ಮಡಿಕೇರಿ NEWS DESK ಏ.12 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.13 ರ ಪಂದ್ಯಗಳು >>> *ಮೈದಾನ 1* ಬೆಳಿಗ್ಗೆ 9 ಗಂಟೆಗೆ ಕೊಲ್ಲಿರ (ಚೆಯ್ಯಂಡಾಣೆ) ಮತ್ತು ಕೂತಂಡ, 10ಕ್ಕೆ ಅಲ್ಲಂಗಡ ಮತ್ತು ಬಾಚಳ್ಳಿರ, 11ಕ್ಕೆ ತೆಕ್ಕಡ ಮತ್ತು ಕೊಟ್ಟುಕತ್ತೀರ, ಮಧ್ಯಾಹ್ನ 12ಕ್ಕೆ ಅಲ್ಲಪಂಡ ಮತ್ತು ನಂದಿನೆರವoಡ, 1ಕ್ಕೆ ಹಂಚೆಟ್ಟಿರ ಮತ್ತು ವಾಂಚಿರ ಹಾಗೂ 2 ಗಂಟೆಗೆ ಮಾದೆಯಂಡ (ಮಾದಾಪುರ) ಮತ್ತು ಮಾಳೆಯಂಡ >> *ಮೈದಾನ 2* >> ಬೆಳಿಗ್ಗೆ 9 ಗಂಟೆಗೆ ಕೋಡಿರ ಮತ್ತು ಐಲಪಂಡ, 10ಕ್ಕೆ ಕಾಳಪಂಡ ಮತ್ತು ಕನ್ನಿಗಂಡ, 11ಕ್ಕೆ ಮುದ್ದಂಡ ಮತ್ತು ಬಲ್ಯಮೇದಿರ, ಮಧ್ಯಾಹ್ನ 12ಕ್ಕೆ ನಾಗಚೆಟ್ಟಿರ ಮತ್ತು ಮುಕ್ಕಾಟಿರ (ಕುಂಜಲಗೇರಿ), 1ಕ್ಕೆ ನಾಪಂಡ ಮತ್ತು ಮುಕ್ಕಾಟಿರ (ಮೂವತ್ತೊಕ್ಲು) ಹಾಗೂ 2 ಗಂಟೆಗೆ ಮರುವಂಡ ಮತ್ತು ಮಂದoಗಡ
ಲೇಖಕ: admin
ಮಡಿಕೇರಿ, NEWS DESK ಏ.12 :ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಮುನ್ನಡೆಯುವಂತಾಗಬೇಕು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ತಿಳಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಇಲಾಖೆ ಸಿಬ್ಬಂದಿಗಳಿಗೆ ಎರಡು ದಿನಗಳ ಕಾಲ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡಗು ಜಿಲ್ಲೆ ದ್ವಿತೀಯ ಪಿಯು ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯದಲ್ಲಿ 3 ನೇ ಸ್ಥಾನ ಪಡೆದಿದೆ. ಇದು ಜಿಲ್ಲೆಯವರಲ್ಲಿ ಸಂತಸ ಹಾಗೂ ಹೆಮ್ಮೆಯ ತರುತ್ತದೆ. ಜತೆಗೆ ಇವರಲ್ಲಿಯೂ ಸಹ ಶೇ.35, 40 ಅಂಕ ಪಡೆದವರೂ ಇದ್ದಾರೆ. ಇಂತವರು ಶಿಕ್ಷಣ ಜತೆಗೆ ಕ್ರೀಡೆ ಸೇರಿದಂತೆ ಆಸಕ್ತ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಸವಾಲನ್ನು ಮೆಟ್ಟಿ ನಿಂತು ಮೇಲೆ ಬರಲು ಪ್ರಯತ್ನಿಸಬೇಕು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಸಲಹೆ ಮಾಡಿದರು. ಕ್ರೀಡೆ ಎಂದರೆ ಕೊಡಗು, ಕೊಡಗು ಎಂದರೆ ಕ್ರೀಡೆ ಎಂಬಂತಾಗಿದೆ. ಜಿಲ್ಲೆಯಿಂದ ಅತಿ ದೊಡ್ಡ ಪ್ರಮಾಣದಲ್ಲಿ ದೇಶಕ್ಕೆ ಕ್ರೀಡಾಪಟುಗಳನ್ನು ನೀಡಿದ ಜಿಲ್ಲೆ ಕೊಡಗು ಆಗಿದೆ…
