ಲೇಖಕ: admin

ಮಡಿಕೇರಿ ಏ.16 NEWS DESK : ಇತಿಹಾಸ ಪ್ರಸಿದ್ಧ ಎಮ್ಮೆಮಾಡು ಮಖಾಂ ಉರೂಸ್ ಏ.17ರಿಂದ 24ರವರೆಗೆ ನಡೆಯಲಿದೆಯೆಂದು ಎಮ್ಮೆಮಾಡಿನ ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಕೆ.ಎಂ.ಹುಸೈನ್ ಸಖಾಫಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಏ.17 ರಂದು ಜುಮಾ ನಮಾಝಿನ ಬಳಿಕ ಜಮಾಅತ್ ಅಧ್ಯಕ್ಷನಾದ ತಾನು ಧ್ವಜಾರೋಹಣವನ್ನು ನೆರವೇರಿಸಲಿದ್ದೇನೆ. ಉರೂಸ್ ಮತ್ತು ಮಖಾಂ ಝಿಯಾರತ್ ಉದ್ಘಾಟನೆಯನ್ನು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯಿದ್ ಜಿಫ್ರಿ ಮುತ್ತುಕ್ಕೋಯ ತಂಙಳ್ ನಡೆಸಿಕೊಡಲಿದ್ದಾರೆ. ಅಂದು ರಾತ್ರಿ ಧಾರ್ಮಿಕ ಪ್ರವಚನವನ್ನು ಎಮ್ಮೆಮಾಡಿನ ಮುದರ್ರಿಸ್ ಎ.ಪಿ.ಹಂಝ ಸಖಾಫಿ ಮೇಲ್ಮುರಿ ಅವರು ನಡೆಸಿಕೊಡಲಿದ್ದಾರೆಂದರು. ಏ.18 ರಂದು ರಾತ್ರಿ ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮ ಸಯ್ಯಿದ್ ಶಿಹಾಬುದ್ದೀನ್ ಅಲ್ ಬುಖಾರಿ ಕಡಲುಂಡಿ ಅವರ ನೇತೃತ್ವದಲ್ಲಿ ನಡೆಯಲಿದೆ. ಏ.19ರಂದು ರಾತ್ರಿ ಖತಂ ದುಅ ಮಜ್ಲಿಸ್ ಕಾರ್ಯಕ್ರಮವು ಶಿಹಾಬುದ್ದೀನ್ ಮುತ್ತನೂರ್ ತಂಙಳರವರ ನೇತೃತ್ವದಲ್ಲಿ ನಡೆಯಲಿರುವುದಾಗಿ ಹೇಳಿದರು. :: ಸಾರ್ವಜನಿಕ ಸಮ್ಮೇಳನ :: ಏ.20 ರಂದು ಮಧ್ಯಾಹ್ನ ಸಯ್ಯದ್ ಸ್ವಾದಿಕಲಿ…

Read More

*ಶುಭ ಅಕ್ಷಯ ತೃತೀಯ : ಕುಶಾಲನಗರದ ಜಿ.ಆಲ್ ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಚಿನ್ನ ಖರೀದಿಗೆ ಶುಭ ಸಮಯ : ಆಕರ್ಷಕ ಕೊಡುಗೆಗಳು ನಿಮಗಾಗಿ*

Read More

ಮಡಿಕೇರಿ ಏ.16 NEWS DESK : ಕೊಡಗು ಜಿಲ್ಲಾ ಮಟ್ಟದ 15ನೇ ವರ್ಷದ ರೋಮನ್ ಕ್ಯಾಥೋಲಿಕ್ ಕ್ರೀಡೋತ್ಸವ, ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಏ.18 ಮತ್ತು 19 ರಂದು ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ಅವರು, ಅಸೋಸಿಯೇಷನ್, ಪಾಲಿಬೆಟ್ಟದ ಲೂರ್ದ್ ಮಾತೆಯ ಚರ್ಚ್, ತಿತಿಮತಿಯ ಫಾತಿಮಾ ಮಾತೆಯ ಚರ್ಚ್‍ನ ಸಂಯುಕ್ತಾಶ್ರಯದಲ್ಲಿ ಕ್ರೀಡಾಕೂಟ ನಡೆಯಲಿದೆ. ಇದರಲ್ಲಿ ಜಿಲ್ಲಾ ವ್ಯಾಪ್ತಿಯ ಧರ್ಮ ಕೇಂದ್ರಗಳ ಕ್ರೈಸ್ತ ಬಾಂಧವರು ಪಾಲ್ಗೊಳ್ಳಲಿರುವುದಾಗಿ ತಿಳಿಸಿದರು. ಕೊಡಗು ಜಿಲ್ಲಾ ವ್ಯಾಪ್ತಿಯ 23 ಧರ್ಮಕೇಂದ್ರಗಳ ಕ್ರಿಕೆಟ್ ತಂಡಗಳು ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ. ಎರಡು ದಿನಗಳ ಕಾಲ ನಡೆಯುವ ಈ ಪಂದ್ಯಾವಳಿ ವಿಜೇತ ತಂಡಕ್ಕೆ 50 ಸಾವಿರ ರೂ.ನಗದು ಮತ್ತು ಟ್ರೋಫಿ, ದ್ವಿತೀಯ 30 ಸಾವಿರ ರೂ. ಮತ್ತು ಟ್ರೋಫಿ,…

