ಮಡಿಕೇರಿ ಏ.11 NEWS DESK : ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಮೇ 7 ರಿಂದ 10 ರವರೆಗೆ ಸೋಮವಾರಪೇಟೆಯ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಯಿಫಾ ಹಾಕಿ ಚಾಂಪಿಯನ್ ಟ್ರೋಫಿ ಕ್ರೀಡಾಕೂಟದ ಲೋಗೋ ಹಾಗೂ ಟ್ರೋಫಿಗಳ ಅನಾವರಣ ಕಾರ್ಯಕ್ರಮ ಮಡಿಕೇರಿಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆಯಿತು. ಲೋಗೋವನ್ನು ಅನಾವರಣ ಮಾಡಿ ಮಾತನಾಡಿದ ಜಿಲ್ಲಾ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು, ಕೊಡಗು ಜಿಲ್ಲೆ ಕ್ರೀಡೆಯ ತವರು. ಇಂತಹ ನೆಲದಲ್ಲಿ ಪ್ರತಿಷ್ಠಿತ ತಂಡಗಳ ನಡುವೆ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿರುವುದು ಶ್ಲಾಘನೀಯ. ರಾಜ್ಯ ಮಟ್ಟದ ಹಾಕಿ ಕ್ರೀಡಾಕೂಟಕ್ಕೆ ಜಿಲ್ಲಾಡಳಿತದಿಂದ ಬೇಕಾಗುವ ಅಗತ್ಯ ನೆರವು ಒದಗಿಸಲಾಗುವುದು ಎಂದರು. ಟ್ರೋಫಿಗಳನ್ನು ಅನಾವರಣ ಮಾಡಿದ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ. ವಿಸ್ಮಯಿ ಚಕ್ರವರ್ತಿ ಅವರು, ಇಲಾಖೆಯಿಂದ ಹಾಕಿ ಪಂದ್ಯಾವಳಿಗೆ ಅಗತ್ಯವಿರುವ ಎಲ್ಲಾ ರೀತಿಯ ನೆರವು ಒದಗಿಸಲಾಗುವುದು. ಸೋಮವಾರಪೇಟೆಯ ಹಾಕಿ ಟರ್ಫ್ ಅನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸ್ಥಳೀಯ ಪ್ರತಿಭೆಗಳಿಗೆ…
ಲೇಖಕ: admin
ಮಡಿಕೇರಿ ಏ.11 NEWS DESK : ಕೊಡಗು ಜಿಲ್ಲಾ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2025-26ನೇ ಸಾಲಿನಲ್ಲಿ ನಡೆದಿದ್ದ 9 ಕಳವು ಪ್ರಕರಣಗಳನ್ನು ಬೇಧಿಸಿ ಒಟ್ಟು 20 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದು, ಅದನ್ನು ಮಾಲೀಕರಿಗೆ ಹಸ್ತಾಂತರಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್.ಪಿ ವಿವಿಧ ಕಳವು ಪ್ರಕರಣಗಳಲ್ಲಿ ಒಟ್ಟು 228.19 ಗ್ರಾಂ ಚಿನ್ನಾಭರಣ, 2 ಕೆ.ಜಿ. 422 ಗ್ರಾಂ ಬೆಳ್ಳಿ ಆಭರಣ, 6.97 ಲಕ್ಷ ರೂ. ನಗದು, 6495 ಕೆ.ಜಿ ಕಾಫಿ, 75 ಕೆ.ಜಿ ಕರಿಮೆಣಸು, 5 ಚೀಲ ಪಾರ್ಚ್‍ಮೆಂಟ್ ಕಾಫಿ, 2 ಕಾರು, 1 ದ್ವಿಚಕ್ರ ವಾಹನ, 5 ಮೊಬೈಲ್ ಫೋನ್ ಗಳನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ. ಅಲ್ಲದೆ ಮೊಬೈಲ್ ಕಳೆದು ಹೋದ ಪ್ರಕರಣದಡಿ ಒಟ್ಟು 54 ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಲಾಗಿದೆ. ವಿವಿಧ ಕಳವು ಪ್ರಕರಣಗಳಲ್ಲಿ ಸ್ವತ್ತುಗಳನ್ನು ಕಳೆದುಕೊಂಡ ಮಾಲೀಕರಿಗೆ ಕಾನೂನಾತ್ಮಕವಾಗಿ ಹಸ್ತಾಂತರ…
