇರಿಯ ಉಳ್ಳಿಯಡ ಭುವನ್ ಪೊನ್ನಣ್ಣ ಮತ್ತು ನಟಿ ಅಮ್ಮತ್ತಿಯ ಉದ್ದಪಂಡ ಹರ್ಷಿಕಾ ಪೂಣಚ್ಚ ಅವರುಗಳು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ನಟ-ನಟಿಯ ವಿವಾಹ ಸಮಾರಂಭ ಅಮ್ಮತ್ತಿ ಕೊಡವ ಸಮಾಜದಲ್ಲಿ ನಡೆಯುತ್ತಿದ್ದು, ಕೊಡವ ಸಮಾಜವನ್ನು ಅದ್ದೂರಿಯಾಗಿ ಶೃಂಗರಿಸಲಾಗಿದೆ. ಮಡಿಕೇರಿ ನಿವಾಸಿ ಬ್ರಹ್ಮಗಿರಿ ಕೊಡವ ವಾರ ಪತ್ರಿಕೆಯ ಸಂಪಾದಕರಾದ ಉಳ್ಳಿಯಡ ಪೂವಯ್ಯ ಮತ್ತು ಡಾಟಿ ದಂಪತಿಗಳ ಪುತ್ರರಾಗಿರುವ ಭುವನ್ ಪೊನ್ನಣ್ಣ, ಅಮ್ಮತ್ತಿ ನಿವಾಸಿ ಉದ್ದಪಂಡ ದಿ. ಪೂಣಚ್ಚ ಮತ್ತು ಶಾಂಭವಿ ದಂಪತಿಗಳ ಪುತ್ರಿ ಹರ್ಷಿಕಾ ಪೂಣಚ್ಚ ಅವರನ್ನು ವಿವಾಹವಾಗುತ್ತಿದ್ದಾರೆ. ಈ ದಂಪತಿಗಳ ವಿವಾಹಕ್ಕೆ ಸ್ಯಾಂಡಲ್ ವುಡ್ ತಾರೆಯರು ಸಾಕ್ಷಿಯಾಗಲಿದ್ದಾರೆ. ಕೊಡಗಿನ ಶ್ರೀಮಂತ ಪದ್ದತಿ, ಪರಂಪರೆ ಮತ್ತು ಕೊಡವ ಸಮುದಾಯದ ಸಂಪ್ರದಾಯದಂತೆ ಮಧುವೆ ಕಾರ್ಯ ಶಾಸ್ತ್ರೋಕ್ತ್ರವಾಗಿ ನಡೆಯಲಿದೆ. ಅಂದಾಜು 3 ಸಾವಿರ ಮಂದಿ ಮಧುವೆಗೆ ಆಗಮಿಸಿ ವಧು ವರನಿಗೆ ಆಶೀರ್ವಾದಿಸಲಿದ್ದು, ಕೊಡಗಿನ ವಿಶೇಷ ಖಾದ್ಯಗಳನ್ನು ಮಧುವೆಗಾಗಿ ತಯಾರು ಮಾಡಲಾಗುತ್ತಿದೆ. ಮಡಿಕೇರಿಯ ಗಿರೀಶ್ ಮತ್ತವರ ತಂಡಕ್ಕೆ ಮಧುವೆಗೆ ಬೇಕಾದ…

Read More

ಮಡಿಕೇರಿ ಆ.23 : ಕೊಡವ ಹಾಕಿ ಅಕಾಡೆಮಿಯ ನೂತನ ನಿರ್ದೇಶಕರುಗಳಾಗಿ ಮುಕ್ಕಾಟಿರ ರತ್ನ ಸೋಮಯ್ಯ ಹಾಗೂ ಚೆಪ್ಪುಡಿರ ಕಾರ್ಯಪ್ಪ ಆಯ್ಕೆಯಾಗಿದ್ದಾರೆ ಎಂದು ಅಕಾಡೆಮಿಯ ಅಧ್ಯಕ್ಷ ಪಾಂಡಂಡ ಬೋಪಣ್ಣ ತಿಳಿಸಿದ್ದಾರೆ. ಇವರಿಬ್ಬರು ಹಾಕಿ ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದು, ಅಕಾಡೆಮಿಯ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ ಎಂದು ಹೇಳಿದ್ದಾರೆ.

