ಲೇಖಕ: admin

ಮಡಿಕೇರಿ ಜೂ. 1 : ನಗರದ ಹಾಪ್ ಕಾಮ್ಸ್ ಆವರಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ಮಾವು ಮತ್ತು ಹಲಸು ಮೇಳ ಉತ್ತಮ ಯಶಸ್ಸು ಕಂಡಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕಾ ಇಲಾಖಾ ವತಿಯಿಂದ ನಡೆದ ಮೇಳದಲ್ಲಿ ರಾಜ್ಯದ ವಿವಿಧೆಡೆಗಳ ಮಾವು ಬೆಳೆಗಾರರು ಹಾಗೂ ಹಲಸು ಬೆಳೆಗಾರರು ತಮ್ಮ ಉತ್ಪನ್ನಗಳೊಂದಿಗೆ ಪಾಲ್ಗೊಂಡಿದ್ದು, ಜಿಲ್ಲೆಯ ಜನರಿಂದ ಉತ್ತಮ ಸ್ಪಂದನೆ ದೊರೆತಿದೆ. ಮೂರು ದಿನಗಳಲ್ಲಿ ಸುಮಾರು 6 ಸಾವಿರದಿಂದ 17 ಸಾವಿರದಷ್ಟು ಮಂದಿ ಭಾಗಿಗಳಾಗಿ ವಹಿವಾಟು ನಡೆಸಿದ್ದಾರೆ. 21 ಸಾವಿರ ಕೆ.ಜಿ. (21 ಮೆಟ್ರಿಕ್ ಟನ್) ಗಳಷ್ಟು ವ್ಯಾಪಾರ ನಡೆದಿದೆ. ಇದರ ಒಟ್ಟು ಮೊತ್ತ ಅಂದಾಜು 20 ರಿಂದ 21 ಲಕ್ಷಗಳಷ್ಟಾಗಿದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಚೆಕ್ಕೇರ ಪ್ರಮೋದ್ ಮಾಹಿತಿ ನೀಡಿದ್ದಾರೆ.

Read More

ಮಡಿಕೇರಿ ಮೇ ಜೂ.1 : ಮಡಿಕೇರಿ ನಗರಕ್ಕೆ ಶಾಶ್ವತ ಕುಡಿಯುವ ನೀರನ್ನು ಒದಗಿಸುವಲ್ಲಿ ವಿಫಲವಾಗಿರುವ ಕುಂಡಾಮೇಸ್ತ್ರಿ ಯೋಜನೆಯ ಕುರಿತು ಸಮಗ್ರ ತನಿಖೆ ನಡೆಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಸೋಮವಾರಪೇಟೆ ಘಟಕ ಸಂಸದ ಪ್ರತಾಪ್ ಸಿಂಹ ಅವರಿಗೆ ಮನವಿ ಸಲ್ಲಿಸಿದೆ. ಸಂಘದ ತಾಲ್ಲೂಕು ಸಂಚಾಲಕ ಲಕ್ಷ್ಮಣ್ ಗರಗಂದೂರು ಅವರು ಮಡಿಕೇರಿಯಲ್ಲಿ ಸಂಸದರನ್ನು ಭೇಟಿಯಾಗಿ ಬೇಡಿಕೆಗಳ ಕುರಿತು ಗಮನ ಸೆಳೆದರು. ಮಡಿಕೇರಿ ನಗರಕ್ಕೆ ಶಾಶ್ವತವಾಗಿ ಕುಡಿಯುವ ನೀರನ್ನು ಒದಗಿಸಲು ಕೆಲವು ವರ್ಷಗಳ ಹಿಂದೆ ಬೇತ್ರಿ ಯೋನೆಯನ್ನು ರೂಪಿಸಲಾಗಿತ್ತು. ಆದರೆ ಕೆಲವು ಜನಪ್ರತಿನಿಧಿಗಳ ಸ್ವಹಿತಾಸಕ್ತಿಗಾಗಿ ಕುಂಡಾಮೇಸ್ತ್ರಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯಿತು. ಈ ಯೋಜನೆ ಅನುಷ್ಠಾನಗೊಂಡು 7 ವರ್ಷ ಕಳೆದರೂ ನಗರಕ್ಕೆ ಕುಡಿಯುವ ನೀರಿನ ಭಾಗ್ಯ ದೊರೆತ್ತಿಲ್ಲ. ಬೇಸಿಗೆಯಲ್ಲಿ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡುವ ದೌರ್ಭಾಗ್ಯ ತಪ್ಪಿಲ್ಲ ಎಂದು ಆರೋಪಿಸಿದರು. ತಕ್ಷಣ ಕುಂಡಾಮೇಸ್ತ್ರಿ ಯೋಜನೆಯ ಲೋಪವನ್ನು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ತನಿಖೆ ನಡೆಸಬೇಕೆಂದು…

