ಮಡಿಕೇರಿ ಮೇ 30 : ಸೋಮವಾರಪೇಟೆ ತಾಲೂಕು ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷರಾಗಿ ಸಿ.ಕೆ.ರೋಹಿತ್ ಆಯ್ಕೆಯಾಗಿದ್ದಾರೆ. ನಾಗರಹೊಳೆ ಸಮೀಪದ ರೆಸಾರ್ಟ್‍ನಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಉಪಾಧ್ಯಕ್ಷರಾಗಿ ಹೆಚ್.ಎಸ್.ಯೋಗೇಶ್, ಕಾರ್ಯದರ್ಶಿಯಾಗಿ ಎಸ್.ಎಲ್.ಅಭಿನಂದನ್, ಖಜಾಂಚಿಯಾಗಿ ಡಿ.ಪಿ.ಪ್ರೀತಮ್ ಆಯ್ಕೆಯಾದರು. ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಎ.ಎಸ್.ಮಲ್ಲೇಶ್, ಶ್ರೀಹರಿ ಫರ್ನಾಂಡೀಸ್ ಸೇರಿದಂತೆ ಇತರರು ಇದ್ದರು.
ಲೇಖಕ: admin
ವಿರಾಜಪೇಟೆ ಮೇ 30 : ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ನಾಮೆರ ಕುಟುಂಬದ ವತಿಯಿಂದ ಸನ್ಮಾನಿಸಲಾಯಿತು. ಗೋಣಿಕೊಪ್ಪದ ಪ್ಲಾಂಟರ್ಸ್ ಕ್ಲಬ್‍ನಲ್ಲಿ ಆಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಕುಟುಂಬದ ಪ್ರಮುಖರು ಆತ್ಮೀಯವಾಗಿ ಸನ್ಮಾನಿ¸ಸಿ ಗೌರವಿಸಿದರು. ಈ ಸಂದರ್ಭ ಸ್ವೀಕರಿಸಿ ಮಾತನಾಡಿದ ಐಮುಡಿಯಂಡ ರಾಣಿ ಮಾಚಯ್ಯ, ಜಾನಪದ ಕಲಾ ಪ್ರಕಾರವಾದ ಉಮ್ಮತಾಟ್ ಕಲಾ ಪ್ರಕಾರವನ್ನು ವಿಶ್ವದೆಲ್ಲೆಡೆ ಪಸರಿಸುವ ಕೆಲಸ ನಿರಂತರವಾಗಿ ಮಾಡಲಿದ್ದೇನೆ ಎಂದು ನುಡಿದರು. ಉಮ್ಮತ್ತಾಟ್ ಕಲಾ ತಂಡವನ್ನು ಕಟ್ಟಿಕೊಂಡು ಮಕ್ಕಳಿಗೆ ಕಲೆಯನ್ನು ಕಲಿಸಿ ದೇಶದೆಲ್ಲೆಡೆ ಕರೆದುಕೊಂಡು ಹೋಗಿ ಅನೇಕ ಬಾರಿ ನೃತ್ಯ ಪ್ರಕಾರಗಳನ್ನು ಪ್ರಸ್ತುತಪಡಿಸಿದ್ದೇನೆ. ಸರಕಾರ ನನ್ನನ್ನು ಗುರುತಿಸಿ ಪ್ರಶಸ್ತಿ ನೀಡಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಚಿರಿಯಪಂಡ ರಾಜ ನಂಜಪ್ಪ, ಪೂಮಾಲೆ ಪತ್ರಿಕೆ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ, ವಿರಾಜಪೇಟೆಯ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಕಾಂತಿ ಸತೀಶ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ…
ವಿರಾಜಪೇಟೆ ಮೇ 30 : ಬೆಂಗಳೂರಿನ ಕ್ಯಾಪಿಟಲ್ ಹೋಟೆಲ್‍ನಲ್ಲಿ ನಡೆದ ಕಾಳಿಕಾ ರಾಮಕೃಷ್ಣ ಆಶ್ರಮದ ವಾರ್ಷಿಕೋತ್ಸವದಲ್ಲಿ ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಹರ್ಷಿ ಆನಂದ್ ಗುರೂಜಿ, ಡಿ.ಆರ್ ಬಡಿಗೇರ ಹಾಗೂ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಿದರು.
