ಲೇಖಕ: admin

ಮಡಿಕೇರಿ ಮೇ 29 : ಐತಿಹಾಸಿಕ ಹಿನ್ನೆಲೆಯ ಬಿಳಿಗೇರಿ ಗ್ರಾಮದ ಶ್ರೀ ಅರ್ಧನಾರೀಶ್ವರ ಮತ್ತು ಶ್ರೀ ಭಗವತಿ ದೇವಾಲಯಕ್ಕೆ ತೆರಳುವ ಹಾದಿಯ ಮೇಕೇರಿಯಲ್ಲಿ ಶ್ರೀ ಕ್ಷೇತ್ರದ ನಾಮಫಲಕವನ್ನು ಅಳವಡಿಸಲಾಯಿತು. ಮಡಿಕೇರಿಯಿಂದ ವಿರಾಜಪೇಟೆಗೆ ತೆರಳುವ ರಸ್ತೆಯ ಮೇಕೇರಿಯಲ್ಲಿ, ಬಿಳಿಗೇರಿಯ ಶ್ರೀ ಕ್ಷೇತ್ರಕ್ಕೆ ತೆರಳುವ ಹಾದಿಯಲ್ಲಿ ಬೃಹತ್ ನಾಮಫಲಕವನ್ನು ಅಳವಡಿಸಲಾಗಿದೆ. ನಾಮಪಲಕ ಅಳವಡಿಸುವ ಸಂದರ್ಭ ಬಿಳಿಗೇರಿಯ ಶ್ರೀ ಭಗವತಿ ದೇವಾಲಯದ ಅಧ್ಯಕ್ಷರಾದ ಪರ್ಲಕೋಟಿ ಮಾಚಯ್ಯ, ತಕ್ಕರಾದ ಪುರುಷೋತ್ತಮ ರೈ, ಮಂಞೀರ ಉಮೇಶ್ ಅಪ್ಪಣ್ಣ, ದೇವಜನ ಮೋಹನ, ಪರ್ಲಕೋಟಿ ಕಾಂತ, ತುಂತಜೆ ಗಿರೀಶ್, ಕೋಟೇರ ಶರಿ, ಗುತ್ತಿಗೆದಾರರಾದ ಹೀಮೇಶ್ ಮತ್ತಿತರರು ಹಾಜರಿದ್ದರು.

Read More

ಮಡಿಕೇರಿ ಮೇ 29 : ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ಬಾಳುಗೋಡು ಕೊಡವ ಸಮಾಜದ ಮೈದಾನದಲ್ಲಿ ಜೆಸಿ ನಿಸರ್ಗ ಕಪ್ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಿತು. ಜೇಸಿ ವಲಯ 14ರ ಅಧ್ಯಕ್ಷರಾದ ಜೆಸಿ ಯಶಸ್ವಿನಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕ್ರೀಡೆಯಿಂದ ಮನಸ್ಸಿಗೆ ನೆಮ್ಮದಿ, ಏಕಾಗ್ರತೆ ಉಂಟಾಗಲಿದೆ. ಎಲೆಮರೆ ಕಾಯಿಯಂತಿರುವ ಪ್ರತಿಭೆಗಳನ್ನು ಗುರುತಿಸಲು ಮತ್ತು ಅವರನ್ನು ರಾಷ್ಟ್ರ ಮಟ್ಟದ ಸ್ಪರ್ಧೆಗೆ ತಯಾರು ಮಾಡಲು ಸ್ಪರ್ಧೆ ಸಹಕಾರಿ ಆಗಲಿದೆ ಎಂದು ಹೇಳಿದರು. ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷ ಮುಕ್ಕಾಟಿರ ನೀತ್ ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯ 14ರ ನಿಕಟ ಪೂರ್ವ ಅಧ್ಯಕ್ಷ ಕುನಾಲ್ ಮಾಣಿಕ್‍ಚಂದ್, ದಾನಿಗಳಾದ ಚೇಂದ್ರಿಮಾಡ ಗಣೇಶ್ ನಂಜಪ್ಪ, ಸವಿತಾ ನಾಣಯ್ಯ, ಪೊನ್ನಿರ ಚೇತನ್ ಚಂಗಪ್ಪ, ಕೋಲತಂಡ ಬೋಪಯ್ಯ, ಕೊಲ್ಲಿರ ಬೋಪಣ್ಣ, ಪೂರ್ವ ಅಧ್ಯಕ್ಷರಾದ ಆಪಟ್ಟೀರ ಟಾಟು ಮೊಣ್ಣಪ್ಪ, ಐಪಿಪಿ ಅಪ್ಪಡೇರಂಡ ದಿನು ದೇವಯ್ಯ, ಕಾರ್ಯದರ್ಶಿ…

