ವಿರಾಜಪೇಟೆ ಕಾವೇರಿ ಕಾಲೇಜಿನ ಐಕ್ಯೂಎಸಿ ಹಾಗೂ ಇತಿಹಾಸ ವಿಭಾಗದ ವತಿಯಿಂದ ಮಂಗಳವಾರ ಕಾಲೇಜಿನ ಕೌಸ್ತುಬ ಸಭಾಭವನದಲ್ಲಿ ಆಯೋಜಿಸಲಾಗಿದ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯಲ್ಲಿ ಸಮಯ ನಿರ್ವಹಣೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಇತಿಹಾಸ ವಿಷಯದ ಮಹತ್ವ ಎಂಬ ವಿಷಯದ ಕುರಿತು ನಡೆದ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಬದುಕಿನ ನಿರ್ಮಾಣ ನಮ್ಮ ಕೈಯಲ್ಲಿದ್ದು ನಮ್ಮನ್ನು ನಾವು ಇತರರಿಗೆ ಹೋಲಿಸಿಕೊಳ್ಳುವುದು ನಮಗೆ ನಾವೇ ಮಾಡಿಕೊಳ್ಳುವಂತಹ ಅವಮಾನ. ನಮ್ಮಲ್ಲಿ ಆತ್ಮವಿಶ್ವಾಸವಿರಬೇಕು ಇದು ಸವಾಲನ್ನು ಹೇಗೆ ಎದುರಿಸಬೇಕೆಂದು ಕಲಿಸುತ್ತದೆ. ನಮಗೆ ಸಿಕ್ಕ ಪ್ರತಿಯೊಂದು ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಸೂಕ್ತ ಮಾರ್ಗದಲ್ಲಿ ಬಳಸಿಕೊಂಡು ಸಾಗಿದಾಗ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ. ವಿದ್ಯಾರ್ಥಿ ಜೀವನದಿಂದ ಸಮಯ ಪ್ರಜ್ಞೆ ಹೆಚ್ಚಿನ ಮಹತ್ವವನ್ನು ನೀಡಬೇಕು. ನಾವು ಸಮಯವನ್ನು ಗೌರವಿಸಿದರೆ ಸಮಯ ನಮಗೆ ಗೌರವವನ್ನು ತಂದು ಕೊಡುತ್ತದೆ .ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವವರಲ್ಲಿ ಮೊದಲು ಮಾನಸಿಕವಾದಂತಹ ಸಿದ್ಧತೆ ಬೇಕು . ನಿರಂತರವಾಗಿ ಓದುವಂತಹ ಪ್ರಕ್ರಿಯೆ ಹಾಗೂ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಸೂಕ್ತ ಮಾರ್ಗದರ್ಶನದೊಂದಿಗೆ…
ಲೇಖಕ: admin
