ಮಡಿಕೇರಿ ಮಾ.14 : ಪ್ರಧಾನ ಮಂತ್ರಿಗಳ ಮಾರ್ಗದರ್ಶನ ಮತ್ತು ಸ್ಫೂರ್ತಿ ಯಿಂದ ಭಾರತ 75ನೇ ವರ್ಷದ ಸ್ಮರಣಾರ್ಥವಾಗಿ “ ಆಜಾಧೀ ಕಾ ಅಮೃತ ಮಹೋತ್ಸವ” ವನ್ನು ಆಚರಿಸುತ್ತಿದೆ. ಭಾರತದ ಇತಿಹಾಸದಲ್ಲಿ ಖ್ಯಾತಿ ಪಡೆದ ಗಣ್ಯರ ಸಾಧನೆಗಳನ್ನು ಜನರಿಗೆ ತಿಳಿಸುವ ಪ್ರಯತ್ನದೊಂದಿಗೆ, ನರೇಂದ್ರ ಮೋದೀಜಿ ರವರು ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ “ ಪಂಚ ಪ್ರಾಣ್ “ ಎನ್ನುವ ಮಂತ್ರವನ್ನು ಘೋಷಿಸಿದ್ದಾರೆ. ಅಮೃತ ಕಾಲ ಇಂಡಿಯಾ@2047 ಎನ್ನುವ ದೃಷ್ಠಿಕೋನವನ್ನು ಜನತೆಯ ಮುಂದಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಸಂಘಟನೆಯು “ ‘ಯುವ ಸಂವಾದ’ ಇಂಡಿಯಾ@2047” ಎನ್ನುವ ಹೊಸ ಕಾರ್ಯಕ್ರಮವನ್ನು ಹೊರ ತಂದಿದ್ದು, ಸಮುದಾಯ ಅಭಿವೃದಿ ಆಧಾರಿತ ಸಂಸ್ಥೆಗಳ ಸಹಯೋಗದಲ್ಲಿ ಭಾರತದ ಎಲ್ಲಾ ಜಿಲ್ಲೆಗಳಲ್ಲಿ ದಿನಾಂಕ 1-4-2023 ರಿಂದ 31-5-2023 ನೇ ದಿನಾಂಕದ ವರೆಗೆ ಈ ಕಾರ್ಯಕ್ರಮವನ್ನು ಆಚರಿಸಲು ಉದ್ದೇಶಿಸಿದೆ. ಈ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ಸಮುದಾಯ ಅಭಿವೃದ್ದಿ ಸಂಸ್ಥೆಗಳ (CBOs) ಸಹಯೋಗದಲ್ಲಿ…
ಲೇಖಕ: admin
ಮಡಿಕೇರಿ ಮಾ.14 : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಲು ಕೆ.ನಿಡುಗಣೆ ಗ್ರಾ.ಪಂ ಸದಸ್ಯ ಜಾನ್ಸನ್ ಪಿಂಟೋ ಅವರನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಖಾಯಂ ಆಹ್ವಾನಿತರನ್ನಾಗಿ ನೇಮಕ ಮಾಡಿರುವುದಾಗಿ ಪಕ್ಷದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ತಿಳಿಸಿದ್ದಾರೆ.
