ಮಡಿಕೇರಿ ಜು.14 : ಕೊಡಗು ಜಿಲ್ಲಾ ಪೊಲೀಸ್ ಕಚೇರಿಗೆ ದಕ್ಷಿಣ ವಲಯದ ಡಿ.ಐ.ಜಿ.ಪಿ ಡಾ: ಎಂ.ಬಿ. ಬೋರಲಿಂಗಯ್ಯ, ಭೇಟಿ ನೀಡಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. ಈ ಸಂದರ್ಭ ಕಾನೂನು ಸುವ್ಯವಸ್ಥೆ ಹಾಗೂ ಪ್ರಾಕೃತಿಕ ವಿಪತ್ತು ಸಂದರ್ಭ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಕ್ತ ಮಾರ್ಗದರ್ಶನ ನೀಡಿದರು. ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಪುಷ್ಪಗುಚ್ಚ ನೀಡಿ ಸ್ವಾಗತಿಸಿದರು.
ಲೇಖಕ: admin
ಮಡಿಕೇರಿ ಜು.14 : ಕುಶಾಲನಗರ ಪಟ್ಟಣದ ಇಂದಿರಾ ಬಡಾವಣೆ, ಪ್ರಥಮ ದರ್ಜೆ ಕಾಲೇಜು ಸಮೀಪದ ವಾಲ್ಮಿಕಿ ಭವನದ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇರಳ ರಾಜ್ಯದ ಸಿಜಿನ್ ಮಂಗಳಸೆರಿ, ಸೋಮವಾರಪೇಟೆ ಕಲ್ಕಂದೂರು ನಿವಾಸಿ ಮುಸ್ತಾಫ(40), ಹಕೀಂ(23), ಗುಮ್ಮನಕೊಲ್ಲಿಯ ವಿನೋದ್(41) ಹಾಗೂ ಶಂಕರ(41) ಎಂಬವರುಗಳನ್ನು ಮಾಲು ಸಹಿತ ಬಂಧಿಸಲಾಗಿದೆ. ಆರೋಪಿಗಳಿಂದ 1.75 ಕೆ.ಜಿ. ಗಾಂಜಾ ಮತ್ತು 5.6 ಗ್ರಾಂ ಎಂ.ಡಿ.ಎಂ.ಎ ನಿಷೇಧಿತ ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ. ಸೋಮವಾರಪೇಟೆ ಡಿವೈಎಸ್‍ಪಿ ಆರ್.ವಿಗಂಗಾಧರಪ್ಪ ನೇತೃತ್ವದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್, ಕುಶಾಲನಗರ ಪಟ್ಟಣ ಠಾಣಾಧಿಕಾರಿ ರವೀಂದ್ರ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಮಡಿಕೇರಿ ಜು.14 : ಕೊಡಗು ಜಿಲ್ಲೆಯಲ್ಲಿ ಅತಿಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಗಡಿಗ್ರಾಮ ಕರಿಕೆ ಕೂಡ ಒಂದು. ಮಳೆಗಾಲದಲ್ಲಿ ರೋಗಿಗಳ ಸಂಖ್ಯೆಯೂ ಇಲ್ಲಿ ಹೆಚ್ಚು, ಆದರೆ ಇಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಸಕಾಲದಲ್ಲಿ ಔಷಧಿ ಲಭಿಸುತ್ತಿಲ್ಲ ಎನ್ನುವ ಆರೋಪವೂ ಇದೆ. ಪ್ರತಿವರ್ಷ ಮಳೆಗಾಲ ಬಂತೆಂದರೆ ಕೊಡಗು- ಕೇರಳ ಗಡಿಯಲ್ಲಿರುವ ಕರಿಕೆ ಗ್ರಾಮದಲ್ಲಿ ವಿವಿಧ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಳ್ಳುತ್ತವೆ. ಇಲ್ಲಿನ ರೋಗಿಗಳು ಸುಮಾರು 70 ಕಿ.