ಸೋಮವಾರಪೇಟೆ ಮೇ 30 : ಶಾಲಾ ಆರಂಭೋತ್ಸವದ ಅಂಗವಾಗಿ ಕಿರಗಂದೂರು ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಿಕ್ಷಕರು ವಿದ್ಯಾರ್ಥಿಗಳನ್ನು ಸಿಹಿ ಮತ್ತು ಹೂ ನೀಡುವ ಮೂಲಕ ಸ್ವಾಗತಿಸಿದರು. ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಚಂದ್ರಾಚಾರಿ, ಶಿಕ್ಷಕರಾದ ಡಿ.ಪಿ. ಧರ್ಮಪ್ಪ, ಬಿ. ವಿಜಯಕುಮಾರ್, ಎಸ್.ಎಚ್. ಮಂಜುನಾಥ್, ಪ್ರಾಥಮಿಕ ಶಾಲಾ ಪ್ರಬಾರ ಮುಖ್ಯ ಶಿಕ್ಷಕಿ ವಿ.ಎನ್. ವಿನೋದ, ಶಿಕ್ಷಕ ಕೆಂಪರಾಜು ಹಾಗೂ ಪೋಷಕರು ಇದ್ದರು.
ಸೋಮವಾರಪೇಟೆ ಮೇ 30 : ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಹತೋಟಿಗೆ ಬಂದರೆ, ಸಾರ್ವಜನಿಕರು, ರೈತರು ನೆಮ್ಮದಿಯ ಬದುಕು ಕಂಡುಕೊಳ್ಳಬಹುದು ಎಂದು ಶಾಸಕ ಮಂತರ್‍ಗೌಡ ಅಭಿಪ್ರಾಯಿಸಿದರು. ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಜೇಸಿ ವೇದಿಕೆಯಲ್ಲಿ ಕ್ಷೇತ್ರದ ಮತದಾರರಿಗೆ ಆಯೋಜಿಸಲಾಗಿದ್ದ ಕೃತಜ್ಞತಾ ಸಮರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಸಾರ್ವಜನಿಕರಿಂದ ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡಿದರು. ಕಳೆದ 25 ವರ್ಷಗಳಿಂದ ಮಡಿಕೇರಿ ಕ್ಷೇತ್ರಕ್ಕೆ ಒಳಪಡುವ ಕಂದಾಯ ಇಲಾಖೆ ಸೇರಿದಂತೆ ಸಾರ್ವಜನಿಕರಿಗೆ ತುಂಬಾ ಅವಶ್ಯಕತೆಯ ಕೆಲಸಗಳು ಇರುವ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂಬ ದೂರಿದೆ. ಮುಂದೆ ಇವುಗಳಿಗೆ ಅವಕಾಶ ಇರುವುದಿಲ್ಲ. ಪ್ರಾಮಾಣಿಕವಾಗಿ ಸಾರ್ವಜನಿಕರಿಗೆ ಸರ್ಕಾರಿ ಸೇವೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ವಿದ್ಯಾವಂತರೆನಿಸಿಕೊಂಡಿರುವ ಸರ್ಕಾರಿ ನೌಕರರು ಸ್ಪಂದಿಸಬೇಕು ಎಂದರು. ಮುಂದಿನ ಐದು ವರ್ಷದ ಆಡಳಿತ ಹೇಗೆ ನಡೆಸಬೇಕೆಂಬ ಚಿಂತನೆ ಮಾಡಿದ್ದೇನೆ. ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳು ಹಾಗೂ ಜನಪರ ಯೋಜನೆಗಳನ್ನು ಮತದಾರರಿಗೆ ಪ್ರಾಮಾಣಿಕವಾಗಿ ತಲುಪಿಸುವುದೇ ನನ್ನ ಗುರಿ ಎಂದರು. ಮುಂದಿನ ಜಿ.ಪಂ, ತಾ.ಪಂ ಸಹಕಾರ ಸಂಘಗಳ ಚುನಾವಣೆ ಸಮೀಪಿಸುತ್ತಿದ್ದು ಪಕ್ಷದ ಎಲ್ಲಾ…
