ನಾಪೋಕ್ಲು ಮೇ 25 : ನಾಪೋಕ್ಲುವಿನಲ್ಲಿ ಬುಧವಾರ ಸಂಜೆ ಕಂಡು ಬಂದ ಆಕರ್ಷಕ ಕಾಮನ ಬಿಲ್ಲಿನ ಚೆಲುವಿನ ಚಿತ್ತಾರ ನೋಡುಗರ ಗಮನ ಸೆಳೆಯಿತು. ವರದಿ- ದುಗ್ಗಳ ಸದಾನಂದ
ಲೇಖಕ: admin
ಮಡಿಕೇರಿ ಮೇ 25 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಯುವ ಹೋರಾಟಗಾರ ಬೊಳ್ಳಜಿರ ಅಯ್ಯಪ್ಪ ಅವರನ್ನು ಆಯ್ಕೆ ಮಾಡುವಂತೆ ಕರ್ನಾಟಕ ಭಾಷಾ ಅಲ್ಪಸಂಖ್ಯಾತರ ಒಕ್ಕೂಟದ ರಾಜ್ಯಾಧ್ಯಕ್ಷ ಪ್ರತೀಕ್ ಪೊನ್ನಣ್ಣ ಮನವಿ ಮಾಡಿದ್ದಾರೆ. ಶಾಸಕರಾದ ಎ.ಎಸ್.ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅವರಿಗೆ ಮನವಿ ಸಲ್ಲಿಸಿ ಕರ್ನಾಟಕ ಭಾಷಾ ಅಲ್ಪಸಂಖ್ಯಾತರಾದ ಕೊಡವ ಭಾಷೆ ಮತ್ತು ಲಿಪಿ ಹಾಗೂ ಸಾಹಿತ್ಯದ ಬಗ್ಗೆ ಅಪಾರ ಗೌರವ ಮತ್ತು ಇದರ ಪರ ಹೋರಾಟ ಮಾಡುತ್ತಿರುವ ಬೊಳ್ಳಜಿರ ಅಯ್ಯಪ್ಪ ಅವರು, ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ಮಡಿಕೇರಿ ಮೇ 25 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾಗಿರುವ ಶಾಸಕ ಅಜ್ಜಿಕುಟ್ಟೀರ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಈ ಬೇಡಿಕೆಗೆ ಕೊಡಗು ಮಾತ್ರವಲ್ಲದೆ ರಾಜ್ಯದೆಲ್ಲೆಡೆ ವ್ಯಾಪಕ ಬೆಂಬಲ ದೊರೆತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಸಚಿವ ಸ್ಥಾನ ನೀಡಬೇಕೆಂದು ಕನೆಕ್ಟಿಂಗ್ ಕೊಡವಾಸ್ ಸಂಘಟನೆಯ ಸಂಚಾಲಕ ಶಾಂತೆಯಂಡ ನಿರನ್ ನಾಚಪ್ಪ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರತೀ ಸರ್ಕಾರದಲ್ಲು ಕೊಡಗನ್ನು ಕಡೆಗಣಿಸಲಾಗುತ್ತಿದೆ ಎಂಬ ಕೊರಗು ಕೊಡವರಿಗಿದ್ದು, ಕಳೆದೆರಡು ದಶಕಗಳಿಂದ ಗೆಲ್ಲಲು ಸಾಧ್ಯವೇ ಇಲ್ಲ ಎಂಬಂತಿದ್ದ ವಿರಾಜಪೇಟೆ ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸಿದೆ. ವಿದ್ಯಾವಂತ ಯುವ ವಕೀಲರನ್ನ ಶಾಸಕ ಸ್ಥಾನಕ್ಕೆ ಆರಿಸಿ ಪ್ರಬುದ್ಧತೆ ಮೆರೆದಿರುವ ಮತದಾರರ ಭಾವನೆಯನ್ನು ಅರಿತು, ಪೊನ್ನಣ್ಣ ಅವರನ್ನು ಸಚಿವರನ್ನಾಗಿ ಮಾಡಬೇಕೆಂದು ಎಐಸಿಸಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಉಸ್ತುವಾರಿಗಳು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಪ್ರಮುಖರನ್ನು ಒತ್ತಾಯಿಸುವುದಾಗಿ ತಿಳಿಸಿದ್ದಾರೆ. ಪೊನ್ನಣ್ಣ ಅವರು ಕೊಡವರು ಹಾಗೂ ಕೊಡವ…
