ಲೇಖಕ: admin

ಮಡಿಕೇರಿ ಜು.30 : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ), ಸಂಘದ ಕ್ರೀಡಾ ಸಮಿತಿ ಹಾಗೂ ಕೊಡಗು ಪ್ರೆಸ್‌ಕ್ಲಬ್ ಬೆಳ್ಳಿಮಹೋತ್ಸವ ಕ್ರೀಡಾ ಸಮಿತಿ ಆಶ್ರಯದಲ್ಲಿ ಇದೇ ಆಗಸ್ಟ್ 5ರಂದು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗಾಗಿ ಒಳಾಂಗಣ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಚೆಸ್, ಟೇಬಲ್ ಟೆನ್ನಿಸ್, ಕೇರಂ ಮತ್ತು ಮೈಂಡ್ ಗೇಮ್ ಸ್ಪರ್ಧೆಗಳು ನಡೆಯಲಿವೆ. ಟೇಬಲ್ ಟೆನಿಸ್‌ನಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಹಾಗೂ ಮಹಿಳೆಯರಿಗೆ ಸಿಂಗಲ್ಸ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಟೇಬಲ್ ಟೆನಿಸ್ ಮತ್ತು ಕೇರಂ ಡಬಲ್ಸ್ಗೆ ಸ್ಪರ್ಧಿಗಳೇ ಜೋಡಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಪ್ರವೇಶ ಶುಲ್ಕ 100 ರೂ. ನಿಗದಿಪಡಿಸಲಾಗಿದ್ದು, ಹೆಸರು ನೋಂದಾವಣೆಗೆ ಕೊನೇ ದಿನ ಆಗಸ್ಟ್ 01, ಸಂಜೆ 5 ಗಂಟೆ. ಸ್ಪರ್ಧಿಗಳು ನವೀನ್ ಸುವರ್ಣ (9880191566) ಅವರಲ್ಲಿ ಹೆಸರು ನೋಂದಾಯಿಸಿಕೊಂಡು, ಅದೇ ಮೊಬೈಲ್ ಸಂಖ್ಯೆಗೆ ಪ್ರವೇಶ ಶುಲ್ಕದ ಹಣವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು ಎಂದು, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕ್ರೀಡಾ ಸಮಿತಿ ಸಂಚಾಲಕ ಮಂಜು ಸುವರ್ಣ…

Read More

ಮಡಿಕೇರಿ ಜು.30 : ಸುಮಾರು 20 ವರ್ಷದ ಗಂಡು ಕಾಡಾನೆಯೊಂದು ತೋಟದಲ್ಲಿ ಸತ್ತು ಬಿದ್ದಿರುವ ಘಟನೆ ಸುಂಟಿಕೊಪ್ಪ ಹೋಬಳಿಯ ಕಂಬಿಬಾಣೆ ಗ್ರಾಮದ ಪರ್ಚಿಕೆರೆ ಎಂಬಲ್ಲಿ ಬೆಳಕಿಗೆ ಬಂದಿದೆ. ಶುಕ್ರವಾರ ರಾತ್ರಿಯೇ ಈ ಘಟನೆ ನಡೆದಿದ್ದು, ತಡವಾಗಿ ಕಾಡಾನೆಯ ದೇಹ ಗೋಚರಿಸಿದೆ. ವಿದ್ಯುತ್ ಸ್ಪರ್ಷದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆಯಾದರೂ ಬೇಲಿಗೆ ಬಳಸುವ ಮುಳ್ಳು ತಂತಿಯ ಉರುಳು ಕುತ್ತಿಗೆಯಲ್ಲಿರುವುದು ಕಂಡು ಬಂದಿದೆ. ಅರಣ್ಯ ಇಲಾಖೆ ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ. ಸ್ಥಳಕ್ಕೆ ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಂ, ಡಿಸಿಎಫ್ ಪೂವಯ್ಯ, ಪೊಲೀಸ್ ಶ್ವಾನದಳ, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡರು. ಪಶುವೈದ್ಯ ಡಾ.ಚಿಟ್ಟಿಯಪ್ಪ ಅವರು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

