ಲೇಖಕ: admin

ಸೋಮವಾರಪೇಟೆ ಜು.15 : ಚಾಮುಂಡೇಶ್ವರಿ ಬಳಗದ ವತಿಯಿಂದ ಆಷಾಢದ ಕೊನೆಯ ಶುಕ್ರವಾರದ ಪ್ರಯುಕ್ತ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು. ಪಟ್ಟಣದ ಟ್ಯಾಕ್ಸಿ ನಿಲ್ದಾಣದಲ್ಲಿ ಆಯೋಜಿಸಿದ್ದ ವಿಶೇಷ ಪೂಜಾ ಕಾರ್ಯಕ್ರಮವನ್ನು ಉದ್ಯಮಿ ಗಿರಿಷ್ಮಲ್ಲಪ್ಪ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ದೇವಿಗೆ ಅರ್ಚನೆ ಯೊಂದಿಗೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಹಾಗೂ ಅನ್ನ ಸಂತರ್ಪಣೆ ನಡೆಯಿತು. ಈ ಸಂದರ್ಭ ವಾಹನ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೆ.ಜಿ.ಸುರೇಶ್, ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಹಿಂದುಜಾಗರಣ ವೇದಿಕೆಯ ಸಂಚಾಲಕ ಸುಭಾμï ತಿಮ್ಮಯ್ಯ, ಚಾಮುಂಡೇಶ್ವರಿ ಬಳಗದ ಸಂಚಾಲಕ ರೋಹಿತ್ ಪೂಜಾರಿ, ಪ್ರಮುಖರುಗಳಾದ ಎಚ್.ಎಸ್.ಗಂಗಾ, ಕಾಶಿ ಗೋಪಾಲ್ ಮತ್ತಿತರರು ಇದ್ದರು.

Read More

ಮಡಿಕೇರಿ ಜು.15 :  ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ  ಕಡ್ಲೇರ ತುಳಸಿ ಮೋಹನ್ ಆಯ್ಕೆಯಾಗಿದ್ದಾರೆ. ಗೌರವ ಕಾರ್ಯದರ್ಶಿಗಳಾಗಿ ಪುದಿಯನೆರವನ ರಿಶೀತ್ ಮಾದಯ್ಯ ಮತ್ತು  ಬಾಳೆಯಡ ದಿವ್ಯ ಮಂದಪ್ಪ ಹಾಗೂ ಕೋಶಾಧಿಕಾರಿಯಾಗಿ ಸಿದ್ದರಾಜು ಬೆಳ್ಳಯ್ಯ ರವರನ್ನು ನೇಮಕಗೊಳಿಸಲಾಗಿದೆ. ಸಂಘಟನಾ ಕಾರ್ಯದರ್ಶಿಯಾಗಿ ಚೊಕ್ಕಾಡಿ ಪ್ರೇಮಾ ರಾಘವಯ್ಯ ಮತ್ತು ತಳೂರು ದಿನೇಶ್ ಕರುಂಬಯ್ಯ ರವರನ್ನು ಆಯ್ಕೆಗೊಳಿಸಲಾಗಿದ್ದು, ಸಂಘ ಸಂಸ್ಥೆಗಳ ಪ್ರತಿನಿಧಿಯಾಗಿ ಹೆಚ್. ಟಿ ಅನಿಲ್, ಮಹಿಳಾ ಪ್ರತಿನಿಧಿಗಳಾಗಿ ಶ್ರೀಮತಿ ಶೋಭಾ ಸುಬ್ಬಯ್ಯ,  ಗೌರಮ್ಮ ಮಾದಮಯ್ಯ, ಪರಿಶಿಷ್ಟ ಜಾತಿ ಪ್ರತಿನಿಧಿಗಳಾಗಿ ಬಿ. ಎಲ್ ಸಂದೇಶ್ ಮತ್ತು ಶ್ರೀಮತಿ ಎಚ್.ಪಿ ಜಯಮ್ಮ, ಪರಿಶಿಷ್ಟ ಪಂಗಡ ಪ್ರತಿನಿಧಿಯಾಗಿ ಬಿ.ಎಸ್ ರಂಗಪ್ಪ, ಹಿಂದುಳಿದ ವರ್ಗಗಳ ಪ್ರತಿನಿಧಿಯಾಗಿ ಎಂ.ಎಂ ಅಬ್ದುಲ್ಲಾ, ನಿಕಟ ಪೂರ್ವ ಅಧ್ಯಕ್ಷರಾಗಿ  ಅಂಬೇಕಲ್ ನವೀನ್ ಕಾರ್ಯನಿರ್ವಹಿಸಲಿದ್ದಾರೆ. ಪದನಿಮಿತ ಪ್ರತಿನಿಧಿಗಳಾಗಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಡಿಕೇರಿ. ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸರಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರಾಂಶುಪಾಲರು, ಶ್ರೀ ರಾಜರಾಜೇಶ್ವರಿ ಪದವಿ ಪೂರ್ವ…