ಮಡಿಕೇರಿ ಮೇ 25 : ವಿಧಾನಸಭೆ ಚುನಾವಣೆ ಸೋಲಿನ ನಂತರ ನೊಂದು ಹತಾಶನಾಗಿದ್ದೆ. ನಾನು ತಂದಿರುವ ಒಂದೊಂದು ಯೋಜನೆಗಳನ್ನು ತ್ವರಿತ ಅನುಷ್ಠಾನಗೊಳಿಸಲು ನಮ್ಮದೇ ರಾಜ್ಯ ಸರ್ಕಾರವಿದ್ದರೆ ಖಂಡಿತ ಅನುಕೂಲವಾಗುತ್ತಿತ್ತು. ನಮ್ಮ ಸರ್ಕಾರ ಇದ್ದಿದ್ದರಿಂದಲೇ ಎಲ್ಲ ವಿರೋಧ ಅಡೆತಡೆಗಳನ್ನು ಮೆಟ್ಟಿ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದ್ದಾರೆ. ರಾಜಕೀಯ ಹಿನ್ನಡೆಯ ಹೊರತಾಗಿಯೂ ನಾನು ಹಿಡಿದ ಕೆಲಸ ಬಿಡುವುದಿಲ್ಲ. ಈಗಾಗಲೇ ನಮ್ಮ ಸರ್ಕಾರದಿಂದ ಅನುಮೋದನೆ ಅಥವಾ ಮಂಜೂರಾತಿ ಪಡೆದಿರುವ ಅಂತಿಮಘಟ್ಟಕ್ಕೆ ತಂದಿರುವ ಕೆಲಸಗಳನ್ನು ಮಾಡಲು ನಿಮ್ಮ ಆಶೀರ್ವಾದ ಮತ್ತು ಪೋತ್ಸಾಹ ಸದಾ ನನ್ನ ಮೇಲಿರಲಿ ಎಂದು ಅವರು ಮನವಿ ಮಾಡಿದರು. ಈಗಾಗಲೇ ಸರ್ಕಾರದಿಂದ ಅನುಮೋದನೆ ಅಥವಾ ಮಂಜೂರಾತಿ ಪಡೆದುಕೊಂಡಿರುವ ಅಂತಿಮಘಟ್ಟಕ್ಕೆ ತಂದಿರುವ ಕೆಲಸಗಳು ಮೈಸೂರು – ಬೆಂಗಳೂರು ದಶಪಥ ರಸ್ತೆಯ ಬಾಕಿ ಉಳಿದಿರುವ ಕಾಮಗಾರಿಯನ್ನು ಪೂರ್ಣಗೊಳಿಸುವುದು. ಮೈಸೂರು – ಕುಶಾಲನಗರ ನಾಲ್ಕು ಪಥ ರಸ್ತೆ ಕಾಮಗಾರಿಯನ್ನು (4,100 crore)ಶೀಘ್ರವಾಗಿ ಪ್ರಾರಂಭಿಸುವುದು. ಮೈಸೂರು ಮಹಾನಗರ ಪಾಲಿಕೆಯು ವಿದ್ಯಾರಣ್ಯಪುರಂ ಸೀವೇಜ್…
ಮಡಿಕೇರಿ ಮೇ 29 : ನಿಟ್ಟೂರು ಕಾರ್ಮಾಡು ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಾರ್ಯನಿರ್ವಹಿಸಿ ಇದೀಗ ವರ್ಗಾವಣೆಗೊಂಡ ವ್ಯವಸ್ಥಾಪಕ ಸಂದೀಪ್ ಅವರನ್ನು ಗ್ರಾಮಸ್ಥರು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಕೊಟ್ಟರು. ಕಾರ್ಮಾಡು ಶಾಖೆಯಲ್ಲಿ ಶಾಖೆಗೆ ಆಗಮಿಸಿದ 60ಕ್ಕಿಂತಲೂ ಹೆಚ್ಚಿನ ಗ್ರಾಮಸ್ಥರು, ಬ್ಯಾಂಕ್ ವ್ಯವಸ್ಥಾಪಕ ಸಂದೀಪ್ ಕೊನೆಯ ದಿನದ ಕರ್ತವ್ಯವನ್ನು ಗಮನಿಸಿ ಶ್ಲಾಘಿಸಿದರು. ಇದೇ ಸಂದರ್ಭ ನೂತನ ವ್ಯವಸ್ಥಾಪಕ ಟೋನಿ ಅವರನ್ನು ಸ್ವಾಗತಿಸಿ ಅಭಿನಂದಿಸಿದರು. ಈ ಸಂದರ್ಭ ಗ್ರಾಮಸ್ಥರು ಮಾತನಾಡಿ, ಈ ಪುಟ್ಟ ಗ್ರಾಮಕ್ಕೆ ಗ್ರಾಮೀಣ ಬ್ಯಾಂಕ್ ಅಗತ್ಯವಿಲ್ಲ ವಹಿವಾಟು ಕಡಿಮೆ ಎಂಬ ಅನಿಸಿಕೆಯನ್ನು ಈ ಹಿಂದಿನ ವ್ಯವಸ್ಥಪಕರು ವ್ಯಕ್ತಪಡಿಸಿದರು. ಆದರೆ 2019 ರಲ್ಲಿ ಈ ಬ್ಯಾಂಕ್ ಗೆ ವ್ಯವಸ್ಥಾಪಕ ಬಂದ ಸಂದೀಪ್, ಮೊದಲು ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು. ಆದಾಯ ಮತ್ತು ವ್ಯವಹಾರಗಳ ದೃಷ್ಠಿಯಿಂದ ಎಲ್ಲಾ ಪ್ಯರಾಮೀಟರ್ ಗಳಲ್ಲೂ ಈ ಬ್ಯಾಂಕ್ ಇಂದು ಕೊಡಗಿನ ಗ್ರಾಮಾಂತರ ಪ್ರದೇಶದಲ್ಲಿ ಪ್ರಥಮ ಸ್ಥಾನ ಪಡೆದು. ಗ್ರಾಮಕ್ಕೆ ಹಾಗೂ ಬ್ಯಾಂಕ್ ಗೆ ಉತ್ತಮ ಹೆಸರು ತಂದುಕೊಟ್ಟಿದ್ದು 2022-23ನೇ ಸಾಲಿನಲ್ಲಿ ಬ್ಯಾಂಕ್ ವೈವಾಟು ದಾಖಲೆಯ…
ಸುಂಟಿಕೊಪ್ಪ ಮೇ 24 : ಡಿ.ಶಿವಪ್ಪ ಸ್ಮಾರಕ 25ನೇ ವರ್ಷದ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್‍ಬಾಲ್ ಪಂದ್ಯದಲ್ಲಿ ಹರಿಜನ್ ಎಫ್.ಸಿ ಬೆಂಗಳೂರು, ಮೊಗ್ರಲ್ ಎಫ್.ಸಿ ಕುಂಬ್ಳೆ, ತಂಡಗಳು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಬ್ಲೂ ಬಾಯ್ಸ್ ಯೂತ್ ಕ್ಲಬ್ ವತಿಯಿಂದ ಜಿಯಂಪಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಡಿ.ಶಿವಪ್ಪ ಸ್ಮಾರಕ 25ನೇ ವರ್ಷದ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್‍ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಪುಟ್ಬಾಲ್ ಪಂದ್ಯಾವಳಿಯಲ್ಲಿ ಹರಿಜನ್ ಎಫ್.ಸಿ ಬೆಂಗಳೂರು ಹಾಗೂ ಕೂತುಪರಂಬು ಎಫ್.ಸಿ.ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಬೆಂಗಳೂರು ತಂಡವು ಎದುರಾಳಿ ತಂಡದ ವಿರುದ್ಧ ಆಕ್ರಮಣ ಆಟಕ್ಕೆ ಇಳಿದ ಬೆಂಗಳೂರು ತಂಡದ ಸುಮನ್ ಮೊದಲಾರ್ಧದ 28ನೇ ನಿಮೀಷದಲ್ಲಿ ಒಂದು ಗೋಲುಗಳಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ದ್ವಿತೀಯಾರ್ಧದಲ್ಲಿ ಹರಿಜನ್ ತಂಡದ ಆಟಗಾರ ಬಿರುಸಿನ ಆಟಕ್ಕೆ ಇಳಿಯುವುದರೊಂದಿಗೆ 12ನೇ ನಿಮಿಷದಲ್ಲಿ ಸುಮನ್‍ಗೆ ಸಿಕ್ಕಿದ ಉತ್ತಮ ಅವಕಾಶವನ್ನು ಮತ್ತೊಂದು ಗೋಲುಗಳಿಸುವ ಮೂಲಕ ಎದುರಾಳಿ ತಂಡಕ್ಕೆ ಒತ್ತಡಕ್ಕೆ ಸಿಲಿಕಿಸಿದರು. 21 ಮತ್ತು 23ನೇ…