Read More

ಮೈಸೂರು ಮೇ 29 : ಖಾಸಗಿ ಬಸ್ ಮತ್ತು ಕಾರು  ನಡುವೆ ಭೀಕರ ಅಪಘಾತ ಸಂಭವಿಸಿ  10 ಮಂದಿ ಮೃತಪಟ್ಟಿರುವ ಘಟನೆ  ಮೈಸೂರು ಜಿಲ್ಲೆಯ ಕೊಳ್ಳೇಗಾಲ – ಟಿ.ನರಸೀಪುರ ಮುಖ್ಯ ರಸ್ತೆಯ  ಪಿಂಜರ ಪೋಲ್ ಬಳಿ ನಡೆದಿದೆ.   ಅಪಘಾತದ ತೀವ್ರತೆಗೆ ಇನ್ನೊವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಮಗು ಸೇರಿದಂತೆ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ನಾಲ್ವರು ಪುರುಷರು, ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ಮೃತಪಟ್ಟಿದ್ದು, ಈ ಪೈಕಿ ಕೆಲವರು ಬಳ್ಳಾರಿ ಜಿಲ್ಲೆಯ ಸಂಗನಕಲ್ ನಿವಾಸಿಗಳಾಗಿದ್ದು, ಮೈಸೂರಿಗೆ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿಂದ ಚಾಮರಾಜನಗರಕ್ಕೆ ಹೋಗಿದ್ದರು ಎನ್ನಲಾಗಿದೆ.

Read More

ಮಡಿಕೇರಿ ಮೇ 29 : ಕೊಡಗು ಜಿಲ್ಲಾ ಮರಾಠ ಮರಾಟಿ ಸಮಾಜ ಸೇವಾ ಸಂಘ ಅಂಬಾ ಭವಾನಿ ಯುವಕ ಯುವತಿ ಕ್ರೀಡಾ ಮತ್ತು ಮನೋರಂಜನ ಸಂಘ ಹಾಗೂ ಮಹಿಳಾ ವೇದಿಕೆ ತಾಳತ್ತಮನೆ ಇದರ 27ನೇ ವಾರ್ಷಿಕ ಮಹಾಸಭೆಯು ಸಂಘದ ನಿವೇಶನದಲ್ಲಿ ನಡೆಯಿತು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಸಹಾಯಕ ಔಷಧಿ ನಿಯಂತ್ರಕ ಶಂಕರ್ ನಾಯ್ಕ, ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಕುಟುಂಬ ಸದಸ್ಯರೊಂದಿಗೆ ಸಾಮರಸ್ಯದಿಂದ ಬದುಕುವುದನ್ನು ತಿಳಿ ಹೇಳಿ ಕೊಡಬೇಕೆಂದು ಮನವಿ ಮಾಡಿದರಲ್ಲದೇ, ಸಂಘದ ಕಟ್ಟಡದ ಕೆಲಸ ಸಮಾಜ ಬಾಂಧವರ ಸಹಕಾರದಿಂದ ಸಂಪೂರ್ಣಗೊಳ್ಳಲೆಂದು ಆಶಿಸಿದರು. ಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಾಬು ನಾಯ್ಕ ಮಾತನಾಡಿ, ಸಂಘದ ಸಂಘಟನೆಗಾಗಿ ಪ್ರತಿಯೊಬ್ಬರು ಶ್ರಮವಹಿಸಿ ಕಾರ್ಯನಿರ್ವಹಿಸುವ ಮೂಲಕ ಸಂಘದ ಚಟುವಟಿಕೆಗಳ ಬಗ್ಗೆ ಗ್ರಾಮೀಣ ಭಾಗದ ಸಮುದಾಯದ ಮಂದಿಗೆ ತಿಳಿಸಿ ಕೊಡಬೇಕು ಹಾಗೂ ಜನಾಂಗ ಬಾಂಧವರ ಏಳಿಗೆಗಾಗಿ ಶ್ರಮಿಸಬೇಕೆಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಎಂ.ಪರಮೇಶ್ವರ ಮಹಾಸಭೆಗೆ ಸಮಾಜ ಬಾಂಧವರ ಹಾಜರಾತಿ ಕಡಿಮೆ…

