ಲೇಖಕ: admin

ಮಡಿಕೇರಿ ಜು.27 : ಪ್ರಸಕ್ತ (2023-24) ಸಾಲಿಗೆ ಕೊಡಗು ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ/ ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 2ಬಿ, 3ಎ ಹಾಗೂ 3ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಇತರೆ ಜನಾಂಗಗಳಿಗೆ ಸೇರಿದ ಸಾಮಾನ್ಯ ಪದವಿ ಕೋರ್ಸಿನ ಅರ್ಹ ವಿದ್ಯಾರ್ಥಿಗಳಿಂದ ಪ್ರವೇಶಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 16 ಕೊನೆ ದಿನಾಂಕವಾಗಿದೆ. ಅರ್ಜಿ ಸಲ್ಲಿಸಬೇಕಾದ ವೆಬ್‍ಸೈಟ್ ವಿಳಾಸ: https://.shp.karnataka.gov.in  ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯ ಮಿತಿ:- ಪ್ರವರ್ಗ-1, ಎಸ್.ಸಿ ಮತ್ತು ಎಸ್.ಟಿ. ರೂ.2.50 ಲಕ್ಷ, ಪ್ರವರ್ಗ-2ಎ, 2ಬಿ, 3ಎ, 3ಬಿ, ಇತರೆ ಹಿಂದುಳಿದ ವರ್ಗ ರೂ.1 ಲಕ್ಷ ಆಗಿದೆ. ತಾಲ್ಲೂಕುವಾರು ವಿದ್ಯಾರ್ಥಿ ನಿಲಯಗಳ ವಿವರ, ವಿದ್ಯಾರ್ಥಿ ನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರ್ಕಾರದ ಆದೇಶಕ್ಕಾಗಿ ಇಲಾಖೆಯ ವೆಬ್‍ಸೈಟ್ https://.bcwd.karnataka.gov.in ನೋಡಬಹುದು. ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳಾದಲ್ಲಿ…

Read More

ನಾಪೋಕ್ಲು ಜೂ.27  :  ನಾಪೋಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೂರುಳಿ ಸುಭಾಷ್ ನಗರಕ್ಕೆ ತೆರಳುವ ರಸ್ತೆಯಲ್ಲಿರುವ ಅರಮನೆ ಪಾಲೆ ಅಪ್ಪು ಹಾಗೂ ಭೀಮಯ್ಯ ಎಂಬುವವರ ವಾಸದ ಮನೆಯ ಮೇಲೆ  ಮನೆಯ ಪಕ್ಕದಲ್ಲಿದ್ದ ಭಾರಿ ಗಾತ್ರದ ಮರ ಬಿದ್ದು ಮನೆಯ ಮೇಲ್ಚಾವಣಿಗೆ ಅಳವಡಿಸಿದ್ದ ಶೀಟ್ ಗಳಿಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ. ಗುರುವಾರ ಬೆಳಗ್ಗೆ ಭೀಮಯ್ಯ ಎಂಬುವವರು ಮಕ್ಕಳನ್ನು ಶಾಲೆಗೆ ಕಳುಹಿಸಲು ತಯಾರಿ ನಡೆಸುವ ಸಂದರ್ಭ ಮನೆಯ ಮೇಲೆ ಏಕಾಏಕಿ ಮರ ಬಿದ್ದಿದೆ.ಇದರಿಂದ ಗಾಬರಿಗೊಂಡ ಮನೆ ಮಂದಿ ಮನೆಯಿಂದ ಓಡಿ ಹೊರ ಹೋಗಿದ್ದಾರೆ.ಇದರಿಂದ ಯಾವುದೇ ಅನಾಹುತ ಸಂಭವಿಸದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲಕ್ಕಿಗೆ ಅಮೃತ, ಗ್ರಾ.ಪಂ  ಅಧ್ಯಕ್ಷೆ ಎಚ್.ಎಸ್ ಪಾರ್ವತಿ, ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾ.ಪಂ  ಸದಸ್ಯ ಪ್ರತೀಪ್ ಹಾಗೂ ಶಿವಾಚಾಳಿಯಂಡ ಜಗದೀಶ್ ಮನೆಯ ಮೇಲೆ ಬಿದ್ದ ಮರವನ್ನು ಯಂತ್ರೋಪಕರಣಗಳನ್ನು ಬಳಸಿ ತೆರವುಗೊಳಿಸಿದರು. ಬಳಿಕ ಮನೆಯೊಳಗೆ…

