ನಾಪೋಕ್ಲು ಮೇ 29 : ಕಕ್ಕಬೆ ರಿವರ್ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ಕಕ್ಕಬೆಯಲ್ಲಿ ಆಯೋಜಿಸಿದ ರಾಜ್ಯಮಟ್ಟದ ಈಜು ಸ್ಪರ್ಧೆಯು ಕೃಷಿ ಪತ್ತಿನ ಸಹಕಾರ ಸಂಘದ ಎದುರು ಇರುವ ಹೊಳೆಯಲ್ಲಿ ನಡೆಯಿತು. ವಿವಿಧ ವಯೋಮಾನದವರಿಗೆ ಏರ್ಪಡಿಸಲಾಗಿದ್ದ ಸ್ಪರ್ಧೆಯಲ್ಲಿ ಮೈಸೂರು, ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯ ವಿವಿಧ ಭಾಗಗಳ ಬಾಲಕ, ಬಾಲಕಿಯರು, ಪುರುಷರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು. ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಮನ್ ಕಾವೇರಪ್ಪ ಮಾತನಾಡಿ, ರಿವರ್ ಸ್ವಿಮಿಂಗ್ ಕ್ಲಬ್ ನ ಅಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ನೇತೃತ್ವದಲ್ಲಿ ಕಕ್ಕಬೆ ಹೊಳೆಯಲ್ಲಿ ವಿಶೇಷವಾದ ಈಜು ಸ್ಪರ್ಧೆ ನಡೆಸುತ್ತಿರುವುದು ಶ್ಲಾಘನೀಯ ಎಂದರು. ಗ್ರಾಮೀಣ ಸಂಪನ್ಮೂಲವನ್ನು ಮುಂದಿನ ಪೀಳಿಗೆಗೆ ನೀಡುವಂತಾಗಲು ಯುವ ಜನಾಂಗ ಶ್ರಮಿಸಬೇಕು. ಗ್ರಾಮೀಣ ಭಾಗದಲ್ಲಿ ಬೇಸಿಗೆಯ ರಜೆ ಸದುಪಯೋಗ ಆಗುವಂತಹ ಉತ್ತಮ ಕಾರ್ಯಕ್ರಮಗಳನ್ನು ಮಕ್ಕಳಿಗೆ ಆಯೋಜಿಸಲಾಗಿದೆ ಎಂದರು. ಮಾಚಿಮಾಡ ರವೀಂದ್ರ ಮಾತನಾಡಿ, ಈಜು ಸ್ಪರ್ಧೆ ಕೊಡಗಿಗೆ ಹೊಸ ಅನುಭವ ತಂದಿದೆ. ಜಿಲ್ಲೆಯಲ್ಲಿನ ಪ್ರಕೃತಿಯನ್ನು ಆರಾಧಿಸುವ ಮಾನಸಿಕತೆಯನ್ನು…
ಲೇಖಕ: admin
ಮಡಿಕೇರಿ ಮೇ 29 : ರಾಜಕೀಯದಲ್ಲಿ ಖಂಡಿತಾ ಆಸಕ್ತಿ ಇಲ್ಲ, ಮೈಸೂರು ಅರಮನೆ ಪರಂಪರೆ ಮುಂದುವರೆಸಿಕೊಂಡು ಹೋಗಲು ಬದ್ಧ ಎಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣರಾಜ ಒಡೆಯರ್ ಹೇಳಿದ್ದಾರೆ. ಸುಂಟಿಕೊಪ್ಪದಲ್ಲಿ ಡಿ.ಶಿವಪ್ಪ ಸ್ಮಾರಕ 25 ನೇ ವರ್ಷದ ಫುಟ್ ಬಾಲ್ ಪಂದ್ಯಾವಳಿಯ ಅಂತಿಮ ಪಂದ್ಯವನ್ನು ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಿಂದ ದೂರ ಎಂದು ಈಗಾಗಲೇ ಹೇಳಿದ್ದೇನೆ, ಮುಂದೆಯೂ ರಾಜಕೀಯದಿಂದ ದೂರವೇ ಇರುತ್ತೇನೆ ಎಂದರು. ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಕ್ರೀಡಾಕೂಟಗಳು ಬಹಳ ಮುಖ್ಯ, ಕೊಡಗಿನ ಕೋಲ್ಕೋತ್ತಾ ಎಂದು ಖ್ಯಾತಿ ಪಡೆದು ಫುಟ್ಬಾಲ್ ಕ್ರೀಡೆಗೆ ಹೆಸರಾಗಿರುವ ಸುಂಟಿಕೊಪ್ಪದಲ್ಲಿ 25 ವರ್ಷಗಳಿಂದ ಫುಟ್ಬಾಲ್ ಪಂದ್ಯಾವಳಿ ಆಯೋಜಿಸುತ್ತಿರುವ ಡಿ.ಶಿವಪ್ಪ ಕುಟುಂಬದ ಪ್ರಯತ್ನ ಶ್ಲಾಘನೀಯ, ಕೊಡಗಿನಲ್ಲಿ ಕ್ರೀಡಾ ಚಟುವಟಿಕೆಗೆ ಮುಂದಿನ ದಿನಗಳಲ್ಲಿ ನನ್ನಿಂದಾದ ಪ್ರೋತ್ಸಾಹ ನೀಡುವೆ ಎಂದು ಭರವಸೆ ನೀಡಿದರು. ಡಿ.ಶಿವಪ್ಪ ಸ್ಮಾರಕ ಫುಟ್ಬಾಲ್ ಪಂದ್ಯಾವಳಿಯ ಪ್ರಾಯೋಜಕರಾದ ಉದ್ಯಮಿ ವಿಶಾಲ್ ಶಿವಪ್ಪ ಮಾತನಾಡಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣವಾಗಿ ಸುಂಟಿಕೊಪ್ಪ ಶಾಲಾ ಕ್ರೀಡಾಂಗಣ ರೂಪಿಸುವ ಯೋಜನೆ ಇದ್ದು, ಶಾಸಕ…
ಮಡಿಕೇರಿ ಮೇ 29 : ಎಸ್.ಕೆ.ಎಸ್.ಎಸ್.ಎಫ್ ಕಂಡಕರೆ ಶಾಖೆ ವತಿಯಿಂದ ಮೊದಲನೆಯ ವರ್ಷದ ಮಜ್ಲಿಸುನ್ನೂರ್ ವಾರ್ಷಿಕೋತ್ಸವ ಕಾರ್ಯಕ್ರಮ ಜೂ.4 ರಂದು ಮಗ್ರಿಬ್ ನಮಾಜ್ ನಂತರ ಕಂಡಕರೆ ಮದರಸ ಮೈದಾನದಲ್ಲಿ ನಡೆಯಲಿದೆ. ಸಂಜೆ 7 ಗಂಟೆಗೆ ಕೊಡಗು ಜಿಲ್ಲಾ ನಾಯಿಬ್ ಖಾಝಿ ಶೈಖುನಾ ಎಂ.ಎಂ ಅಬ್ದುಲ್ಲ ಫೈಝಿ ನೆರವೇರಿಸಲಿದ್ದಾರೆ. ಕಾರ್ಯಮದ ಶುಭನುಡಿಯನ್ನು ಕಂಡಕರೆ ಮಸ್ಜಿದ್ ತಖ್ವಾ ಖತೀಬರಾದ ಮುಸ್ತಫಾ ಸಖಾಫಿ ನೆರವೇರಿಸಲಿದ್ದಾರೆ. ಮಜ್ಲಿಸುನ್ನೂರ್ ನೇತೃತ್ವವನ್ನು ಹಾಫಿಳ್ ಸಯ್ಯಿದ್ ಅಬ್ದುಲ್ ಖಾದಿರಿ ಪಟ್ಡಾಂಬಿ ನೆರವೇರಿಸಲಿದ್ದಾರೆ ಎಂದು ಎಸ್.ಕೆ.ಎಸ್.ಎಸ್.ಎಫ್ ಕಂಡಕರೆ ಶಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಡಿಕೇರಿ ಮೇ 27 : ನೂತನ ರಾಜ್ಯ ಸರ್ಕಾರದ ಮಂತ್ರಿಮoಡಲ ರಚನೆಯಾಗಿದೆ, ಜಾತ್ಯತೀತ ರಾಷ್ಟ್ರ ಭಾರತದಲ್ಲಿ ಸಂವಿಧಾನದತ್ತವಾದ ಹುದ್ದೆಗಳು ಅರ್ಹತೆಯ ಆಧಾರದ ಮೇಲೆ ಹಂಚಿಕೆಯಾಗಬೇಕೆ ಹೊರತು ಜಾತಿ, ಧರ್ಮ, ಪಂಗಡಗಳ ಆಧಾರದಿಂದ ಅಲ್ಲವೆಂದು ವಕೀಲ ಕೆ.ಎಂ.