ಲೇಖಕ: admin

ಮಡಿಕೇರಿ ಏ.7 : ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರ ಅಹವಾಲುವನ್ನು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸುದೀರ್ಘ ಎರಡು ಗಂಟೆಗೂ ಹೆಚ್ಚು ಕಾಲ ಆಲಿಸಿ, ಮನವಿ ಸ್ವೀಕರಿಸಿದರು. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲೆಯ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರ ಕುಂದುಕೊರತೆಗಳನ್ನು ಆಲಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಮಾಜಿ ಸೈನಿಕರಿಗಾಗಿ ಕ್ಯಾಂಟಿನ್, ಸಮುದಾಯ ಭವನ, ಆಸ್ಪತ್ರೆ ಸೇರಿದಂತೆ ಹಲವು ಮೂಲ ಸೌಲಭ್ಯಕ್ಕೆ ಆದ್ಯತೆ ಮೇಲೆ ಜಾಗ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು. ಮಡಿಕೇರಿ ಮತ್ತು ಪೊನ್ನಂಪೇಟೆಯಲ್ಲಿ ಮಾಜಿ ಸೈನಿಕರ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಲಾಗುವುದು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಜನ್ಮ ದಿನ ಕಾರ್ಯಕ್ರಮಕ್ಕೆ ಮಾಜಿ ಸೈನಿಕರನ್ನು ಆಹ್ವಾನಿಸಲಾಗುವುದು ಎಂದು ಸೋಮಶೇಖರ್ ಅವರು ತಿಳಿಸಿದರು. ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರ ಕುಂದುಕೊರತೆ ಆಲಿಸುವ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದಲ್ಲಿ ಉಪ ವಿಭಾಗಾಧಿಕಾರಿ ಅವರ ಉಪಸ್ಥಿತಿಯಲ್ಲಿ ಕುಂದುಕೊರತೆ ಆಲಿಸಲಾಗುವುದು, ಅದರಂತೆ…

Read More

ಕುಶಾಲನಗರ, NEWS DESK ಏ.07 : ಇಲ್ಲಿಗೆ ಸಮೀಪದ ರಂಗಸಮುದ್ರ ಗ್ರಾಮದ ಜೋಡಿ ಬಸವೇಶ್ವರ ದೇವರ ವಾರ್ಷಿಕ ಪೂಜೋತ್ಸವ ಮಂಗಳವಾರ ಶ್ರದ್ದಾಭಕ್ತಿಯಿಂದ ನೆರವೇರಿತು. ತಾ.6 ರಂದು ಸೋಮವಾರ ಬೆಳಗ್ಗೆ 7-30 ರಿಂದ ಆರಂಭವಾದ ದೇವರ ಧಾರ್ಮಿಕ ವಿಧಿಗಳು ಮಂಗಳವಾರ ಮಧ್ಯಾಹ್ನ 3 ಗಂಟೆವರೆಗೂ ನಿರಂತರವಾಗಿ ನಡೆದವು. ಸೋಮವಾರ ಸಂಜೆ ಗ್ರಾಮದ ಕಲ್ಲೇಗೌಡರ ಜಾನಕಿ ಮನೆಯಿಂದ ದೇವರ ಕಳಸವನ್ನು ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು. ಬಳಿಕ ರಾತ್ರಿ 8 ಗಂಟೆಗೆ ಗ್ರಾಮದ ಜೆ.ಜಿ. ಚಂದ್ರಶೇಖರ್ ಅವರ ಮನೆಯಿಂದ ಭಂಡಾರವನ್ನು ದೇವಾಲಯಕ್ಕೆ ತಂದು ಪೂಜಿಸಲಾಯಿತು. ಸೋಮವಾರ ರಾತ್ರಿ ಗ್ರಾಮದ ಕುಂಭನ ಬೆಳ್ಯಪ್ಪ ಕುಟುಂಬಸ್ಥರಿಂದ ಪೂಜಾ ಪ್ರಸಾದ ಅನ್ನದಾನ ನಡೆಯಿತು. ರಾತ್ರಿ 9-30 ಗಂಟೆಗೆ ದೇವರ ಗಂಗಾಸ್ನಾನಕ್ಕೆ ತೆರಳಲು ದೇವರ ಅಪ್ಪಣೆ ಪಡೆಯಲಾಯಿತು. ಮಂಗಳವಾರ ಮುಂಜಾನೆ 4 ಗಂಟೆಯಿಂದ ದೇವಾಲಯದ ಆವರಣದಲ್ಲಿ ಕೆಂಡಕೊಂಡದ ಪೂಜೆ ಆರಂಭವಾಯಿತು. ಮುಂಜಾನೆ 5 ಗಂಟೆಗೆ ದೇವರಿಗೆ ಅಭಿಷೇಕ ಪೂಜೆ. ಬೆಳಗ್ಗೆ 9 ಗಂಟೆಗೆ ವಾದ್ಯ ಮೇಳ, ಅಲಂಕೃತ ದೇವರ ಪಲ್ಲಕ್ಕಿ ಉತ್ಸವದೊಂದಿಗೆ…