ಮಡಿಕೇರಿ ಏ.11 NEWS DESK : ತಿಂಗಳ ಒಳಗಾಗಿ ರಾಜ್ಯದ ಬಗರ್ ಹುಕುಂ ಸಾಗುವಳಿದಾರರಿಗೆ ಸಂಬಂಧಿಸಿದಂತೆ ಸರ್ಕಾರ ಅಗತ್ಯ ತೀರ್ಮಾನಗಳನ್ನು ಕೈಗೊಂಡು ನೆಲೆ ಇಲ್ಲದವರಿಗೆ ನೆಲೆಯೊದಗಿಸದಿದ್ದಲ್ಲಿ “ಮಾಡು ಇಲ್ಲವೆ ಮಡಿ” ಚಳವಳಿಯನ್ನು ರಾಜ್ಯ ವ್ಯಾಪಿ ಹಮ್ಮಿಕೊಳ್ಳುವುದು ಮಾತ್ರವಲ್ಲ, ಮೇ1 ರಿಂದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅನಿರ್ದಿಷ್ಟಾವಧಿ ಹೋರಾಟವನ್ನು ಆರಂಭಿಸುವುದಾಗಿ ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ಸ್ಪಷ್ಟಪಡಿಸಿದೆ. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪದಾಧಿಕಾರಿಗಳು, ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯ ಬಗರ್ ಹುಕುಂ ಸಾಗುವಳಿದಾರರು, ಅರಣ್ಯ ಭೂಮಿ ಹಕ್ಕು ಪ್ರದಿಪಾದಿಸುತ್ತಿರುವವರು ಹಲ ದಶಕಗಳಿಂದ ಭೂಮಿಯ ಹಕ್ಕಿಗಾಗಿ ಕಾಯುತ್ತಲೆ ಇದ್ದಾರೆ. ಇಲ್ಲಿಯವರೆಗು ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಹುಸಿ ಭರವಸೆಗಳನ್ನು ನೀಡಿವೆಯೇ ಹೊರತು ತಮ್ಮ ಮೂಲಬೇಡಿಕೆಗಳ ಈಡೇರಿಕೆಯತ್ತ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು. ಅರಣ್ಯದ ಅಂಚಿನ ಭಾಗಗಳು, ಗೋಮಾಳ, ಸರ್ಕಾರಿ ಜಾಗಗಳಲ್ಲಿ ಹಲವಾರು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಭೂ ಹೀನರು, ತಾವಿರುವ ಜಾಗದ ಹಕ್ಕು ಪತ್ರಕ್ಕಾಗಿ ಫಾರಂ ನಂ.50,53,57…
ಮಡಿಕೇರಿ ಏ.11 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕೊಡಮಾಡಲಾಗುವ ಪ್ರತಿಷ್ಠಿತ “ವಿಜಯಾ ವಿಷ್ಣು ಭಟ್ ದತ್ತಿ ಪ್ರಶಸ್ತಿ”ಯನ್ನು ಈ ಬಾರಿ ಉಪನ್ಯಾಸಕರು ಹಾಗೂ ಲೇಖಕರಾದ ಪ್ರತಿಮಾ ಹರೀಶ್ ರೈರವರಿಗೆ ಶನಿವಾರ ಪ್ರದಾನ ಮಾಡಲಾಯಿತು. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ಆಯೋಜಿತ ಪ್ರಶಸ್ತಿ ಪ್ರದಾನ ಮತ್ತು ಜಲಜಾ ಶೇಖರ್ ಹಾಗೂ ಜೆ.