ಮಡಿಕೇರಿ, NEWS DESK ಏ.8 : ಕೊಡಗಿನ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿದ ಕೇರಳದ ಮಹಿಳೆ ಜಿ.ಎಸ್.ಶರಣ್ಯ (36) ನಾಪತ್ತೆ ಪ್ರಕರಣ ಹಲವು ಸಂಶಯಗಳನ್ನು ಹುಟ್ಟು ಹಾಕಿದೆ ಎಂದು ಆರೋಪಿಸಿ ಮಡಿಕೇರಿ ಬಿಜೆಪಿ ಗ್ರಾಮಾಂತರ ಮಂಡಲದ ಪ್ರಮುಖರು ನಾಪೋಕ್ಲು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಪೊಕ್ಕುಳಂಡ್ರ ಧನೋಜ್(ದಿವ್ಯ) ಅವರು ಠಾಣಾಧಿಕಾರಿ ರಾಘವೇಂದ್ರ ಅವರಿಗೆ ದೂರು ನೀಡಿದರು. ನಂತರ ಮಾತನಾಡಿದ ಅವರು ನಾಪತ್ತೆಯಾಗಿ 3 ದಿನಗಳ ಬಳಿಕ ಪತ್ತೆಯಾದ ಪ್ರಕರಣದ ಬಗ್ಗೆ ನಮಗೆ ಸಂಶಯವಿದೆ. ಇದರಲ್ಲಿ ಕಾಣದ ಕೈಗಳ ಕೈವಾಡವಿದೆ ಎಂದು ಆರೋಪಿಸಿದರು. ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ಜನರಿಗೆ ಸತ್ಯಾಸತ್ಯತೆಯನ್ನು ತಿಳಿಸಬೇಕೆಂದು ಒತ್ತಾಯಿಸಿದರು. ನಾಪೋಕ್ಲು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಬಿಜೆಪಿ ಮಹಾಶಕ್ತಿ ಕೇಂದ್ರದ ಗ್ರಾಮಾಂತರ ಮಂಡಲದ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ, ಉಪಾಧ್ಯಕ್ಷ…
ಮಡಿಕೇರಿ ಏ.7 NEWS DESK : ರಸಗೊಬ್ಬರ ಖರೀದಿಗೆ ಇನ್ಮುಂದೆ ರೈತರು ಕಡ್ಡಾಯವಾಗಿ ಎಫ್‍ಐಡಿ ಹೊಂದಿರಬೇಕು. ಅಷ್ಟೇ ಅಲ್ಲ ತಮ್ಮ ಭೂಮಿಯನ್ನು ಸಹ ಎಫ್‍ಐಡಿಗೆ ಜೋಡಿಸಿರಬೇಕು. ಇದರ ಆಧಾರದಲ್ಲಿಯೇ ರಸಗೊಬ್ಬರವನ್ನು ಕೆ.ಕಿಸಾನ್ ತಂತ್ರಜ್ಞಾನದ ಮೂಲಕ ವಿತರಣೆ ಮಾಡಲಾಗುತ್ತದೆ. ಹೌದು ರಸಗೊಬ್ಬರ ತಯಾರಿಕೆಗೆ ವಿದೇಶದಿಂದ ಕಚ್ಚಾಸಾಮಾಗ್ರಿ ಹೆಚ್ಚು ಆಮದು ಮಾಡಿಕೊಳ್ಳಲಾಗುತ್ತಿದೆ. ಯುದ್ದದಿಂದ ರಸಗೊಬ್ಬರ ತಯಾರಿಕೆ ಕಚ್ಚಾ ಸಾಮಾಗ್ರಿಯ ಆಮದಿನಲ್ಲಿ ಭಾರಿ ಸಮಸ್ಯೆಯಾಗಿದೆ, ಹೀಗಾಗಿ ಈ ಬಾರಿ ರಸಗೊಬ್ಬರ ಉತ್ಪಾದನೆಯಲ್ಲಿ ಕುಸಿತವಾಗುವ ಸಾಧ್ಯತೆ ಇದೆ. ಇದರಿಂದ ರಸಗೊಬ್ಬರ ವಿತರಣೆಯ ಮೇಲೆ ವಿಶೇಷ ನಿಗಾ ಇರಿಸಲು ನಿರ್ಧರಿಸಲಾಗಿದೆ. ಈ ಕುರಿತು