ಸೋಮವಾರಪೇಟೆ ಮೇ 25 : ಚೌಡ್ಲು-ಗಾಂಧಿನಗರದ ಶ್ರೀ ದೊಡ್ಡ ಮಾರಿಯಮ್ಮ ದೇವಾಲಯದ ವಾರ್ಷಿಕ ಪೂಜಾ ಕಾರ್ಯವು ಶ್ರದ್ಧಾಭಕ್ತಿಯಿಂದ ನೆರವೇರಿತು. ಶ್ರೀ ಆದಿಶಕ್ತಿ ಅಮ್ಮನವರ ಸನ್ನಿದಿಯಲ್ಲಿ ಮುಂಜಾನೆಯಿಂದಲೇ ಶೈವ ಪುಣ್ಯಹ, ಹೋಮ, ದುರ್ಗಾ ಪೂಜೆ, ಗಂಗಾಪೂಜೆ, ಫಲ ಪೂಜಾಮೃತ ಅಭಿಷೇಕ ಹಾಗೂ ಮಹಾ ಮಂಗಳಾರತಿ ನಡೆಯಿತು. ಸಂಜೆ ಊರಿನ ಪ್ರಮುಖ ರಸ್ತೆಗಳಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ವಿವಿಧ ವಾದ್ಯ ವೃಂದದೊಂದಿಗೆ ಗಮನ ಸೆಳೆಯಿತು. ನಂತರ ಅಮ್ಮನವರಿಗೆ ಹಣ್ಣುಕಾಯಿ ಸಮರ್ಪಣೆ ಮತ್ತು ಹರಕೆ ಸೇವೆ ಹಾಗೂ ಅನ್ನದಾನ ಸೇವೆ ನಡೆಯಿತು. ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಎಚ್.ಎಸ್. ರಾಮದಾಸ್, ಉಪಾಧ್ಯಕ್ಷ ಎಚ್.ಪಿ. ಅಯ್ಯಪ್ಪ, ಕಾರ್ಯದರ್ಶಿ ಎಚ್.ಜಿ. ಭರತ್, ಖಜಾಂಚಿ ಎಚ್.ಜೆ. ಶೇಖರ್, ಸಹಕಾರ್ಯದರ್ಶಿ ಎಸ್.ಆರ್. ದೀಪಕ್, ಸಹ ಖಜಾಂಚಿ ಎಚ್.ಎಂ. ಮನೋಜ್‍ಕುಮಾರ್ ಸೇರಿದಂತೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮಡಿಕೇರಿ ಮೇ 24 : ನಗರದ ದೇಚೂರು ಬಡಾವಣೆ ನಿವಾಸಿ ಹೆಚ್.ಪಿ.ಸುಶೀಲಮ್ಮ (86) ಅವರು ಇಂದು ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಮೇ 25 ರಂದು ಚೈನ್ ಗೇಟ್ ಬಳಿಯ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಕೊಡ್ಲಿಪೇಟೆ ಮೇ 24 : ಸಮೀಪದ ನೀರಗುಂದ ಗ್ರಾಮದೇವತೆ ಶ್ರೀ ಕನ್ನಂಬಾಡಿ ಅಮ್ಮನವರ ನೂತನ ವಿಗ್ರಹ ಉತ್ಸವ ಮೆರವಣಿಗೆ ನಡೆಯಿತು. ಹೇಮಾವತಿ ನದಿಯಿಂದ ದೇವರ ವಿಗ್ರಹಕ್ಕೆ ಗಂಗಾಸ್ನಾನ ಜಲಾಧಿವಾಸ, ಕ್ಷೀರಾಧಿವಾಸದ ನಂತರ ಸುಮಾರು 3 ಕಿಲೋ ಮೀಟರ್ ದೂರದಿಂದ ಕಳಸ ಹೊತ್ತ ಸುಮಂಗಲಿಯರು, ಮಂಗಳ ವಾದ್ಯ, ಅಡ್ಡೆಸಮೇತ ಉತ್ಸವ ಮೂರ್ತಿಯ ಮೆರವಣಿಗೆ ಸಾಗಿಬಂದು ಕೆಂಡೋತ್ಸವದೊಂದಿಗೆ ಸಂಪನ್ನಗೊಂಡಿತು. ಅಬ್ಬರದ ಮಳೆಸುರಿದರೂ ಮಳೆಯನ್ನೂ ಲೆಕ್ಕಿಸದೆ ಶ್ರೀ ಕನ್ನಂಬಾಡಿ ಅಮ್ಮನವರ ನೂತನ ವಿಗ್ರಹ ಉತ್ಸವ ಮೆರವಣಿಗೆ ಹಾಗು ಕೆಂಡೋತ್ಸವ ನಡೆಯಿತು. ದಾರ್ಮಿಕ ಸಭೆಯಲ್ಲಿ ಮಾತನಾಡಿದ ಶ್ರೀ ಕ್ಷೇತ್ರ ಕಿರಿಕೊಡ್ಲಿ ಮಠಾಧ್ಯಕ್ಷರಾದ ಶ್ರೀ ಶ್ರೀ ಸದಾಶಿವಸ್ವಾಮಿಗಳು ಭಾರತೀಯ ಸಂಸ್ಕೃತಿಯಲ್ಲಿ ದೇವಾಲಯ ಸಂಸ್ಕೃತಿಯನ್ನು ಮೂಲವಾಗಿರಿಸಿಕೊಂಡು ದರ್ಮದ ತಳಹದಿಯಲ್ಲಿ ಬದುಕನ್ನು ಕಟ್ಟಿಕೊಂಡವರು ನಾವು. ಪ್ರಪಂಚದಲ್ಲೇ ನಮ್ಮ ಭಾರತ ದೇಶ ಒಂದು ದೇವಾಲಯವಿದ್ದಂತೆ ಅಂತಹ ಪವಿತ್ರ ದೇಶದಲ್ಲಿ ನಾವಿದ್ದೇವೆ. ಪರಿಸರವನ್ನು ಮೈಗೂಡಿಕೊಂಡು ಕಷ್ಟ ನಷ್ಟಗಳೊಂದಿಗೆ ಧರ್ಮದ ಹಾದಿಯಲ್ಲಿ ನೆಮ್ಮದಿಯ ಬದುಕನ್ನು ಕಾಣುತ್ತಿದ್ದೇವೆ. ನೀರಗುಂದ ಗ್ರಾಮದಲ್ಲಿ ನಿರಂತರ ದಾರ್ಮಿಕ ಪೂಜಾ ಚಟುವಟಿಕೆಗಳನ್ನು ಇತ್ತೀಚಿನ ದಿಗಳಲ್ಲಿ ಹೆಚ್ಚಾಗಿ ಗ್ರಾಮಸ್ಥರು…
ಮಡಿಕೇರಿ ಮೇ 24 : ಕೊಡಗಿನ ಎರಡು ವಿಧಾನ ಸಭಾ ಕ್ಷೇತ್ರಗಳಲ್ಲಿನ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಪಾತ್ರ ಮಹತ್ತರವಾದುದೆಂದು ಸಂಘಟನೆಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ತಿಳಿಸಿದ್ದಾರೆ. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರದ ದಲಿತ ವಿರೋಧಿ ಧೋರಣೆಗಳ ಹಿನ್ನೆಲೆಯಲ್ಲಿ ರಾಜಕೀಯ ರಹಿತವಾದ ದಸಂಸ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ತನ್ನ ಸಂಪೂರ್ಣ ಬೆಂಬಲವನ್ನು ನೀಡಿ, ತಮ್ಮ ಗ್ರಾಮ ಸಮಿತಿಗಳ ಮೂಲಕ ಜಿಲ್ಲೆಯ ಎರಡು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಹಗಲಿರುಳೆನ್ನದೆ ಶ್ರಮಿಸಿದೆ. ಈ ಹಿನ್ನೆಲೆ ಕಾಂಗ್ರೆಸ್ ಗೆಲುವಿನಲ್ಲಿ ದಸಂಸ ಪ್ರಮುಖ ಪಾತ್ರ ವಹಿಸಿದೆಯೆಂದು ವಿಶ್ವಾಸದಿಂದ ನುಡಿದರು. ನಿಗಮ- ಅಕ್ರಮ ಸಕ್ರಮದಲ್ಲಿ ಅವಕಾಶ ನೀಡಿ- ನೂತನ ಕಾಂಗ್ರೆಸ್ ಸರ್ಕಾರದಲ್ಲಿ ದಲಿತ ಸಂಘರ್ಷ ಸಮಿತಿಯ ಪ್ರಮುಖರಿಗೆ ಯಾವುದೇ ನಿಗಮಗಳಲ್ಲಿ ಅಧ್ಯಕ್ಷ ಸ್ಥಾನ, ಅಕ್ರಮ ಸಕ್ರಮ ಸಮಿತಿಗಳಲ್ಲಿ ಸದಸ್ಯ ಸ್ಥಾನಗಳನ್ನು ನೀಡುವಂತೆ ಹೆಚ್.ಎಲ್. ದಿವಾಕರ್ ಇದೇ ಸಂದರ್ಭ ಮನವಿ ಮಾಡಿದರು. ಹಿಂದಿನ ಬಿಜೆಪಿ…