Read More

ಮಡಿಕೇರಿ NEWS DESK ಏ.7 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ಆಯೋಜಿಸಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.6ರಂದು ನಡೆದ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ತಂಡಗಳು. *ಮೈದಾನ 1* ಅಮ್ಮಣಿಚಂಡ ಮತ್ತು ಕಂಬೆಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಅಮ್ಮಣಿಚಂಡ 18 ರನ್ ಗಳ ಜಯ ಸಾಧಿಸಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಮ್ಮಣಿಚಂಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 85 ರನ್ ಗಳನ್ನು ಗಳಿಸಿತು. ಕಂಬೆಯಂಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 67 ರನ್ ಗಳನ್ನಷ್ಟೇ ಸೇರಿಸಿ ಸೋಲೊಪ್ಪಿಕೊಂಡಿತು. ಅಜ್ಜೆಟ್ಟಿರ ಮತ್ತು ಕೊಲ್ಲಿರ ನಡುವಿನ ಹಣಾಹಣಿಯಲ್ಲಿ ಅಜ್ಜೆಟ್ಟಿರ 3 ರನ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಅಜ್ಜೆಟ್ಟಿರ 6 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 74 ರನ್ ಗಳನ್ನು ಗಳಿಸಿತು. ಕೊಲ್ಲಿರ ತಂಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 71 ರನ್ ಗಳನ್ನು ಸೇರಿಸಿ ಸೋಲು ಅನುಭವಿಸಿತು.…

Read More

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.8 ರ ಪಂದ್ಯಗಳು* *ಮೈದಾನ 1* ಬೆಳಿಗ್ಗೆ 9 ಗಂಟೆಗೆ ಕುಂಜಿರ ಮತ್ತು ಅಪ್ಪಾರಂಡ, 10ಕ್ಕೆ ಕುಟ್ಟಂಡ (ಕಾರ್ಮಾಡು) ಮತ್ತು ಬಾಚಿನಾಡಂಡ, 11ಕ್ಕೆ ಬೈರೇಟಿರ (ಕಾಟಕೇರಿ) ಮತ್ತು ಅಪ್ಪುಮಣಿಯಂಡ, ಮಧ್ಯಾಹ್ನ 12ಕ್ಕೆ ಚೆಕ್ಕೇರ ಮತ್ತು ಬಲ್ಲಡಿಚಂಡ, 1ಕ್ಕೆ ಚೇನಂಡ ಮತ್ತು ಸರ್ಕಂಡ, 2ಕ್ಕೆ ಪಾಂಡ್ಯಂಡ ಮತ್ತು ಕುಂಧೀರ ಹಾಗೂ 3 ಗಂಟೆಗೆ ಬಾಚೆಟ್ಟಿರ ಮತ್ತು ಪೊನ್ನಚಂಡ *ಮೈದಾನ 2* ಬೆಳಿಗ್ಗೆ 9 ಗಂಟೆಗೆ ಬೋಳಕಾರಂಡ (ಕೊಣಂಜಗೇರಿ) ಮತ್ತು ಬಾಳೆಕುಟ್ಟೀರ, 10ಕ್ಕೆ ಚೀಯಂಡಿರ ಮತ್ತು ಅಳಮೇಂಗಡ, 11ಕ್ಕೆ ಆದೇಂಗಡ ಮತ್ತು ಬಲ್ಲನಮಂಡ, ಮಧ್ಯಾಹ್ನ 12ಕ್ಕೆ ಮಣ್ಣೀರ (ವೆಸ್ಟ್ ನೆಮ್ಮಲೆ) ಮತ್ತು ಅಯ್ಯಕುಟ್ಟಿರ, 1ಕ್ಕೆ ಮುಂಡ್ಯೋಳಂಡ ಮತ್ತು ಮಲ್ಲಮಾಡ, 2ಕ್ಕೆ ಪಟ್ರಪಂಡ ಮತ್ತು ಬೊಟ್ಟಂಗಡ ಹಾಗೂ 3 ಗಂಟೆಗೆ ಪಾಲಚಂಡ (ಅರಪಟ್ಟ್) ಮತ್ತು ನೆಲ್ಲಿರ

