ಮಡಿಕೇರಿ NEWS DESK ಮಾ.17 : ಕೊಡಗು ಜಿಲ್ಲೆಯಲ್ಲಿರುವ ಆದಿವಾಸಿ ಕುಟುಂಬಗಳಿಗೆ ನಿವೇಶನ ನೀಡಿ ಮನೆ ನಿರ್ಮಿಸಿಕೊಡಬೇಕು, ಮೂಲಭೂತ ಸೌಲಭ್ಯ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಜಿಲ್ಲೆಯಲ್ಲಿ ಆದಿವಾಸಿ ಕುಟುಂಬಗಳು ಅನುಭವಿಸುತ್ತಿರುವ ಸಂಕಷ್ಟದ ಬದುಕನ್ನು ವಿವರಿಸಿದ ಪ್ರಮುಖರು, ಸರಕಾರ ದುರ್ಬಲ ವರ್ಗವನ್ನು ನಿರ್ಲಕ್ಷಿಸುತ್ತಿದೆಯೆಂದು ಆರೋಪಿಸಿದರು. ಜಿಲ್ಲೆಯ ವಿವಿಧ ತೋಟಗಳ ಲೈನ್ ಮನೆಗಳಲ್ಲಿ ವಾಸಿಸುತ್ತಿರುವ ಆದಿವಾಸಿ ಕುಟುಂಬಗಳನ್ನು ಮುಕ್ತಗೊಳಿಸಿ, ಸ್ವಂತ ನಿವೇಶನ ಮತ್ತು ಮನೆಯನ್ನು ನೀಡಬೇಕು, ಒತ್ತುವರಿ ಭೂಮಿಯನ್ನು ಅತ್ಯಂತ ಕಡಿಮೆ ದರದಲ್ಲಿ ಆಸ್ತಿ ಹೊಂದಿರುವವರಿಗೆ ಗುತ್ತಿಗೆ ಆಧಾರದಲ್ಲಿ ನೀಡುವ ಆದೇಶವನ್ನು ಸರಕಾರ ವಾಪಾಸ್ಸು ಪಡೆಯಬೇಕು, ಒತ್ತುವರಿ ಭೂಮಿಯನ್ನು ಆದಿವಾಸಿ ಕುಟುಂಬಗಳಿಗೆ ಹಂಚಿಕೆ ಮಾಡಬೇಕು. ಜಿಲ್ಲೆಯಲ್ಲಿರುವ ಆದಿವಾಸಿ ಕುಟುಂಬಗಳಲ್ಲಿ ಸಮರ್ಪಕವಾಗಿ ಆಧಾರ್ ಕಾರ್ಡ್, ಪರಿತರ ಚೀಟಿ, ಮತದಾರರ ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ ಮತ್ತಿತರ ದಾಖಲೆಗಳು ಇಲ್ಲದೆ ಇರುವುದರಿಂದ, ಸರಕಾರ ನೀಡುವ ಯಾವುದೇ…
ಲೇಖಕ: admin
ಕುಶಾಲನಗರ NEWS DESK ಮಾ.17 : ಹೊಸ ವರ್ಷದ ಆರಂಭ ಮತ್ತು ಸಮೃದ್ಧಿಯ ಸಂಕೇತವಾದ ಯುಗಾದಿ ಹಬ್ಬದ ಪ್ರಯುಕ್ತ ಕುಶಾಲನಗರದ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ತನ್ನ ಗ್ರಾಹಕರಿಗಾಗಿ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ. ಹಳದಿ ಟ್ಯಾಗ್ ಹೊಂದಿರುವ ವಿಶೇಷ ಆಭರಣಗಳ ಮೇಕಿಂಗ್ ಶುಲ್ಕಗಳ ಮೇಲೆ ಶೇ.50 ರವರೆಗೆ ರಿಯಾಯಿತಿಯೊಂದಿಗೆ ಖರೀದಿ ಮಾಡುವ ಅವಕಾಶವನ್ನು ಪಡೆಯಬಹುದು. ಕುಶಾಲನಗರ, ಪುತ್ತೂರು, ಸುಳ್ಯ, ಹಾಸನ ಹಾಗೂ ಮೂಡಬಿದ್ರೆಯ ಎಲ್ಲಾ ಮಳಿಗೆಗಳಲ್ಲಿ ಈ ಆಫರ್ ಲಭ್ಯವಿದ್ದು, ಗ್ರಾಹಕರು ಹಬ್ಬದ ಸಂಭ್ರಮವನ್ನು ಹೊಸ ಆಭರಣಗಳೊಂದಿಗೆ ಆಚರಿಸಲು ಉತ್ತಮ ಅವಕಾಶ ಕಲ್ಪಿಸಲಾಗಿದೆ. ಈ ಕೊಡುಗೆ ಮಾರ್ಚ್ 18ರಿಂದ 23ರವರೆಗೆ ಮಾತ್ರ ಲಭ್ಯವಿರುತ್ತದೆ. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಚಿನ್ನ, ವಜ್ರ ಮತ್ತು ಬೆಳ್ಳಿಯ ಆಭರಣಗಳ ಮೇಲೆ ಆಕರ್ಷಕ ರಿಯಾಯಿತಿ ನೀಡಲಾಗುತ್ತಿದೆ. ಯುಗಾದಿ ಹಬ್ಬಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ “ಪ್ರಾಚಿ ಇಲೈಟ್”, ‘ಟೆಂಪಲ್ ಜ್ಯುವೆಲ್ಲರಿ’, ಆ್ಯಂಟಿಕ್ ಮತ್ತು ಪರಂಪರೆಯ ವಿನ್ಯಾಸಗಳ ಜೊತೆಗೆ ಆಧುನಿಕ ವಿನ್ಯಾಸಗಳ ಆಭರಣಗಳು ಲಭ್ಯವಿದ್ದು ಮದುವೆ ಹಾಗೂ ಹಬ್ಬಗಳಿಗಾಗಿ…
ಕಾಬೂಲ್/ಇಸ್ಲಾಮಾಬಾದ್, ಮಾರ್ಚ್ 17, 2026: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಹಗೆತನವು ಈಗ ಪೂರ್ಣ ಪ್ರಮಾಣದ ಯುದ್ಧದ ರೂಪ ಪಡೆದಿದೆ. ಸೋಮವಾರ ರಾತ್ರಿ ಪಾಕಿಸ್ತಾನದ ವಾಯುಪಡೆಯು ಕಾಬೂಲ್‌ನಲ್ಲಿರುವ ಅತಿದೊಡ್ಡ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ನಡೆಸಿದ ಭೀಕರ ಬಾಂಬ್ ದಾಳಿಯಲ್ಲಿ ಕನಿಷ್ಠ 400 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿದ್ದು, ಉಭಯ ರಾಷ್ಟ್ರಗಳ ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಆಸ್ಪತ್ರೆ ಮೇಲೆ ಬಾಂಬ್ ಮಳೆ: ಅಫ್ಘಾನಿಸ್ತಾನ ಸರ್ಕಾರದ ವಕ್ತಾರ ಹಮ್ದಲ್ಲಾ ಫಿತ್ರಾತ್ ನೀಡಿರುವ ಮಾಹಿತಿಯಂತೆ, ರಾತ್ರಿ 9 ಗಂಟೆ ಸುಮಾರಿಗೆ ಪಾಕಿಸ್ತಾನದ ಯುದ್ಧ ವಿಮಾನಗಳು ಕಾಬೂಲ್‌ನ ‘ಡ್ರಗ್ ಸೆಂಟರ್ ಆಸ್ಪತ್ರೆ’ ಮೇಲೆ ದಾಳಿ ನಡೆಸಿವೆ. ಭಾರಿ ಸಾವು-ನೋವು: 2,000 ಬೆಡ್‌ಗಳ ಸಾಮರ್ಥ್ಯವಿರುವ ಈ ಆಸ್ಪತ್ರೆಯ ಮೇಲೆ ನಡೆದ ದಾಳಿಯಲ್ಲಿ ರೋಗಿಗಳು, ವೈದ್ಯರು ಸೇರಿದಂತೆ 400 ಜನರು ಮೃತಪಟ್ಟಿದ್ದಾರೆ. ಅವಶೇಷಗಳಡಿ ಜನ: ಸ್ಫೋಟದ ತೀವ್ರತೆಗೆ ಆಸ್ಪತ್ರೆಯ ಪ್ರಮುಖ ವಿಭಾಗಗಳು ನೆಲಸಮವಾಗಿದ್ದು, ಇನ್ನೂ ನೂರಾರು ಜನರು ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ. ಆರೋಪ…
