ಮಡಿಕೇರಿ ಮಾ.13 : ಎಸ್‍ವೈಎಸ್ ಮಡಿಕೇರಿ ಸರ್ಕಲ್ ನ ಮಹಾಸಭೆಯು ಬೇತ್ರಿ ನುಸ್ರತುಲ್ ಇಸ್ಲಾಂ ಮದ್ರಸದಲ್ಲಿ ಇಸ್ಮಾಹಿಲ್ ಝೈನಿ ಉಸ್ತಾತದರ ಅಧ್ಯಕ್ಷತೆಯಲ್ಲಿ ನಡೆಯಿತು. ಶಂಸುದ್ದೀನ್ ಅಮ್ಜದಿ ಉಸ್ತಾದರು ಸ್ವಾಗತವನ್ನು ಮತ್ತು ವರದಿಯನ್ನು ನಡೆಸಿದರು. ವೀಕ್ಷಕರಾಗಿ ಆಗಮಿಸಿದ ಹಮೀದ್ ಮುಸ್ಲಿಯಾರ್ ಕೊಳಕೇರಿ ನೂತನ ಸಮಿತಿಯನ್ನು ರಚಿಸಿದರು. ಅಧ್ಯಕ್ಷರಾಗಿ ಹನೀಫ್ ರಹ್ಮಾನಿ ಕೊಂಡಂಗೇರಿ, ಪ್ರದಾನ ಕಾರ್ಯದರ್ಶಿಯಾಗಿ ಶಮೀರ್ ಬೇತ್ರಿ, ಕೋಶಾಧಿಕಾರಿಯಾಗಿ ಅಬ್ದುಲ್ಲ ಮುಸ್ಲಿಯಾರ್ ಬಲಮುರಿ ಹಾಗೂ ಉಪಾಧ್ಯಕ್ಷರಾಗಿ ಹಮೀದ್ ಹಂಝಧಿ ಕೊಂಡಂಗೇರಿ, ದಹ್ವಾ ಕಾರ್ಯದರ್ಶಿಯಾಗಿ ಕಬೀರ್ ಝುಹರಿ, ಸಾಂತ್ವನ ಕಾರ್ಯದರ್ಶಿಯಾಗಿ, ರಸಾಕ್ ಬಲಮುರಿ, ಸೋಶಿಯಲ್ ಕಾರ್ಯದರ್ಶಿಯಾಗಿ ಹನೀಫ ಬೇತ್ರಿ,ಹಾಗೂ ಸದಸ್ಯರುಗಳಾಗಿ ಸಂಷುಧೀನ್ ಅಮ್ಜದಿ, ಇಬ್ರಾಹಿಂ ಬೇತ್ರಿ,ಇಸ್ಮಾಹಿಲ್ ಝೈನಿ,ಇಬ್ರಾಹಿಂ ಹಾಜಿ ಕೊಂಡಂಗೇರಿ, ರಶೀದ್ ಬೇತ್ರಿ, ಅಸ್ಕರ್ ಮೂರ್ನಾಡ್, ಫೈಝಲ್ ಕೊಂಡಂಗೇರಿ, ಖಾದರ್ ಹಾಕತೂರು, ಸಂಶುದೀನ್ ಮುಸ್ಲಿಯಾರ್ ಕೊಂಡಗೇರಿ, ಉಸ್ಮಾನ್ ಮೂರ್ನಾಡ್, ಕಾಸಿಮ್ ಸಕ್ವಾಫಿ ಕೊಂಡಗೆರಿ ಅವರನ್ನು ನೇಮಕ ಮಾಡಲಾಯಿತು.