Read More

ಮಡಿಕೇರಿ ಜು.14 : ಕುಶಾಲನಗರದ ರಥಬೀದಿಯಲ್ಲಿರುವ ಎರಡು ಚಿನ್ನಾಭರಣ ಮಳಿಗೆಯಲ್ಲಿ ನಕಲಿ ಚಿನ್ನವನ್ನಿಟ್ಟು ಅಸಲಿ ಚಿನ್ನವನ್ನು ಕಳ್ಳತನ ಮಾಡಿರುವ ಆರೋಪಿಗಳನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ. ವಂಚಕರ ಬಳಿಯಿಂದ 75 ಗ್ರಾಂ ತೂಕದ ಚಿನ್ನಾಭರಣ ವಶ ಪಡಿಸಿಕೊಳ್ಳಲಾಗಿದೆ. ಚಿತ್ರದುರ್ಗದ ಪಾಮರಹಳ್ಳಿ ಗ್ರಾಮದ ನಿವಾಸಿಗಳಾದ ಆನ್ನೆಯಮ್ಮ (36),  ಕೈರುನ್ (46) ಹಾಗೂ  ಜೈರಾಭಿ (36) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಕಳವು ಮಾಲಿನ ವಿವರ : 1. 12,80 ಗ್ರಾಂ ತೂಕದ ಚಿನ್ನದ ಜುಮಕಿ ಓಲೆ 2, 480 ಗ್ರಾಂ ತೂಕದ ಒಂದು ಜೊತೆ ಚಿನ್ನದ ಕಿವಿ ಓಲೆ 3, 4,74 ಗ್ರಾಂ ತೂಕದ ಒಂದು ಜೊತೆ ಚಿನ್ನದ ಕಿವಿ ಓಲೆ ಒಟ್ಟು ಎರಡೂ ಪ್ರಕರಣಗಳಿಂದ ಸುಮಾರು 75 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದರಿ ಪ್ರಕರಣವನ್ನು ಕೊಡಗು ಜಿಲ್ಲಾ ಪೊಲೀಸ್‌ ಅಧೀಕ್ಷಕ ಕೆ. ರಾಮರಾಜನ್ ಐ.ಪಿ.ಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ  ಸುಂದರರಾಜು ಕೆ.ಎಸ್ ರವರ ನಿರ್ದೇಶನದಂತೆ ಸೋಮವಾರಪೇಟೆ: ಉಪ-ವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ…

