ಲೇಖಕ: admin

ಮಡಿಕೇರಿ ಏ.17 NEWS DESK  : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.18 ರಿಂದ ಮಹಿಳಾ ಕ್ರಿಕೆಟ್ ಆರಂಭಗೊಳ್ಳಲಿದೆ. *ಮೈದಾನ 3* ಬೆಳಿಗ್ಗೆ 9 ಗಂಟೆಗೆ ಮುಂಡಂಡ ಮತ್ತು ಕಟ್ಟೇರ, 11.30ಕ್ಕೆ ಮೊಣ್ಣಂಡ ಮತ್ತು ಮುಕ್ಕಾಟಿರ (ಪುಲಿಕೋಟ್), ಮಧ್ಯಾಹ್ನ 12.30ಕ್ಕೆ ತೆಕ್ಕಡ ಮತ್ತು ಮೇರಿಯಂಡ, 1.30ಕ್ಕೆ ಆದೇಂಗಡ ಮತ್ತು ಅಲ್ಲುಮಾಡ, 2.15ಕ್ಕೆ ತಾಚಮಂಡ ಮತ್ತು ಕೊಟ್ರಮಾಡ, 3ಕ್ಕೆ ಕಾಯಪಂಡ ಮತ್ತು ಬಾಳೆಯಡ ಹಾಗೂ 4 ಗಂಟೆಗೆ ಮೇವಡ ಮತ್ತು ಮಾಚೆಟ್ಟಿರ (ಬಾಳುಗೋಡು)

Read More

ಮಡಿಕೇರಿ ಏ.17  NEWS DESK : ಕೊಡಗು ಪ್ರೆಸ್ ಕ್ಲಬ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಹಾಗೂ ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘವ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಟರ್ಫ್ ‘ಸೌಹಾರ್ದ ಕಪ್’ ಪಂದ್ಯಾವಳಿಯಲ್ಲಿ ಮೀಡಿಯಾ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸಿದ್ದಾಪುರದ ಟರ್ಫ್ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ 8 ತಂಡಗಳು ಪಾಲ್ಗೊಂಡಿತ್ತು. ಫೈನಲ್ ಪಂದ್ಯಾವಳಿಯಲ್ಲಿ ಕಾವೇರಿ ತಂಡದ ಪರವಾಗಿ ಜಯಪ್ರಕಾಶ್ ಅವರ 26 ರನ್ ಗಳ ಸಹಾಯದಿಂದ ತಂಡ 49 ರನ್ ಗಳಿಸಿತು. ಮೀಡಿಯಾ ಸೂಪರ್ ಕಿಂಗ್ಸ್ ತಂಡದ ಇಸ್ಮಾಯಿಲ್28, ರೆಜಿತ್ 18 ರನ್ ಗಳನ್ನು ಗಳಿಸಿ ಸುಲಭ ಜಯ ಸಾಧಿಸಿತು. ಇದಕ್ಕೂ ಮೊದಲು ನಡೆದ ಕ್ವಾಲಿಫೈಯರ್ ಪಂದ್ಯದಲ್ಲಿ ಕಾವೇರಿ ಮಿಡಿಯಾ ತಂಡ ಮಿಡಿಯಾ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಎಲಿಮಿನೇಟರ್ ಪಂದ್ಯದಲ್ಲಿ ಬ್ರಾಡ್ ಕಾಸ್ಟ್ ಇಬ್ನಿ ಬ್ಲಾಸ್ಟರ್ ತಂಡ ಮೀಡಿಯಾ ರೋಯಲ್ಸ್ ತಂಡವನ್ನು ಮಣಿಸಿತು. ಎರಡನೇ ಕ್ಲಾಲಿಫೈಯರ್…

