ಲೇಖಕ: admin

ಮಡಿಕೇರಿ NEWS DESK ಏ.15 : ರಾಜ್ಯ ಸರ್ಕಾರ ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ನೂತನವಾಗಿ ಕೊಡವ ಅಭಿವೃದ್ದಿ ನಿಗಮವನ್ನು ಘೋಷಿಸಿದ ಹಿನ್ನಲೆಯಲ್ಲಿ, ಯುನೈಟೆಡ್ ಕೊಡವ ಆರ್ಗನೈಸೇಷನ್ ಸಂಘಟನೆಯ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪರವರನ್ನು ಪಾಡಿ ಶ್ರೀ. ಇಗ್ಗುತ್ತಪ್ಪ ದೇವಸ್ಥಾನದಲ್ಲಿ ಅಖಿಲ ಕೊಡವ ಸಮಾಜ ಹಾಗು ಇಗ್ಗುತ್ತಪ್ಪ ಭಕ್ತಜನ ಸಂಘದ ವತಿಯಿಂದ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಮಾತನಾಡಿದ ಅಖಿಲ ಕೊಡವ ಸಮಾಜ ಹಾಗು ಭಕ್ತಜನ ಸಂಘದ ಅಧ್ಯಕ್ಷ ಪರದಂಡ ಸುಮನ್ ಸುಬ್ರಮಣಿ , ಕೊಡವರಿಗೆ ನೂತನವಾಗಿ ಅಭಿವೃದ್ಧಿ ನಿಗಮ ಬೇಕೆಂಬ ಮಹತ್ವದ ಪರಿಕಲ್ಪನೆಯನ್ನು ಹುಟ್ಟು ಹಾಕಿ, ಬೇಡಿಕೆಯನ್ನು ವ್ಯವಸ್ಥಿತವಾಗಿ ಸರ್ಕಾರಕ್ಕೆ ಮುಟ್ಟಿಸಿ, ಇದೀಗ  ಶಾಸಕ ಎ.ಎಸ್ ಪೊನ್ನಣ್ಣನವರ ಮೂಲಕ ಸರ್ಕಾರದಿಂದ ಅಧಿಕೃತವಾಗಿ ಕೊಡವ ಅಭಿವೃದ್ಧಿ ನಿಗಮವನ್ನು  ಘೋಷಣೆ ಮಾಡಿಸುವಲ್ಲಿ ಮಂಜು ಚಿಣ್ಣಪ್ಪನವರ ಶ್ರಮ ಎಷ್ಟಿದೆ ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೊಡವರ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ನಿಗಮ ಸ್ಥಾಪನೆಯು ಕೊಡವರ ಪಾಲಿಗೆ ಒಂದು ಐತಿಹಾಸಿಕ ಮೈಲಿಗಲ್ಲಾಗಿದ್ದು, ಇದನ್ನು ಪಡೆದುಕೊಳ್ಳುವುದು…

Read More

ಮಡಿಕೇರಿ NEWS DESK ಏ.15 : ಮಡಿಕೇರಿ ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯದ 19ನೇ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಏ.18 ಮತ್ತು 19 ರಂದು ನಡೆಯಲಿದೆ. ಕೇರಳದ ಪಯ್ಯನೂರ್ ನ ಶ್ರೀ ಈಶ್ವರ ನಂಬೂದರಿ ಅವರ ನೇತೃತ್ವದಲ್ಲಿ ಎರಡು ದಿನಗಳ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ. ಏ.18 ರಂದು ಸಂಜೆ 6 ಗಂಟೆಗೆ ಆಚಾರ್ಯರ ಆಗಮನ, ದೇವಾಲಯದಲ್ಲಿ ಪುಣ್ಯಾಹ ಶುದ್ಧಿ, ದೇವಿ ಪೂಜೆ, ಸುದರ್ಶನ ಹೋಮ ಮತ್ತು ಪ್ರಸಾದ ವಿತರಣೆಯಾಗಲಿದೆ. ಏ.19 ರಂದು ಬೆಳಿಗ್ಗೆ 7 ಗಂಟೆಗೆ ಮಹಾ ಗಣಪತಿ ಹೋಮ, ಮಹಾ ಮೃತ್ಯುಂಜಯ ಹೋಮ, ಐಕ್ಯಮತ್ಯ ಸುಕ್ರದ ಹೋಮ ಪೂಜೆ, ಕಳಸ ಪೂಜೆ, ದೇವಿಗೆ ಅಭಿಷೇಕ, ಅಲಂಕಾರ ಪೂಜೆ ಹಾಗೂ ಮಹಾಪೂಜೆ ನೆರವೇರಲಿದೆ. ನಂತರ ಭಕ್ತರಿಗೆ ಅನ್ನಸಂತರ್ಪಣೆಯಾಗಲಿದೆ. ಅನ್ನಸoತರ್ಪಣೆಗೆ ಬೇಕಾಗುವ ಅಕ್ಕಿ, ಬೇಳೆ, ಬೆಲ್ಲ, ತರಕಾರಿ ಹಾಗೂ ಇತರ ಸಾಮಾಗ್ರಿಗಳನ್ನು ನೀಡಲಿಚ್ಛಿಸುವ ದಾನಿಗಳು 9482192248, 8095858864, 9731411523 ನ್ನು ಸಂಪರ್ಕಿಸಬಹುದಾಗಿದೆ. ಎರಡು ದಿನಗಳ…