ಲೇಖಕ: admin
ಮಡಿಕೇರಿ ಮಾ.13 : ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ ಮಾಸ್ಟರ್ ಗೇಮ್ಸ್ ಚಾಂಪಿಯನ್ ಶಿಪ್‌ನಲ್ಲಿ ಕೊಡಗಿನ ಮೂವರು ಹಿರಿಯ ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸಿ ಒಟ್ಟು 5 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದರಲ್ಲೂ ವಿಶೇಷವೆಂಬಂತೆ ಇಬ್ಬರು ಸಹೋದರರು ಈ ಹಿರಿಯರ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಾಧನೆ ಮಾಡಿ ಬೆರಗು ಗೊಳಿಸಿದ್ದಾರೆ. ಗೋಣಿಕೊಪ್ಪ ಹಾಗೂ ಕದನೂರು ಗ್ರಾಮಗಳ ನಿವಾಸಿಗಳಾದ ಪಾಲೆಕಂಡ ಬೆಳ್ಳಿಯಪ್ಪ ಹಾಗೂ ಪಾಲೆಕಂಡ ಬೋಪಯ್ಯ ಭಾರತವನ್ನು ಪ್ರತಿನಿಧಿಸಿದ ಅಪರೂಪದ ಸಹೋದರರಾಗಿದ್ದಾರೆ. ಇವರಿಬ್ಬರೂ ಭಾರತದಲ್ಲಿ ನಡೆದ ಮಾಸ್ಟರ್ಸ್ ಗೇಮ್ಸ್ ಕ್ರೀಡಾಕೂಟದಲ್ಲಿ ಇದುವರೆಗೆ 13 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ಪಾಲೆಕಂಡ ಬೋಪಯ್ಯ ಅವರು ಜಾವಲಿನ್ ಥ್ರೋ ಹಾಗೂ ಡಿಸ್ಕಸ್ ಥ್ರೋನಲ್ಲಿ ಹಾಗು ಬೆಳ್ಳಿಯಪ್ಪ ಅವರು 100, 200, 1500 ಮೀಟರ್ ಕಾಲ್ನಡಿಗೆ ರೇಸ್‌ನಲ್ಲಿ ಭಾಗವಹಿಸಿದ್ದಾರೆ. ಹಿರಿಯರ ಕ್ರೀಡಾಕೂಟದಲ್ಲಿ ಬಿ.ಎಸ್.ಎನ್.ಎಲ್.ನ ನಿವೃತ್ತ ಉದ್ಯೋಗಿ, ಕರ್ನಾಟಕದ ಮಾಸ್ಟರ್ಸ್ ಕ್ರೀಡಾಕೂಟ ಸಂಘದ ಅಧ್ಯಕ್ಷೆ ಮರಾಮಡ ಮಾಚಮ್ಮ ಅವರು ಕೂಡ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ಗಳಿಸಿದ್ದಾರೆ.
ಮಡಿಕೇರಿ ಮಾ.13 : ಶಾಲಾ ಶಿಕ್ಷಣ, ಸಾಕ್ಷರತಾ, ಸಕಾಲ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಅವರು ಮಾರ್ಚ್, 15 ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮಾನ್ಯ ಸಚಿವರು ಮಾರ್ಚ್, 15 ರಂದು ಬೆಳಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿ ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಎ.ಆರ್.ರವಿ ಅವರು ತಿಳಿಸಿದ್ದಾರೆ.