ನಾಪೋಕ್ಲು ಮಾ.14 : ನಾಪೋಕ್ಲು ಸುತ್ತಮುತ್ತಲಿನ ಪ್ರದೇಶಗಳಿಗೆ ಅರ್ಧ ಇಂಚು ಮಳೆಯಾಗಿದ್ದು, ಸಕಾಲಿಕ ಮಳೆಯಿಂದಾಗಿ ನಾಪೋಕ್ಲು ವಿಭಾಗದ ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಬೀರಿದೆ. ಉರಿ ಬಿಸಿಲಿನ ತಾಪದಿಂದ ಮಳೆಗಾಗಿ ಕಾದು ಕುಳಿತ ಜನರು ಸಂತೋಷಗೊಂಡಿದ್ದಾರೆ. ಬೆಳೆಗಾರರು ಈ ಸಮಯದಲ್ಲಿ ಕಾಫಿ ಮತ್ತು ಕರಿಮೆಣಸು ಕೊಯ್ಲು ಕಾರ್ಯ ಮುಗಿಸಿ ಉತ್ತಮ ಮಳೆಯಿಂದ ಮುಂದಿನ ಫಸಲನ್ನು ಪಡೆಯಲು ಸಾಧ್ಯವಾಗುತ್ತದೆ. ಮಳೆಯಾಗದಿದ್ದರೆ ಕೃತಕ ಮಳೆ (ಸ್ಟ್ರಿಂಕ್ಲರ್ಸ್) ಮೊರೆ ಹೋಗಬೇಕಿದ್ದು, ಇದರಿಂದ ಬೆಳೆಗಾರ ನಷ್ಟ ಅನುಭವಿಸಬೇಕಾಗುತ್ತದೆ. ವಿಭಾಗದಲ್ಲಿ ಶೇ.80ರಷ್ಟು ಬೆಳೆಗಾರರು ಕಾಫಿ ಕೊಯ್ಲು ಕಾರ್ಯ ಮುಗಿಸಿದ್ದು, ಮಳೆಯಿಂದಾಗಿ ಬೆಳೆಗಾರರು ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಿದೆ. ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಈ ಭಾಗದಲ್ಲಿ ನೀರಿನ ಅಭಾವ ಉಂಟಾಗಿದ್ದು, ಕೆಲವು ದಿನಗಳ ಹಿಂದೆ ಕಾಡುಗಳಲ್ಲಿ ಬೆಂಕಿ ಅವಘಡಗಳು ಸಹ ನಡೆದಿರುವುದನ್ನು ಸ್ಮರಿಸಬಹುದು. ವರದಿ :ಝಕರಿಯ ನಾಪೋಕ್ಲು
ಸೋಮವಾರಪೇಟೆ ಮಾ.14 : ತುರ್ತು ಸಂದರ್ಭದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡ ನೆರವಿಗೆ ಬರಲಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ರೋಹಿತ್ ತಿಳಿಸಿದರು. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಡೆಯುವ ಅಪಘಾತ ಮುಂತಾದ ತುರ್ತು ಸಂದರ್ಭದಲ್ಲಿ ನೆರವಿಗೆ ಧಾವಿಸಬೇಕೆಂಬ ಸದಾಶೆಯಿಂದ ಶ್ರೀ ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶೌರ್ಯ ವಿಪತ್ತು ನಿರ್ವಹಣಾ ತಂಡವನ್ನು ರಚಿಸಿ ತರಬೇತಿ ಗೊಳಿಸಿದ್ದಾರೆ. ಇದರಲ್ಲಿ ಈಜುಗಾರ, ಮರ ಹತ್ತುವವರು, ಚಾಲಕರು ಸೇರಿದಂತೆ ಇನ್ನಿತರ ಪರಿಣಿತರು ಇದ್ದು, ಅಗತ್ಯ ಸಂದರ್ಭ ತಂಡದ ಮುಖ್ಯಸ್ಥ ರಾಮ್‌ದಾಸ್ ಅವರನ್ನು 9632102124 ಸಂಪರ್ಕಿಸಬಹುದು ಎಂದರು. ಈ ಸಂದರ್ಭ ಶಸ್ತ್ರ ಚಿಕಿತ್ಸಕರಾದ ಡಾ.ಸತೀಶ್ ಮಾತನಾಡಿ, ಕೊವಿಡ್ ನಂತಹ ಸಂದರ್ಭದಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಬಗ್ಗೆ ಸ್ಮರಿಸಿಕೊಂಡ ಅವರು ಅಗತ್ಯ ಸಂದರ್ಭದಲ್ಲಿ ಆಸ್ಪತ್ರೆಯೊಂದಿಗೆ ಕೈ ಜೋಡಿಸಬೇಕೆಂದು ತಿಳಿಸಿದರು. ತಾಲೂಕು ಆಡಳಿತ ಮುಖ್ಯಸ್ಥರಾದ ತಹಶೀಲ್ದಾರ್ ಎಸ್.ಎನ್.ನರಗುಂದ, ಅಗ್ನಿ ಶಾಮಕ ಠಾಣೆ ಹಾಗೂ…