Read More

ಮಡಿಕೇರಿ ಜು.30 : ನಿಷೇಧಿತ ಮಾದಕ ವಸ್ತುಗಳ ಸರಬರಾಜು ಮತ್ತು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಕೊಡಗು ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದಿದ್ದಾರೆ. ಕೊಟ್ಟಮುಡಿ ನಿವಾಸಿ ರಿಜ್ವಾನ್ ಎಂ.ಎ(26) ಬಂಧಿತ ಆರೋಪಿಯಾಗಿದ್ದಾನೆ. ಮಡಿಕೇರಿ ಉಪವಿಭಾಗದ ಡಿವೈಎಸ್‌ಪಿ ಜಗದೀಶ್ ಎಂ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಉಮೇಶ್ ಯು, ಪಿಎಸ್‌ಐ ವಾಣಿಶ್ರೀ ಬಿ.ಎಸ್, ಸಿಬ್ಬಂದಿಗಳು ಹಾಗೂ ಡಿಸಿಆರ್‌ಬಿ ಅವರುಗಳನ್ನೊಳಗೊಂಡ ವಿಶೇಷ ತಂಡ ತನಿಖೆ ಕೈಗೊಂಡು ಬೆಂಗಳೂರು ದಾಸರಹಳ್ಳಿಯಲ್ಲಿ ಆರೋಪಿಯನ್ನು ಬಂಧಿಸಿತು. ಪೊಲೀಸರ ದಕ್ಷ ಕಾರ್ಯಾಚರಣೆ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮಾದಕ ವಸ್ತುಗಳನ್ನು ಬಳಸುವ ಮತ್ತು ಮಾರಾಟ ಮಾಡುವ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಕೆ.ಎಸ್.ಪಿ ತಂತ್ರಾಂಶ/ಆಪ್‌ನ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಮನವಿ ಮಾಡಿದ್ದಾರೆ.

Read More

ಮಡಿಕೇರಿ ಜು.30 : ನಗರದ ಶ್ರೀಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿಯ 48 ನೇ ವರ್ಷದ ದಸರಾ ಉತ್ಸವದ ದಸರಾ ಸಮಿತಿಯ ಅಧ್ಯಕ್ಷರಾಗಿ ಪ್ರಭು ರೈ ಹಾಗೂ ರಾಜಾ ಸುಬ್ಬಯ್ಯ ಆಯ್ಕೆಯಾಗಿದ್ದಾರೆ.

Read More

ಮಡಿಕೇರಿ ಜು.30 : ನಗರದ ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯ 61ನೇ ವರ್ಷದ ದಸರಾ ಸಮಿತಿಯ ಅಧ್ಯಕ್ಷರಾಗಿ ವಿಶಾಕ್ ರಮೇಶ್, ಉಪಾಧ್ಯಕ್ಷರಾಗಿ ದೇವಿಪ್ರಸಾದ್ ಅಮೆಮನೆ ಹಾಗೂ ಗಣೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.

