ಲೇಖಕ: admin

ಮಡಿಕೇರಿ ಜು.27 : ವನ್ಯಜೀವಿಗಳ ಅಂಗಾoಗ ಮತ್ತು ಬೇಟೆಗೆ ಬಳಸುವ ಆಯುಧಗಳನ್ನು ಹೊಂದಿದ್ದ ಆರೋಪಿಯನ್ನು ಹನೂರು ತಾಲ್ಲೂಕಿನ ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಹನೂರು ತಾಲ್ಲೂಕಿನ ಜಲ್ಲಿಪಾಳ್ಯ ಗ್ರಾಮದ ನಿವಾಸಿ ಚಿನ್ನತಂಬಿ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಖಚಿತ ಮಾಹಿತಿಯ ಹಿನ್ನೆಲೆ ಈತನ ಮನೆಯ ಮೇಲೆ ದಾಳಿ ಮಾಡಿದ ಅರಣ್ಯ ಸಿಬ್ಬಂದಿಗಳು ಚಿಪ್ಪುಹಂದಿಯ ಚಿಪ್ಪುಗಳು, ಉಗುರುಗಳು, ಒಂದು ಚುಕ್ಕೆ ಜಿಂಕೆಯ ಕೊಂಬು, ಒಂದು ಕಸಾಪ್ ಕತ್ತಿ, 4 ಉರುಳುಗಳು ಮತ್ತು ಒಂದು ಚಾಕನ್ನು ವಶಪಡಿಸಿಕೊಂಡಿದ್ದಾರೆ.

Read More

ಮಡಿಕೇರಿ ಜು.27 : ಕಾರ್ಗಿಲ್ ದಿವಸ್ ಅಂಗವಾಗಿ ಮಾಜಿ ಸೈನಿಕ ಹಾಗೂ ಶಿವು ಸೈನಿಕ್ ಅಕಾಡೆಮಿ ವತಿಯಿಂದ ಪಿರಿಯಾಪಟ್ಟಣದಲ್ಲಿ ಬೈಕ್ ರ‍್ಯಾಲಿ ನಡೆಯಿತು.ರ‍್ಯಾಲಿಯನ್ನು ಉದ್ಘಾಟಿಸಿ ಮಾತನಾಡಿದ ಸೈನಿಕ್ ಅಕಾಡೆಮಿ ಅಧ್ಯಕ್ಷ ರಾವಂದೂರು ಶಿವು ಕಾರ್ಗಿಲ್ ಯುದ್ಧದಲ್ಲಿ ಸುಮಾರು 47 ಯೋಧರು ಹುತಾತ್ಮರಾಗುವ ಮೂಲಕ ನಮ್ಮ ದೇಶವನ್ನು ರಕ್ಷಿಸಿದ್ದಾರೆ. ಗಡಿಯಲ್ಲಿ ದೇಶ ಕಾಯುತ್ತಿರುವ ಪ್ರತಿಯೊಬ್ಬ ಸೈನಿಕನಿಗೂ ಗೌರವ ಅರ್ಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಾತಿ, ಮತ ಮತ್ತು ಧರ್ಮಗಳ ಹೆಸರಿನಲ್ಲಿ ಕಲಹ ನಡೆಸದೆ ಒಗ್ಗಟ್ಟನಿಂದ ದೇಶವನ್ನು ಕಟ್ಟಬೇಕು. ದೇಶ ಮತ್ತು ದೇಶದ ಕಾನೂನಿಗೆ ಗೌರವ ನೀಡಬೇಕು ಎಂದು ಕರೆ ನೀಡಿದರು. ಅಕಾಡಮಿ ಉಪಾಧ್ಯಕ್ಷ ಸ್ವಾಮಿ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ.ಜೆ.ಅಶೋಕ್, ಮುಖಂಡ ಎಲೆ ಮಂಜು, ಮಾಜಿ ಸೈನಿಕರಾದ ಮಲ್ಲಯ್ಯ, ಮಂಜುನಾಥ್, ಜವರೇಗೌಡ ವಿದ್ಯಾರ್ಥಿಗಳಾದ ಕಿಶೋರ್, ಪ್ರಜ್ವಲ್, ಆದರ್ಶ್, ಮನೋಜ್, ಕಿರಣ್, ಸಂತೋಷ್, ಸುಮಂತ್, ಚಂದನ್ ಸೇರಿದಂತೆ ಮತ್ತಿತರರು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು.