Read More

ಸಿದ್ದಾಪುರ ಮೇ 29 :  ಸಹಾರ ಯೂಥ್ ಕ್ಲಬ್ ಆಶ್ರಯದಲ್ಲಿ ಚೆನ್ನಯ್ಯನಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ 4ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕಾಲ್ಚೆಂಡು ಅಂತಿಮ ಪಂದ್ಯಾವಳಿಯಲ್ಲಿ ಚೆನ್ನಯ್ಯನಕೋಟೆಯ ಸಹಾರ ಯೂಥ್ ಕ್ಲಬ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆರು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಒಟ್ಟು 72 ತಂಡಗಳು ಭಾಗವಹಿಸಿದ್ದು, ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಸಹಾರ ತಂಡದ ಜೂನೈದ್, ಉತ್ತಮ ಗೋಲ್ ಕೀಪರ್ ಸಹಾರ ತಂಡದ ಅಮೀರ್, ಅತೀ ಹೆಚ್ಚು ಗೋಲು ಬಾರಿಸಿದ ಪ್ರಶಸ್ತಿಯನ್ನು ಅಮತ್ತಿ ತಂಡದ ರಹೀಸ್, ಪಡೆದುಕೊಂಡರು. ಸಮಾರೋಪ : ಸಮಾರೋಪ ಸಮಾರಂಭದಲ್ಲಿ ಕೊಡಗು ಮುಸ್ಲಿಂ ಕಪ್ ನ ಸಂಸ್ಥಾಪಕ ಆಸೀಫ್ ಆಪು ಮಾತನಾಡಿ, ಪ್ರತಿಭಾವಂತ ಕ್ರೀಡಾಪಟುಗಳನ್ನು ಬೆಳೆಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ನಾಲ್ಕು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಚೆನ್ನಯ್ಯನಕೋಟೆಯಲ್ಲಿ ಸೌಹಾರ್ದತೆಯಿಂದ ಆಯೋಜಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕಾಲ್ಚೆಂಡು ನ ಅಧ್ಯಕ್ಷ ಸಲೀಂ ಹಾಗೂ…

Read More

ಸಿದ್ದಾಪುರ, ಮೆ 29: ಸಮಾಜದ ಬಗ್ಗೆ ಸದಾ ಕಾರ್ಯನಿರತರಾಗಿರುವ ಪತ್ರಕರ್ತರು ಕೆಲಸದ ಒತ್ತಡಗಳ ಮಧ್ಯೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂದಾಗಬೇಕೆಂದು ಹಿಲ್ ಬ್ಲೂಮ್ಸ್ ಹೆಲ್ತ್ ಕೇರ್ ಆಸ್ಪತ್ರೆಯ ಡಾ. ಕಿರಣ್ ಎಸ್. ರಾಜ್ ಕರೆ ನೀಡಿದರು. ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಿಲ್ ಬ್ಲೂಮ್ಸ್ ಹೆಲ್ತ್ ಕೇರ್ ಆಸ್ಪತ್ರೆಯ ಸಹಯೋಗದಲ್ಲಿ ವಿರಾಜಪೇಟೆ ತಾಲ್ಲೂಕಿನ ಪತ್ರಕರ್ತರ ಸಂಘದ ಸದಸ್ಯರಿಗಾಗಿ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದ ಅವರು, ಸಮಾಜದ ಬಗ್ಗೆ ಇರುವ ಕಾಳಜಿಯಿಂದ ಸದಾ ಕೆಲಸದ ಒತ್ತಡದಲ್ಲಿರುವ ಪತ್ರಕರ್ತರು ತಮ್ಮ ಆರೋಗ್ಯ ಹಾಗೂ ಮನೆಯವರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದರ ಜತೆಗೆ ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದರ ಮೂಲಕ ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು. ಹಿಲ್ ಬ್ಲೂಮ್ಸ್ ಹೆಲ್ತ್ ಕೇರ್ ಆಸ್ಪತ್ರೆಯ ಸಿದ್ದಾಪುರ ಹಾಗೂ ವಿರಾಜಪೇಟೆಯಲ್ಲಿ ಹೃದಯಾ ತಪಾಸಣೆ ಸೇರಿದಂತೆ ಸಂಘದ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಶಿಬಿರದಲ್ಲಿ ವಿರಾಜಪೇಟೆ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ…