ಸಿ.ಶೇಖರ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ, ಕಾಲೇಜಿನ ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಸ್ಥರು ಹಾಗೂ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪುರಸ್ಕøತೆ ಪ್ರೊ.ನಯನ ಕಶ್ಯಪ್ ಅವರು, “ಅಂತರಗಂಗೆ” ಅಂಕಣ ಬರಹಗಳ ಪುಸ್ತಕವನ್ನು ರಚಿಸಿರುವ ಪ್ರತಿಮಾ ಹರೀಶ್ ರೈ ಅವರಿಗೆ ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಹಾಗೂ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಮನೆ ಮನಗಳಲ್ಲಿ ಕನ್ನಡಕ್ಕಿರಲಿ ಆದ್ಯತೆ- ಕಾರ್ಯಕ್ರಮವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿದ ಪೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಮೇಜರ್ ಡಾ. ರಾಘವ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ…
ಮಡಿಕೇರಿ NEWS DESK ಏ.11 : ವಿರಾಜಪೇಟೆ ಸಮೀಪದ ಬೇತ್ರಿ ಗ್ರಾಮದ ಕಾಫಿ ತೋಟವೊಂದರಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ. ಕಾಫಿ ತೋಟದಲ್ಲಿ ಪತ್ತೆಯಾದ ನವಜಾತ ಹೆಣ್ಣು ಶಿಶುವನ್ನು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರಕ್ಷಿಸಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿ ಶಿಶುಗಳ ತುರ್ತು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿಶುವಿನ ಪೋಷಕರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.
ಮಡಿಕೇರಿ ಏ.11 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ಆಯೋಜಿಸಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.12ರಂದು ನಡೆಯುವ ಪಂದ್ಯಗಳು. *ಮೈದಾನ 1* ಬೆಳಿಗ್ಗೆ 9 ಗಂಟೆಗೆ ಬೊಳಂದಂಡ ಮತ್ತು ಮುಂಡಂಡ, 10ಕ್ಕೆ ಪಡೆಯೆಟ್ಟಿರ ಮತ್ತು ಮಂದತಂಡ, 11ಕ್ಕೆ ಕಲ್ಲೇಂಗಡ (ಬೇಳೂರು) ಮತ್ತು ಮಾದೆಯಂಡ (ಎಂ.