ಮಡಿಕೇರಿ ಮೇ 29 : ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಎತ್ತಿನ ಗಾಡಿಯಲ್ಲಿ ಶಾಲೆಗೆ ಆಗಮಿಸುವ ಮೂಲಕ ಗಮನ ಸೆಳೆದರು. ಮಕ್ಕಳು ವಿನೂತನ ರೀತಿಯಲ್ಲಿ ಶಾಲೆಗೆ ಆಗಮಿಸಿದ್ದು, ಗ್ರಾಮಸ್ಥರ ಗಮನ ಸೆಳೆಯಿತು. ಶಾಲಾ ಪ್ರಾರಂಭೋತ್ಸವದ ಮೊದಲ ದಿನ ಶಿಕ್ಷಕರು ಶಾಲೆಗೆ ಮಕ್ಕಳನ್ನು ಭವ್ಯವಾಗಿ ಸ್ವಾಗತಿಸಿ ಸಿಹಿ ವಿತರಿಸಿದರು. ಜಾನಪದ ಸಂಸ್ಕೃತಿಯ ಪ್ರತೀಕವಾದ ಎತ್ತಿನ ಗಾಡಿಯನ್ನು ಏರಿದ ಮಕ್ಕಳು ಸರ್ಕಾರಿ ಶಾಲೆಗೆ ಹೋಗೋಣ ಬನ್ನಿ, ಸರ್ಕಾರಿ ಶಾಲೆ ನಮ್ಮ ಹೆಮ್ಮೆ, ಸರ್ಕಾರಿ ಶಾಲೆ ನಮ್ಮೂರ ಶಾಲೆ, ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸೋಣ ಬನ್ನಿ, ‘ಶಿಕ್ಷಣವೇ ಶಕ್ತಿ’ ಎಂಬಿತ್ಯಾದಿ ಘೋಷಣೆಗಳ ಫಲಕಗಳನ್ನು ಹಿಡಿದು ಎತ್ತಿನ ಗಾಡಿಯ ಮೂಲಕ ಸಂಭ್ರಮದಿಂದ ಶಾಲೆಗೆ ಆಗಮಿಸಿದರು. ಗ್ರಾಮದ ಮುಖ್ಯರಸ್ತೆ ಬಳಿಯಿಂದ ಆರಂಭಗೊಂಡ ಮಕ್ಕಳ ಎತ್ತಿನ ಗಾಡಿಗೆ ಚಾಲನೆ ನೀಡಿದ ಗ್ರಾಮ ಹಿರಿಯರೂ ಆದ ಕೃಷಿಕ ಕೆ.ಎಸ್.ರಾಜಾಚಾರಿ, ಪ್ರತಿಯೊಬ್ಬರೂ ಮಕ್ಕಳ ಶಿಕ್ಷಣಕ್ಕೆ ಸಹಕರಿಸಬೇಕು ಎಂದರು. ಕೃಷಿಕ ಕೆ.ಆರ್.ನಾಗರಾಜ್ ಸಾರಥ್ಯದಲ್ಲಿ ಸಾಗಿದ ಎತ್ತಿನ ಗಾಡಿಯ ಮೂಲಕ ಗ್ರಾಮದ ಬೀದಿಯಲ್ಲಿ…
ಮಡಿಕೇರಿ ಮೇ 29 : ಸಿದ್ದಾಪುರ ಗ್ರಾಮದ ಬೀಟಿಕಾಡು ಎಸ್ಟೇಟ್ ಶರತ್ ಕುಮಾರ್ ಅವರ ಮನೆಯ ಕೋಳಿ ಗೂಡಿನೊಳಗಿದ್ದ ನಾಗರಹಾವನ್ನು ಉರಗ ರಕ್ಷಕ ಸುರೇಶ್ ಪೂಜಾರಿ ರಕ್ಷಿಸಿದ್ದಾರೆ. ಶರತ್ ಕುಮಾರ್ ಅವರು ಹಾವು ಇರುವ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಉರಗ ರಕ್ಷಕ ಸುರೇಶ್ ಪೂಜಾರಿ ನಾಗರಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಮಾಲ್ತಾರೆ ಅರಣ್ಯಕ್ಕೆ ಬಿಟ್ಟರು.
