ಲೇಖಕ: admin

ಸೋಮವಾರಪೇಟೆ ಆ.12 :  ವೀರಶೈವ ಲಿಂಗಾಯತ ಸಂಘಟನಾ ವೇದಿಕೆ (ರಿ), ಕೊಡಗು‌‌ ಜಿಲ್ಲೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ  ಕೊಡ್ಲಿಪೇಟೆ ಮಹಿಳಾ ಸಮಾಜದಲ್ಲಿ ನಡೆಯಿತು. ಜಿಲ್ಲಾ ಅಧ್ಯಕ್ಷರಾಗಿ ಹೆಚ್.ಎಂ.ದಿವಾಕರ್ ಪ್ರಧಾನ ಕಾರ್ಯದರ್ಶಿ ದಯಾನಂದ, ಮಾಧ್ಯಮ ಕಾರ್ಯದರ್ಶಿ ಎನ್.ಎ. ಅಶ್ವಥ್ ಕುಮಾರ್, ಖಜಾಂಚಿ ಯು.ಪಿ.ನಾಗೇಶ್ . ಪ್ರಧಾನ ಸಂಚಾಲಕರಾಗಿ ಬಿ.ಕೆ.ಯತೀಶ್ ತಾಲ್ಲೂಕುವಾರು ಉಪಾಧ್ಯಕ್ಷರಾಗಿ ಸಿ.ವಿ..ಶಂಭುಲಿಂಗಪ್ಪ, ಡಿ.ಎಸ್. ಮಹೇಶ್ , ಶನಿವಾರಸಂತೆ ಡಿ.ಎನ್.ವಿಕ್ರಂ, ಬಡುಬನಹಳ್ಳಿ ಬಸಪ್ಪ ಸೋಮವಾರಪೇಟೆ ಎಂ.ಎಂ. ಪ್ರಕಾಶ್ , ಹೆಚ್.ಸಿ. ಯತೀಶ್, ಕಾರ್ಯದರ್ಶಿಗಳಾಗಿ ಎಸ್.ವಿ.ಸಿದ್ದೇಶ್ . ಯು.ಹೆಚ್. ಉಮೇಶ್, ನಿರ್ದೇಶಕರು ಗುರುರಾಜ್, ಎಂ.ಸಿ.ಆದರ್ಶ, ಪಿ.ಎನ್ ರವಿ, ಇಂದುಶೇಖರ್, ಕೆ.ಪಿ.ಮುತ್ತಯ್ಯ, ಮೊಹನ್, ವಿ.ಹರೀಶ್, ಪ್ರಥಾಪ್.‌ಸಿ.ಟಿ ಜಗದೀಶ್, ಗಿರೀಶ್ ಲಕ್ನಿ ಇವರುಗಳನ್ನು ಆಯ್ಕೆ ಮಾಡಲಾಯಿತು ಹಾಗು ಸಂಘದ ಕಾರ್ಯಚಟುವಟಿಕೆಗಳಿಗೆ ಚಾಲನೆ‌ ನೀಡಲಾಯಿತು. ಸಭೆಯ ದಿವ್ಯ ಸಾನಿದ್ಯದಲ್ಲಿ ಗೌರವಾಧ್ಯಕ್ಷರಾದ ಮನೆಹಳ್ಳಿ ಮಠಾಧ್ಯರು ಶ್ರೀ ಶ್ರೀ ಶಿವಲಿಂಗಸ್ವಾಮೀಜಿ, ಕಲ್ಲುಮಠಾಧ್ಯಕ್ಷರು ಶ್ರೀ ಶ್ರೀ ಮಹಾಂತ ಸ್ವಾಮೀಜಿ, ಕಲ್ಲಹಳ್ಳಿ ಮಠಾಧ್ಯಕ್ಷರು ಶ್ರೀ ಶ್ರೀ ರುದ್ರಮುನಿ ಮಾಹಾ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರಾಸ್ಥಾವಿಕ…

Read More

ಮಡಿಕೇರಿ ಆ.12 :  ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಸ್ವಾವಲಂಬಿ ಬದುಕಿನ ಗ್ಯಾರಂಟಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಆ.14ರಂದು ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳ ಸಾವಿರಾರು ಮಂದಿ ಭೂಮಿ-ವಸತಿ ವಂಚಿತ ಬಡ ಜನರು ಈ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ ಎಂದರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಬಡ ಜನರಿಗೆ ನೀಡಿರುವ ಐದು ಗ್ಯಾರಂಟಿಗಳ ಬದಲು ಸ್ವಾವಲಂಬಿ ಬದುಕಿನ ಗ್ಯಾರಂಟಿ ನೀಡಬೇಕಿತ್ತು. ಕಳೆದ ಹಲವು ವರ್ಷಗಳಿಂದ ಭೂಮಿಯ ಹಕ್ಕುಪತ್ರಕ್ಕಾಗಿ ಧ್ವನಿ ಎತ್ತುತ್ತಿದ್ದರೂ ಚುನಾವಣೆ ಸಂದರ್ಭದಲ್ಲಿ ಭರವಸೆ ಮಾತ್ರ ನೀಡಿ ಆಡಳಿತಕ್ಕೆ ಬಂದ ನಂತರ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದರು. ಆದಿವಾಸಿಗಳನ್ನು ಲೈನ್‍ಮನೆಗಳಿಂದ ಬಿಡುಗಡೆಗೊಳಿಸಿ ಸ್ವಂತ ಸೂರು, ಕೃಷಿ ಭೂಮಿ ನೀಡಬೇಕು, ಬ್ಯಾಡಗೊಟ್ಟ ಮತ್ತು ಬಡವನಹಳ್ಳಿ ಪುನರ್ವಸತಿ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳನ್ನು…

Read More

ಮಡಿಕೇರಿ,ಆ.12 :  ಎರಡನೇ ಶನಿವಾರದ ರಜಾದಿನ., ಪ್ರವಾಸಿ ತಾಣವೂ ಆಗಿರುವ ಮಂಜಿನ ನಗರಿ ಮಡಿಕೇರಿಯಲ್ಲಿ ಜನ ಜಂಗುಳಿ ಇದ್ದಿದ್ದೇ.., ಬೆಳಿಗ್ಗೆಯೇ ದೇವಾಲಯಗಳಲ್ಲೂ ಭಕ್ತರು., ರಸ್ತೆಯಲ್ಲಿ ಶಾಲಾ ಮಕ್ಕಳ., ವಾಹನಗಳ ಓಡಾಟ., ನಗರ ಮಧ್ಯದೊಲಗಡೆ ತಲೆ ಎತ್ತಿ ನಿಂತಿರುವ ಐತಿಹಾಸಿಕ ಹಿನ್ನೆಲೆ ಇರುವ ಶ್ರೀ ಓಕಾರೇಶ್ವರ ದೇವಾಲಯದ ಪುಷ್ಕರಣಿಯ ಬಳಿ ಭಕ್ತರ ಓಡಾಟವಿತ್ತು., ಪ್ರಶಾಂತ ವಾತಾವರಣದಲ್ಲಿ ಒಂದು ಬದಿಯಿಂದ ‘ಹೊಯ್ಯಾ., ಹೊಯ್.,’ ಎಂಬ ರೈತರು ನಾಟಿ ನೆಡುವ ಹಾಡು ಕೇಳಿಬರುತ್ತಿತ್ತು., ಕಣ್ಹಾಯಿಸಿದಾಗ ಪುಟ್ಟದಾದ ಗದ್ದೆಯಲ್ಲಿ ಒಂದಷ್ಟು ಮಂದಿ ನಾಟಿ ನೆಡುತ್ತಿದ್ದರು., ರೈತರಲ್ಲದಂತಿದ್ದರೂ ಮಣ್ಣಿನ ಮಕ್ಕಳಾಗಿದ್ದರು..! ಈ ದೃಷ್ಯ ಕಂಡುಬಂದಿದ್ದು ಇಂದು ಬೆಳಿಗ್ಗೆ ಓಂಕಾರೇಶ್ವರ ದೇವಾಲಯದ ಪುಷ್ಕರಣಿಯ ಪಕ್ಕದಲ್ಲಿ ಸಾಂಪ್ರದಾಯಿಕ ಹುತ್ತರಿ ಹಬ್ಬಕ್ಕೆ ಕದಿರು ತೆಗೆಯುವ ಸಲುವಾಗಿ ನಿರ್ಮಿಸಿರುವ ಗದ್ದೆಯಲ್ಲಿ., ವರ್ಷಂಪ್ರತಿಯಂತೆ ಈ ಬಾರಿ ಕೂಡ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ಕೊಡಗು ಜಿಲ್ಲಾ ಜಾನಪದ ಪರಿಷತ್‍ನ ಸಹಯೋಗದೊಂದಿಗೆ ಸಾಂಪ್ರದಾಯಿಕ ನಾಟಿ ನೆಡುವ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ಮಕ್ಕಳು, ಮಹಿಳೆ, ಪುರುಷ, ವೃದ್ಧರಾದಿಯಾಗಿ…