Read More

ಮಡಿಕೇರಿ ಏ.17 NEWS DESK : ನಗರ ವ್ಯಾಪ್ತಿಯ ಕಸ ವಿಲೇವಾರಿ ಮಾಡುವ ವಾಹನಗಳಲ್ಲೆ, ಕುಡಿಯುವ ನೀರಿನ ಘಟಕಗಳಿಗೆ ಆಲಂ ಮತ್ತು ಬ್ಲೀಚಿಂಗ್ ಪೌಡರ್ ಸಾಗಾಟ ಮಾಡಲಾಗುತ್ತಿದೆಯೆಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಮತ್ತು ಮಡಿಕೇರಿ ಬ್ಲಾಕ್ ಯೂತ್ ಕಾಂಗ್ರೆಸ್ ನಗರಸಭೆಯ ವಿರುದ್ಧ ಗಂಭೀರ ಆರೋಪ ಮಾಡಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೋಚನ ಚೇತನ್ ಮಾತನಾಡಿ, ಗುರುವಾರ ರಾತ್ರಿ ನಗರಸಭಾ ಕಚೇರಿಯ ಮುಂಭಾಗದಲ್ಲೆ ಇದ್ದ ಕಸವಿಲೇವಾರಿ ವಾಹನಕ್ಕೆ ಕಸ ಹಾಕಲು ಬಂದ ವರ್ತಕರಿಗೆ, ಕಸ ಹಾಕದಂತೆ ಪೌರ ಕಾರ್ಮಿಕರು ತಡೆಯುವುದರೊಂದಿಗೆ ಗಲಾಟೆ ಉಂಟಾಗಿತ್ತೆಂದು ತಿಳಿಸಿದರು. ಈ ಸಂದರ್ಭ ಅಲ್ಲಿದ್ದ ಕಸವಿಲೇವಾರಿ ವಾಹನವನ್ನು ಪರಿಶೀಲಿಸಿದಾಗ, ವರ್ತಕರು ತಂದು ಹಾಕಿದ ಕಸದೊಂದಿಗೆ ನೀರು ಸರಬರಾಜು ಘಟಕಗಳಿಗೆ ಪೂರೈಸುವ ಆಲಂ ಮತ್ತು ಬ್ಲೀಚಿಂಗ್ ಪೌಡರ್ ಇರುವುದು ಕಂಡು ಬಂತು. ಇದೇ ಕಾರಣಕ್ಕಾಗಿ ಪೌರ ಕಾರ್ಮಿಕರು, ನೀರಿನ ಘಟಕಗಳಿಗೆ ಪೂರೈಸುವ ವಾಹನಕ್ಕೆ ಕಸ ಹಾಕಬಾರದೆಂದು ಹೇಳುತ್ತಿದ್ದರೆಂದು ಮಾಹಿತಿ ನೀಡಿದರು. ಈ ಬಗ್ಗೆ ತಾವು…

Read More

ಮಡಿಕೇರಿ ಏ.17 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.17 ರಂದು ಗೆಲುವು ಸಾಧಿಸಿದ ತಂಡಗಳು. *ಮೈದಾನ 1* ಓಡಿಯಂಡ ಮತ್ತು ಅಮ್ಮುಣಿಚಂಡ ತಂಡಗಳ ನಡುವಿನ ಪಂದ್ಯದಲ್ಲಿ ಓಡಿಯಂಡ ತಂಡಕ್ಕೆ 9 ವಿಕೆಟ್‍ಗಳ ಜಯ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಮ್ಮುಣಿಚಂಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 41 ರನ್ ಗಳನ್ನು ಗಳಿಸಿತು. ಓಡಿಯಂಡ ಕೇವಲ 1.5 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 43 ರನ್ ಗಳನ್ನು ಸೇರಿಸಿ ಗೆಲುವು ದಾಖಲಿಸಿತು. ಕೊಚ್ಚೇರ ಮತ್ತು ಚೆಯ್ಯಂಡ (ಬಲಂಬೇರಿ) ನಡುವಿನ ಪಂದ್ಯದಲ್ಲಿ ಕೊಚ್ಚೇರ 13 ರನ್ ಗಳಿಂದ ಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೊಚ್ಚೇರ 6 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 75 ರನ್ ಗಳನ್ನು ಸೇರಿಸಿತು. ಚೆಯ್ಯಂಡ 6 ಓವರ್ ಗಳಲ್ಲಿ 5…