ರಾಜ್ಯ ಸರ್ಕಾರದ ಕೃಷಿ ಇಲಾಖೆ ಕಟ್ಟನಿಟ್ಟಿನ ಸೂಚನೆ ನೀಡಿದ್ದು, ರೈತರು ರಸಗೊಬ್ಬರ ಖರೀದಿ ಮಾಡಬೇಕು ಎಂದಾದರೆ ಮೊದಲು ಎಫ್‍ಐಡಿ ಹೊಂದುದು ಕಡ್ಡಾಯ. ಅದಾದ ನಂತರ ಎಫ್‍ಐಡಿಗೆ ರೈತರು ತಮ್ಮ ಭೂಮಿಯನ್ನೆಲ್ಲ ಕಡ್ಡಾಯವಾಗಿ ಜೋಡಿಸಬೇಕು, ಇದರ ಆಧಾರದ ಮೇಲೆ ಹಾಕಿದ ಬೆಳೆಗೆ ರಸಗೊಬ್ಬರವನ್ನು ರೈತರಿಗೆ ಕೆ-ಕಿಸಾನ್ ತಂತ್ರಜ್ಞಾನದ ಮೂಲಕವೇ ವಿತರಣೆ ಮಾಡಲಾಗುವುದು. ಕಾಳಸಂತೆಗೆ ಬ್ರೇಕ್: ರೈತರ…
ಮಡಿಕೇರಿ ಏ.7 NEWS DESK : ವಿರಾಜಪೇಟೆ ತಾಲೂಕಿನ ಕಾನೂರು ಗ್ರಾಮದ ಬ್ರಹ್ಮಗಿರಿಪುರದಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಮುತ್ತಪ್ಪ ದೇವರ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಭಾನುವಾರ ಸಂಜೆ 6 ಗಂಟೆಗೆ ಮುತ್ತಪ್ಪನ ವೆಳ್ಳಾಟಂನೊಂದಿಗೆ ಆರಂಭಗೊಂಡಿತು. ರಾತ್ರಿ ಭಗವತಿ ದೇವರ ತೆರೆಯು ನೆರೆದಿದ್ದ ಭಕ್ತಾಧಿಗಳನ್ನು ಹಿಡಿದುಕೊಳ್ಳುವ ರೀತಿಯಲ್ಲಿ ಅಟ್ಟಾಡಿಸುತ್ತಿದ್ದದ್ದು ಎಲ್ಲರ ಗಮನ ಸೆಳೆಯಿತು. ಮಂಗಳವಾರ ಗುಳಿಗ ದೇವರ ತೆರೆ, ಕುಟ್ಟಿಚಾತನ್, ಮುತ್ತಪ್ಪ ಮತ್ತು ತಿರುವಪ್ಪ ದೇವರ ತೆರೆ ನಡೆಯಿತು. ಮುತ್ತಪ್ಪ, ತಿರುವಪ್ಪ, ಸಾಸ್ತಪ್ಪನ್, ಕುಟ್ಟಿಚಾತನ್, ವಸೂರಿಮಲೆ, ಭಗವತಿ, ಗುಳಿಗನ್, ಕಂಡಕರ್ಣ ಹೀಗೆ ವಿವಿಧ ರೀತಿಯ ತೆರೆಗಳನ್ನು ಕಟ್ಟಲಾಗಿತ್ತು. ಉತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ಶ್ರೀ ಮುತ್ತಪ್ಪ ದೇವಾಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಈಶ್ವರ, ಕಾರ್ಯದರ್ಶಿ ಕಾರ್ತಿಕ್, ಸದಸ್ಯರಾದ ವಿನು, ರವಿ, ರಾಜೇಶ್, ವಿಜಯ್, ಸುನಿ, ಅನಿ, ಸಂತೋಷ್, ಮಂಜುನಾಥ್, ಮಣಿ, ರಘು ಸೇರಿದಂತೆ ಇತರರು ಇದ್ದರು.
