ಮಡಿಕೇರಿ ಏ.11 NEWS DESK : ಬೆಟ್ಟಪುರದ ಅನಿಕೇತನ ಕಾಲೇಜು ಈ ಬಾರಿ ಅದ್ಭುತ ಸಾಧನೆ ಮಾಡಿದೆ. ಈ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಹನ್ನೆರಡು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದು ತೇರ್ಗಡೆಯಾದರೆ, ಹದಿನೈದು ವಿದ್ಯಾರ್ಥಿಗಳು ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನ ವಿದ್ಯಾರ್ಥಿ ಸಂದೇಶ್ 575 ಅಂಕಗಳನ್ನು ಪಡೆಯುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಪಡೆದರೆ, ಸುಮಂತ್ ನಾಯಕ್ 572 ಅಂಕಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ. ಅಂತೆಯೇ ಕೀರ್ತನ್ ಕೆ.ಎಂ. 570 ಅಂಕಗಳನ್ನು ಗಳಿಸಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿದ್ದಾರೆ.
ಲೇಖಕ: admin
ಮಡಿಕೇರಿ ಏ.11 NEWS DESK : ಶಂಶುಲ್ ಉಲಮಾ ಎಜುಕೇಶನಲ್ ಅಕಾಡೆಮಿ 2025–26ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಾಣಿಜ್ಯ, ಕಲಾ ಮತ್ತು ವಿಜ್ಞಾನ ವಿಭಾಗಗಳಲ್ಲಿ ಶೇ.100 ಫಲಿತಾಂಶ ದಾಖಲಿಸಿ ಗಮನಾರ್ಹ ಸಾಧನೆ ಮಾಡಿದೆ. ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅವರಲ್ಲಿ 13 ಮಂದಿ ಡಿಸ್ಟಿಂಕ್ಷನ್ ಹಾಗೂ 17 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಸಾಧನೆಯಲ್ಲಿ ಆಯಿಷತುಲ್ ಅಫ್ರಾ ಟಿ.ಎಸ್. ಅವರು 600ರಲ್ಲಿ 588 ಅಂಕಗಳು (98%) ಗಳಿಸಿ ಜಿಲ್ಲಾ ಮಟ್ಟದಲ್ಲಿ 3ನೇ ರ್ಸ್ಥಾನ ಹಾಗೂ ತಾಲೂಕು ಮಟ್ಟದಲ್ಲಿ 1ನೇ ಸ್ಥಾನ ಪಡೆದು ಸಂಸ್ಥೆಗೆ ಹೆಮ್ಮೆಯ ಕೀರ್ತಿ ತಂದಿದ್ದಾರೆ. ಫಾತಿಮಾ ಫಿದಾ ಸಿ.ಎ. – 581/600 (96.8%), ರಂಶಿನಾ ಕೆ.ಎಂ. – 580/600 (96%) ಪಡೆದುಕೊಂಡಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ಸಂತೋಷ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾದ ವೈಯಕ್ತಿಕ ಮಾರ್ಗದರ್ಶನ ಮತ್ತು ಗುಣಮಟ್ಟದ ಬೋಧನೆ ಯಶಸ್ಸಿನ ಮೂಲ ಕಾರಣವೆಂದು ತಿಳಿಸಿದ್ದಾರೆ. ಸಂಸ್ಥೆಯಲ್ಲಿ ಪ್ರತಿಯೊಬ್ಬ…