Read More

ವಿರಾಜಪೇಟೆ ಏ.6 NEWS DESK : ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ, ದಮನಿತರ ಶೋಷಿತರ ಆಶಾ ಕಿರಣ, ಸಮ ಸಮಾಜದ ಕಾರಣಕರ್ತರಾದ ಡಾ. ಬಾಬು ಜಗಜೀವನ್ ರಾಂ ಅವರ 119 ನೇ ಜನ್ಮ ದಿನಾಚರಣೆಯನ್ನು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿರಾಜಪೇಟೆ ಡಾ ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯದಲ್ಲಿ ಆಚರಿಸಲಾಯಿತು. ಮೇಲ್ವಿಚಾರಕರಾದ ಸುಮಯ್ಯ ಅವರು ದಿನದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಸಿಹಿ ಹಂಚಿದರು. ಸಿಬ್ಬಂದಿಗಳಾದ ಕುಮಾರಿ, ಜ್ಯೋತಿ, ಅನಿತಾ ಹಾಜರಿದ್ದರು.

Read More

ಸುಂಟಿಕೊಪ್ಪ ಏ.6 NEWS DESK : ಮಾದಕ ವಸ್ತುಗಳ ಸೇವನೆಯನ್ನು ಸಂಪೂರ್ಣ ನಿರ್ಮೂಲನೆಗೊಳಿಸಲು ಪ್ರತಿಯೊಬ್ಬರು ಪಣತೊಡಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಕರೆ ನೀಡಿದ್ದಾರೆ. ಸುಂಟಿಕೊಪ್ಪ ಸಲಾಫಿ ಮಸೀದಿ ಆವರಣದಲ್ಲಿ ಕೊಡಗು ಜಿಲ್ಲಾ ವಿಸ್‍ಡಂ ಇಸ್ಲಾಮಿಕ್ ಆರ್ಗನೈಷಶನ್ ಸಂಸ್ಥೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಸ್ವತಃ ವೈಧ್ಯನಾಗಿರುವ ನಾನು ಮಾದಕ ವಸ್ತುಗಳ ಸೇವನೆ ಮತ್ತು ದುಷ್ಪಾರಿಣಾಮಗಳಿಂದ ಚಿಕಿತ್ಸೆಗೆ ಒಳಗಾಗಿರುವ ಮತ್ತು ಆಸ್ಪತ್ರೆಗೆ ಸೇರಿರುವ ಅನೇಕರನ್ನು ನೋಡಿದ್ದೇನೆ. ದುರಾದೃಷ್ಟಕರ ವಿಚಾರವೆಂದರೇ ಒಂದು ಸಲ ರುಚಿ ನೋಡೊಣ ಎಂದು ಮಾದಕ ವಸ್ತುಗಳ ಸೇವನೆಯನ್ನು ಆರಂಭಿಸಿದರೆ ನಂತರ ಮಾದಕ ವಸ್ತುಗಳೇ ನಮ್ಮನ್ನು ತಿಂದು ಹಾಕುತ್ತದೆ ಎಂದರು. ಮಾದಕ ವಸ್ತುಗಳ ಚಟ ದೈಹಿಕವಾಗಿ ಮತ್ತು ಮಾನಸಿಕವಾಗಿ ನಮ್ಮನ್ನು ಅವುಗಳ ದಾಸರನ್ನಾಗಿ ಮಾಡಿ ಬಿಡುತ್ತದೆ. ಸಣ್ಣದಾಗಿ ಶುರುವಾಗುವ ಈ ಅಭ್ಯಾಸವು ಬೃಹತ್ ಕಾಯಿಲೆಯಾಗಿ ಮಾರ್ಪಟ್ಟು ಕುಟುಂಬ ಕಂಟಕವಾಗಿ ಪರಿಣಮಿಸುತ್ತದೆ. ಪೋಷಕರು, ಶಿಕ್ಷಕರು, ಸಮಾಜ…