Read More

ಮಡಿಕೇರಿ ಜು.27 : ಕೊಡವ ಕುಟುಂಬಗಳ ನಡುವಿನ 23ನೇ ವರ್ಷದ `ಅಪ್ಪಚೆಟ್ಟೋಳಂಡ ಕಪ್ ಹಾಕಿ ಉತ್ಸವ-2023’ಕ್ಕೆ ಸರ್ಕಾರದ ಮೂಲಕ ಅನುದಾನ ಬಿಡುಗಡೆಗೊಳಿಸಲು ಸಹಕರಿಸಿದ ಮಾಜಿ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಸನ್ಮಾನಿಸಿ ಗೌರವಿಸಿದರು. ಕೆ.ಜಿ.ಬೋಪಯ್ಯ ಅವರ ನಿವಾಸಕ್ಕೆ ಭೇಟಿ ಮಾಡಿ ಸನ್ಮಾನಿಸಿದ ಕುಟುಂಬದ ಪ್ರಮುಖರು, ಅನುದಾನ ಬಿಡುಗಡೆಗೆ ಸಹಕಾರ ನೀಡಿದಕ್ಕೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ಕುಟುಂಬಸ್ಥರು ಹಾಗೂ ಹಾಕಿ ಉತ್ಸವ ಸಮಿತಿಯ ಸಂಚಾಲಕ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಉಪಾಧ್ಯಕ್ಷ ರಾಜ ಭೀಮಯ್ಯ, ಸದಸ್ಯರಾದ ಶಾಮ್ ಕಾಳಯ್ಯ, ಡಾಲಿ ಬೋಪಯ್ಯ, ರವಿ ಮೊಣ್ಣಪ್ಪ, ಪೂದೇವಯ್ಯ, ಎ.ಕೆ.ಸೋಮಯ್ಯ, ಎ.ಕೆ.ತಿಮ್ಮಯ್ಯ, ಎ.ಕೆ.ಜೋಯಪ್ಪ, ಎ.ಇ.ಜನತ್ ಕುಮಾರ್, ಎ.ಬಿ.ವಸಂತ್ ಮುತ್ತಪ್ಪ, ಎ.ಬಿ.ಉದಯ ನಾಚಪ್ಪ ಹಾಜರಿದ್ದರು.

Read More

ಮಡಿಕೇರಿ ಜು.27 : ಹಾಕಿ ಕ್ರೀಡಾ ಚಟುವಟಿಕೆಗಳ ಕೇಂದ್ರ ಸ್ಥಾನವಾಗಿರುವ ನಾಪೋಕ್ಲುವಿನಲ್ಲಿ ಯುವ ಪ್ರತಿಭೆಗಳಿಗೆ ಅನುಕೂಲವಾಗುವಂತೆ ಕ್ರೀಡಾ ಶಾಲೆ ಮತ್ತು ಆಸ್ಟ್ರೋ ಟರ್ಫ್ ಮೈದಾನ ನಿರ್ಮಿಸಬೇಕೆಂದು ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಸರ್ಕಾರವನ್ನು ಆಗ್ರಹಿಸಿದರು. ನಾಪೋಕ್ಲುವಿನಲ್ಲಿ ಇಲ್ಲಿಯವರೆಗೆ ನಾಲ್ಕು ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗಳು ನಡೆದಿದ್ದು, ಮುಂಬರುವ ವರ್ಷಗಳಲ್ಲಿ ಇನ್ನೂ ಕೆಲ ಕುಟುಂಬಗಳಿಂದ ಪಂದ್ಯಾವಳಿ ನಡೆಯಲಿದೆ. ಹಾಕಿ ಕ್ರೀಡೆಯ ಬಗ್ಗೆ ಹೆಚ್ಚಿನ ಆಸಕ್ತಿ ಕಂಡು ಬರುವ ಈ ವಿಭಾಗದಲ್ಲಿ ಕ್ರೀಡಾ ಶಾಲೆ, ಆಸ್ಟ್ರೋ ಟರ್ಫ್ ಸೌಲಭ್ಯ ಒದಗಿಸಿದಲ್ಲಿ, ರಾಷ್ಟ್ರೀಯ ತಂಡವನ್ನು ಮತ್ತಷ್ಟು ಯುವ ಪ್ರತಿಭೆಗಳು ಪ್ರತಿನಿಧಿಸಲು ಅವಕಾಶ ದೊರಕಿದಂತಾಗುತ್ತದೆ ಎಂದರು.