ಮಡಿಕೇರಿ ಮಾ.16 NEWS DESK : ಸುಂಟಿಕೊಪ್ಪದ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ವಿಶೇಷ ಚೇತನರಿಗೆ ರಾಜ್ಯಮಟ್ಟದ ಕ್ರೀಡಾಕೂಟ ನಡೆಯಿತು. ಪಾಲಿಬೆಟ್ಟ, ಮಂಗಳೂರು, ಮಡಿಕೇರಿ, ಮಂಡ್ಯ, ಮೈಸೂರು, ಕೊಡಗು ಮತ್ತು ಬೈಲುಕುಪ್ಪೆಯ ಟಿಬೇಟಿಯನ್ ವಸತಿ ಶಾಲೆ ಸೇರಿದಂತೆ ಸುಮಾರು 8 ಶಾಲೆಯ 150 ಕ್ಕೂ ಹೆಚ್ಚು ವಿಶೇಷ ಚೇತನ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. 8 ರಿಂದ 11 ವರ್ಷ, 12 ರಿಂದ 15 ವರ್ಷ, 16 ರಿಂದ 21 ವರ್ಷ, 22 ರಿಂದ 29 ವರ್ಷ ಹಾಗೂ 30 ವರ್ಷದಿಂದ ಮೇಲ್ಪಟ್ಟ ವಿಶೇಷಚೇತನರು 100 ಮೀಟರ್ ಓಟ, 200 ಮೀಟರ್ ಓಟ, ಶಾಟ್‍ಫೂಟ್, ಲಾಂಗ್ ಜಂಪ್, ರಿಲೇ ಮತ್ತಿತರ ಕ್ರೀಡಾಕೂಟದಲ್ಲಿ ಲವಲವಿಕೆಯಿಂದ ಪಾಲ್ಗೊಂಡಿದ್ದು, ಎದ್ದು ಕಂಡಿತು. ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ವಿಶೇಷಚೇತನರು ಯಾವುದೇ ಕಾರಣಕ್ಕೂ ವಿಚಲಿತರಾಗದೆ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಮತ್ತು…
ಮಡಿಕೇರಿ ಮಾ.16 NEWS DESK : ಸ್ವಚ್ಛ ಕೊಡಗು-ಸುಂದರ ಕೊಡಗು ಹೆಸರಿನಲ್ಲಿ ಪ್ರಸಿದ್ಧ ಪುಣ್ಯ ಕ್ಷೇತ್ರಗಳು ಸೇರಿದಂತೆ ಪ್ರವಾಸಿ ಸ್ಥಳಗಳು, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಸ್ವಚ್ಛತಾ ಅಭಿಯಾನವು ನಡೆಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಅರಣ್ಯ, ಪ್ರವಾಸೋದ್ಯಮ ಹಾಗೂ ಪ್ರವಾಸೋದ್ಯಮ ಇಲಾಖೆಯ ಪಾಲುದಾರರು ಹಾಗೂ ಇತರರ ಸಹಕಾರದಲ್ಲಿ ಸ್ವಚ್ಛ ಹಾಗೂ ಸುಂದರ ಕೊಡಗು ಅಭಿಯಾನ ನಡೆಯಿತು. ನಗರದ ರಾಜಾಸೀಟು ಉದ್ಯಾನವನದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಕೂರ್ಗ್ ಹೋಟೆಲ್ ಮತ್ತು ರೆಸಾರ್ಟ್ ಅಸೋಷಿಯೇಷನ್ ಅಧ್ಯಕ್ಷರಾದ ದಿನೇಶ್ ಕಾರ್ಯಪ್ಪ, ಹೋಂ ಸ್ಟೇ ಅಸೋಷಿಯೇಷನ್ ಅಧ್ಯಕ್ಷರಾದ ಮೋಂತಿ ಗಣೇಶ್, ಪ್ರವಾಸೋದ್ಯಮ ಪಾಲುದಾರರಾದ ಬಿ.ಜಿ.ಅನಂತಶಯನ, ಜಿ.ಚಿದ್ವಿಲಾಸ್, ಎಫ್‍ಎಂಸಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ.ರಾಘವ, ಓಂಕಾರೇಶ್ವರ ದೇವಸ್ಥಾನದ ಅಧ್ಯಕ್ಷರಾದ ಚುಮ್ಮಿ ದೇವಯ್ಯ, ಟೂರ್ ಅಂಡ್ ಟ್ರಾವೆಲ್ ಅಸೋಷಿಯೇಷನ್ ಅಧ್ಯಕ್ಷರಾದ ವಸಂತ, ಕೂರ್ಗ್ ಹೋಟೆಲ್ ಮತ್ತು ರೆಸಾರ್ಟ್ ಅಸೋಷಿಯೇಷನ್ ಕಾರ್ಯದರ್ಶಿ ನಾಸೀರ್, ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕರಾದ ಜತಿನ್, ಇತರರು ಇದ್ದರು. ಚೇಂಬರ್…