ಮೀ ದೂರದಲ್ಲಿರುವ ಮಡಿಕೇರಿಯ ಜಿಲ್ಲಾಸ್ಪತ್ರೆ ಅಥವಾ ಕೇರಳದ ಪಾಣತ್ತೂರು ಆಸ್ಪತ್ರೆಗೆ ತೆರಳಬೇಕಾಗುತ್ತದೆ. ಕರಿಕೆಯಲ್ಲಿ ಆರೋಗ್ಯ ಕೇಂದ್ರ ಇದೆಯಾದರೂ ಸೂಕ್ತ ಔಷಧಿಗಳು ಸಕಾಲದಲ್ಲಿ ದೊರೆಯುತ್ತಿಲ್ಲ. ದೂರದ ಊರುಗಳಿಗೆ ತೆರಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಡ ಕುಟುಂಬಗಳಿಗೆ ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡ ಕರಿಕೆ ಗ್ರಾ.ಪಂ ಉಪಾಧ್ಯಕ್ಷ ಎನ್.ಬಾಲಚಂದ್ರ ನಾಯರ್ ಅವರು ಇಂದು ಮಡಿಕೇರಿಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು ಭೇಟಿಯಾಗಿ ಆರೋಗ್ಯ ಕೇಂದ್ರದ ಕುಂದು ಕೊರತೆಗಳನ್ನು ವಿವರಿಸಿದರು. ಕರಿಕೆಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಕುಟುಂಬಗಳು ಹಾಗೂ ಕೃಷಿ ಕೂಲಿ ಕಾರ್ಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರೋಗಗಳು…
ಮಡಿಕೇರಿ ಜು.14 : ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯನ್ನು ಪಾರದರ್ಶಕ ಮತ್ತು ಶಾಂತಿಯುತವಾಗಿ ನಡೆಸುವ ದೃಷ್ಟಿಯಿಂದ ಕುಶಾಲನಗರ ತಾಲೂಕಿನ ಕೂಡುಮಂಗಳೂರು, ಮಡಿಕೇರಿ ತಾಲೂಕಿನ ಕಾಂತೂರು ಮುರ್ನಾಡು ಮತ್ತು ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲಾ ಶಸ್ತ್ರಾಸ್ತ್ರ ಪರವಾನಗಿದಾರರು ಹೊಂದಿರುವ ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ವೆಂಕಟ್ ರಾಜಾ ಅವರು ಆದೇಶಿಸಿದ್ದಾರೆ. ವಿನಾಯಿತಿ ಪತ್ರ ಹೊಂದಿರುವವರ ಪೈಕಿ ಕ್ರಿಮಿನಲ್/ ರೌಡಿಶೀಟರ್/ ಕೋಮುಗಲಭೆ ಹಿನ್ನೆಲೆಯುಳ್ಳ ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ವ್ಯಕ್ತಿ ಅಥವಾ ಈ ಹಿಂದಿನ ಚುನಾವಣಾ ಸಂದರ್ಭದಲ್ಲಿ ಬಂದೂಕನ್ನು ದುರ್ಬಳಕೆ ಮಾಡಿದ ಹಿನ್ನೆಲೆಯುಳ್ಳ ವ್ಯಕ್ತಿಗಳು ಹೊಂದಿರುವ ಶಸ್ತ್ರಾಸ್ತ್ರಗಳನ್ನು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಠೇವಣಿ ಇಡಬೇಕು. ಚುನಾವಣಾ ಫಲಿತಾಂಶ ಘೋಷಣೆಯಾಗುವವರೆಗೆ ನೀತಿ ಸಂಹಿತೆ ಜಾರಿಯಲ್ಲಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವುದು, ಹಿಡಿದುಕೊಂಡು ಓಡಾಡುವುದನ್ನು ಕಡ್ಡಾಯವಾಗಿ…
