ಲೇಖಕ: admin

ಮಡಿಕೇರಿ ಮೇ 31 : ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಶಿಕ್ಷಣ ಪಡೆಯುವುದರ ಜೊತೆಗೆ ತಂಬಾಕು ಮುಕ್ತ ವಾತಾವರಣವನ್ನಾಗಿಸಲು ಶ್ರಮಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಸಾದ್ ಹೇಳಿದರು. ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ “ನಮಗೆ ಆಹಾರ ಬೇಕು, ತಂಬಾಕು ಅಲ್ಲ” ಎಂಬ ಧ್ಯೇಯ ವಾಕ್ಯದೊಂದಿಗೆ ನಗರದ ಸರ್ಕಾರಿ ಪ್ರೌಢ ಶಾಲಾ ಸಭಾಂಗಣದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ನಡೆಯಿತು. ಆರೋಗ್ಯ, ಶಿಕ್ಷಣ, ಸಂಸ್ಕøತಿ ಈ ಎಲ್ಲವೂ ಪ್ರಾರಂಭವಾಗುವುದು ಶಾಲಾ ದಿನಗಳಲ್ಲಿ. ವಿದ್ಯಾರ್ಥಿಗಳ ಜೀವನ ಪ್ರಾರಂಭವಾಗುವುದೇ ಶಾಲಾ ದಿನಗಳಲ್ಲಿ, ಆದ್ದರಿಂದ ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೆ ತಮ್ಮನ್ನು ತಾವು ರಕ್ಷಿಸಿಕೊಂಡು ಕುಟುಂಬವನ್ನು ರಕ್ಷಿಸುವುದರ ಜೊತೆಗೆ ಸಮಾಜವನ್ನು ರಕ್ಷಿಸಬೇಕು ಎಂದು ಪ್ರಸಾದ್ ಹೇಳಿದರು. ಇಂತಹ ದುಶ್ಚಟಗಳನ್ನು ಸಮಾಜದಿಂದ ಹೋಗಲಾಡಿಸಲು ಜಿಲ್ಲಾ ಆರೋಗ್ಯ…

Read More

ಮಡಿಕೇರಿ ಮೇ 31 :  ಕೊಡಗು ಜಿಲ್ಲೆಯಲ್ಲಿ ಮೀನು ಕೃಷಿಗೆ ವಿಪುಲ ಅವಕಾಶಗಳಿದ್ದು, ಜಿಲ್ಲೆಯ ರೈತರು ಆಧುನಿಕ ತಂತ್ರಜ್ಞಾನದ ಮೂಲಕ ಮೀನು ಕೃಷಿಯಲ್ಲಿ ತೊಡಗಿಸಿಕೊಂಡಲ್ಲಿ ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಬಹುದು ಎಂದು ಹಾರಂಗಿ ಮೀನು ಮರಿ ಉತ್ಪಾದನೆ ಮತ್ತು ಪಾಲನೆ ಕೇಂದ್ರದ ಸಹಾಯಕ ನಿರ್ದೇಶಕ ಎಂ.ಎಸ್. ಸಚಿನ್ ಅಭಿಪ್ರಾಯಪಟ್ಟರು. ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಹಾರಂಗಿ ಮೀನು ಮರಿ ಉತ್ಪಾದನೆ ಮತ್ತು ಪಾಲನೆ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಸಂವಾದ ಹಾಗೂ ಮೀನು ಮರಿ ಉತ್ಪಾದನೆ, ಪಾಲನಾ ಕೇಂದ್ರಕ್ಕೆ ಭೇಟಿಯ ಸಂದರ್ಭ ಮಾತನಾಡಿದ ಅವರು, ನಾವು ಭೂಮಿಯ ಮೇಲಿನ ಬೆಳೆಗಳ ಬಗ್ಗೆ ಮಾತ್ರ ಹೆಚ್ಚು ಒತ್ತು ನೀಡುತ್ತಿದ್ದೇವೆ. ಆದರೆ ನೀರಿನ ಒಳಗಿನ ಕೃಷಿಯ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಆದರೆ ಮೀನು ಕೃಷಿಯಲ್ಲಿ ತೊಡಗಿಸಿಕೊಂಡಲ್ಲಿ ಅನ್ನವೇ ಚಿನ್ನವಾಗುವ ದಿನ ದೂರವಿಲ್ಲ ಎಂದು ನುಡಿದರು. ಕೊಡಗು ಸೇರಿದಂತೆ ಭಾರತದಲ್ಲಿ ಮೀನು ಕೃಷಿಗೆ ಉತ್ತಮ ಅವಕಾಶವಿದ್ದು, ರೈತರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು…