Read More

ಸುಂಟಿಕೊಪ್ಪ ಏ.6 NEWS DESK : ಕೊಡಗರಹಳ್ಳಿಯಲ್ಲಿ ನೆಲೆಸಿರುವ ಶ್ರೀ ಭೈತೂರಪ್ಪ ಪೊವ್ವೆದಿ ಬಸವೇಶ್ವರ ದೇವರ ವಾರ್ಷಿಕ ಹಬ್ಬ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು. ಮುಂಜಾನೆ ಶ್ರೀ ಗಣಹೋಮದೊಂದಿಗೆ ವಾಷೀಕ ಹಬ್ಬಕ್ಕೆ ಚಾಲನೆ ದೊರೆಯಿತು. ಶ್ರೀ ಬೈತೂರಪ್ಪ ಪೊವ್ವೆದಿ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಮತ್ತು ರುದ್ರಾಭೀಷೇಕವನ್ನು ದೇವಾಲಯದ ಪ್ರಧಾನ ಅರ್ಚಕರಾದ ರಾಘವೇಂದ್ರ ಭಟ್ ಮತ್ತು ನರಸಿಂಹ ಭಟ್ ಅವರ ತಂಡ ನೆರವೇರಿಸಿದರು. ದೇವತಕ್ಕರಾದ ಜಗ್ಗರಂಡ ಹ್ಯಾರಿ ಕಾರ್ಯಪ್ಪ ಅವರ ಮನೆಯಿಂದ ದೇವರ ಭಂಡಾರವನ್ನು ಅರ್ಚಕ ನರಸಿಂಹ ಭಟ್ ಅವರ ನೇತೃತ್ವದಲ್ಲಿ ಪೂಜೆ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನೇರವೇರಿಸಿ ದುಡಿಕೊಟ್ ಪಾಟ್ ಸಾಂಪ್ರಾದಾಯಿಕ ಕೊಡವ ಓಲಗದೊಂದಿಗೆ ದೇವಾಲಯಕ್ಕೆ ತಂದು ಪೂಜೆ ನೆರವೇರಿಸಲಾಯಿತು. ಮಾಹಾಪೂಜೆಯ ಬಳಿಕ ತೀರ್ಥ ಪ್ರಸಾದದೊಂದಿಗೆ ಅನ್ನ ಸಂತರ್ಪಣೆ ನೇರವೇರಿತು. ದೇವಾಲಯದ ವಾರ್ಷಿಕ ಹಬ್ಬದ ಸಂದರ್ಭ ದೇವಾಲಯಕ್ಕೆ ಒಳಪಟ್ಟ ಕುಟುಂಬಗಳು ಸಾಂಪ್ರಾದಾಯಿಕ ವೇಷ ಭೂಷಣದೊಂದಿಗೆ ದೇವಾಲಯದ ಆವರಣದಲ್ಲಿ ಸೇರಿ ಸಾಂಪ್ರಾದಾಯಿಕ ಬೊಳಕಾಟ್ ನೃತ್ಯ ಸೇವೆ ಸಲ್ಲಿಸಿದರು. ವಿಶೇಷವೆಂದರೆ ಹಬ್ಬದ…

Read More

ಮಡಿಕೇರಿ ಏ.6 NEWS DESK : ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಸೋಮವಾರಪೇಟೆಯ ಆಶ್ರೋ ಟರ್ಫ್ ಮೈದಾನದಲ್ಲಿ ಮೇ 7 ರಿಂದ 10ರ ವರೆಗೆ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿ ನಡೆಯಲಿದೆಯೆಂದು ಅಸೋಸಿಯೇಷನ್ ಅಧ್ಯಕ್ಷರಾದ ಶ್ರೀನಿಧಿ ಲಿಂಗಪ್ಪ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಗಳು ಆಯೋಜನೆಯಾಗದೆ ಸುಮಾರು ಇಪ್ಪತ್ತೈದು ವರ್ಷಗಳೆ ಕಳೆದಿದೆ. ಜಿಲ್ಲೆಯ ಯುವ ಹಾಕಿ ಪ್ರತಿಭೆಗಳ ಉತ್ತೇಜನಕ್ಕೆ ಪೂರಕವಾಗಿ ರಾಜ್ಯ ಮಟ್ಟದ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು. ಪಂದ್ಯಾವಳಿಯಲ್ಲಿ ಯಂಗ್ ಇಂಡಿಯನ್ ಫಾರ್ಮರ್ಸ್ ಅಸೋಸಿಯೇಷನ್ ತಂಡದೊಂದಿಗೆ, ಆಗ್ರೋಸ್, ಕೆನರಾ ಬ್ಯಾಂಕ್, ಕರ್ನಾಟಕ ಸ್ಟೇಟ್ ಪೊಲೀಸ್, ಸದರ್ನ್ ವೆಸ್ಟರ್ನ್ ರೈಲ್ವೇಸ್, ಕಸ್ಟಮ್ಸ್ ಅಂಡ್ ಸೆಂಟ್ರಲ್ ಎಕ್ಸೈಸ್, ಡೈಸ್ ಸ್ಟೋರ್ಟ್ಸ್ ಹಾಸ್ಟೆಲ್, ಸದರ್ನ್ ಕಮಾಂಡ್ ತಂಡಗಳು ಪಾಲ್ಗೊಳ್ಳಲಿವೆ. ಈ ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿ, ಲೀಗ್ ಮಾದರಿಯಲ್ಲಿ ಪಂದ್ಯಾವಳಿ ನಡೆಸಲಾಗುತ್ತದೆ. ಪ್ರತಿ ಗುಂಪಿನಲ್ಲಿ ಮೊದಲ ಸ್ಥಾನ ಪಡೆಯುವ ತಂಡಗಳ ನಡುವೆ…