ಮಡಿಕೇರಿ ಏ.11 NEWS DESK : ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಯ ಪ್ರಯುಕ್ತ ಕರ್ನಾಟಕ ಮಾಧ್ಯಮ ಅಕಾಡೆಮಿ ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ “ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಇಂದಿನ ಮಾಧ್ಯಮ ಸಂವೇದನಾಶೀಲತವಾಗಿದಿಯೇ” ಎಂಬ ವಿಷಯದ ಕುರಿತ ವಿಚಾರಸಂಕಿರಣವನ್ನು ಆಯೋಜಿಸಿತ್ತು. ಸೆಂಟ್ರಲ್ ಕಾಲೇಜಿನ ಆವರಣದಲ್ಲಿರುವ ನೂತನ ಶೈಕ್ಷಣಿಕ ವಿಭಾಗದ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಈ ವಿಚಾರಸಂಕಿರಣವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಪುರುಷೋತ್ತಮ ಬಿಳಿಮಲೆ ಉದ್ಘಾಟಿಸಿದರು. ಸಾಮಾಜಿಕ ಸಮಾನತೆಯ ಹರಿಕಾರ ಅಂಬೇಡ್ಕರ್ ಅವರ ಸಾರಥ್ಯದಲ್ಲಿ ರಚನೆಯಾದ ಭಾರತದ ಸಂವಿಧಾನ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಕೈದೀವಿಗೆಯಾಗಿದೆ ಎಂದು ಅವರು ಬಣ್ಣಿಸಿದರು. ಜಾತಿ, ಧರ್ಮ, ಲಿಂಗ ಮತ್ತು ಭಾಷೆಯ ಆಧಾರದ ತಾರತಮ್ಯ ಹಾಗೂ ಅಸ್ಪೃಶ್ಯತೆಯ ಆಚರಣೆ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಇಂದಿಗೂ ಜ್ವಲಂತ ಸಮಸ್ಯೆಗಳಾಗಿ ದೇಶವನ್ನು ಕಾಡುತ್ತಿರುವುದು ವಿಷಾದನೀಯ ಎಂದು ಅವರು ವಿಶ್ಲೇಷಿಸಿದರು. ಭಾರತದಲ್ಲಿ 19,658 ಭಾಷೆಗಳಿದ್ದು ಜನ ಸಂಸ್ಕೃತಿಯ ಪ್ರತೀಕವಾದ ಅನೇಕ ಸಣ್ಣ ಭಾಷೆಗಳು ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದು…
ಮಡಿಕೇರಿ ಏ.11 NEWS DESK : ಪೊನ್ನಂಪೇಟೆ ತಾಲ್ಲೂಕು ಪಂಚಾಯಿತಿ ಸಾಮಥ್ರ್ಯ ಸೌಧದಲ್ಲಿ ಪೊನ್ನಂಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನಾ ಸಭೆಯು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಪ್ರಶಾಂತ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಗೃಹಲಕ್ಷ್ಮಿ ಯೋಜನೆಯಡಿ ಪೊನ್ನಂಪೇಟೆ ತಾಲ್ಲೂಕಿನಲ್ಲಿ ಜನವರಿ ತಿಂಗಳವರೆಗೆ ಫಲಾನುಭವಿಗಳಿಗೆ ಹಣ ಜಮೆಯಾಗಿದ್ದು ಶೇ.95 ರಷ್ಟು ಸಾಧನೆಯಾಗಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಗೃಹಜ್ಯೊತಿ ಯೋಜನೆಯಡಿ ಪೊನ್ನಂಪೇಟೆ ತಾಲ್ಲೂಕಿಗೆ 4 ಕೋಟಿ ಅನುದಾನದ ನಿರೀಕ್ಷೆಯಿದ್ದು ಕ್ರೀಯಾ ಯೋಜನೆಯಲ್ಲಿ ಸೇರ್ಪಡಿಸಿದ ಕಾಮಗಾರಿಗಳನ್ನು ಅನುದಾನ ಬಿಡುಗಡೆಯಾದ ನಂತರ ಕಾಮಗಾರಿ ಪ್ರಾರಂಭಿಸಲು ಸಭೆಯಲ್ಲಿ ತಿಳಿಸಲಾಯಿತು. ತಾಲ್ಲೂಕಿನಲ್ಲಿ ಲೈನ್‍ಮ್ಯಾನ್‍ಗಳ ಕೊರತೆಯಿದ್ದು, ಕೂಡಲೇ ಲೈನ್‍ಮ್ಯಾನ್ ನೇಮಕಾತಿ ಮಾಡಿ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಲು ಸಭೆಯಲ್ಲಿ ಕೋರಲಾಯಿತು. ಯುವನಿಧಿ ಯೋಜನೆಯಲ್ಲಿ ತಾಲ್ಲೂಕಿನಲ್ಲಿ 1728 ವಿದ್ಯಾರ್ಥಿಗಳು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುತ್ತಿರುವ ಕುರಿತು ಸಭೆಗೆ ಮಾಹಿತಿ ನೀಡಿದರು. ಈಗಾಗಲೇ ಉದ್ಯೋಗ ಪಡೆದುಕೊಂಡಿರುವ ಫಲಾನುವಿಗಳಿಗೂ ಹಣ ಜಮೆಯಾಗುತ್ತಿದ್ದು, ಈ ಬಗ್ಗೆ ಗಮನಹರಿಸುವಂತೆ ತಾಲ್ಲೂಕು ಗ್ಯಾರಂಟಿ ಯೊಜನಾ ಸಮಿತಿ…