Read More

ಸುಂಟಿಕೊಪ್ಪ ಜು.14 : ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಕಾಡಾನೆಗಳು ದಾಂಧಲೆ ನಡೆಸಿದ್ದು ಓರ್ವ ಕಾರ್ಮಿಕ ಗಾಯಗೊಂಡು ಆಸ್ಪತ್ರಗೆ ದಾಖಲಾದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಸಮೀಪದ ಅತ್ರೂರು ನಲ್ಲೂರು ಗ್ರಾಮದ ಕಂಬಿಬಾಣೆಯ ವೃಂದಾವನ ತೋಟದ ಬಳಿ  ಸಂಜೆ 6 ಗಂಟೆ ಸುಮಾರಿಗೆ ಕೆಲಸ ಮುಗಿಸಿ ಬರುತ್ತಿದ್ದ ಬೂತನಕಾಡು ನಿವಾಸಿ ರಾಮಸ್ವಾಮಿ ಎಂಬುವವರ ಮೇಲೆ ಕಾಡಾನೆಯೊಂದು ದಿಢೀರ್ ದಾಳಿ ನಡೆಸಿ ಕಾಲಿಗೆ ಹೊಡೆದಿದೆ‌.ಆನೆಯ ಹೊಡೆತದಿಂದ  ಬಲಗಾಲಿಗೆ ಗಂಭೀರ ಗಾಯವಾಗಿದ್ದು, ಎಡ ಕಾಲು, ಎದೆಯ ಭಾಗದಲ್ಲಿ ಗಾಯಗಳಾಗಿವೆ. ಕಾರ್ಮಿಕ ರಾಮಸ್ವಾಮಿಯ ಬೊಬ್ಬೆಗೆ ಹೆದರಿದ ಆನೆಯು ಅಲ್ಲಿಂದ ಕಾಲ್ಕಿತ್ತಿದೆ.ವಿಷಯವರಿತ ಸ್ಥಳೀಯರು ಗಾಯಗೊಂಡಿದ್ದ ಕಾರ್ಮಿಕನನ್ನು ಸುಂಟಿಕೊಪ್ಪ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಹಾಗೆಯೇ ಕಂಬಿಬಾಣೆಯ ಚಿಕ್ಲಿಹೊಳೆಯ ರಸ್ತೆಗೆ ತೆರಳುವ  ಕಾಫಿ  ಬೆಳೆಗಾರ ಎಂ.ಕೆ.ನರೇಂದ್ರ ಅವರ ಮನೆಯ ಗೇಟನ್ನು ಕಾಡಾನೆ ತುಳಿದು ಹಾನಿಗೊಳಿಸಿ ಪರಾರಿಯಾಗಿದೆ. ಕಂಬಿಬಾಣೆ ವ್ಯಾಪ್ತಿಯಲ್ಲಿ ಕಳೆದ ಹಲವು ದಿನಗಳಿಂದ ಕಾಡಾನೆಗಳು ಬೀಡು ಬಿಟ್ಟು ಆತಂಕ ಸೃಷ್ಟಿ…

Read More

ಮಡಿಕೇರಿ ಜು.14 : ಸಹೋದರರ ನಡುವಿನ ಆಸ್ತಿ ಕಲಹ ಅಣ್ಣನ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ಮಡಿಕೇರಿ ತಾಲೂಕಿನ ಸಂಪಾಜೆಯ ಚೆಂಬು ಗ್ರಾಮದಲ್ಲಿ ನಡೆದಿದೆ. ಪುತ್ತೂರಿನ ಸಂಪ್ಯಾ ನಿವಾಸಿ ಉಸ್ಮಾನ್(65) ಎಂಬುವವರೇ ಕೊಲೆಯಾದ ದುರ್ದೈವಿಯಾಗಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಸಹೋದರರಿಂದ ಅಣ್ಣನ ಕೊಲೆಯಾಗಿದೆ ಎಂದು ಆರೋಪಿಸಲಾಗಿದೆ. ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಮೃತ ಉಸ್ಮಾನ್ ಹಾಗೂ ಸಹೋದರರು ಸಂಪಾಜೆಯ ಕುದ್ರೆಪಾಯದಲ್ಲಿ ಕೃಷಿ ಭೂಮಿ ಹೊಂದಿದ್ದರು. ಉಸ್ಮಾನ್ ಅವರು ಕುಟುಂಬ ಸಹಿತ ಪುತ್ತೂರಿನಲ್ಲಿ ನೆಲೆಸಿದ್ದು, ಪ್ರತಿ ಶುಕ್ರವಾರ ಸಂಪಾಜೆ ಕುದ್ರೆಪಾಯ ತೋಟಕ್ಕೆ ಬಂದು ಹೋಗುತ್ತಿದ್ದರು ಎನ್ನಲಾಗಿದೆ. ಸಹೋದರರ ನಡುವೆ ಜಾಗದ ವಿಚಾರವಾಗಿ ಹಿಂದಿನಿಂದಲೂ ವೈಷಮ್ಯವಿತ್ತು ಎಂಬ ಮಾತುಗಳು ಕೇಳಿ ಬಂದಿದೆ. ಶುಕ್ರವಾರ ಕುದ್ರೆಪಾಯದ ಜಾಗದಲ್ಲಿ ಸರ್ವೆ ಕಾರ್ಯ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅದಕ್ಕಾಗಿ ಉಸ್ಮಾನ್  ಹಾಗೂ ಇಬ್ಬರು ಸಹೋದರರು ಕೂಡ ಕುದ್ರೆಪಾಯಕ್ಕೆ ಬಂದಿದ್ದರು. ಈ ಸಂದರ್ಭ ಮಾತಿಗೆ ಮಾತು ಬೆಳೆದು ಉಸ್ಮಾನ್ ಅವರನ್ನು ಚೂರಿಯಿಂದ ಇರಿದ ಪರಿಣಾಮ ಸ್ಥಳದಲ್ಲೇ…