ಮಡಿಕೇರಿ ಜು.14 : ಏಕರೂಪ ನಾಗರಿಕ ಸಂಹಿತೆಯಿಂದ ಕೊಡವ ಸಂಸ್ಕೃತಿ, ಆಚಾರ, ವಿಚಾರ ಮತ್ತು ಸಾಂಪ್ರದಾಯಿಕ ಕೋವಿ ಹಕ್ಕಿಗೆ ಯಾವುದೇ ರೀತಿಯಲ್ಲಿ ದಕ್ಕೆಯಾಗಬಾರದು ಎಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಭಾರತದ 22ನೇ ಕಾನೂನು ಆಯೋಗಕ್ಕೆ ಮನವಿ ಸಲ್ಲಿಸಿದೆ. ಆಯೋಗದ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಅವರಿಗೆ ಪತ್ರ ಬರೆದಿರುವ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ, ಏಕರೂಪ ನಾಗರಿಕ ಸಂಹಿತೆಯ ನೀತಿಗಳು ಅನಾದಿ ಕಾಲದಿಂದ ಬಂದಿರುವ ಕೊಡವ ಸಾಂಪ್ರದಾಯಿಕ ಆಚರಣೆಗಳಿಗೆ ಅಡ್ಡಿಯಾಗಬಾರದು ಮತ್ತು ಕೊಡವ ಬುಡಕಟ್ಟು ಜನಾಂಗದ ಹೆಗ್ಗುರುತುಗಳನ್ನು ಮೊಟಕುಗೊಳಿಸಬಾರದು ಎಂದು ಗಮನ ಸೆಳೆದಿದ್ದಾರೆ. ಕೊಡವರು ಅತ್ಯಂತ ಸೂಕ್ಷ್ಮ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು, ಸರ್ಕಾರದ ಕುಟುಂಬ ಯೋಜನೆಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದಾರೆ. ಬಹುಪತ್ನಿತ್ವದ ನಿರ್ಮೂಲನೆ ಮತ್ತು ಜನಸಂಖ್ಯೆ ನಿಯಂತ್ರಣ ನೀತಿಯ ಅನುಷ್ಠಾನವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಇದೀಗ ಪ್ರಸ್ತಾಪಿಸಲ್ಪಟ್ಟಿರುವ ಏಕರೂಪ ನಾಗರಿಕ ಸಂಹಿತೆಗೆ ಕೊಡವರ ವಿರೋಧವಿಲ್ಲ, ಆತಂಕ ಆದರೆ ಕೆಲವೊಂದು ಆತಂಕಗಳಿವೆ. ಸಿಖ್ ಹಾಗೂ ಪಾರ್ಸಿಗಳಂತಹ ಧಾರ್ಮಿಕ ಅಲ್ಪಸಂಖ್ಯಾತರು ಸಾಂಪ್ರದಾಯಿಕ ಚಟುವಟಿಕೆ ಮತ್ತು…
ಮಡಿಕೇರಿ ಜು.14 : ಬೆಂಗಳೂರು ಆಯುರ್ವೇದ ಅಕಾಡೆಮಿ ಮತ್ತು ನೀಮಾ ಕೊಡಗು ಸಹಯೋಗದಲ್ಲಿ “ಅನ್ವಯ ಆಯುರ್ವೇದ (ಪಂಚಕರ್ಮ ಕೇಂದ್ರ)ದಲ್ಲಿ ಜು.16 ರಂದು ಉಚಿತ ಮಧುಮೇಹ ತಪಾಸಣಾ ಶಿಬಿರ ನಡೆಯಲಿದೆ ಎಂದು ಅನ್ವಯ ಆಯುರ್ವೇದಿಕ್ ಕ್ಲಿನಿಕ್ ಮತ್ತು ಪಂಚಕರ್ಮ ಕೇಂದ್ರದ ಡಾ.ಎಸ್.ಅನುಷಾ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಅನ್ವಯ ಆಯುರ್ವೇದ ಕೇಂದ್ರದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಶಿಬಿರ ನಡೆಯಲಿದ್ದು, ಮಧುಮೇಹ ತಪಾಸಣೆ, ಡಯಾಬಿಟಿಕ್ ಫುಟ್, ವಾಸಿಯಾಗದ ಗಾಯ, ಡಯಾಬಿಟಿಕ್ ರೆಟಿನೋಪತಿ, ಆಯುರ್ವೇದ ಆಹಾರ ಪದ್ದತಿ ಮತ್ತು ವ್ಯಾಯಾಮ ಅಲ್ಲದೆ ಮಧುಹೀಗೆ ಬೇಕಾದ ಪಂಚಕರ್ಮ ಚಿಕಿತ್ಸೆಗಳ ಬಗ್ಗೆ ಉತ್ತಮ ಸೇವೆ ನೀಡಲು ನುರಿತ ಆಯುರ್ವೇದ ತಜ್ಞರ ತಂಡ ಲಭ್ಯವಿರಲಿದ್ದಾರೆ. ಇದರೊಂದಿಗೆ ಉಚಿತ ಆಯುರ್ವೇದ ಜೌಷಧಿಗಳು ಮತ್ತು ಪಂಚಕರ್ಮ ಚಿಕಿತ್ಸೆಗಳ ಮೇಲೆ ರಿಯಾತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಭಾರತದ ವೈದ್ಯ ಪದ್ದತಿಯಾದ ಆಯುರ್ವೇದವು ಪುರಾತನ ಕಾಲದಿಂದಲೂ ಮಧುಮೇಹವನ್ನು ಉತ್ತಮ ರೀತಿಯಲ್ಲಿ ಚಿಕಿತ್ಸಿಸುತ್ತಾ ಬಂದಿದೆ.…