Read More

ಮಡಿಕೇರಿ ಮೇ 31 : ಜಿಲ್ಲಾಡಳಿತ, ಜಿ.ಪಂ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಸಹಯೋಗದಲ್ಲಿ ಜಂಟಿಯಾಗಿ ಏರ್ಪಡಿಸಿದ್ದ ದಾಖಲಾತಿ ಆಂದೋಲನ ಮತ್ತು ಶಾಲಾ ಪ್ರಾರಂಭೋತ್ಸವಕ್ಕೆ ಜಿಲ್ಲಾಧಿಕಾರಿ ಡಾ ಬಿ.ಸಿ.ಸತೀಶ್ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಡಾ ಬಿ.ಸಿ.ಸತೀಶ್, ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವ ಮೂಲಕ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ ಹಾಗೂ ಕಲಿಕೆಯೊಂದಿಗೆ ಪೋಷಕರಿಗೆ ಗೌರವ ಸಲ್ಲಿಸಬೇಕು. ಮಕ್ಕಳು ಆಟ- ಪಾಠದೊಂದಿಗೆ ಉತ್ತಮ ಶಿಕ್ಷಣ ಪಡೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು. ಡಿಡಿಪಿಐ ಸಿ.ರಂಗಧಾಮಯ್ಯ ಮಾತನಾಡಿ, ಸರ್ಕಾರ ವಿದ್ಯಾರ್ಥಿಗಳ ಕಲಿಕೆಗೆ ಶಾಲಾ ಪ್ರಾರಂಭದಲ್ಲೇ ಉಚಿತ ಪಠ್ಯ ಪುಸ್ತಕ ಹಾಗೂ ಸಮವಸ್ತ್ರ ನೀಡುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಿ ಅವರಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು. ಬಿಇಓ ಕೆ.ವಿ.ಸುರೇಶ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದೆ.…

Read More

ನಾಪೋಕ್ಲು ಮೇ 31 : ನಾಪೋಕ್ಲು ಗ್ರಾ.ಪಂ ಗೆ ಒಳಪಟ್ಟ ಬೇತು ಗ್ರಾಮದಿಂದ ಇಂದಿರಾ ನಗರಕ್ಕೆ ತೆರಳುವ ರಸ್ಥೆಗೆ ನಿರ್ಮಿಸಲಾದ ಮೋರಿ ಕುಸಿದು ಅಪಾಯಕ್ಕೆ ಅಹ್ವಾನ ನೀಡುವಂತಿದ್ದು, ಶೀಘ್ರದಲ್ಲಿ ದುರಸ್ಥಿ ಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಳೆದ ಒಂದು ವಾರದ ಹಿಂದೆಯೇ ರಸ್ತೆಯ ಮೋರಿ ಕುಸಿದಿದ್ದು, ಇದರ ಬಗ್ಗೆ ಸಂಬಂಧಪಟ್ಟ ಪಂಚಾಯಿ ಅಧಿಕಾರಿ, ಜನಪ್ರತಿನಿದಿನಗಳ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಸಾರ್ವಜನಿಕರು, ಶಾಲಾ ಮಕ್ಕಳು ಹಾಗೂ ಹಲವಾರು ವಾಹನಗಳು ಸಂಚರಿಸುತ್ತಿದ್ದು, ರಸ್ತೆಯ ಮಧ್ಯ ಭಾಗದಲ್ಲೇ ಮೋರಿ ಕುಸಿದ ಕಾರಣ ಅಪಾಯ ಸಂಭವಿಸುವ ಸಾಧ್ಯತೆ ಎಚ್ಚಾಗಿದೆ ಎಂದರು. ಮುಂದಿನ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು, ಗ್ರಾಮದ ರಸ್ತೆ ಬದಿಯಲ್ಲಿ ನಿರ್ಮಿಸಲಾದ ಚರಂಡಿಗಳು ತ್ಯಾಜ್ಯ ಮತ್ತು ಮಣ್ಣುಗಳಿಂದ ತುಂಬಿಕೊಂಡಿದ್ದು ಇದರಿಂದ ಮಳೆನೀರು ರಸ್ತೆಯಲ್ಲೇ ಪ್ರವಾಹದಂತೆ ಹರಿಯುವಂತ್ತಾಗಿದೆ. ಇದರಿಂದ ರಸ್ತೆಯಲ್ಲಿ ಪಾದಾಚಾರಿಗಳು, ಶಾಲಾಮಕ್ಕಳು ನಡೆದಾಡಲು ಬವಣೆ ಪಡುವ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಆದ್ದರಿಂದ ಸಂಬಂಧಪಟ್ಟ…