Read More

ಮಡಿಕೇರಿ ಜು. 27 :  ಮಕ್ಕಳು ಹದಿಹರೆಯದ ವಯಸ್ಸಿನಲ್ಲಿ ಮನಸ್ಸಿನ ಸ್ವ ನಿಯಂತ್ರಣದೊಂದಿಗೆ ಕಠಿಣ ಪರಿಶ್ರಮದ ಮೂಲಕ ಗುರಿ ತಲುಪಬೇಕೆಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಕರೆ ನೀಡಿದ್ದಾರೆ. ನ್ಬಹುದೆಂದು ಕಿವಿ ಮಾತು ಹೇಳಿದರು.ಯುವ ಜನಾಂಗ ಮಾದಕ ವಸ್ತುಗಳ ಸೇವನೆ ಯಿಂದ ಮುಕ್ತ ರಾಗಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದರು. ಮಾದಾಪುರದ ಶ್ರೀಮತಿ ಡಿ ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕೆ.ರಾಮರಾಜನ್ ಯುವ ಜನಾಂಗ ಮಾದಕ ವಸ್ತುಗಳ ಸೇವನೆ ಯಿಂದ ಮುಕ್ತ ರಾಗಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಕರೆ ನೀಡಿದರಲ್ಲದೇ, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಎದುರಿಸ ಬಹುದಾದ ಸಮಸ್ಯೆ ಗಳು ಹಾಗೂ ಅವುಗಳನ್ನು ಹೇಗೆ ಮೆಟ್ಟಿ ನಿಂತು ಮುಂದೆ ಬರಬಹುದು ಎಂಬುದನ್ನು ತನ್ನ ಸ್ವಂತ ಅನುಭವದ ಮೂಲಕ ತಿಳಿಸಿದರು. ವಿದ್ಯಾರ್ಥಿಗೆ ಭವಿಷ್ಯದ ಗುರಿ ಉದ್ದೇಶ ಸ್ಪಷ್ಟ ವಾಗಿದ್ದು ನಿರಂತರ ಪ್ರಯತ್ನದಿಂದ ಯಶಸ್ಸು ಸಾಧಿಸಬಹುದು ಎನ್ನುವುದಕ್ಕೆ ತಮ್ಮ ಜೀವನದ ಹಾಗೂ ಅವರ ಸಹಪಾಠಿಗಳ…

Read More

ಮಡಿಕೇರಿ ಜು.27 : ಕೊಡಗು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಮತ್ತು ಪ್ರವಾಹದ ಪರಿಸ್ಥಿತಿಯಿಂದ ಕಾಫಿ ತೋಟಗಳು ಹಾನಿಗೀಡಾಗಿವೆ. ಕಾಫಿಗೆ ಕೊಳೆ ರೋಗ ತಗುಲಿದ್ದು, ಕಾಫಿ ಉದುರುತ್ತಿದೆ, ರೋಬಸ್ಟಾ ಕಾಫಿಗೆ ಹೆಚ್ಚು ಹಾನಿಯಾಗಿದೆ. ಬೆಳೆಗಾರರು ನಷ್ಟದ ಆತಂಕವನ್ನು ಎದುರಿಸುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಮನು ಸೋಮಯ್ಯ ಒತ್ತಾಯಿಸಿದ್ದಾರೆ. ರೈತ ಸಂಘ ನಡೆಸಿದ ಸಮೀಕ್ಷೆ ಪ್ರಕಾರ ಶೇ.50 ರಷ್ಟು ಬೆಳೆ ನಷ್ಟವಾಗಿದೆ. ಜಿಲ್ಲಾಡಳಿತ ತಕ್ಷಣ ಬೆಳೆಹಾನಿ ಸಮೀಕ್ಷೆಗೆ ಆದೇಶಿಸಬೇಕು ಮತ್ತು ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಮೂಲಕ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Read More

ಮಡಿಕೇರಿ ಜು.27 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ‌ ಶಾಸಕ ಹಾಗೂ ಮುಖ್ಯಮಂತ್ರಿ ಅವರ ಕಾನೂನು‌ ಸಲಹೆಗಾರ ಎ.ಎಸ್.ಪೊನ್ನಣ್ಣ ಅವರ ನೂತನ ಕಚೇರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ  ಎನ್.ಎಸ್.ಭೋಸರಾಜು  ಉದ್ಘಾಟಿಸಿದರು. ನಗರದ ಜಿಲ್ಲಾಡಳಿತ ಭವನ ಒಂದನೇ ಮಹಡಿಯಲ್ಲಿ ನೂತನವಾಗಿ ಆರಂಭವಾಗಿರುವ ಕಚೇರಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಸೇರಿದಂತೆ ಮತ್ತಿರರು ಕಾರ್ಯಕರ್ತರು ಹಾಜರಿದ್ದರು.  