Read More

ಮಡಿಕೇರಿ NEWS DESK ಏ.15 : ವಾರ್ಷಿಕ ಪೂಜೋತ್ಸವದಲ್ಲಿ ತೊಡಗಿದ್ದ ಭಕ್ತರ ಮೇಲೆ ಹೆಜ್ಜೇನು ಹುಳಗಳು ದಾಳಿ ಮಾಡಿರುವ ಘಟನೆ ಕಣಿವೆಯ ಹೊಸಪಟ್ಟಣ ಗ್ರಾಮದ ಶ್ರೀ ಬಸವೇಶ್ವರ ಹಾಗೂ ಕನ್ನಂಬಾಡಮ್ಮ ದೇವಾಲಯದ ಬಳಿ ನಡೆದಿದೆ. ಶ್ರೀ ಬಸವೇಶ್ವರ ಹಾಗೂ ಕನ್ನಂಬಾಡಮ್ಮ ದೇವಾಲಯದ ವಾರ್ಷಿಕೋತ್ಸವದ ಪ್ರಯುಕ್ತ ದೇವರ ಉತ್ಸವ ಮೂರ್ತಿಗಳನ್ನು ಕಾವೇರಿ ನದಿಯಲ್ಲಿ ಸ್ನಾನ ಮಾಡಿಸಿ ಗಂಗಾಪೂಜೆ ನೆರವೇರಿಸಲಾಗುತ್ತಿತ್ತು. ಈ ಸಂದರ್ಭ ಏಕಾಏಕಿ ಹೆಜ್ಜೇನು ಹುಳಗಳು ಗ್ರಾಮಸ್ಥರ ಮೇಲೆ ದಾಳಿ ಮಾಡಿತು. ಬಹುತೇಕ ಮಂದಿ ದೇವಾಲಯದತ್ತ ಮತ್ತು ತಮ್ಮ ತಮ್ಮ ಮನೆಗಳಿಗೆ ಓಡಿ ನಿಟ್ಟುಸಿರುಬಿಟ್ಟರು. ಕೆಲವರು ದೇವರಿಗೆ ತಪ್ಪು ಕಾಣಿಕೆ ಹಾಕಿ ಪ್ರಾರ್ಥಿಸಿದರು, ಅದೃಷ್ಟವಶಾತ್ ಭಕ್ತರು ಪ್ರಾಣಾಪಾಯದಿಂದ ಪಾರಾದರು.

Read More

ಮಡಿಕೇರಿ NEWS DESK ಏ.15 : ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಸ್ಥಳೀಯ ಸಂಸ್ಥೆಗಳಾದ ಜಿ.ಪಂ, ತಾ.ಪಂ ಮತ್ತು ಗ್ರಾ.ಪಂ ಚುನಾವಣೆಯನ್ನು ನಡೆಸದೆ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಕೊಡಗು ಜಿಲ್ಲಾ ಬಿಜೆಪಿ ಆರೋಪಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಜಿಲ್ಲಾ ಬಿಜೆಪಿ ವಕ್ತಾರ ತಳೂರು ಎ.ಕಿಶೋರ್ ಕುಮಾರ್ ಅವರು ಚುನಾವಣೆ ನಡೆಸದ ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ನಿಷ್ಕ್ರಿಯವಾಗಿದೆ. ಪಂಚಾಯಿತಿಗಳ ಅಧಿಕಾರ ಅಧಿಕಾರಿಗಳ ಕಪಿಮುಷ್ಟಿಯಲ್ಲಿರುವುದರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಟೀಕಿಸಿದ್ದಾರೆ. ಸರಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಮತ್ತು ಶೀಘ್ರ ಚುನಾವಣೆ ನಡೆಸುವಂತೆ ಆಗ್ರಹಿಸಿ ಬಿಜೆಪಿ ವತಿಯಿಂದ ಕೊಡಗು ಜಿಲ್ಲೆಯ ತಾಲ್ಲೂಕು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಯಲಿದೆ. ಏ.24 ರಂದು ಬೆಳಿಗ್ಗೆ 11 ಗಂಟೆಗೆ ಮಡಿಕೇರಿಯಲ್ಲಿ ಹಾಗೂ ಏ.27 ರಂದು ಬೆಳಿಗ್ಗೆ 11 ಗಂಟೆಗೆ ಪೊನ್ನಂಪೇಟೆ ಮತ್ತು ಸೋಮವಾರಪೇಟೆ ತಾಲ್ಲೂಕು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಕಛೇರಿ ಎದುರು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಳೂರು ಎ.ಕಿಶೋರ್ ಕುಮಾರ್ ತಿಳಿಸಿದ್ದಾರೆ.…