ಮಡಿಕೇರಿ ಏ.11 NEWS DESK : ಕೊಡಗು ಜಿಲ್ಲೆಯಲ್ಲಿ ಅಂತರ್ಜಲವನ್ನು ಸಂರಕ್ಷಿಸುವಲ್ಲಿ ಕೆರೆ ಹಾಗೂ ಜಲಮೂಲವನ್ನು ಉಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿಯವರ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾ ಅಂತರ್ಜಲ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಂತರ್ಜಲ ಅಭಿವೃದ್ಧಿ, ಸಂರಕ್ಷಣೆ ಮತ್ತಿತರ ಕುರಿತು ಸುದೀರ್ಘ ಚರ್ಚೆ ನಡೆಯಿತು. ಜಿಲ್ಲೆಯಲ್ಲಿ ಅಂತರ್ಜಲ ನಿರ್ದೇಶನಾಲಯ ಅಥವಾ ಕರ್ನಾಟಕ ಅಂತರ್ಜಲ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪತ್ರ ಪಡೆದು ಕಾರ್ಯನಿರ್ವಹಿಸುತ್ತಿವೆಯೇ ಎಂಬ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದರು. ಅಂತರ್ಜಲ ಇಲಾಖೆಯ ಹಿರಿಯ ಭೂ ವಿಜ್ಞಾನಿ ಎಸ್.ಸುಧಾ ಅವರು ಮಾತನಾಡಿ, ಗಾಳಿಬೀಡು, ಮಕ್ಕಂದೂರು, ಯವಕಪಾಡಿ, ಎಮ್ಮೆಮಾಡು, ಮೊಣ್ಣಂಗೇರಿ, ಕೂಡಿಗೆ, ಕುಮಾರಳ್ಳಿ, ಪೊನ್ನಂಪೇಟೆ ನಿರಾಕ್ಷೇಪಣಾ ಅರ್ಜಿಗಳನ್ನು ಪಡೆದುಕೊಂಡಿದ್ದು, ಹೊಸದಾಗಿ ಆನ್‍ಲೈನ್ ಮೂಲಕ ಮೂರು ಅರ್ಜಿಗಳು ಸ್ವೀಕೃತಿಗೊಂಡಿದೆ ಎಂದು ಮಾಹಿತಿ ನೀಡಿದರು. ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಾಯಿಸದೆ ಹಾಗೆಯೇ ಜಿಲ್ಲೆಯಲ್ಲಿ ಕೊಳವೆಬಾವಿ ಕೊರೆಯುತ್ತಿರುವ ರಿಗ್ ಯಂತ್ರಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು…
ಮಡಿಕೇರಿ NEWS DESK ಏ.11 : ಮಹಿಳಾ ಸಬಲೀಕರಣದ ಉದ್ದೇಶ ನೈಜವಾಗಿದ್ದರೆ ಲೋಕಸಭೆ ಕ್ಷೇತ್ರ ಹೆಚ್ಚಳ ಮಾಡದೇ ಈಗ ಇರುವ ಚೌಕಟ್ಟಿನೊಳಗೆ ಮಹಿಳಾ ಮೀಸಲಾತಿ ನೀಡಬೇಕು ಮತ್ತು ಕೊಡಗಿನ ವಿಧಾನಸಭಾ ಕ್ಷೇತ್ರಗಳನ್ನು 5ಕ್ಕೆ ಏರಿಕೆ ಮಾಡಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಷು ಮೀಸಲು ಕಲ್ಪಿಸುವ ಉದ್ದೇಶ ಒಳ್ಳೆಯದು. ಆದರೆ ಮಹಿಳಾ ಮೀಸಲು ವಿಧೇಯಕ ಕೇವಲ ಸುಧಾರಣೆಯಲ್ಲ, ಆಡಳಿತ ವ್ಯವಸ್ಥೆಯ ಪುನರ್ ರಚನೆಯ ದಾರಿಯಾಗಬೇಕು. 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಸಂಸತ್ ನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ ಪಡೆಯಿತು. ಈಗ ಇರುವ 543 ಕ್ಷೇತ್ರವನ್ನು ಶೇಕಡಾ 50ರಷ್ಟು ಹೆಚ್ಚು ಮಾಡಿ 816ಕ್ಕೆ ಏರಿಸಿ ಅದರಲ್ಲಿ ಶೇ.33 ಮಹಿಳಾ ಮೀಸಲಾತಿ ನೀಡಲು ಕಾನೂನು ತಿದ್ದುಪಡಿ ತರುತ್ತಿರುವ ಕೇಂದ್ರ ಸರಕಾರದ ನಡೆ ಗೊಂದಲಕ್ಕೆ ಕಾರಣವಾಗಿದೆ ಎಂದು ಟೀಕಿಸಿದ್ದಾರೆ. 1971ರ ಅಥವಾ 2027ರ…