ಕುಂಞ ಅಬ್ದುಲ್ಲ ಅಭಿಪ್ರಾಯಪಟ್ಟಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭ ಜಾತೀಯತೆಯ ವಿಚಾರ ಹೆಚ್ಚು ಚರ್ಚೆಗೆ ಬಂತು. ಇದೀಗ ಕೆಲವೊಂದು ಗುಂಪು, ಪಂಗಡ, ಜಾತಿಗಳು ಸಂವಿಧಾನ ದತ್ತವಾದ ಸ್ಥಾನಮಾನಗಳನ್ನು ಅರ್ಹತೆಯನ್ನಾಧರಿಸಿ ಸ್ವೀಕರಿಸದೆ ಜಾತಿ, ಧರ್ಮಗಳ ಆಧಾರದಲ್ಲಿ ಕೇಳಿ ಪಡೆಯುತ್ತಿರುವುದು ಮತ್ತು ಹಂಚಿಕೆಯಾಗುತ್ತಿರುವುದು ಕಂಡು ಬರುತ್ತಿದೆ. ಇದು ಅಕ್ಷಮ್ಯ ಅಪರಾಧವಾಗಿದೆ, ಅಲ್ಲದೆ ಸಂವಿಧಾನ ವಿರೋಧಿಯಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ವ್ಯಕ್ತಿ ತಮ್ಮ ಅರ್ಹತೆ ಮತ್ತು ಪ್ರತಿಭೆಯ ಮೂಲಕ ಸಂವಿಧಾನದತ್ತವಾದ ಹುದ್ದೆಗಳನ್ನು ಪಡೆದಾಗ ಮಾತ್ರ ಭಾರತ ಜಾತ್ಯಾತೀತ ರಾಷ್ಟ್ರವಾಗಿ ಉಳಿದು ಸಂವಿಧಾನದ ಮೂಲ ಉದ್ದೇಶ ಈಡೇರುತ್ತದೆ ಎಂದು ಕುಂಞ ಅಬ್ದುಲ್ಲ ಹೇಳಿದ್ದಾರೆ.
ವಿರಾಜಪೇಟೆ ಮೇ 27 : ವಿರಾಜಪೇಟೆ ತಾಲೂಕಿನ ಬೆಳ್ಳುಮಾಡು ಗ್ರಾಮದ ಆಡುಕೋಣಿ ಶ್ರೀ ಶಾಸ್ತಾವು (ಈಶ್ವರ) ಮತ್ತು ವಿಷ್ಣುಮೂರ್ತಿ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ದೃಢಕಲಶಾಭಿಷೇಕ ಜರುಗಿತು. ಪುರಾತನ ದೇವಾಲಯಗಳಲ್ಲೊಂದಾದ ಶ್ರೀ ಶಾಸ್ತಾವು ಸುಮಾರು 50 ಲಕ್ಷ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿತ್ತು. ದೇಗುಲ ನಿರ್ಮಾಣವಾದ ಬಳಿಕ 48 ದಿನಗಳ ಬಳಿಕ ಶ್ರೀ ದೇವರಿಗೆ ನಿತ್ಯ ಪೂಜೆ, ವಾರ್ಷಿಕ ಪೂಜೆ, ವಿಶೇಷ ಪೂಜೆ ಮಾಡುವುದು ದೈವಿಕ ಸೇವೆಯ ವಾಡಿಕೆಯಾಗಿದೆ. ಈ ಹಿನ್ನಲೆಯಲ್ಲಿ ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಪ್ರಜ್ವಲ್ ಕುದ್ದಣಾಯ ಮತ್ತು ಇತರ ಪೊರೋಹಿತ ವೃಂದದ ಸಾನಿಧ್ಯದಲ್ಲಿ ದೃಢಕಲಶಾಭಿಷೇಕ ಸೇರಿದಂತೆ ವಿವಿಧ ವಿಶೇಷ ಪೂಜೆಗಳು ನಡೆಯಿತು. ನಂತರ ದೇವಾಲಯದ ಆಡಳಿತ ಮಂಡಳಿಯ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರು, ಅಧ್ಯಕ್ಷರು ಸೇರಿದಂತೆ ಆಡಳಿತ ಮಂಳಿಯ ಸದಸ್ಯರು ಬೆಳ್ಳುಮಾಡು ಗ್ರಾಮ ಹಾಗೂ ನೆರೆಕೆರೆಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ವರದಿ : ಕಿಶೋರ್ ಕುಮಾರ್ ಶೆಟ್ಟಿ
