ಲೇಖಕ: admin

ಮಡಿಕೇರಿ ಜು.8 :  ಕೊಡಗು ಜಿಲ್ಲೆಗೆ ಅತ್ಯವಶ್ಯಕವಾದ ಹೈಟೆಕ್ ಆಸ್ಪತ್ರೆಗೆ  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸಕಾ೯ರ ಆದ್ಯತೆ ನೀಡಿದ್ದು, ಆರೋಗ್ಯ ಕ್ಷೇತ್ರದ ಬಹುಕಾಲದ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ ಇದು ಜನಪರವಾದ ಬಜೆಟ್ ಎಂದು ನಾಪೋಕ್ಲು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಪರವಂಡ ಸಿರಾಜ್ ಪ್ರತಿಕ್ರಿಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು,   ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕೊಡಗು ದೇಶ ಸೇವೆ, ಕ್ರೀಡಾ ಕ್ಷೇತ್ರ, ಪ್ರವಾಸೋದ್ಯಮದಲ್ಲೂ ಹೆಸರು ಪಡೆದಿದೆ. ಜಿಲ್ಲೆಗೆ ಹೊರಗಿನಿಂದ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ, ಆದರೆ ತುರ್ತು ಸಂದರ್ಭದಲ್ಲಿ ಸೂಕ್ತ  ಚಿಕಿತ್ಸೆ ನೀಡಲು, ಶಸ್ತ್ರಚಿಕಿತ್ಸೆ ಒದಗಿಸಲು ಸುಸಜ್ಜಿತವಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕೊರತೆಯಿತ್ತು, ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದಕ್ಕೆ ಆದ್ಯತೆ  ನೀಡಿದೆ. ಅಲ್ಲದೆ  ಕಾಫಿಯನ್ನು ಬ್ರಾಂಡ್ ಮಾಡುವ ಮೂಲಕ ಆಂತರಿಕವಾಗಿ ಕಾಫಿ ಬಳಕೆ ಹೆಚ್ಚಳಕ್ಕೆ ಸಕಾ೯ರ ಒತ್ತು ನೀಡಲಿದೆ, ಇದು ಕಾಫಿ ಜಿಲ್ಲೆಯಾದ ಕೊಡಗಿನ ಕಾಫಿ ಬೆಳೆಗಾರರಿಗೂ ಸಂತಸ ತಂದಿದೆ ಎಂದರು. ಕೊಡಗಿನ ಜನತೆಗೆ ಚುನಾವಣಾ ಪ್ರಾಣಾಳಿಕೆಯಲ್ಲಿ…

Read More

ಕಡಂಗ ಜು.8 :  ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯಿಂದಾಗಿ ನಾಪೋಕ್ಲುವಿನ ವಿವಿಧೆಡೆ ಹಾನಿಯಾಗಿದ್ದು,  ಬೊಳ್ಳುಮಾಡು ರಸ್ತೆಯಲ್ಲಿರುವ ವರ್ಗೀಸ್ ಎಂಬವರಿಗೆ ಸೇರಿದ  ಕಾಫಿ ಕ್ಯೂರಿಂಗ್ ವರ್ಕ್ಸ್ ನ ಮೇಲೆ  ಮರದ ಕೊಂಬೆ ಬಿದ್ದು ಗೋಡೆ ಮತ್ತು ಶೀಟ್ ಹಾನಿಯಾದ ಘಟನೆ ನಡೆದಿದೆ. ಮಳೆಯ ನೀರು ಮಿಲ್ ಗೆ ಪ್ರವೇಶಿಸಿ ಕಾಫಿ ಚೀಲಗಳು ಮತ್ತು ಕಾಫಿ ಕೊಂಚ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ. ವರದಿ : ನೌಫಲ್  