Read More

ಬೆಂಗಳೂರು NEWS DESK ಏ.17 : ಶರಣ್ಯ ಹಾಗೂ ಶ್ರೀನಂದಾ ನಾಪತ್ತೆ ಪ್ರಕರಣದ ನಂತರ ಕೊನೆಗೂ ಅರಣ್ಯ ಸಚಿವರು ಎಚ್ಚೆತ್ತುಕೊಂಡಿದ್ದಾರೆ. ರಾಜ್ಯದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಎಲ್ಲಾ ಅನುಮೋದಿತ ಚಾರಣ ಪಥಗಳಲ್ಲಿ ಇನ್ನು ಮುಂದೆ ಪ್ರಕೃತಿ ಮಾರ್ಗದರ್ಶಕ (ನೇಚರ್ ಗೈಡ್) ಇಲ್ಲದೆ ಚಾರಣಕ್ಕೆ ಅವಕಾಶ ಇರುವುದಿಲ್ಲ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಸ್ಪಷ್ಟ ಸೂಚನೆ ನೀಡಿದ್ದಾರೆ. ಇತ್ತೀಚೆಗೆ ಕೊಡಗಿನ ತಡಿಯಾಂಡಮೋಳ್ ಬೆಟ್ಟದಲ್ಲಿ ಕೇರಳದಿಂದ ಚಾರಣಕ್ಕೆ ಬಂದಿದ್ದ ಮಹಿಳೆ ಶರಣ್ಯ ನಾಪತ್ತೆಯಾಗಿ ಕಾಡಿನಲ್ಲಿ 3 ದಿನ ಕಳೆದ ಪ್ರಕರಣ ಹಾಗೂ ಅರಣ್ಯ ವ್ಯಾಪ್ತಿಗೆ ಒಳಪಡದ ಚಿಕ್ಕಮಗಳೂರಿನ ಮಾಣಿಕ್ಯಧಾರಾ ಬಳಿ ನಾಪತ್ತೆಯಾಗಿ ಶವವಾಗಿ ಪತ್ತೆಯಾದ ಬಾಲಕಿ ಶ್ರೀನಂದಾ ಪ್ರಕರಣದ ಹಿನ್ನೆಲೆಯಲ್ಲಿ ಚಾರಣಿಗರ ಸುರಕ್ಷತೆಗಾಗಿ ಎಸ್.ಓ.ಪಿ. ರೂಪಿಸಲು ಸೂಚಿಸಿರುವುದಾಗಿ ಅವರು ತಿಳಿಸಿದರು. ಚಾರಣಿಗರ ಸುರಕ್ಷತೆಗಾಗಿ ರೂಪಿಸಲಾಗಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ ಬಿಡುಗಡೆ ಮಾಡಿ ಮಾತನಾಡಿದ ಅರಣ್ಯ ಸಚಿವರು ಪ್ರತಿ 10 ಚಾರಣಿಗರಿಗೆ ಒಬ್ಬರು ಸ್ಥಳೀಯ ಪ್ರಕೃತಿ ಮಾರ್ಗದರ್ಶಕರಿರುತ್ತಾರೆ.…

Read More

ಮಡಿಕೇರಿ NEWS DESK ಏ.17 : ಕೊಡಗು ಗೌಡ ಯುವ ವೇದಿಕೆಯ ವತಿಯಿಂದ ಗೌಡ ಜನಾಂಗ ಬಾಂಧವರಿಗಾಗಿ 27ನೇ ವರ್ಷದ ಕ್ರೀಡಾಕೂಟ “ಕುಟುಂಬ 2026” ಇದೇ ಮೇ 1ರಿಂದ 16ರ ವರೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಗೌಡ ಯುವ ವೇದಿಕೆಯ ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ 2000ನೇ ಇಸವಿಯಲ್ಲಿ ಕೆದಂಬಾಡಿ ಕುಟುಂಬಸ್ಥರ ನೇತೃತ್ವದಲ್ಲಿ ಆರಂಭವಾದ ಗೌಡ ಜನಾಂಗದ ಕ್ರೀಡಾಕೂಟ ನಂತರದ ವರ್ಷಗಳಲ್ಲಿ ತುಮ್ತಜೆ ಗಣೇಶ್ ಅವರ ಸಾಂಸ್ಕೃತಿಕ ಅಕಾಡೆಮಿ ಆಶ್ರಯದಲ್ಲಿ ಸಾಗಿ ಬಂತು. ನಂತರ 2013ನೇ ಇಸವಿಯಿಂದ ಕೊಡಗು ಗೌಡ ಯುವ ವೇದಿಕೆ ಗೌಡ ಸಮುದಾಯಕ್ಕಾಗಿ ಈ ಕ್ರೀಡಾಕೂಟವನ್ನು ಮುಂದುವರಿಸುತ್ತಾ ಬಂದಿದೆ ಎಂದರು. ಕಳೆದ ಮೂರು ವರ್ಷಗಳಿಂದ ಆಯೋಜಿಸುತ್ತಾ ಬಂದಿರುವ ಜಿಪಿಎಲ್ ಗೌಡ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಅತ್ಯಂತ ಯಶಸ್ಸನ್ನು ಕಂಡಿದೆ. ಕೊಡಗು ಗೌಡ ಯುವ ವೇದಿಕೆಯ ನೂತನ ಸಮಿತಿ ಬಾಳಾಡಿ ಮನೋಜ್ ಅವರ ಅಧ್ಯಕ್ಷತೆಯಲ್ಲಿ ಜನಾಂಗದ ಮಹತ್ವಾಕಾಂಕ್ಷೆಯ “ಗೌಡ…