Read More

ಮಡಿಕೇರಿ ಮೇ 31 : ಮಡಿಕೇರಿ ತಾಲೂಕು ಬಂಟರ ಸಂಘದ ಅಧ್ಯಕ್ಷರಾಗಿ ಬಿ.ಐ.ರಮೇಶ್ ರೈ ಪುನರಾಯ್ಕೆಯಾಗಿದ್ದಾರೆ. ನೂತನ ಆಡಳಿತ ಮಂಡಳಿ ರಚನೆ ಸಂಬಂಧ ನಗರದ ಜಿಲ್ಲಾ ಬಂಟರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಬಿ.ಆರ್.ಸದಾಶಿವ ರೈ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಕೆ. ವಿಠಲ ರೈ, ಖಜಾಂಜಿಯಾಗಿ ಬಿ.ಬಿ. ದಿವೇಶ್ ರೈ, ಗೌರವ ಸಲಹೆಗಾರರಾಗಿ ಬಿ.ಸಿ.ಹರೀಶ್ ರೈ ಕೂಟುಹೊಳೆ ನೇಮಕಗೊಂಡಿದ್ದಾರೆ. ನಿರ್ದೇಶಕರಾಗಿ ಶರತ್ ಕುಮಾರ್ ಶೆಟ್ಟಿ, ಗಿರೀಶ್ ರೈ ಮೂರ್ನಾಡು, ಲತೇಶ್ ಆಳ್ವ ಗಾಳಿಬೀಡು, ಶಶಿಕಲ ಲೋಕೇಶ್ ರೈ(ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ), ಯಶೋಧ ಶಂಭು ಶೆಟ್ಟಿ (ತಾಲೂಕು ಮಹಿಳಾ ಘಟಕದ ಖಜಾಂಜಿ), ಚಂದ್ರಶೇಖರ್ ರೈ (ಮೂರ್ನಾಡು ಘಟಕ ಅಧ್ಯಕ್ಷ), ಜಯಂತಿ ಲವ ರೈ (ಮೂರ್ನಾಡು ಮಹಿಳಾ ಘಟಕದ ಅಧ್ಯಕ್ಷೆ), ರಾಧಾಕೃಷ್ಣ ರೈ (ನಾಪೋಕ್ಲು ಘಟಕದ ಅಧ್ಯಕ್ಷ), ಎಂ.ಡಿ. ಸುಭಾಶ್ ಆಳ್ವ (ಗಾಳಿಬೀಡು ಘಟಕ ಅಧ್ಯಕ್ಷ), ಬಿ.ಡಿ. ಲೋಕೇಶ್ ರೈ (ತಾಳತ್ತಮನೆ ಘಟಕದ ಅಧ್ಯಕ್ಷ), ಕಮಲಾಕ್ಷಿ ರೈ…

Read More

ಮಡಿಕೇರಿ ಮೇ 31 : ತಾಳತ್ತಮನೆಯ ಕೆ.ಬಿ.ಪ್ರೀತಂ ಎಂಬವರ ಮನೆಯ ಒಳಗೆ ಇದ್ದ 4 ಅಡಿ ಉದ್ದದ ನಾಗರ ಹಾವನ್ನು ಉರಗ ಪ್ರೇಮಿ ಪಿಯೂಷ್ ಪೆರೆರಾ ರಕ್ಷಿಸಿ ಸಂಪಾಜೆ ಅರಣ್ಯಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ.