Read More

ಮಡಿಕೇರಿ ಜು.8 : ಕೇಂದ್ರ ಸರ್ಕಾರ ಜಿಲ್ಲೆಯನ್ನು ಬಜೆಟ್ ನಲ್ಲಿ ನಡೆಸಿಕೊಂಡ ರೀತಿಯೆ ರಾಜ್ಯ ಬಜೆಟ್ ನಲ್ಲಿ ನಡೆದಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯ ಸರ್ಕಾರ ಮಂಡಿಸಿದ ಬಜೆಟ್ ನಲ್ಲಿ ಕೊಡಗು ಜಿಲ್ಲೆಗೆ ಹೈಟೆಕ್ ಆಸ್ಪತ್ರೆ ಮತ್ತು ಕಾಫಿಗೆ ಬ್ರಾಂಡ್ ಬೆಳೆಸುವುದು ಬಿಟ್ಟರೆ ಬೇರೇನೂ ಇಲ್ಲ. ಜಿಲ್ಲೆಯಲ್ಲಿ ಆಸ್ಪತ್ರೆಗೆ ಅನುದಾನ ಒಳ್ಳೆಯ ಬೆಳವಣಿಗೆ. ಆದರೆ ಪ್ರತಿ ತಾಲೂಕಿಗೆ ಒಂದು ಸುಸಜ್ಜಿತ ಆಸ್ಪತ್ರೆ ಅವಶ್ಯಕತೆ ಇದ್ದು, ಅದನ್ನು ಈಡೇರಿಸಿಲ್ಲ. ಜಿಲ್ಲೆಯಲ್ಲಿ ವಿಶ್ವವಿದ್ಯಾಲಯಕ್ಕೆ ಕಟ್ಟಡ ನಿರ್ಮಾಣಕ್ಕೆ ಯಾವುದೇ ಅನುದಾನ ಇಲ್ಲ. ಬಹಳ ವರ್ಷಗಳ ನಂತರ ಕೊಡಗಿನಲ್ಲಿ ಶಾಸಕರ ಬದಲಾವಣೆ ಕಂಡಿದ್ದು, ರಾಜ್ಯ ಸರ್ಕಾರದ ಮೇಲೆ ಜನರು ಬಹಳ ನೀರಿಕ್ಷೆ ಇಟ್ಟಿದ್ದರು. ಆದರೆ ಕೊಡಗಿನ ಜನರ ನಿರೀಕ್ಷೆ ಹುಸಿಯಾಗಿಸಿದೆ ಎಂದು ಭೋಜಣ್ಣ ಸೋಮಯ್ಯ ಹೇಳಿದರು.

Read More

ಮಡಿಕೇರಿ ಜು.8 : ರಾಜ್ಯ ಬಜೆಟ್‍ನಲ್ಲಿ ಕೊಡಗು ಜಿಲ್ಲೆಗೆ ಅನ್ಯಾಯ ಮಾಡಲಾಗಿದೆ. ಯಾವುದೇ ಅನುದಾನ ನೀಡದೆ ಇರುವುದು ಮಲತಾಯಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಆರೋಪಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಜಿಲ್ಲೆಗೆ 400 ಬೆಡ್‍ನ ಸುಸಜ್ಜಿತ ಆಸ್ಪತ್ರೆಯನ್ನು ನೀಡಿ ಉದ್ಘಾಟನೆ ಹಂತಕ್ಕೆ ತಲುಪಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಘೋಷಿಸಿರುವ ಆಸ್ಪತ್ರೆಯ ಕುರಿತು ಜಿಲ್ಲೆಯ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ಕಾಮಗಾರಿಗಾಗಿ ಹಿಂದೆ ಮಾಡಲಾದ ಭೂಮಿಪೂಜೆಗೆ ಮತ್ತೊಮ್ಮೆ ಭೂಮಿಪೂಜೆ ಮಾಡಿ ನಾವು ಮಾಡಿದ್ದೇವೆ ಎಂದು ಹೇಳುವುದು ಸರಿಯಲ್ಲ. ಈ ರೀತಿಯ ನಡೆ ದ್ವೇಷದ ರಾಜಕೀಯ ಎಂದು ಟೀಕಿಸಿದ ಅವರು, ಹಿಂದಿನ ಸರ್ಕಾರದ ಯೋಜನೆಯನ್ನು ಯತಾಸ್ಥಿತಿಯಲ್ಲಿ ಮುಂದುವರೆಸಬೇಕು ಎಂದು ಆಗ್ರಹಿಸಿದರು. ಜಿಲ್ಲಾ ವಕ್ತಾರ ಮಹೇಶ್ ಜೈನಿ ಮಾತನಾಡಿ, ಬಿಟ್ಟಿ ಗ್ಯಾರಂಟಿಗಳ ಮೂಲಕ ಮತಗಳಿಸಿರುವ ಕಾಂಗ್ರೆಸ್ ಸರ್ಕಾರ ತೆರಿಗೆ ಹೆಚ್ಚಳ ಮಾಡಿ ಜನರ ಹೊರೆಯನ್ನು ಹೆಚ್ಚಿಸಿದೆ. ಸಾಲದ…