Read More

ಮಡಿಕೇರಿ ಜು.29 : ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಶನಿವಾರ ಮಾದಾಪುರ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದರು. ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಸ್ಥಳೀಯರ ಸಮಸ್ಯೆಗಳಿಗೆ ಸರಕಾರ ಮಟ್ಟದಲ್ಲಿ ಆಗಬೇಕಾದ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು. ನಂದಿಮೊಟ್ಟೆ ಕಿರುದಾಳೆ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾದ ಮನೆಗಳು ಮತ್ತು ನಂದಿಮೊಟ್ಟೆ ಗ್ರಾಮದ ಕುಸಿದ ಸೇತುವೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಹರದೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಸಭೆ ನಡೆಸಿ ಅಹವಾಲುಗಳನ್ನು ಸ್ವೀಕರಿಸಿದರು. ಈ ಸಂದರ್ಭ ಪ್ರಮುಖರಾದ ಕೆ.ಎಂ.ಲೋಕೇಶ್, ಬಿ.ಬಿ.ಸತೀಶ್, ಕೆ.ಎ.ಯಾಕುಬ್, ಎಸ್.ಎಂ.ಚAಗಪ್ಪ, ಮಾದಾಪುರ ವಲಯದ ಪ್ರಮುಖರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಮಡಿಕೇರಿ ಜು.29 : ಮಡಿಕೇರಿ ತಾಲ್ಲೂಕಿನ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳ ಪಡುವ ಚೇಲಾವರ ಗ್ರಾಮದಲ್ಲಿ ಬಂಡೆಗಲ್ಲುಗಳ ಮೇಲಿನಿಂದ ಸುಮಾರು 100 ಅಡಿ ಎತ್ತರದಿಂದ ಹಾಲ್ನೊರೆಯಂತೆ ದುಮುಕುವ ಚೇಲಾವರ ಜಲಪಾತದ ಸೊಬಗನ್ನು ನೋಡುವುದೇ ವಿಸ್ಮಯ. ಚೋಮಾ ಕುಂದು ಹಾಗೂ ಕಬ್ಬೆ ಬೆಟ್ಟದಿಂದ ಉಗಮವಾಗುವ ಜಲಮೂಲದಿಂದ ಚೇಲಾವರ ಜಲಪಾತ ಉಂಟಾಗಿದೆ. ಸಾಮಾನ್ಯವಾಗಿ ಅಲ್ಲಿನ ನಿವಾಸಿಗಳು ಈ ಜಲಪಾತವನ್ನು “ಏಮೆಪಾರೆ” ಎಂದು ಕರೆಯುತ್ತಾರೆ. ಕಳೆದ ಎರಡು ವಾರಗಳಿಂದ ಸುರಿದ ಮಳೆಯಿಂದ ಚೇಲಾವರ ಜಲಕನ್ಯೆ ಮನ ಮೋಹಕವಾಗಿದೆ. ಮಡಿಕೇರಿಯಿಂದ 37 ಕಿ.ಮೀ ಮತ್ತು ವಿರಾಜಪೇಟೆಯಿಂದ 26 ಕಿ.ಮೀ. ದೂರದಲ್ಲಿ ಜಲಪಾತವಿದೆ. ಚೆಯ್ಯಂಡಾಣೆಗೆ ತೆರಳಿ ಅಲ್ಲಿಂದ ಕವಲು ಹಾದಿಯಲ್ಲಿ 5 ಕಿ.ಮೀ. ದೂರಕ್ಕೆ ಸಾಗಿದರೆ ನಿಸರ್ಗದ ನಡುವೆ ಇರುವ ಅಪೂರ್ವ ಜಲಧಾರೆಯ ಸೊಬಗನ್ನು ಸವಿಯಬಹುದು. (ಅಶೋಕ್ _ಮಡಿಕೇರಿ)