Read More

ಮಡಿಕೇರಿ ಮೇ 29 : ಮೈಸೂರು ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್‍ಮೆಂಟ್ (ಮೈಸೆಮ್) ಕಾಲೇಜಿನ ವಾರ್ಷಿಕೋತ್ಸವ ಮತ್ತು ಪದವಿ ಪ್ರದಾನ ಸಮಾರಂಭದ ಪ್ರಯುಕ್ತ ಜೂ.3 ರಂದು ಅಂತರ ಕಾಲೇಜು ಫ್ಯಾಶನ್ ಶೋ ಆಯೋಜಿಸಲಾಗಿದೆಯೆಂದು ಕಾಲೇಜಿನ ಸಂಯೋಜಕ ತಂಬಂಡ ಪವನ್ ತಿಳಿಸಿದ್ದಾರೆ. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಕಾಲೇಜ್ ಆಫ್ ಇಂಜಿನಿಯರಿಂಗ್ ಅಂಡ್ ಮ್ಯಾನೇಜ್‍ಮೆಂಟ್ ಕಾಲೇಜಿನಲ್ಲಿ ಜೂ.1 ರಂದು ಪದವಿ ಪ್ರದಾನ ಸಮಾರಂಭ ನಡೆಯಲಿದ್ದು, ಅಂದು 122 ಕ್ಕೂ ಹೆಚ್ಚಿನ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆಂದು ಮಾಹಿತಿಯನ್ನಿತ್ತರು. ಜೂ.2 ರಂದು ಕಾಲೇಜು ವಾರ್ಷಿಕೋತ್ಸವ `ಮೈಸಿರಿ-2023′ ನಡೆಯಲಿದ್ದು, ಅಂದು ವಿವಿಧ ಕ್ರಿಡಾ ಚಟುವಟಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆಯೆಂದು ತಿಳಿಸಿದರು. ಜೂ.3 ರಂದು ಅಂತರ ಕಾಲೇಜು ತಂಡಗಳ ಫ್ಯಾಶನ್ ಶೋ ಮತ್ತು ಡಿಜೆ ನೈಟ್ ಕಾರ್ಯಕ್ರಮ ನಡೆಯಲಿದೆ. ಫ್ಯಾಶನ್ ಶೋದಲ್ಲಿ ಪದವಿ ಮತ್ತು ಇಂಜಿನಿಯರಿಂಗ್ ಕಾಲೇಜು ತಂಡಗಳು ಪಾಲ್ಗೊಲ್ಳಬಹುದಾಗಿದ್ದು, ಫ್ಯಾಶನ್ ಶೋ ಕಾರ್ಯಕ್ರಮ ನಿರ್ವಾಹಕರಾದ ಅಮರ್ ಅವರನ್ನು ಈ ಬಗ್ಗೆ…