Read More

ಮಡಿಕೇರಿ ಜು.27 : ‘ಹಾಕಿ’ ಪ್ರತಿಭೆಗಳಿಗೆ ಉತ್ತೇಜನವನ್ನು ನೀಡುವ ನಿಟ್ಟಿನಲ್ಲಿ ನಾಪೋಕ್ಲುವಿನಲ್ಲಿ ಆಯೋಜಿತವಾಗಿದ್ದ ‘ಅಪ್ಪಚೆಟ್ಟೋಳಂಡ ಕಪ್ ಹಾಕಿ ಉತ್ಸವ’ಕ್ಕೆ ಸರ್ಕಾರದಿಂದ 1 ಕೋಟಿ ಅನುದಾನ ಬಿಡುಗಡೆಯಾಗಿರುವುದಾಗಿ ಉತ್ಸವ ಸಮಿತಿಯ ಸಂಚಾಲಕರಾದ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲಾ ಯುವ ಸಬಲೀಕರಣ ಇಲಾಖೆಯಿಂದ ಕೋಟಿ ಅನುದಾನದ ಚೆಕ್ ಇದೇ ಜು.18 ರಂದು ಉತ್ಸವ ಸಮಿತಿಗೆ ದೊರಕಿದೆ. ಮುಂಬರುವ ವರ್ಷಗಳಲ್ಲಿ ನಡೆಯುವ ಕೊಡವ ಕೌಟುಂಬಿಕ ಹಾಕಿ ಉತ್ಸವಕ್ಕು ಇದೇ ರೀತಿ ರಾಜ್ಯದ ನೂತನ ಸರ್ಕಾರ ಅನುದಾನವನ್ನು ಒದಗಿಸಬೇಕೆಂದು ಮನವಿ ಮಾಡಿದರು. ನಾಪೋಕ್ಲುವಿನಲ್ಲಿ ಪ್ರಸಕ್ತ ಸಾಲಿನ ಮಾ.18ರಿಂದ ಒಂದು ತಿಂಗಳ ಕಾಲ ಆಯೋಜಿತ ಹಾಕಿ ಉತ್ಸವಕ್ಕೆ ಒಂದು ಕೋಟಿ ಅನುದಾನವನ್ನು ದೊರಕಿಸಿಕೊಡುವಲ್ಲಿ ಹಿಂದಿನ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಸಾಕಷ್ಟು ಶ್ರಮಿಸಿದ್ದಾರೆ ಮತ್ತು ಇವರ ಪ್ರಯತ್ನಗಳಿಗೆ ಅಂದಿನ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೂರಕ ಸ್ಪಂದನವನ್ನು ನೀಡಿದ್ದರು. ಇದರ ಫಲಶ್ರುತಿಯಾಗಿ ಇದೀಗ…