ಮಡಿಕೇರಿ ಮಾ.13 : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮಾರ್ಚ್, 17 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ‘ಮಿನಿ ಉದ್ಯೋಗ ಮೇಳ’ ನಡೆಯಲಿದೆ. ಉದ್ಯೋಗ ಮೇಳದಲ್ಲಿ ಲಿಥಿಯಂ ಅರ್ಬನ್ ಟೆಕ್ನಾಲಾಜಿಸ್(ಡ್ರೈವರ್ ಜಾಬ್), ಕಲ್ಯಾಣಿ ಮೋಟಾರ್ಸ್, ಮಡಿಕೇರಿ, ಎಸ್‍ಎಲ್‍ಎನ್ ಕಾಫಿ ಪ್ರೈ.ಲಿ., ಕುಶಾಲನಗರ, ಮಡಿಕೇರಿ ಸ್ಮಾರ್ಟ್ ಬಜಾರ್ ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಎಸ್‍ಎಸ್‍ಎಲ್‍ಸಿ, ಪಿಯುಸಿ, ಐಟಿಐ, ಡಿಪ್ಲೋಮ, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಉದ್ಯೋಗಮೇಳದಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು ಹಾಗೂ ಸ್ವ-ವಿವರಗಳ ಪ್ರತಿಗಳೊಂದಿಗೆ ಉದ್ಯೋಗಮೇಳದಲ್ಲಿ ಹಾಜರಾಗಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂ.08272-225851 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಉಮಾ ಅವರು ತಿಳಿಸಿದ್ದಾರೆ.
ಮಡಿಕೇರಿ ಮಾ.13 : ವಿದ್ಯುತ್ ವಿತರಣಾ ಕೇಂದ್ರ ಮತ್ತು ಮಾರ್ಗದಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ತಿ ಕಾರ್ಯ ನಿರ್ವಹಿಸಬೇಕಿರುವುದರಿಂದ ಕ.ವಿ.ಪ್ರ.ನಿ.ನಿ. ಅವರ ಕೋರಿಕೆಯಂತೆ ಮಾರ್ಚ್, 15 ರಂದು ಬೆಳಗ್ಗೆ 9.30 ಗಂಟೆಯಿಂದ ಸಂಜೆ 5.30 ಗಂಟೆಯವರೆಗೆ 66/11ಕೆವಿ ಪೊನ್ನಂಪೇಟೆ, 66/11 ಕೆವಿ ವಿರಾಜಪೇಟೆ, 33/11 ಕೆವಿ ಶ್ರೀಮಂಗಲ, 33/11 ಕೆವಿ ಸಿದ್ದಾಪುರ 33/11 ಕೆವಿ ಮೂರ್ನಾಡು ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಪೊನ್ನಂಪೇಟೆ, ಗೋಣಿಕೊಪ್ಪಲು, ನಲ್ಲೂರು, ಹುದಿಕೇರಿ, ತಿತಿಮತಿ, ಹಾತೂರು, ಪಾಲಿಬೆಟ್ಟ, ಶ್ರೀಮಂಗಲ, ಬಾಳಲೆ, ಕಾನೂರು, ಬಿರುನಾಣಿ, ಕುಟ್ಟ ವಿರಾಜಪೇಟೆ, ಬಿ ಶೆಟ್ಟಗೇರಿ, ಬೇತ್ರೀ, ಕಡಗಮರೂರು, ಕಾಕೋಟುಪರಂಬು, ಅಮ್ಮತ್ತಿ, ಸಿದ್ದಾಪುರ, ಮಾಲ್ದಾರೆ, ಮೂರ್ನಾಡು, ಮರುಗೋಡು, ನಾಪೋಕ್ಲು, ಕಕ್ಕಬೆ, ಅರೆಕಾಡು, ಐಯ್ಯಂಗೇರಿ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ಅವರು ಕೋರಿದ್ದಾರೆ.