Read More

ಮಡಿಕೇರಿ NEWS DESK ಏ.14 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಆದಿಮಸಂಜಾತ ಏಕ-ಜನಾಂಗೀಯ ಪ್ರಕೃತಿ ಆರಾಧಕ ಕೊಡವರ ಹೊಸ ವರ್ಷದ ದಿನ ಎಡ್ಮ್ಯಾರ್ 1 ನ್ನು ಸಂಭ್ರಮದಿoದ ಆಚರಿಸಿತು. ಇಂದು ಮುಂಜಾನೆ ಬೆಂಗ್ನಾಡು ಗ್ರಾಮದ ಬೆಟ್ಟತ್ತೂರಿನಲ್ಲಿರುವ ಕುಪದೀರ ಎನ್.ಮೋಹನ್ ಅವರ ಭತ್ತದ ಗದ್ದೆಯಲ್ಲಿ ಭೂಮಿ ತಾಯಿಗೆ ಧಾರ್ಮಿಕ ಪೂಜೆಯನ್ನು ಸಲ್ಲಿಸಲಾಯಿತು. ಕೆಂಪಯ್ಯ ಹಾಗೂ ಕರಿಯ ಎಂಬ ಹೆಸರಿನ ಜೋಡೆತ್ತುಗಳ ಸಹಾಯದಿಂದ ಸಿ.ಎನ್.ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಸಾಂಪ್ರದಾಯಿಕ ಉಳುಮೆ, ನೇಗಿಲು ಹೊಡೆಯುವ ವಿಧಿಯನ್ನು ನೆರವೇರಿಸಿದರು. ಭೂತಾಯಿಗೆ ನಮಸ್ಕರಿಸುವ ಮೂಲಕ ಗೌರವ ಸಲ್ಲಿಸಿದರು. ಈ ಧಾರ್ಮಿಕ ಆಚರಣೆಗಳು ಕೊಡವ ಬುಡಕಟ್ಟು ಜನಾಂಗಕ್ಕೆ ಮಣ್ಣಿನೊಂದಿಗಿರುವ ಅವಿನಾಭಾವ ಸಂಬoಧವನ್ನು ಸಾಕ್ಷೀಕರಿಸುತ್ತದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು. ಕೊಡವ ಕ್ಯಾಲೆಂಡರ್ ಪಂಚಾoಗದ ಪ್ರಕಾರ ಕೊಡವರ ಹೊಸ ವರ್ಷದ ದಿನವನ್ನು ಎಡ್ಮ್ಯಾರ್ 1 ರಂದು ಅಂದರೆ ಗ್ರೆಗೋರಿಯನ್ ಕ್ಯಾಲೆಂಡರ್ ನ ಏಪ್ರಿಲ್ 14 ರಂದು ಆಚರಿಸಲಾಗುತ್ತದೆ. ಕೊಡವರು ತಮ್ಮ ಸಾಂಪ್ರದಾಯಿಕ ಪದ್ಧತಿಗಳನ್ನು ಪಾಲಿಸುತ್ತಾರೆ, ಎತ್ತುಗಳ ಮೂಲಕ ಭತ್ತದ ಗದ್ದೆಯನ್ನು…