Read More

ಮಡಿಕೇರಿ ಜು.27 : ಮಾಯಮುಡಿ ಗ್ರಾ.ಪಂ ನ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಾಯಮುಡಿ ಗ್ರಾ.ಪಂ ಗೆ ನಾಲ್ಕು ಬಾರಿ ಮಾಯಮುಡಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಟಾಟು ಮೊಣ್ಣಪ್ಪ ಮೊದಲ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದರು. ಒಂದು ಅವಧಿಗೆ ಕಿರುಗೂರು ಕ್ಷೇತ್ರದಿಂದ ವಿರಾಜಪೇಟೆ ತಾಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದರು. ಉಪಾಧ್ಯಕ್ಷರಾಗಿ ಮಾಯಮುಡಿ ಗ್ರಾ.ಪಂ ಗೆ ಎರಡು ಬಾರಿ ಆಯ್ಕೆಯಾಗಿದ್ದ ಪಿ.ಎಸ್.ಶಾಂತ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಮೀನುಗಾರಿಕೆ ಇಲಾಖೆಯ ನಿರ್ದೇಶಕ ಸಚಿನ್ ಕಾರ್ಯನಿರ್ವಹಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ, ನಿರ್ಗಮಿತ ಅಧ್ಯಕ್ಷರಾದ ಎಂ.ಪಿ.ಮೀನಾ, ಉಪಾಧ್ಯಕ್ಷರಾದ ಕೆ.ವಿ.ಸುಮಿತ್ರ, ಸದಸ್ಯರುಗಳಾದ ಆಪಟ್ಟೀರ ವಿಠಲ ನಾಚಯ್ಯ, ಟಿ.ಸಿ.ನಾರಾಯಣ, ಕೆ.ಕೆ.ಶಭರಿಷ್, ವಲಯ ಕಾಂಗ್ರೆಸ್ ಅಧ್ಯಕ್ಷರಾರ ಸಿ.ಕೆ.ಚಿಣ್ಣಪ್ಪ, ಸಣ್ಣವಂಡ ಎಂ.ವಿಶ್ವನಾಥ್, ನಾಮೇರ ನರೇಶ್ ವಿಶ್ವನಾಥ್, ಆಪಟ್ಟೀರ ಅರುಣ, ಆಪಟ್ಟೀರ ಅಯ್ಯಪ್ಪ, ಸಿದ್ದಪ್ಪ, ಹೆಚ್.ಆರ್.ಸುಶೀಲ, ವಿನೋದ್ ಕುಮಾರ್ ಸೇರಿದಂತೆ ಹದಿನೈದು ಮಂದಿ ಗ್ರಾ.ಪಂ ಸದಸ್ಯರು ಹಾಜರಿದ್ದರು.

Read More

ಮಡಿಕೇರಿ ಜು.27 :  ಮಡಿಕೇರಿಯ ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ರೋಟರಿ ವುಡ್ಸ್ ಮತ್ತು ನೆಹರು ಯುವಕೇಂದ್ರದ ವತಿಯಿಂದ ವನಮಹೋತ್ಸವ ಆಚರಿಸಲಾಯಿತು. ತಿಮ್ಮಯ್ಯ ಸ್ಮಾರಕ ಭವನ ವ್ಯಾಪ್ತಿಯಲ್ಲಿ ಹತ್ತು ಸಸಿಗಳನ್ನು ನೆಡಲಾಯಿತು. ರೋಟರಿ ವುಡ್ಸ್ ಅಧ್ಯಕ್ಷ ಕೆ.ವಸಂತ್ ಕುಮಾರ್, ಕಾಯ೯ದಶಿ೯ ಕಿಗ್ಗಾಲು ಹರೀಶ್, ಸಹಾಯಕ ಗವನ೯ರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್, ಕ್ಲಬ್ ಖಜಾಂಜಿ ಧನಂಜಯ ಶಾಸ್ತ್ರಿ, ನೆಹರು ಯುವಕೇಂದ್ರದ ಸುಕುಮಾರ್, ದೀಪ್ತಿ, ರಂಜಿತ , ತಿಮ್ಮಯ್ಯ ಮ್ಯೂಸಿಯಂ ವ್ಯವಸ್ಥಾಪಕ ಗೌಡಂಡ ಸುಬೇದಾರ್ ಮೇಜರ್ ತಿಮ್ಮಯ್ಯ ಸೇರಿದಂತೆ ರೋಟರಿ ಸದಸ್ಯರು ಪಾಲ್ಗೊಂಡಿದ್ದರು.