ಮಡಿಕೇರಿ ಮಾ.13 : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಡಿಕೇರಿ ಪ್ರಾದೇಶಿಕ ಕೇಂದ್ರ ಕಚೇರಿಯಲ್ಲಿ 2022-23 ನೇ ಶೈಕ್ಷಣಿಕ ಸಾಲಿನ ವಿವಿಧ ವಿಷಯಗಳಿಗೆ ಪ್ರವೇಶಾತಿ ಪ್ರಕ್ರಿಯೆಗಳು ಆರಂಭವಾಗಿದ್ದು, ಇದರ ಸದುಪಯೋಗವನ್ನು ಉದ್ಯೋಗಸ್ಥರು ಹಾಗೂ ವಿದ್ಯಾರ್ಥಿಗಳು ಪಡೆದುಕೊಳ್ಳುವಂತೆ ಕೋರಿದೆ. ಪ್ರಾದೇಶಿಕ ಕೇಂದ್ರ ಕಚೇರಿಯು ಸಾರ್ವತ್ರಿಕ ರಜಾ ದಿನಗಳಾದ ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರ ಮತ್ತು ಭಾನುವಾರಗಳಂದು ಸಹ ಕಾರ್ಯನಿರ್ವಹಿಸುತ್ತದೆ ಎಂದು ಪ್ರಾದೇಶಿಕ ನಿರ್ದೇಶಕಿ ಸ್ಮಿತಾ ಸುಬ್ಬಯ್ಯ ಅವರು ತಿಳಿಸಿದ್ದಾರೆ. ಆಟೋ ಮತ್ತು ಕ್ಯಾಬ್ ಚಾಲಕರು ಹಾಗೂ ಮಕ್ಕಳಿಗೆ ಶೇ.30, ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಶೇ.15, ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ.15 ರಷ್ಟು ವಿನಾಯಿತಿ ನೀಡಲಾಗುತ್ತಿದೆ. ಹಾಗೂ ಕೊರೊನಾ ಸಾಂಕ್ರಾಮಿಕ ರೋಗದಿಂದ ಮೃತರಾದ ಪೋಷಕರ ಮಕ್ಕಳಿಗೆ, ತೃತೀಯ ಲಿಂಗಿಗಳಿಗೆ, ದೃಷ್ಠಿಹೀನ ವಿದ್ಯಾರ್ಥಿಗಳಿಗೆ (ಬಿಎಡ್-ಎಂಬಿಎ ಹೊರತುಪಡಿಸಿ) ಪೂರ್ಣಶುಲ್ಕ ವಿನಾಯಿತಿ ನೀಡಲಾಗಿದೆ. ಸ್ನಾತಕ ಕೋರ್ಸ್‍ಗಳು ಬಿ.ಎ., ಬಿ.ಕಾಂ, ಬಿ.ಲಿಬ್, ಬಿಬಿಎ, ಬಿಸಿಎ, ಬಿಎಸ್ಸಿ. ಸ್ನಾತಕೋತ್ತರ ಕೋರ್ಸ್‍ಗಳು ಎಂಎ, ಎಂಕಾಂ, ಎಂಬಿಎ, ಎಂಲಿಬ್,…
ಮಡಿಕೇರಿ ಮಾ.13 : 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಸಂಬಂಧ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ತಯಾರಿಕೆ, ಸಾಗಾಣಿಕೆ, ದಾಸ್ತಾನು ಮತ್ತು ಮಾರಾಟ ಹಾಗೂ ಇತರ ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಗೆ ಮಾಹಿತಿ ನೀಡಲು ಸಹಾಯವಾಣಿ ಕೇಂದ್ರ (ಕಂಟ್ರೋಲ್ ರೂಂ) ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಕಂಟ್ರೋಲ್ ರೂಂನ ಟೋಲ್ ಪ್ರೀ ದೂರವಾಣಿ ಸಂಖ್ಯೆಗೆ ಅಥವಾ ಅಬಕಾರಿ ಅಧಿಕಾರಿಗಳ ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಲು ಕೋರಿದೆ. ಜಿಲ್ಲಾ ನಿಯಂತ್ರಣ ಕೊಠಡಿ(ಕಂಟೋಲ್ ರೂಂ) ಟೋಲ್ ಪ್ರೀ ಸಂ.08272-229110, ಅಬಕಾರಿ ನಿರೀಕ್ಷಕರು, ಮಡಿಕೇರಿ ವಲಯ, ಮಡಿಕೇರಿ ಮೊ.