ಮಡಿಕೇರಿ ಮಾ.16 NEWS DESK : ಹೋಂ ನರ್ಸಿಂಗ್ ಕೇರ್ ಟೇಕರ್ ಆಗಿ ವಯೋವೃದ್ಧರೊಬ್ಬರ ಮನೆಯಲ್ಲಿ ಕೆಲಸಕ್ಕೆಂದು ಸೇರಿಕೊಂಡು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಮಡಿಕೇರಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲ್ಲೂಕಿನ ಮಣ್ಣೂರು ಗ್ರಾಮದ ಭದ್ರಪ್ಪ ಬಸಪ್ಪ ಹಡಪದ (27) ಬಂಧಿತ ಆರೋಪಿಯಾಗಿದ್ದಾನೆ. ಈತನ ಬಳಿಯಿಂದ ರೂ.5,09,000 ನಗದು, 137 ಗ್ರಾಂ ಚಿನ್ನಾಭಾರಣಗಳು ಹಾಗೂ 1 ಮೊಬೈಲ್ ಫೋನ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಹಿಂಭಾಗದ ಬಡಾವಣೆಯ ನಿವಾಸಿ ಪಾರ್ಥಸಾರಥಿ ಎಂಬುವವರ ಅಣ್ಣ ವಯೋವೃದ್ಧರಾಗಿದ್ದು, ಇವರನ್ನು ನೋಡಿಕೊಳ್ಳುವ ಸಲುವಾಗಿ ಹೋಂ ನಸಿರ್ಂಗ್ (Care Taker) ಕೆಲಸಕ್ಕಾಗಿ ಕೊಪ್ಪಳ ಜಿಲ್ಲೆ ಮೂಲದವನೆಂದು ಹೇಳಿಕೊಂಡು ವ್ಯಕ್ತಿಯೊಬ್ಬ ನೇಮಕಗೊಂಡಿದ್ದ. ಈತ ಇದೇ ಫೆ.28 ರಂದು ಮನೆಯಲ್ಲಿಟ್ಟಿದ್ದ ಅಂದಾಜು 80 ಗ್ರಾಂ ತೂಕದ ಚಿನ್ನಾಭರಣಗಳನ್ನು ಹಾಗೂ ರೂ.5,50,000 ನಗದನ್ನು ಕಳವು ಮಾಡಿದ್ದಾನೆ ಎಂದು ಆರೋಪಿಸಿ ಮಡಿಕೇರಿ ನಗರ ಪೊಲೀಸ್…
ಮಡಿಕೇರಿ ಮಾ.16 NEWS DESK : ದಕ್ಷಿಣ ಕೊಡಗಿನ ತಿತಿಮತಿ ಬಳಿ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಜಿಲ್ಲಾ ಪೊಲೀಸರು, ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಚೆನ್ನಯ್ಯನಕೋಟೆಯ ಕೆ.ಎಂ.ಉಬೈದ್(36), ಕೇರಳದ ಮಾನಂದವಾಡಿಯ ಕಾಟಿಕೊಳಂನ ಅಬ್ದುಲ್ ರೆಹಮಾನ್.ಪಿ, (34) ಹಾಗೂ ನಾಪೋಕ್ಲು ಸಮೀಪದ ಕೊಟ್ಟಮುಡಿಯ ಪಿ.ಎಂ.ಮುಜೀಬ್(36) ಬಂಧಿತ ಆರೋಪಿಗಳು. ಬಂಧಿತರಿಂದ 1,43,500 ರೂ. ನಗದು, ಮಹೀಂದ್ರ ಸ್ಕಾರ್ಪಿಯೋ, ಮಹೀಂದ್ರ ಬೊಲೇರೋ ಪಿಕ್‍ಅಪ್, ಚವರ್ ಲೆಟ್ ವಾಹನ ಹಾಗೂ 2 ಎತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಎತ್ತುಗಳನ್ನು ಹಾಗೂ ಹುಣಸೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹೀಂದ್ರ ಬೊಲೆರೋ ವಾಹನವನ್ನು ಕಳವು ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ತಿತಿಮತಿ ಉಪಠಾಣೆ ಸಮೀಪ ಹೆದ್ದಾರಿಯಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿರುವ ಕುರಿತು ದೊರೆತ ಮಾಹಿತಿ ಮೇರೆಗೆ ಪೊಲೀಸರು ವಾಹನ ತಪಾಸಣೆ ನಡೆಸಿದರು. ಈ ಸಂದರ್ಭ ಒಂದು ಕಾರನ್ನು…
ವಿರಾಜಪೇಟೆ ಮಾ.16 NEWS DESK : ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿಯ ಚೇರಳ ಗೌಡ ಸಮಾಜದ ನೂತನ ಸಮುದಾಯ ಭವನದವನ್ನು ವಿಧಾನಸಭೆಯ ಮಾಜಿ ಅಧ್ಯಕ್ಷ ಕೊಂಬಾರನ ಜಿ.ಬೋಪಯ್ಯ ಅವರು ಲೋಕಾರ್ಪಣೆಗೊಳಿಸಿದರು. ಕೊಡಗಿನ ಗೌಡ ಸಂಪ್ರದಾಯದಂತೆ ಭವನ ಉದ್ಘಾಟನಾ ಕಾರ್ಯಕ್ರಮ ನಡೆದು ಗೌಡ ಜನಾಂಗದವರು ತಮ್ಮ ಸಾಂಪ್ರಾದಾಯಿಕ ಉಡುಪಿನಲ್ಲಿ ಕಂಗೊಳಿಸಿದರು. ಚೇರಳ ಭಾಗಕ್ಕೆ ಸೇರಿದ 80 ಗೌಡ ಕುಟುಂಬಗಳಿಂದ ಮದುವೆಯಾಗಿ ತೆರಳಿದ ಮಹಿಳೆಯರನ್ನು ತವರೂರಿನಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೇ ಕಟ್ಟಡ ನಿರ್ಮಾಣ ಕತೃಗಳಾದ ಕೆಮ್ಮಾರನ ಸುರೇಶ್, ನೂಜಿಬೈಲು ಗಣಪತಿ, ಕೋಳಿಮಾಡು ಪಾಪು ಉತ್ತಪ್ಪ, ಸಮಾಜಕ್ಕೆ ಅತಿ ಹೆಚ್ಚಿನ ಧನಸಹಾಯ ನೀಡಿದ ಹೊಸಮನೆ ಪೂವಯ್ಯ ಅವರ ಪರವಾಗಿ ಮಗ ಜಿತೇಂದ್ರ, ಪೇರಿಯನ ಉದಯಕುಮಾರ್, ಗೌಡ ಸಮಾಜದ ಸಂಸ್ಥಾಪಕರಾದ ಮರದಾಳು ಉಲ್ಲಾಸ, ಮರದಾಳು ಗೋಪಾಲ, ಮರದಾಳು ಜನಾರ್ಧನ, ಪೇರಿಯನ ಪ್ರಕಾಶ್ ಸೇರಿದಂತೆ ಸಮುದಾಯ ಭವನಕ್ಕೆ ಧನಸಹಾಯ ನೀಡಿದವರನ್ನು, ಕಟ್ಟಡ ನಿರ್ಮಾಣದ ಕನಸು ಹೊತ್ತು ಸದಾ ಕೈ ಜೊಢಿಸಿದ ಮಹನೀಯರನ್ನು, ಗೌಡ ಸಮಾಜದ ಸಭೆ ನಡೆಸಲು ಸ್ಥಳಾವಕಾಶ…
ಸೋಮವಾರಪೇಟೆ ಮಾ.16 NEWS DESK : ಎಸ್‍ಎಸ್‍ಎಲ್‍ಸಿ ಪರೀಕ್ಷೆ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಸಮಯದ ಮೌಲ್ಯ ಅರಿತು ಪರಿಶ್ರಮಪಟ್ಟು ವಿದ್ಯಾಭ್ಯಾಸ ಮಾಡಬೇಕು ಎಂದು ಸೋಮವಾರಪೇಟೆಯ ವಿರಕ್ತ ಮಠದ ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಸೋಮವಾರಪೇಟೆ ಎಸ್.ಜೆ.