Read More

ಮಡಿಕೇರಿ ಜೂ.1 : ಭಾರೀ ಮಳೆಗೆ ನಿಟ್ಟೂರು ಕಾರ್ಮಾಡು ಚಿಣ್ಣರ ಹಾಡಿಯಲ್ಲಿ ಮನೆಯ ಮೇಲೆ ಮರ ಬಿದ್ದ ಘಟನೆ ನಡೆದಿದೆ. ಘಟನೆಯಿಂದ ಹಾಡಿಯ ತಾಯಮ್ಮ ಎಂಬುವವರ ಮನೆಯ ಮೇಲ್ಚಾವಣಿ ಮತ್ತು ಗೋಡೆ ಜಖಂಗೊಂಡಿದ್ದು, ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Read More

ಮಡಿಕೇರಿ ಜೂ.1 : ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ ಕಾಲು ಜಾರಿ ಬಿದ್ದು ನದಿ ಪಾಲಾದ ಘಟನೆ ಸಿದ್ದಾಪುರ ಪೊಲೀಸ್  ಠಾಣೆ ವ್ಯಾಪ್ತಿಯ ಕೊಂಡಂಗೇರಿಯಲ್ಲಿ ನಡೆದಿದೆ. ಆಸಿಮ್ (15) ಮೃತ ದುರ್ದೈವಿಯಾಗಿದ್ದು, ನದಿ ದಡದಲ್ಲಿ ಬರುತ್ತಿದ್ದ ಸಂದರ್ಭ ಕಾಲು ಜಾರಿ ಬಿದ್ದಿರುವುದಾಗಿ ಹೇಳಲಾಗಿದೆ. ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸತತ ಪ್ರಯತ್ನದ ನಂತರ ಮೃತ ದೇಹ ಪತ್ತೆಯಾಗಿದೆ.

Read More

ಮಡಿಕೇರಿ ಮೇ 31 : ಪೊನ್ನಂಪೇಟೆ 66/11 ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಎಫ್10 ಹೈಸೊಡ್ಲೂರು ಫೀಢರ್‍ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ಜೂ.1 ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಹುದಿಕೇರಿ, ಹೈಸೊಡ್ಲೂರು, ಬೆಳ್ಳೂರು, ಕೋಣಂಗೇರಿ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.

Read More

ಮಡಿಕೇರಿ ಮೇ 31 : ಆಲೂರು ಸಿದ್ದಾಪುರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ 2023-24 ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಪ್ರವೇಶಕ್ಕೆ ಜೂ. 7 ಕೊನೆಯ ದಿನವಾಗಿದೆ. ಎಲೆಕ್ಟ್ರಾನಿಕ್ (ಎನ್‍ಸಿವಿಟಿ), ಎಲೆಕ್ಟ್ರಾನಿಕ್ ಮೆಕ್ಯಾನಿಕ್(ಎನ್‍ಸಿವಿಟಿ), ಫಿಟ್ಟರ್(ಎನ್‍ಸಿವಿಟಿ), ಟರ್ನರ್(ಎನ್‍ಸಿವಿಟಿ) ಹಾಗೂ ಮೆಕ್ಯಾನಿಕ್ ಎಲೆಕ್ಟ್ರಿಕ್ ವೆಹಿಕಲ್ (ಎನ್‍ಸಿವಿಟಿ) ಕೋರ್ಸ್ ಇದೆ. ಕೋರ್ಸ್ ಅವಧಿ 2 ವರ್ಷ ಆಗಿರುತ್ತದೆ ಎಂದು ಆಲೂರು ಸಿದ್ದಾಪುರ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ತಿಳಿಸಿದ್ದಾರೆ.