ಸಂ.9449597139, ಅಬಕಾರಿ ಉಪ ಅಧೀಕ್ಷಕರು, ಮಡಿಕೇರಿ ಉಪ ವಿಭಾಗ, ಮಡಿಕೇರಿ ಮೊ.ಸಂ.9449597137, ಅಬಕಾರಿ ನಿರೀಕ್ಷಕರು, ಸೋಮವಾರಪೇಟೆ ವಲಯ, ಸೋಮವಾರಪೇಟೆ ಮೊ.ಸಂ.7619297765, ಅಬಕಾರಿ ಉಪ ಅಧೀಕ್ಷಕರು, ಸೋಮವಾರಪೇಟೆ ಉಪ ವಿಭಾಗ, ಸೋಮವಾರಪೇಟೆ ಮೊ.ಸಂ.9449252456, ಅಬಕಾರಿ ನಿರೀಕ್ಷಕರು, ವಿರಾಜಪೇಟೆ ವಲಯ, ವಿರಾಜಪೇಟೆ ಮೊ.ಸಂ.9449597141 ಹಾಗೂ ಅಬಕಾರಿ ಉಪ ಅಧೀಕ್ಷಕರು, ವಿರಾಜಪೇಟೆ ಉಪ ವಿಭಾಗ, ವಿರಾಜಪೇಟೆ ಮೊ.ಸಂ.9448879969 ನ್ನು ಸಂಪರ್ಕಿಸಬಹುದು ಎಂದು…
ಮಡಿಕೇರಿ ಮಾ.13 : ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಸಂಸದ ಮತ್ತು ಪಕ್ಷದ ಕೊಡಗು ಜಿಲ್ಲಾ ಉಸ್ತುವಾರಿ ಆರ್.ಧ್ರುವ ನಾರಾಯಣ್ ಅವರ ನಿಧನಕ್ಕೆ ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ಕೆಪಿಸಿಸಿ ಉಪಾಧ್ಯಕ್ಷ ಪಿ.ಸಿ.ಹಸೈನಾರ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಹಾಗೂ ತಾ.ಪಂ ಮಾಜಿ ಸದಸ್ಯ ಕೆ.ಐ.ಮಹಮ್ಮದ್ ರಫೀಕ್ ಸಂತಾಪ ಸೂಚಿಸಿದ್ದಾರೆ. ಮೇರು ವ್ಯಕ್ತಿತ್ವದ ಸಜ್ಜನ ರಾಜಕಾರಣಿ, ಉತ್ತಮ ಸಂಘಟಕ, ಅಜಾತಶತ್ರು ಧ್ರುವ ನಾರಾಯಣ್ ಅವರ ಅಗಲಿಕೆ ಅತೀವ ದು:ಖವನ್ನುಂಟು ಮಾಡಿದೆ. ಹಿರಿಯ ನಾಯಕನನ್ನು ಕಳೆದುಕೊಂಡು ಕಾಂಗ್ರೆಸ್ ಬಡವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ಮಾ.13 : ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾಜಿ ಶಾಸಕ, ಮಾಜಿ ಸಂಸದ ಹಾಗೂ ಪಕ್ಷದ ಕೊಡಗು ಜಿಲ್ಲಾ ಉಸ್ತುವಾರಿ ಆರ್.ಧ್ರುವ ನಾರಾಯಣ್ ಅವರ ನಿಧನಕ್ಕೆ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಸಂತಾಪ ವ್ಯಕ್ತಪಡಿಸಿದೆ. ಪಕ್ಷದ ಕಚೇರಿಯಲ್ಲಿ ಧ್ರುವನಾರಾಯಣ್ ಅವರ ಭಾವಚಿತ್ರಕ್ಕೆ ಪಕ್ಷದ ಪ್ರಮುಖರು ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭ ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷ ಬಿ.ಬಿ.