ಎಂ ಶಾಲೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಪರೀಕ್ಷಾ ಸಿದ್ದತೆಯ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶಿಕ್ಷಕರು ಮಾಡುವ ಪಾಠವನ್ನು ಗಮನದಿಂದ ಕೇಳಿ ಕಲಿಕೆಯಲ್ಲಿ ಮುನ್ನಡೆಯಬೇಕು. ಸರ್ಕಾರಿ ಶಾಲೆಗಳು ಉತ್ತಮ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಸಂಸ್ಕಾರವನ್ನು ಕೂಡ ಕಲಿಸಿಕೊಡುತ್ತವೆ ಎಂದರು. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಿಂದ ದೂರವಿದ್ದು ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕು. ಸಮಯ ಸಿಕ್ಕಾಗ ಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಂಡರೆ ಸಾಮಾನ್ಯ ಜ್ಞಾನವೂ ಹೆಚ್ಚುತ್ತದೆ ಎಂದು ಸಲಹೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ ಮಾತನಾಡಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಎದುರಿಸಬೇಕು. ಪರೀಕ್ಷೆ ಜೀವನದ ಮಹತ್ವದ ಹಂತವಾಗಿದ್ದು ಶ್ರಮಪಟ್ಟು ಓದಿ…
ಸೋಮವಾರಪೇಟೆ ಮಾ.16 NEWS DESK : ಶ್ರೀ ಆಂಜನೇಯಸ್ವಾಮಿ ದೇವಾಲಯ ಸಮಿತಿ ವತಿಯಿಂದ ಮಾ.27 ರಂದು ಅರ್ಥಪೂರ್ಣವಾಗಿ ಶ್ರೀ ರಾಮನವಮಿ ಉತ್ಸವ ಆಚರಿಸಲಾಗುವುದು ಎಂದು ಶ್ರೀ ಆಂಜನೇಯ ದೇವಾಲಯ ಸಮಿತಿ ಅಧ್ಯಕ್ಷ ಸಿ.ಪಿ.ಗೋಪಾಲ್ ಹೇಳಿದರು. ಮಾ.19 ರಿಂದ 27 ರ ತನಕ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ 6 ಗಂಟೆಯಿಂದ 8 ಗಂಟೆ ತನಕ ವಿಶೇಷ ಪೂಜೆ ನಡೆಯಲಿದೆ. 19 ರಿಂದ ದಿನಕ್ಕೊಂದರಂತೆ ಶ್ರೀಗಂಧ, ವಿಳ್ಯೆದೆಲೆ, ಬೆಣ್ಣೆ, ಕೇಸರಿ, ತುಳಸಿ, ಕುಂಕುಮ, ಹೂವಿನ ಮತ್ತು ಮುತ್ತಿನ ಆಲಂಕಾರರನ್ನು ಶ್ರೀರಾಮನ ಉತ್ಸವ ಮೂರ್ತಿಗೆ ಮಾಡಿ ಪೂಜೆ ಸಲ್ಲಿಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 27 ರ ಸಂಜೆ 6 ಗಂಟೆಯಿಂದ ಶ್ರೀ ರಾಮಾಂಜನೇಯೋತ್ಸವ ಮೆರವಣಿಗೆ ಪಟ್ಟಣದ ನಿಗದಿತ ರಸ್ತೆಯಲ್ಲಿ ನಡೆಯಲಿದೆ. ಕಳೆದ 60 ವರ್ಷಗಳಿಂದಲೂ ಅಂಜನೇಯ ದೇವಾಲಯದಲ್ಲಿ ರಾಮನವಮಿ ಆಚರಿಸಿ, ಮೆರವಣಿಗೆ ಮಾಡಲಾಗುತ್ತಿದೆ. 27 ರಂದು ಪಾನಕ ವಿತರಣೆ, ಅನ್ನದಾನ ನಡೆಯಲಿದೆ ಎಂದು ಹೇಳಿದರು. ಅಂದಾಜು 4.50 ಕೋಟಿ ರೂ.ಗಳ ವೆಚ್ಚದಲ್ಲಿ ಆಂಜನೇಯ ದೇವಾಲಯದ…