Read More

ಮಡಿಕೇರಿ ಮೇ 31 : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ, ಕೊಡಗು ವತಿಯಿಂದ ವಿಶ್ವ ಪರಿಸರ ದಿನಾಚರಣೆ-2023 ರ ಅಂಗವಾಗಿ ಶಾಲಾ ಮಕ್ಕಳಿಗೆ ಜೂ.2 ರಂದು ಬೆಳಗ್ಗೆ 9.30 ಗಂಟೆಗೆ ನಗರದ ಸಂತ ಮೈಕಲರ ಶಾಲೆಯಲ್ಲಿ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ `ಪರಿಸರ ಕುರಿತು ಸ್ಥಳದಲ್ಲೇ ಚಿತ್ರ ಬರೆಯುವ ಹಾಗೂ ಪ್ರಬಂಧ ಸ್ಪರ್ಧೆ’ ನಡೆಯಲಿದೆ. ಈ ವರ್ಷದ ಘೋಷ ವಾಕ್ಯವು `ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರಗಳು(ಸೊಲ್ಯೂಷನ್ಸ್ ಟು ಪ್ಲಾಸ್ಟಿಕ್ ಪೊಲ್ಯೂಷನ್)(ಡ್ರಾಯಿಂಗ್ ಶೀಟ್ ಮಾತ್ರ ನೀಡಲಾಗುವುದು. ಚಿತ್ರ ಕಲೆಗೆ ಬೇಕಾಗುವ ಬಣ್ಣ ಇನ್ನಿತರೆ ವಸ್ತುಗಳನ್ನು ವಿದ್ಯಾರ್ಥಿಗಳೇ ತರಬೇಕು). ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಸ್ಥಳದಲ್ಲಿಯೇ ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಎಸ್.ಪ್ರದೀಪ್, ಮಮದಾಪುರ, ಉಪ ಪರಿಸರ ಅಧಿಕಾರಿಗಳು 7348983888, ಕೆ.ಎ.ಆಸ್ಟಿನ್, ಯೋಜನಾ ಸಹಾಯಕರು 9986729289(ಕಚೇರಿ 08272-221855) ಹಾಗೂ ಸ್ಥಳೀಯ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಕೊಡಗು ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ತಿಳಿಸಿದ್ದಾರೆ.

Read More

ಮಡಿಕೇರಿ ಮೇ 31 : ಕೊಡಗು ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜು, ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಆರೋಗ್ಯ ಕೇಂದ್ರದಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತ ಬಂದಿದೆ. ಈ ಯೋಜನೆಯಡಿ ಬಿಪಿಎಲ್ ಕುಟುಂಬ ವರ್ಗದವರಿಗೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಹಾಗೂ ಎಪಿಎಲ್ ಕುಟುಂಬ ವರ್ಗದವರಿಗೆ ಪ್ಯಾಕೇಜ್ ದರದ ಶೇ.30 ರಿಯಾಯಿತಿ ಇದೆ. ಈ ಸೇವೆಗಳನ್ನು ಪಡೆದುಕೊಳ್ಳಲು ಆರೋಗ್ಯ ಇಲಾಖೆಯಿಂದ ಹಾಗೂ ಗ್ರಾಮ ಒನ್ ಕೇಂದ್ರಗಳಿಂದ ನೀಡಿರುವ ಆರೋಗ್ಯ ಕಾರ್ಡ್‍ಗಳು. ಬಿಪಿಎಲ್, ಎಪಿಎಲ್, ಆಧಾರ್ ಕಾರ್ಡ್‍ಗಳು ಅವಶ್ಯಕವಾಗಿ ಬೇಕಾಗಿರುತ್ತದೆ. ಹಾಗೂ ಜಿಲ್ಲೆಯ ರೋಗಿಗಳು ಮತ್ತು ಸಾರ್ವಜನಿಕರು ಎಬಿಎಆರ್‍ಕೆ ಯೋಜನೆಯಡಿ ಹೆಚ್ಚಿನ ಚಿಕಿತ್ಸೆಗೆ ಹೊರ ಜಿಲ್ಲೆಗಳಿಗೆ ತೆರಳುವ ಸಂದರ್ಭದಲ್ಲಿ ಕಡ್ಡಾಯವಾಗಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ರೆಫರಲ್ ನಮೂನೆಗಳನ್ನು ಪಡೆದುಕೊಂಡು ತೆರಳಬೇಕು ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಜಿಲ್ಲೆಯ ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆಗಾಗಿ ಸಾರ್ವಜನಿಕರು ಹಾಗೂ…