Read More

ಬೆಂಗಳೂರು ಆ.12 :  ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾಗಿ ಭಾಗೀರಥಿ ಮುರುಳ್ಯ ಆಯ್ಕೆಯಾಗಿದ್ದಾರೆ. ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್‌ ಅವರ ಆದೇಶದನ್ವಯ ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾಗಿ ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಸಮಿತಿಯ ಅಧ್ಯಕ್ಷರಾಗಿ ರೂಪಕಲಾ ಎಂ. ಅವರು ಕಾರ್ಯ ನಿರ್ವಹಿಸಲಿದ್ದಾರೆ. ಸಮಿತಿಗೆ 15 ವಿಧಾನಸಭಾ ಸದಸ್ಯರು ಹಾಗೂ 5 ವಿಧಾನ ಪರಿಷತ್‌ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.

Read More

ಮಡಿಕೇರಿ ಆ.12 :  ನೆಲಜಿಯ ಅಂಬಲ ಮಹಿಳಾ ಸಮಾಜದ ವತಿಯಿಂದ ಸಾಧಕರನ್ನು ಸನ್ಮಾನಿಸಲಾಯಿತು. ಅಂಬಾಲ ಮಹಿಳಾ ಸಮಾಜದಲ್ಲಿ  ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ವಿಧಾನಪರಿಷತ್ ಸದಸ್ಯ ಎಂ.ಪಿ.ಸುಜಾಕುಶಾಲಪ್ಪ , ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ, ಆಕಾಶವಾಣಿಯ ನಿವೃತ್ತ ಉದ್ಘೋಷಕಿ ಶಾರದ ನಂಜಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಸಮಾಜದ ಪ್ರಮುಖರು ಹಾಗೂ ಪದಾಧಿಕಾರಿಗಳು ಹಾಜರಿದ್ದರು.   

