ಲೇಖಕ: admin

ಮಡಿಕೇರಿ ಜು.29 :  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆ ವತಿಯಿಂದ  ಕಾರ್ಗಿಲ್  ವಿಜಯೋತ್ಸವ ಆಚರಿಸಲಾಯಿತು. ಕೊಡಗಿನ ಮೂರು ಯೋಧರು ಸೇರಿದಂತೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ದೇಶದ ಎಲ್ಲಾ ಯೋಧರಿಗೆ ನಗರದ ಯುದ್ಧ ಸ್ಮಾರಕದಲ್ಲಿ  ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭ  ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಪ್ರದಾನ ಆಯುಕ್ತ  ಕೆ.ಟಿ.ಬೇಬಿ ಮ್ಯಾಥ್ಯು, ಮೇಜರ್ ಓಡಿಯಂಡ ಚಿಂಗಪ್ಪ, ಜಿಲ್ಲಾ ಸ್ಕೌಟ್ಸ್ ಆಯುಕ್ತರಾದ ಜಿಮ್ಮಿ ಸೀಕ್ವೆರಾ, ಸಹಾ ಕಾರ್ಯದರ್ಶಿ ಬೊಳ್ಳಜಿರ.ಬಿ.ಅಯ್ಯಪ್ಪ, ಜಿಲ್ಲಾ ಸಂಘಟಕ ದಮಯಂತಿ, ಜಿಲ್ಲಾ ಸ್ಥಾನಿಕ ಆಯುಕ್ತ  ಹೆಚ್.ಆರ್.ಮುತ್ತಪ್ಪ, ತರಬೇತಿ ಆಯುಕ್ತ  ಮೈಥಿಲಿ ರಾವ್, ಸಹಾಯಕ ತರಬೇತಿ ಆಯುಕ್ತ  ಅಲೀಮಾ ಮತ್ತು ರಂಜಿತ್,  ಜಿಲ್ಲಾ ಖಜಾಂಚಿ ಪುಷ್ಪವೇಣಿ, ಸ್ಕೌಟ್ಸ್ ಮಾಸ್ಟರ್‌ ಚೆರುಮಂದಂಡ ಕುಟ್ಟಪ್ಪ, ಗೈಡ್ ಕ್ಯಾಪ್ಟನ್ ವೀಣಾಕುಮಾರಿ, ವಿನಯ್ ಜೋಯಿಸಿ, ಜನಾರ್ದನ್, ರತೀಶ್  ಗೌರವ ನಮನ ಸಲ್ಲಿಸಿದರು.   

Read More

ಮಡಿಕೇರಿ ಜು.29 : ನಗರದ ಹೊರವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿ (ಆರ್.ಟಿ.ಓ)ಗೆ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ದಿಢೀರ್ ಭೇಟಿ ನೀಡಿದರು. ಕಚೇರಿಯಲ್ಲಿ ಕಡತಗಳನ್ನು ಇಟ್ಟಿರುವ ಕೊಠಡಿ ಪರಿಶೀಲನೆ ನಡೆಸಿ, ಕಡತಗಳನ್ನು ಸರಿಯಾದ ರೀತಿಯಲ್ಲಿ ಹೊಂದಿಸಿಡಬೇಕೆಂದು ಸೂಚನೆ ನೀಡಿದರು. ಕಚೇರಿಯ ವಿರುದ್ಧ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕರು ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಜನರ ಕೆಲಸ ವಿಳಂಬ ಮಾಡಬಾರದು, ಸಕಾಲದಲ್ಲಿ ಪೂರ್ಣಗೊಳಿಸಿ ಜನರ ಹಿತ ಕಾಪಾಡುವುದು ಸಿಬ್ಬಂದಿಗಳ ಕರ್ತವ್ಯವಾಗಿದೆ. ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು ಎಂದು ತಾಕೀತು ಮಾಡಿದರು. ನಂತರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು. ಈ ಸಂದರ್ಭ ಮುಖಂಡರಾದ ಹೆಚ್.ಎ.ಹಂಸ, ಪ್ರಕಾಶ್ ಆಚಾರ್ಯ, ಸದಾ ಮುದ್ದಪ್ಪ, ಮುದ್ದುರಾಜ್, ಜಾನ್ಸನ್ ಪಿಂಟೋ ಸೇರಿದಂತೆ ಮತ್ತಿರರು ಹಾಜರಿದ್ದರು.