Read More

ಮಡಿಕೇರಿ ಏ.16 NEWS DESK : ಕೊಡಗು ವಿಶ್ವವಿದ್ಯಾಲಯವು 2023 ರಲ್ಲಿ ಕರ್ನಾಟಕ ರಾಜ್ಯ ವಿಶ್ವ ವಿದ್ಯಾಲಯವಾಗಿ ಕೊಡಗಿನ ಚಿಕ್ಕ ಅಳುವಾರದಲ್ಲಿ ಸ್ಥಾಪನೆಯಾಗಿದ್ದು, ವಿಶಿಷ್ಟವಾಗಿ ಗಡಿ ಮತ್ತು ಗ್ರಾಮೀಣ ಜಿಲ್ಲೆಯ ಉನ್ನತ ಶಿಕ್ಷಣ ಆಕಾಂಕ್ಷೆ ಪ್ರತಿನಿಧಿಸುತ್ತದೆ. ಕೊಡಗು ವಿಶ್ವವಿದ್ಯಾಲಯವು ಒಂಬತ್ತು ಸ್ನಾತಕೋತ್ತರ ವಿಭಾಗಗಳು ಮತ್ತು ಇಪ್ಪತ್ತೈದು ಸಂಯೋಜಿತ ಪದವಿ ಕಾಲೇಜುಗಳನ್ನು ಹೊಂದಿದ್ದು, ಅತ್ಯಲ್ಪ ಅವಧಿಯಲ್ಲಿ ಪಾರದರ್ಶಕ ಆಡಳಿತ, ಪರಿಣಾಮಕಾರಿ ಪರೀಕ್ಷಾ ನಿರ್ವಹಣೆ, ಸಂಪನ್ಮೂಲ ಕ್ರೋಢೀಕರಣ ಮತ್ತು ಆರ್ಥಿಕ ಶಿಸ್ತು ಇತ್ಯಾದಿ ಮಾನದಂಡಗಳಲ್ಲಿ ಗಮನಾರ್ಹ ಯಶಸ್ಸು ಸಾಧಿಸಿದೆ. ಕೊಡವ ಸಾಮೂದಾಯಿಕ ಅಸ್ಮಿತೆ: ಕೊಡಗು ಜಿಲ್ಲೆಯಲ್ಲಿ ಹೇರಳವಾಗಿ ಕಂಡುಬರುವ ಕೊಡವ ಸಂಸ್ಕøತಿಯು ಭಾರತದ ಇತರ ಸಂಸ್ಕೃತಿಗಳಿಗಿಂತ ಭಿನ್ನವಾಗಿರುವ ಸಾಂಸ್ಕøತಿಕ ಅಸ್ಮಿತೆಯಾಗಿದ್ದು, ವಿಶಿಷ್ಟ ಸಂಪ್ರದಾಯ ಆಚರಣೆಗಳನ್ನು ಒಳಗೊಂಡಿರುವ ಪಶ್ಚಿಮ ಘಟ್ಟ ಪ್ರದೇಶದ ಸ್ಥಳೀಯ ಕೊಡವ ಸಮುದಾಯಗಳ ಜೀವನ ಕ್ರಮವಾಗಿದೆ. ಕೊಡವ ಸಂಸ್ಕøತಿಯು ಪ್ರಾಚೀನ ಪರಂಪರೆ, ಸಮರ ಕೌಶಲ್ಯ, ಕೃಷಿ, ಪ್ರಕೃತಿ ಮತ್ತು ಕುಟುಂಬ ನೆಲೆಗಟ್ಟಿನೊಂದಿಗೆ ಸಂಯೋಜನೆ ಹೊಂದಿರುವ ಸಾಮೂದಾಯಿಕ ಜೀವನ ಪದ್ಧತಿಯಾಗಿದೆ ಮತ್ತು ಹೇರಳವಾದ ಮೌಖಿಕ…