ಮಡಿಕೇರಿ ಜು.14 : ಸರ್ಕಾರದ ಆದೇಶದಂತೆ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ 05 ಕೆ.ಜಿ ಆಹಾರ ಧಾನ್ಯದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು 05 ಕೆ.ಜಿ ಹೆಚ್ಚುವರಿ ಅಕ್ಕಿಯ ಬದಲಾಗಿ 2023 ರ ಜುಲೈ ಮಾಹೆಯಿಂದ ಪ್ರತಿ ಕೆ.ಜಿ ಗೆ ರೂ.34 ರಂತೆ (34*5 ಕೆ.ಜಿ=170) 170 ರೂ.ಗಳನ್ನು ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣವನ್ನು ವರ್ಗಾಯಿಸಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ. ಅಂತ್ಯೋದಯ ಪಡಿತರ ಚೀಟಿಗಳಿಗೆ ಸಂಬಂಧಿಸಿದಂತೆ ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರುವ ಮೂರು ಅಥವಾ ಮೂರಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬಗಳ ಪಡಿತರ ಚೀಟಿಗೆ ಈಗಾಗಲೇ 35 ಕೆ.ಜಿ ಅಕ್ಕಿಯನ್ನು ಪ್ರತಿ ತಿಂಗಳು ನೀಡುತ್ತಿರುವುದರಿಂದ ಅಂತಹ ಅಂತ್ಯೋದಯ ಪಡಿತರ ಚೀಟಿಗಳಿಗೆ ನೇರ ನಗದು ವರ್ಗಾವಣೆ ಸೌಲಭ್ಯ ಒಳಪಡುವುದಿಲ್ಲ.…
ಮಡಿಕೇರಿ ಜು.14 : ಸಮಯೋಚಿತ ಲೇಖನಗಳ ಹರಿಕಾರ ಬಾಳೆಯಡ ಕಿಶನ್ ಪೂವಯ್ಯನವರ ಲೇಖನಗಳನ್ನು ಶಕ್ತಿ ಮತ್ತಿತರ ಪತ್ರಿಕೆಗಳಲ್ಲಿ ಓದುತ್ತಿದ್ದಾಗ ಇವರ ಯಾವುದೇ ಲೇಖನದಲ್ಲಿ ಪೂರ್ವಾಗ್ರಹ ಪೀಡಿತ ವಿಷಯಗಳ ಮೆರವಣಿಗೆ ಕಾಣುತ್ತಿರಲಿಲ್ಲ. ಕಾಲಕ್ಕೆ ತಕ್ಕಂತೆ ಮಾತ್ರವಲ್ಲ ಹೇಳಲೇಬೇಕಾದ ವಿಷಯಗಳ ಕುರಿತು ಕೇಳುವವರಾರೂ ಇಲ್ಲವೆಂದು ಭಾವಿಸಿಕೊಂಡಾಗ ಇವರ ಲೇಖನ ಪ್ರತ್ಯಕ್ಷವಾಗುತ್ತಿತ್ತು. ಅಂತಹ ಹಲವಾರು ಲೇಖನಗಳ ಸರಮಾಲೆಯನ್ನು ಸುಂದರ ಮಾಲೆಯಾಗಿ ಪೋಷಿಸಿದ ಕೃತಿಯೇ “ರಾಜಕೀಯ ಮತ್ತು ಪ್ರಕೃತಿ” ಕೃತಿಯಲ್ಲಿ ಅಡಗಿರುವ ಮೊದಲ ಲೇಖನ “ಮಡಿಕೇರಿ ದಸರಾ” ಅಂದು ದೇವಾತಾ ಕಾರ್ಯ ಇಂದು ರಾಜಕೀಯ ಮೇಲಾಟ ಎಂಬ ಶೀರ್ಷಿಕೆಯನ್ನು ಹೊತ್ತು ತಂದಿದೆ. ಪಲ್ಲಕ್ಕಿ ಮತ್ತು ಲ್ಯಾಟಿನ್ ದೀಪಗಳ ಬೆಳಕಿನಲ್ಲಿ ನಡೆಯುತ್ತಿದ್ದ ದಸರಾದ ಇಂದಿನ ವೈಭವವನ್ನು ನಾವೆಲ್ಲರೂ ಕಾಣುತ್ತಿದ್ದೇವೆ. ಶಕ್ತಿ ದೇವತೆಗಳ ನವರಾತ್ರಿಯ ವೈಭವದ ಒಂಬತ್ತು ದಿನಗಳ ಉತ್ಸವದ ಪದಾಧಿಕಾರಿಗಳ ಅಯ್ಕೆಯ ಒಂಬತ್ತು ತಿಂಗಳ ಮೇಲಾಟದ ವಿವರಗಳನ್ನು ಅತ್ಯಂತ ಸೂಕ್ಷ್ಮವಾಗಿ, ಸೂಕ್ತವಾಗಿ ಕಟ್ಟಿಕೊಟ್ಟಿದ್ದಾರೆ. ದೇವತಾ ಕಾರ್ಯ ದಸರಾವನ್ನು ಸಿನಿಮೀಯ ಕೃತ್ಯದಂತೆ ಕಂಗೊಳಿಸಲು ಪ್ರಯತ್ನಿಸಿದವರಿಗೆ ಬೈಲಾ ತಿದ್ದುಪಡಿ ಮಾಡಲು ಏಕೆ…