ಮಡಿಕೇರಿ ಮಾ.14 : ಕುಂಜಿಲದಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಪಯ್‍ನರಿ ವಲಿಯುಲ್ಲಾಹ್ ಅವರ ವಾರ್ಷಿಕ ಉರೂಸ್ ಸಮಾರಂಭದ ಭಾಗವಾಗಿ ನಡೆಸಲ್ಪಡುವ ಸಾರ್ವಜನಿಕ ಸೌಹಾರ್ದ ಸಮಾವೇಶವು ಸಯ್ಯಿದ್ ಶಿಹಾಬುದ್ಧೀನ್ ಅಲ್ ಐದರೂಸಿ ನೇತೃತ್ವದಲ್ಲಿ ನಡೆಯಿತು. ಕುಂಜಿಲ ಪೈನರಿ ಸ್ವಲಾತ್ ಆಡಿಟೂರಿಯಂನಲ್ಲಿ ಪಯ್‍ನರಿ ಜಮಾಅತ್ ಅಧ್ಯಕ್ಷ ಶೌಕತ್ ಆಲಿ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶದಲ್ಲಿ ಎಸ್‍ವೈಎಸ್ ರಾಜ್ಯಾಧ್ಯಕ್ಷ ಡಾ.ಅಬ್ದುಲ್ ರಶೀದ್ ಝೈನಿ ಕಾಮಿಲ್ ಉಪನ್ಯಾಸ ನೀಡಿದರು. ಸಮಾವೇಶದಲ್ಲಿ ಕುಂಜಿಲ ಪೈನರಿ ಮುಸ್ಲಿಂ ಜಮಾಅತ್ತಿನ ಅಧ್ಯಕ್ಷ ಶೌಕತ್ ಮಕ್ಕಿ, ಖತೀಬರಾದ ನಿಝಾರ್ ಅಹ್ಸನಿ ಉಸ್ತಾದ್, ಮುಖ್ಯ ಅತಿಥಿಗಳಾಗಿ ರಶೀದ್ ಝೈನಿ ಕಕ್ಕೀಂಜೆ, ಶಿಹಾಬುದ್ದೀನ್ ತಂಙಳ್ ಕಿಲ್ಲೂರ್, ಉದಿಯಂಡ ಸುಬಾಶ್, ಮಹಮ್ಮದ್ ಹಾಜಿ, ಅಝೀಝ್ ಮಾಸ್ಟರ್, ಅಂಜಪರವಂಡ ಕುಶಾಲಪ್ಪ, ಸಂತು ಸುಬ್ರಮಣಿ, ಬಾಚಮಂಡ ರಾಜ ಪೂವಣ್ಣ, ಕಲಿಯಂಡ ಸಂಪನ್ ಅಯ್ಯಪ್ಪ,ಸಹೀದ್ ಪಾಯಡತ್, ಶಾಫಿ ಎಡಪಾಲ, ಉಸ್ಮಾನ್ ಕೊಟ್ಟಮುಡಿ, ಅಬುಬಖರ್ ಆಝಾದ್ ನಗರ್ ಹಾಗೂ ಕುಂಜಿಲ ಪೈನರಿ ಮುಸ್ಲಿಂ ಜಮಾಅತ್ ಸಲಹಾ ಸಮಿತಿ ಮತ್ತು ಪದಾಧಿಕಾರಿಗಳು, ಮತ ಪಂಡಿತರು ಸೇರಿದಂತೆ…
ಚೆಯ್ಯಂಡಾಣೆ , ಮಾ 14 : ಸುನ್ನೀ ಯುವ ಜನ ಸಂಘ (ಎಸ್ ವೈ ಎಸ್) ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಮಾ.15 ರಂದು “ಪರಂಪರೆಯ ಪ್ರತಿನಿಧಿಗಳಾಗೋಣ”ಎಂಬ ಧ್ಯೇಯವಾಕ್ಯದೊಂದಿಗೆ ಎಸ್ ವೈ ಎಸ್ ಜಿಲ್ಲಾ ಪ್ರತಿನಿಧಿ ಸಮಾವೇಶ ನಡೆಯಲಿದೆ. ಅಂದು ಪೂರ್ವಹ್ನ 11 ಗಂಟೆಗೆ ಕುಶಾಲನಗರದ ಬಿಜಿಟಿ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿ ಅಬ್ದುಲ್ ಹಫೀಲ್ ಸಅದಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕೊಡಗು ಜಿಲ್ಲಾ ಎಸ್ ವೈ ಎಸ್ ಅಧ್ಯಕ್ಷ ಇಲ್ಯಾಸ್ ಅಲ್ ಹೈದರೂಸಿ ತಂಗಳ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಪರಾಹ್ನ 2.30ಕ್ಕೆ ಜಿಲ್ಲೆಗೆ ಆಯ್ಕೆಯಾದ ಕೌನ್ಸಿಲರ್ ಗಳಿಗೆ ಕೌನ್ಸಿಲರ್ಸ್ ಮೀಟ್ ನಡೆಯಲಿದ್ದು, ಕೂರ್ಗ್ ಜಂಇಯತ್ತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಅನ್ವಾರುಲ್ ಹುದಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ನಾಇಬ್ ಖಾಝಿ ಶಾದುಲಿ ಫೈಝಿ ವಹಿಸಲಿದ್ದು, ಪ್ರತಿನಿಧಿ ಸಮಾವೇಶದಲ್ಲಿ ಅಬೂಬಕ್ಕರ್ ಫೈಝಿ ಕುಂಬಡಾಜೆ ತರಬೇತಿ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಕೊಡಗು ಜಿಲ್ಲಾ ಮುಸ್ಲಿಂ…