Read More

ಮಡಿಕೇರಿ ಜು.29 : ಜರ್ಮನಿಯಲ್ಲಿ ಆಗಸ್ಟ್ 18 ರಿಂದ 22ರ ವರೆಗೆ ನಡೆಯಲಿರುವ ಚತುಷ್ಕೋನ ಹಾಕಿ ಸರಣಿಗೆ ಭಾರತ ಜೂನಿಯರ್ ಹಾಕಿ ತಂಡವನ್ನು ಪ್ರಕಟಿಸಲಾಗಿದ್ದು, ತಂಡದಲ್ಲಿ ಕೊಡಗಿನ ಯುವ ಆಟಗಾರ ಚಂದುರ ಪೂವಣ್ಣ ಸ್ಥಾನ ಪಡೆದಿದ್ದಾರೆ. ರಾಜ್ಯದಿಂದ ಪೂವಣ್ಣ ಹಾಗೂ ಗೋಲ್‍ಕೀಪರ್ ಆಗಿ ಹೆಚ್.ಎಸ್.ಮೋಹಿತ್ ತಂಡದಲ್ಲಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಜರುಗಲಿರುವ ಜೂನಿಯರ್ ಹಾಕಿ ವಿಶ್ವಕಪ್‍ಗೆ ಪೂರ್ವ ಸಿದ್ಧತೆಯಾಗಿ ಈ ಪಂದ್ಯಾವಳಿ ಮಹತ್ವದ್ದಾಗಿದೆ. ಭಾರತ, ಜರ್ಮನಿ, ಸ್ಪೇನ್ ಇಂಗ್ಲೆಂಡ್ ತಂಡಗಳು ಈ ಪಂದ್ಯಾವಳಿಯಲ್ಲಿ ಸೆಣಸಲಿದೆ. ಪೂವಣ್ಣ ಕಂಡಂಗಾಲ ನಿವಾಸಿ ಚಂದುರ ಎಸ್.ಬಾಬಿ ಹಾಗೂ ಅನಿಲ ದಂಪತಿ ಪುತ್ರ.

Read More

ಮಡಿಕೇರಿ ಜು.29 : ಪ್ರಸಕ್ತ(2023-24) ಸಾಲಿಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕೇಂದ್ರ ಪುರಸ್ಕøತ ಟಾಪ್ ಕ್ಲಾಸ್ ವಿದ್ಯಾರ್ಥಿ ವೇತನ ಕಾರ್ಯಕ್ರಮವನ್ನು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯಿಂದ ನ್ಯಾಷನಲ್ ಸ್ಕಾಲರ್‍ಶಿಪ್ ಪೋರ್ಟಲ್ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಯುಕ್ತ ಜಿಲ್ಲೆಯ ಟಾಪ್ ಕ್ಲಾಸ್ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಮೂಲಕ ಸೆಪ್ಟೆಂಬರ್, 29 ರಂದು ಪರೀಕ್ಷೆ ನಡೆಸಲಾಗುತ್ತದೆ. ಈ ಯೋಜನೆಗೆ ಅರ್ಹರಿರುವ ವಿದ್ಯಾರ್ಥಿಗಳು ಆಗಸ್ಟ್, 10 ರೊಳಗೆ https://yet.nta.ac.in ಮುಖಾಂತರ ಅರ್ಜಿ ಸಲ್ಲಿಸಿ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