Read More

ಮಡಿಕೇರಿ ಏ.14  NEWS DESK  :  66/33/11 ಕೆ.ವಿ MUSS ಮಗ್ಗುಲ, ವಿರಾಜಪೇಟೆ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ 33ಏಗಿ ಮೂರ್ನಾಡು ಫೀಡರ್ ನಲ್ಲಿ ದಿನಾಂಕ 15.04.2026 ರಂದು ಬೆಳಿಗ್ಗೆ 10.00ರಿಂದ ಸಂಜೆ 5.00 ಗಂಟೆಯವರೆಗೆ ಮಳೆಗಾಲದ ಮುಂಜಾಗೃತ ನಿರ್ವಹಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಸದರಿ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ 33/11 ಕೆ.ವಿ MUSS ಮೂರ್ನಾಡು ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಹೊಮ್ಮುವ ಪಾರಾಣೆ, ನಾಪೋಕ್ಲು, ಮೂರ್ನಾಡು, ಹೊದ್ದೂರು ಹಾಗೂ ಮರಗೋಡು ಫೀಡರ್ ನಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.ಸದರಿ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ಮೂರ್ನಾಡು, ಮರಗೋಡು, ಹಾಕತ್ತೂರು, ಹೊಸ್ಕೇರಿ, ಹೊದ್ದೂರು, ನರಿಯಂದಡ, ನಾಪೋಕ್ಲು, ಕುಂಜಿಲ, ಎಮ್ಮೆಮಾಡು, ಬಲ್ಲಮಾವಟಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ಹಾಗೂ ಸ್ಥಳದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.

Read More

ಮಡಿಕೇರಿ ಏ.14 NEWS DESK : ಶನಿವಾರಸಂತೆ ಅಂಬೇಡ್ಕರ್ ಭವನ ನಿರ್ಮಾಣ ಸಮಿತಿ ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಇಂದು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶನಿವಾರಸಂತೆಯ ಕೆಆರ್‍ಸಿ ವೃತ್ತದಲ್ಲಿ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಂಬೇಡ್ಕರ್ ಭವನ ನಿರ್ಮಾಣ ಸಮಿತಿಯ ಪ್ರಮುಖರು ಪುಷ್ಪ ನಮನ ಸಲ್ಲಿಸಿದರು. ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರನ್ನು ವಿಶ್ವಜ್ಞಾನಿ ಹಾಗೂ ಸಮಾನತೆಯನ್ನು ಸಾರಿದ ಮಹಾ ನಾಯಕ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಜೆ.ಆರ್.ಪಾಲಾಕ್ಷ, ಪ್ರಧಾನ ಕಾರ್ಯದರ್ಶಿ ಎಂ.ಎಸ್.ವೀರೇಂದ್ರ, ಅಕ್ರಮ ಸಕ್ರಮ ಸಮಿತಿಯ ಸದಸ್ಯ ಜೆ.ಎಲ್.ಜನಾರ್ಧನ್, ಸದಸ್ಯರುಗಳಾದ ನವೀನ್, ಎಡೆಹಳ್ಳಿ ಬಸಪ್ಪ, ತವ್ಹಿದ್ ಮತ್ತಿತರರು ಹಾಜರಿದ್ದು ಸಿಹಿ ಹಂಚಿ ಸಂಭ್ರಮಸಿದರು.

Read More

ಮಡಿಕೇರಿ ಏ.14 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.15ರ ಪಂದ್ಯಗಳು *ಮೈದಾನ 1* ಬೆಳಿಗ್ಗೆ 9 ಗಂಟೆಗೆ ಮುಕ್ಕಾಟಿರ (ಕುಂಬಳದಾಳು) ಮತ್ತು ಕಲ್ಲುಮಾಡಂಡ (ಚೇರಂಬಾಣೆ), 10ಕ್ಕೆ ಚೋವಂಡ ಮತ್ತು ಮೊಣ್ಣಂಡ, 11ಕ್ಕೆ ಅಪ್ಪುಡ ಮತ್ತು ತೀತರಮಾಡ, ಮಧ್ಯಾಹ್ನ 12ಕ್ಕೆ ಬಡುಮಂಡ ಮತ್ತು ಕಬ್ಬಚ್ಚಿರ, 1ಕ್ಕೆ ಪೊನ್ನಿಮಾಡ ಮತ್ತು ಚೆಂಬಂಡ, 2ಕ್ಕೆ ಚೊಟ್ಟೆಯಂಡಮಾಡ ಮತ್ತು ಮಲ್ಲಂಗಡ ಹಾಗೂ 3 ಗಂಟೆಗೆ ಅಯ್ಯಕುಟ್ಟಿರ ಮತ್ತು ಮುಂಡ್ಯೋಳಂಡ *ಮೈದಾನ 2* ಬೆಳಿಗ್ಗೆ 9 ಗಂಟೆಗೆ ಬಲ್ಲಚಂಡ ಮತ್ತು ನಾಟೋಳಂಡ, 10ಕ್ಕೆ ಚಿಯನಮಾಡ ಮತ್ತು ಮುಕ್ಕಾಟಿರ (ಬೆಳ್ಳೂರು-ಹರಿಹರ), 11ಕ್ಕೆ ಬಡಲೇರ ಮತ್ತು ಚಿರಿಯಪಂಡ, ಮಧ್ಯಾಹ್ನ 12ಕ್ಕೆ ಕುಪ್ಪನಮಾಡ ಮತ್ತು ನಂದೀರ, 1ಕ್ಕೆ ದಾಸಂಡ ಮತ್ತು ಕೊಡೇಂಗಡ, 2ಕ್ಕೆ ಚೀಕಂಡ ಮತ್ತು ಪಾರುವಂಗಡ ಹಾಗೂ 3 ಗಂಟೆಗೆ ಚೇರುವಾಳಂಡ (ಪುಲ್ಲಿಮಕ್ಕಿ) ಮತ್ತು ಅರಮಣಮಾಡ (ಬೆಸಗೂರು)