ಬೀದರ, NEWS DESK ಏ.12:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2024ನೇ ಸಾಲಿನ ಜಿ.ನಾರಾಯಣಸ್ವಾಮಿ (ಅತ್ಯುತ್ತಮ ಗ್ರಾಮಾಂತರ ವರದಿ)ಪ್ರಶಸ್ತಿ ಇಸ್ಮಾಯಿಲ್ ಕಂಡಕರೆ ಅವರಿಗೆ ಬೀದರ್ ನಲ್ಲಿ ಭಾನುವರ ನಡೆದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರದಾನ ಮಾಡಲಾಯಿತು. ಶಕ್ತಿ ಪತ್ರಿಕೆಯಲ್ಲಿ ಪ್ರಕಟಗೊಂಡ “ಅತ್ಯಾಡಿ ನಿವಾಸಿಗಳಿಗೆ ಮರದ ಪಾಲವೇ ಆಸರೆ” ಎಂಬ ವಿಶೇಷ ವರದಿಗೆ ಪ್ರಶಸ್ತಿ ಲಭಿಸಿದೆ. ಬೀದರ್ ನಲ್ಲಿ ನಡೆದ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಸ್ಪೀಕರ್ ಯು.ಟಿ ಖಾದರ್,ವಿರೋಧ ಪಕ್ಷದ ನಾಯಕ ಆರ್.ಅಶೋಕ್,ಅರಣ್ಯ ಸಚಿವ ಈಶ್ವರ್ ಖಂಡ್ರೆ,ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮತ್ತಿತರರು ಇದ್ದರು.
ಕೂಡಿಗೆ/ಕುಶಾಲನಗರ, NEWS DESKಏ.12: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಶಿಸ್ತು- ಸಂಯಮ, ಉತ್ತಮ ನಾಯಕತ್ವ ಗುಣ, ರಾಷ್ಟ್ರೀಯ ಭಾವೈಕ್ಯತೆ, ಸೌಹಾರ್ದ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಡಾ ಪ್ರವೀಣ್ ದೇವರಗುಂಡ ಸೋಮಪ್ಪ ಹೇಳಿದರು. ಕುಶಾಲನಗರ ತಾಲ್ಲೂಕಿನ ಕೂಡಿಗೆ ಅಂಜೆಲಾ ವಿದ್ಯಾನಿಕೇತನ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕುಶಾಲನಗರ ಸ್ಥಳೀಯ ಸಂಸ್ಥೆ ಹಾಗೂ ಅಂಜೆಲಾ ವಿದ್ಯಾನಿಕೇತನ ಶಾಲೆಯ ಸಂಯುಕ್ತಾಶ್ರಯದಲ್ಲಿ ಶಾಲೆಯ ಕಬ್ಸ್ ಮತ್ತು ಬುಲ್ ಬುಲ್ಸ್ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಾಸ್ತವ್ಯ ಬೇಸಿಗೆ ಶಿಬಿರದ ಉದ್ಘಾಟನಶ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಹಾಗೂ ಕ್ರಿಯಾಶೀಲ ವ್ಯಕ್ತಿತ್ವ ಬೆಳೆಸಲು ತುಂಬಾ ಸಹಕಾರಿಯಾಗಿವೆ ಎಂದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಬಾಲಕರು ಮತ್ತು ಬಾಲಕಿಯರಿಗಾಗಿ ಸ್ವಯಂಪ್ರೇರಿತರಾಗಿ ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವ…