Read More

ಸೋಮವಾರಪೇಟೆ ಜು.29 : ಸೋಮವಾರಪೇಟೆ ತಾಲ್ಲೂಕು ಸಾಮಾಜಿಕ ಅರಣ್ಯ ವಲಯದ ವತಿಯಿಂದ ಹುದುಗೂರು ಗ್ರಾಮದ ಸಾಮಾಜಿಕ ಅರಣ್ಯ ವಲಯ ಕ್ಷೇತ್ರದಲ್ಲಿ 2023-24ನೇ ಸಾಲಿನ ಮಳೆಗಾಲದಲ್ಲಿ ನಡೆಸಲು ವಿವಿಧ ಸಸಿಗಳನ್ನು ಬೆಳೆಸಲಾಗಿದ್ದು, ರೈತರಿಗೆ ಪರಿಸ್ಕೃತ ದರದಲ್ಲಿ ವಿತರಿಸಲಾಗುತ್ತಿದೆ. ನೇರಳೆ, ಮಹಾಗನಿ, ಬಿದಿರು, ನೆಲ್ಲಿ, ಸೀಬೆ, ಬಿದಿರು, ಶಿವನಿ, ಕಹಿಬೇವು, ಬಿಲ್ವಪತ್ರೆ, ರಕ್ತಚಂದನ, ಹೊನ್ನೆ, ಚಕ್ಕೆ, ಮುಳ್ಳು ಸಂಪಿಗೆ, ತೇಗ, ಹೆಬ್ಬೇವು, ಹಲಸು, ಹೆಬ್ಬಲಸು ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ಬೆಳೆಸಲಾಗಿದೆ. ಸಾರ್ವಜನಿಕರಿಗೆ ಸರ್ಕಾರ ನಿಗಧಿ ಪಡಿಸಿರುವ 6*9 ಅಳತೆಯ ಚೀಲದ ಸಸಿ ಒಂದಕ್ಕೆ ರೂ. 3 ( ಪರಿಸ್ಕೃತ ದರ) ಹಾಗೂ 8*12ರ ಅಳತೆಯ ಸಸಿ ಒಂದಕ್ಕೆ ರೂ 6( ಪರಿಸ್ಕೃತ ದರ)ನ್ನು ಪಾವತಿಸಿ ಪಡೆದುಕೊಳ್ಳಬಹುದಾಗಿದೆ. ರೈತರು ತಮ್ಮ ಆಧಾರ್ ಪ್ರತಿ, ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಬುಕ್ ಪ್ರತಿ ತಮ್ಮ ಜಮೀನಿನ ಆರ್‍ಟಿಸಿ ಪ್ರತಿಯನ್ನು ನೀಡಿ ಸಸಿಗಳನ್ನು ಪಡೆಯಬಹುದು. ಬಿಪಿಎಲ್ ಕಾರ್ಡ್ ಮತ್ತು ನರೇಗಾ ಉದ್ಯೋಗ ಚೀಟಿ ಹೊಂದಿರುವ ರೈತರಿಗೆ ನೆಟ್ಟ 100…

Read More

ಸೋಮವಾರಪೇಟೆ ಜು.29 : ಸೋಮವಾರಪೇಟೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ,ಸಿ ಟ್ರಸ್ಟ್ ವತಿಯಿಂದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮವನ್ನು ಕರ್ಕಳ್ಳಿ ರುದ್ರ ಭೂಮಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಗಿಡಗಳನ್ನು ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಅಭಿಮನ್ಯು ಕುಮಾರ್, ಸಾಮಾಜಿಕ ಅರಣ್ಯ ಇಲಾಖೆ ರೇಂಜರ್ ಕೆ.ವಿ.ಗಾನಶ್ರೀ, ಬೇಳೂರು ಗ್ರಾ.ಪಂ ಸದಸ್ಯರಾದ ಪಾರ್ವತಿ, ಯೋಗೇಂದ್ರ, ಸೋಮವಾರಪೇಟೆ ವಲಯದ ಮೇಲ್ವಿಚಾರಕರಾದ ಜಯಶ್ರೀ, ಕೃಷಿ ಮೇಲ್ವಿಚಾರಕರಾದ ರಾಜಣ್ಣ ಮತ್ತಿತರರು ಇದ್ದರು.