Read More

ಮಡಿಕೇರಿ NEWS DESK ಏ.16 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.16 ರಂದು ಗೆಲುವು ಸಾಧಿಸಿದ ತಂಡಗಳು. *ಮೈದಾನ 1* ಅಯ್ಯಮಾಡ ಮತ್ತು ಮಲ್ಲಾಜಿರ ತಂಡಗಳ ನಡುವಿನ ಪಂದ್ಯದಲ್ಲಿ ಮಲ್ಲಾಜಿರಕ್ಕೆ 8 ವಿಕೆಟ್ ಗಳ ಜಯ ಲಭಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಅಯ್ಯಮಾಡ 6 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 43 ರನ್ ಗಳನ್ನು ಗಳಿಸಿತು. ಮಲ್ಲಾಜಿರ 6 ಓವರ್ 2 ವಿಕೆಟ್ ನಷ್ಟಕ್ಕೆ 45 ರನ್ ಗಳನ್ನು ಸೇರಿಸಿ ಗೆಲುವು ಕಂಡಿತು. ಚಾರಿಮoಡ ಮತ್ತು ಆಟ್ರಂಗಡ ನಡುವಿನ ಪಂದ್ಯದಲ್ಲಿ ಚಾರಿಮಂಡ 5 ರನ್ ಗಳ ಜಯ ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚಾರಿಮಂಡ 6 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 84 ರನ್ ಗಳನ್ನು ಸೇರಿಸಿತು. ಆಟ್ರಂಗಡ 6 ಓವರ್ ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 79 ರನ್…

Read More

ಮಡಿಕೇರಿ NEWS DESK ಏ.16 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.17 ರ ಪಂದ್ಯಗಳು. *ಮೈದಾನ 1* ಬೆಳಿಗ್ಗೆ 9 ಗಂಟೆಗೆ ಓಡಿಯಂಡ ಮತ್ತು ಅಮ್ಮುಣಿಚಂಡ, 10 ಗಂಟೆಗೆ ಕೋಚೆರ ಮತ್ತು ಚೆಯ್ಯಂಡ (ಬಲಂಬೆರಿ), 11ಕ್ಕೆ ಪಾಲಚಂಡ ಮತ್ತು ಐಚೋಡಿಯಂಡ, ಮಧ್ಯಾಹ್ನ 12ಕ್ಕೆ  ಚೆರುವಾಳಂಡ (ಪಾಲೂರು) ಮತ್ತು ಚೆಕ್ಕೇರ, 1ಕ್ಕೆ ಬೋಳಕಾರಂಡ ಮತ್ತು ಅಡ್ಡೇಂಗಡ, 2ಕ್ಕೆ ಆಲೆಮಾಡ ಮತ್ತು ಚಾಮೇರಾ ಹಾಗೂ 3 ಗಂಟೆಗೆ ಕರ್ತಮಾಡ ಮತ್ತು ಮೋಟನಾಳಿರ *ಮೈದಾನ 2* ಬೆಳಿಗ್ಗೆ 9 ಗಂಟೆಗೆ ಚಂಗುಲoಡ ಮತ್ತು ಪೊನ್ನಚಂಡ, 10ಕ್ಕೆ ಮೇದೇರಿರ ಮತ್ತು ಕೋಲುಮಾದಂಡ (ರ‍್ವತ್ತೊಕ್ಲು), 11ಕ್ಕೆ ಮಂಡೀರ (ನೆಲಜಿ) ಮತ್ತು ಚೊಟ್ಟಂಗಡ, ಮಧ್ಯಾಹ್ನ 12ಕ್ಕೆ ಕೊಟ್ರಮಾಡ ಮತ್ತು ಮಚ್ಚಮಾಡ, 1ಕ್ಕೆ ಓಡಿಯಂಡ ಮತ್ತು  ಅಮ್ಮುಣಿಚಂಡ (ವಿಜೇತರು) ಹಾಗೂ ಕೊಚೇರ ಮತ್ತು ಚೆಯ್ಯಂಡ (ವಿಜೇತರು)