Read More

ಮಡಿಕೇರಿ ಜು.14 : ಕೊಡಗು ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ರೈಲ್ವೆ ಬುಕ್ಕಿಂಗ್ ಸೆಂಟರ್ ತೆರೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕೊಡಗು ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ. ಜಿಲ್ಲಾಧಿಕಾರಿಗಳು ವೆಂಕಟ್ ರಾಜಾ ಹಾಗೂ ಕೊಡಗು ಜಿಲ್ಲಾ ಅಂಚೆ ಅಧೀಕ್ಷಕರಿಗೆ ಮನವಿ ಸಲ್ಲಿಸಿದ ವೇದಿಕೆಯ ಪ್ರಮುಖರು ಹಾಗೂ ಪದಾಧಿಕಾರಿಗಳು, ಭಾರತೀಯ ಸೇನೆಯಲ್ಲಿ ಕೊಡಗಿನ ಸಾವಿರಾರು ಮಂದಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಫಿ ತೋಟಗಳಲ್ಲಿ ದುಡಿಯಲು ವಿವಿಧ ರಾಜ್ಯಗಳ ಅಸಂಖ್ಯಾತ ಕಾರ್ಮಿಕರು ಜಿಲ್ಲೆಗೆ ಬರುತ್ತಾರೆ. ಮಡಿಕೇರಿಯಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಸೆಂಟರ್ ಇದ್ದಾಗ ಸೈನಿಕರು ಹಾಗೂ ಕಾರ್ಮಿಕರು ತಾವು ತೆರಳಬೇಕಾದ ಪ್ರದೇಶದ ರೈಲ್ವೆ ಟಿಕೆಟ್‍ಗಳನ್ನು ಮುಂಗಡವಾಗಿ ಬುಕ್ ಮಾಡಿ ಪ್ರಯಾಣ ಬೆಳೆಸುತ್ತಿದ್ದರು. ಇದು ಹೆಚ್ಚು ಅನುಕೂಲಕರ ವ್ಯವಸ್ಥೆಯಾಗಿತ್ತು, ಆದರೆ ಪ್ರಸ್ತುತ ದಿನಗಳಲ್ಲಿ ಟಿಕೆಟ್ ಬುಕ್ಕಿಂಗ್‍ಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗಮನ ಸೆಳೆದರು. ಈ ಸಂದಭ ವೇದಿಕೆಯ ಅಧ್ಯಕ್ಷ ರವಿ ಗೌಡ ಮಾತನಾಡಿ, ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯ ಹಳೆಯ ಖಾಸಗಿ ಬಸ್ ನಿಲ್ದಾಣದ ನಗರಸಭಾ…