Read More

ಮಡಿಕೇರಿ ಜು.8 : ಮಡಿಕೇರಿ ನಗರಸಭಾ ಸದಸ್ಯ ಕಾಳಚಂಡ ಅಪ್ಪಣ್ಣ ಅವರ ಮೇಲೆ ನಡೆದ ಹಲ್ಲೆಗೆ ಖಂಡನೆ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಬಿಜೆಪಿ, ಘಟನೆಯನ್ನು ಕೂಲಕುಂಶವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು. ನಗರಸಭೆಯಲ್ಲಿ 23 ಸದಸ್ಯರಿದ್ದು, ಈ ರೀತಿಯ ಘಟನೆಯಿಂದ ಭಯದ ವಾತಾವಣ ಸೃಷ್ಟಿಯಾಗಿದೆ. ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು, ಮಳೆಗಾಲದಲ್ಲಿ ಮನೆಗಳಿಗೆ ಹಾನಿಯಾಗುವುದು ಸಹಜ. ಇದಕ್ಕೆ ಜನಪ್ರತಿನಿಧಿಗಳು ಕಾರಣಕರ್ತರಲ್ಲ, ಮಳೆ ನೀರು ನುಗ್ಗಿತು ಎಂದು ನಗರಸಭಾ ಸದಸ್ಯನ ಮೇಲೆ ಹಲ್ಲೆ ನಡೆಸುವುದು ಹೇಯ ಕೃತ್ಯವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ಘಟನೆ ಮಡಿಕೇರಿ ನಗರಕ್ಕೆ ಕಪ್ಪುಚುಕ್ಕೆಯಾಗಿದ್ದು, ನಗರದ ಜನತೆ ಜನಪ್ರತಿನಿಧಿಗಳಿಗೆ ಸಹಕಾರ ನೀಡಬೇಕು ಮತ್ತು ವಿನಯದಿಂದ ಕೆಲಸಗಳನ್ನು ಮಾಡಿಸಿಕೊಳ್ಳಬೇಕು ಎಂದು ರಾಬಿನ್…

Read More

ಮಡಿಕೇರಿ ಜು.8 : ಹೈಟೆಕ್ ಹಣೆಪಟ್ಟಿಯ ಮಡಿಕೇರಿ ಮಾರುಕಟ್ಟೆ ಕಾರ್ಯಾರಂಭ ಮಾಡಿ ಕೆಲವು ವರ್ಷಗಳೇ ಕಳೆದಿದೆ. ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾದ ಈ ಬೃಹತ್ ಕಟ್ಟಡದಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳಿಲ್ಲದೆ ವರ್ತಕರು ಹಾಗೂ ಗ್ರಾಹಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಜಾ ತರಕಾರಿ ಮತ್ತು ನಿತ್ಯ ಬಳಕೆಯ ವಸ್ತುಗಳಿಗಾಗಿ ಮಡಿಕೇರಿ ತಾಲ್ಲೂಕಿನ ಹೆಚ್ಚಿನ ಗ್ರಾಹಕರು ಶುಕ್ರವಾರದ ಸಂತೆಯನ್ನೇ ಅವಲಂಬಿಸಿದ್ದಾರೆ. ಪಾಳುಬಿದ್ದಿದ್ದ ಮಾರುಕಟ್ಟೆಯನ್ನು ಕೆಡವಿ ಕೋಟಿ ಕೋಟಿ ಖರ್ಚು ಮಾಡಿ ಹೈಟೆಕ್ ಮಾರುಕಟ್ಟೆಯನ್ನು ನಿರ್ಮಿಸಲಾಗಿದೆ. ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಯಿಂದಲೂ ವ್ಯಾಪಾರಿಗಳು ಇಲ್ಲಿಗೆ ಆಗಮಿಸುತ್ತಾರೆ. ಇವರಲ್ಲಿ ಮಹಿಳಾ ವ್ಯಾಪಾರಿಗಳೇ ಹೆಚ್ಚು ಎನ್ನುವುದು ಇಲ್ಲಿ ಗಮನಾರ್ಹ. ಮಡಿಕೇರಿ ನಗರದಲ್ಲಿರುವ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವವರು ನೆಲ ಬಾಡಿಗೆ ಎಂದು ರೂ.250 ನ್ನು ಪಾವತಿಸಬೇಕಾಗುತ್ತದೆೆ. ಸಂತೆ ನಡೆಯುವ ಹಿಂದಿನ ರಾತ್ರಿಯೇ ಬರುವ ವ್ಯಾಪಾರಸ್ಥರು ತಮ್ಮ ನಿತ್ಯ ಕರ್ಮಗಳಿಗಾಗಿ ಮಾರುಕಟ್ಟೆಯ ಸಮೀಪವಿರುವ ನಗರಸಭೆಯ ಸಾರ್ವಜನಿಕ ಶೌಚಾಲಯವನ್ನೇ ಅವಲಂಬಿಸಿದ್ದಾರೆ. ಇಲ್ಲಿನ ಪರಿಸ್ಥಿತಿಯನ್ನು ಗಮನಿಸಿದರೆ ಇದು ನಗರಸಭೆಯ ಆಡಳಿತ ಮಂಡಳಿಗೇ ಪ್ರೀತಿ…