Read More

ಮಡಿಕೇರಿ ಮೇ 31 : ಪ್ರಸಕ್ತ (2023-24) ಸಾಲಿನಲ್ಲಿ ಮೀನುಗಾರಿಗೆ ಇಲಾಖೆಯಿಂದ ಜಿಲ್ಲಾ ಪಂಚಾಯತ್ ಹಾಗೂ ರಾಜ್ಯವಲಯ ಯೋಜನೆಗಳ ಅಡಿಯಲ್ಲಿ ಅನುದಾನ ಲಭ್ಯವಿದ್ದು, ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ಜಿಲ್ಲಾ ಪಂಚಾಯತ್ ಯೋಜನೆಗಳಡಿ ಮೀನುಗಾರಿಕೆ ಇಲಾಖೆಯಿಂದ ಸರ್ಕಾರ ನಿಗಧಿಪಡಿಸಿದ ದರಗಳಲ್ಲಿ ಬಿತ್ತನೆಗೆ ಯೋಗ್ಯವಾದ, ಮೀನುಮರಿಗಳನ್ನು ಲಭ್ಯತೆಗೆ ಅನುಗುಣವಾಗಿ ವಿತರಿಸಲಾಗುವುದು. ಆಸಕ್ತ ಕೃಷಿಕರು ತಮ್ಮ ಬೇಡಿಕೆಯನ್ನು ಸಂಬಂದಪಟ್ಟ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗಳಲ್ಲಿ ನೊಂದಾಯಿಸಿಕೊಳ್ಳಬೇಕು. ಪರಿಶಿಷ್ಟ ಜಾತಿ/ಪಂಗಡದ ಫಲಾನುಭವಿಗಳಿಗೆ ಮೀನುಗಾರಿಕೆಗೆ ಅಗತ್ಯವಿರುವ ಸಲಕರಣೆಗಳನ್ನು ವಿತರಣೆ ಮಾಡಲಾಗುವುದು. ರಾಜ್ಯವಲಯ/ ಕೇಂದ್ರ ಯೋಜನೆಗಳಡಿ ಮೀನುಗಾರಿಕೆ ಸಲಕರಣೆ ಕಿಟ್ಟುಗಳ ವಿತರಣೆ, ಮೀನುಗಾರಿಕೆಗೆ ಅಗತ್ಯವಿರುವ ಸಲಕರಣೆಗಳನ್ನು ಉಚಿತ ವಿತರಣೆ ಮಾಡಲಾಗುವುದು. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನು ಕೃಷಿ ಕೊಳ ನಿರ್ಮಾಣ, ಐಸ್ ಪೆಟ್ಟಿಗೆಯೊಂದಿಗೆ ಸೈಕಲ್ ದ್ವಿಚಕ್ರ, ತ್ರಿಚಕ್ರ ವಾಹನ ಖರೀದಿಗೆ ಸಹಾಯಧನ ಹಾಗೂ ಇತರೆ ಯೋಜನೆಗಳ ಸಹಾಯಧನ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ತಾಲ್ಲೂಕು ಕಚೇರಿಗಳಿಗೆ ಕಚೇರಿ ಸಮಯದಲ್ಲಿ ಹಾಗೂ ಮಡಿಕೇರಿ ತಾಲ್ಲೂಕು 9769070850,…

Read More

ಮಡಿಕೇರಿ ಮೇ 31 : ಮುಂಗಾರು ಮಳೆಗಾಲದ ಅವಧಿಯಲ್ಲಿ ಮೀನುಗಳ ವಂಶಾಭಿವೃದ್ಧಿ ಚಟುವಟಿಕೆಗಳು ನಡೆಯುವುದರಿಂದ ಪ್ರತಿ ವರ್ಷದ ಜೂ.1 ರಿಂದ ಜು.30 ರವರೆಗೆ ರಾಜ್ಯದ ಎಲ್ಲಾ ಸರ್ವಋತು ಕೆರೆಗಳು, ಜಲಾಶಯಗಳು, ತೊರೆಗಳು, ಅಳಿವೆಗಳು ಮತ್ತು ನದಿಗಳಲ್ಲಿ ಮೀನು ಹಿಡಿಯುವುದನ್ನು ಪೂರ್ಣವಾಗಿ ನಿಷೇಧಿಸಲಾಗಿದೆ. ಈ ಅವಧಿಯು ಮೀನಿನ ಜೀವನ ಚಕ್ರದಲ್ಲಿ ಅತಿಮುಖ್ಯವಾದ ಘಟ್ಟವಾಗಿದೆ. ಸ್ಥಳೀಯ ತಳಿಗಳು ಮುಂದಿನ ಪೀಳಿಗೆಗೆ ತಮ್ಮ ಸಂತತಿಯನ್ನು ನೀಡುವ ಸಮಯವಾಗಿರುವುದರಿಂದ ಈ ಅವಧಿಯಲ್ಲಿ ಜಿಲ್ಲೆಯ ಸಾರ್ವಜನಿಕರು ಹಾಗೂ ಮೀನುಗಾರರು ಎಲ್ಲಾ ಸರ್ವಋತು ಕೆರೆಗಳು, ಜಲಾಶಯಗಳು ತೊರೆಗಳು, ಅಳಿವೆಗಳು ಮತ್ತು ನದಿಗಳಲ್ಲಿ, ಮೀನುಗಳನ್ನು ಈ ಎರಡು ತಿಂಗಳು ಹಿಡಿಯದೇ ಅವುಗಳ ಸಂತಾನ ಅಭಿವೃದ್ದಿಗೆ ಪೂರಕ ವಾತಾವರಣ ಕಲ್ಪಿಸಿಕೊಟ್ಟು ಮೀನಿನ ಸ್ಥಳೀಯ ತಳಿಗಳ ಸಂರಕ್ಷಣಿಯಲ್ಲಿ ಇಲಾಖೆಯೊಂದಿಗೆ ಸಹಕರಿಸುವಂತೆ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

Read More