Read More

ಮಡಿಕೇರಿ ಜು.27 : ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳು, ಇಂದಿನ ನೀರಿನ ಮಟ್ಟ 2853.61 ಅಡಿಗಳು. ಕಳೆದ ವರ್ಷ ಇದೇ ದಿನ 2856.46 ಅಡಿಗಳು. ಹಾರಂಗಿಯಲ್ಲಿ ಬಿದ್ದ ಮಳೆ 16.40 ಮಿ.ಮೀ., ಇಂದಿನ ನೀರಿನ ಒಳಹರಿವು 14267 ಕ್ಯುಸೆಕ್, ಕಳೆದ ವರ್ಷ ಇದೇ ದಿನ 2394 ಕ್ಯುಸೆಕ್, ಇಂದಿನ ನೀರಿನ ಹೊರ ಹರಿವು ನದಿಗೆ 13000 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 1841 ಕ್ಯುಸೆಕ್. ನಾಲೆಗೆ 20 ಕ್ಯುಸೆಕ್.

Read More

ಮಡಿಕೇರಿ ಜು.27 : ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 34.49 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 2.46 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1497.82 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1880.23 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 60.25 ಮಿ.ಮೀ. ಕಳೆದ ವರ್ಷ ಇದೇ ದಿನ 3.97 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2191.20 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 2639.55 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 15.90 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 1.66 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1113.68 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1485.86 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 27.33 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 1.76 ಮಿ.ಮೀ.…

Read More

ಮಡಿಕೇರಿ ಜು.27 : ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸೈನಿಕರಿಗೆ, ಮಾಜಿ ಸೈನಿಕರಿಗೆ ದೊರಕಬೇಕಾದ ಸೂಕ್ತ ಗೌರವ ಸಿಕ್ಕುತ್ತಿಲ್ಲ ಎಂಬ ನೋವು ಕಾಡುತ್ತದೆ ಎಂದು ವಿಷಾದಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಯುದ್ದಕಾಲದಲ್ಲಿ ಮಾತ್ರ ಸೈನಿಕರನ್ನು ಸ್ಮರಿಸುವ ಬದಲಿಗೆ ಸದಾ ದೇಶ ರಕ್ಷಣೆಯ ಪಣ ತೊಟ್ಟಿರುವ ಭಾರತೀಯ ಸೈನಿಕರನ್ನು ಸ್ಮರಿಸುವಂತಾಗಬೇಕು ಎಂದು ಕರೆ ನೀಡಿದರು. ಕಾಗಿ೯ಲ್ ವಿಜಯ ದಿನಾಚರಣೆ ಹಿನ್ನಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಬುಧವಾರ ಸಂಜೆ ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂನ ಅಮರ್ ಜವಾನ್ ಸ್ಮಾರಕದಲ್ಲಿ ಪುಪ್ಪನಮನ ಸಲ್ಲಿಸಿದ ಪೊನ್ನಣ್ಣ ತರುವಾಯ ಕಾಯ೯ಕ್ರಮದಲ್ಲಿ ಮಾತನಾಡಿ, ದೇಶದ ವೀರಇತಿಹಾಸದೊಂದಿಗೇ ಸೈನಿಕರ ಕೊಡುಗೆಯನ್ನೂ ಮರೆಯಬಾರದು ಎಂದರು. ಯೋಧರ ನಾಡು ಎನಿಸಿದ ಕೊಡಗಿನಲ್ಲಿ ಯೋಧಸ್ಮರಣೆಗೆ ಮತ್ತಷ್ಟು ಹೆಚ್ಚಿನ ಪ್ರಚಾರ ದೊರಕಬೇಕು ಎಂದು ಅಭಿಪ್ರಾಯಪಟ್ಟರು. ಭಾರತದ ಸಂರಕ್ಷಣೆಗೆ ಯೋಧರು ನೀಡಿರುವ ತ್ಯಾಗಬಲಿದಾನವನ್ನು ಎಂದಿಗೂ ಮರೆಯಬಾರದು. ಇತಿಹಾಸದಲ್ಲಿ ಸೈನಿಕರು ದೇಶರಕ್ಷಣೆ ನಿಟ್ಟಿನಲ್ಲಿ ಮಾಡಿದ ಪರಾಕ್ರಮವನ್ನು ಸದಾ ಸ್ಮರಿಸಬೇಕು. ಇತಿಹಾಸ ಮರೆತದ್ದೇ ಆದರೆ ಯಾರೂ ಹೊಸ…

Read More