Read More

ಮಡಿಕೇರಿ ಜು.14 : ಮಡಿಕೇರಿ ನಗರಸಭೆ ವ್ಯಾಪ್ತಿಯ 1ನೇ ವಾರ್ಡ್‍ನ ನೂತನ ನ್ಯಾಯಾಲಯ, ಜಿಲ್ಲಾ ಪಂಚಾಯತ್ ಹಾಗೂ ಕೇಂದ್ರೀಯ ವಿದ್ಯಾಲಯಕ್ಕೆ ತೆರಳುವ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮಡಿಕೇರಿ ನಗರಸಭೆ ವ್ಯಾಪ್ತಿಯ 1ನೇ ವಾರ್ಡ್ ವಿದ್ಯಾನಗರದಲ್ಲಿ ನೂತನ ಜಿಲ್ಲಾ ನ್ಯಾಯಾಲಯ ಮತ್ತು ಜಿಲ್ಲಾ ಪಂಚಾಯತ್ ಕಟ್ಟಡ ಹಾಗೂ ಕೇಂದ್ರೀಯ ವಿದ್ಯಾಲಯದ ಇದ್ದು, ನಗರದಿಂದ 3 ಕಿ.ಮೀ ಅಂತರವನ್ನು ಕಾಯ್ದುಕೊಂಡಿದೆ. ಇಲ್ಲಿಗೆ ತೆರಳುವ ರಸ್ತೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಬಳಿಯಿಂದ ಕಿರಿದಾಗಿದ್ದು, ದ್ವಿಚಕ್ರ ಹಾಗೂ ತ್ರಿಚಕ್ರ ವಾಹನದ ಚಾಲಕರು ಹೊಂದಾಣಿಕೆಯಿಂದ ದ್ವಿಮುಖ ಸಂಚರಿಸುತ್ತಿರುತ್ತಾರೆ. ಇಲ್ಲಿನ ರಸ್ತೆ ಕಾಂಕ್ರೀಟಿಕರಣಗೊಂಡಿದ್ದರು ಲಘು ವಾಹನಗಳಿಗೆ ಮಾತ್ರ ದ್ವಿಮುಖ ಸಂಚಾರಕ್ಕೆ ಯೋಗ್ಯವಾಗಿದೆ. ಆದರೆ ಇತ್ತೀಚಿನ ಮಳೆಯಿಂದಾಗಿ ಮತ್ತು ಘನ ವಾಹನಗಳ ಸಂಚಾರದಿಂದಾಗಿ ವಿದ್ಯಾನಗರ ಸಮೀಪ ರಸ್ತೆ ಮದ್ಯೆ ಹೊಂಡ ಉಂಟಾಗಿದ್ದು, ರಸ್ತೆ ಒಡೆದು ಅಪಾಯದಂಚಿನಲ್ಲಿದೆ. ಅಲ್ಲದೆ ಮಳೆಯ ಸಂದರ್ಭ ನೀರು ರಸ್ತೆಯ ಹೊಂಡದಲ್ಲಿ ಶೇಖರಣೆಗೊಂಡು ಸಂಚರಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಮಾರ್ಗದಲ್ಲಿ…