Read More

ಮಡಿಕೇರಿ NEWS DESK ಏ.14 : ಕೊಡಗು ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಉಮೇಶ್ ಕುಮಾರ್ ಎಂ.ಎನ್ ಅವರಿಗೆ ಹೆಚ್ಚುವರಿಯಾಗಿ ಮಡಿಕೇರಿ ಗ್ರಾಮಾಂತರ ವೃತ್ತದ ಜವಾಬ್ದಾರಿಯನ್ನು ನೀಡಲಾಗಿದೆ. ಇವರು ಹೆಚ್ಚುವರಿಯಾಗಿ ಮಡಿಕೇರಿ ಗ್ರಾಮಾಂತರ ವೃತ್ತದ ನಾಪೋಕ್ಲು ಪೊಲೀಸ್ ಠಾಣೆ ಹಾಗೂ ಭಾಗಮಂಡಲ ಪೊಲೀಸ್ ಠಾಣೆಯ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.

Read More

ಮಡಿಕೇರಿ ಏ.14 NEWS DESK : ಪಿ.ಕೃಷ್ಣೇ ಗೌಡ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣದ ಕೊಡಗು ಜಿಲ್ಲಾ ಘಟಕ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಮಡಿಕೇರಿ ತಾಲ್ಲೂಕಿನ ನಾಲ್ವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಿತು. ನಗರ ಖಾಸಗಿ ಹೊಟೇಲ್ ಸಮುದ್ರ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮವನ್ನು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗುವ ಮೂಲಕ ಕರವೇ ಸ್ವಾಭಿಮಾನಿ ಬಣದ ಪ್ರಮುಖರು ಉದ್ಘಾಟಿಸಿದರು. *ಶಿಕ್ಷಣ ಕ್ಷೇತ್ರದಲ್ಲೂ ಬದಲಾವಣೆ* ಕ.ರ.ವೇ ಸ್ವಾಭಿಮಾನಿ ಬಣದ ಕೊಡಗು ಜಿಲ್ಲಾ ಉಸ್ತುವಾರಿ ತನು ಕಿಶೋರ್ ಅವರು ಮಾತನಾಡಿ, 25 ವರ್ಷಗಳಿಂದ ರಾಜ್ಯಾದ್ಯಂತ ಘಟಕಗಳನ್ನು ಹೊಂದಿರುವ ಕರವೇ ಸ್ವಾಭಿಮಾನಿ ಬಣ, ಸಾಮಾಜಿಕ ಕಳಕಳಿಯ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಕೊಡಗು ಜಿಲ್ಲೆಯಲ್ಲಿಯೂ ಸಮಾಜಿಕ ಸಮಸ್ಯೆಗಳ ಬಗ್ಗೆ ಹಲವು ಹೋರಾಟಗಳನ್ನು ರೂಪಿಸಿದ್ದು, ಇದು ಮುಂದೆಯೂ ನಡೆಯಲಿದೆ ಎಂದರು. ಸಂಘಟನೆ ಶಿಕ್ಷಣ ಕ್ಷೇತ್ರದಲ್ಲೂ ಬದಲಾವಣೆಗೆ ಮುಂದಾಗಿದ್ದು, ಅದರ ಅಂಗವಾಗಿ ದ್ವಿತೀಯ ಪಿಯುಸಿ…

Read More