Read More

ಸಿದ್ದಾಪುರ ಜು.29 : ವಿರಾಜಪೇಟೆ  ತಾಲೂಕಿನ ಸಿದ್ದಾಪುರ ಸಮೀಪದ ಇಂಜಿಳಗೆರೆ ನಿವಾಸಿ  ಟಿ.ಎ.ಪ್ರಕಾಶ್ ಎಂಬವರ ಮನೆ ಅಂಗಳದಲ್ಲಿ ಕಾಡಾನೆ ಪ್ರತ್ಯಕ್ಷಗೊಂಡು ಆತಂಕ ಸೃಷ್ಟಿಸಿದೆ. ನಡುರಾತ್ರಿ ಮನೆಯ ಅಂಗಳದಲ್ಲಿ ಕಾಣಿಸಿಕೊಂಡ ಕಾಡಾನೆ  ಪಕ್ಕದ ತೋಟಕ್ಕೆ ತೆರಳಿ  ಬಾಳೆ, ಅಡಿಕೆ ಮತ್ತಿತರ ಸಸಿಗಳನ್ನು ಧ್ವಂಸ ಮಾಡಿದೆ. ಈ ಭಾಗದಲ್ಲಿ ಕಾಡಾನೆಗಳ  ದಾಂಧಲೆ ಮಿತಿ ಮೀರಿದ್ದು,  ಕೃಷಿಕರ ತೋಟಕ್ಕೆ ನುಗ್ಗಿ ತೆಂಗಿನ ಸಸಿ, ಅಡಿಕೆ  ಹಾಗೂ ಬಾಳೆ ಸಸಿಗಳನ್ನು ತಿಂದು ಹಾನಿಗೊಳಿಸುತ್ತಿವೆ.  ಇದೇ ವ್ಯಾಪ್ತಿಯ ಬೆಳೆಗಾರ ಮೋಹನ್ ಎಂಬುವವರ ತೋಟಕ್ಕೆ ಲಗ್ಗೆಯಿಟ್ಟಿದ್ದ ಕಾಡಾನೆ ಹಲಸಿನ ಮರ ಸೇರಿದಂತೆ ಕಾಫಿ ಫಸಲನ್ನು ನಾಶಪಡಿಸಿತ್ತು. ಕಾಡಾನೆ ಹಾವಳಿಯನ್ನು ತಡೆಯಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ವ್ಯಾಪ್ತಿಯಲ್ಲಿ ಹಲವು ಸಮಯದಿಂದ ಕಾಡಾನೆ ಹಾವಳಿ ಮಿತಿ ಮೀರಿದೆ. ಈ ಬಗ್ಗೆ ಅರಣ್ಯ ಇಲಾಖೆಗೂ ಮಾಹಿತಿ ನೀಡಿದ್ದೇವೆ ಆದರೂ ಯಾವುದೇ  ಕ್ರಮ ಕೈಗೊಂಡಿಲ್ಲ. ತಕ್ಷಣವೇ  ಇಲಾಖೆ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯ ಮಾಡುವಂತೆ ಒತ್ತಾಯಿಸಿದ್ದಾರೆ.  :: ಟಿ.ಎ.ಪ್ರಕಾಶ್, ಸಣ್ಣ ಕೃಷಿಕ ಇಂಜಿಳಗೆರೆ…

Read More

ಮಡಿಕೇರಿ ಜು.24 :  ಕೊಡಗು ಜಿ.ಪಂ, ಕರ್ನಾಟಕ ರಾಜ್ಯ ಪ್ರೌಢ ಸಹ ಶಿಕ್ಷಕರ ಸಂಘ , ಮಡಿಕೇರಿ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಸಂಯುಕ್ತಶ್ರಯದಲ್ಲಿ 2022-23ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಶಾಲೆ, ಶಿಕ್ಷಕರು ಮತ್ತು ಅತ್ಯುನ್ನತ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಮತ್ತು ಶೈಕ್ಷಣಿಕ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೆಗೌಡ  ಉದ್ಘಾಟಿಸಿ, ಎಸ್‍ಎಸ್‍ಎಲ್‍ಸಿಯಲ್ಲಿ ಶೇ.100ರಷ್ಟು ಅಂಕ ಪಡೆಯಲು ಕಾರಣರಾದ ಶಿಕ್ಷಕರನ್ನು ಹಾಗೂ ಉತ್ತಮ ಅಂಕ ಪಡೆದ ವಿಧ್ಯಾರ್ಥಿಗಳನ್ನು ಸನ್ಮಾನಿಸಿ, ಅಭಿನಂದಿಸಿದರು.