ಮಡಿಕೇರಿ ಏ.7 NEWS DESK : ವಿರಾಜಪೇಟೆ ತಾಲ್ಲೂಕಿನ ಕಣ್ಣಂಗಾಲ ಒಕ್ಕಲಿಗರ ಸಂಘದಿಂದ ಒಕ್ಕಲಿಗ ಸಮುದಾಯ ಬಾಂಧವರಿಗಾಗಿ ವಿವಿಧ ಕ್ರೀಡಾಕೂಟಗಳು ಏ.19ರ ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾದ ಕೆ.ಎಸ್.ಗೋಪಾಲಕೃಷ್ಣ (ಗೋಪಿ) ಹಾಗೂ ಆಡಳಿತ ಮಂಡಳಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯುಗಾದಿ ಪ್ರಯುಕ್ತ ಸಂಘದ ವತಿಯಿಂದ ಅಮ್ಮತ್ತಿ ಒಂಟಿಯಂಗಡಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಬೆಳಗ್ಗೆ 10ಗಂಟೆಗೆ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೆ.ಎಸ್ ಗೋಪಾಲಕೃಷ್ಣ (ಗೋಪಿ) ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟಕರಾಗಿ ಕಣ್ಣಂಗಾಲ ಗ್ರಾಮದವರಾದ, ಹೊಳೆನರಸೀಪುರ ಚೆಸ್ಕಾಂ ಅಭಿಯಂತರಾದ ಕೆ.ಕೆ ಮೋಹನ್ ಕುಮಾರ್ ಹಾಗೂ ವಿರಾಜಪೇಟೆ ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕರಾದ ಕೆ.ಆರ್ ಸ್ವರೂಪ ಅವರು ಆಗಮಿಸಲಿದ್ದಾರೆ. ನಂತರ ಕುಲಬಾಂಧವರಿಗಾಗಿ ವಿವಿಧ ಕ್ರೀಡಾಕೂಟಗಳು ನಡೆಯಲಿದ್ದು,ಪುರಷರಿಗೆ ವಾಲಿಬಾಲ್,ಬಾಂಬ್ ಇನ್ ದ ಸಿಟಿ,ಮಹಿಳೆಯರಿಗೆ ಥ್ರೋಬಾಲ್, ಬಾಂಬ್ ಇನ್ ದ ಸಿಟಿ, ಬಾಲಕ ಮತ್ತು ಬಾಲಕಿಯರಿಗೆ 4 ರಿಂದ 6ವರ್ಷದವರಿಗೆ 100 ಮೀಟರ್ ಓಟ, 7 ರಿಂದ 12ವರ್ಷದವರಿಗೆ 100ಮೀ ಓಟ ಮತ್ತು 1…
ಮಡಿಕೇರಿ ಏ.7 NEWS DESK : ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆ ವತಿಯಿಂದ ಏಪ್ರಿಲ್, 8 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ “ಉದ್ಯೋಗಮೇಳ” ನಡೆಯಲಿದೆ. ಈ ಉದ್ಯೋಗ ಮೇಳದಲ್ಲಿ ಜಾಯ್ ಆಲುಕಾಸ್ ಜ್ಯುವೆಲ್ಲರಿ, ಮೈಸೂರು, ಕಲ್ಯಾಣಿ ಮೋಟಾರ್ಸ್ ಕಾರ್ ಶೋ ರೂಂ, ಮಡಿಕೇರಿ, ಕೂರ್ಗ್ ಕ್ಲಿಪ್ಟ್ಸ್ ರೆಸಾರ್ಟ್, ಮಡಿಕೇರಿ, ಹ್ಯೂಂಡಾಯಿ ಕಾರ್ ಶೋ ರೂಮ್, ಮಡಿಕೇರಿ, ಇವೊಲೋಬ್ಯಾಕ್ ರೆಸಾರ್ಟ್, ಮಡಿಕೇರಿ ಇವರು ತಮ್ಮ ಸಂಸ್ಥೆಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಈ ಮೇಳದಲ್ಲಿ ಖಾಸಗಿ ಕಂಪೆನಿಗಳು ಭಾಗವಹಿಸಿ ತಮ್ಮಲ್ಲಿ ಖಾಲಿಯಿರುವ ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಈ ಉದ್ಯೋಗ ಮೇಳದಲ್ಲಿ ಎಸ್‍ಎಸ್‍ಎಲ್‍ಸಿ., ಪಿಯುಸಿ, ಐಟಿಐ, ಡಿಪೆÇ್ಲೀಮ, ಪದವಿ ಹಾಗೂ ಸ್ನಾತಕೋತರ ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಿ ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ. ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ದಾಖಲಾತಿಗಳು, ಅನುಭವ ಪ್ರಮಾಣಪತ್ರ (ಅನ್ವಯಿಸುವವರಿಗೆ ಮಾತ್ರ) ಹಾಗೂ ಸ್ವ-ವಿವರಗಳ ಪ್ರತಿಗಳೊಂದಿಗೆ…
ಸುಂಟಿಕೊಪ್ಪ ಏ.7 NEWS DESK : ನಾರ್ಗಾಣೆ ಶ್ರೀ ದೇವಿ ಗ್ರಾಮದಲ್ಲಿ ನೆಲೆಗೊಂಡಿರುವ ಶ್ರೀ ಅಣ್ಣಪ್ಪ ಸ್ವಾಮಿ ದೇವಾಲಯದಲ್ಲಿ ಏ.13, 14 ಮತ್ತು 15ರಂದು ಧರ್ಮದೈವದ ನೇಮೋತ್ಸವವು ನಡೆಯಲಿದೆ ಎಂದು ದೇವಾಲಯದ ಮೇಲ್ವಿಚಾರಕರಾದ ಬಿ.ಡಿ.ರಾಜುರೈ ತಿಳಿಸಿದ್ದಾರೆ. ಏ.13 ರಂದು ಸೋಮವಾರ ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ ಮತ್ತು ಶುದ್ಧ ಕಳಶ ನಡೆಯಲಿದೆ. ಏ.14 ರಂದು ಸಂಜೆ 6 ಗಂಟೆಗೆ ಶ್ರೀ ಸ್ವಾಮಿ ಮತ್ತು ಅಮ್ಮನವರ ಭಂಡಾರ ಪೂಜೆ ನಡೆಯಲಿದೆ. ಸಂಜೆ 8 ಗಂಟೆಗೆ ಮಹಾ ಮಂಗಳಾರತಿ ಪ್ರಸಾದ ವಿತರಣೆ, ರಾತ್ರಿ 9 ಗಂಟೆಯಿಂದ ಧರ್ಮ ದೇವತೆಯಾದ ಕಲ್ಲುರ್ಟಿ (ಪಾಷಣಮೂರ್ತಿ)ದೈವದ ನೇಮ ಹಾಗೂ ಸಿರಿ ಗಂಧ ಪ್ರಸಾದ ವಿತರಣೆ ನಡೆಯಲಿದೆ. ರಾತ್ರಿ 9 ಗಂಟೆಯಿಂದ ಧರ್ಮ ದೈವವಾದ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ನೇಮ ಜರುಗಲಿದ್ದು, 3 ಗಂಟೆಗೆ ಶ್ರೀ ಚಾಮುಂಡೇಶ್ವರಿ ಮತ್ತು ದೈವರಾಜ ಗುಳಿಗ ದೈವಗಳ ನೇಮೋತ್ಸವ ಜರುಗಲಿದೆ. ಏ.15 ರಂದು ಬೆಳಿಗ್ಗೆ 6 ಗಂಟೆಗೆ ಧೂಮಾವತಿ (ಜುಮಾದಿ) ದೈವದ…