Read More

ಸೋಮವಾರಪೇಟೆ ಆ.23 : ಸೋಮವಾರಪೇಟೆ ಕ್ಷೇತ್ರಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಮೈಸೂರು ಡಯಾಟ್‍ಗೆ ವರ್ಗಾವಣೆಗೊಂಡಿರುವ ಕೆ.ವಿ.ಸುರೇಶ್ ಅವರನ್ನು ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕಾಜೂರು ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಸಂಘದ ಪ್ರಮುಖರು ಹಾಗೂ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಸಂಘದ ತಾಲ್ಲೂಕು ಅಧ್ಯಕ್ಷ ರತ್ನಕುಮಾರ್, ಕಾರ್ಯದರ್ಶಿ ಶಿಲ್ಪಾ, ಯಶವಂತ್ ಕುಮಾರ್ ಇದ್ದರು.

Read More

ಸೋಮವಾರಪೇಟೆ ಆ.23 : ಗೌಡಳ್ಳಿ ಗ್ರಾ.ಪಂ ಸಾಮಾನ್ಯಸಭೆಯು ಗ್ರಾ.ಪಂ ಅಧ್ಯಕ್ಷ ನವೀನ್ ಅಜ್ಜಳ್ಳಿ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಗ್ರಾ.ಪಂ ವ್ಯಾಪ್ತಿಯಲ್ಲಿರುವ ಗ್ರಾಮ ಒನ್ ಕೇಂದ್ರವು ಕಾರ್ಯನಿರ್ವಹಿಸದೆ ಇರುವುದರ ಬಗ್ಗೆ ಸಾರ್ವಜನಿಕರಿಂದ ಹೆಚ್ಚಿನ ದೂರುಗಳು ಬರುತ್ತಿದ್ದು, ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಕಂದಾಯ ಇಲಾಖೆ ಸೂಚಿಸದರೂ ಯಾವುದೆ ಪ್ರಯೋಜನವಾಗಿಲ್ಲ ಎಂದು ಸರ್ವ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ಗುತ್ತಿಗೆದಾರರ ಪರವಾನಗಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಕ್ರಮವಹಿಸಲಾಗುವುದು ಎಂದು ಪಿಡಿಒ ಸಭೆಗೆ ಭರವಸೆ ನೀಡಿದರು. ಸಭೆಯಲ್ಲಿ ಉಪಾಧ್ಯಕ್ಷರಾದ ವಿಶಾಲಾಕ್ಷಿ, ಸುಮಾ, ಪ್ರಸನ್ನ, ವೆಂಕಟೇಶ್  ಇದ್ದರು.  

Read More

ಸೋಮವಾರಪೇಟೆ ಆ.23 : ಗರ್ವಾಲೆ ಗ್ರಾ.ಪಂ ವ್ಯಾಪ್ತಿಯ ಮಂಕ್ಯ, ಗರ್ವಾಲೆ, ಕುಂಬಾರಗಡಿ ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಮೀಸಲು ಅರಣ್ಯಕ್ಕೆ ಓಡಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಕಳೆದ ಮೂರು ದಿನಗಳಿಂದ ಸೋಮವಾರಪೇಟೆ ವಲಯ ಅರಣ್ಯ ಇಲಾಖೆಯ ಆರ್‍ಆರ್‍ಟಿ ತಂಡ ಹಾಗೂ ಎಲಿಫೆಂಟ್ ಟಾಸ್ಕ್‌ಫೋರ್ಸ್‌ನ ಸಿಬ್ಬಂದಿಗಳು ಸೇರಿದಂತೆ ಒಟ್ಟು 35 ಮಂದಿಯ ತಂಡ ಕಾರ್ಯಾಚರಣೆ ನಡೆಸಿ, ಜನವಸತಿ ಹಾಗೂ ಕೃಷಿ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಮರಳಿ ಅರಣ್ಯಕ್ಕೆ ಅಟ್ಟಿದ್ದಾರೆ. ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಚೇತನ್ ನೇತೃತ್ವದಲ್ಲಿ ಕಳೆದ 3 ದಿನಗಳಿಂದ ಕೂಂಬಿಂಗ್ ನಡೆಸಿ, ಕೊನೆಗೂ ಕಾಜೂರು ಅರಣ್ಯಕ್ಕೆ ಕಾಡಾನೆಗಳನ್ನು ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕುಂಬಾರಗಡಿಗೆಯಲ್ಲಿದ್ದ ಒಟ್ಟು 4 ಆನೆಗಳನ್ನು ಹರಗ, ತಾಕೇರಿ, ಕಿರಗಂದೂರು, ಹಾನಗಲ್ಲುಶೆಟ್ಟಳ್ಳಿ-ಹಾನಗಲ್ಲು ಗ್ರಾಮದ ಗಡಿ, ದುದ್ದುಗಲ್ಲು ಹೊಳೆ ಮೂಲಕ ಮರಳಿ ಕಾಜೂರು ಅರಣ್ಯಕ್ಕೆ ಓಡಿಸಲಾಗಿದೆ.

Read More