Read More

ಚೆಯ್ಯಂಡಾಣೆ ಜು.27 :  ಮಳೆ ಗಾಳಿಗೆ ನರಿಯಂದಡ ಗ್ರಾಮದ ಎಡಪಾಲದ  ಕೆ.ಎ.ಜುನೈದ್  ಎಂಬುವವರ ಮನೆಯ ಗೋಡೆ ಕುಸಿದು ಬಿದ್ದಿದ್ದು, ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಮನೆಯ ಒಳಗಡೆ ಇದ್ದ ಪಾತ್ರೆ ಮತ್ತಿತರರು ವಸ್ತುಗಳಿಗೆ ಹಾನಿಯಾಗಿ  ನಷ್ಟ ಉಂಟಾಗಿದೆ.  ಸ್ಥಳಕ್ಕೆ ಕಂದಾಯ ಪರಿವಿಕ್ಷಕ ರವಿಕುಮಾರ್, ಉಪ ತಹಶೀಲ್ದಾರ್ ಸುನಿಲ್ ಕುಮಾರ್, ಗ್ರಾಮ ಲೆಕ್ಕಿಗ ಜನಾರ್ದನ, ಗ್ರಾ.ಪಂ  ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಗ್ರಾ.ಪಂ  ಸದಸ್ಯ ಮಮ್ಮದ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ವರದಿ :  ಅಶ್ರಫ್

Read More

ಮಡಿಕೇರಿ ಜು.27 : ಹವಾಮಾನ ಇಲಾಖೆಯಿಂದ ಪ್ರತಿನಿತ್ಯದ ಮಳೆ ಪ್ರಮಾಣದ ಬಗ್ಗೆ ಮಾಹಿತಿ ಲಭ್ಯವಾಗಲಿದ್ದು, ಈ ಮಾಹಿತಿ ಆಧಾರಿಸಿ ಜಿಲ್ಲಾಧಿಕಾರಿ ಅವರು ಹೆಚ್ಚಿನ ಮಳೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಯಲು ಮುಂದಾಗುವಂತೆ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ. ರಾಜ್ಯದ ಹವಮಾನ, ಮಳೆ-ಬೆಳೆ ಸಂಬಂಧಿತ ಸ್ಥಿತಿಗತಿಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಜೊತೆ ನಡೆದ ವಿಡಿಯೊ ಸಂವಾದದಲ್ಲಿ ಮುಖ್ಯಮಂತ್ರಿಗಳು ಮಾತನಾಡಿದರು. ವ್ಯಾಪಕ ಮಳೆಯಿಂದ ಉಂಟಾಗಬಹುದಾದ ಅನಾಹುತ ತಡೆಯಲು ಜಿಲ್ಲಾಧಿಕಾರಿಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಹಾಗೆಯೇ ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಜಿಲ್ಲಾಡಳಿತ ಮಾಡಬೇಕು ಎಂದು ನಿರ್ದೇಶನ ನೀಡಿದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ತುರ್ತು ಸಂದರ್ಭದಲ್ಲಿ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈ ಸಂಬಂಧ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಪಿಡಿಒ ಗಳ ದೂರವಾಣಿ ಸಂಖ್ಯೆ ಜನರಿಗೆ ದೊರೆಯುವಂತಿರಬೇಕು ಎಂದು ಸೂಚಿಸಿದರು.…

Read More

ಮಡಿಕೇರಿ ಜು.27 : ನಲ್ಲೂರು ತೋಟದ ಕೂಲಿ ಕಾರ್ಮಿಕ ವಿಜಯ್ ಕುಮಾರ್ ಅವರ ಮೇಲೆ ಬುಧವಾರ ಕಾಡಾನೆ ದಾಳಿಯಾಗಿದ್ದು, ಮೈಸೂರು ಅಪೋಲೋ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರು ಬುಧವಾರ ರಾತ್ರಿ 12 ಗಂಟೆಗೆ ಮೈಸೂರಿನ ಆಸ್ಪತ್ರೆಗೆ ಆಗಮಿಸಿ ಗಾಯಳು ಯೋಗ ಕ್ಷೇಮ ವಿಚಾರಿಸಿ ಗಾಯಾಳುವಿಗೆ ಧೈರ್ಯ ತುಂಬಿದರು.    ರೋಗಿಯ ಕುಟುಂಬಸ್ಥರಿಗೆ ಬೆಟ್ ಶಿಟ್, ಊಟದ ವ್ಯವಸ್ಥೆ ಮಾಡುವ ಮೂಲಕ ಸ್ಪಂದನೆ ಮಾಡಿದರು. ಅಲ್ಲದೆ ತುರ್ತು ಚಿಕಿತ್ಸೆಗೆ ರು.10 ಸಾವಿರ ನಗದನ್ನು ನೀಡಿದರು.    ದಾಳಿಗೆ ಒಳಗಾಗಿರುವ ಗಾಯಳು ಅವರಿಗೆ ಶ್ವಾಸಕೋಶದ ಭಾಗದಲ್ಲಿ ಪೆಟ್ಟಾಗಿದ್ದು, ಚಿಕಿತ್ಸೆಯ ಮೂಲಕ ಗುಣಮುಖರಾಗಲಿದ್ದಾರೆ. ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಆಸ್ಪತ್ರೆಯಲ್ಲಿದ್ದ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