Read More

ಮಡಿಕೇರಿ ಜು.14 : ಬಹು ರಾಷ್ಟ್ರೀಯ ಕಂಪನಿಗಳು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ವಿದ್ಯಾಭ್ಯಾಸಕ್ಕೆ ತಕ್ಕದಾದ ಗೌರವಯುತ ಕೆಲಸವನ್ನು ಒದಗಿಸಿ ಬದುಕು ಕಟ್ಟಿಕೊಳ್ಳಲು ನೆರವಾಗಬೇಕೆಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ. ಬಿ.ರಾಘವ ಕರೆ ನೀಡಿದರು. ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಶಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮಡಿಕೇರಿ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕೊಡಗು ಜಿಲ್ಲೆ, ಇದರ ಜಂಟಿ ಸಹಯೋಗದೊಂದಿಗೆ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಒಂದು ದಿನದ ಉದ್ಯೋಗ ಮೇಳ ನಡೆಯಿತು. ಮೇಳದಲ್ಲಿ ಅಂಥೇಮ್ (Anthem) ಬಯೋ ಸೈನ್ಸ್, ಐಸಿಐಸಿಐ ಬ್ಯಾಂಕ್ ಹಾಗೂ ಕಲ್ಯಾಣಿ ಮೋಟರ್ಸ್ ಕಂಪನಿಗಳು ಭಾಗವಹಿಸಿದ್ದವು. ಸುಮಾರು 250 ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದು, 80ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ಆಯ್ಕೆಗೊಂಡಿದ್ದಾರೆ ಎಂದು ಉದ್ಯೋಗ ಶಾಖೆ ಅಧಿಕಾರಿ ಹಾಗೂ ಎಂಕಾಂ ವಿಭಾಗದ ಸಂಯೋಜಕ ಡಾ.ಪ್ರದೀಪ್ ಆರ್.ಭಂಡಾರಿ ಮಾಹಿತಿ ನೀಡಿದರು. ಉದ್ಯೋಗ ಮೇಳದ ನಿರ್ವಹಣೆಯನ್ನು ವಾಣಿಜ್ಯ ವಿಭಾಗದ…

Read More

ಮಡಿಕೇರಿ ಜು.14 :  ಕೊಡಗು  ಜಿಲ್ಲಾ ಪೊಲೀಸ್‌  ಕಚೇರಿಗೆ ದಕ್ಷಿಣ ವಲಯದ ಡಿ.ಐ.ಜಿ.ಪಿ ಡಾ: ಎಂ.ಬಿ. ಬೋರಲಿಂಗಯ್ಯ,  ಭೇಟಿ ನೀಡಿ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳ ಸಭೆ ನಡೆಸಿದರು. ಈ ಸಂದರ್ಭ ಕಾನೂನು ಸುವ್ಯವಸ್ಥೆ ಹಾಗೂ ಪ್ರಾಕೃತಿಕ ವಿಪತ್ತು ಸಂದರ್ಭ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಕ್ತ ಮಾರ್ಗದರ್ಶನ ನೀಡಿದರು. ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಪುಷ್ಪಗುಚ್ಚ ನೀಡಿ ಸ್ವಾಗತಿಸಿದರು.

Read More

ಮಡಿಕೇರಿ ಜು.14 : ಕುಶಾಲನಗರ ಪಟ್ಟಣದ ಇಂದಿರಾ ಬಡಾವಣೆ, ಪ್ರಥಮ ದರ್ಜೆ ಕಾಲೇಜು ಸಮೀಪದ ವಾಲ್ಮಿಕಿ ಭವನದ ಬಳಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇರಳ ರಾಜ್ಯದ ಸಿಜಿನ್ ಮಂಗಳಸೆರಿ, ಸೋಮವಾರಪೇಟೆ ಕಲ್ಕಂದೂರು ನಿವಾಸಿ ಮುಸ್ತಾಫ(40), ಹಕೀಂ(23), ಗುಮ್ಮನಕೊಲ್ಲಿಯ ವಿನೋದ್(41) ಹಾಗೂ ಶಂಕರ(41) ಎಂಬವರುಗಳನ್ನು ಮಾಲು ಸಹಿತ ಬಂಧಿಸಲಾಗಿದೆ. ಆರೋಪಿಗಳಿಂದ 1.75 ಕೆ.ಜಿ. ಗಾಂಜಾ ಮತ್ತು 5.6 ಗ್ರಾಂ ಎಂ.ಡಿ.ಎಂ.ಎ ನಿಷೇಧಿತ ಮಾದಕ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ. ಸೋಮವಾರಪೇಟೆ ಡಿವೈಎಸ್‍ಪಿ ಆರ್.ವಿಗಂಗಾಧರಪ್ಪ ನೇತೃತ್ವದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್, ಕುಶಾಲನಗರ ಪಟ್ಟಣ ಠಾಣಾಧಿಕಾರಿ ರವೀಂದ್ರ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Read More