ಕುಶಾಲನಗರ, NEWS DESK ಏ೧೨: ಕೂಡುಮಂಗಳೂರು ಗ್ರಾ.ಪಂ ನ ಸುಂದರನಗರ ಗ್ರಾಮದ ವೃಂದಾ ಬಡಾವಣೆಯಲ್ಲಿ ಅಪಾಯದಂಚಿನಲ್ಲಿದ್ದ ಟ್ರಾನ್ಸ್ ಫಾರ್ಮರನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಳಾಂತರಿಸಲಾಯಿತು. ಕೆಲವು ತಿಂಗಳ ಹಿಂದೆ ವೃಂದಾ ಬಡಾವಣೆಯಲ್ಲಿ ಹಸಿವೊಂದು ಟಿಸಿಗೆ ಸಿಲುಕಿ ಪ್ರಾಣ ಕಳೆದುಕೊಂಡಿತ್ತು. ಅನಾಹುತಗಳನ್ನು ತಪ್ಪಿಸುವ ದೃಷ್ಟಿಯಿಂದ ರಸ್ತೆ ಬದಿಯಿದ್ದ ಟಿ.ಸಿ ಸ್ಥಳಾಂತರಿಸುವ ಬಗ್ಗೆ ಗ್ರಾಮಸ್ಥರು ಶಾಸಕರ ಬಳಿ ಮನವಿ ಮಾಡಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಶಾಸಕರು, ಚೆಸ್ಲಾಂ ಅಧಿಕಾರಿಗಳಿಗೆ ಟಿಸಿ ಸ್ಥಳಾಂತರಿಸಲು ಸೂಚನೆ ನೀಡಿದ್ದರು. ಅದರಂತೆ ಚೆಸ್ಕಾಂ ಸಿಬ್ಬಂದಿಗಳು ಟಿಸಿ ಸ್ಥಳಾಂತರಿಸಿದ್ದಾರೆ. ಈ ಸಂದರ್ಭ ಮಾತನಾಡಿದ ಕೂಡುಮಂಗಳೂರು ಗ್ರಾ.ಪಂ ಮಾಜಿ ಸದಸ್ಯರಾದ ಕೆ.ಬಿ.ಶಂಶುದ್ಧೀನ್, ವೃಂದಾ ಬಡಾವಣೆಯಲ್ಲಿ ಹಸುವೊಂದು ವಿದ್ಯುತ್ ಅವಘಡದಿಂದ ಸಾವಿಗೀಡಾಗಿತ್ತು. ಪಕ್ಕದಲ್ಲಿಯೇ ಗಣೇಶೋತ್ಸವ ಹಾಗೂ ಊಟ ಹಬ್ಬ, ಇನ್ನಿತರ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಈ ಹಿನ್ನಲೆ ಸಾರ್ವಜನಿಕರ ಹಿತದೃಷ್ಟಿಯಿಂದ ಅನಾಹುತಗಳನ್ನು ಕೈತಪ್ಪಿಸಲು ಶಾಸಕರ ಬಳಿ ಟಿಸಿ ಸ್ಥಳಾಂತರಕ್ಕೆ ಮನವಿ ಮಾಡಿದ್ದೆವು. ಅದರಂತೆ ಇಂದು ಸಹಕರಿಸಿದ ಶಾಸಕರಿಗೆ, ಕುಶಾಲನಗರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಿ.ಪಿ.ಶಶಿಧರ್…
ಕೊಪ್ಪಾದ ನಳಂದ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿದ ಎನ್.ಐಶ್ವರ್ಯ ಶೇ.95 ಫಲಿತಾಂಶ ದೊಂದಿಗೆ ಸಾಧನೆ ತೋರಿದ್ದಾರೆ. ಶ್ರೀನಗರದಲ್ಲಿ ಸೇನಾ ಯೋಧರಾಗಿ ಕರ್ತವ್ಯದಲ್ಲಿರುವ ಕುಶಾಲ ನಗರ ಸಮೀಪದ ಹುಲುಸೆ ಗ್ರಾಮದ ನಿಂಗಪ್ಪ ಹಾಗೂ ವಿದ್ಯಾ ದಂಪತಿಗಳ ಪುತ್ರಿ ಐಶ್ವರ್ಯ ವೈದ್ಯಕೀಯ ವ್ಯಾಸಂಗದತ್ತ ಒಲವು ತೋರಿದ್ದಾರೆ.