Read More

ಮಡಿಕೇರಿ ಏ.6 NEWS DESK : ನಗರದ ಕಲಾ ಕಾವ್ಯ ನಾಟ್ಯ ಶಾಲೆಯ ವತಿಯಿಂದ ಏ.8 ರಂದು ನಗರದ ಮೈತ್ರಿ ಸಭಾಂಗಣದಲ್ಲಿ ಆರು ತಿಂಗಳ ಕಾಲ ತರಬೇತು ಪಡೆದ ವಿದ್ಯಾರ್ಥಿಗಳಿಂದ ಎರಡು ಯಕ್ಷಗಾನ ಪ್ರಸಂಗಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆಯೆಂದು ನಾಟ್ಯ ಶಾಲೆಯ ಪ್ರಮುಖರಾದ ವಿದುಷಿ ಕಾವ್ಯಶ್ರೀ ಕಪಿಲ್ ದುಗ್ಗಳ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿಯನ್ನಿತ್ತ ಅವರು, ಕರಾವಳಿ ಭಾಗದ ಗಂಡು ಕಲೆ ಯಕ್ಷಗಾನದ ಮೂಲ ಪಾಠಗಳತ್ತ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಚಿಂತನೆಯ ಹಿನ್ನೆಲೆಯಲ್ಲಿ 38 ಮಂದಿ ಹೆಣ್ಣು ಮಕ್ಕಳು ಮತ್ತು ಇಬ್ಬರು ಬಾಲಕರನ್ನು ಒಳಗೊಂಡಂತೆ 40 ಮಂದಿಗೆ ಯಕ್ಷಗಾನದ ಹಿರಿಯ ಕಲಾವಿದರಾದ ಬಾಲಕೃಷ್ಣ ನಾಯರ್ ಅವರ ಮೂಲಕ ಆರು ತಿಂಗಳ ಕಾಲ ಯಕ್ಷಗಾನದ ಪ್ರಾಥಮಿಕ ಪಾಠದೊಂದಿಗೆ, ಎರಡು ಯಕ್ಷಗಾನ ಪ್ರಸಂಗಗಳನ್ನು ಕಲಿಸಿರುವುದಾಗಿ ಮಾಹಿತಿಯನ್ನಿತ್ತರು. ಏ.8 ರಂದು ಮಧ್ಯಾಹ್ನ 1 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಳಿಕ 8 ವಿದ್ಯಾರ್ಥಿಗಳು ಗಣಪತಿ ಸ್ತುತಿಯನ್ನು ಪ್ರಸ್ತುತಪಡಿಸಲಿದ್ದಾರೆ. ನಂತರ 2.30 ಗಂಟೆ ಅವಧಿಯ “ಶ್ರೀ…

Read More

ಮಡಿಕೇರಿ ಏ.6 NEWS DESK : 66/11ಕೆ.ವಿ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ ಎಫ್6 ಭಾಗಮಂಡಲ ಫೀಡರ್‍ನಲ್ಲಿ ಏ.8 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಮಳೆಗಾಲದ ಮುಂಜಾಗೃತಾ ಫೀಡರ್ ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆದ್ದರಿಂದ ತಾಳತ್ಮನೆ, ಅಪ್ಪಂಗಳ, ಬೆಟ್ಟಗೇರಿ, ಚೇರಂಬಾಣೆ, ಚೆಟ್ಟಿಮಾನಿ, ಭಾಗಮಂಡಲ, ತಲಕಾವೇರಿ, ಅಯ್ಯಂಗೇರಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.

Read More