ಮಡಿಕೇರಿ NEWS DESK ಏ.11 : ಕಾಂತೂರು-ಮೂರ್ನಾಡು ಶ್ರೀ ಪನ್ನಂಗಾಲ ತಾಯಿಯ ವಾರ್ಷಿಕೋತ್ಸವವು ಏ.16 ಮತ್ತು 17 ರಂದು ನಡೆಯಲಿದೆ. ಏ.16 ರಂದು ಬೆಳಿಗ್ಗೆ ದೇವರ ಶುದ್ಧ ಕಳಸ ಪೂಜೆ, ಕೆರೆಮನೆಯಿಂದ ಭಂಡಾರ ತರುವುದು, ಎತ್ತೇರಾಟ, ದೇವರ ದರ್ಶನ ಹಾಗೂ ಸಂಜೆ 7 ಗಂಟೆಗೆ ಕುರುಂದ ಭಾರಣಿ ಜರುಗಲಿದೆ. ಏ.17 ರಂದು ಬೆಳಿಗ್ಗೆ ದೇವರ ದರ್ಶನ, ಮಧ್ಯಾಹ್ನ ಅನ್ನಸಂತರ್ಪಣೆ, ಚಾಮುಂಡಿ ಉತ್ಸವ, ದೇವರಿಗೆ ಹರಕೆ ಒಪ್ಪಿಸುವುದು ಹಾಗೂ ಕುರುಂದಾಟ ದೇವರ ಜಳಕ ನಡೆಯಲಿದೆ. ಎರಡು ದಿನ ಶ್ರದ್ಧಾಭಕ್ತಿಯಿಂದ ಜರುಗುವ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಆಡಳಿತ ಮಂಡಳಿ ಹಾಗೂ ತಕ್ಕ ಮುಖ್ಯಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಮಡಿಕೇರಿ ಏ.10 NEWS DESK : ಕುಶಾಲನಗರದ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯು ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ನೆಚ್ಚಿನ ಗ್ರಾಹಕರಿಗೆ ಜಿ.ಎಲ್. “ವರುಷದ ಹರುಷ” ಎಂಬ ವಿಶಿಷ್ಟ ಶಾಪಿಂಗ್ ಹಬ್ಬವನ್ನು ಏ.11 ರಿಂದ ಏ.20ರವರೆಗೆ ಆಯೋಜಿಸಿದೆ. ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನ ಪುತ್ತೂರು. ಹಾಸನ ಮತ್ತು ಸುಳ್ಯ ಶಾಖೆಗಳಲ್ಲಿ ಮಾತ್ರ “ವರುಷದ ಹರುಷ” ಶಾಪಿಂಗ್ ಹಬ್ಬವಿರುತ್ತದೆ. ಗ್ರಾಹಕರಿಗೆ ಚಿನ್ನಾಭರಣಗಳ VA ಶುಲ್ಕದ ಮೇಲೆ ಪ್ರತಿ ಗ್ರಾಂಗೆ ರೂ. 500 ರವರೆಗೆ ರಿಯಾಯಿತಿ ನೀಡಲಾಗುವುದು. ಅದೇ ರೀತಿ ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೇಟ್ ಗೆ ರೂ.7000 ರವರೆಗೆ ರಿಯಾಯಿತಿ ಹಾಗೂ ಬೆಳ್ಳಿ ಆಭರಣಗಳ ಮೇಲೆ ಪ್ರತೀ ಕೆ.ಜಿಗೆ ರೂ.6000 ರಿಯಾಯಿತಿ ನೀಡಲಾಗುವುದು. ಅಲ್ಲದೆ 916 ಚಿನ್ನಾಭರಣಕ್ಕಿಂತ 2400 ರೂಪಾಯಿ ಅಂದಾಜು ಕಡಿಮೆ ಬೆಲೆಯಲ್ಲಿ 18ಕ್ಯಾರೆಟ್ ಹಾಲ್‌ಮಾರ್ಕ್ ಚಿನ್ನಾಭರಣಗಳು ದೊರೆಯುತ್ತದೆ. ಇದು ದಿನನಿತ್ಯದ ಬಳಕೆಗೆ ಸೂಕ್ತವಾಗಿರುತ್ತದೆ. ಹೊಸ ಚಿನ್ನ ಖರೀದಿ ಮಾಡುವವರಿಗೆ ಹೊಸ ಪರಿಯಾಯವಾಗಿರುತ್ತದೆ. ಆಭರಣ ಚಿನ್ನದ…