ಮಡಿಕೇರಿ ಏ.12 : ಈಜಲೆಂದು ಕೆರೆಗೆ ಇಳಿದ ಬಾಲಕ ಹಾಗೂ ಯುವಕ ನೀರು ಪಾಲಾದ ಘಟನೆ ಶನಿವಾರ ಸಂಜೆ ದಕ್ಷಿಣ ಕೊಡಗಿನ ಬಾಳಲೆ ಗ್ರಾಮದಲ್ಲಿ ನಡೆದಿದೆ. ಬಾಳಲೆ ನಿವಾಸಿ ಪ್ರಕಾಶ ಹಾಗೂ ಚಂದ್ರಿಕ ದಂಪತಿಗಳ ಪುತ್ರ, ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಗೌತಮ್(12) ಮತ್ತು ಮಂಜುಳಾ ಹಾಗೂ ದಿ.ರಾಜು ಎಂಬುವವರ ಪುತ್ರ ಕೃಷ್ಣ(22) ಮೃತ ದುರ್ದೈವಿಗಳಾಗಿದ್ದಾರೆ. ಶನಿವಾರ ಸಂಜೆ ಇಬ್ಬರು ಬಾಳಲೆ ಗ್ರಾಮದ ಕೊಟ್ಟಕೇರಿ ಮಾರಿಗುಡಿ ಎಂಬಲ್ಲಿರುವ ಕೆರೆಗೆ ಈಜಲು ತೆರಳಿದ್ದು, ನೀರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ಗೋಣಿಕೊಪ್ಪ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಇಬ್ಬರ ಮೃತದೇಹಗಳನ್ನು ಹೊರ ತೆಗೆದರು. ಘಟನೆ ಕುರಿತು ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಗೋಣಿಕೊಪ್ಪ ಅಗ್ನಿ ಶಾಮಕ ದಳದ ಪ್ರಬಾರ ಠಾಣಾಧಿಕಾರಿ ಸುನಿಲ್ ಕುಮಾರ್, ಪ್ರಮುಖ ಅಗ್ನಿ ಶಾಮಕ ಜಗದೀಶ್, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಹಾಜರಿದ್ದರು.
ಮಡಿಕೇರಿ NEWS DESK ಏ.12 : ಚಲನಚಿತ್ರ ಮತ್ತು ಕಿರುತೆರೆಯ ನಟ ಕೊಡಗಿನ 7ನೇ ಹೊಸಕೋಟೆಯ ಕಲ್ಲೂರು ನಿವಾಸಿ ಹರೀಶ್(42) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ ಕುಶಾಲನಗರ ಮಾರ್ಗವಾಗಿ ಕಲ್ಲೂರಿಗೆ ತೆರಳುತ್ತಿದ್ದ ಸಂದರ್ಭ ಆನೆಕಾಡಿನ 275 ರಾಷ್ಟ್ರೀಯ ಹೆದ್ದಾರಿಯಲ್ಲಿ ಹರೀಶ್ ಸಂಚರಿಸುತ್ತಿದ್ದ ಕಾರು ನಿಂತಿದ್ದ ಗೊಬ್ಬರ ತುಂಬಿದ ಲಾರಿಗೆ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊoಡಿದ್ದು, ಗಂಭೀರವಾಗಿ ಗಾಯಗೊಂಡ ಹರೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಡಿಕೇರಿ ಏ.11 NEWS DESK : ಚೇರಂಬಾಣೆ ವ್ಯಾಪ್ತಿಯ ಬೇಂಗೂರು ಗ್ರಾಮದ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಪುನರ್ ಪ್ರತಿಷ್ಟಾ ಹಾಗೂ ಬ್ರಹ್ಮಕಲಶೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಚೇರಂಬಾಣೆಯಲ್ಲಿನ ಪಟ್ಟಮಾಡ ಕುಟುಂಬದ ಬೇಂಗೂರು ಗ್ರಾಮದಲ್ಲಿರುವ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪುನರ್ ನಿಮಾ೯ಣವಾದ ನೂತನ ಪ್ರಾಸಾದದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಪಂಚಲೋಹ ಬಿಂಬ ಪುನರ್ ಪ್ರತಿಷ್ಟೆ ಹಾಗೂ ಬ್ರಹ್ಮ ಕಲಶಾಭಿಷೇಕವು ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೖತ್ವದಲ್ಲಿ ಪಟ್ಟಮಾಡ ಕುಟುಂಬದ ಮುಂದಾಳತ್ವದಲ್ಲಿ ಆಯೋಜಿತವಾಗಿತ್ತು. ಶ್ರೀ ಸುಬ್ರಹ್ಮಣ್ಯ ದೇವರ ಬಿಂಬ ಪ್ರತಿಷ್ಟೆ, ಜೀವಕಲಶಾಭಿಷೇಕ, ಪ್ರಾಣ ಪ್ರತಿಷ್ಟೆ, ಹೋಮಕಲಶಾಭಷೇಕ, ತತ್ವ ಕಲಶಾಭಿಷೇಕ ,ಬ್ರಹ್ಮ ಕಲಶಾಭಿಷೇಕ, ಮಹಾಪೂಜೆಗಳು ನೆರವೇರಿದವು. ಕಾಯ೯ಕ್ರಮಕ್ಕೆ ಆಗಮಿಸಿದ್ದ ನೂರಾರು ಭಕ್ದಾಧಿಗಳಿಗೆ ಮಂತ್ರಾಕ್ಷತೆ, ಪ್ರಸಾದ ವಿತರಣೆ ಜರುಗಿತು. ವಿಧಾನಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಮಡಿಕೇರಿಯ ಶ್ರೀ ಕುಂದುರುಮೊಟ್ಟೆ ದೇವಾಲಯದ ಟ್ರಸ್ಟಿ ಟಿ.ಪಿ. ರಮೇಶ್, ಮನು ಮೇದಪ್ಪ, ಮಡಿಕೇರಿಯ ಶ್ರೀ ವಿಜಯವಿನಾಯಕ ದೇವಾಲಯದ ಟ್ರಸ್ಟಿ ಜಿ.ಚಿದ್ವಿಲಾಸ್…
ಮಡಿಕೇರಿ ಏ.11 NEWS DESK : ಕಂದೀಲು ಕನ್ನಡ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಕೊಡಗಿನ ಸಿನಿಮಾ ನಿಮಾ೯ಪಕಿ, ನಿದೇ೯ಶಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರ ನೂತನ ಮಕ್ಕಳ ಚಿತ್ರ ಕೋಟೆಬೆಟ್ಟದ ಚಿತ್ರೀಕರಣಕ್ಕೆ ನಗರದ ಶ್ರೀ ಆಂಜನೇಯ ದೇವಾಲಯದಲ್ಲಿ ಮುಹೂತ೯ ಪೂಜೆ ನೆರವೇರಿತು. ಕೊಡವ ಭಾಷೆಯ ಚಿತ್ರ ಕೋಟೆ ಬೆಟ್ಟಕ್ಕೆ ಕ್ಲಾಪ್ ನೆರವೇರಿಸಿ ಮಾತನಾಡಿದ ವಿಧಾನಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಕೊಡಗಿನಲ್ಲಿ ಈಶ್ವರನ ಸನ್ನಿಧಿಯಾಗಿ ಪೌರಾಣಿಕ ಮಹತ್ವ ಹೊಂದಿರುವ ಕೋಟೆ ಬೆಟ್ಟದ ಹಿನ್ನಲೆ ಹೊಂದಿ ಮಕ್ಕಳ ಚಿತ್ರ ನಿಮಾ೯ಣ ಮಾಡುತ್ತಿರುವುದು ಉತ್ತಮ ಪ್ರಯತ್ನ ಎಂದರು. ಮಕ್ಕಳಿಗೆ ತಿಳವಳಿಕೆ ನೀಡುವ ನಿಟ್ಟಿನಲ್ಲಿ ಇಂಥ ಸಿನಿಮಾ ನಿಮಾ೯ಣ ಶ್ಲಾಘನೀಯ. ಕೋಟೆ ಬೆಟ್ಟ ಈಶ್ವರನ ಮಹತ್ವದ ಬಗ್ಗೆಯೂ ಚಿತ್ರ ಬಿಂಬಿಸಲಿ ಎಂದರು. ಹಿರಿಯ ಪತ್ರಕತ೯ ಅನಿಲ್ ಹೆಚ್.ಟಿ. ಮಾತನಾಡಿ, ಕಂದೀಲು ಕನ್ನಡ ಚಿತ್ರದ ಮೂಲಕ ಸಿನಿಮಾಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಕೊಡಗಿನ ಪ್ರಥಮ ಮತ್ತು ಕನಾ೯ಟಕದ ನಾಲ್ಕನೇ ಮಹಿಳೆ ಎಂಬ ಹಿರಿಮೆಯಿರುವ ಯಶೋಧ ಪ್ರಕಾಶ್ ಈಗ…