ಸೋಮವಾರಪೇಟೆ ಮಾ.14 : ಪಟ್ಟಣದ ಶ್ರೀಮುತ್ತಪ್ಪ ಸ್ವಾಮಿ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಶ್ರೀ ಮುತ್ತಪ್ಪ ಸ್ವಾಮಿ ಹಾಗೂ ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಅವರ ನೇತೃತ್ವದಲ್ಲಿ ಗಣಪತಿಹೋಮದೊಂದಿಗೆ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿತು. ನಂತರ ಅಧ್ಯಕ್ಷ ಎನ್.ಡಿ.ವಿನೋದ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಸಂಜೆ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಕೇರಳದ ಕೊಳಪುರಂ ಮನಹಿಲ್ಲಂ ತಂತ್ರಿಗಳಾದ ಕೃಷ್ಣಕುಮಾರ್ ಅವರ ನೇತೃತ್ವದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ವಿಶೇಷ ಆಶ್ಲೇಷ ಪೂಜೆ ಜರುಗಿದವು. ನಂತರ ನೂತನವಾಗಿ ನಿರ್ಮಿಸಿರುವ ಅನ್ನದಾನ ಮಂಟಪವನ್ನು ಶಾಸಕ ಅಪ್ಪಚ್ಚುರಂಜನ್ ಅವರು ದೀಪ ಬೆಳಗುವುದರ ಮೂಲಕ ಲೋಕಾರ್ಪಣೆ ಮಾಡಿದರು. ಈ ಸಂದರ್ಭ ಚೌಡ್ಲು ಗ್ರಾ.ಪಂ ಅಧ್ಯಕ್ಷ ಪಿ.ಎಂ.ಗಣಪತಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಲೀಲಾವತಿ ಪಾಲ್ಗೊಂಡಿದ್ದರು. ಅಧ್ಯಕ್ಷತೆಯನ್ನು ಶ್ರೀಮುತ್ತಪ್ಪಸ್ವಾಮಿ ಹಾಗೂ ಅಯ್ಯಪ್ಪಸ್ವಾಮಿ ದೇವಾಲಯದ ಅಧ್ಯಕ್ಷ ಎನ್.ಡಿ.ವಿನೋದ್‍ಕುಮಾರ್ ವಹಿಸಿದ್ದರು. ಸೋಮವಾರದಂದು ಮಧ್ಯಾಹ್ನ ಉತ್ಸವ ಆರಂಭಗೊಂಡಿತು. ಸಂಜೆ ಶ್ರೀಮುತ್ತಪ್ಪ ದೇವರ ವೆಳ್ಳಾಟಂ…
ನಾಪೋಕ್ಲು ಮಾ.14 : ಮಾರುಕಟ್ಟೆ ಆವರಣದಲ್ಲಿ ಸಂತೆಯ ದಿನವಾದ ಸೋಮವಾರ ಸಾರ್ವಜನಿಕರಿಗೆ ಮತದಾನದ ಅರಿವು ಮೂಡಿಸಲಾಯಿತು. 18 ವರ್ಷ ಮೇಲ್ಪಟ್ಟ ಯುವಕ, ಯುವತಿಯರು ಮತದಾನದಲ್ಲಿ ಪಾಲ್ಗೊಳ್ಳಲು ಅವಕಾಶವಿದ್ದು, ಎಲ್ಲರೂ ತಮ್ಮ ಹಕ್ಕನ್ನು ಚಲಾಯಿಸಿ ಯೋಗ್ಯ ಜನಪ್ರತಿಧಿಗಳನ್ನು ಆಯ್ಕೆ ಮಾಡುವಂತೆ ಅಧಿಕಾರಿಗಳು ಕೋರಿದರು. ಈ ಸಂದರ್ಭ ವಿದ್ಯುನ್ಮಾನ ಯಂತ್ರಗಳನ್ನು ಬಳಸಿ ಮತ ಚಲಾಯಿಸುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ನಾಪೋಕ್ಲು ಸೆಕ್ಟರ್ ಅಧಿಕಾರಿ ಪ್ರಮೋದ್ ಹಾಗೂ ಮುರುಗೇಶ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ, ಕಂದಾಯ ಪರಿವೀಕ್ಷಕ, ರವಿಕುಮಾರ್, ಗ್ರಾಮ ಸೇವಕರಾದ ಪ್ರಸಾದ್ ಹಾಗೂ ಲಾಲು ಉಪಸ್ಥಿತರಿದ್ದರು. ವರದಿ : ದುಗ್ಗಳ ಸದಾನಂದ.