Read More

ಚೆಯ್ಯಂಡಾಣೆ  ಮೇ 31 :ವಿರಾಜಪೇಟೆ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ವಾರ್ಷಿಕ ಮಹಾಸಭೆ ಗೋಣಿಕೊಪ್ಪ ಮದರಸದಲ್ಲಿ ನಡೆಯಿತು. ಖತೀಬ್ ಮುಹಮ್ಮದಲಿ ಫೈಝಿ ಸಭೆಯನ್ನು ಉದ್ಘಾಟಿಸಿದರು. ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2023-24 ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಎಂ.ಅಬ್ದುಲ್ ರಹಮಾನ್ ಮುಸ್ಲಿಯಾರ್, ಉಪಾಧ್ಯಕ್ಷರಾಗಿ ಪಿ.ಬಿ.ಇಸ್ಮಾಯಿಲ್ ಮುಸ್ಲಿಯಾರ್, ಎಂ.ಸಿ.ಅಶ್ರಫ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಹನೀಫ್ ಫೈಝಿ, ಸಹ ಕಾರ್ಯದರ್ಶಿಯಾಗಿ ಮುಹಮ್ಮದ್ ಶುಹೈಬ್ ಫೈಝಿ ಹಾಗೂ ರಫೀಕ್ ಬಾಖವಿ, ಕೋಶಾಧಿಕಾರಿಯಾಗಿ ಕೆ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ನೇಮಕ ಮಾಡಲಾಯಿತು. ಪರೀಕ್ಷಾ ಬೋರ್ಡ್ ಅಧ್ಯಕ್ಷರಾಗಿ ಅಬ್ದುಲ್ಲ ಮುಸ್ಲಿಯಾರ್, ಉಪಾಧ್ಯಕ್ಷರಾಗಿ ರಶೀದ್ ದಾರಿಮಿ, ಐಟಿ ಸಂಯೋಜಕರಾಗಿ ಮಜೀದ್ ಬಾಖವಿ, ಮುಸಾಬಕ ಅಧ್ಯಕ್ಷರಾಗಿ ರಶೀದ್ ದಾರಿಮಿ, ಸಂಚಾಲಕರಾಗಿ ಜುನೈದ್ ಫೈಝಿ, ಎಸ್‍ಕೆಎಸ್‍ಬಿವಿ ಅಧ್ಯಕ್ಷರಾಗಿ ಅಬ್ದುಲ್ ಹಕೀಂ ಅಲ್ ಹಿಶಾಮಿ, ಸಂಚಾಲಕರಾಗಿ ಸಹದ್ ಫೈಝಿ, ಮುಹಲಿಮ್ ಡೇ ಸಂಚಾಲಕರಾಗಿ ಮುಹಮ್ಮದ್ ರೌಫ್ ಹುದವಿ ಅವರನ್ನು ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಕಾರ್ಯದರ್ಶಿ ಅಶ್ರಫ್ ಮುಸ್ಲಿಯಾರ್ ಸ್ವಾಗತಿಸಿದರು. ನೂತನ ಪ್ರಧಾನ…

Read More

ವಿರಾಜಪೇಟೆ ಮೇ 31 : ಪಟ್ಟಣದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ಶೈಕ್ಷಣಿಕ ಸಾಲಿನ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಆಚರಿಸಿ ಮಕ್ಕಳನ್ನು ಸ್ವಾಗತಿಸಲಾಯಿತು. ಶಾಲೆಯನ್ನು ತಳಿರು ತೋರಣ ಹಾಗೂ ಹೂವುಗಳಿಂದ ಶೃಂಗರಿಸಲಾಗಿತ್ತು. ಸಂತ ಅನ್ನಮ್ಮ ದೇವಾಲಯದ ಗುರುಗಳಾದ ರೆ. ಫಾ. ದಯಾನಂದ ಪ್ರಭು ಆಶೀರ್ವಚನವನ್ನು ನೀಡಿದರು. ಸಹಾಯಕ ಗುರುಗಳಾದ ರೆ.ಫಾ. ಯೇಸು ಪ್ರಸಾದ್ ಧಾರ್ಮಿಕ ಗ್ರಂಥವನ್ನು ಪಠಿಸಿದರು. ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ.ಐಸಾಕ್ ರತ್ನಕರ್ ಮಾತನಾಡಿ, ಈ ವಿದ್ಯಾಸಂಸ್ಥೆಯಲ್ಲಿ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮೌಲ್ಯಯುತ ಶಿಕ್ಷಣವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಲಾಗುತ್ತಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಈ ಬಾರಿ ಒಂದು ಹೊಸ ಶಾಲಾ ಬಸ್‍ನ್ನು ಖರೀದಿಸಿ ಸಂಚಾರಕ್ಕೆ ವ್ಯವಸ್ಥೆಯನ್ನು ಮಾಡಿಕೊಡಲಾಗಿದ್ದು, ಪ್ರಸ್ತುತದಲ್ಲಿ ಎರಡು ಶಾಲಾ ಬಸ್‍ಗಳು ಗ್ರಾಮೀಣ ಭಾಗಕ್ಕೆ ಸಂಚಾರ ಮಾಡುತ್ತಿದೆ ಎಂದರು. ಇದೇ ಸಂದರ್ಭ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಫಲಿತಾಂಶಕ್ಕೆ ಕಾರಣರಾದ ಶಿಕ್ಷಕರನ್ನು ಅಭಿನಂದಿಸಲಾಯಿತು. ಅಲ್ಲದೇ ಎಸ್.ಎಸ್.ಎಲ್.ಸಿ.ಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ…