ಮಡಿಕೇರಿ ಮೇ 29 : ಪೊನ್ನಂಪೇಟೆ 66/11 ಕೆವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೋಗುವ ಎಫ್1 ನಲ್ಲೂರು, ಎಫ್2 ಬಾಳೆಲೆ, ಎಫ್2 ರಾಜಾಪುರ ಫೀಡರ್‍ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ಮೇ, 30 ಮತ್ತು 31 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ನಲ್ಲೂರು, ಬೆಸಗೂರು, ಪೊನ್ನಪ್ಪಸಂತೆ, ಬಾಳೆಲೆ, ರಾಜಾಪುರ, ಮಳ್ಳೂರು, ನಿಟ್ಟೂರು, ಕೊಟ್ಟಗೇರಿ, ಬಿಳೂರು, ದೇವನೂರು ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
ಮಡಿಕೇರಿ ಮೇ 29 : ಕೊಡಗು ಜಿಲ್ಲಾ ವಿದ್ಯುತ್ ಗ್ರಾಹಕರ ಕುಂದು ಕೊರತೆ ನಿವಾರಣಾ ವೇದಿಕೆಗೆ ಸದಸ್ಯರು ಬೇಕಾಗಿರುತ್ತದೆ. ಆದ್ದರಿಂದ ಈ ಸದಸ್ಯತ್ವ ಹೊಂದಲು ಬಯಸುವವರು ವಿದ್ಯುತ್ ಕ್ಷೇತ್ರದ ಬಗ್ಗೆ ಅನುಭವವುಳ್ಳವರು ಅಥವಾ ಸೂಕ್ತ ಜ್ಞಾನ ಹೊಂದಿರುವ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ಮಾಹಿತಿಯೊಂದಿಗೆ ಜೂ.6 ರೊಳಗೆ ಕಾರ್ಯನಿರ್ವಾಹಕ ಎಂಜಿನಿಯರ್, ಅವರ ಕಚೇರಿ, ಕಾರ್ಯ ಮತ್ತು ಪಾಲನೆ ವಿಭಾಗ, ಮಡಿಕೇರಿ ಇ-ಮೇಲ್ eeemdk@cescmysore.org, cesceemdk@gmail.com ಈ ವಿಳಾಸಕ್ಕೆ ವಿವರವನ್ನು ಅರ್ಜಿ ಸಲ್ಲಿಸುವಂತೆ ಮಡಿಕೇರಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಮಡಿಕೇರಿ ಮೇ 29 : ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಅಗತ್ಯ ಮುನ್ನೆಚ್ಚರ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಂಬಂಧ ಮಾಹಿತಿ ಪಡೆದು ಮಾತನಾಡಿದರು. ಡೆಂಗಿ, ಚಿಕನ್ ಗುನ್ಯ, ಮಲೇರಿಯ ಮತ್ತಿತರ ಸಾಂಕ್ರಾಮಿಕ ರೋಗ ತಡೆಯುವಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಶಾಲೆಗಳು, ಕಚೇರಿಗಳು, ಇತರೆ ಎಲ್ಲೆಡೆ ನೀರಿನ ಟ್ಯಾಂಕ್‍ನ್ನು ಆರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಸಲಹೆ ಮಾಡಿದರು. ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಅವರು ಕಳೆದ ಮೂರು ತಿಂಗಳಲ್ಲಿ 25 ಡೆಂಗಿ ಪ್ರಕರಣಗಳು ವರದಿಯಾಗಿದ್ದು, ಎಲ್ಲರೂ ಆರೋಗ್ಯಯುತರಾಗಿದ್ದಾರೆ ಎಂದರು. ಮನೆಯ ಸುತ್ತಮುತ್ತ ಪರಿಸರ ಶುಚಿತ್ವ ಕಾಪಾಡಬೇಕು. ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು. ಸಾಂಕ್ರಾಮಿಕ ರೋಗಗಳ ನಿಯಂತ್ರಣ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಡಾ. ಶ್ರೀನಿವಾಸ್ ಮಾಹಿತಿ…