ಧರ್ಮಸ್ಥಳ ಮಾ.14 : ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ವಾರ್ಷಿಕ ಬ್ರಹ್ಮಕಲಶದ ನಿಮಿತ್ತ ದೇವರ ದರ್ಶನದ ಸಮಯದಲ್ಲಿ ವ್ಯತ್ಯಾಸವಾಗಲಿದೆ. ಮಾ.16 ರಂದು ರಾತ್ರಿ 8 ರಿಂದ ಹೊರಾಂಗಣದಿಂದ ಮಾತ್ರ ದೇವರ ದರ್ಶನಕ್ಕೆ ಅವಕಾಶವಿದೆ. ಮಾ.18 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆವರೆಗೆ ಹೊರಾಂಗಣದಿಂದ ಮಾತ್ರ ದೇವರ ದರ್ಶನಕ್ಕೆ ಅವಕಾಶವಿದೆ.
ಮಡಿಕೇರಿ ಮಾ.14 : ಕಂಡಕರೆ ಗಾಂಧಿ ಯುವಕ ಸಂಘದ ವತಿಯಿಂದ ಕೊಡಗು ಜಿಲ್ಲೆಯಲ್ಲೇ ಮೊದಲ ಬಾರಿಗೆ ಸರ್ವಧರ್ಮೀಯ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮ ಇದೇ ವರ್ಷ ನಡೆಯಲಿದ್ದು, ಇದರ ಪ್ರಚಾರ ಕಾರ್ಯಕಮದ ಪೋಸ್ಟರ್ ಬಿಡುಗಡೆಯನ್ನು ಮಾಜಿ ಸಚಿವ, ಶಾಸಕ, ಕರ್ನಾಟಕ ವಿಧಾನಸಭಾ ವಿರೋಧ ಪಕ್ಷದ ಉಪನಾಯಕ ಯು.ಟಿ ಖಾದರ್ ಹಾಗೂ ವಿರಾಜಪೇಟೆ ಅರಮೇರಿ ಶ್ರೀ ಕಳಂಚೇರಿ ಮಠದ ಮಠಾಧಿಪತಿ ಶ್ರೀ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ ನಲ್ವತ್ತೇಕರೆಯಲ್ಲಿ ಪೀಪಲ್ಸ್ ವಿಲೇಜ್ ಮನೆ ಹಸ್ತಾಂತರ ಕಾರ್ಯಕ್ರಮದ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭ ಗಾಂಧಿ ಯುವಕ ಸಂಘದ ವಿನೂತನ ಕಾರ್ಯಕ್ರಮಕ್ಕೆ ಶಾಸಕ ಯು.ಟಿ ಖಾದರ್ ಶುಭಕೋರಿ ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ಭರವಸೆ ನೀಡಿದರು. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಗಾಂಧಿ ಯುವಕ ಸಂಘದ ಸಮಾಜಮುಖಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು. ಈ ಸಂದರ್ಭ ಕಾಂಗ್ರೆಸ್ ಯುವ ಮುಖಂಡ ಡಾ.ಮಂಥರ್ ಗೌಡ, ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ ಶಶಿಧರ್, ಅಜೀಜ್ ನೆಲ್ಲಿಹುದಿಕೇರಿ, ನೆಲ್ಲಿಹುದಿಕೇರಿ ಗ್ರಾ.ಪಂ ಅಧ್ಯಕ್ಷ…