Read More

ನಾಪೋಕ್ಲು ಏ.16 NEWS DESK : ಸ್ಥಳೀಯ ಹಿಂದೂ ಮಲಯಾಳಿ ಸಂಘದ ವತಿಯಿಂದ ವಿಷು ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಘದ ಕಚೇರಿಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ದೇವರ ಮೂರ್ತಿಯನ್ನು ಶೃಂಗರಿಸಿ ದೀಪ ಬೆಳಗಿ ಫಲ ಪುಷ್ಪಗಳನ್ನು ಅರ್ಪಿಸಲಾಯಿತು. ನಂತರ ಜನಾಂಗ ಬಾಂಧವರಿಗೆ ವಿಷು ಕಣಿ ಕೊನ್ನಪೂ ವಿತರಣಾ ಮಾಡಲಾಯಿತು. ಬಳಿಕ ಹಬ್ಬವನ್ನು ಸಾಂಪ್ರದಾಯಕವಾಗಿ ಆಚರಿಸಿ ಪರಸ್ಪರ ಶುಭಾಶಯ ಕೋರಿಕೊಂಡು. ಸಂಘದ ಅಧ್ಯಕ್ಷ ಕೆ.ಕೆ.ಅನಿಲ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅಧ್ಯಕ್ಷ ಕೆ.ಕೆ.ಅನಿಲ್ ಮತ್ತು ಪೊನ್ನು ಮುತ್ತಪ್ಪ ದೇವಾಲಯ ಅಧ್ಯಕ್ಷರು ಚಂದ್ರ ದಿನದ ಮಹತ್ವದ ಬಗ್ಗೆ ಮಾತನಾಡಿ ಶುಭ ಹಾರೈಸಿದರು, ಈ ಸಂದರ್ಭ ಸಂಘದ ಉಪಾಧ್ಯಕ್ಷರು ಅಭಿಲಾಷ್ ,ಮಹಿಳಾ ಘಟಕ ಅಧ್ಯಕ್ಷರು ಸುಮಿತ್ರಾ ವಿನೋದ್, ಪೊನ್ನು ಮುತ್ತಪ್ಪ ದೇವಾಲಯ ಅಧ್ಯಕ್ಷರು ಚಂದ್ರ, ಕಾರ್ಯದರ್ಶಿ ರಮೇಂದ್ರ ,ಸಹಕಾರ್ಯದರ್ಶಿ ಮಹೇಶ್ ಮೆನನ್ ಖಜಾಂಚಿ ವಿಶ್ವನಾಥ್ , ಆಡಳಿತ ಮಂಡಳಿಯ ಸದಸ್ಯರು ಮೋಹನ್,ಉತ್ತಮ, ಶಿವ ಕೆ.ಡಿ ,ಮಹೇಶ್ ಕೆ,ಸತೀಶ್, ವಿನಿಲ್,ರಘು ಟಿ.ಕೆ, ಪ್ರಸಾದ್, ಸುಧಾಬಾಲಕೃಷ್ಣ, ವಿಮಲ,ಶೀಲಾ , ಪ್ರಮೀಳಾ,…