ಮಡಿಕೇರಿ ಮೇ 27 : ಗೌಡ ಯುವ ವೇದಿಕೆ ವತಿಯಿಂದ ನಗರದ ಜ.ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿತ ಗೌಡ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಟೀಂ ಎಲೈಟ್ ತಂಡ ಫೈನಲ್ ಪ್ರವೇಶಿಸಿತು. ಮೊದಲ ಕುತೂಹಲಕಾರಿ ಕ್ವಾಲಿಫೈಯರ್ ಪಮದ್ಯದಲ್ಲಿ ಎಲೈಟ್ ತಂಡ ಎದುರಾಳಿ ಕಾಫಿ ಕ್ರಿಕೆಟಸ್ಟ್ ತಂಡವನ್ನು ಪರಾಭವಗೊಳಿಸಿ, ಮೊದಲ ತಂಡವಾಗಿ ಪ್ರಶಸ್ತಿಯ ಸುತ್ತು ತಲುಪಿತು. ಮೊದಲು ಬ್ಯಾಟ್ ಮಾಡಿದ ಕಾಫಿ ಕ್ರಿಕೆಟರ್ಸ್ ನಿಗದಿತ 10 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 72 ರನ್ ಗಳಿಸಿತು. ಅನಿಲ್ ಕುಡೆಕಲ್ ಅತ್ಯಧಿಕ 34(18) ರನ್ ಗಳಿಸಿದರು. ಎಲೈಟ್ ತಂಡದ ಅವಿನ್ 2 ವಿಕೆಟ್ ಪಡೆದರು. ನಂತರ ಬ್ಯಾಟ್ ಮಾಡಿದ ಎಲೈಟ್ ತಂಡ ಒಂದು ವಿಕೆಟ್ ನಷ್ಟಕ್ಕೆ 5.5 ಓವರ್ ನಲ್ಲಿ 75 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಎಲೈಟ್ ತಂಡದ ಪರವಾಗಿ ತಳೂರು ವಿಕ್ಕಿ 50 ರನ್ ಗಳಿಸಿದರು. ಎಲಿಮಿನೇಟರ್ ಪಂದ್ಯ- ನಂತರ…
ಮಡಿಕೇರಿ ಮೇ 27 : ವಿದ್ಯುತ್ ತಂತಿ ತಗುಲಿ ಕಾಡಾನೆಯೊಂದು ಸಾವಿಗೀಡಾಗಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಕುಟ್ಟದಲ್ಲಿ ನಡೆದಿದೆ. ಕಾಫಿ ತೋಟದ ಮಧ್ಯೆ 11 ಕೆ.ವಿ.ಸಾಮಥ್ರ್ಯದ ವಿದ್ಯುತ್ ತಂತಿ ಹಾದುಹೋಗಿತ್ತು. ಇದು ಸೊಂಡಿಲಿಗೆ ತಗುಲಿ ಆನೆ ಸ್ಥಳದಲ್ಲೇ ಮೃತಪಟ್ಟಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಡಿಕೇರಿ ಮೇ 27 : ಗೊಬ್ಬರ ಚೀಲ ಮುಚ್ಚಿಕೊಂಡು ಬೀಟೆ ಮರದ ನಾಟಾಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಅರಣ್ಯ ಇಲಾಖೆಯ ಮಡಿಕೇರಿ ವಿಭಾಗದ ಸಿಬ್ಬಂದಿಗಳು ಪತ್ತೆಹಚ್ಚಿದ್ದಾರೆ. ಮರಗೋಡುವಿನಲ್ಲಿ ಗೊಬ್ಬರ ಚೀಲ ಮುಚ್ಚಿಕೊಂಡು ತೆರಳುತ್ತಿದ್ದ ಲಾರಿಯನ್ನು ಪರಿಶೀಲನೆಗೆ ಒಳಪಡಿಸಿದಾಗ ಬೀಟೆ ಮರಗಳು ಇರುವುದು ಪತ್ತೆಯಾಗಿದೆ. ಸುಮಾರು 2 ಲಕ್ಷ ರೂ. ಮೌಲ್ಯದ ಮರ, ಲಾರಿ ಸೇರಿ ಒಟ್ಟು 22 ಲಕ್ಷದ ರೂ. ಮೌಲ್ಯದ ಮರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂದರ್ಭ ಲಾರಿ ಚಾಲಕ ಮತ್ತು ಆರೋಪಿಗಳು ಪರಾರಿಯಾಗಿದ್ದಾರೆ. ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಹಿಷಿನ್ ಭಾಷಾ, ವಲಯ ಅರಣ್ಯಾಧಿಕಾರಿ ಹನುಮಂತ ರಾಜು, ಮೂರ್ನಾಡು ಉಪ ವಲಯದ ಉಪವಲಯ ಅರಣ್ಯಾಧಿಕಾರಿ ಬಿ.ಹೆಚ್.ಸಚಿನ್ ಸೇರಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆ ಮುಗಿದ ನಂತರ ಬಹುತೇಕ ವಿದ್ಯಾರ್ಥಿಗಳದ್ದು ಒಂದೇ ಪ್ರಶ್ನೆ ಮುಂದೇನು ? ಎಲ್ಲರ ಚಿತ್ತವೂ ಒಳ್ಳೆಯ ಉದ್ಯೋಗ ಮಾಡುವುದೇ ಆಗಿದ್ದರೂ, ಕಣ್ಣೆದುರು ಬಂದು ನಿಲ್ಲುವುದು ಮಾತ್ರ ಪ್ರಚಲಿತದಲ್ಲಿರುವ ಕೆಲವೇ ಕೆಲವು ಕೋರ್ಸುಗಳು ಆದರೆ ನಮ್ಮ ನಡುವೆಯೇ ಇರುವ, ಡಿಪ್ಲೋಮಾ ಕೊನೆಯ ಸೆಮಿಸ್ಟರ್ ನಲ್ಲೇ ಇಂಟರ್ನ್ ಶಿಪ್ ಮೂಲಕ ಉದ್ಯೋಗ ದೊರಕಿಸುವ ಹಲವು ಕೋರ್ಸುಗಳು ಗಮನಕ್ಕೆ ಬಾರದೆ ಹೋಗುತ್ತಿವೆ. ಅಂಥ ಕೋರ್ಸುಗಳಲ್ಲಿ ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ(ಸಿಪೆಟ್)ನೀಡುತ್ತಿರುವ ಡಿಪ್ಲೋಮ ಕೂಡ ಒಂದು. ಪ್ಲಾಸ್ಟಿಕ್ ಎಂದಾಕ್ಷಣ ನಕಾರಾತ್ಮಕ ಭಾವನೆಯೇ ಮೂಡುತ್ತದೆ ಆದರೆ ಅದರ ಪ್ರಯೋಜನಗಳು ಸಾವಿರಾರು. ನಿತ್ಯೋಪಯೋಗಿ ವಸ್ತುಗಳಾದ ಮೊಬೈಲ್ ಫೋನ್, ಫ್ರಿಡ್ಜ್, ಕಂಪ್ಯೂಟರ್ , ಟಿ.ವಿ. ವೈದ್ಯಕೀಯ ಕ್ಷೇತ್ರದಲ್ಲಿ ಟ್ಯಾಬ್ಲೆಟ್ , ಸಿರಿಂಜ್, ಸೆಂಟ್, ಕ್ರೀಮ್ ಮುಂತಾದವುಗಳ ತಯಾರಿಕೆಗೆ ವಿಜ್ಞಾನ–ತಂತ್ರಜ್ಞಾನ ಕ್ಷೇತ್ರದಲ್ಲಿ ಬಳಸುವ ಯಂತ್ರೋಪಕರಣಗಳಿಗೆ ಆಹಾರ ಪದಾರ್ಥ ಗಳಾದ ಬಿಸ್ಕೆಟ್, ಚಾಕಲೇಟ್, ಹಾಲು, ತುಪ್ಪ ಪ್ಯಾಕಿಂಗ್ ಗಳಿಗೆ… ಎಲ್ಲದರಲ್ಲೂ ಪ್ಲಾಸ್ಟಿಕ್ ಬೇಕೇ ಬೇಕು.ಆದರೆ…
ಬೆಂಗಳೂರು ಮೇ 27 : ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರ 59ನೇ ಪುಣ್ಯತಿಥಿಯ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದ ಆವರಣದಲ್ಲಿರುವ ನೆಹರೂ ಪ್ರತಿಮೆ ಬಳಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.