Read More

ಮಡಿಕೇರಿ ಜು.28 : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಡಿಕೇರಿ ಕಚೇರಿಯಲ್ಲಿ ಕಳೆದ 6 ವರ್ಷ 8 ತಿಂಗಳ ಕಾಲ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜು ಯಲ್ಲಪ್ಪ ಭೋವಿ ಅವರು ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ವರ್ಗಾವಣೆಗೊಂಡಿರುವ ಹಿನ್ನೆಲೆ ನಗರದ ವಾರ್ತಾ ಭವನ ಕಚೇರಿಯಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ರಾಜು ಯಲ್ಲಪ್ಪ ಭೋವಿಗೆ ಶಾಲೂ, ಫಲ ತಾಂಬೂಲ ನೀಡಿ ಸನ್ಮಾನಿಸಲಾಯಿತು. ವಾರ್ತಾಧಿಕಾರಿ ಚಿನ್ನಸ್ವಾಮಿ ಅವರು ಮಾತನಾಡಿ ರಾಜು ಯಲ್ಲಪ್ಪ ಭೋವಿ ಅವರು ಪ್ರಥಮ ದರ್ಜೆ ಸಹಾಯಕರಾಗಿ ಕಚೇರಿ ಕೆಲಸ ನಿರ್ವಹಣೆ, ಸಭೆ-ಸಮಾರಂಭ ಹಾಗೂ ಚುನಾವಣಾ ಸಂದರ್ಭದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಥಮ ದರ್ಜೆ ಸಹಾಯಕರಾದ ರಾಜು ಯಲ್ಲಪ್ಪ ಭೋವಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಕಳೆದ 6 ವರ್ಷ 8 ತಿಂಗಳಿಂದ ಮಡಿಕೇರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆ ಹೊಂದಿದ್ದು, ಇಂದು ಬಿಡುಗಡೆ ಹೊಂದಿ ಹೋಗುತ್ತಿದ್ದೇನೆ.…

Read More

ಮಡಿಕೇರಿ ಜು.28 : ಪ್ರವಾಸಿತಾಣಗಳಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸದ ಪ್ರವಾಸಿಗರ ಮೇಲೆ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಎಚ್ಚರಿಕೆ ನೀಡಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನಲೆಯಲ್ಲಿ ಜಿಲ್ಲೆಯ ಬಹುತೇಕ ಜಲಾಶಯಗಳು, ಜಲಪಾತಗಳು, ನದಿಗಳು ಉಕ್ಕಿ ಹರಿಯುತ್ತಿವೆ, ಕಲ್ಲು ಬಂಡೆಗಳು ಜಾರುತ್ತಿವೆ. ಜಿಲ್ಲೆಯ ಪ್ರಕೃತಿ ಸೌಂದರ್ಯ ಮತ್ತಷ್ಟು ಹೆಚ್ಚಾಗಿದ್ದು, ಇವುಗಳನ್ನು ವಿಕ್ಷೀಸಲು ಬರುವಂತಹ ಸಾರ್ವಜನಿಕರು/ ಪ್ರವಾಸಿಗರು ಸೌಂದರ್ಯಕ್ಕೆ ಮನಸೋತು ಬಹಳ ಹತ್ತಿರದಿಂದ ಫೋಟೋ ಅಥವಾ ವಿಡಿಯೋ ತೆಗೆಯುವ, ರೀಲ್ಸ್ ಮಾಡುವ ಅನಗತ್ಯ ಸಾಹಸ ಮಾಡದಿರಿ, ಪ್ರವಾಸಿಗರು ಮತ್ತು ಸ್ಥಳೀಯರು ಹೊಸ ಪ್ರದೇಶದಲ್ಲಿ ಅಲ್ಲಿನ ಪರಿಸರದ ಬಗ್ಗೆ ಅರಿವಿರುವುದಿಲ್ಲ ಸ್ಥಳೀಯರ ಮಾತುಗಳನ್ನು ಗೌರವಿಸಿ, ಪ್ರವಾಸಿ ತಾಣಗಳಲ್ಲಿ ಅನುಸರಿಸಬೇಕಾದ ಕನಿಷ್ಠ ನಿಯಮಗಳ ಅನುಸರಿಸಿ, ಅಲ್ಲದೇ ಪ್ರವಾಸೋದ್ಯಮ ಇಲಾಖೆಯಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ದೇಶಿಯ ಹಾಗೂ ವಿದೇಶಿಯ ಪ್ರವಾಸಿಗರಿಗೆ, ಸೂಕ್ತ ಸುರಕ್ಷತೆ ಮತ್ತು ಭದ್ರತೆಯನ್ನು ಕಲ್ಪಿಸುವ ದೃಷ್ಟಿಯಿಂದ ಪ್ರವಾಸಿ ಮಿತ್ರರನ್ನೂ…

Read More