Read More

ವಿರಾಜಪೇಟೆ ಏ.16 NEWS DESK : ಮೈತಾಡಿ ಗ್ರಾಮದ ಐಚೆಟ್ಟಿರ ಐನ್‍ಮನೆಯ ಅಂಗಳದಲ್ಲಿ ವಿಶ್ವ ಕಲಾದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಚಿತ್ರಕಲಾವಿದ ಬಿ.ಆರ್.ಸತೀಶ್ ಅವರು ದೈವ ಕೋಲದ ಚಿತ್ರ ಬಿಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ವಿಶ್ವದ ಶ್ರೇಷ್ಠ ಚಿತ್ರ ಕಲಾವಿದರಲ್ಲಿ ಒಬ್ಬರಾದ ಲಿಯೊನಾರ್ಡ್ ಡಾವಿನ್ಸಿಯ ಹುಟ್ಟು ಹಬ್ಬದ ಗೌರವಾರ್ಥವಾಗಿ ಆ ದಿನವನ್ನು ಎಲ್ಲಾ ಚಿತ್ರಕಲಾವಿದರು ಸೇರಿ ವಿಶ್ವ ಕಲಾದಿನ ಎಂದು ಘೋಷಿಸಲಾಯಿತು. ಕಲೆಯ ಪ್ರಾಮುಖ್ಯತೆಯು ಇಡೀ ವಿಶ್ವದ ಜನರಿಗೂ, ಎಲ್ಲಾ ವಯೋಮಾನದವರಿಗೂ, ಸರ್ವಜನಾಂಗದವರಿಗೂ ತಲುಪಿಸುವ ಪ್ರಯತ್ನವಾಗಿದೆ ಎಂದು ಮಾಹಿತಿ ನೀಡಿದರು. ಅಲ್ಲದೇ ವಿಶ್ವ ಕಲಾದಿನವನ್ನು ಐಚೆಟ್ಟೀರ ಕುಟುಂಬದವರು ಐನ್‍ಮನೆಯಲ್ಲಿ ನಡೆಸಲು ಅವಕಾಶ ಕಲ್ಪಿಸಿದ್ದು, ಕುಟುಂಬದ ಸದಸ್ಯರಿಗೆ ವಿಶ್ವ ಕಲಾದಿನ ಶುಭಾಶಯಗಳನ್ನು ತಿಳಿಸಿ ಬಿಡಿಸಿದ ದೈವಕೊಲದ ಚಿತ್ರವನ್ನು ಐಚೆಟ್ಟೀರ ಕುಟುಂಬಸ್ಥರಿಗೆ ನೀಡಿದರು. ಈ ಸಂದರ್ಭ ಐಚೆಟಿರ ಕುಟುಂಬದ ಸದಸ್ಯರು ಹಾಜರಿದ್ದರು.

Read More

ಗೋಣಿಕೊಪ್ಪ ಏ.16 NEWS DESK : ಕೆದಮುಳ್ಳೂರು ಗ್ರಾಮದ ಕುಲ್ಲಚೆಟ್ಟಿ ಕುಟುಂಬಸ್ಥರು ಮೂರು ವರ್ಷಗಳಿಗೊಮ್ಮೆ ನಡೆಸುವ ಹರಿಸೇವೆ ಹಾಗೂ 101 ಕೋಲ ಎರಡು ದಿನಗಳ ಧಾರ್ಮಿಕ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿತು. ಕುಲ್ಲಚೆಟ್ಟಿಐನ್ ಮನೆಯಲ್ಲಿ ಬೆಳಗ್ಗೆ ವೆಂಕಟರಮಣ ದೇವರ ಹರಿಸೇವೆ, ಪೂಜಾ ಕಾರ್ಯಗಳು ನಡೆಯಿತು. ವೆಂಕಟರಮಣ ಮತ್ತು ಕೆಂಚರಾಯ ದೇವ ದರ್ಶನ ನಡೆಯಿತು. ವೆಂಕಟರಮಣ ಹರಿ ಸೇವೆಯ ಪೂಜೆಯನ್ನು ದಾಸ ಹರೀಶ್ ನಡೆಸಿದರು. ಸಂಜೆ ಅರೆಭಾಷೆ ಗೌಡ ಜನರ ಪ್ರಮುಖ ದೈವವಾದ ಬಚ್ಚನಾಯಕ ಆರಾಧನೆ ಮತ್ತು ಕೋಲ, ಜತೆಗೆ ಹುಲಿ ಚಾಮುಂಡಿ, ಇತರೆ ಶ್ರೀ ಧರ್ಮ ದೇವತೆಗಳು, ಕೋಲಗಳು ಜರುಗಿದವು. ಎರಡನೇ ದಿನ ಧರ್ಮ ದೇವತೆ, ಸೀರಾಡಿ ದೈವದ ಕೋಲ ನೆರವೇರಿತು. ಮೂರನೇ ದಿನ 17 ರಂದು, ಪಾಷಣಮೂರ್ತಿ, ಪಂಜುರ್ಲಿ ಸೇರಿದಂತೆ ಹಲವು ಕೋಲಗಳು ನಡೆಯಲಿದೆ. ಕುಲ್ಲಚೆಟ್ಟಿ ಕುಟುಂಬಸ್ಥರ ಪಟ್ಟೆದಾರ ಮಾಚಯ್ಯ, ಪೂವಯ್ಯ ಮತ್ತು ಹಿರಿಯರುಗಳಾದ, ಕಾರ್ಯಪ್ಪ, ಚಂದ್ರಶೇಖರ್, ತಿಮ್ಮಯ್ಯ, ಈಶ್ವರ್, ಕಿರಣ್‍ಉತ್ತಪ್ಪ, ದಿನೇಶ್‍ಉತ್ತಪ್ಪ, ಅಪ್ಪಾಜಿ ದೇವಯ್ಯ, ಜಯಪೂಣಚ್ಚ, ಬೊಪ್ಪಿಗಣೇಶ್ ಸೇರಿದಂತೆ…