ಸತೀಶ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಬೆನ್ನೆಲುಬಾಗಿದ್ದ, ಸಂಘಟನೆಯಲ್ಲಿ ಪ್ರಮುಖವಾಗಿದ್ದ, ಉತ್ತಮ ರಾಜಕಾರಣಿ, ಹಸನ್ಮುಕಿ ಆರ್.ಧ್ರುವನಾರಾಯಣ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು. ಕೆಪಿಸಿಸಿ ಸದಸ್ಯ ಕೆ.ಎ.ಯಾಕೂಬ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಾಂಗ್ರೆಸ್ ಅಧ್ಯಕ್ಷ ಬಿ.ಜಯೇಂದ್ರ, ಇತರೇ ಹಿಂದೂಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಬಿ.ಜಿ.ಇಂದ್ರೇಶ್, ಕಾಂಗ್ರೆಸ್ ಮುಖಂಡರುಗಳಾದ ಕೆ.ಎ.ಆದಂ, ಲ್ವಾರೆನ್ಸ್ ಹಾನಗಲ್ಲು, ನಗರಾಧ್ಯಕ್ಷರಾದ ಹೆಚ್.ಎ.ನಾಗರಾಜು ಮಾತನಾಡಿ, ಆರ್. ಧ್ರುವನಾರಾಯಣ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸಲ್ಲಿಸಿದ ಸೇವೆ,…
ಮಡಿಕೇರಿ ಮಾ.13 : ಜನನಿ ಮಹಿಳಾ ಮಂಡಳಿಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ನಗರದ ರಾಘವೇಂದ್ರ ದೇವಾಲಯ ರಸ್ತೆಯ ನೇತಾಜಿ ಜಂಕ್ಷನ್ ನ ಹೇಮಾವತಿ ಪ್ರಸನ್ನ ಅವರ ಮನೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಡಗು ಡಿಸಿಸಿ ಬ್ಯಾಂಕಿನ ನಿವೃತ್ತ ಉಪ ಪ್ರಧಾನ ವ್ಯವಸ್ಥಾಪಕರಾದ ಪ್ರೇಮ ಕಾರ್ಯಪ್ಪ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕುರಿತು ತಿಳಿಸಿದರು. ಕುಟುಂಬದಲ್ಲಿ ಮಹಿಳೆಯರು ಪ್ರತಿನಿತ್ಯ ಮಾಡಬೇಕಾದ ಕೆಲಸ ಕಾರ್ಯಗಳ ಜೊತೆಗೆ ಮಕ್ಕಳನ್ನು ಯಾವ ರೀತಿಯಲ್ಲಿ ಸಂಸ್ಕಾರಯುಕ್ತರನ್ನಾಗಿ ಮಾಡಬಹುದು. ಇದರೊಂದಿಗೆ ಉತ್ತಮ ಸಮಾಜವನ್ನು ಹೇಗೆ ಕಟ್ಟಬಹುದು ಎಂಬುದರ ಕುರಿತು ತಿಳಿಸಿದರು. ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಂಡು ಸದೃಢ ಭಾರತ ನಿರ್ಮಿಸುವಲ್ಲಿ ತಮ್ಮ ತಮ್ಮ ಜವಾಬ್ಧಾರಿಯನ್ನು ಯಾವ ರೀತಿ ನಿರ್ವಹಿಸಬೇಕು ಎಂದು ತಿಳಿಸಿದರು. ಪ್ರಮುಖರಾದ ಲಿಸಿ ಅಮ್ಮಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನನಿ ಮಹಿಳಾ ಮಂಡಳಿಯ ಸದಸ್ಯರಿಗೆ ಹಾಗೂ ಮಹಿಳಯರಿಗೆ ರಸಪ್ರಶ್ನೆ ಕಾರ್ಯಕ್ರಮ, ಗಾದೆಯನ್ನು ಪೂರ್ಣಗೊಳಿಸುವುದು, ಅಕ್ಷರ ಬಂಧ, ಆಶುಭಾಷಾ ಸ್ಪರ್ಧೆ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.…