ಬೆಂಗಳೂರು: ಚಂದಿರನ ಅಂಗಳಕ್ಕೆ ನೌಕೆಯನ್ನು ಕಳುಹಿಸುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಐತಿಹಾಸಿಕ ಚಂದ್ರಯಾನ-3 ಮಧ್ಯಾಹ್ನ 2.35ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಯಾಗಿದೆ. ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಮಧ್ಯಾಹ್ನ ಉಡಾವಣೆಯಾದ ಕೆಲವೇ ಕ್ಷಣಗಳಲ್ಲಿ ಚಂದ್ರಯಾನ-3 ನೌಕೆ ನಿಗದಿತ ಕಕ್ಷೆ ಸೇರಿದೆ. ಇದರೊಂದಿಗೆ ಉಪಗ್ರಹವನ್ನು ಚಂದ್ರನ ಮೇಲ್ಮೈಯಲ್ಲಿ ಸುಲಭವಾಗಿ ಇಳಿಸುವ 6 ವಾರಗಳ ಮಿಷನ್ ಗೆ ಅಧಿಕೃತ ಚಾಲನೆ ಸಿಕ್ಕಿದೆ. ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ನ್ನು ಹೊಂದಿದ್ದು, ಇದು ಸುಮಾರು 3,900 ಕಿಲೋಗ್ರಾಂಗಳಷ್ಟು ಭಾರವನ್ನು ಹೊಂದಿದೆ.
ಸೋಮವಾರಪೇಟೆ ಜು.14 : ಗೋಣಿಮರೂರು ಸರ್ಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳಿಂದ ಗುರುವಂದನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. 21 ವರ್ಷಗಳ ಹಿಂದೆ ಬೋಧನೆ ಮಾಡಿದಂತಹ ಶಿಕ್ಷಕರುಗಳಿಗೆ ಹಾಗೂ ಪ್ರಸಕ್ತ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 100ರಷ್ಟು ಫಲಿತಾಂಶ ಗಳಿಸಲು ಶ್ರಮಿಸಿದ ಶಾಲಾ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ, 2000-2001 ನೇ ಬ್ಯಾಚಿನ ವಿದ್ಯಾರ್ಥಿಗಳಿಂದ ಗೌರವ ನಮನ ಮತ್ತು ಗುರು ವಂದನಾ ಸಲ್ಲಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರ್ಕಾರಿ ಪ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಹರೀಶ್ ವಹಿಸಿದ್ದರು. ಶಾಲೆಯ ಮುಖ್ಯ ಶಿಕ್ಷಕ ನೂತನ್ ಕುಮಾರ್, ಶಿಕ್ಷಕರಾದ ಎಂ.ಎಲ್. ಶ್ರೀಕಾಂತ್, ಕೆ.ಎಂ.ಗಿರಿಜಾಂಬ, ಹಿರಿಯ ಶಿಕ್ಷಕರಾದ ಗಣಪತಿ ಭಟ್, ಉಷಾ, ಸಾಯಿರ ಬಾನು, ದಿನೇಶ್ ಮತ್ತಿತರರು ಹಾಜರಿದ್ದರು. ಸುಮಾರು ನೂರಕ್ಕೂ ಹೆಚ್ಚು ಜನ ಹಳೆಯ ವಿದ್ಯಾರ್ಥಿಗಳು ಗ್ರಾಮಸ್ಥರು ಮತ್ತು ಈ ಹಿಂದೆ ಕರ್ತವ್ಯ ನಿರ್ವಹಿಸಿದಂತಹ ಶಿಕ್ಷಕರುಗಳು ಭಾಗವಹಿಸಿದ್ದರು.