ಮಡಿಕೇರಿ ಏ.10 NEWS DESK : ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯು ಪುತ್ತೂರು. ಹಾಸನ, ಸುಳ್ಯ ಮತ್ತು ಕುಶಾಲನಗರದಲ್ಲಿರುವ ತಮ್ಮ ಶಾಖೆಗಳಲ್ಲಿ ಮಾತ್ರ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ನೆಚ್ಚಿನ ಗ್ರಾಹಕರಿಗೆ ಜಿ.ಎಲ್. ಶಾಪಿಂಗ್ ಹಬ್ಬ “ವರುಷದ ಹರುಷ” ಎಂಬ ವಿಶಿಷ್ಟ ಶಾಪಿಂಗ್ ಹಬ್ಬವನ್ನು ಏ.11 ರಿಂದ ಏ.20ರವರೆಗೆ ಆಯೋಜಿಸಲಾಗಿದೆ. ಗ್ರಾಹಕರಿಗೆ ಚಿನ್ನಾಭರಣಗಳ VA ಶುಲ್ಕದ ಮೇಲೆ ಪ್ರತಿ ಗ್ರಾಂಗೆ ರೂ. 500 ರವರೆಗೆ ರಿಯಾಯಿತಿ ನೀಡಲಾಗುವುದು ಅದೇ ರೀತಿ ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೇಟ್ ಗೆ ರೂ.7000 ರವರೆಗೆ ರಿಯಾಯಿತಿ ಹಾಗೂ ಬೆಳ್ಳಿ ಆಭರಣಗಳ ಮೇಲೆ ಪ್ರತೀ ಕೆ.ಜಿಗೆ ರೂ.6000 ರಿಯಾಯಿತಿ ನೀಡಲಾಗುವುದು. ಅಲ್ಲದೆ 916 ಚಿನ್ನಾಭರಣಕ್ಕಿಂತ 2400 ರೂಪಾಯಿ ಅಂದಾಜು ಕಡಿಮೆ ಬೆಲೆಯಲ್ಲಿ 18ಕ್ಯಾರೆಟ್ ಹಾಲ್‌ಮಾರ್ಕ್ ಚಿನ್ನಾಭರಣಗಳು ದೊರೆಯುತ್ತದೆ. ಇದು ದಿನನಿತ್ಯದ ಬಳಕೆಗೆ ಸೂಕ್ತವಾಗಿರುತ್ತದೆ.ಹೊಸ ಚಿನ್ನ ಖರೀದಿ ಮಾಡುವವರಿಗೆ ಹೊಸ ಪರಿಯಾಯವಾಗಿರುತ್ತದೆ. ಆಭರಣ ಚಿನ್ನದ ಬೆಲೆ ಪ್ರತೀ ಗ್ರಾಂಗೆ 17,000 ಕ್ಕೆ ಏರಿದ್ದು,…
ಮಡಿಕೇರಿ ಏ.10 NEWS DESK : ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ನಿಖರ ಹಾಗೂ ನಿರ್ದಿಷ್ಟವಾಗಿ ಭೂ ಮಾಪನ (ಸರ್ವೆ) ಕಾರ್ಯ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೂಚಿಸಿದ್ದಾರೆ. ಜಿಲ್ಲಾಡಳಿತ ಸಹಕಾರದಲ್ಲಿ ರಾಷ್ಟ್ರೀಯ ಭೂ ಮಾಪನ ಕಂದಾಯ ವ್ಯವಸ್ಥೆ ಹಾಗೂ ಭೂ ದಾಖಲೆಗಳ ಇಲಾಖೆ ವತಿಯಿಂದ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ 37ನೇ ರಾಷ್ಟ್ರೀಯ ಭೂಮಾಪನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹಿಂದೆ ಸರಪಳಿ ಮೂಲಕ ಭೂ ಸಮೀಕ್ಷೆ ಅಥವಾ ಸರ್ವೆ ಮಾಡಲಾಗುತ್ತಿದ್ದು, ಈಗ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಹೊಂದಿದ್ದು, ಅವುಗಳನ್ನು ಬಳಸಿಕೊಂಡು ತ್ವರಿತವಾಗಿ ಭೂಮಾಪನ ಸರ್ವೆ ಕಾರ್ಯ ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು. ಜಿಲ್ಲೆಯಲ್ಲಿ ಪೋಡಿ ಸರ್ವೆ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬರುತ್ತಿದ್ದು, ಆದ್ದರಿಂದ ಆದ್ಯತೆ ಮೇಲೆ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು. ಇಂದಿನ ತಂತ್ರಜ್ಞಾನ ಹಾಗೂ ಸರ್ಕಾರದ ಸೌಲಭ್ಯವನ್ನು ಬಳಸಿಕೊಂಡು ಕಾಲ…