Read More

ಮಡಿಕೇರಿ ಜು.8 :  ಮಾನವೀಯ ಸ್ನೇಹಿತರ ಒಕ್ಕೂಟದ ವತಿಯಿಂದ ನಗರದ ಮಡಿಕೇರಿಯ ತಣಲ್ ಸಂಸ್ಥೆಯ  ಹಿರಿಯನಾಗರಿಕರಿಗೆ  ಸ್ವೆಟರ್ ಹಾಗೂ ಸ್ಕಾರ್ಫ್ ಗಳನ್ನು ವಿತರಿಸಲಾಯಿತು. ಒಕ್ಕೂಟದ ಹಿರಿಯ ಪ್ರತಿನಿಧಿ ಹಾ.ತಿ. ಜಯಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ  ನಡೆದ ಸರಳ ಕಾರ್ಯಕ್ರಮದಲ್ಲಿ  40 ಮಂದಿ ಮಹಿಳೆಯರಿಗೆ  ಒಕ್ಕೂಟದ  ಪ್ರಮುಖರು ಸ್ವೆಟರ್ ಹಾಗೂ ಸ್ಕಾರ್ಫ್ ಗಳನ್ನು  ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಣಲ್ ಸಂಸ್ಥೆಯ ವಕ್ತಾರ ಮಹಮ್ಮದ್ ಮುಸ್ತಫ , ಮಾನವೀಯ ಸ್ನೇಹಿತರ ಒಕ್ಕೂಟವು ಕಳೆದ ಕೆಲವು ವರ್ಷಗಳಿಂದ ಒಂದು ವಾಟ್ಸಾಪ್ ಗ್ರೂಪನ್ನು ರಚಿಸಿಕೊಂಡು ನೊಂದವರ ಕಣ್ಣೀರು ಒರೆಸುವ ಉತ್ತಮ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು . ಉತ್ತಮ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಈ ಒಕ್ಕೂಟವು ಇತರ ಸಂಘಟನೆಗಳಿಗೆ ಮಾದರಿ ಆಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಒಕ್ಕೂಟದ ಅಡ್ಮಿನ್ಗಳಾದ ಎಂ.ಇ.ಮಹಮ್ಮದ್, ಪಿ.ಪಿ. ಸುಕುಮಾರ್, ಜಾನ್ ಬೆನೆಟ್, ಮನ್ಸೂರ್ ಫರ್ಝ್, ಗಾಯತ್ರಿ ನರಸಿಂಹ, ಹನೀಫ್ ಸೋನಾ, ಪ್ರತಿನಿಧಿಗಳಾದ ಮಾಜಿ ಯೋಧ ಡೇವಿಡ್ ವೇಗಸ್, ಅನಿಲ್ ಕುಮಾರ್,…

Read More

ನಾಪೋಕ್ಲು ಜು.8 : ನಾಪೋಕ್ಲು ಗ್ರಾ.ಪಂ ಗೆ ಒಳಪಡುವ ನಾಪೋಕ್ಲು, ಕೊಳಕೇರಿ, ಬೇತು ಗ್ರಾಮದ ಗ್ರಾಮ ಸಭೆಯನ್ನು ಜು.10 ರಂದು ಬೆಳಿಗ್ಗೆ 10.30ಕ್ಕೆ ಕೊಡುವ ಸಮಾಜದಲ್ಲಿ ಆಯೋಜಿಸಲಾಗಿದೆ. ಗ್ರಾ.ಪಂ ಅಧ್ಯಕ್ಷರಾದ ಎಚ್.ಎಸ್. ಪಾರ್ವತಿ ಅವರ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಲಿದ್ದು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗ್ರಾಮ ಸಭೆಯನ್ನು ಯಶಸ್ವಿ ಗೊಳಿಸಿಕೊಡುವಂತೆ ಗ್ರಾ.ಪಂ ಪ್ರಕಟಣೆ ತಿಳಿಸಿದೆ. ವರದಿ : ದುಗ್ಗಳ ಸದಾನಂದ