Read More

ಮಡಿಕೇರಿ ಮೇ 29 : ಕೊಡಗು ಜಿಲ್ಲೆಯ 56 ಮೊಹಲ್ಲಾಗಳ ಜಮಾಅತ್ ಪದಾಧಿಕಾರಿಗಳು ಕೊಡಗು ಖಾಝಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರನ್ನು ಭೇಟಿಯಾದರು. ಕೊಡಗು ಜಿಲ್ಲೆಯ ಸಂಯುಕ್ತ ಖಾಝಿ ಕಾಂತಪುರಂ ಎ.ಪಿ ಉಸ್ತಾದರು ಕೊಡಗಿಗೆ ಆಗಾಗ್ಗೆ ಭೇಟಿ ನೀಡಿ ಸಂಬಂಧವನ್ನು ಹೆಚ್ಚಿಸುತ್ತಿದ್ದರು. ಈ ಸಂಬಂಧವನ್ನು ಗಟ್ಟಿಗೊಳಿಸುವ ಸಲುವಾಗಿ ಸುನ್ನಿ ಸಂಘಟನೆಗಳ ನಾಯಕರು ಹಾಗೂ ಸಮಿತಿ ಪದಾಧಿಕಾರಿಗಳು ಕ್ಯಾಲಿಕಟ್‍ನ ಜಾಮಿಉಲ್ ಫುತೂಹ್‍ನಲ್ಲಿ ಸಭೆ ನಡೆಸಿದರು. ಮೊಹಲ್ಲಾ – ಸಾಂಸ್ಥಿಕ ಸಬಲೀಕರಣ, ಆದರ್ಶ ಪ್ರಚಾರ, ಶಿಕ್ಷಣ ಮತ್ತು ಸಾಮಾಜಿಕ ಸೇವೆ, ಇತ್ಯಾದಿಗಳ ಕುರಿತು ಚರ್ಚೆ ನಡೆಸಿದರು. ಕಾಂತಪುರಂ ಉಸ್ತಾದ್ ಎಲ್ಲಾ ಮೊಹಲ್ಲಾಗಳಲ್ಲಿ ಮಹ್ಲರತುಲ್ ಬದ್ರಿಯ್ಯಃ ಪ್ರಾರಂಭಿಸಲು ಸೂಚಿಸಿದರು. ಈ ಬಾರಿ ಹಜ್ ಯಾತ್ರೆಗೆ ತೆರಳುವವರಿಗಾಗಿ ವಿಶೇಷವಾಗಿ ಪ್ರಾರ್ಥಿಸಿದರು. ಕಾಂತಪುರಂ ಉಸ್ತಾದ್ ಖಾಝಿಯಾಗಿರುವ ವಿವಿಧ ಮಹಲ್ಲುಗಳ ಸಂಗಮ ಮುಂದಿನ ದಿನಗಳಲ್ಲಿ ಜಾಮಿಉಲ್ ಫುತೂಹ್‍ನಲ್ಲಿ ನಡೆಯಲಿದೆ ಎಂದರು. ಸಭೆಯಲ್ಲಿ ಡಾ.ಎ.ಪಿ.ಅಬ್ದುಲ್ ಹಕೀಂ ಅಝ್ಹರಿ ಮೊಹಲ್ಲಾ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಅಗತ್ಯ ಸಲಹೆಗಳನ್ನು ನೀಡಿದರು. ಕೊಡಗು ಜಿಲ್ಲಾ ನಾಇಬ್ ಖಾಝಿ…