Read More

ಚೆಯ್ಯಂಡಾಣೆ ಮೇ 31 :  ಶಾಲಾ ಪ್ರಾರಂಭೋತ್ಸವದ ಅಂಗವಾಗಿ  ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ  ಸಿಹಿ ನೀಡಿ  ಬರಮಾಡಿಕೊಂಡರು. ಮುಖ್ಯ ಶಿಕ್ಷಕಿ ಕೆ.ಸಿ.ಮೀನಾ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ವಿದ್ಯಾರ್ಥಿಗಳಿಗೆ ಕ್ರೀಡಾ ಪರಿಕರಗಳ ಮೂಲಕ ಆಟದ ಮೂಲಕ ಪಾಠ ಎಂಬಂತೆ ವಿಶಿಷ್ಟ ರೀತಿಯಲ್ಲಿ ಪ್ರಾರಂಭೋತ್ಸವ ಆಚರಿಸಲಾಯಿತು. ಈ ಸಂದರ್ಭ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ರತ್ನಾ, ಸದಸ್ಯರು, ಶಿಕ್ಷಕ ವೃಂದವರು, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು. ವರದಿ :  ಅಶ್ರಫ್ 

Read More

ನಾಪೋಕ್ಲು ಮೇ 31 : ಕೊಡವ ಜನಾಂಗದ ಸಂಸ್ಕೃತಿ ಮತ್ತು ಪರಂಪರೆಯನ್ನು ಯುವ ಪೀಳಿಗೆಗೆ ತಿಳಿಸುವಂತಹ ಕಾರ್ಯ ಆಗಬೇಕು ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು. ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ನೆಲಜಿ ಫಾರ್ಮರ್ಸ್ ಡೆವಲಪ್ ಮೆಂಟ್ ಅಂಡ್ ರಿಕ್ರಿಯೆಶನ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಮೂರನೇ ವರ್ಷದ ರಾಜ್ಯಮಟ್ಟದ ಕೊಡವ ಕುಟುಂಬ ಕಪ್-“ತೆಂಗೆ ಬೊಡಿ ನಮ್ಮೆ” ಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಕೊಡವ ಸಂಸ್ಕೃತಿಯ ಭಾಗವಾದ ತೋಕುನಮ್ಮೆ ಇಂದು ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಯುತ್ತಿದೆ. ಜನಾಂಗದ ಮಂದಿ ಇದರಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ನಮ್ಮ ಮಕ್ಕಳಿಗೆ ಶಿಕ್ಷಣದ ಮಹತ್ವ ತಿಳಿಸಬೇಕು, ಹಿರಿಯರು ಕಾಪಾಡಿಕೊಂಡು ಬಂದ ತೋಟ, ಜಾಗಗಳ ರಕ್ಷಣೆಯೊಂದಿಗೆ ಶಿಕ್ಷಣಕ್ಕೂ ಆದ್ಯತೆ ನೀಡುವಂತಾಗಬೇಕು, ಆಚಾರ ವಿಚಾರಗಳ ರಕ್ಷಣೆ ಮಾಡಿ ಸಂಸ್ಕೃತಿ ಉಳಿಯುವಂತಾಗಬೇಕು ಎಂದರು. ನಿವೃತ್ತ ಐಎಎಸ್ ಅಧಿಕಾರಿ ಮುರುವಂಡ ಅಯ್ಯಪ್ಪ ಮಾತನಾಡಿ, ಕೊಡವ ಸಂಸ್ಕೃತಿಯನ್ನು ಉಳಿಸುವ ಕೆಲಸ ಆಗಬೇಕು. ಕೊಡವ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ…

Read More