Read More

ಮಡಿಕೇರಿ ಏ.16 NEWS DESK : ಮಡಿಕೇರಿ ಅರೆಭಾಷೆ ಗೌಡ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಏ. 18 ಮತ್ತು 19 ರಂದು ನಗರದ ಗಾಂಧಿ ಮೈದಾನದಲ್ಲಿ “ಅರೆಭಾಭಾಷೆ ಗೌಡ ಕ್ರೀಡಾ ಹಬ್ಬ” ನಡೆಯಲಿದೆ ಎಂದು ಅಕಾಡೆಮಿ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಕಾಡೆಮಿ ಪದಾಧಿಕಾರಿ ಪೊನ್ನಚ್ಚನ ಶ್ರೀನಿವಾಸ್, ಕ್ರೀಡಾ ಹಬ್ಬಕ್ಕೆ ಬಿಡ್ಡಿಂಗ್ ಮೂಲಕ ಆಟಗಾರರನ್ನು ವಿವಿಧ ತಂಡಗಳಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಕ್ರೀಡಾ ಹಬ್ಬದಲ್ಲಿ ಪ್ರಮುಖವಾಗಿ ಫುಟ್ಬಾಲ್ ಚಾಂಪಿಯನ್ ಲೀಗ್, 45 ವರ್ಷ ಮೇಲ್ಪಟ್ಟವರ ಲೆಜೆಂಡ್ಸ್ ಫುಟ್ಬಾಲ್ ಚಾಂಪಿಯನ್ ಟ್ರೋಫಿ, 16ವರ್ಷ ಒಳಗಿನವರ ಜೂನಿಯರ್ ಫುಟ್ಬಾಲ್ ಚಾಂಪಿಯನ್ ಟ್ರೋಫಿ, ಬಾಲಕಿಯರ ಫುಟ್ಬಾಲ್ ಚಾಂಪಿಯನ್ ಟ್ರೋಫಿ ಸ್ಪರ್ಧೆಗಳು ಬೆಳಿಗ್ಗಿನಿಂದ ಆರಂಭವಾಗಲಿದ್ದು, ಹೊನಲು ಬೆಳಕಿನಲ್ಲಿಯೂ ಪಂದ್ಯ ಮುಂದುವರೆಯಲಿದೆ. ಮಹಿಳಾ ಹಗ್ಗಜಗ್ಗಾಟ ಸ್ಪರ್ಧೆಯೂ ನಡೆಯಲಿದೆ. ವಿವಿಧ ಸ್ಪರ್ಧೆಗಳಲ್ಲಿ ಒಟ್ಟು 29 ತಂಡಗಳು ಪಾಲ್ಗೊಳ್ಳಲಿವೆಯೆಂದು ತಿಳಿಸಿದರು. ಏ.19 ರಂದು ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ. ಅಂದು ನಡೆಯಲಿರುವ ಸಮಾರೋಪದಲ್ಲಿ ಶಾಸಕ ಎ.ಎಸ್. ಪೊನ್ನಣ್ಣ,…

Read More