Read More

ನಾಪೋಕ್ಲು ಜು.8 : ನಾಪೋಕ್ಲು-ಮಡಿಕೇರಿ ಕಡೆ ತೆರಳುವ ಮುಖ್ಯರಸ್ತೆಯ ಪಾಲೂರು ಗ್ರಾಮ ತೆರಳಿ ಮಡಿಕೇರಿಯ ಮುಖ್ಯ ರಸ್ತೆಯ ಮಧ್ಯ ತಿರುವುವಿನಲ್ಲಿ ಭಾರೀ ಗಾತ್ರದ ಗುಂಡಿ ನಿರ್ಮಾಣವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಹಿಂದೆ ಗುಂಡಿ ಮುಚ್ಚುವ ಕಾರ್ಯವನ್ನು ಸಮರ್ಪಕವಾಗಿ ಮಾಡದೆ ಇರುವುದರಿಂದಾಗಿ ಇದು ಹಲವುರು ತಿಂಗಳಿನಿಂದ ಹಾಗೆ ಇದ್ದು ಸಂಬಂಧಪಟ್ಟವರು ಗಮನ ಹರಿಸಿಲ್ಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಇಲಾಖಾಧಿಕಾರಿಗಳು ಇದೆ ರಸ್ತೆಯಲ್ಲಿ ಸಂಚರಿಸುತ್ತಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ. ತಕ್ಷಣವೇ ಗಮನ ಹರಿಸಿ ಗುಂಡಿ ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಬೇಕಿದೆ. ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ವರದಿ : ದುಗ್ಗಳ ಸದಾನಂದ  

Read More

ನಾಪೋಕ್ಲು ಜೂ.8 : ಜಿಲ್ಲೆಯಾದ್ಯಂತ ಬಿರುಸಿನ ಮಳೆ ಸುರಿಯುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಬಿರುಸುಗೊಂಡಿದೆ ಸಮೀಪದ ಕೊಳಕೇರಿ ಗ್ರಾಮದ ಕೋಟೇರಿ ಮತ್ತು ಹೊದ್ದೂರು ಗ್ರಾಮ ಪಂಚಾಯತಿಯ ಕುಯ್ಯಂಗೇರಿಯಲ್ಲಿ ರೈತರು ಭತ್ತದ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲವು ದಿನಗಳಿಂದ ಮಳೆಸುರಿದ ಪರಿಣಾಮ ಗದ್ದೆಗಳಲ್ಲಿ ನೀರಾಗಿದ್ದು ಬಿತ್ತನೆ ಕಾರ್ಯಕ್ಕೆ ರೈತರು ಸಜ್ಜಾಗಿದ್ದಾರೆ. ಸರಕಾರದ ವತಿಯಿಂದ ರೈತರ ಶ್ರೇಯೋಭಿವೃದ್ಧಿಗೆ ಕೃಷಿ ಇಲಾಖೆಯ ಮೂಲಕ ರೈತರಿಗೆ ರಿಯಾಯಿತಿ ದರದಲ್ಲಿ ಬತ್ತದ ಬಿತ್ತನೆ ಬೀಜಗಳನ್ನು ಒದಗಿಸುತ್ತಿದೆ. ಅಭಿಪ್ರಾಯ :: ಮಳೆಯ ಕೊರತೆಯಿಂದ ಹಲವು ರೈತರು ಭತ್ತದ ಕೃಷಿ ಕಾರ್ಯಕ್ಕೆ ಹಿಂದೇಟು ಹಾಕಿದ್ದರು. ಇದೀಗ ಮಳೆ ಆಗುತ್ತಿರುವುದರಿಂದ ಬಿತ್ತನೆ ಕಾರ್ಯ ಆರಂಭಗೊಂಡಿದೆ. ದೊಡ್ಡಿ ತಳಿಯ ಭತ್ತದ ಬಿತ್ತನೆ ಮಾಡುತ್ತಿದ್ದೇನೆ. ಇದರಿಂದ ಉತ್ತಮ ಇಳುವರಿ ದೊರಕುತ್ತಿದೆ ಹಾಗೂ ಉತ್ತಮ ದರವು ಇದೆ. ಕೆಲವು ವರ್ಷಗಳಿಂದ ಇದೆ ತಳಿಯನ್ನು ಬೆಳೆಯುತ್ತಿರುವುದರಿಂದ ಇಳುವರಿ ಲಾಭದಾಯಕವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಳೆಯ ಪ್ರಮಾಣ ಕಡಿಮೆ, ಕಳೆದ ವರ್ಷ ಇದೇ…

Read More