Read More

ನಾಪೋಕ್ಲು ಆ.12 : ದಡಾರದಂತಹ ಮಾರಕ ರೋಗಗಳಿಂದ ಮಕ್ಕಳನ್ನು ರಕ್ಷಿಸಲು ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಲಸಿಕಾಕರಣ ಅಭಿಯಾನ ಕಾರುಗುಂದ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಆಡಳಿತ ವೈದ್ಯಾಧಿಕಾರಿ ಪಾರ್ವತಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ದಡಾರ ಮತ್ತು ರುಬೆಲ್ಲಾವನ್ನು ನಿರ್ಮೂಲನೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ಲಸಿಕಾಕರಣಕ್ಕೆ ಬಿಟ್ಟು ಹೋದ ಮಕ್ಕಳು ಮತ್ತು ಗರ್ಭಿಣಿಯರಿಗೆ ಇಂದ್ರಧನುಷ್ 5.0 ಲಸಿಕಾಕರಣವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು ಸಮುದಾಯದಿಂದ ರೋಗವನ್ನು ತಡೆಯಲು ಸಾಧ್ಯವಾಗಲಿದೆ. ಬಿಟ್ಟು ಹೋದ ಮತ್ತು ಹೊರಗುಳಿದ ಐದು ವರ್ಷದ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಲಸಿಕಾಕರಣ ಕೊಡಿಸಬೇಕು ಎಂದ ಲಸಿಕೆ ಅಭಿಯಾನದ ಮಾಹಿತಿಯನ್ನು ನೀಡಿದರು. ಈ ಸಂದರ್ಭ ಕಾರುಗುಂದ ಗ್ರಾ.ಪಂ ಸದಸ್ಯೆ ಎಂ.ಕೆ.ಜಯಂತಿ, ಐಸಿಡಿಎಸ್ ಮಡಿಕೇರಿ ತಾಲೂಕು ಮೇಲ್ವಿಚಾರಕಿ ಶೀಲಾ, ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು.ನೆರೆದಿದ್ದವರಿಗೆ ಆರೋಗ್ಯದ ಬಗ್ಗೆ ಹಾಗೂ ಚುಚ್ಚುಮದ್ದಿನ ಮಹತ್ವದ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು. ವರದಿ : ದುಗ್ಗಳ ಸದಾನಂದ 

Read More

ಬೆಂಗಳೂರು ಆ.12 :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಗ್ನಿ ಅವಘಡ ಸಂಭವಿಸಿದ ಬಿಬಿಎಂಪಿ ಕೇಂದ್ರ ಕಚೇರಿಯ ಗುಣಮಟ್ಟ ನಿಯಂತ್ರಣಾ ವಿಭಾಗದ ಪ್ರಯೋಗಾಲಯಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನಂತರ  ಘಟನೆಯ ಕುರಿತು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭ  ಉಪಮುಖ್ಯಮಂತ್ರಿ  ಡಿ.ಕೆ.ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ ಮತ್ತು ಭೈರತಿ ಸುರೇಶ್ ಹಾಜರಿದ್ದರು.

Read More

ಬೆಂಗಳೂರು ಆ.12 :  ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ ಗಾಯಾಳುಗಳನ್ನು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದರು. ಗಾಯಾಳುಗಳು ದಾಖಲಾಗಿದ್ದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಇದೇ ವೇಳೆ ಘಟನೆ ಬಗ್ಗೆ ಪ್ರತ್ಯೇಕ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಮತ್ತು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

Read More

ಬೆಂಗಳೂರು ಆ.12 :  ಕರ್ನಾಟಕ ರಾಜ್ಯ ವಕೀಲರ ಪರಿಷತ್ ಆಯೋಜಿಸಿದ್ದ ರಾಜ್ಯ ಮಟ್ಟದ ವಕೀಲರ 10ನೇ ಸಮಾವೇಶವನ್ನು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  ಉದ್ಘಾಟಿಸಿದರು.

Read More

ಮಡಿಕೇರಿ ಆ.12 : ದೇವಾಲಯ ಹುಂಡಿಯಿಂದ ಹಣ ಕಳ್ಳತನ ಮಾಡಿರುವ ಪ್ರಕರಣ ವಿರಾಜಪೇಟೆಯ ಸುಣ್ಣದ ಬೀದಿ ಬಡಾವಣೆಯಲ್ಲಿ ನಡೆದಿದೆ. ತುಳಸಿ ಮಾರಿಯಮ್ಮ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ಸುಮಾರು 30 ಸಾವಿರ ರೂ. ಕಾಣಿಕೆ ಹಣ ಕಳ್ಳತನವಾಗಿದೆ ಎಂದು ತಿಳಿದು ಬಂದಿದೆ. ವಿರಾಜಪೇಟೆ ಪೊಲೀಸರು ಹಾಗೂ ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಜನ ಮತ್ತು ವಾಹನ ಸಂಚಾರದ ಪ್ರದೇಶದಲ್ಲೇ ಕಳ್ಳತನ ನಡೆದಿದ್ದು, ಚೋರರ ಪತ್ತೆಗೆ ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

Read More