Read More

ಮಡಿಕೇರಿ ಮೇ 29 :  ಹತ್ತು ಕುಟುಂಬ ಹದಿನೆಂಟು ಗೋತ್ರದ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಗೌಡ ಜನಾಂಗದ ನಡುವೆ ನಡೆದ ಗೌಡ ಪ್ರೀಮಿಯರ್ ಲೀಗ್ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿದಲ್ಲಿ ಎಲೈಟ್ ಕ್ರಿಕೆಟ್ ಕ್ಲಬ್ ಚಾಂಪಿಯನ್ ಆಗಿ ಹೊರಹೊಮ್ಮಿತು. ಕಾಫಿ ಕ್ರಿಕೆಟರ್ಸ್ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. ಕೊಡಗು ಗೌಡ ಯುವ ವೇದಿಕೆ ವತಿಯಿಂದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಫೈನಲ್ ಪಂದ್ಯಾವಳಿಯಲ್ಲಿ ಟಾಸ್‍ಗೆದ್ದ ಕಾಫಿ ಕ್ರಿಕೆಟರ್ಸ್ ತಂಡ ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಎಲೈಟ್ ತಂಡ 10 ಓವರ್‍ಗೆ 7 ವಿಕೆಟ್ ನಷ್ಟಕ್ಕೆ 94 ರನ್ ಬಾರಿಸಿತು. ಎಲೈಟ್ ತಂಡದ ಪರವಾಗಿ ತಳೂರು ವಿಕ್ಕಿ 3 ಸಿಕ್ಸ್, 2 ಬೌಂಡರಿಗಳನ್ನು ಒಳಗೊಂಡು 17 ಎಸೆತಕ್ಕೆ 32 ರನ್ ಬಾರಿಸಿತು. ಕಾಫಿ ಕ್ರಿಕೆಟರ್ಸ್‍ನ ಕುದುಕುಳಿ ಮಿಥುನ್, ಕುಡಿಕಲ್ ಅನಿಲ್ ತಲಾ 2 ವಿಕೆಟ್ ಪಡೆದರು. ರನ್‍ಔಟ್ ಮೂಲಕ 2 ವಿಕೆಟ್ ಉದುರಲ್ಪಟ್ಟಿತು. ಎಲೈಟ್ ತಂಡ…

Read More

ಮಡಿಕೇರಿ ಮೇ 29 : ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ ಸುಂಟಿಕೊಪ್ಪದ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ಆಯೋಜನೆಗೊಂಡಿದ್ದ 25ನೇ ವರ್ಷದ ಡಿ.ಶಿವಪ್ಪ ಸ್ಮಾರಕ ರಾಜ್ಯಮಟ್ಟದ ಗೋಲ್ಡ್ ಕಪ್‍ನ ಅಂತಿಮ ಪಂದ್ಯಾವಳಿಲ್ಲಿ ಅಮಿಗೋಸ್ ಎಫ್.ಸಿ. ಮಲಪುರಂ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು. ಸುಂಟಿಕೊಪ್ಪದ ಮಿಡ್‍ಸಿಟಿ ಎಫ್.ಸಿ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಫೈನಲ್ ಪಂದ್ಯಾವಳಿಯನ್ನು ಮೈಸೂರು ಮಹಾರಜ ಯದುವೀರ್ ಕೃಷ್ಣದತ್ತ ಒಡೆಯರ್ ಹಾಗೂ ಕ್ರೀಡಾ ಪ್ರಾಯೋಜಕ ಡಿ.ವಿಶಾಲ್ ಶಿವಪ್ಪ ಚೆಂಡು ಒಡೆಯುವ ಮೂಲಕ ಚಾಲನೆ ನೀಡಿದರು. ಅಮಿಗೋಸ್ ತಂಡ ಮತ್ತು ಮಿಡ್‍ಸಿಟಿ ಎಫ್.ಸಿ.ಸುಂಟಿಕೊಪ್ಪ ತಂಡಗಳ ನಡುವೆ ಫೈನಲ್ ಪಂದ್ಯಾವಳಿ ರೋಮಾಂಚನಕಾರಿಯಾಗಿ ನಡೆದು ಉಭಯ ತಂಡಗಳು ಸಮಬಲದ ಪ್ರದರ್ಶನ ನೀಡುವುದರೊಂದಿಗೆ ನೆರೆದಿದ್ದ ಕ್ರೀಡಾಭಿಮಾನಿಗಳಿಗೆ ಕ್ರೀಡೆಯ ರಸದೌಣವನ್ನು ಉಣಬಡಿಸಿತು. ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ, ಕೇಕೆ ಕ್ರೀಡಾಪಟುಗಳಿಗೆ ಪ್ರೋತ್ಸಾಹ ತುಂಬಿತು. ಬಿರುಸಿನ ಆಟವನ್ನು ಕ್ರೀಡಾಪಟುಗಳು ಪ್ರದರ್ಶಿಸಿದರು. ಪಂದ್ಯದ ಮೊದಲಾರ್ಧದ 25 ನಿಮಿಷದಲ್ಲಿ ಮಲಪುರಂ ತಂಡದ ಮುನ್ನಡೆ ಆಟಗಾರ ಅಂದಾಸ್ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮೊದಲ ಗೋಲು…

Read More