Read More

ಮಡಿಕೇರಿ ಏ.16 NEWS DESK : ನಮ್ಮ ಗಣತಿ, ನಮ್ಮ ಅಭಿವೃದ್ಧಿ 2027 ರ ಜನಗಣತಿಯ ಮೊದಲ ಹಂತವು ಈಗಾಗಲೇ ಆರಂಭವಾಗಿದ್ದು, ಸ್ವಯಂ ಗಣತಿ ಕಾರ್ಯ ಪೂರ್ಣಗೊಂಡಿದೆ. ಆ ದಿಸೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಸುಮಾರು 1,74,114 ಕುಟುಂಬಗಳಲ್ಲಿ 7,379 ಪ್ರಗತಿಯಾಗಿದೆ. ಉಳಿದಂತೆ ಏಪ್ರಿಲ್, 16 ರಿಂದ ಮೇ, 15 ರವರೆಗೆ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಗಣತಿ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಮಾಹಿತಿ ನೀಡಿದ್ದಾರೆ. ಮನೆ ಮನೆ ಗಣತಿ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ 999 ಗಣತಿದಾರರನ್ನು ನಿಯೋಜಿಸಲಾಗಿದೆ. ಮಡಿಕೇರಿ ತಾಲ್ಲೂಕಿಗೆ 187, ಮಡಿಕೇರಿ ನಗರಕ್ಕೆ 61, ಸೋಮವಾರಪೇಟೆ ತಾಲ್ಲೂಕಿಗೆ 186, ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ 12, ವಿರಾಜಪೇಟೆ ತಾಲ್ಲೂಕಿಗೆ 133, ವಿರಾಜಪೇಟೆ ಪುರಸಭೆ ವ್ಯಾಪ್ತಿಗೆ 36, ಪೊನ್ನಂಪೇಟೆ ತಾಲ್ಲೂಕಿನಲ್ಲಿ 161, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 19, ಕುಶಾಲನಗರ ತಾಲ್ಲೂಕಿಗೆ 158, ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ 46, ಒಟ್ಟು 999 ಗಣತಿದಾರರನ್ನು ನಿಯೋಜಿಸಲಾಗಿದೆ. ಜೊತೆಗೆ 172 ಮಂದಿ…

Read More

ಮಡಿಕೇರಿ NEWS DESK ಏ.15 : ಕೊಡವರ ಹೊಸ ವರ್ಷಾಚರಣೆ ಎಡ್ಮಾö್ಯರ್ 1 ರ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಗೋಣಿಕೊಪ್ಪಲಿನಲ್ಲಿ ಪಂಜಿನ ಮೆರವಣಿಗೆ ಮತ್ತು ಮಾನವ ಸರಪಳಿ ನಡೆಯಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಕೊಡವರ ಹಕ್ಕುಗಳನ್ನು ಪ್ರತಿಪಾದಿಸಿದರು. 32ನೇ ವರ್ಷದ ಎಡ್ಮ್ಯಾರ್ 1 ರ ಪ್ರಯುಕ್ತ ಸಿಎನ್‌ಸಿಯಿಂದ ಗೋಣಿಕೊಪ್ಪಲಿನಲ್ಲಿ ಪಂಜಿನ ಮೆರವಣಿಗೆ ಮತ್ತು ಮಾನವ ಸರಪಳಿ 1 ನ್ನು ಆಚರಿಸಿದ ಸಿಎನ್‌ಸಿ ಸಂಘಟನೆಯ ಪ್ರಮುಖರು ಹಾಗೂ ಕೊಡವ, ಕೊಡವತಿಯರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ದುಡಿಕೊಟ್ಟ್ ಪಾಟ್ ನೊಂದಿಗೆ ಗೋಣಿಕೊಪ್ಪಲಿನ ಆರ್‌ಎಂಸಿ ಯಾರ್ಡ್ ಬಳಿಯಿಂದ ಮುಖ್ಯ ಬೀದಿಯಲ್ಲಿ ಪೊಂಬೊಳ್ಕ್ ಮೆರವಣಿಗೆ ನಡೆಸಿದರು. ಮಾನವ ಸರಪಳಿ ರಚಿಸಿದ ನಂತರ ರಾಜ್ಯಾಂಗದತ್ತ ಹಕ್ಕೊತ್ತಾಯಗಳನ್ನು ಮಂಡಿಸಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ ಅವರು ಕೊಡವರು ಪ್ರತ್ಯೇಕ ಮೂಲವಂಶಸ್ಥ ಜನಾಂಗವಾಗಿದ್ದು, ಸಂವಿಧಾನದ ಮೂಲಭೂತ ಹಕ್ಕುಗಳ 32ನೇ ವಿಧಿ ಪ್ರಕಾರ ಭಾರತ ಸರ್ಕಾರ ಸಂವಿಧಾನಿಕ ಪರಿಹಾರವಾಗಿ…