ಬಾಡಗ), ಮಧ್ಯಾಹ್ನ 1ಕ್ಕೆ ಕೊಚ್ಚೆರ ಮತ್ತು ಕೈಪಟ್ಟಿರ, 2ಕ್ಕೆ ಅಜ್ಜಿಕುಟ್ಟಿರ ಮತ್ತು ಚೆನ್ನಪಂಡ, 3ಕ್ಕೆ ಬೊಳ್ಳೇರ ಮತ್ತು ಪಟ್ಟಡ (ಬೇಟೋಳಿ) ಹಾಗೂ ಸಂಜೆ 4 ಗಂಟೆಗೆ ಪೆಬ್ಬಟ್ಟಿರ ಮತ್ತು ಕೀತಿಯಂಡ *ಮೈದಾನ 2* ಬೆಳಿಗ್ಗೆ 9 ಗಂಟೆಗೆ ಮೂಕೊಂಡ ಮತ್ತು ಮೇದುರ, 10ಕ್ಕೆ ಕರವಟ್ಟಿರ ಮತ್ತು ಮಾಚೆಟ್ಟಿರ (ಬಾಳುಗೋಡು), 11ಕ್ಕೆ ಬೊಳ್ಳಚೆಟ್ಟಿರ ಮತ್ತು ಕೊಕ್ಕೆಂಗಡ, ಮಧ್ಯಾಹ್ನ 12ಕ್ಕೆ ಪುಟ್ಟಿಚಂಡ (ಬೊಳ್ಳರಿಮಾಡ) ಮತ್ತು ಬಾಚಿರ, 1ಕ್ಕೆ ಕೊಳುವಂಡ ಮತ್ತು ಆಟ್ರಂಗಡ, 2ಕ್ಕೆ ಮೋಟನಾಳಿರ ಮತ್ತು ಗಾಂಡಂಗಡ ಹಾಗೂ 3 ಗಂಟೆಗೆ ಕೈಬಿಲಿರ ಮತ್ತು ಕುಟ್ಟಂಡ (ಅಮ್ಮತಿ)
ಮಡಿಕೇರಿ NEWS DESK ಏ.11 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.11ರಂದು ಗೆಲುವು ಸಾಧಿಸಿದ ತಂಡಗಳು. *ಮೈದಾನ 1* ಕಟ್ಟೇರ (ಅರಮೇರಿ) ಮತ್ತು ಅಮ್ಮಾಟಂಡ ತಂಡಗಳ ನಡುವಿನ ಹಣಾಹಣಿಯಲ್ಲಿ ಅಮ್ಮಾಟಂಡ 7 ವಿಕೆಟ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕಟ್ಟೇರ 6 ಓವರ್ ಗಳಲ್ಲಿ 5 ವಕೆಟ್ 73 ರನ್ ಗಳನ್ನು ಸೇರಿಸಿತು. ಅಮ್ಮಾಟಂಡ 5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 77 ರನ್ ಗಳನ್ನು ಗಳಿಸಿ ಗೆಲುವು ಸಾಧಿಸಿತು. ಪಾಲಂದಿರ ಮತ್ತು ಹೊಟ್ಟೆಂಗಡ ನಡುವಿನ ಪಂದ್ಯದಲ್ಲಿ ಪಾಲಂದಿರ 58 ರನ್‌ಗಳಿಂದ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಲಂದಿರ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 140 ರನ್ ಗಳನ್ನು ಗಳಿಸಿತು. ಹೊಟ್ಟೆಂಗಡ 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 82 ರನ್…
ಮಡಿಕೇರಿ ಏ.11 NEWS DESK : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸರ್ಕಾರಿ ಪಿಯು ಕಾಲೇಜಿನ ಕಲಾ ವಿಭಾಗದ ವಿಧ್ಯಾರ್ಥಿನಿ ಎಸ್.ಪಿ.ತಸ್ಮಿಯಾ 548/600 (91.33%) ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಸೋಮವಾರಪೇಟೆಯ ನಿವಾಸಿಗಳಾದ ಪೀರ್ ಷಾ ಮತ್ತು ಬಿಮುನೀರಾ ದಂಪತಿಯ ಪುತ್ರಿ.
ಕುಶಾಲನಗರ ಏ.11 NEWS DESK : 2026-27 ರ ಆಸ್ತಿ ತೆರಿಗೆ ಮತ್ತು ಉದ್ದಿಮೆ ಪರವಾನಗಿ ತೆರಿಗೆ ಸಂಗ್ರಹ ಮಾಡಲು ಪುರಸಭೆ ವ್ಯಾಪ್ತಿಯ ಕೆಲವು ಕಡೆಗಳಲ್ಲಿ ಕ್ಯಾಂಪ್ ಮಾಡಬೇಕೆಂದು ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಪದಾಧಿಕಾರಿಗಳು ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಬೇರೆ ಬೇರೆ ಸ್ಥಳಗಳಲ್ಲಿ ತೆರಿಗೆ ಸಂಗ್ರಹ ಕ್ಯಾಂಪ್ ಮಾಡುವುದರಿಂದ ನಿರೀಕ್ಷೆಗೂ ಮೀರಿದ ತೆರಿಗೆ ಸಂಗ್ರಹವಾಗುವುದರ ಜೊತೆಗೆ ಸಾರ್ವಜನಿಕರಿಗೂ ತುಂಬ ಅನುಕೂಲವಾಗಲಿದೆ. ಅನವಶ್ಯಕವಾಗಿ ಕಚೇರಿ ಅಲೆಯುವುದು ತಪ್ಪುತ್ತದೆ. ಸಿಬ್ಬಂದಿಗಳು ಕಚೇರಿಯಲ್ಲಿ ಇದ್ದರೇ ಬಹಳ ಕೆಲಸದ ಒತ್ತಡವಿರುತ್ತದೆ. ಕ್ಯಾಂಪ್ ಮಾಡಿದರೆ ಸಿಬ್ಬಂದಿಗಳು ಕೇವಲ ತೆರಿಗೆ ಸಂಗ್ರಹದ ಕಡೆ ಗಮನ ಹರಿಸಲು ಸಹಕಾರಿಯಾಗುತ್ತದೆ. ತಕ್ಷಣವೇ ಕ್ಯಾಂಪ್ ಮಾಡುವುದರಿಂದ ಏ.31 ರವರೆಗೆ ವಿನಾಯಿತಿಯು ಜನರಿಗೆ ದೊರೆಯುತ್ತದೆ ಎಂದು ಅಧ್ಯಕ್ಷ ಕೆ.ಎಸ್.ನಾಗೇಶ್ ಹೇಳಿದರು. ಮುಖ್ಯಾಧಿಕಾರಿ ಗಿರೀಶ್ ಮಾತನಾಡಿ, ಪುರಸಭೆ ವತಿಯಿಂದ ಪ್ರತಿವರ್ಷವೂ ಕ್ಯಾಂಪ್ ಮಾಡುತ್ತಿದ್ದೇವೆ. ಈ ವರ್ಷವೂ ಖಂಡಿತ ಜನರ ಅನುಕೂಲಕ್ಕಾಗಿ ಮಾಡುತ್ತೇವೆ ಎಂದರು. ಆಸ್ತಿ ತೆರಿಗೆ ಮತ್ತು ಉದ್ದಿಮೆ ಪರವಾನಗಿ ತೆರಿಗೆಯನ್ನು…
ಮಡಿಕೇರಿ ಏ.11 NEWS DESK : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲಾ ಮಟ್ಟದ ಕಲಾ ವಿಭಾಗದಲ್ಲಿ ಕೂಡಿಗೆ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ನಂದಿತಾ ದ್ವಿತೀಯ ಮತ್ತು ಕಾಲೇಜಿಗೆ ಪ್ರಥಮ ಸ್ಥಾನವನ್ನು ಗಳಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದಿಂದ ಸನ್ಮಾನಿಸಲಾಯಿತು. ಬಣದ ಜಿಲ್ಲಾ ಅಧ್ಯಕ್ಷ ಬಿ.ಎ.ದಿನೇಶ್ ಶೆಟ್ಟಿ ಮತ್ತು ತಂಡದವರು ಕೂಡಿಗೆ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿ ಮತ್ತು ಅವರ ಪೋಷಕರನ್ನು ಸನ್ಮಾನಿಸಿ, ಗೌರವಿಸಿದರು. ಈ ಸಂದರ್ಭ ಜಿಲ್ಲಾ ಸಂಚಾಲಕ ಎಂ.ಎಸ್.ಮಣಿಕಂಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ, ಜಿಲ್ಲಾ ಉಪಾಧ್ಯಕ್ಷೆ ನಿರ್ಮಲಾ ಸುರೇಶ್, ಕಾರ್ಯದರ್ಶಿ ಸರಳಾ ರಾಮಣ್ಣ, ಗೌರವಾಧ್ಯಕ್ಷರು ನಾಗರಾಜ ಹೆಚ್.ಕಾವಲ್ ಕೊಂಡ, ಕುಶಾಲನಗರ ತಾಲ್ಲೂಕಿನ ಅಧ್ಯಕ್ಷ ಪುಟ್ಟಸ್ವಾಮಿ, ಕಾರ್ಯದರ್ಶಿ ಅನಸೂಯಾ, ಮುಖಂಡರಾದ ಪುಟ್ಟಮ್ಮ, ಗಣೇಶ ಯೋಗ ಶಿಕ್ಷಕರು, ಕಾಲೇಜು ಪ್ರಾಂಶುಪಾಲ ಹಂಡ್ರಂಗಿ ನಾಗರಾಜ್, ಸೇರಿದಂತೆ ಉಪನ್ಯಾಸಕ ವೃಂದ ಇದ್ದರು.