Read More

ಮಡಿಕೇರಿ ಜು.26 : ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ವೀಕ್ಷಿಸಿ, ಅಲ್ಲಿನ ಸ್ಥಳೀಯರಿಂದ ಮಾಹಿತಿ ಪಡೆದರು. ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಕಾಲೂರು ಹಾಗೂ ವಣಚಲು ಪ್ರದೇಶಕ್ಕೆ ತೆರಳಿ ಮಳೆ ಹಾನಿ ಸಂಬಂದ ಮಾಹಿತಿ ಪಡೆದರು. ಮನೆ ಹಾನಿ ಹಾಗೂ ಬರೆ ಕುಸಿತ ಪ್ರದೇಶಕ್ಕೆ ತೆರಳಿ ವೀಕ್ಷಿಸಿದ ಸಚಿವರು. ಮಳೆ ಹಾನಿ ಸಂಬಂಧ ಸರ್ಕಾರದಿಂದ ನಿಯಮಾನುಸಾರ ಪರಿಹಾರ ದೊರೆಯಲಿದೆ ಎಂದು ಸಚಿವರು ಹೇಳಿದರು. ಶಾಸಕರಾದ ಡಾ.ಮಂತರ್ ಗೌಡ ಅವರು ಗಾಳಿಬೀಡು ಪ್ರದೇಶವು ಎತ್ತರ ಪ್ರದೇಶದಲ್ಲಿದ್ದು ಹೆಚ್ಚಿನ ಮಳೆಯಾಗುತ್ತದೆ. ಇದರಿಂದ ಬರೆ ಕುಸಿತ, ಮನೆ ಹಾನಿ ಉಂಟಾಗುತ್ತಿದೆ. ಈ ಸಂಬಂಧ ಸೂಕ್ತ ಪರಿಹಾರ ಕಲ್ಪಿಸಬೇಕಿದೆ ಎಂದು ಹೇಳಿದರು. ಗಾಳಿಬೀಡು ಗ್ರಾ.ಪಂ.ವ್ಯಾಪ್ತಿಯಲ್ಲಿ ಮಳೆ ಹಾನಿ ಸಂಬಂಧಿಸಿದಂತೆ ಮಾಹಿತಿ ಪಡೆದ ಜಿಲ್ಲಾ ಉಸ್ತುವಾರಿ ಸಚಿವರು ಅಗತ್ಯವಿರುವ ಕಡೆಗಳಲ್ಲಿ ಟಾರ್ಪಲ್ ವಿತರಿಸುವಂತೆ ನಿರ್ದೇಶನ ನೀಡಿದರು. ಗಾಳಿಬೀಡು ಬಳಿಯ ಸೇತುವೆ ವೀಕ್ಷಿಸಿದ ಸಚಿವರು, ಬರೆಕುಸಿತ, ಮನೆ ಹಾನಿ,…

Read More

ಮಡಿಕೇರಿ ಜು.26 :  ರಾಜ್ಯದ ಹವಾಮಾನ ಮತ್ತು ಮಳೆ ಬೆಳೆ ಸಂಬಂಧಿತ ಸ್ಥಿತಿಗತಿಗಳ ಕುರಿತು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಡಿಯೋ ಸಂವಾದ ಮೂಲಕ  ಮಾಹಿತಿ ಪಡೆದರು. ವಿಡಿಯೋ ಸಂವಾದದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ಜಿ.ಪಂ.ಯೋಜನಾ ನಿರ್ದೇಶಕರಾದ ಜಗದೀಶ್, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬನಾ ಎಂ.ಶೇಖ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಾದ ಎಚ್.ಆರ್.ನಾಯಕ್, ಹಾರಂಗಿ ಜಲಾಶಯ ಎಂಜಿನಿಯರ್ ಪುಟ್ಟಸ್ವಾಮಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸಿದ್ದೇಗೌಡ, ಸೆಸ್ಕ್ ಎಂಜಿನಿಯರ್ ಅನಿತಾ ಬಾಯಿ, ಪಿಎಲ್‍ಇಡಿ ಎಂಜಿನಿಯರ್ ಸುರೇಶ್‍ಕುಮಾರ್, ಇತರರು ಇದ್ದರು.

Read More