Read More

ವಿರಾಜಪೇಟೆ, NEWS DESK ಏ.15: ಪಟ್ಟಣದ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್ ಎಸ್ ಎಸ್ ಘಟಕದ ವತಿಯಿಂದ ಕಾಲೇಜಿನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ಡಾ. ಬಿ. ಆರ್. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸುವುದರ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ ಬಿ. ಡಿ. ರವರು ಮಾತನಾಡಿ ಮಹನೀಯರುಗಳ ಜಯಂತಿ ಆಚರಣೆಗಳು ಅವರು ಸಮಾಜಕ್ಕೆ ಹಾಗೂ ರಾಷ್ಟ್ರಕ್ಕೆ ನೀಡಿದ ಕೊಡುಗೆಗಳ ಪ್ರತೀಕವಾಗಿದ್ದು ಅಂತೆಯೇ ರಾಷ್ಟ್ರ ಕಂಡ ಅಪ್ರತಿಮ ಮಹನೀಯ ವ್ಯಕ್ತಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರಾಗಿದ್ದು ಭಾರತದ ಸಂವಿಧಾನದ ರಚನೆಯಲ್ಲಿ ಅವರು ವಹಿಸಿದ ಪಾತ್ರ ಅಪಾರವಾಗಿದೆ ಎಂದರು.ವಿದ್ಯಾರ್ಥಿಗಳು ಮಹಾನ್ ನಾಯಕರನ್ನು ಆದರ್ಶವಾಗಿಟ್ಟು ಯಶಸ್ವಿ ಪ್ರಜೆಗಳಾಗಿ ಎಂದು ಕಿವಿಮಾತನ್ನು ಹೇಳಿದರು. ಕಾಲೇಜಿನ ಎನ್ ಎಸ್ ಎಸ್ ಘಟಕದ ನಾಯಕ ಮುತ್ತಪ್ಪ ದಿನದ ಮಹತ್ವದ ಕುರಿತು ಮಾತನಾಡಿ ಡಾ. ಬಿ ಆರ್ ಅಂಬೇಡ್ಕರ್…

Read More

ಮಡಿಕೇರಿ NEWS DESK ಏ.15 : ಮಡಿಕೇರಿ ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದಲ್ಲಿ ಏ.19 ರಿಂದ 21ರ ವರೆಗೆ ಶ್ರೀ ಕೋಟೆ ಮಾರಿಯಮ್ಮ ದೇವಿಯ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ನಾಗ ಪ್ರತಿಷ್ಠಾಪನಾ ಮಹೋತ್ಸವ, ನಾಗದರ್ಶನ, ಪಾಷಾಣಮೂರ್ತಿ ದೈವದ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ಕೋಲ ಹಾಗೂ ಅಗೆಲು ಸೇವೆ ನಡೆಯಲಿದೆ. ಏ.19 ರಂದು ಸಂಜೆ 6 ಗಂಟೆಗೆ ಪಯ್ಯನೂರು ಹೆಸರಾಂತ ತಂತ್ರಿಗಳಾದ ಆಚಾರ್ಯ ಈಶ್ವರನ್ ನಂಬೂದರಿರವರ ನೇತೃತ್ವದಲ್ಲಿ ದೇವಿಯ ಸನ್ನಧಿಯಲ್ಲಿ ಧಾರ್ಮಿಕ ವಿಧಿವಿಧಾನಗಳಾದ ಆಚಾರ್ಯ ವರಣಂ, ಪುಣ್ಯಾಹ ಶುದ್ದಿ, ಸುದರ್ಶನ ಹೋಮ, ದೇವಿ ಪೂಜೆ, ಲಲಿತಾ ಸಹಸ್ರನಾಮಾರ್ಚನೆ, ಪ್ರಸಾದ ವಿತರಣೆ ನೆರವೇರಲಿದೆ. ಏ.20 ರಂದು ಬೆಳಿಗ್ಗೆ 6 ಗಂಟೆಗೆ ಮಹಾಗಣಪತಿ ಹೋಮ, ನವಕ ಪಂಚಗವ್ಯ ಕಳಶ ಪೂಜೆ, ನವಕ ಪಂಚಗವ್ಯ ಕಳಶಾಭಿಷೇಕ, ಸರ್ವಾಲಂಕಾರ ಮಹಾಪೂಜೆ, ಪಾಷಾಣಮೂರ್ತಿ ದೈವದ ಕಳಶ ಪೂಜೆ, ಅಲಂಕಾರ ಪೂಜೆ ಹಾಗೂ ಮಂಗಳಾರತಿ ನಡೆಯಲಿದೆ. ನಾಗ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಪ್ರಯುಕ್ತ ಬೆಳಿಗ್ಗೆ 8 ಗಂಟೆಗೆ ಆಶ್ಲೇಷ…

Read More