ಸೋಮವಾರಪೇಟೆ ಏ.7 NEWS DESK : ಸೋಮವಾರಪೇಟೆ ತಾಲ್ಲೂಕಿನ ನಗರಳ್ಳಿ ಗ್ರಾಮದ ಸುಗ್ಗಿಬನದಲ್ಲಿ ಕೂತಿನಾಡು ಸುಗ್ಗಿ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಕೂತಿನಾಡಿಗೆ ಸೇರಿದ 18 ಗ್ರಾಮಗಳ ನಿವಾಸಿಗಳು ನಗರಳ್ಳಿ ಸುಗ್ಗಿಕಟ್ಟೆಯಲ್ಲಿ ಸೇರಿ ಗ್ರಾಮ ದೇವತೆ ಶ್ರೀ ಸಬ್ಬಮ್ಮ ದೇವಿಗೆ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಗ್ರಾಮದೇವತೆ ಸಬ್ಬಮ್ಮ ದೇವಿಗೆ ಪೂಜೆಸಲ್ಲಿಸಿ, ಗ್ರಾಮ ಸುಭಿಕ್ಷೆ ಹಾಗೂ ಮಳೆ, ಬೆಳೆ ಸಮೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಮಾಡಿದರು. ಸುಗ್ಗಿ ಉತ್ಸವದ ಕೊನೆ ದಿನವಾದ ಸೋಮವಾರ ಸುಗ್ಗಿ ದೇವರ ಬನದಲ್ಲಿ ಅಳವಡಿಸಲಾಗಿರುವ ಬೃಹತ್ ಕಲ್ಲಿನ ಕಂಬದಲ್ಲಿ 4 ಮಂದಿ ದೇವರ ಒಡೆಕಾರರನ್ನು ಬೆತ್ತದ ಉಯ್ಯಾಲೆಯಲ್ಲಿ ತೂಗುವ ಮೂಲಕ ಸುಗ್ಗಿ ಉತ್ಸವಕ್ಕೆ ತೆರೆ ಬಿದ್ದಿತು. ನಗರಳ್ಳಿ ಗ್ರಾಮದ ಶ್ರವಣ್, ಸಂದೀಪ್, ಸವಿನ್, ರಚನ್ ಹಳ್ಳಿಯೂರು, ಗಗನ್ ಜಕ್ಕನಳ್ಳಿ, ಶಶಿಕುಮಾರ್ ಹೆಮನಗದ್ದೆ, ದೇವರ ಒಡೆಕಾರರಾಗಿ ಕಾರ್ಯ ನಿರ್ವಹಿಸಿದರು. ರಮೇಶ್, ಪ್ರಕಾಶ್, ಪ್ರಸನ್ನ, ಕುಶಾಲ್, ಲೋಹಿತ್, ದೇವರ ಸೇವೆಕರಾಗಿ ಶ್ರದ್ಧೆಯಿಂದ ಕಾರ್ಯನಿರ್ವಹಿಸಿದರು. ಕೂತಿನಾಡು ಶ್ರೀ ಸಬ್ಬಮ್ಮ ದೇವರ ಸಮಿತಿ ಅಧ್ಯಕ್ಷರಾದ ಕೆ.ಬಿ.…
ಮಡಿಕೇರಿ ಏ.7 NEWS DESK : ನಾಪೋಕ್ಲುವಿನಲ್ಲಿ ಸಂಭ್ರಮದಿಂದ ನಡೆಯುತ್ತಿರುವ ಚೇನಂಡ ಕಪ್ ಹಾಕಿ ಉತ್ಸವದ ಪ್ರಯುಕ್ತ ಆಯೋಜನಾ ಸಮಿತಿ ಈಗಾಗಲೆ ಜಿಲ್ಲೆಯ ವಿವಿಧೆಡೆಗಳಲ್ಲಿ 2800ಕ್ಕೂ ಹೆಚ್ಚಿನ ಗಿಡಗಳನ್ನು ನೆಟ್ಟಿದೆಯಲ್ಲದೆ, ಪಂದ್ಯಾವಳಿಯಲ್ಲಿ ದಾಖಲಾಗುವ ಪ್ರತಿ ಗೋಲಿಗೊಂದು “ಗಿಡ” ಎನ್ನುವ ಗುರಿ ಹೊಂದಿರುವುದಾಗಿ ಚೇನಂಡ ಕಪ್ ಹಾಕಿ ಉತ್ಸವ ಆಯೋಜನಾ ಸಮಿತಿಯ ಪ್ರಮುಖರು ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಆಯೋಜನಾ ಸಮಿತಿಯ ಪ್ರಮುಖರು ಮಾತನಾಡಿ, ಕ್ರೀಡೆಯೊಂದಿಗೆ ಪರಿಸರಕ್ಕೂ ಒತ್ತು ನೀಡುವ ಚಿಂತನೆಯಂತೆ ಚೇನಂಡ ಕುಟುಂಬಸ್ಥರು ಈಗಾಗಲೆ ಟಿ.