Read More

ಮಡಿಕೇರಿ ಜು.29 : ಪಟ್ಟಣ ಸಹಕಾರ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಎಸ್.ಸಿ.ಸತೀಶ್ ಅವರು ನಗರಸಭೆ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆ ಬ್ಯಾಂಕಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಅಧ್ಯಕ್ಷ ಸಿ.ಕೆ.ಬಾಲಕೃಷ್ಣ, ಉಪಾಧ್ಯಕ್ಷ ಬಿ.ಎಂ.ರಾಜೇಶ್, ನಿರ್ದೇಶಕರುಗಳಾದ ಬಿ.ವೈ.ರಾಜೇಶ್, ಬಿ.ಕೆ.ಜಗದೀಶ್, ಕಾವೇರಮ್ಮ ಸೋಮಣ್ಣ, ಕನ್ನಂಡ ಸಂಪತ್, ಬಿ.ಪಿ.ಮಾಚಮ್ಮ, ಆರ್.ಗಿರೀಶ್, ಬಿ.ವಿ.ರೋಷನ್, ಕೆ.ಆರ್.ನಾಗೇಶ್, ಸುಮಂತ್ ಪಾಲಾಕ್ಷ, ಎ.ಗೋಪಾಲಕೃಷ್ಣ, ವ್ಯವಸ್ಥಾಪಕರಾದ ಕೆ.ಪದ್ಮಾಭ ಕಿಣಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ವಿರಾಜಪೇಟೆ  ಜು.29 :  ವಿರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್ ನಿ. ಚುನಾವಣೆಯು ತಿಂಗಳ ಅಂತ್ಯ ದಿನದಂದು ನಡೆಯಲಿದ್ದು, ಬ್ಯಾಂಕ್ ನ ಸರ್ವತೋಮುಖ ಬೆಳವಣಿಗೆಗೆ ತಂಡದ ಸದಸ್ಯರಿಗೆ ಮತದಾರರು ಮತ ಚಲಾವಣೆ ಮಾಡುವಂತೆ ಅಭ್ಯರ್ಥಿಗಳು  ಮನವಿ ಮಾಡಿದರು. ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರ ಭವನದಲ್ಲಿ  ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಟ್ಟಣ ಸಹಕಾರ ಬ್ಯಾಂಕ್ ನ ಚುನಾವಣೆ ಅಭ್ಯರ್ಥಿಗಳು,  ಬ್ಯಾಂಕ್ ಚುನಾವಣೆ ಗೆ ಅರ್ಹ ಮತದಾರರಿಂದ ಮತ ಚಲಾವಣೆ ಮಾಡಲು ಮನವಿ ಮಾಡಿದರು. ಅಭ್ಯರ್ಥಿ ಪಟ್ಟಡ ರಂಜಿ ಪೂಣಚ್ಚ  ಮಾತನಾಡಿ,   ಸುಮಾರು 20 ವರ್ಷಗಳಿಂದ ಯಾವುದೇ ಚುನಾವಣೆ ನಡೆಯದೆ ಅವಿರೋಧವಾಗಿ ಬ್ಯಾಂಕ್‌ ನ ಆಡಳಿತ ಮಂಡಳಿ ಯ ಸದಸ್ಯ ರ ಆಯ್ಕೆ ನಡೆದಿದೆ. ಬ್ಯಾಂಕ್ ನ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಪಾರದರ್ಶಕ ಆಡಳಿತ ನೀಡಬೇಕು, ಅಲ್ಲದೆ ಗ್ರಾಹಕರ ಕೈಗೆಟುಕುವ ಕಡಿಮೆ ಬಡ್ಡಿಯಲ್ಲಿ ಸಾಲ ದೊರಬೇಕು, ಗ್ರಾಹಕ ರಿಗೆ ತ್ವರಿತ ವಾಗಿ ವಿವಿದ ಕ್ಷೇತ್ರಕ್ಕೆ ಅನುಗುಣವಾಗಿ ಕಡಿಮೆ ಅವದಿಯಲ್ಲಿ ಸಾಲ ದೊರಕುವಂತೆ ಮಾಡುವುದು ತಂಡದ…

Read More

ಮಡಿಕೇರಿ ಜು.29 : ಉಡುಪಿಯ ಕಾಲೇಜೊಂದರ ಶೌಚಾಲಯದಲ್ಲಿ ಹಿಂದೂ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡು ನಡೆದ ವಿಡಿಯೋ ಚಿತ್ರೀಕರಣ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅನಿತಾ ಪೂವಯ್ಯ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ವಿದ್ಯಾ ದೇಗುಲದಂತಿರುವ ಕಾಲೇಜ್ ನಲ್ಲಿ ವಿದ್ಯಾರ್ಥಿನಿಯರಿಗೆ ಮುಜುಗರ ಉಂಟು ಮಾಡಿದ ಈ ಪ್ರಕರಣ ಅತ್ಯಂತ ಅಮಾನವೀಯ ಮತ್ತು ಖಂಡನೀಯವೆoದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದೂ ವಿದ್ಯಾರ್ಥಿನಿಯರನ್ನೇ ಗುರಿಯಾಗಿಸಿಕೊಂಡು ಶೌಚಾಲಯದಲ್ಲಿ ಚಿತ್ರೀಕರಣ ಮಾಡಿರುವುದನ್ನು ಗಮನಿಸಿದರೆ ಆರೋಪಿಗಳ ಹಿಂದೆ ದುಷ್ಟಶಕ್ತಿಗಳು ಕೆಲಸ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ರಾಜ್ಯದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರೊಬ್ಬರು ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಿದ್ದಾರೆ, ಅಲ್ಲದೆ ಮಕ್ಕಳಾಟವೆಂದು ಬಾಲಿಶ ಹೇಳಿಕೆ ನೀಡಿದ್ದಾರೆ. ಇವರ ಹೇಳಿಕೆಯನ್ನು ಗಮನಿಸಿದರೆ ಆರೋಪಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದ್ದಾರೆ. ಆರೋಪಿಗಳ ಹಿಂದಿರುವ ಮತಾಂಧ ಶಕ್ತಿಗಳ ವಿರುದ್ಧ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿ ಕಠಿಣ ಕ್ರಮ…

Read More