ಶೆಟ್ಟಿಗೇರಿ ಅಯ್ಯಪ್ಪ ದೇವಸ್ಥಾನಕ್ಕೆ ಒಳಪಟ್ಟ ಜಾಗದಲ್ಲಿ 1500 ಗಿಡಗಳನನ್ನು, ಕರಡ ಮಲೆತಿರಿಕೆಯಲ್ಲಿ, ಕೋಕೇರಿ ಭಗವತಿ ದೇವಸ್ಥಾನದ ಆವರಣ, ಸಿದ್ದಾಪುರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವೃಕ್ಷಾರೋಪಣ ಮಾಡಿದೆ. ಸೋಮವಾರಪೇಟೆಯಲ್ಲಿ ಶಾಸಕ ಡಾ.ಮಂತರ್ ಗೌಡ ಅವರು ಗಿಡ ನೆಡುವ ಕಾರ್ಯದಲ್ಲಿ ಕೈ ಜೋಡಿಸಿ ಗಮನ ಸೆಳೆದಿರುವುದಾಗಿ ಹೇಳಿದರು. :: ಸೋತ ತಂಡಕ್ಕೊಂದು “ಜೇನು ಪೆಟ್ಟಿಗೆ” :: ಪಂದ್ಯಾವಳಿಯಲ್ಲಿ 383 ತಂಡಗಳು ಪಾಲ್ಗೊಂಡಿದ್ದು, ಆರಂಭಿಕ ಸುತ್ತಿನ ಪಂದ್ಯಗಳು ಕುತೂಹಲ ಭರಿತವಾಗಿ ನಡೆಯುತ್ತಿವೆ. ಮೊದಲ…
ಕುಶಾಲನಗರ, NEWS DESK ಏಪ್ರಿಲ್ 06: ಸೈನಿಕ ಶಾಲೆ ಕೊಡಗಿನಲ್ಲಿ 2026-27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭವನ್ನು ಶಾಲೆಯ ಕುವೆಂಪು ವಿವಿದೊದ್ದೇಶ ಸಭಾಂಗಣದಲ್ಲಿ ಅತ್ಯಂತ ಹೆಮ್ಮೆ ಮತ್ತು ಗಾಂಭೀರ್ಯದಿಂದ ಆಯೋಜಿಸಲಾಗಿತ್ತು. ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿವಿಧ ಜವಾಬ್ದಾರಿಗಳನ್ನು ಶಾಲೆಯ ಅಧಿಕಾರಿಗಳು ಹಸ್ತಾಂತರಿಸುವ ಮೂಲಕ ಶಾಲೆಯ ನಾಯಕತ್ವದ ಪರಂಪರೆಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದರು. ಸಮಾರಂಭವು ಜ್ಞಾನ, ಸಮಗ್ರತೆ ಮತ್ತು ಸೇವೆಯ ಮನೋಭಾವದ ಸಂಕೇತವಾಗಿ ಸಾಂಪ್ರದಾಯಿಕ ದೀಪ ಬೆಳಗುವುದರೊಂದಿಗೆ ಪ್ರಾರಂಭವಾಯಿತು. ಶಾಲೆಯ ಪ್ರಾಚಾರ್ಯರಾದ ಕರ್ನಲ್ ಅಮರ್ ಜೀತ್ ಸಿಂಗ್, ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪಿ. ಪ್ರಕಾಶ್ ರಾವ್, ಉಪ ಪ್ರಾಚಾರ್ಯರಾದ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ ಮತ್ತು ಹಿರಿಯ ಶಿಕ್ಷಕರಾದ ಶ್ರೀ ಎನ್. ವಿಬಿನ್ ಕುಮಾರ್ ಅವರು ಶಾಲೆಯ ಹಿರಿಯ ವಿದ್ಯಾರ್ಥಿಗಳ ನಾಯಕರಿಗೆ ಭುಜದ ಮೇಲಿನ ಬ್ಯಾಡ್ಜಗಳನ್ನ ಅನಾವರಣಗೊಳಿಸುವ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಜವಾಬ್ದಾರಿಗಳನ್ನು ಹಸ್ತಾಂತರಿಸಿದರು. ಇದರೊಂದಿಗೆ ವಿವಿಧ ನಿಲಯಗಳ ನಾಯಕರ ನೇಮಕಾತಿಗಳನ್ನು ಸಹ ಮಾಡಲಾಯಿತು. ವಿವಿಧ ನಿಲಯಗಳ ನಿಲಯ ಶಿಕ್ಷಕರು…






